1
00:00:01,000 --> 00:00:03,760
ಈ ಸಂಚಿಕೆಯು ಆತ್ಮಹತ್ಯೆ ಸೇರಿದಂತೆ
ಸೂಕ್ಷ್ಮ ಭಾವನೆಗಳ ವಿಷಯಗಳನ್ನು ಒಳಗೊಂಡಿದೆ.

2
00:00:03,840 --> 00:00:04,960
ವೀಕ್ಷಕರ ವಿವೇಚನೆ ಅಗತ್ಯ.

3
00:00:22,800 --> 00:00:23,920
ಸಟನ್?

4
00:00:36,840 --> 00:00:38,240
ಸಟನ್!

5
00:00:39,160 --> 00:00:40,320
ದೇವರೇ.

6
00:00:56,160 --> 00:00:57,200
ಅಪ್ಪ!

7
00:01:12,600 --> 00:01:13,760
ಅವಳು ಸತ್ತಿದ್ದಾಳೆ.

8
00:01:16,120 --> 00:01:17,240
ಸಟನ್ ಸತ್ತಿದ್ದಾಳೆ.

9
00:01:20,840 --> 00:01:22,160
ಡಾ. ಲ್ಯಾಜರಸ್‌?

10
00:01:24,680 --> 00:01:25,840
ಡಾ. ಲ್ಯಾಜರಸ್‌?

11
00:01:25,920 --> 00:01:28,840
ಪ್ರಸ್ತುತ ದಿನ

12
00:01:28,920 --> 00:01:30,840
ಹೊಸ ರೋಗಿ ಸಿದ್ಧನಾಗಿದ್ದಾನೆ.

13
00:01:33,040 --> 00:01:34,040
ಸರಣಿ ಕೊಲೆಗಾರನಿಗೆ ಶಿಕ್ಷೆ.

14
00:01:34,120 --> 00:01:35,040
ಜೋನ್ಸ್‌ ಕೊಲೆಗಾರ

15
00:01:35,120 --> 00:01:36,000
ಆಜೀವ ಶಿಕ್ಷೆ

16
00:01:54,200 --> 00:01:57,160
ಸುರಕ್ಷಿತ ಮನೋವೈದ್ಯಕೀಯ ಘಟಕ

17
00:02:17,200 --> 00:02:19,880
ಒಳಬರುವ ಕರೆ
ಅಪ್ಪ

18
00:02:37,400 --> 00:02:38,600
ಸರಿ, ಹಾಗಾದರೆ.

19
00:02:40,160 --> 00:02:41,160
ಅರ್ಲೋ.

20
00:02:43,320 --> 00:02:44,600
ನನ್ನನ್ನು ಇಲ್ಲಿಂದ ಹೊರಗೊಯ್ಯಿ.

21
00:02:44,680 --> 00:02:46,960
ಈಗಲೇ ನನಗದನ್ನು ಮಾಡಲು ಆಗಲ್ಲ.

22
00:02:47,480 --> 00:02:49,160
ಹಾಗಾದರೆ ನಿನ್ನಿಂದ ಏನು ಪ್ರಯೋಜನ?

23
00:02:49,240 --> 00:02:53,000
ನಾನು ಇಲ್ಲಿರೋದು
ನೀನು ನಿನ್ನ ಭಾವನೆಗಳ ಬಗ್ಗೆ ಮಾತಾಡಲಿ ಅಂತ,

24
00:02:53,080 --> 00:02:57,000
ನಿನ್ನ… ನಿನ್ನ ತಲೆಯಲ್ಲಿ
ಓಡುತ್ತಿರುವ ಆಲೋಚನೆಗಳ ಬಗ್ಗೆ ಮಾತಾಡಲಿ ಅಂತ.

25
00:02:57,640 --> 00:02:58,680
ಯಾವ ಆಲೋಚನೆಗಳು?

26
00:02:58,760 --> 00:03:00,600
ನಿನಗೆ ಯಾವ ಆಲೋಚನೆಗಳ ಬಗ್ಗೆ ಮಾತಾಡಬೇಕು?

27
00:03:03,520 --> 00:03:04,360
ದೇವರು.

28
00:03:05,200 --> 00:03:06,880
ನಾನು ಅವನ ಜೊತೆ ಮಾತಾಡುತ್ತಿದ್ದೇನೆ.

29
00:03:06,960 --> 00:03:10,120
ಅವನ ಜೊತೆ ಯಾವ ವಿಷಯದ ಬಗ್ಗೆ ಮಾತಾಡುತ್ತಿದ್ದೀಯಾ?

30
00:03:13,400 --> 00:03:14,400
ನಿನ್ನ ಅಪರಾಧಗಳ ಬಗ್ಗೆನಾ?

31
00:03:15,640 --> 00:03:16,640
ನಿನ್ನ ಬಗ್ಗೆ.

32
00:03:19,000 --> 00:03:20,240
ನನ್ನ ಬಗ್ಗೆ ಯಾಕೆ?

33
00:03:20,320 --> 00:03:23,160
ನಾನು ನಿನ್ನನ್ನು ನಂಬಬಹುದಾ ಅಂತ
ಅವನನ್ನು ಕೇಳಿದೆ.

34
00:03:23,240 --> 00:03:24,920
ಅವನು ಉತ್ತರಿಸಿದನಾ?

35
00:03:25,400 --> 00:03:29,080
ಇಲ್ಲ ಎಂದ.

36
00:03:29,760 --> 00:03:32,400
ನೀನು ನಕಲಿ ಮನುಷ್ಯ ಅಂತ ಹೇಳಿದ,

37
00:03:32,480 --> 00:03:35,680
ನಾನವನ ಬಳಿ ನಿನಗೆ ಶಿಕ್ಷೆ ನೀಡುವಂತೆ
ಕೇಳಿಕೊಂಡೆ, ಅವನು ಏನು ಹೇಳಿದ ಗೊತ್ತಾ?

38
00:03:36,720 --> 00:03:38,280
ಏನು ಹೇಳಿದ?

39
00:03:40,520 --> 00:03:42,040
ನನಗಾಗಿ

40
00:03:42,760 --> 00:03:46,800
ನಿನಗೆ ಶಿಕ್ಷೆ ನೀಡುವನಂತೆ.

41
00:04:02,200 --> 00:04:03,160
ಹೇ.

42
00:04:03,840 --> 00:04:05,000
ಅದು ಅಪ್ಪನ ವಿಷಯ.

43
00:04:05,080 --> 00:04:08,240
ಹೂಂ, ನನಗೆ ಕರೆ ಮಾಡಿದ್ದರು.
ನಾನು ಉತ್ತರಿಸಲಿಲ್ಲ. ಏನಾಯಿತು?

44
00:04:08,320 --> 00:04:10,600
ಲ್ಯಾಜ್‌, ಅವರು ಸತ್ತುಹೋದರು.

45
00:04:11,920 --> 00:04:12,800
ಏನು?

46
00:04:12,880 --> 00:04:16,680
ತಮ್ಮ ಕಚೇರಿಯಲ್ಲಿ ಗುಂಡು ಹಾರಿಸಿಕೊಂಡು
ಆತ್ಮಹತ್ಯೆ ಮಾಡಿಕೊಂಡರು.

47
00:04:25,960 --> 00:04:27,800
ಇದ್ದೀಯಾ?

48
00:04:31,680 --> 00:04:37,680
ಹರ್ಲಾನ್‌ ಕೊಬೆನ್ಸ್
ಲ್ಯಾಜರಸ್‌

49
00:04:46,600 --> 00:04:49,160
ಖ್ಯಾತ ಮನೋವೈದ್ಯ,
ಡಾಕ್ಟರ್‌ ಜಾನಥನ್ ಲ್ಯಾಜರಸ್‌‌,

50
00:04:49,240 --> 00:04:51,160
ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

51
00:04:51,240 --> 00:04:54,920
ಇಪ್ಪತ್ತೈದು ವರ್ಷಗಳ ಹಿಂದೆ ಕ್ರೂರವಾಗಿ ಕೊಲೆಯಾದ
ಸಟನ್ ಲ್ಯಾಜರಸ್‌‌ಳ ತಂದೆಯಾಗಿ

52
00:04:55,000 --> 00:04:57,680
ಅವರನ್ನು ವಿಷಾದದಿಂದ ನೆನಪಿಸಿಕೊಳ್ಳಲಾಗುತ್ತದೆ.

53
00:04:57,760 --> 00:05:00,520
ಆಕೆಯ ಕೊಲೆಗಾರನ ಹುಡುಕಾಟವು
ರಾಷ್ಟ್ರೀಯ ಗಮನ ಸೆಳೆಯಿತು,

54
00:05:00,600 --> 00:05:02,640
ಆದರೆ ಕೊಲೆಗಾರ ಇಂದಿಗೂ ಪತ್ತೆಯಾಗಿಲ್ಲ.

55
00:05:02,720 --> 00:05:06,760
ಡಾಕ್ಟರ್‌ ಜಾನಥನ್ ಲ್ಯಾಜರಸ್‌ಗೆ
ಇನ್ನಿಬ್ಬರು ಮಕ್ಕಳಿದ್ದಾರೆ,

56
00:05:06,840 --> 00:05:08,440
ಜೋಲ್‌ ಮತ್ತು ಜೆನ್ನಾ.

57
00:05:10,560 --> 00:05:14,160
ಮುಂದೆ, ಹವಾಮಾನ ವರದಿ.
ಅದಕ್ಕಾಗಿ ನಮ್ಮನ್ನು ಸೇರಲಿದ್ದಾರೆ…

58
00:05:29,720 --> 00:05:31,200
ಎಡಕ್ಕೆ ಚಲಿಸುತ್ತಿರಿ.

59
00:05:31,920 --> 00:05:33,360
ಹೋಗಿ. ಹೋಗಪ್ಪ.

60
00:05:33,440 --> 00:05:34,960
ಸುತ್ತಲೂ ಹೋಗಿ ಎಡಕ್ಕೆ ತಿರುಗಿ.

61
00:06:18,120 --> 00:06:20,240
ನನಗೆ ಅರ್ಥವೇ ಆಗುತ್ತಿಲ್ಲ.

62
00:06:22,120 --> 00:06:23,600
ಅವರ ಬಳಿ ಬಂದೂಕು ಯಾವಾಗಿಂದ ಇತ್ತು?

63
00:06:25,000 --> 00:06:25,960
ಅವರ ಬಳಿ ಇರಲಿಲ್ಲ.

64
00:06:27,200 --> 00:06:28,360
ಪತ್ರ ಎಲ್ಲಿದೆ?

65
00:06:28,440 --> 00:06:31,760
ಮೂಲ ಪತ್ರ ಪೊಲೀಸರ ಬಳಿ ಇದೆ,
ಆದರೆ ನನಗೆ ಈ ಫೋಟೋಕಾಪಿಯನ್ನು ಕೊಟ್ಟರು.

66
00:06:31,840 --> 00:06:34,400
ಎಲ್ಲರ ಮನಸುಗಳನ್ನೇ ಓದುತ್ತಾ ಬದುಕಿದ ವ್ಯಕ್ತಿ,

67
00:06:34,480 --> 00:06:36,640
ನಮಗೆ ಸ್ವಲ್ಪ ಹೆಚ್ಚು ಸ್ಪಷ್ಟತೆ ಕೊಡಬಹುದಿತ್ತು.

68
00:06:37,120 --> 00:06:38,120
"ಇದಿನ್ನೂ ಮುಗಿದಿಲ್ಲ."

69
00:06:38,200 --> 00:06:39,760
ಇದಿನ್ನೂ ಮುಗಿದಿಲ್ಲ.

70
00:06:39,840 --> 00:06:41,320
ಇದರ ಅರ್ಥ ಏನು?

71
00:06:42,400 --> 00:06:43,280
ನೀನೇ ಹೇಳು.

72
00:06:43,360 --> 00:06:46,760
ಮತ್ತು ಆ ಮೇಜು? ಮೂರು ಕಾಲುಗಳು. ಏನೋ ಒಗಟಿನಂತೆ.

73
00:06:47,960 --> 00:06:49,800
ಇದೂ ಇತ್ತು…

74
00:06:52,640 --> 00:06:54,520
ಅವರ ಕೆಲಸದ ಮೇಜಿನ ಮೇಲೆ.

75
00:07:02,240 --> 00:07:06,480
ಶಾಲಾ ಬಾಲಕಿ ಕೊಲೆ ಆರೋಪಿ ಬಿಡುಗಡೆ,
ಹೆಚ್ಚಿನ ಸುಳಿವುಗಳಿಲ್ಲ ಎಂದ ಪೊಲೀಸರು

76
00:07:06,560 --> 00:07:08,240
ಅವರು ಸಟನ್ ಬಗ್ಗೆ ಮಾತಾಡಿದರಾ?

77
00:07:08,320 --> 00:07:09,840
ಅವರು ಎಂದೂ ಅವಳ ಬಗ್ಗೆ ಮಾತಾಡಿಲ್ಲ.

78
00:07:10,680 --> 00:07:13,120
ಯಾಕೆ ಹೀಗೆ ಮಾಡಿದರೋ ಅರ್ಥ ಆಗುತ್ತಿಲ್ಲ.

79
00:07:16,360 --> 00:07:18,960
ಇದಿನ್ನೂ ಮುಗಿದಿಲ್ಲ.

80
00:07:29,080 --> 00:07:30,240
ಸಟನ್?

81
00:07:48,480 --> 00:07:49,520
ಏನಿದು?

82
00:09:06,720 --> 00:09:08,160
ಸೆತ್‌ ಮೆಕ್ ಗವರ್ನ್
ಕೆಲಸ ಮುಗಿಯಿತು. ನೀನು?

83
00:09:08,240 --> 00:09:13,360
ಮಹಿಳೆಯರೇ, ಇಂದು ದುಃಖದ ದಿನ, ಏಕೆಂದರೆ ಸೆತ್,
ಅಧಿಕೃತವಾಗಿ ಇನ್ನು ಒಂಟಿಯಲ್ಲ.

84
00:09:13,720 --> 00:09:15,800
ಏನು ಹೇಳಲಿ? ಜೆನ್ನಾಳ ಅಭಿರುಚಿ ಚೆನ್ನಾಗಿದೆ.

85
00:09:16,400 --> 00:09:17,640
-ಬಾಯಿ ಮುಚ್ಚು.
-ಅದನ್ನು ನನಗೆ ಕೊಡು.

86
00:09:21,360 --> 00:09:22,320
ಸೆತ್!

87
00:09:22,400 --> 00:09:25,600
ಇಗೋ ಬಂದ. ಬಾ, ಅಪ್ಪಿಕೋ.

88
00:09:25,680 --> 00:09:27,920
-ಹೇಗಾಗಿದ್ದೀಯ ನೋಡು.
-ಹಲ್ಲು ಚೆನ್ನಾಗಿವೆ. ಯಾರವು?

89
00:09:29,080 --> 00:09:31,760
ಗಡ್ಡ ಇಷ್ಟ ಆಯಿತು,
ದಪ್ಪದ ಗಲ್ಲವನ್ನು ಮರೆಮಾಡುತ್ತೆ.

90
00:09:31,840 --> 00:09:32,800
ಎಷ್ಟು ಧೈರ್ಯ ನಿನಗೆ.

91
00:09:34,000 --> 00:09:35,840
ಅಭಿನಂದನೆಗಳು. ಮಗು ಯಾವಾಗ ಬರಲಿದೆ?

92
00:09:35,920 --> 00:09:38,960
ಮುಟ್ಟಬೇಡ. ಅದು ನನ್ನ ಬಿಯರ್ ಮಗು.
ಬಾ. ರೋಸಿ ಕ್ಯೂಗೆ ಹೋಗೋಣಾ?

93
00:09:39,360 --> 00:09:40,480
ಇನ್ನೆಲ್ಲಿಗೆ ಮತ್ತೆ?

94
00:09:56,280 --> 00:09:59,000
ಇದು ಇನ್ನೂ ಹಳೆಯದರಂತೆಯೇ ಇರೋದು ಸಂತೋಷ.

95
00:09:59,080 --> 00:10:01,160
ಹೂಂ. ನಿನಗೆ ಬೆಲ್ಲಾ ಗೊತ್ತಲ್ಲಾ?
"ಬದಲಾವಣೆ ಎಂದರೆ ಸಾವು."

96
00:10:04,640 --> 00:10:05,880
ಏನು ಕುಡಿಯುವೆ?

97
00:10:06,440 --> 00:10:07,440
ವೋಡ್ಕಾ ಟಾನಿಕ್.

98
00:10:08,920 --> 00:10:10,080
ಯಾಕೆ?

99
00:10:10,160 --> 00:10:12,200
ಪಥ್ಯ ಮಾಡುತ್ತಿದ್ದೇನೆ.
ಗೋಧಿ ಪದಾರ್ಥ ತಿನ್ನುವಂತಿಲ್ಲ.

100
00:10:13,200 --> 00:10:16,360
ನಾವು ಬಾರ್‌ನಲ್ಲಿದ್ದೇವೆ
ಮತ್ತು ನೀನು ಪಥ್ಯ ಅನುಸರಿಸುತ್ತಿದ್ದೀಯಾ?.

101
00:10:16,440 --> 00:10:19,160
ಹೊಟ್ಟೆ ಉಬ್ಬಿರುವಾಗ ವಾದ ಮಾಡಲು ಆಗಲ್ಲ.

102
00:10:22,360 --> 00:10:23,680
ಬೆಲ್ಲಾ ಅಲ್ಲಿದ್ದಾಳೆ.

103
00:10:24,800 --> 00:10:27,160
ನಾನು ಕುಡಿಯಲು ತರುತ್ತೇನೆ.
ಹೋಗು, ಹೋಗಿ ಹಲೋ ಅನ್ನು.

104
00:10:38,640 --> 00:10:39,680
ಚೆನ್ನಾಗಿದ್ದೀಯಾ?

105
00:10:39,760 --> 00:10:40,880
-ಅದ್ಭುತವಾಗಿದ್ದೇನೆ.
-ಹೂಂ.

106
00:10:45,080 --> 00:10:46,080
ಹಲೋ, ಪರಮಸುಂದರಿ.

107
00:10:48,280 --> 00:10:51,400
ಲ್ಯಾಜ್‌! ನಮ್ಮ ಮನಶ್ಶಾಸ್ತ್ರಜ್ಞ ಹಿಂತಿರುಗಿದ.

108
00:10:51,480 --> 00:10:52,840
ಮನೋವೈದ್ಯ.

109
00:10:52,920 --> 00:10:54,960
ಏನೋ ಒಂದು. ಇಲ್ಲಿ ಹೇಗೆ?

110
00:10:56,280 --> 00:10:57,840
ಅಪ್ಪ ತೀರಿಕೊಂಡರು.

111
00:11:00,000 --> 00:11:01,200
ಅಯ್ಯೋ ದೇವರೇ.

112
00:11:02,640 --> 00:11:06,040
ನಾವು ಬೇರೆಯಾದಾಗ, ನಾನು ಕಂಡುಕೊಂಡ
ಅತ್ಯುತ್ತಮ ಮಹಿಳೆಯನ್ನು ಕಳೆದುಕೊಂಡೆ ಅಂದಿದ್ದರು.

113
00:11:08,000 --> 00:11:09,280
ಅವರು ಹೇಳಿದ್ದು ಸರಿ.

114
00:11:11,080 --> 00:11:12,320
ಬಹುಶಃ.

115
00:11:13,280 --> 00:11:14,280
ಬೆಲ್ಲಾ!

116
00:11:16,160 --> 00:11:17,440
ನಾನು ಸರ್ವ್ ಮಾಡಲು ಹೋಗಬೇಕು.

117
00:11:23,240 --> 00:11:24,880
ಕೇಳಿ ವಿಷಾದವಾಯಿತು, ಲ್ಯಾಜ್‌.

118
00:11:30,360 --> 00:11:32,760
ರೋಸಿ ಕ್ಯೂ

119
00:11:33,640 --> 00:11:35,760
ಅವರು ಖಂಡಿತ ಸಟನ್ ಬಗ್ಗೆ ಯೋಚಿಸುತ್ತಿದ್ದರು.

120
00:11:36,680 --> 00:11:38,280
ಇದು ಅವರ ಮೇಜಿನ ಮೇಲಿತ್ತು.

121
00:11:46,120 --> 00:11:49,600
ಆ ರಾತ್ರಿ ನಡೆದುದ್ದನ್ನು ನಾವು ಯಾರೂ
ನಿಜವಾಗಲೂ ಎಂದಿಗೂ ಮರೆಯಲ್ಲ ಅನಿಸುತ್ತೆ.

122
00:11:52,120 --> 00:11:54,680
ಅದು ಅವರ ಮೇಲೆ ತುಂಬಾ ಪರಿಣಾಮ ಬೀರಿತ್ತು.
ಸಟನ್ ಅವರ ನೆಚ್ಚಿನವಳಾಗಿದ್ದಳು.

123
00:11:54,760 --> 00:11:55,880
ಇಲ್ಲ, ಕಣೋ.

124
00:11:55,960 --> 00:11:57,760
ಅವರು ಎಂದೂ ಹೇಳಲಿಲ್ಲ,
ಆದರದು ಎಲ್ಲರಿಗೂ ಗೊತ್ತಿತ್ತು.

125
00:11:57,840 --> 00:12:01,200
"ಮೆಚ್ಚಿನದಲ್ಲದ" ಅವಳಿಯಾಗಿ,
ನನ್ನನ್ನು ನಂಬಿ, ನಾನು ಖಂಡಿತ ಗಮನಿಸಿರುವೆ.

126
00:12:02,840 --> 00:12:06,160
ಗೊತ್ತಾ, ಅವರಿಗೆ ನ್ಯಾಯ ಸಿಕ್ಕಿದ್ದರೆ,
ಯಾರಾದರೂ ಸಿಕ್ಕಿಬಿದ್ದಿದ್ದರೆ ಚೆನ್ನಾಗಿತ್ತು.

127
00:12:08,720 --> 00:12:10,400
ಅಂದಹಾಗೆ,
ಜೆನ್ನಾ ಹೇಗಿದ್ದಾಳಂತ ಕೇಳಬೇಕೆಂದಿದ್ದೆ.

128
00:12:11,600 --> 00:12:12,880
ಪರವಾಗಿಲ್ಲ.

129
00:12:13,960 --> 00:12:15,200
ನಾನು ಅವಳಿಗೆ ಕರೆ ಮಾಡಬೇಕಾ?

130
00:12:15,280 --> 00:12:17,960
ಗೊತ್ತಿಲ್ಲ, ಅದು ದುಃಖದ ಸೆಕ್ಸ್‌ನಲ್ಲಿ
ಕೊನೆಗೊಳ್ಳುತ್ತೆ ಅನಿಸಿದರೆ ಮಾಡು.

131
00:12:18,040 --> 00:12:20,360
ಏನು? ಅವಳು ನನಗೆ ಕೇವಲ ಗೆಳತಿ, ಸರಿನಾ?

132
00:12:20,440 --> 00:12:22,080
ನಾನು ಕೇಳಿದ್ದು ಇಷ್ಟೇ,

133
00:12:22,160 --> 00:12:24,560
ಅವಳಿಗೆ ಕರೆ ಮಾಡಿದರೆ ಖುಷಿಯಾಗಬಹುದಾ?

134
00:12:25,600 --> 00:12:27,480
ಹೂಂ, ಕರೆ ಮಾಡಿದರೆ ಒಳ್ಳೆಯದು ಅನಿಸುತ್ತೆ.

135
00:12:29,000 --> 00:12:31,840
ಆದರೆ ದುಃಖದ ಸೆಕ್ಸ್ ಒಂದು ಸಾಮಾನ್ಯ ವಿಷಯ.
ಅಸಲಿಗೆ, ತುಂಬಾನೇ ಸಾಮಾನ್ಯ.

136
00:12:32,240 --> 00:12:34,400
ಸಜೀವ ಭಾವನೆ ನೀಡುತ್ತೆ.

137
00:12:34,480 --> 00:12:35,560
ಗೊತ್ತು.

138
00:12:36,640 --> 00:12:37,720
ಅದ್ಭುತ ಅನಿಸುತ್ತೆ, ಅಲ್ವಾ?

139
00:12:41,480 --> 00:12:43,080
-ಇನ್ನೊಂದು?
-ಖಂಡಿತ.

140
00:12:43,160 --> 00:12:44,400
ಪಥ್ಯನೋ, ಮಜನೋ?

141
00:12:45,520 --> 00:12:46,920
ಮಜಾ ಮಾಡೋಣ.

142
00:13:02,920 --> 00:13:05,280
ತಮ್ಮ ಕಚೇರಿಯಲ್ಲಿ ಗುಂಡು ಹಾರಿಸಿಕೊಂಡು
ಆತ್ಮಹತ್ಯೆ ಮಾಡಿಕೊಂಡರು.

143
00:14:09,800 --> 00:14:12,360
ದ ಜುನಿಪರ್‌ ಬುಶ್‌

144
00:14:45,040 --> 00:14:46,800
ಡಾ. ಎಲ್? ಕ್ಷಮಿಸಿ, ತಡವಾಯಿತು.

145
00:14:47,160 --> 00:14:48,600
ಇಲ್ಲ, ಕ್ಷಮಿಸಿ, ನಾನು ಅವರ ಮಗ.

146
00:14:48,680 --> 00:14:52,440
ನನ್ನ ತಪ್ಪು. "ಕೆಸಾಂಡ್ರಾ, ನಿನಗೆ ಹೊರಡಲು
ಹತ್ತು ನಿಮಿಷಗಳಿವೆ" ಅಂದುಕೊಳ್ಳುತ್ತೇನೆ.

147
00:14:52,520 --> 00:14:55,360
-ನಾನು ಅವರ ಮಗ…
-ಒಂದು ನಿಮಿಷ ಇರುವವರೆಗೂ ಕಾಲ ಕಳೆಯುತ್ತೇನೆ.

148
00:14:55,440 --> 00:14:58,320
-ಕೆಸಾಂಡ್ರಾ, ನಾನು ಅವರ ಮಗ.
-ಆಮೇಲೆ ನನಗೆ ಸುರಕ್ಷತಾ…

149
00:14:58,400 --> 00:15:01,600
-ಇಲ್ಲಿ ಕೇಳಿ?
-ಆಮೇಲೆ ನೋಡಿದರೆ ಮೂರು ನಿಮಿಷ ತಡವಾಗಿರುತ್ತೆ.

150
00:15:01,680 --> 00:15:03,040
ಮತ್ತು ಅದು…

151
00:15:04,200 --> 00:15:05,720
ನೀವದನ್ನು ಬೇಕಂತಲೇ ಮಾಡುತ್ತಿದ್ದೀರಿ.

152
00:15:05,800 --> 00:15:10,920
ಹೌದು. ಹೌದು! ನಾನು ಒತ್ತಡದಲ್ಲಿರಬೇಕು,
ನಾನು ಆತಂಕದಲ್ಲಿರಬೇಕು.

153
00:15:11,000 --> 00:15:12,880
ಬೇರೆ ರೀತಿಯಲ್ಲಿ ನನ್ನಿಂದ ಕೆಲಸವೇ ನಡೆಯಲ್ಲ.

154
00:15:17,760 --> 00:15:21,440
ವಿಷಾದದಿಂದ ಹೇಳುತ್ತಿರುವೆ,
ಡಾ. ಎಲ್ ಬಗ್ಗೆ ಒಂದು ಸುದ್ದಿ--

155
00:15:21,520 --> 00:15:23,560
ನನಗೆ ಮತ್ತೆ ಆ ಆಲೋಚನೆಗಳು ಬರುತ್ತಿವೆ.

156
00:15:28,480 --> 00:15:31,240
ಕೇಳಿತಾ, ನನಗೆ ಮತ್ತೆ ಆ ಆಲೋಚನೆಗಳು ಬರುತ್ತಿವೆ.

157
00:15:34,880 --> 00:15:36,400
ಯಾವ ಆಲೋಚನೆಗಳು?

158
00:15:36,960 --> 00:15:40,320
ಅವು… ಕೊಲೆಯ ಆಲೋಚನೆಗಳು.

159
00:15:42,680 --> 00:15:43,800
ಹಾಗೋ?

160
00:15:51,760 --> 00:15:54,320
ಮತ್ತು ಈ ಆಲೋಚನೆಗಳಲ್ಲಿ ಏನಿರುತ್ತೆ?

161
00:15:56,480 --> 00:15:58,880
ಅವನು. ಸತ್ತಿರುತ್ತಾನೆ.

162
00:15:59,480 --> 00:16:01,800
ನಾನು ಅವನ ಸತ್ತ ಮುಖವನ್ನು ನೋಡುತ್ತೇನೆ.

163
00:16:01,880 --> 00:16:04,520
ನಾನವನಿಗೆ ಹೊಡೆದ ಸ್ಥಳದಿಂದ
ಅವನ ತಲೆಯಿಂದ ರಕ್ತ ಸುರಿಯುತ್ತಿರುತ್ತೆ,

164
00:16:04,600 --> 00:16:07,200
ನಾನವನು ನೆಲದ ಮೇಲೆ ಬಿದ್ದಿರೋದನ್ನ
ದಿಟ್ಟಿಸಿ ನೋಡುತ್ತೇನೆ ಮತ್ತು ನನಗೆ…

165
00:16:10,720 --> 00:16:12,040
ಏನೂ ಅನಿಸಲ್ಲ.

166
00:16:12,920 --> 00:16:14,960
ಸಂತೋಷವೂ ಅಲ್ಲ, ಸಮಾಧಾನವೂ ಅಲ್ಲ, ಏನೂ ಇಲ್ಲ.

167
00:16:15,680 --> 00:16:16,920
ಮತ್ತು ಆ ವ್ಯಕ್ತಿ ಯಾರು?

168
00:16:20,280 --> 00:16:21,280
ಅವನು.

169
00:16:22,840 --> 00:16:26,400
ನೀಲ್, ನನ್ನ ಪ್ರೇಮಿ. ಆ ವಿಚಿತ್ರದವನು.

170
00:16:27,040 --> 00:16:31,520
ಈ ಆಲೋಚನೆಗಳು ನೆನಪುಗಳಾ?

171
00:16:31,600 --> 00:16:33,480
ಆಗಿದ್ದರೆ ಚೆನ್ನಾಗಿತ್ತು.
ಅವನಿನ್ನೂ ಬದುಕಿದ್ದಾನೆ.

172
00:16:34,840 --> 00:16:37,960
ಮನೆಯಲ್ಲಿ ನನಗಾಗಿ ಕಾಯುತ್ತಿದ್ದಾನೆ,
ತಡ ಮಾಡಬೇಡ ಅಂತ ಎಚ್ಚರಿಸಿದ್ದಾನೆ.

173
00:16:39,720 --> 00:16:43,080
ಅಲ್ಲದೆ, ನಿಮಗೆ ಒಂದು ವಿಷಯ ಹೇಳಬೇಕು,
ಒಬ್ಬ ವ್ಯಕ್ತಿ ನನ್ನನ್ನು ಹಿಂಬಾಲಿಸುತ್ತಿದ್ದಾನೆ.

174
00:16:44,800 --> 00:16:45,800
ಹಿಂಬಾಲಿಸುತ್ತಿದ್ದಾನಾ?

175
00:16:45,880 --> 00:16:49,360
ನನ್ನನ್ನು ನೋಡುತ್ತಾನೆ,
ಕೆಲವೊಮ್ಮೆ ನನ್ನನ್ನು ಹಿಂಬಾಲಿಸುತ್ತಾನೆ,

176
00:16:49,440 --> 00:16:51,200
ಮತ್ತು ನನ್ನ ಮನಸ್ಸಲ್ಲಿ,
ನಾನವನನ್ನು ಕೊಲ್ಲುತ್ತೇನೆ.

177
00:16:52,360 --> 00:16:57,320
ತಿರುಗಿ ಅವನನ್ನು ಇರಿಯುತ್ತೇನೆ,
ಮತ್ತು ನನಗೆ ಏನೂ ಅನಿಸಲ್ಲ.

178
00:17:00,360 --> 00:17:03,920
ಅಂದರೆ… ಅಂದರೆ, ಯಾಕೆ,
ನನಗೆ ಯಾಕೆ ಇಂತಹ ಯೋಚನೆಗಳು?

179
00:17:04,000 --> 00:17:05,920
ಇವಕ್ಕೆ ಅರ್ಥವೇ ಇಲ್ಲ.

180
00:17:06,000 --> 00:17:08,600
ಕೆಸಾಂಡ್ರಾ, ಈ ವ್ಯಕ್ತಿ,

181
00:17:08,680 --> 00:17:12,520
ನೀಲ್ ಬಗೆಗಿನ ನಿನ್ನ ಭಾವನೆಗಳೇ

182
00:17:13,200 --> 00:17:16,520
ನಿನಗೆ ಈ ಹೊಸ ಅಭಿಮಾನಿಯ ಮೇಲೆ
ಹೀಗನಿಸಲು ಕಾರಣವಿರಬಹುದಾ?

183
00:17:21,160 --> 00:17:22,240
ನಾನು ಕುಡಿಯಬಹುದಾ?

184
00:17:25,960 --> 00:17:26,960
ನಿಮಗೊಂದು ಬೇಕಾ?

185
00:17:34,600 --> 00:17:36,280
ಖಂಡಿತ. ಸಣ್ಣ ಲೋಟ.

186
00:17:50,160 --> 00:17:54,360
ನಾನು ಅವನನ್ನು ಕೊಲ್ಲುತ್ತೇನೆ,
ಆಮೇಲೆ ನಾನು ಅವನನ್ನು ನೋಡುತ್ತೇನೆ,

187
00:17:57,600 --> 00:17:59,520
ಮತ್ತು ನನಗೆ ಏನೂ ಅನಿಸಲ್ಲ.

188
00:18:09,200 --> 00:18:11,080
ಇನ್ನೂ ಸ್ವಲ್ಪ ಹಾಕಿಕೊಂಡು ಬರುವೆ ನಿಮಗಾಗಿ.

189
00:18:15,240 --> 00:18:16,800
ಇದು ನೀವು ಮೊದಲು ಹೇಳಿದಂತೆಯೇ.

190
00:18:17,400 --> 00:18:21,920
ನೋವಿನಲ್ಲಿ ಬದುಕುವ ಬಗ್ಗೆ
ನೀವು ಏನು ಹೇಳುತ್ತಿದ್ದಿರಿ?

191
00:18:23,400 --> 00:18:24,560
ನನಗೆ ನೆನಪಿಸಿ.

192
00:18:38,440 --> 00:18:39,280
ಕೆಸಾಂಡ್ರಾ?

193
00:18:46,440 --> 00:18:47,560
ಕೆಸಾಂಡ್ರಾ?

194
00:19:08,800 --> 00:19:10,400
ನಿನ್ನೆ ರಾತ್ರಿ ನೀನು ಏನು ಮಾಡಿದೆ?

195
00:19:14,240 --> 00:19:17,840
ನಾನು… ಬೆಲ್ಲಾಳನ್ನು ಆಕಸ್ಮಿಕವಾಗಿ ಭೇಟಿಯಾದೆ.

196
00:19:17,920 --> 00:19:20,320
ಏನು? ಅವಳ ಬಾರ್‌ನಲ್ಲಾ?

197
00:19:21,760 --> 00:19:23,720
ಅವಳು ಅಲ್ಲಿರುವ ಸಾಧ್ಯತೆ ಎಷ್ಟು?

198
00:19:24,920 --> 00:19:27,320
ಅವಳು… ಅವಳು ಇನ್ನೂ ಅವನ ಜೊತೆ…

199
00:19:27,400 --> 00:19:30,000
ಅವನ ಹೆಸರೇನು? ಪಾಲ್.

200
00:19:31,120 --> 00:19:33,360
ಯಾವಾಗಲೂ "ಅವನ ಹೆಸರೇನು" ಅನ್ನುತ್ತೀಯ.

201
00:19:33,680 --> 00:19:34,720
ಪಾಲ್.

202
00:19:35,520 --> 00:19:37,680
ಮತ್ತೆ "ಅವನ ಹೆಸರೇನು" ಅಂತ ಯಾಕೆ ಕೇಳೋದು?

203
00:19:37,760 --> 00:19:41,680
ಹೌದು, ಅವಳು ಇನ್ನೂ ಪಾಲ್ ಜೊತೆ ಇದ್ದಾಳೆ.
ನಿನಗವನನ್ನು ಕಂಡರೆ ಆಗಲ್ಲ.

204
00:19:42,400 --> 00:19:46,080
ಕಂಡರೆ ಆಗಲ್ಲ ಅಂತೇನಿಲ್ಲ.
ಅದು… ಅವನು ಸ್ವಲ್ಪ ನೀರಸ ಅನಿಸುತ್ತಾನೆ ಅಷ್ಟೇ.

205
00:19:46,160 --> 00:19:49,640
"ನೀರಸ"ನಾ? ಏನು, ನಮ್ಮ ಅದ್ಭುತ
ಲ್ಯಾಜ್‌‌ನಂತೆ ಇಲ್ವಾ ಅವನು?

206
00:19:50,520 --> 00:19:53,200
ಹೇ, ಬೆಲ್ಲಾ ಒಳ್ಳೆಯವಳು. ಅವಳು…

207
00:19:54,040 --> 00:19:55,440
ಅವಳು ಒಳ್ಳೆಯ ವ್ಯಕ್ತಿ.

208
00:19:55,520 --> 00:20:00,520
ಮತ್ತು ಪಾಲ್ ಒಬ್ಬ ಗಾಲ್ಫ್ ಹೆಡ್ಡ.
ಅವರು ಹೇಗೆ ಒಟ್ಟಿಗಿರುತ್ತಾರೋ ನನಗೆ ಅರ್ಥವಾಗಲ್ಲ.

209
00:20:00,600 --> 00:20:02,920
ನಿಮ್ಮಿಬ್ಬರಿಗಿಂತ ಹೆಚ್ಚು ಕಾಲ
ಅವರ ಮದುವೆ ಉಳಿದಿದೆ.

210
00:20:03,000 --> 00:20:05,720
ಹಾಗೆ ಹೊಲಿಸಲು ಆಗಲ್ಲ, ಜೆನ್.
ನಾವು ತುಂಬಾ ಚಿಕ್ಕ ವಯಸ್ಸಿನಲ್ಲೇ ಮದುವೆಯಾದೆವು.

211
00:20:05,800 --> 00:20:09,520
ಅದು ಎಂದಿಗೂ ಉಳಿಯುತ್ತಿರಲಿಲ್ಲ, ಮತ್ತು ನಾವು
ಈಗ ಭೇಟಿಯಾಗಿದ್ದರೆ, ಯಾರಿಗೆ ಗೊತ್ತು.

212
00:20:12,800 --> 00:20:16,280
ಮಗುವಿಗೆ ಎಷ್ಟು ವಯಸ್ಸು… ಅವನ ಹೆಸರೇನು?

213
00:20:18,560 --> 00:20:21,680
ಐಡೆನ್‌, ಹದಿನೈದು ವರ್ಷ.

214
00:20:23,080 --> 00:20:24,440
ಇನ್ನಷ್ಟು ವಿಚಿತ್ರ ಆಗಿದ್ದಾನಾ?

215
00:20:24,520 --> 00:20:30,360
ಅವನು ವಿಚಿತ್ರವಾಗಿಲ್ಲ, ಲ್ಯಾಜ್‌.
ಅವನು ತನ್ನದೇ ಆದ ರೀತಿಯಲ್ಲಿ ವಿಶಿಷ್ಟ, ಅಷ್ಟೇ.

216
00:20:31,040 --> 00:20:32,200
ಅಂದರೆ ಇನ್ನೂ ವಿಚಿತ್ರವಾಗಿದ್ದಾನೆ.

217
00:20:32,960 --> 00:20:34,120
ಹೌದು.

218
00:20:36,000 --> 00:20:40,840
ನೋಡು… ನಾನು ಮಾರ್ಗೊ ಜೊತೆ ಮಾತಾಡಬೇಕೆಂದಿದ್ದೆ,

219
00:20:40,920 --> 00:20:45,040
ಅಪ್ಪನ ಕೊನೆಯ ದಿನಗಳು, ಅಂತಹ ವಿಷಯಗಳ ಬಗ್ಗೆ.

220
00:20:46,480 --> 00:20:51,120
ಅವರನ್ನು ಹಾಗೆ ಕಂಡದ್ದರ ಬಗ್ಗೆ ಅವಳು ಇನ್ನೂ
ಆಘಾತದಲ್ಲಿದ್ದಾಳೆ, ಈಗಲೇ ಎಚ್ಚರಿಸುತ್ತಿರುವೆ.

221
00:20:52,120 --> 00:20:53,760
ಅವಳಿಗೆ ಸ್ವಲ್ಪ ರೇಕಿ ನೀಡಿದೆ.

222
00:20:53,840 --> 00:20:58,280
ಅವಳ ಪ್ರಭಾವಲಯ…
ಈ ಬೂದು ಮಿಶ್ರಿತ ಹಳದಿ ಬಣ್ಣದಂತೆ ಇತ್ತು.

223
00:20:58,360 --> 00:20:59,960
ದೇವರೇ, ಹೌದಾ?

224
00:21:00,960 --> 00:21:05,400
ಹೌದು, ನಿಜವಾಗಲೂ. ಬ್ರಹ್ಮಾಂಡದ ಶಕ್ತಿಗಳಿಗೆ
ನಿನ್ನನ್ನು ನೀನು ತೆರೆದುಕೊಂಡರೆ,

225
00:21:05,480 --> 00:21:06,880
ನಿನ್ನ ಜೀವನವೂ ಬದಲಾಗುತ್ತೆ.

226
00:21:07,480 --> 00:21:09,840
-ಹೌದಾ?
-ಹೌದು.

227
00:21:11,400 --> 00:21:13,240
ಮತ್ತೆ, ನನ್ನ ಪ್ರಭಾವಲಯ ಯಾವ ಬಣ್ಣವಿದೆ?

228
00:21:17,800 --> 00:21:19,560
ಬೇವರ್ಸಿ ಬಣ್ಣ ಇದೆ.

229
00:21:21,000 --> 00:21:22,440
ಎಂತಹ ಜ್ಞಾನ.

230
00:21:47,240 --> 00:21:49,840
ಕಕ್ಷಿದಾರರ ಫೈಲ್‌ಗಳು ಇಲ್ಲಿವೆ.

231
00:21:49,920 --> 00:21:53,840
ನಿನ್ನ ಅಪ್ಪ
ಅಷ್ಟು ಚೆನ್ನಾಗಿ ಜೋಡಿಸುತ್ತಿರಲಿಲ್ಲ.

232
00:21:54,640 --> 00:21:57,360
ಗೊತ್ತು ಮಾರ್ಗೊ, ಆದರೆ ಅದೃಷ್ಟ,
ಅವರಿಗಾಗಿ ನೀನು ಇದ್ದೆ.

233
00:21:57,440 --> 00:21:58,600
ಅದು ನಿಜ.

234
00:22:02,560 --> 00:22:04,320
ಮತ್ತು ನಾವು ಒಳ್ಳೆಯ ತಂಡವಾಗಿದ್ದೆವು.

235
00:22:08,640 --> 00:22:11,240
ಕ್ಷಮಿಸು, ಅದು… ಅದು ಇಲ್ಲಿಗೆ ವಾಪಸ್ ಬಂದಿದ್ದು…

236
00:22:12,240 --> 00:22:15,000
ಕೆಸಾಂಡ್ರಾ, ಅಂದೆಯಲ್ಲಾ? ಉಪನಾಮ?

237
00:22:15,640 --> 00:22:16,600
ಗೊತ್ತಿಲ್ಲ.

238
00:22:16,680 --> 00:22:19,760
ಹೂಂ, ಸ್ವಲ್ಪ ಕಷ್ಟವಾಗುತ್ತೆ.
ನಾವು ಉಪನಾಮದ ಆಧಾರದ ಮೇಲೆ ಫೈಲ್ ಜೋಡಿಸಿರೋದು.

239
00:22:19,840 --> 00:22:22,280
ಹೂಂ, ನಿಮ್ಮ ಬಳಿ ಡೇಟಾಬೇಸ್
ಅಥವಾ ಕಂಪ್ಯೂಟರ್ ಸಿಸ್ಟಮ್ ಇಲ್ವಾ?

240
00:22:22,360 --> 00:22:23,840
ನಿನ್ನ ಅಪ್ಪನಿಗೆ ಕಾಗದಪತ್ರಗಳೇ ಸರಿ ಇದ್ದವು.

241
00:22:23,920 --> 00:22:28,440
ಕಾರ್ಯ ಕಲಾಪಗಳನ್ನು ರೆಕಾರ್ಡ್ ಮಾಡುತಿದ್ದರು,
ಅವರಿಗೆ ಹೆಚ್ಚು ತಂತ್ರಜ್ಞಾನ ಬೇಕಿರಲಿಲ್ಲ.

242
00:22:33,800 --> 00:22:35,640
ನೀನು ಒಳ್ಳೆಯ ಹುಡುಗ, ಜೋಲ್.

243
00:22:37,480 --> 00:22:40,560
ನೀವಿಬ್ಬರೂ ನಿರತರಿದ್ದಿರಿ, ಬೇಕಾದಷ್ಟು ಮಾತಾಡಲು
ಆಗುತ್ತಿರಲಿಲ್ಲ ಅಂತ ಗೊತ್ತು,

244
00:22:40,640 --> 00:22:42,920
ಆದರೆ ವೃತ್ತಿಪರವಾಗಿ ಅವರಿಗೆ
ನಿನ್ನ ಬಗ್ಗೆ ತುಂಬಾ ಹೆಮ್ಮೆ ಇತ್ತು.

245
00:22:45,720 --> 00:22:48,680
ನನಗನಿಸುತ್ತೆ, ನೀನೂ ನಿನ್ನ ವೃತ್ತಿಯನ್ನು
ಆರಿಸಿಕೊಂಡಾಗ, ಅವರಂತೆ ಆಗಲು ಬಯಸಿದ್ದೆಯೇನೋ.

246
00:22:49,480 --> 00:22:50,840
ಹೌದು, ಬಹುಶಃ.

247
00:22:52,880 --> 00:22:55,840
ಮನಸ್ಸು ಓದುವಲ್ಲಿ ಅವರು ತುಂಬಾ ಪರಿಣತರಾಗಿದ್ದರು.

248
00:22:57,080 --> 00:22:58,400
ಮತ್ತು ನೀವು ಅವರ ಮನಸ್ಸು ಓದಿದಿರಾ?

249
00:23:00,760 --> 00:23:01,920
ಕೆಲವೊಮ್ಮೆ.

250
00:23:02,600 --> 00:23:08,280
ಅವರು ಎಂದಾದರೂ ಸಟನ್ ಬಗ್ಗೆ,
ಅವಳ ಕೊಲೆಯಾದ ರಾತ್ರಿಯ ಬಗ್ಗೆ ಮಾತಾಡುತ್ತಿದ್ದರಾ?

251
00:23:10,320 --> 00:23:12,920
ಕೆಲವೊಮ್ಮೆ. ಯಾಕೆ?

252
00:23:14,160 --> 00:23:16,120
ನನಗನಿಸುತ್ತೆ, ಅವರು ಅದಕ್ಕಾಗಿ ಯಾವಾಗಲೂ…

253
00:23:16,200 --> 00:23:17,760
ನಿನ್ನನ್ನು ದೂಷಿಸುತ್ತಿದ್ದರು ಅಂತಲಾ?

254
00:23:22,040 --> 00:23:24,320
ಹೂಂ, ನನಗೆ ಅದರ ಬಗ್ಗೆ ಏನೂ ಗೊತ್ತಿಲ್ಲ.

255
00:23:26,960 --> 00:23:28,840
ಈಗ, ನಾನು ಹೊರಡುವೆ.

256
00:23:29,360 --> 00:23:31,920
ಇಲ್ಲಿಗೆ ವಾಪಸ್ ಬಂದಿದ್ದು
ಮನಸ್ಸಿಗೆ ನೋವಾಗುತ್ತಿದೆ.

257
00:24:00,240 --> 00:24:02,680
ಕಕ್ಷಿದಾರರ ಹೆಸರು
ಕೆಸಾಂಡ್ರಾ ರೋಡ್ಸ್‌

258
00:24:05,680 --> 00:24:06,520
ಕೊನೆಯ ಸೆಶನ್

259
00:24:06,600 --> 00:24:07,920
1999.

260
00:24:12,880 --> 00:24:14,480
ಏನಿದು?

261
00:24:20,920 --> 00:24:23,960
ಕೇಸ್ ಮುಕ್ತಾಯ
12/06/99

262
00:24:29,320 --> 00:24:32,680
ಕಕ್ಷಿದಾರರ ಹೆಸರು: ಕೆಸಾಂಡ್ರಾ ರೋಡ್ಸ್‌
ವಿಳಾಸ: ಫ್ಲಾಟ್ 43, 68 ಹ್ಯಾಝೆಲ್ಟನ್ ಸ್ಟ್ರೀಟ್

263
00:24:32,760 --> 00:24:38,760
ಹ್ಯಾಝೆಲ್ಟನ್
ಸ್ಟ್ರೀಟ್

264
00:24:51,320 --> 00:24:52,680
ಹಾಯ್. ಹಾಂ…

265
00:24:53,440 --> 00:24:55,320
ನಾನು ಕೆಸಾಂಡ್ರಾರನ್ನು ಹುಡುಕುತ್ತಿದ್ದೇನೆ.

266
00:25:10,800 --> 00:25:11,880
ಹಲೋ.

267
00:25:11,960 --> 00:25:16,360
ಹೇ. ಕೆಸಾಂಡ್ರಾ ಇನ್ನೂ ಇಲ್ಲೇ ವಾಸಿಸುತ್ತಾರಾ?

268
00:25:16,960 --> 00:25:18,280
ಕೆಸಾಂಡ್ರಾನಾ?

269
00:25:18,360 --> 00:25:20,200
ಹೂಂ, ಕೆಸಾಂಡ್ರಾ ರೋಡ್ಸ್‌.

270
00:25:21,760 --> 00:25:24,160
ಸರಿ. ವಾವ್.

271
00:25:25,680 --> 00:25:26,920
ನಿಮಗೆ…

272
00:25:29,760 --> 00:25:31,240
ಅದು, 20 ವರ್ಷಗಳ ಹಿಂದಿನ ವಿಷಯ.

273
00:25:31,320 --> 00:25:33,720
ಗೊತ್ತು. ಅವರು ನನ್ನ ತಂದೆಯ ಕಕ್ಷಿದಾರರಾಗಿದ್ದರು.

274
00:25:33,800 --> 00:25:36,720
ನನ್ನ ತಂದೆ ತೀರಿಕೊಂಡರು, ಹಾಗಾಗಿ ನಾನು ಸ್ವಲ್ಪ…

275
00:25:36,800 --> 00:25:39,840
ಕೇಳಿ, ಕ್ಷಮಿಸಿ, ಆದರೆ ಅವರು ಸತ್ತಿದ್ದಾರೆ.

276
00:25:42,600 --> 00:25:43,440
ಸತ್ತಿದ್ದಾರಾ?

277
00:25:44,920 --> 00:25:45,920
ಅಸಲಿಗೆ, ಕೊಲೆಯಾದರು.

278
00:25:51,480 --> 00:25:52,640
ಇಲ್ಲ…

279
00:25:55,680 --> 00:26:00,160
ನಾನು ನೆನ್ನೆ ಅವರ ಜೊತೆ… ಇದ್ದೆ.

280
00:26:01,760 --> 00:26:03,400
ಕೆಸಾಂಡ್ರಾ ರೋಡ್ಸ್‌ ಜೊತೆಗಾ?

281
00:26:03,480 --> 00:26:06,720
ನನ್ನನ್ನು ನಂಬಿ,
20 ವರ್ಷಗಳ ಹಿಂದೆ ಅವರ ಕೊಲೆಯಾಗಿದೆ.

282
00:26:08,080 --> 00:26:10,720
ಆ ಸ್ಥಳವನ್ನು ಖರೀದಿಸಲು
ತಯಾರಿದ್ದದ್ದು ನಾವು ಮಾತ್ರ.

283
00:26:10,800 --> 00:26:12,840
ನಮಗೆ ತುಂಬಾ ಅಗ್ಗವಾಗಿ ಸಿಕ್ಕಿತು, ಅಸಲಿಗೆ.

284
00:26:12,920 --> 00:26:15,280
ಎಷ್ಟೋ ಸಮಯ ಖಾಲಿ ಇತ್ತು.

285
00:26:15,360 --> 00:26:18,000
ಅಂದರೆ, ಅಟ್ಟದಲ್ಲಿ ಉಳಿದಿದ್ದ
ಎಲ್ಲಾ ಕಸದ ರಾಶಿಯನ್ನು ಬಿಟ್ಟು.

286
00:26:19,280 --> 00:26:22,640
ನೀವು ಖಂಡಿತ ನೆನ್ನೆ ಅವರ ಜೊತೆ ಇರಲಿಲ್ಲ.

287
00:26:23,480 --> 00:26:24,640
ಸರಿ.

288
00:26:41,360 --> 00:26:43,520
ಕೊಲೆಯಾದವರ ಮೇಲೆ ದೌರ್ಜನ್ಯ
ಆರೋಪ

289
00:26:49,000 --> 00:26:51,480
ಕೆಸಾಂಡ್ರಾ ಕೊಲೆಗಾರರನ್ನು ಹುಡುಕಿ

290
00:26:54,600 --> 00:26:55,440
ಕರೆ…
ಮಾರ್ಗೊ ಮೆಕಿಂಟೈರ್

291
00:26:55,520 --> 00:26:57,560
-ಹಲೋ.
-ಕೆಸಾಂಡ್ರಾನ ಕತ್ತು ಹಿಸುಕಿ ಕೊಲ್ಲಲಾಯಿತು

292
00:26:57,640 --> 00:26:59,440
ಮತ್ತು ಅವಳ ಕೊಲೆಗಾರ ಎಂದಿಗೂ ಪತ್ತೆಯಾಗಲಿಲ್ಲ.

293
00:26:59,520 --> 00:27:01,920
ಅದು ನಿನಗೆ ನೆನಪಿಲ್ವಾ?
ಒಬ್ಬ ಕಕ್ಷಿದಾರರು ಕೊಲೆಯಾಗಿದ್ದು?

294
00:27:02,000 --> 00:27:03,800
ಯಾಕೆಂದರೆ ಅದು ನೆನಪಿನಲ್ಲಿ ಉಳಿಯುವಂತಹ ವಿಷಯ.

295
00:27:03,880 --> 00:27:06,040
ಕ್ಷಮಿಸು, ನನಗೆ ನಿನ್ನ ಮಾತು ಕೇಳುತ್ತಿಲ್ಲ.

296
00:27:06,120 --> 00:27:08,120
ಕೆಸಾಂಡ್ರಾ ರೋಡ್ಸ್‌ ಕೊಲೆಯಾಗಿದ್ದಳು ಎಂದೆ.

297
00:27:08,200 --> 00:27:10,560
-ಮತ್ತು ನೀನು--
-ಕ್ಷಮಿಸು, ನಿನ್ನ ಧ್ವನಿ ಒಡೆಯುತ್ತಿದೆ.

298
00:27:11,440 --> 00:27:12,440
ಹಲೋ?

299
00:27:17,680 --> 00:27:20,560
ಅಲ್ಲದೆ, ನಿಮಗೆ ಒಂದು ವಿಷಯ ಹೇಳಬೇಕು,
ಒಬ್ಬ ವ್ಯಕ್ತಿ ನನ್ನನ್ನು ಹಿಂಬಾಲಿಸುತ್ತಿದ್ದಾನೆ.

300
00:27:31,320 --> 00:27:33,200
ಒಳಬರುವ ಕರೆ
ಸೆತ್‌ ಮೆಕ್ ಗವರ್ನ್

301
00:27:33,880 --> 00:27:34,760
ಹಾಂ.

302
00:27:34,840 --> 00:27:39,040
ಹೇ, ಕೇಳು. ಶವಾಗಾರದವರು ನಿನ್ನ ತಂದೆಯ ದೇಹವನ್ನು
ಮನೆಯವರಿಗಾಗಿ ಬಿಟ್ಟುಕೊಟ್ಟಿದ್ದಾರೆ.

303
00:29:27,120 --> 00:29:32,880
ಸಟನ್ ಲ್ಯಾಜರಸ್‌
1980-1998

304
00:30:05,040 --> 00:30:08,040
ಅಪ್ಪನ ಹಳೆಯ ಫೈಲ್‌ಗಳನ್ನು ಪರಿಶೀಲಿಸುತ್ತಿದ್ದೆ,
ಅವರ ಕಚೇರಿಯನ್ನು ಸ್ವಚ್ಛಗೊಳಿಸುತ್ತಿದ್ದೆ,

305
00:30:08,120 --> 00:30:09,760
ಮತ್ತು ನನಗೆ ಇದು ಸಿಕ್ಕಿತು.

306
00:30:09,840 --> 00:30:14,080
ಮತ್ತೊಂದು ಬಗೆಹರಿಯದ ಕೊಲೆ,
1999ರಲ್ಲಿ, ನಾಲ್ಕು ಮೈಲಿ ದೂರದಲ್ಲಿ.

307
00:30:14,560 --> 00:30:16,960
ಆದರೆ, ಸಟನ್‌ಗಿಂತ
ತುಂಬಾ ವಿಭಿನ್ನ ಸನ್ನಿವೇಶ ಇದು.

308
00:30:17,040 --> 00:30:19,840
ಹೌದು, ಆದರೆ ಎರಡು ಬಗೆಹರಿಯದ ಕೊಲೆಗಳು.

309
00:30:19,920 --> 00:30:23,040
ಒಂದು ವರ್ಷದ ಅಂತರದಲ್ಲಿ, ಮತ್ತು ಎರಡರಲ್ಲೂ,
ಅಪರಾಧಿ ಎಂದಿಗೂ ಸಿಕ್ಕಿಬೀಳಲಿಲ್ಲ.

310
00:30:23,520 --> 00:30:25,120
ಹೂಂ, 25 ವರ್ಷಗಳ ಹಿಂದೆ.

311
00:30:25,880 --> 00:30:29,800
ಅವಳು ತಂದೆಯ ಒಬ್ಬ ಕಕ್ಷಿದಾರಳು. ಮತ್ತವಳನ್ನು
ಯಾರೋ ಹಿಂಬಾಲಿಸುತ್ತಿದ್ದಾನೆ ಅಂದುಕೊಂಡಿದ್ದಳು.

312
00:30:29,880 --> 00:30:31,520
ಅದು ಖಾಸಗಿ ವಿಷಯ ಅಲ್ವಾ, ಲ್ಯಾಜ್‌?

313
00:30:31,600 --> 00:30:32,840
ಅವಳು ಸತ್ತಿದ್ದಾಳೆ, ಸೆತ್.

314
00:30:34,240 --> 00:30:38,600
ಅವಳ… ಅವಳ ಪ್ರಕರಣಕ್ಕೆ ಏನಾಯಿತು ಅಂತ
ನೀನು ಕಂಡುಹಿಡಿಯಬಲ್ಲೆಯಾ?

315
00:30:38,680 --> 00:30:41,720
1999ರ ಫೈಲ್‌ಗಳಲ್ಲಿ ನಾನು ತಲೆ ಹಾಕಬೇಕು
ಅಂತ ಹೇಳುತ್ತಿದ್ದೀಯಾ?

316
00:30:41,800 --> 00:30:45,200
ಅದೂ ನಾನು ಭಾಗವಹಿಸದ ತನಿಖೆಗಳಲ್ಲಿ.
ನಿನಗೆ ಹುಚ್ಚಾ?

317
00:30:45,280 --> 00:30:46,440
ಅದು, ನಾನು…

318
00:30:47,200 --> 00:30:48,200
ಜೋಲ್‌.

319
00:30:48,920 --> 00:30:50,160
ಆಲಿಸನ್‌.

320
00:30:50,240 --> 00:30:51,720
ತುಂಬಾ ಬೇಜಾರಾಯಿತು.

321
00:30:56,520 --> 00:30:58,280
-ಮೇಡಂ.
-ಸೆತ್.

322
00:31:01,080 --> 00:31:03,680
ಅವರು ಹೋದರು ಅಂತ ನಂಬಲಾಗುತ್ತಿಲ್ಲ. ಅದೂ ಹೀಗೆ.

323
00:31:04,160 --> 00:31:05,920
ಆ ಪತ್ರದ ಬಗ್ಗೆ ಏನು ಗೊತ್ತಾಯಿತು?

324
00:31:06,000 --> 00:31:10,200
ಆಶ್ಚರ್ಯಕರ. ಬಹುಶಃ… ಪುನರ್ಜನ್ಮದ ವಿಷಯ?

325
00:31:10,280 --> 00:31:12,400
ಅಂದರೆ, ನಿನ್ನ ತಂದೆಗೆ ದ್ವಂದಾರ್ಥಕಗಳ
ಬಗ್ಗೆ ಆಸಕ್ತಿ ಹೆಚ್ಚಾಗಿ ಇತ್ತು.

326
00:31:12,480 --> 00:31:14,800
ಆದರೆ ಕೊನೆ-ಕೊನೆಯಲ್ಲಿ
ಸ್ವಲ್ಪ ಅತಿಯೇ ಆಯಿತು ಅನಿಸುತ್ತೆ.

327
00:31:14,880 --> 00:31:18,960
ನಮ್ಮಲ್ಲಿ ಯಾರಿಗೂ ನಿಜವಾಗಿಯೂ ಏನು ನಡೆಯುತ್ತಿದೆ
ಅಂತ ಗೊತ್ತಿರಲ್ಲ ಅಲ್ವಾ, ಇಲ್ಲಿ.

328
00:31:22,920 --> 00:31:24,320
ನಿಮ್ಮನ್ನು ನೋಡಿ ಸಂತೋಷವಾಯಿತು.

329
00:31:29,480 --> 00:31:30,800
-ಜೆನ್ನಾ, ಹಾಯ್.
-ಹಲೋ, ಆಲಿಸನ್.

330
00:31:30,880 --> 00:31:32,640
ನಿನ್ನ ಅಪ್ಪ ಅವರ ಜೊತೆ
ಮಲಗುತ್ತಿದ್ದಾರಂದುಕೊಂಡಿದ್ದೆ.

331
00:31:34,920 --> 00:31:37,880
ಅಮ್ಮ ತೀರಿಕೊಂಡ ನಂತರ,
ಮನೆಗೆ ಬರುವ ಪ್ರತಿಯೊಬ್ಬ ಮಹಿಳೆಯೂ

332
00:31:37,960 --> 00:31:39,600
ನನ್ನ ಹೊಸ ತಾಯಿಯಾಗಬಹುದು ಅಂದುಕೊಳ್ಳುತ್ತಿದ್ದೆ.

333
00:31:40,240 --> 00:31:43,520
ಈಗ ಅರ್ಥ ಆಗುತ್ತಿದೆ, ವಿಧುರರು
ಕೆಲ ರೀತಿ ಮಹಿಳೆಯರಿಗೆ ಆಕರ್ಷಿತರಾಗುತ್ತಾರೆ ಅಂತ.

334
00:31:46,520 --> 00:31:48,600
ನನಗಾಗಿ ಆ ಮಾಹಿತಿ ಕಲೆಹಾಕುವೆಯಾ?

335
00:31:49,120 --> 00:31:52,400
ಪೊಲೀಸ್ ಅಧಿಕಾರಿಯನ್ನು ಭ್ರಷ್ಟಗೊಳಿಸಲು
ನೀನು ಮಾಡಿದ ಪ್ರಯತ್ನಗಳ ಬಗ್ಗೆ ನಾವು ಮಾತಾಡಬೇಕು…

336
00:31:53,400 --> 00:31:56,560
ಆಮೇಲೆ, ಕುಡಿಯುತ್ತಾ.

337
00:31:58,760 --> 00:31:59,600
ಏನು?

338
00:32:06,880 --> 00:32:09,040
ಲ್ಯಾಜ್‌, ಎಲ್ಲಾ ಚೆನ್ನಾಗಿ ನಡೆಯಿತು.

339
00:32:09,480 --> 00:32:12,200
ಧನ್ಯವಾದಗಳು. ಧನ್ಯವಾದ. ಹೇ, ಪಾಲ್.

340
00:32:12,280 --> 00:32:13,440
ಜೋಲ್.

341
00:32:13,840 --> 00:32:16,240
ನೀನು-- ಲ್ಯಾಜ್‌ ಅಂತ ಕರೆಯಬಹುದು.

342
00:32:16,320 --> 00:32:17,640
ನನಗೆ ಜೋಲ್ ಸರಿ ಅನಿಸುತ್ತೆ.

343
00:32:19,440 --> 00:32:21,960
ಮತ್ತೆ, ಗಾಲ್ಫ್ ಹೇಗಿದೆ?

344
00:32:22,040 --> 00:32:24,000
ಚೆನ್ನಾಗಿದೆ. ಈಗ ಹತ್ತರ ಮಟ್ಟಕ್ಕೆ ಬಂದಿದ್ದೇನೆ.

345
00:32:24,920 --> 00:32:25,840
ಅದ್ಭುತ.

346
00:32:25,920 --> 00:32:28,640
ಹೂಂ. ಮಾಂಟ್ಗೊಮೆರಿಯಲ್ಲಿರುವ
ಹಸಿರು ಮೈದಾನಗಳು ಅದ್ಭುತವಾಗಿವೆ.

347
00:32:28,720 --> 00:32:31,320
ಹೆಚ್ಚಿನ ಪೊಟ್ಯಾಸಿಯಮ್
ಮತ್ತು ಫಾಸ್ಫೇಟ್ ಗೊಬ್ಬರವನ್ನು ಬಳಸುತ್ತಾರೆ.

348
00:32:31,400 --> 00:32:33,760
ಇದು ಹಸಿರು ಬೆಳೆಯುವ ಸಮಯದಲ್ಲಿ
ಯಾವುದೇ ನ್ಯೂನತೆ ಇದ್ದರೆ ಸರಿಪಡಿಸುತ್ತೆ.

349
00:32:34,880 --> 00:32:36,080
ನಿನಗೆ ಕುಡಿಯಲು ಏನಾದರೂ ತರಲಾ?

350
00:32:36,760 --> 00:32:38,720
ಬೇಡ. ಧನ್ಯವಾದ.

351
00:32:39,040 --> 00:32:41,240
-ನಮಗಾಗಿ ತರುವೆ.
-ಸರಿ.

352
00:32:41,840 --> 00:32:44,120
-ಪಾಲ್, ನನ್ನ ಜೊತೆ ಬರುವೆಯಾ?
-ಹೂಂ. ಸರಿ.

353
00:33:14,200 --> 00:33:17,760
ಆ ರಾತ್ರಿ ನಡೆದುದ್ದನ್ನು ನಾವು ಯಾರೂ
ನಿಜವಾಗಲೂ ಎಂದಿಗೂ ಮರೆಯಲ್ಲ ಅನಿಸುತ್ತೆ.

354
00:33:27,720 --> 00:33:28,960
ಲ್ಯಾಜ್‌.

355
00:33:32,520 --> 00:33:33,520
ಲ್ಯಾಜ್‌, ಹೋಗೋಣ.

356
00:33:48,840 --> 00:33:50,840
ಸ್ಯಾಮ್‌ ಓಲ್ಸೆನ್‌, ಸಟನ್ ಲ್ಯಾಜರಸ್‌ ಕೊಲೆಯ
ಅನುಮಾನದ ಮೇಲೆ

357
00:33:50,920 --> 00:33:53,360
ನಾನು ನಿಮ್ಮನ್ನು ಬಂಧಿಸುತ್ತಿದ್ದೇನೆ.

358
00:33:54,000 --> 00:33:55,760
ನೀವು ಏನನ್ನೂ ಹೇಳಬೇಕಾಗಿಲ್ಲ. ನೀವು ಹೇಳಿದರೆ,

359
00:33:55,840 --> 00:33:57,640
ಅದನ್ನು ನಿಮ್ಮ ವಿರುದ್ಧ ಎತ್ತಿಹಿಡಿಯಲಾಗುವುದು.

360
00:34:00,760 --> 00:34:02,240
ಅವರು ಅವನನ್ನು ಬಿಡುಗಡೆ ಮಾಡಿದರು.

361
00:34:02,720 --> 00:34:04,480
ಅವರು ಅವನನ್ನು ಬಿಡುಗಡೆ ಮಾಡಿದರು!

362
00:34:18,200 --> 00:34:21,240
ನಿನ್ನೆ ರಾತ್ರಿ ಇಲ್ಲಿಂದ ಹೋದ ನಂತರ,
ನಾನು ಸ್ಯಾಮ್ ಓಲ್ಸೆನ್ ಮನೆಯ ಬಳಿ ನಡೆದು ಹೋದೆ.

363
00:34:23,280 --> 00:34:26,560
ನಿನ್ನ ತಂದೆಯ ಅಂತ್ಯಕ್ರಿಯೆಯ ರಾತ್ರಿ,
ನೀನು ನಮ್ಮ ಸೋದರಿಯ

364
00:34:26,640 --> 00:34:28,520
ಕೊಲೆ ಆರೋಪಿಯ ಮನೆಗೆ ಹೋದೆಯಾ?

365
00:34:28,600 --> 00:34:30,960
ಇವೆರಡೂ ವಿಷಯಗಳಿಗೆ ಸಂಬಂಧವಿದೆ.

366
00:34:31,040 --> 00:34:33,160
ಆದರೆ, ಗೊತ್ತಾ, ನಾನು ಅಲ್ಲಿ ಸುತ್ತಾಡುತ್ತಿದ್ದೆ.

367
00:34:33,760 --> 00:34:36,400
ನನಗೆ ಆ ಸ್ಥಳವನ್ನು ಮತ್ತೊಮ್ಮೆ ನೋಡಬೇಕಿತ್ತು.

368
00:34:37,520 --> 00:34:39,400
ಅವನು ಬಿಡುಗಡೆಯಾದ, ಲ್ಯಾಜ್‌.

369
00:34:39,840 --> 00:34:43,880
ವಿಧಿವಿಜ್ಞಾನ ಪುರಾವೆ, ಸಾಕ್ಷಿಗಳು ಇರಲಿಲ್ಲ,
ಅಪ್ಪ ಎಂದಿಗೂ ಅದು ಅವನಿರಬಹುದು ಅಂತ ನಂಬಲಿಲ್ಲ.

370
00:34:44,440 --> 00:34:47,400
ನಾನೂ, ಅವನು ಧರಿಸುವ ಬಟ್ಟೆಗಳ ವಿನ್ಯಾಸಕ್ಕೆ
ಅವನನ್ನು ಜೈಲಿಗೆ ಹಾಕುತ್ತಿದ್ದೆನೇನೋ,

371
00:34:47,480 --> 00:34:49,520
ಆದರೆ ನಾನು ಕಾನೂನು ನಿಯಮಗಳನ್ನು ಮಾಡಲ್ಲ.

372
00:34:52,720 --> 00:34:55,640
ಅಂತ್ಯಕ್ರಿಯೆ ಚೆನ್ನಾಗಿ ನಡೆಸಿಕೊಟ್ಟೆ ನೀನು.

373
00:34:57,560 --> 00:35:00,960
ಒಳ್ಳೆಯ ಭಾಷಣ. ನನಗೆ ಆ ಉತ್ಸಾಹ ಇಷ್ಟವಾಯಿತು.

374
00:35:03,320 --> 00:35:07,200
ನಾವು ಮುಂದುವರೆಯುತ್ತೇವೆ, ಲ್ಯಾಜ್‌, ನಿಜವಾಗಲೂ.
ಈ ದೇಹಗಳನ್ನು ತೊರೆದ ನಂತರ.

375
00:35:09,800 --> 00:35:10,960
ನಿಜವಾಗಲೂ?

376
00:35:11,040 --> 00:35:12,040
ನಿಜವಾಗಲೂ.

377
00:35:13,560 --> 00:35:15,080
ಸಟನ್ ಇಲ್ಲೇ ಇದ್ದಾಳಂತ ನನಗೆ ಗೊತ್ತು.

378
00:35:16,680 --> 00:35:18,640
ಕೆಲವೊಮ್ಮೆ ಅವಳ ಭಾಸವಾಗುತ್ತೆ.

379
00:35:24,200 --> 00:35:26,320
ಸರಿ, ಹಾಗಾದರೆ ಒಂದು ಪ್ರಶ್ನೆಗೆ ಉತ್ತರಿಸು.

380
00:35:27,920 --> 00:35:32,640
ಜನರು ಸತ್ತವರನ್ನು
ಎಂದಾದರೂ ನೋಡುತ್ತಾರೆಂದು ನಿನಗನಿಸುತ್ತಾ?

381
00:35:34,480 --> 00:35:37,040
ಅಂದರೆ, ನಿಜವಾಗಿ ನೋಡೋದು. ಅಂದರೆ…

382
00:35:38,480 --> 00:35:40,400
ಕಣ್ಣುಗಳ ಮುಂದೆ?

383
00:35:41,760 --> 00:35:46,800
ನೀನು ದುಃಖದಲ್ಲಿದ್ದೀಯ.
ನಿನಗೆ ಅಪ್ಪ ಕಾಣುತ್ತಿದ್ದಾರೆ ಅನಿಸಿದರೆ--

384
00:35:46,880 --> 00:35:50,680
ನನಗೆ ವಿಯೋಗದ ಭ್ರಮೆಗಳ ಬಗ್ಗೆ ಎಲ್ಲವೂ ಗೊತ್ತು.
ನಾನು ಕೇಳುತ್ತಿರೋದು ಅದನ್ನಲ್ಲ.

385
00:35:50,760 --> 00:35:52,680
ಸರಿ, ಹಾಗಾದರೆ ಏನು ಕೇಳುತ್ತಿದ್ದೀಯಾ?

386
00:35:55,560 --> 00:35:59,200
ಬಿಡು. ಜನರು ಸತ್ತರೆ, ಸತ್ತಂತೆ ಅಷ್ಟೇ.

387
00:36:04,840 --> 00:36:07,960
ಕೆಸಾಂಡ್ರಾನ ಕತ್ತು ಹಿಸುಕಿ ಕೊಲ್ಲಲಾಯಿತು
ಮತ್ತು ಅವಳ ಕೊಲೆಗಾರ ಎಂದಿಗೂ ಪತ್ತೆಯಾಗಲಿಲ್ಲ.

388
00:36:08,040 --> 00:36:10,560
ಅದು ನಿನಗೆ ನೆನಪಿಲ್ವಾ?
ಒಬ್ಬ ಕಕ್ಷಿದಾರರು ಕೊಲೆಯಾಗಿದ್ದು?

389
00:36:10,640 --> 00:36:13,360
ನೀವು ಖಂಡಿತ ನೆನ್ನೆ ಅವರ ಜೊತೆ ಇರಲಿಲ್ಲ.

390
00:36:41,600 --> 00:36:43,080
ಓಯ್! ನೀನು ಐಡೆನ್‌ ಅಲ್ವಾ‌?

391
00:36:47,480 --> 00:36:49,000
ನೀನು ಬೆಲ್ಲಾಳ ಮಗ.

392
00:36:52,520 --> 00:36:53,880
ಇಲ್ಲೇನು ಮಾಡುತ್ತಿದ್ದೀಯಾ?

393
00:36:55,400 --> 00:36:57,640
ನೀವು ನೋಡಲು ಹೇಗಿದ್ದೀರಾ ಅಂತ ನೋಡಬೇಕಿತ್ತು.

394
00:37:05,440 --> 00:37:07,440
ನೀವು ಇಲ್ಲಿಗೆ ಹಿಂತಿರುಗಿ ಬರಬಾರದಿತ್ತು.

395
00:37:11,840 --> 00:37:13,120
ನನ್ನ ತಂದೆ ತೀರಿಕೊಂಡರು.

396
00:37:14,440 --> 00:37:17,200
ಗೊತ್ತು. ಕೇಳ್ಪಟ್ಟೆ.

397
00:37:20,320 --> 00:37:22,880
ನಿನ್ನ ಅಮ್ಮ ಅಂತ್ಯಕ್ರಿಯೆಗೆ ಬಂದಿದ್ದರು.
ನಿನ್ನ ಅಪ್ಪ ಕೂಡ.

398
00:37:24,160 --> 00:37:25,640
ನಾನೂ ಬರಬಹುದಾ ಅಂತ ಕೇಳಿದೆ.

399
00:37:25,720 --> 00:37:27,120
ನನ್ನ ತಂದೆಯ ಅಂತ್ಯಕ್ರಿಯೆಗಾ?

400
00:37:28,440 --> 00:37:29,760
ಅವು ನನಗೆ ಆಸಕ್ತಿಯನ್ನುಟುಮಾಡುತ್ತದೆ.

401
00:37:29,840 --> 00:37:31,560
ಇದು ಸಾಧಾರಣವಾಗಿತ್ತು.

402
00:37:31,640 --> 00:37:33,760
ನೀನು ಎಷ್ಟು ಅಂತ್ಯಕ್ರಿಯೆಗಳಿಗೆ
ಹೋಗಿದ್ದೀಯೋ ಗೊತ್ತಿಲ್ಲ,

403
00:37:34,480 --> 00:37:36,720
ಆದರೆ ಎಲ್ಲವೂ ಸಾಮಾನ್ಯವಾಗಿತ್ತು,

404
00:37:37,760 --> 00:37:41,800
ಒಂದು ಶವಪೆಟ್ಟಿಗೆ,
ಕೆಲವು ಒಳ್ಳೆಯ ಮಾತುಗಳು, ಸ್ವಲ್ಪ ಸಂಗೀತ.

405
00:37:42,720 --> 00:37:43,640
ಹಾಗೆ.

406
00:37:46,000 --> 00:37:47,360
ನೀವು ಏನು ಮಾಡೋದು?

407
00:37:49,160 --> 00:37:53,280
ನಾನು ವಿಧಿವಿಜ್ಞಾನ ಮನೋವೈದ್ಯ.

408
00:37:54,920 --> 00:37:56,120
ಹುಚ್ಚರ ಜೊತೆ ಮಾತಾಡುತ್ತೀರಾ?

409
00:37:57,080 --> 00:37:58,480
ಹೂಂ. ಹೂಂ, ಹಾಗೇ ಏನೋ.

410
00:37:58,920 --> 00:37:59,880
ಸರಣಿ ಕೊಲೆಗಾರರ ಜೊತೆ?

411
00:38:01,280 --> 00:38:03,760
ಹೆಚ್ಚಿನ ಜನರು ಸರಣಿ ಕೊಲೆಗಾರರಲ್ಲ.

412
00:38:06,400 --> 00:38:11,160
ಹುಚ್ಚು ಜನರ ಜೊತೆ ಮಾತಾಡಿ
ನಿಮಗೂ ಹುಚ್ಚು ಹಿಡಿಯುತ್ತೇನೋ, ಅಲ್ವಾ?

413
00:38:12,800 --> 00:38:14,240
ನಿಜವೇ ಇರಬೇಕು.

414
00:38:16,720 --> 00:38:18,320
ಇಗೋ, ಮನೆ ಬಂತು.

415
00:38:18,920 --> 00:38:21,000
ನೀವು ಹಿಂತಿರುಗಿ ಬರಬಾರದಿತ್ತು.

416
00:38:21,520 --> 00:38:23,360
ನನಗೆ ಏನೋ ಸರಿ ಅನಿಸುತ್ತಿಲ್ಲ.

417
00:38:28,600 --> 00:38:31,840
ದಯವಿಟ್ಟು ಒಳಗೆ ಹೋಗು, ಐಡೆನ್. ನಾನು--

418
00:38:31,920 --> 00:38:35,920
ಕ್ಷಮಿಸು. ನೀನು ಇಲ್ಲಿರೋದು ಅವನಿಗೆ ಹೇಳಿದೆ,
ಅವನಿಗೆ ಇಂತಹ ಆಲೋಚನೆಗಳೇ ತಲೆಗೆ ಬರೋದು.

419
00:38:36,000 --> 00:38:38,480
ಪರವಾಗಿಲ್ಲ. ಹೇ, ಪಾಲ್.

420
00:38:38,560 --> 00:38:39,640
ಜೋಲ್.

421
00:38:39,720 --> 00:38:41,160
ಹೋಗು. ಒಳಗೆ ಹೋಗು.

422
00:38:41,440 --> 00:38:43,240
ಹೂಂ, ಸರಿ. ನಾನು ಹೊರಡುತ್ತೇನೆ.

423
00:38:43,320 --> 00:38:46,240
ಅವನನ್ನು ಮರಳಿ ಕರೆತಂದಿದ್ದಕ್ಕಾಗಿ ಧನ್ಯವಾದ,
ಖುಷಿ ಆಯಿತು.

424
00:38:47,560 --> 00:38:49,840
ನನಗೆ ಇಬ್ಬರು ಗಂಡಂದಿರು ಅನ್ನೋದು
ಅವನಿಗೆ ತುಂಬಾ ಆಶ್ಚರ್ಯ ಅನಿಸುತ್ತೆ.

425
00:38:50,400 --> 00:38:52,840
ಒಂದು ಮಗುವಿಗೆ ಅದು ವಿಚಿತ್ರ ಅನಿಸೋದು ಸಹಜ.

426
00:38:52,920 --> 00:38:54,080
ಹೂಂ, ನಿಜ.

427
00:38:55,480 --> 00:38:56,320
ಏನು?

428
00:38:56,400 --> 00:38:58,720
ನೀನು "ಹೂಂ, ನಿಜ" ಅನ್ನೋ ರೀತಿ.

429
00:38:59,440 --> 00:39:01,280
ನನಗೆ ಮತ್ತೆ 19 ವರ್ಷದಂತೆ ಭಾಸವಾಯಿತು.

430
00:39:03,760 --> 00:39:05,920
ಹೂಂ. ಗೊತ್ತು. ಕ್ಷಮಿಸು.

431
00:39:10,680 --> 00:39:11,720
ಬಾಯ್.

432
00:39:22,440 --> 00:39:25,720
ಹೇ, ಕೇಳು. ರೋಸಿ ಕ್ಯೂನಲ್ಲಿ ಭೇಟಿಯಾಗು.
ನಿನಗಾಗಿ ಏನೋ ಇದೆ.

433
00:39:27,080 --> 00:39:28,360
ಮಜಾ ಮಾಡು.

434
00:39:28,440 --> 00:39:29,480
ನೀನು ಅದ್ಭುತ, ಕಣೋ.

435
00:39:31,160 --> 00:39:33,640
ಸರಿ. ನಿನಗೆ ಸಂಕ್ಷಿಪ್ತ ವಿವರ ಬೇಕಾ?

436
00:39:33,720 --> 00:39:38,480
ಅವಳು ಹುಚ್ಚಿ, ಕೆಸಾಂಡ್ರಾ, ತುಂಬಾ ಹುಚ್ಚಿ.
ಸಮಸ್ಯಾತ್ಮಕ ಮಗು, ಪಾಲನಾ ಕೇಂದ್ರದಲ್ಲೂ, ಹೊರಗೂ.

437
00:39:38,560 --> 00:39:39,400
ಕೆಸಾಂಡ್ರಾ
ರೋಡ್ಸ್‌

438
00:39:39,480 --> 00:39:41,960
ಒಂದೆರಡು ಹಿಂಸಾತ್ಮಕ ಸಂಬಂಧಗಳು,
ಆಮೇಲೆ ಕೊಲೆಯಾದಳು,

439
00:39:42,040 --> 00:39:44,760
ಬಹುತೇಕ ಖಚಿತವಾಗಿ
ಅವಳ ಪ್ರೇಮಿ ನೀಲ್ ಕ್ರಾಫ್ಟ್ ಕೈಯಲ್ಲಿ.

440
00:39:44,840 --> 00:39:46,440
ಕಾಣದಂತೆ ಓಡಿಹೋದ, ಅವನ ಮೇಲೆ ಆರೋಪವೇ ಹೇರಲಿಲ್ಲ,

441
00:39:46,520 --> 00:39:47,400
ಶಂಕಿತರ ಪಟ್ಟಿ

442
00:39:47,480 --> 00:39:49,400
ವಿಷಾದಕರ ಮತ್ತು ಅಸಹ್ಯಕರ ಕಥೆ.

443
00:39:50,160 --> 00:39:52,280
ಹಾಳೆಯಲ್ಲಿ. ಆದ್ರೆ ಅವಳೊಬ್ಬ ಮನುಷ್ಯಳಾಗಿದ್ದಳು.

444
00:39:53,600 --> 00:39:57,200
ನಾನಿದನ್ನು ಜೈಲುಗಳಲ್ಲಿ ಯಾವಾಗಲೂ ನೋಡುತ್ತೇನೆ,
ನಡೆದಿರೋದೇ ಬೇರೆ, ಬರೆದಿರೋದೇ ಬೇರೆ.

445
00:39:57,280 --> 00:39:59,240
ಮತ್ತು ಕೆಲವೊಮ್ಮೆ,
ನಿನಗೆ ಈ ಜನರು ಇಷ್ಟ ಆಗುತ್ತಾರೆ.

446
00:39:59,320 --> 00:40:01,440
ಇದೆಲ್ಲಾ ಯಾಕೆ ಬೇಕಿತ್ತು ನಿನಗೆ ಹೇಳುವೆಯಾ?

447
00:40:01,520 --> 00:40:02,800
ನಿನ್ನಪ್ಪ ಅವಳ ಜೊತೆ ಮಲಗುತ್ತಿದ್ದರಾ?

448
00:40:02,880 --> 00:40:04,680
ಸದಾ ಶಿವನಿಗೆ ಅದೇ ಧ್ಯಾನ, ಅಲ್ವಾ?

449
00:40:04,760 --> 00:40:07,200
ಹೆಣ್ಣು, ಹೊನ್ನು ಹೋದರೆ, ನನಗೆ ಕೆಲಸವೇ ಇರಲ್ಲ.

450
00:40:07,760 --> 00:40:10,720
ಏನೋ ಗೊತ್ತಿಲ್ಲ. ಸಟನ್ ವಿಷಯ, ಇವೆರಡರ ಸಂಬಂಧ…

451
00:40:10,800 --> 00:40:12,880
ಯಾವ ಸಂಬಂಧವೂ ಇಲ್ಲ.
ಈ ಹುಡುಗಿ ಸಮಸ್ಯೆಯಾಗಿದ್ದಳು.

452
00:40:12,960 --> 00:40:17,040
ಸಮಸ್ಯೆ ಅವಳನ್ನು ಹುಡುಕಿ ಬಂತು, ಸಮಸ್ಯೆ ಅವಳನ್ನು
ಕೊಂದಿತು. ಅಷ್ಟೇ ಕಥೆ. 25 ವರ್ಷಗಳ ಹಿಂದೆ.

453
00:40:19,360 --> 00:40:20,480
ಹೋಗುತ್ತಿದ್ದೀಯಾ?

454
00:40:20,560 --> 00:40:21,960
ಕೆಲಸ ಇದೆ.

455
00:40:23,120 --> 00:40:24,880
ಜೆನ್ನಾಳನ್ನು ಭೇಟಿಯಾಗುತ್ತಿದ್ದೀಯ, ಅಲ್ವಾ?

456
00:40:25,480 --> 00:40:26,360
ಏನು?

457
00:40:26,440 --> 00:40:31,560
ನಿನ್ನ ಡಬ್ಬಾ ಸುಳ್ಳು ಮುಖ ನೋಡು.
ಸೆತ್, ಎಂದಿಗೂ ಅಪರಾಧ ಮಾಡಬೇಡ.

458
00:40:31,640 --> 00:40:35,040
ಸರಿ. ಇದು ನಿಜಕ್ಕೂ ತುಂಬಾ ವಿಚಿತ್ರವಾಗಿದೆ,
ಯಾಕೆಂದರೆ ಅವಳು

459
00:40:35,120 --> 00:40:39,360
ಲೋಕವು ಅವಳ ಜೀವನದಲ್ಲಿ ದಯೆಯನ್ನು ತರಲಿದೆ ಎಂದಳು,

460
00:40:39,440 --> 00:40:43,200
ಮತ್ತು ಕೆಲವೇ ನಿಮಿಷಗಳಲ್ಲಿ, ನಾನವಳಿಗೆ
ಕರೆ ಮಾಡಿ ಅವಳನ್ನು ನನ್ನ ಜೊತೆ ಹೊರಬರಲು ಕರೆದೆ.

461
00:40:43,280 --> 00:40:44,600
ವಿಧಿ.

462
00:40:44,680 --> 00:40:48,080
ಹೌದು, ಲ್ಯಾಜ್‌, ವಿಧಿ. ಇದು ವಿಧಿಯ ಕೆಲಸನೇ.

463
00:40:48,160 --> 00:40:51,240
-ನಿನಗದರ ಅರ್ಥ ಗೊತ್ತಿಲ್ಲ, ಅಲ್ವಾ?
-ಖಂಡಿತ ಇಲ್ಲ.

464
00:40:51,320 --> 00:40:53,200
ಆದರೆ ನಾನದನ್ನು
ನಿನ್ನ ಸೋದರಿಯ ಮೇಲೆ ಬಳಸಲಿದ್ದೇನೆ.

465
00:40:54,480 --> 00:40:56,640
ಚಿಯರ್ಸ್, ಗೆಳೆಯ. ಬಾಯ್!

466
00:41:53,160 --> 00:41:54,200
ಹೇ!

467
00:41:56,680 --> 00:41:59,000
ನೀನು ನನ್ನನ್ನು ಹಿಂಬಾಲಿಸುತ್ತಿದ್ದೀಯಾ? ಓಯ್!

468
00:42:00,600 --> 00:42:03,120
ಹೇ! ಹೇ!

469
00:42:08,320 --> 00:42:09,160
ಏನೂ ಆಗಿಲ್ಲ ತಾನೇ?

470
00:42:23,000 --> 00:42:24,720
ಓಯ್! ಓಯ್!

471
00:43:08,440 --> 00:43:09,840
ಹಲೋ!

472
00:43:17,080 --> 00:43:18,120
ಎಲ್ಲಿದ್ದೀಯಾ?

473
00:43:33,240 --> 00:43:38,200
ದ ಜುನಿಪರ್‌ ಬುಶ್‌:
ದ ಲಾಸ್‌ ಆಫ್‌ ಇನ್ನೋಸೆನ್ಸ್‌

474
00:44:19,160 --> 00:44:22,280
"ಬೆಂಕಿ ಹಾಕುವವನನ್ನು
ನಿಮ್ಮ ಮನೆಗೆ ಆಹ್ವಾನಿಸಿದರೆ,

475
00:44:23,280 --> 00:44:25,520
ಅವನ ಕೋಣೆಯಲ್ಲಿ ಬೆಂಕಿಪೊಟ್ಟಣ ಇಡಬೇಡಿ."

476
00:44:41,560 --> 00:44:43,720
ಮತ್ತೆ, ನೀನು ಕೆಸಾಂಡ್ರಾಳನ್ನು ಭೇಟಿಯಾದೆಯಾ?

477
00:44:44,720 --> 00:44:46,840
ಬೇರೆಯವರೂ ಇದ್ದಾರೆ, ಮಗಾ.

478
00:44:47,920 --> 00:44:49,240
ಅವರು ನಿನ್ನ ಬಳಿಗೂ ಬರುತ್ತಾರೆ.

479
00:44:50,800 --> 00:44:53,240
ಉಳಿದ ಕೊಲೆಯಾದವರು.

480
00:44:54,640 --> 00:44:56,160
ಕೆಸಾಂಡ್ರಾನಂತೆ.

481
00:45:00,160 --> 00:45:01,360
ನನ್ನಂತೆ.

482
00:45:56,960 --> 00:45:58,960
ಉಪ ಶೀರ್ಷಿಕೆ ಅನುವಾದ: ಅನುರಾಧ

