1
00:00:05,000 --> 00:00:09,040
19
ದಿ ಗ್ಯಾಲರಿ

2
00:00:12,000 --> 00:00:13,920
ಆ ರಾತ್ರಿ ನೀನು ಯಾರ ಜೊತೆ ಇದ್ದೆ, ಬಿಲ್ಲಿ?

3
00:00:16,280 --> 00:00:17,320
ಜೆನ್ನಾ ಜೊತೆ.

4
00:00:36,680 --> 00:00:37,680
ಏನು?

5
00:00:39,480 --> 00:00:40,880
ನೀನು ಆ ರಾತ್ರಿಯ ಬಗ್ಗೆ ಸುಳ್ಳು ಹೇಳಿದೆ.

6
00:00:43,240 --> 00:00:44,200
ಬಿಲ್ಲಿಗೆ ಮುತ್ತಿಟ್ಟೆ.

7
00:00:47,360 --> 00:00:48,280
ಏನು?

8
00:00:50,160 --> 00:00:53,400
-ಇಲ್ಲ--
-ನೀನು ಬಿಲ್ಲಿಗೆ ಮುತ್ತಿಟ್ಟೆ.

9
00:00:53,720 --> 00:00:55,280
ನನಗೆ ಒಂದು ನಿಮಿಷ ಕೊಡು.

10
00:00:55,800 --> 00:00:59,240
-ಸುಳ್ಳು ಹೇಳುವುದನ್ನು ನಿಲ್ಲಿಸು!
-ನಾನು ಸುಳ್ಳು ಹೇಳುತ್ತಿಲ್ಲ. ನಾನು…

11
00:01:00,760 --> 00:01:03,080
ನನಗೆ ಸರಿಯಾಗಿ ನೆನಪಿಲ್ಲ. ಅದು…

12
00:01:04,320 --> 00:01:06,200
ಅದು ಅಲ್ಪ ಸ್ವಲ್ಪ ನೆನಪಾಗುತ್ತೆ,

13
00:01:06,280 --> 00:01:09,160
-ಮತ್ತು ನನಗವು ಇಷ್ಟ ಇಲ್ಲ, ನಾನು--
-ನಡೆದದ್ದು ಏನು?

14
00:01:10,080 --> 00:01:10,920
ನಾನು ಕುಡಿದಿದ್ದೆ.

15
00:01:15,240 --> 00:01:17,880
ನನಗೆ ಪ್ರಜ್ಞೆ ಇರಲಿಲ್ವೋ ಏನೋ ಮತ್ತು…

16
00:01:23,240 --> 00:01:24,560
ನಾನು ಬಿಲ್ಲಿಗೆ ಮುತ್ತಿಟ್ಟೆ.

17
00:01:28,920 --> 00:01:30,040
ಬಿಲ್ಲಿ.

18
00:01:30,720 --> 00:01:33,800
ದರಿದ್ರ ಬೇವರ್ಸಿ!

19
00:01:39,080 --> 00:01:40,200
ನನಗೆ ಆ ಭಾಗ ನೆನಪಿದೆ.

20
00:01:41,320 --> 00:01:42,440
ಅದು ಆಗಿದ್ದು ನನಗೆ ಗೊತ್ತು,

21
00:01:42,520 --> 00:01:45,680
ಯಾಕೆಂದರೆ ಸಟನ್ ನಮ್ಮನ್ನು ನೋಡಿದ್ದು
ನನಗೆ ನೆನಪಿದೆ ಮತ್ತು…

22
00:01:47,400 --> 00:01:49,120
ಅವಳ ಮುಖದಲ್ಲಿದ್ದ ಭಾವನೆ, ಅದು…

23
00:01:50,240 --> 00:01:52,720
ಅದಕ್ಕೇ ಅವಳು ನೃತ್ಯದಿಂದ ಹೊರನಡೆದದ್ದು.

24
00:01:54,200 --> 00:01:55,760
ನನಗೆ ನಂಬಲಾಗುತ್ತಿಲ್ಲ.

25
00:01:55,840 --> 00:01:57,880
ಲ್ಯಾಜ್, ನಾನಾಗ ಚಿಕ್ಕ ಹುಡುಗಿ, ನಾನು--

26
00:01:57,960 --> 00:02:01,240
ಸರಿತಪ್ಪುಗಳ ನಡುವಿನ ವ್ಯತ್ಯಾಸ ಗೊತ್ತಾಗುವಷ್ಟು
ವಯಸ್ಸಾಗಿತ್ತು ನಿನಗೆ, ಜೆನ್ನಾ!

27
00:02:01,320 --> 00:02:03,280
ನನಗೆ ಈಗಾಗಲೇ ನನ್ನ ಮೇಲೆ ದ್ವೇಷ ಇದೆ!

28
00:02:04,120 --> 00:02:04,960
ಸರಿನಾ?

29
00:02:08,720 --> 00:02:09,760
ಆಮೇಲೆ…

30
00:02:10,400 --> 00:02:14,320
ಆಮೇಲೆ ನಾನು ಸಟನ್‌ನ ಹಿಂಬಾಲಿಸಿಕೊಂಡು ಮನೆಗೆ
ಬಂದೆನೇನೋ, ಯಾಕೆಂದರೆ ನಾನು ಕೋಣೆಯಲ್ಲಿದ್ದೆ…

31
00:02:17,960 --> 00:02:20,080
ನೀನು ಕಿರುಚೋದು ಕೇಳಿತು.

32
00:02:24,880 --> 00:02:25,920
ಇರು, ಇರು, ಇರು.

33
00:02:28,800 --> 00:02:29,640
ನೀನು…

34
00:02:30,480 --> 00:02:31,760
ನೀನು ಮನೆಯಲ್ಲಿದ್ದೆಯಾ…

35
00:02:33,560 --> 00:02:36,040
ಅವಳ ಕೊಲೆಯಾದಾಗ ನೀನು ಮನೆಯಲ್ಲಿದ್ದೆಯಾ?

36
00:02:38,680 --> 00:02:40,400
ಹೌದು. ನಾನು ಬಹುಶಃ…

37
00:02:42,040 --> 00:02:44,640
-ದೇವರೇ.
-ಆದರೆ ನನಗೆ ಏನೂ ಕಾಣಲಿಲ್ಲ ಅಥವಾ…

38
00:02:45,160 --> 00:02:47,320
ಏನೂ ಕೇಳಲಿಲ್ಲ, ನಾನು ಕೇವಲ…

39
00:02:48,000 --> 00:02:48,920
ನಾನು…

40
00:02:49,000 --> 00:02:50,280
ನಾನು ನನ್ನ ಕೋಣೆಯಿಂದ ಹೊರಬಂದಾಗ,

41
00:02:50,360 --> 00:02:53,520
ನೀನು ಅಪ್ಪನನ್ನು ಕರೆತರಲು ಹೋಗಿಯಾಗಿರಬೇಕು
ಯಾಕೆಂದರೆ ಆಗಲೇ…

42
00:02:57,720 --> 00:02:59,280
ಆಗಲೇ ನಾನು ನೋಡಿದ್ದು…

43
00:03:09,040 --> 00:03:11,560
ಇಲ್ಲ. ಸಟನ್, ದಯವಿಟ್ಟು ಎದ್ದೇಳು.

44
00:03:18,240 --> 00:03:19,720
ತುಂಬಾ ರಕ್ತ ಇತ್ತು.

45
00:03:20,800 --> 00:03:25,840
ನಂತರ ನಾನು ಹೊರಗೆ ಇದ್ದದ್ದು ನೆನಪಿದೆ,
ನಾನು ಸಹಾಯ ಪಡೆಯಲು ಹೋಗಿರಬೇಕು.

46
00:03:25,920 --> 00:03:31,400
ಆಮೇಲೆ ನಾನು ಮತ್ತೆ ಮನೆಗೆ ಹಿಂತಿರುಗಿದೆ,
ಪೊಲೀಸರು ಆಗಲೇ ಬಂದಾಗಿತ್ತು.

47
00:03:31,880 --> 00:03:34,800
ಮತ್ತು… ಮತ್ತು ನಾನು
ನನ್ನ ಕೈಗಳನ್ನು ತೊಳೆದಾಗಿತ್ತು…

48
00:03:35,920 --> 00:03:36,760
ನಾನು…

49
00:03:39,920 --> 00:03:43,400
ಕ್ಷಮಿಸು, ನಾನು ನಿನಗೆ ಎಂದೂ ಹೇಳಲಿಲ್ಲ,
ಲ್ಯಾಜ್‌. ನಾನು… ನನಗೆ…

50
00:03:44,200 --> 00:03:46,000
ನನಗೆ ಹೇಳಲು ಆಗಲಿಲ್ಲ.

51
00:03:47,440 --> 00:03:49,680
ಇಲ್ಲ. ಇಲ್ಲ, ನೀನು ಹಾಗೆ ಮಾಡುವಂತಿಲ್ಲ.

52
00:03:49,760 --> 00:03:51,840
ಕ್ಷಮಿಸು, ಲ್ಯಾಜ್‌. ದಯವಿಟ್ಟು, ನಾನು…

53
00:03:53,160 --> 00:03:54,600
-ನಾನು ಇದನ್ನು ಕೇಳಲ್ಲ.
-ಇರು!

54
00:04:03,520 --> 00:04:09,520
ಹರ್ಲಾನ್‌ ಕೊಬೆನ್ಸ್
ಲ್ಯಾಜರಸ್‌

55
00:04:13,520 --> 00:04:16,720
ರೋಸಿ ಕ್ಯೂ

56
00:04:16,800 --> 00:04:18,520
ಇದನ್ನು ಮರೆತು ಹೇಗೆ ಮುಂದುವರಿಯೋದೋ ಗೊತ್ತಿಲ್ಲ.

57
00:04:19,240 --> 00:04:22,960
ಅಂದರೆ, ನಾನು…
ಅವಳು ಹೇಗೆ ನನಗಿದನ್ನು ಹೇಳದೇ ಇದ್ದಳು?

58
00:04:23,040 --> 00:04:26,000
ಲ್ಯಾಜ್‌, ಜನರಿಗೆ ಕೆಲವು ಕೆಲಸಗಳನ್ನು ಮಾಡಲು
ತಮ್ಮದೇ ಆದ ಕಾರಣಗಳಿರುತ್ತವೆ.

59
00:04:26,080 --> 00:04:29,600
ನಿನಗವಳು ಇನ್ನೂ ಇಷ್ಟ ಅಂತ ನನಗೆ ಗೊತ್ತು, ಗೆಳೆಯ.
ಆದರೆ ಕೇಳು. ಅವಳು ಮಾಡಿದ್ದು ತಪ್ಪು.

60
00:04:29,680 --> 00:04:30,640
ನಿಜ.

61
00:04:31,520 --> 00:04:33,400
ಒಪ್ಪುವೆ. ಆದರೆ ಅದು…

62
00:04:35,240 --> 00:04:38,040
ಅವಳು ಅಂದು ರಾತ್ರಿ ನಡೆದದ್ದು
ಯಾರಿಗೂ ಹೇಳದೇ ಇದ್ದರೆ

63
00:04:38,120 --> 00:04:40,800
ಬಹುಶಃ ಅವಳ ಪಾಲಿಗೆ ಅದು ನಿಜವಲ್ಲ.

64
00:04:43,600 --> 00:04:46,040
ಕೆಲವೊಮ್ಮೆ ನಿನಗೆ ನೀನೇ
ಕಥೆ ಹೇಳಿಕೊಳ್ಳಬೇಕಾಗುತ್ತದೆ.

65
00:04:46,400 --> 00:04:49,840
ಇಲ್ಲ. ಇಲ್ಲ, ಅದು ಸುಳ್ಳನ್ನು ಸಮರ್ಥಿಸಿಕೊಳ್ಳಲು
ಒಂದು ಒಳ್ಳೆಯ ಮಾರ್ಗ ಅಷ್ಟೇ.

66
00:04:52,800 --> 00:04:54,960
ಅಲ್ಲದೇ, ನೀನು ಯಾವಾಗಿನಿಂದ
ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದೀಯಾ?

67
00:04:55,040 --> 00:04:57,600
ಹೇ, ನನ್ನಲ್ಲಿ ಅಂತರಾತ್ಮದ ಜ್ಞಾನ ಇದೆ. ಸರಿನಾ?

68
00:04:57,680 --> 00:04:59,360
ಮತ್ತು ಆ ಪದವನ್ನು ಎಲ್ಲಿಂದ ಕಲಿತೆ?

69
00:05:00,200 --> 00:05:01,160
ಟ್ವೀಟ್‌ನಲ್ಲಿ.

70
00:05:03,920 --> 00:05:07,720
ನಾನು ಸಟನ್‌ನ ಮನೆಗೆ ಹಿಂಬಾಲಿಸಲಿಲ್ಲ ಅಂತ
ವರ್ಷಗಟ್ಟಲೆ ನನ್ನನ್ನು ದೂಷಿಸಿಕೊಳ್ಳಲು ಬಿಟ್ಟಳು,

71
00:05:07,800 --> 00:05:09,320
ನಾನು ಬೆಲ್ಲಾ ಜೊತೆ ಉಳಿದುಕೊಂಡೆ ಅಂತ.

72
00:05:09,960 --> 00:05:14,000
ನಾನು ಅವಳನ್ನು ಸಮಾಧಾನಪಡಿಸಬೇಕಾಗಿತ್ತು, ಅವಳು
ಒಂದು ಮೂರ್ಖ ಹರೆಯದ ನಾಟಕದಿಂದ ಬೇಜಾರಲ್ಲಿದ್ದಳು.

73
00:05:15,960 --> 00:05:18,120
ಆದರೆ ಸಟನ್ ಮಧ್ಯದಲ್ಲೇ ಬಿಟ್ಟು ಹೋಗಲು

74
00:05:18,200 --> 00:05:20,360
ಕಾರಣವೇ ಜೆನ್ನಾ ಆಗಿದ್ದಳು.

75
00:05:30,000 --> 00:05:30,840
ದೇವರೇ.

76
00:05:32,560 --> 00:05:33,560
ಅವಳು ನಿನಗೆ ಕಾಣುತ್ತಿದ್ದಾಳಾ?

77
00:05:35,440 --> 00:05:37,440
ಹೂಂ. ಹೂಂ, ಕಾಣುತ್ತಿದ್ದಾಳೆ. ಮಾದಕವಾಗಿದ್ದಾಳೆ.

78
00:05:37,880 --> 00:05:39,320
ಅಂದರೆ ಅವಳು ನಿಜನಾ?

79
00:05:43,480 --> 00:05:45,200
ಇರು, ನೀನವಳನ್ನು ದೆವ್ವವಾಗಿ ನೋಡಿದೆಯಾ?

80
00:05:45,920 --> 00:05:47,280
ಈಗ ನಿನ್ನ ದೆವ್ವಗಳೂ ಮಾದಕವಾಗಿವೆಯಾ?

81
00:05:48,280 --> 00:05:51,280
ನನಗೆ ಮಾದಕ ಜನರು ಕಾಣುತ್ತಾರೆ.

82
00:05:51,360 --> 00:05:53,160
ಅವಳಾಗಿರಲು ಸಾಧ್ಯವಿಲ್ಲ. ಅದು ಸಾಧ್ಯವಿಲ್ಲ.

83
00:05:57,320 --> 00:05:58,800
ಏನು ಗೊತ್ತಾ? ನಾನು ಮನೆಗೆ ಹೋಗುವೆ.

84
00:05:59,920 --> 00:06:01,080
ಅದು ಸಾಧ್ಯವಿಲ್ಲ.

85
00:06:04,640 --> 00:06:05,720
ಆದರೆ ಇದು ಮಜವಾಗಿತ್ತು.

86
00:06:06,280 --> 00:06:08,600
ಹೂಂ, ನಾನು ಹೇಗಾದರೂ ಹಾಳಾಗಿ ಹೋಗಬಹುದಾ?

87
00:06:39,960 --> 00:06:41,720
-ಓಹ್, ಹಾಯ್.
-ಹಾಯ್.

88
00:06:44,240 --> 00:06:46,120
ನಾನು ಕ್ಷಮೆ ಕೇಳಬೇಕು.

89
00:06:46,200 --> 00:06:47,200
ಅಗತ್ಯವಿಲ್ಲ. ನಿಜವಾಗಲೂ.

90
00:06:48,240 --> 00:06:49,520
ಸರಿ, ನಾನು ಕನಿಷ್ಠ ಪಕ್ಷ…

91
00:06:49,600 --> 00:06:51,040
ಇಲ್ಲ. ಇಲ್ಲ, ಬೇಡ. ನಾನು ನೋಡಿಕೊಳ್ಳುವೆ.

92
00:06:51,800 --> 00:06:52,800
ಧನ್ಯವಾದ.

93
00:06:54,800 --> 00:06:55,760
ಚಿಯರ್ಸ್.

94
00:06:56,560 --> 00:06:57,400
ಹೂಂ,

95
00:06:57,920 --> 00:07:00,080
ನನ್ನ ತಂದೆ ಈಗಷ್ಟೇ ನಿಧನರಾದರು.

96
00:07:00,160 --> 00:07:03,480
ಮತ್ತು ನಾನು ಸಹಾನುಭೂತಿ ಪಡೆಯಲು
ಇದನ್ನು ನಿಮಗೆ ಹೇಳುತ್ತಿಲ್ಲ.

97
00:07:03,560 --> 00:07:04,720
ನಾನು ಹೇಳುತ್ತಿರೋದು ಯಾಕೆಂದರೆ…

98
00:07:06,040 --> 00:07:09,640
ನೀವು ನೋಡಬೇಕಿದ್ದ
ಡಾಕ್ಟರ್‌ ಲ್ಯಾಜರಸ್‌ ಅವರಾಗಿದ್ದರು.

99
00:07:10,760 --> 00:07:11,680
ನಾನಲ್ಲ.

100
00:07:13,800 --> 00:07:14,640
ನನಗೆ ಗೊತ್ತು.

101
00:07:15,440 --> 00:07:18,280
ನಮ್ಮ ಮಾತುಕತೆಯ ನಂತರ ನಾನು
ನಿಮಗಾಗಿ ಹುಡುಕಿದೆ. ಅಂದರೆ ನಿಮ್ಮ ತಂದೆಗಾಗಿ.

102
00:07:20,560 --> 00:07:22,560
-ಸರಿ.
-ನಿಮ್ಮ ತಂದೆಯ ಬಗ್ಗೆ ತಿಳಿದು ಬೇಜಾರಾಯಿತು,

103
00:07:24,280 --> 00:07:25,360
ಆದರೆ, ನೀವು…

104
00:07:27,080 --> 00:07:28,960
-ಅವರಂತೆ ನಟಿಸುತ್ತಿದ್ದಿರಿ.
-ಹಾಂ.

105
00:07:30,880 --> 00:07:32,680
ಸ್ವಲ್ಪ ವಿವರಣೆ ಕೊಡುವೆ.

106
00:07:33,960 --> 00:07:37,200
ಮೊದಲನೆಯದಾಗಿ, ನಾನು ಮನೋವೈದ್ಯ.

107
00:07:39,240 --> 00:07:42,120
ಎರಡನೆಯದಾಗಿ, ನಾನು ಅವರಂತೆ
ನಟಿಸುತ್ತಿರಲಿಲ್ಲ. ನಿಜವಾಗಲೂ.

108
00:07:43,240 --> 00:07:44,240
ಅದು ಏನೆಂದರೆ…

109
00:07:45,160 --> 00:07:47,000
ನನ್ನ ತಂದೆಯ ಕೆಲವು ರೋಗಿಗಳು…

110
00:07:48,440 --> 00:07:49,520
ಬಂದು…

111
00:07:50,280 --> 00:07:51,320
ನನ್ನ ಜೊತೆ ಮಾತಾಡುತ್ತಿದ್ದಾರೆ.

112
00:07:52,000 --> 00:07:52,920
ಅವರ ಜೊತೆಗಲ್ಲ.

113
00:07:54,280 --> 00:07:58,000
ನೀವು ಇನ್ನೂ… ಸಮಾಲೋಚನೆಗಾಗಿ ಹುಡುಕುತ್ತಿಲ್ಲ…

114
00:07:59,800 --> 00:08:03,680
ಇಲ್ಲ, ಗೊತ್ತಾಯಿತು. ಗೊತ್ತಾಯಿತು. ನೀವು
ಬೇರೆ ಚಿಕಿತ್ಸಕರ ಬಳಿ ಹೋಗುತ್ತಿದ್ದೀರಿ. ಸರಿ.

115
00:08:06,600 --> 00:08:08,200
ನೀವು ಬಹಳ ಒಳ್ಳೆಯ…

116
00:08:09,280 --> 00:08:11,040
ಮೊದಲ ಅಭಿಪ್ರಾಯ ಮೂಡಿಸಿದ್ದರೂ ಸಹ.

117
00:08:12,240 --> 00:08:14,160
ಎರಡನೇ ಅಭಿಪ್ರಾಯ ಮೂಡಿಸುವ ಅವಕಾಶ ಸಿಗಬಹುದಾ?

118
00:08:18,560 --> 00:08:19,800
ಅಮ್ಮ ನನಗಾಗಿ ಅವಳ ಮನೆ ಕೊಟ್ಟಳು.

119
00:08:20,840 --> 00:08:23,720
ಲಿಂಟಾಲ್ ಸ್ಟ್ರೀಟ್‌ನಲ್ಲಿ, ಮೇಲ್ಭಾಗದಲ್ಲಿ,
ಅದ್ಭುತ ನೋಟದೊಂದಿಗೆ

120
00:08:24,080 --> 00:08:25,480
ಮತ್ತು ಭೀಕರ ಮುಂಬಾಗಿಲಿನೊಂದಿಗೆ.

121
00:08:26,800 --> 00:08:30,280
ಪ್ರತಿಯೊಂದು ಬಾಣನವೂ ಇದೆ ಅದರಲ್ಲಿ,
ಸಣ್ಣ ಹೂಗಳೊಂದಿಗೆ.

122
00:08:30,360 --> 00:08:31,400
ಅದು ತುಂಬಾ…

123
00:08:31,480 --> 00:08:33,960
"ದರಿದ್ರವಾಗಿದೆ", ನೀವು ಹುಡುಕುತ್ತಿರೋ ಪದ
ಅದು ಅನಿಸುತ್ತೆ.

124
00:08:34,040 --> 00:08:35,680
ದರಿದ್ರ, ಹೌದು.

125
00:08:36,920 --> 00:08:39,240
ಅವಳಿಗೆ ನೆರೆಯವರಿಗೆ
ಕಿರಿಕಿರಿ ಮಾಡಲು ಇಷ್ಟ ಇತ್ತು ಅನಿಸುತ್ತೆ.

126
00:08:41,640 --> 00:08:43,280
ಇರಲಿ, ನನಗೆ ನಾನೇ ಹೇಳಿಕೊಂಡೆ…

127
00:08:44,760 --> 00:08:47,920
ಅವಳ ವಸ್ತುಗಳನ್ನು ಸ್ವಚ್ಛಗೊಳಿಸುವವರೆಗೆ
ಅಲ್ಲಿಯೇ ಇದ್ದು, ಆಮೇಲೆ…

128
00:08:48,000 --> 00:08:51,000
ಮತ್ತು ಇದು… ಎರಡು ವರ್ಷಗಳ ಹಿಂದಿನ ಕಥೆ.

129
00:08:51,080 --> 00:08:52,040
ಎರಡು ವರ್ಷಗಳಾ?

130
00:08:55,120 --> 00:08:59,720
ಹಾಗಾದರೆ… ಎರಡು ವರ್ಷಗಳ ನಂತರವೂ, ಈ ದುಃಖದಿಂದ
ನಾನು ಇನ್ನೂ ಗೊಂದಲಕ್ಕೊಳಗಾಗುತ್ತಿರುತ್ತೇನಾ?

131
00:09:00,480 --> 00:09:04,120
ನೋಡಿ, ನನ್ನ ತಲೆಯಲ್ಲಿ,
ನಾನು ಬೇಗನೇ ಸರಿಯಾಗಬೇಕಿತ್ತು.

132
00:09:08,720 --> 00:09:09,560
ಹೂಂ.

133
00:09:11,400 --> 00:09:12,240
ಅದು…

134
00:09:13,080 --> 00:09:14,440
ಅದು ಹಾಗೆ ಆಗಲ್ಲ.

135
00:10:31,240 --> 00:10:32,160
ಮಾರ್ಗೊ.

136
00:10:37,560 --> 00:10:38,400
ಛೇ.

137
00:10:45,080 --> 00:10:46,160
ನಿನಗೆ ಗೊತ್ತಂತ ನನಗೆ ಗೊತ್ತು.

138
00:10:48,200 --> 00:10:50,520
ಏನು? ಏನು ಗೊತ್ತಿದೆ?

139
00:10:54,160 --> 00:10:57,640
ನನ್ನ ಭಾವನೆಗಳನ್ನು ಘಾಸಿಗೊಳಿಸದೇ ಇರಲು
ನೋಡಿದ್ದಕ್ಕೆ ಧನ್ಯವಾದ, ಡಾ. ಎಲ್.

140
00:11:03,040 --> 00:11:05,400
ಆದರೆ ನಿಜವಾದ ಸಮಸ್ಯೆ ಇದೆ ಅಂತ
ನಾವು ಒಪ್ಪಿಕೊಳ್ಳಲೇಬೇಕು.

141
00:11:05,480 --> 00:11:07,600
ಇಂದಿನ ಸಮಾಲೋಚನೆಗಳು
13 ಜುಲೈ 1998

142
00:11:08,960 --> 00:11:10,320
ಅಂದರೆ, ಬಿಲ್ಲಿಗೆ.

143
00:11:11,640 --> 00:11:12,480
ಹೂಂ.

144
00:11:15,880 --> 00:11:16,720
ಬಿಲ್ಲಿಗೆ.

145
00:11:17,400 --> 00:11:19,680
ಅವನಿಗೆ ವೈದ್ಯಕೀಯ ನೆರವು ಬೇಕು.

146
00:11:20,480 --> 00:11:21,760
ಅದು ನೀವಾಗಿದ್ದರೆ ಚೆನ್ನಿತ್ತು,

147
00:11:21,840 --> 00:11:24,400
ಆದರೆ ಅವನು ಅದರ ಬದಲು ಹೋಗಿ ನೀರಿಗೆ ಹಾರುವ.

148
00:11:26,120 --> 00:11:28,000
ಯಾಕೆಂದರೆ ಅವನು ನಿಮ್ಮ ಮಗಳ ಜೊತೆ ಇದ್ದಾನೆ.

149
00:11:29,160 --> 00:11:32,440
ಮತ್ತು ಅವನು ಮುಂದಿನ ವಾರದ ನೃತ್ಯಕ್ಕಾಗಿ
ತುಂಬಾ ಉತ್ಸುಕನಾಗಿದ್ದಾನೆ, ಅಂದಹಾಗೆ.

150
00:11:32,920 --> 00:11:38,920
ಹೌದು, ಬಹುಶಃ… ಬಿಲ್ಲಿ ಮತ್ತು ಸಟನ್
ನೃತ್ಯಕ್ಕೆ ಹೋಗಬಾರದು.

151
00:11:39,000 --> 00:11:43,720
ಮತ್ತು ಬಹುಶಃ ನಾವು ಬಿಲ್ಲಿಗೆ ಬೇಗನೇ
ಸಹಾಯವನ್ನು ನೀಡಬಹುದು, ಮತ್ತು--

152
00:11:43,800 --> 00:11:45,600
ಅವರೆಲ್ಲಾ ಗೆಳೆಯರು ಮಾಡುತ್ತಿರೋದನ್ನ ಮಾಡಬಾರದಂತ

153
00:11:45,680 --> 00:11:48,040
ನಾವು ಇಬ್ಬರು ಹರೆಯದವರಿಗೆ
ಹೇಳಲು ಆಗುತ್ತೆ ಅನಿಸುತ್ತಾ?

154
00:11:48,960 --> 00:11:50,520
ಇರಲಿ, ನಾನು ಬಂದಿದ್ದು…

155
00:11:51,280 --> 00:11:53,920
ಬಿಲ್ಲಿಯ ವರ್ತನೆಗೆ ಕ್ಷಮೆಯಾಚಿಸಲು.

156
00:11:54,360 --> 00:11:58,240
ಮಾರ್ಗೊ, ಬಿಲ್ಲಿ ಏನು ಮಾಡಿದ?

157
00:12:03,160 --> 00:12:05,160
ಬಿಲ್ಲಿ ಈ ಕಟ್ಟಡದಲ್ಲಿ ಓಡಾಡುತ್ತಿದ್ದಾನೆ.

158
00:12:07,760 --> 00:12:08,840
ಹಜಾರಗಳಲ್ಲಿ.

159
00:12:10,640 --> 00:12:11,560
ಶೌಚಾಲಯಗಳಲ್ಲಿ.

160
00:12:14,360 --> 00:12:15,200
ಕಾಯುತ್ತಿದ್ದಾನೆ.

161
00:12:17,600 --> 00:12:18,960
ನಿಮ್ಮ ರೋಗಿಗಳನ್ನು ನೋಡುತ್ತಿದ್ದಾನೆ.

162
00:12:20,880 --> 00:12:22,520
ಒಳಗೆ ಬರಲು ನನ್ನ ಪಾಸ್ ಕದ್ದಿದ್ದಾನೆ.

163
00:12:26,400 --> 00:12:27,560
ಅವನು ಇತ್ತೀಚೆಗೆ…

164
00:12:29,600 --> 00:12:30,840
ತುಂಬಾ ಕರಾಳವಾಗಿ ಹೋಗಿದ್ದಾನೆ.

165
00:12:30,920 --> 00:12:31,880
ನಾನು ಹೋಗಬೇಕು.

166
00:12:33,240 --> 00:12:35,640
ಇಲ್ಲ. ಮಾರ್ಗೊ, ಅದರ ಅಗತ್ಯವಿಲ್ಲ.

167
00:12:35,720 --> 00:12:37,800
ನಾನು ಯಾರಿಗೂ ನೋವಾಗಲು ಬಿಡಲ್ಲ, ಡಾ. ಎಲ್.

168
00:12:38,360 --> 00:12:39,200
ನನ್ನಾಣೆ.

169
00:12:40,520 --> 00:12:42,160
ನೋವಾ? ಬಿಲ್ಲಿಯಿಂದಲಾ?

170
00:12:42,800 --> 00:12:44,080
ಇಲ್ಲ, ಮಾರ್ಗೊ.

171
00:12:53,840 --> 00:12:55,840
ಕರೆ
ಮಾರ್ಗೊ ಮೆಕಿಂಟೈರ್

172
00:12:55,920 --> 00:12:58,840
ನಮಸ್ಕಾರ, ನೀವು ಮಾರ್ಗೊ ಮೆಕಿಂಟೈರ್ ಅನ್ನು
ತಲುಪಿದ್ದೀರಿ. ದಯವಿಟ್ಟು ಸಂದೇಶ ಬಿಡಿ.

173
00:12:58,920 --> 00:12:59,760
ರದ್ದಾಗಿದೆ

174
00:13:00,720 --> 00:13:02,080
ಛೇ! ಛೇ.

175
00:13:11,240 --> 00:13:12,120
ಮಾರ್ಗೊ?

176
00:13:36,280 --> 00:13:37,120
ಮಾರ್ಗೊ?

177
00:13:51,120 --> 00:13:52,040
ಮಾರ್ಗೊ!

178
00:15:22,680 --> 00:15:23,520
ದೇವರೇ!

179
00:15:43,600 --> 00:15:45,280
-ಅಯ್ಯೋ! ದೇವರೇ.
-ಏನು ಮಾಡುತ್ತಿದ್ದೀರಿ?

180
00:15:46,040 --> 00:15:46,880
ಏನರ್ಥ?

181
00:15:46,960 --> 00:15:49,040
-ನೀನೇನು ಮಾಡುತ್ತಿದ್ದೀಯಾ?
-ನೀವು ಒಳನುಗ್ಗೋದು ನೋಡಿದೆ.

182
00:15:49,120 --> 00:15:50,800
ಅದಕ್ಕೆ ನೀನೂ ಒಳನುಗ್ಗಿದೆಯಾ?

183
00:15:51,680 --> 00:15:52,640
ಹೌದು.

184
00:15:53,120 --> 00:15:55,840
ನೋಡು, ನೋಡು. ನೀನು ಇಲ್ಲಿ ಏನು ಮಾಡುತ್ತಿದ್ದೀಯಾ?

185
00:15:55,920 --> 00:15:58,400
ನಾನು ನನ್ನ ಸೈಕಲ್‌ನಲ್ಲಿದ್ದೆ.
ಹಾದುಹೋಗುವಾಗ ನಿಮ್ಮನ್ನ ನೋಡಿದೆ.

186
00:15:59,400 --> 00:16:02,080
ನಾವು ಒಟ್ಟಿಗೆ ಸಮಯ ಕಳೆಯಬಹುದೆಂದುಕೊಂಡೆ.

187
00:16:02,560 --> 00:16:06,840
ಸರಿ, ಅದು…
ಅದಕ್ಕೆ ಇದು ಉತ್ತಮ ಸಮಯವಲ್ಲ, ಐಡೆನ್‌.

188
00:16:08,400 --> 00:16:10,800
ಸೆತ್‌ ಮೆಕ್ ಗವರ್ನ್.
ದಯವಿಟ್ಟು ಶಬ್ದದ ನಂತರ ಸಂದೇಶವನ್ನು ಬಿಡಿ.

189
00:16:12,160 --> 00:16:14,400
ಸೆತ್, ನನಗೆ ಕರೆ ಮಾಡು.
ಸರಿನಾ? ಇದು ತುಂಬಾ ಮುಖ್ಯ.

190
00:16:15,000 --> 00:16:17,360
ಇದು ಅಪ್ಪನ ಸಹಾಯಕಿ, ಮಾರ್ಗೊ ಬಗ್ಗೆ. ‌ಅವಳು…

191
00:16:19,920 --> 00:16:21,440
ಅದು, ಅವಳು ಸತ್ತಿರಬಹುದು.

192
00:16:23,000 --> 00:16:24,160
ಕರೆ ಮಾಡು!

193
00:16:25,240 --> 00:16:28,480
30 ವರ್ಷದ ಕಕೇಶಿಯನ್ ಪುರುಷ,
ನೀಲ್ ಕ್ರಾಫ್ಟ್ ಇರಬಹುದು ಎಂದು ನಂಬಲಾಗಿದೆ.

194
00:16:30,280 --> 00:16:32,080
ಅವರು ಸತ್ತು ಎಷ್ಟು ಸಮಯವಾಗಿರಬಹುದು ಅನಿಸುತ್ತೆ?

195
00:16:32,560 --> 00:16:34,840
ನನ್ನ ಅಂದಾಜಿನ ಪ್ರಕಾರ
ಎರಡರಿಂದ ಮೂರು ದಶಕಗಳು ಆಗಿರಬಹುದು.

196
00:16:36,160 --> 00:16:37,280
ಇವನು ಹೇಗೆ ಸಿಕ್ಕಿದ?

197
00:16:37,360 --> 00:16:39,120
ಇವನ ಗೆಳೆಯನ ಊಹೆಯ ಮೇರೆಗೆ.

198
00:16:39,760 --> 00:16:41,120
ಗೋಡೆಯ ಹಿಂದೆ ಇದ್ದ.

199
00:16:43,320 --> 00:16:44,320
ಸಾವಿನ ಕಾರಣ?

200
00:16:45,000 --> 00:16:47,120
ತಲೆಗೆ ಮೊಂಡಾದ ಬಲವಾದ ಏಟಿನಂತೆ ಕಾಣುತ್ತಿದೆ.

201
00:16:50,880 --> 00:16:54,920
ಮತ್ತು ನಿಮ್ಮ ಪ್ರಕಾರ
ಇದು ಸಂಭಾವ್ಯ ಕೊಲೆ ಆಯುಧ ಆಗಿರಬಹುದಾ?

202
00:16:55,480 --> 00:16:58,040
ಒಳ್ಳೆಯ ಹೋಲಿಕೆ ಇದೆ. ಇದು ಹೇಗೆ ಸಿಕ್ಕಿತು?

203
00:16:58,640 --> 00:16:59,680
ಇನ್ನೊಂದು ಊಹೆಯ ಮೇಲೆ.

204
00:17:01,000 --> 00:17:02,160
ಇಷ್ಟೊಂದು ಊಹೆಗಳಾ?

205
00:17:13,160 --> 00:17:15,520
ಸೆತ್? ಸೆತ್, ನನಗೆ ಕರೆ ಮಾಡು.
ಸರಿನಾ? ಇದು ತುಂಬಾ ಮುಖ್ಯ.

206
00:17:16,400 --> 00:17:17,720
ಅಪ್ಪನ ಸಹಾಯಕಿ, ಮಾರ್ಗೊ.

207
00:17:18,520 --> 00:17:21,240
ಅದು, ಅವಳು… ಅದು, ಅವಳು ಸತ್ತಿರಬಹುದು.

208
00:17:22,040 --> 00:17:22,880
ನನಗೆ ಕರೆ ಮಾಡು.

209
00:17:27,400 --> 00:17:28,240
ಹೇ.

210
00:17:29,680 --> 00:17:31,160
-ನೀನು ಉತ್ತರಿಸುತ್ತಿಲ್ಲ.
-ಹೌದು,

211
00:17:31,240 --> 00:17:34,720
ಯಾಕೆಂದರೆ ನಾನು ನೀಲ್ ಕ್ರಾಫ್ಟ್ ಎಂದು
ಖಚಿತವಾಗಿರೋ ಹೆಣದ ಜೊತೆ ಸಮಯ ಕಳೆಯುತ್ತಿದ್ದೇನೆ.

212
00:17:34,800 --> 00:17:36,920
-ನಾನು ಹೇಳಿದ್ದೆ!
-ಗೊತ್ತು, ನೀನು ಹೇಳಿದ್ದೆ ಅಂತ.

213
00:17:37,440 --> 00:17:39,200
ಆದರೆ ಈಗ ಅದು ನಿಜ ಆಗಿದೆ
ಮತ್ತು ನನಗೆ ಅದೇ ಹೆದರಿಕೆ.

214
00:17:40,880 --> 00:17:41,960
ಎಲ್ಲವೂ ಆರಾಮಾ?

215
00:17:42,640 --> 00:17:45,280
ಹೂಂ, ಮೇಡಂ. ಅದು, ಲ್ಯಾಜ್‌…

216
00:17:46,120 --> 00:17:47,080
ಮಾತಾಡಬೇಕು ಅಂದ.

217
00:17:48,720 --> 00:17:51,680
ಏನು ಗೊತ್ತಾ, ಲ್ಯಾಜ್?
ನನಗೂ ನಿನ್ನ ಜೊತೆ ಮಾತಾಡಬೇಕು.

218
00:17:59,200 --> 00:18:00,480
ಏನಾಗುತ್ತಿದೆ, ಲ್ಯಾಜ್?

219
00:18:05,160 --> 00:18:06,000
ನಾನು…

220
00:18:08,360 --> 00:18:10,520
ನನಗನಿಸುತ್ತೆ ಬಿಲ್ಲಿ ಮೆಕಿಂಟೈರ್
ನನ್ನ ತಂದೆಯ ಕೊಲೆಗಾರ ಅಂತ.

221
00:18:12,880 --> 00:18:14,040
ಯಾಕೆ?

222
00:18:14,120 --> 00:18:14,960
ಅದು,

223
00:18:15,600 --> 00:18:18,960
ಇಲ್ಲಿ ಹಲವು ವರ್ಷಗಳಿಂದ
ಅನೇಕ ಅನುಮಾನಾಸ್ಪದ ಸಾವುಗಳು ಸಂಭವಿಸಿವೆ,

224
00:18:19,040 --> 00:18:22,320
ಮತ್ತು ಬಿಲ್ಲಿ ಎಲ್ಲಾ ಮೃತರಿಗೂ ಸಂಬಂಧಿಸಿದ್ದಾನೆ.

225
00:18:23,560 --> 00:18:26,000
ನನ್ನ ತಂದೆ
ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದ್ದರೆ?

226
00:18:26,480 --> 00:18:28,440
ಯಾವ ಅನುಮಾನಾಸ್ಪದ
ಸಾವುಗಳ ಬಗ್ಗೆ ಮಾತಾಡುತ್ತಿದ್ದೀಯಾ?

227
00:18:28,520 --> 00:18:30,880
ಸಟನ್. ಕೆಸಾಂಡ್ರಾ ರೋಡ್ಸ್‌.

228
00:18:31,320 --> 00:18:34,080
ಬಿಲ್ಲಿ ಮೆಕಿಂಟೈರ್ ಸಟನ್‌ಗೆ ಸಂಬಂಧಿಸಿದ್ದಾನೆ
ಅಂತ ನನಗೆ ಅರ್ಥ ಆಗುತ್ತೆ,

229
00:18:34,840 --> 00:18:37,120
ಆದರೆ ಕೆಸಾಂಡ್ರಾಗೂ ಅವನಿಗೂ ಏನು ಸಂಬಂಧ?

230
00:18:37,200 --> 00:18:38,840
ಅವರಿಗೆ ಪರಸ್ಪರ ಪರಿಚಯವಾದರೂ ಇತ್ತಾ?

231
00:18:39,640 --> 00:18:42,040
ಹೌದು, ಅವಳು ನನ್ನ ತಂದೆಯ ರೋಗಿಯಾಗಿದ್ದಳು,

232
00:18:42,120 --> 00:18:44,640
ಮತ್ತು ಬಿಲ್ಲಿ ಯಾವಾಗಲೂ
ಅಪ್ಪನ ಕಚೇರಿಯಲ್ಲಿ ಸುತ್ತಾಡುತ್ತಿದ್ದ.

233
00:18:44,720 --> 00:18:46,240
ಖಂಡಿತ ಅವರು ಮಾತಾಡಿಕೊಂಡಿರುತ್ತಾರೆ.

234
00:18:46,320 --> 00:18:50,840
ಲ್ಯಾಜ್, ಬಿಲ್ಲಿ ಮೆಕಿಂಟೈರ್ ಬಗ್ಗೆ
ಏನಾದರೂ ಹೊಸ ಮಾಹಿತಿ ಬೆಳಕಿಗೆ ಬಂದಿದೆಯಾ?

235
00:18:50,920 --> 00:18:53,920
ಅವನ ಬಗ್ಗೆ ಇದ್ದಕ್ಕಿದ್ದಂತೆ ನಿನಗೆ
ಈ ಅನುಮಾನ ಬರಲು ಕಾರಣವೇನು?

236
00:18:54,000 --> 00:18:58,560
ಸಟನ್ ಅವನಿಂದ ಬೇರೆಯಾಗುವ ಬಗ್ಗೆ
ಯೋಚಿಸುತ್ತಿದ್ದಳೆಂದು ನನಗೆ ತಿಳಿದುಬಂದಿದೆ.

237
00:18:58,640 --> 00:19:01,440
ಅವನಿಗೆ ಅದರ ಗುಮಾನಿ ಸಿಕ್ಕಿತು. ಕೋಪ ಬಂತು.

238
00:19:02,080 --> 00:19:04,400
ಅಪ್ಪನಿಗೆ ಬಿಲ್ಲಿಯ ಮೇಲೆ ಅನುಮಾನ ಬಂದಿದ್ದರೆ,

239
00:19:04,920 --> 00:19:08,200
ಬಿಲ್ಲಿಗೆ ಅವರನ್ನು ಕೊಲ್ಲದೆ ದಾರಿ ಇರಲಿಲ್ಲ.
ಅಲ್ವಾ? ಅಂದರೆ…

240
00:19:09,280 --> 00:19:10,960
ಆತ್ಮಹತ್ಯೆಗಿಂತ ಇದು ಹೆಚ್ಚು ನಂಬಲರ್ಹ.

241
00:19:12,640 --> 00:19:14,400
ಅವರು ಎಂದೂ
ಆತ್ಮಹತ್ಯೆ ಮಾಡಿಕೊಳ್ಳುವಂತವರಾಗಿರಲಿಲ್ಲ.

242
00:19:19,560 --> 00:19:22,480
ನನಗೆ ಮಾರ್ಗೊ ಬಗ್ಗೆನೂ ಚಿಂತೆಯಾಗಿದೆ.
ಬಿಲ್ಲಿಯ ತಾಯಿಯ ಬಗ್ಗೆ.

243
00:19:22,560 --> 00:19:25,560
ಅವಳು ಫೋನ್‌ಗೆ ಉತ್ತರಿಸುತ್ತಿಲ್ಲ.
ನಾನು ಮನೆಯ ಬಳಿಯೂ ಹೋದೆ, ಅಲ್ಲೂ ಇರಲಿಲ್ಲ.

244
00:19:28,320 --> 00:19:30,600
ಬಿಲ್ಲಿ ಅವಳಿಗೆ ಏನಾದರೂ ಮಾಡಿರಬಹುದು
ಅಂತ ನನಗೆ ಚಿಂತೆಯಾಗುತ್ತಿದೆ.

245
00:19:33,160 --> 00:19:34,720
ಸರಿ, ನಾವದನ್ನು ಪರಿಶೀಲಿಸುತ್ತೇವೆ.

246
00:19:35,720 --> 00:19:36,880
ಲ್ಯಾಜ್‌.

247
00:19:36,960 --> 00:19:41,200
ಆ ಪ್ರದೇಶದಲ್ಲಿ ನಡೆದ ಎಲ್ಲಾ ಅನುಮಾನಾಸ್ಪದ
ಸಾವುಗಳಿಗೂ, ಬಿಲ್ಲಿಗೂ ಸಂಬಂಧವಿದೆ ಅಂದೆ ನೀನು.

248
00:19:41,280 --> 00:19:42,440
ಹೌದು. ಹೂಂ.

249
00:19:43,760 --> 00:19:44,640
ನಿನಗೂ ಇದೆ.

250
00:19:54,840 --> 00:19:58,600
ಸರಿ, ನೀನು ಪ್ರಾರಂಭಿಸುವ ಮೊದಲು,
ಸಿಸಿಟಿವಿಯಲ್ಲಿ ಮಾರ್ಗೊಗಾಗಿ ಹುಡುಕುತ್ತಿದ್ದೇವೆ,

251
00:19:58,680 --> 00:20:00,920
ಮತ್ತು ನಾಳೆ ಹುಡುಕಾಟ ತಂಡವನ್ನು
ಕಳಿಸುತ್ತೇವೆ. ಸಂತೋಷನಾ?

252
00:20:01,680 --> 00:20:04,600
ಈಗಾಗಲೇ ಬಹಳ ತಡವಾಗಿದೆ.
ಅವಳು ಬಹುಶಃ ಸತ್ತಿರಬಹುದು.

253
00:20:04,680 --> 00:20:08,480
ಸರಿ, ನೀನು ಹಾಗೆಲ್ಲಾ ಮಾತಾಡೋದನ್ನ
ನಿಲ್ಲಿಸಬೇಕು, ಲ್ಯಾಜ್.

254
00:20:09,120 --> 00:20:10,600
ನಿನಗೆ ಏನು ಅಷ್ಟು ಅಸಮಾಧಾನ?

255
00:20:10,680 --> 00:20:13,120
ನಾನೆಂತಹ ಸ್ಥಿತಿಯಲ್ಲಿದ್ದೇನಂತ ಕಾಣದಷ್ಟು
ನಿನ್ನೊಳಗೇ ಮುಳುಗಿ ಹೋಗಿದ್ದೀಯಾ?

256
00:20:15,960 --> 00:20:19,680
ದೇವರೇ, ಹೌದು. ಸರಿ, ನಾನು ವಿವರಿಸುವೆ.

257
00:20:19,760 --> 00:20:25,160
ಈಗ ನನ್ನ ಫೋನಿನಲ್ಲಿ ಮಾರ್ಗೊ ಸತ್ತಿದ್ದಾಳೆ
ಅನ್ನುತ್ತಿರುವ ಸಂದೇಶಗಳು ಬಂದಿವೆ, ನಿನ್ನಿಂದ.

258
00:20:25,240 --> 00:20:27,080
ಈಗ, ಅವಳು ಸತ್ತಳು ಅಂದುಕೊಳ್ಳೋಣ.

259
00:20:27,160 --> 00:20:29,520
ಮತ್ತು ಆ ಸಂದೇಶಗಳು ಅವಳ ಸಾವಿನ ಸಮಯಕ್ಕೆ
ಹೊಂದುತ್ತೆ ಅನ್ನೋಣ.

260
00:20:29,600 --> 00:20:31,000
ನಾನು ಏನು ಮಾಡಬೇಕು?

261
00:20:32,360 --> 00:20:36,280
ನಿನ್ನನ್ನು ರಕ್ಷಿಸಲು ಅವನ್ನು ಅಳಿಸಿ, ಆಮೇಲೇನು?
ಜೈಲಿಗೆ ಹೋಗುವ ಅಪಾಯ ಎಳೆದುಕೊಳ್ಳಲಾ?

262
00:20:36,360 --> 00:20:39,320
-ಹೂಂ, ಸರಿ. ಸರಿ. ಅದು ಮೂರ್ಖತನವಾಗಿತ್ತು.
-ಯಾಕೆಂದರೆ ಆಕಸ್ಮಿಕವಾಗಿ

263
00:20:39,400 --> 00:20:41,600
ಇಪ್ಪತ್ತು ವರ್ಷ ಹಿಂದಿನ ಶವ ಸಿಕ್ಕೋದು
ಒಂದು ವಿಷಯ.

264
00:20:41,680 --> 00:20:45,360
ಆದರೆ ಸಂಭಾವ್ಯ ಕೊಲೆ ನಡೆಯುತ್ತಿರುವಾಗಲೇ
ಅದನ್ನು ಊಹಿಸುವುದು ಸಂಪೂರ್ಣವಾಗಿ ಬೇರೆ ವಿಷಯ.

265
00:20:45,440 --> 00:20:47,840
ಅದರ ಜೊತೆ ಅವಳ ಮನೆಗೆ ಬೇರೆ ಹೋಗಿಬಂದಿದ್ದೀಯ.

266
00:20:47,920 --> 00:20:50,320
-ಆ ಸಂದೇಶಗಳನ್ನು ಕಳಿಸಿದ್ದಕ್ಕೆ ಕ್ಷಮೆ ಇರಲಿ.
-ಆಮೇಲೆ ಇಲ್ಲಿಗೆ ಬಂದು,

267
00:20:50,400 --> 00:20:53,240
ಬಿಲ್ಲಿ ಮೆಕಿಂಟೈರ್ ಬಗ್ಗೆ ನನ್ನ ಬಾಸ್‌ಗೆ
ಮನಸ್ಸಿಗೆ ಬಂದಿದ್ದು ಹೇಳಿದ್ದೀಯ,

268
00:20:53,320 --> 00:20:55,760
ಅದಕ್ಕೆ ಅರ್ಥವೂ ಇಲ್ಲ!

269
00:20:55,840 --> 00:21:00,200
-ಬಿಲ್ಲಿ ಸ್ಪಷ್ಟವಾಗಿ ಅನುಮಾನಾಸ್ಪದವಾಗಿದ್ದಾನೆ.
-ಅನುಮಾನಾಸ್ಪದ ನೀನು, ಲ್ಯಾಜ್! ನೀನು.

270
00:21:01,240 --> 00:21:04,680
ಇದೆಲ್ಲಾ ಹೇಗೆ ಕಾಣುತ್ತಿದೆಯೆಂದರೆ,
ನಿನ್ನ ಅಪ್ಪ ಸತ್ತ ನಂತರ ನಿನಗೆ ಹುಚ್ಚು ಹಿಡಿದು,

271
00:21:04,760 --> 00:21:09,280
ನೀನು ಮಾರ್ಗೊಳನ್ನು ಕೊಂದು, ಇಲ್ಲಿಗೆ ಬಂದು
ಪೊಲೀಸರಿಗೆ ಬಿಲ್ಲಿ ಮೇಲೆ ಸಂಶಯ ಬರಿಸಲು ನೋಡಿದೆ,

272
00:21:09,360 --> 00:21:11,880
ಅದೂ ಮಾರ್ಗೊಳ ದೇಹ
ಸಿಗುವುದಕ್ಕೂ ಮೊದಲೇ ಎಂಬಂತೆ ಕಾಣುತ್ತೆ.

273
00:21:11,960 --> 00:21:14,320
ನೀನು. ಇಲ್ಲಿ. ಅನುಮಾನಾಸ್ಪದ.

274
00:21:14,400 --> 00:21:15,280
ಅಯ್ಯೋ, ದೇವರೇ.

275
00:21:16,400 --> 00:21:21,000
ಥತ್, ಥತ್, ಥತ್. ಥತ್, ನಾನು… ನಾನು…

276
00:21:22,000 --> 00:21:23,560
ನೋಡು, ನನ್ನನ್ನು ಕ್ಷಮಿಸು, ಸೆತ್.

277
00:21:23,640 --> 00:21:25,680
ನೋಡು, ಸ್ಥಿತಿ ಈಗಾಗಲೇ ಕೆಟ್ಟಿದೆ.

278
00:21:26,360 --> 00:21:29,520
ಮಾರ್ಗೊ ಬೇಗ ಹಿಂದಿರುಗಲಿ ಅಂತ ದೇವರ ಬಳಿ ಕೇಳಿಕೋ,

279
00:21:29,600 --> 00:21:32,720
ಯಾಕೆಂದರೆ ಅವಳು ನಿಜವಾಗಿಯೂ ಸತ್ತಿದ್ದರೆ,
ಲ್ಯಾಜ್, ನೀನು ಸತ್ತೆ.

280
00:21:38,640 --> 00:21:41,400
ಅಲ್ಲದೆ, ಜೆನ್ನಾ ಬಗ್ಗೆ ಅಷ್ಟೆಲ್ಲಾ ಹೇಳಬೇಡ,

281
00:21:41,480 --> 00:21:43,920
ಸಟನ್ ಸತ್ತ ರಾತ್ರಿಯ ಬಗ್ಗೆ
ಸತ್ಯಗಳನ್ನು ತಿರುಚಿದಳು ಅಂತ,

282
00:21:44,000 --> 00:21:48,840
ಯಾಕೆಂದರೆ ನೀನೂ ಅನೇಕ ವರ್ಷಗಳಿಂದ ಅದನ್ನೇ
ಮಾಡಿರೋದು, ನಾನು ನಿನ್ನನ್ನು ಎಂದೂ ಸರಿಪಡಿಸಿಲ್ಲ.

283
00:21:48,920 --> 00:21:51,200
ಆ ರಾತ್ರಿ ನೃತ್ಯದಿಂದ
ನೀನು ಯಾಕೆ ಹೋಗಲಿಲ್ಲ ಅಂತ ನಿನಗೂ ಗೊತ್ತು.

284
00:21:51,280 --> 00:21:52,960
ಅದು ಬೆಲ್ಲಾಳನ್ನು ಸಮಾಧಾನಪಡಿಸಲು ಅಲ್ಲ.

285
00:22:20,080 --> 00:22:24,840
ನೃತ್ಯದ ನಂತರ ನೀನು ಸಟನ್ ಜೊತೆ ಮನೆಗೆ ಹೋಗಬೇಕಂತ
ನಾನು ಯಾಕೆ ಹೇಳಿದೆ ಅಂತ ಈಗ ನಿನಗೆ ಗೊತ್ತಾಯಿತಾ?

286
00:22:26,000 --> 00:22:29,200
ನನಗೆ ಬಿಲ್ಲಿ ಮೆಕಿಂಟೈರ್ ಮೇಲೆ ಅನುಮಾನವಿತ್ತು.

287
00:22:30,920 --> 00:22:32,280
ನನಗೆ ನಿನ್ನ ಬಗ್ಗೆ ಗೊತ್ತು, ಮಗನೇ.

288
00:22:33,120 --> 00:22:36,200
ನೀನು ಬಿಲ್ಲಿಯ ವಿವರಗಳ ಬಗ್ಗೆ ಮಾತಾಡಬೇಕು.

289
00:22:37,560 --> 00:22:40,880
ಮಾರ್ಗೊ ಯಾವುದರ ಬಗ್ಗೆ ಅಷ್ಟು ಚಿಂತೆಯಲ್ಲಿದ್ದಳು?

290
00:22:43,160 --> 00:22:47,520
ಮಾತು ನಿನಗೆ ಆ ವಿವರ ಬೇಕಿರೋದು,
ಯಾಕೆಂದರೆ ನೀನು ಒಳಗೇ ಸಾಯುತ್ತಿದ್ದೀಯ,

291
00:22:47,600 --> 00:22:50,880
ನನಗೆ ಬಯ್ಯಲು ಕಾಯುತ್ತಿದ್ದೀಯ,

292
00:22:50,960 --> 00:22:53,200
ನನ್ನ ಮಗಳು ಅವನ ಜೊತೆ ನೃತ್ಯಕ್ಕೆ ಹೋಗಲು
ನಾನು ಅವಕಾಶ ನೀಡಿದ್ದಕ್ಕೆ.

293
00:22:54,080 --> 00:22:55,760
ನೀನು ನೇರವಾಗಿ ಹೇಳದಿರಬಹುದು,

294
00:22:57,640 --> 00:23:01,040
"ಸಟನ್‌ನ ಕೊಲೆ ನಿಮ್ಮ ತಪ್ಪು, ಅಪ್ಪ" ಅಂತ,

295
00:23:01,120 --> 00:23:03,040
ಆದರೆ ನಮ್ಮಿಬ್ಬರ ಮನಸ್ಸೂ

296
00:23:03,120 --> 00:23:05,680
ಅದರತ್ತ ಕೇಂದ್ರೀಕರಿಸುವಷ್ಟು
ನೀನದನ್ನು ಸೂಚಿಸುತ್ತೀಯ.

297
00:23:05,760 --> 00:23:09,200
ಯಾಕೆಂದರೆ ನಿನಗೆ ಗಮನ, ಯೋಚಿಸಿ ನೋಡೋಣ…

298
00:23:11,520 --> 00:23:12,360
ನಿನ್ನ ಮೇಲೆ ಬೇಡ.

299
00:23:14,000 --> 00:23:17,960
ಮತ್ತು ನೀನು ನಿನಗೆ ಹೇಳಿದಂತೆ
ಸಟನ್‌ನ ಮನೆಗೆ ಕರೆದೊಯ್ಯಲಿಲ್ಲ

300
00:23:18,880 --> 00:23:20,760
ಎಂಬ ಅಂಶದ ಮೇಲೆ ಬೇಡ.

301
00:23:30,920 --> 00:23:32,280
ಅದೊಂದು ಅದ್ಭುತ ಕಥೆ,

302
00:23:32,800 --> 00:23:36,880
ಬೆಲ್ಲಾ ಬೇಜಾರಲ್ಲಿದ್ದಳು ಅಂತ ನೀನು
ನೃತ್ಯದಲ್ಲಿ ಉಳಿದುಕೊಂಡೆ ಎಂಬುದು.

303
00:23:37,360 --> 00:23:41,920
ಅದು ಅದ್ಭುತ ಕಥೆ ಯಾಕೆಂದರೆ ಅದು ನಿನ್ನನ್ನು

304
00:23:42,000 --> 00:23:43,240
ಒಳ್ಳೆಯ ವ್ಯಕ್ತಿಯಾಗಿ ಮಾಡುತ್ತೆ.

305
00:23:43,880 --> 00:23:49,240
ಅಂದರೆ, ಬೇಜಾರಲ್ಲಿರೋ ಪ್ರೇಯಸಿಯನ್ನು
ಬಿಟ್ಟು ಹೋಗದ

306
00:23:49,320 --> 00:23:50,760
ಒಳ್ಳೆಯ ವ್ಯಕ್ತಿ.

307
00:23:52,360 --> 00:23:53,200
ಅಲ್ವಾ?

308
00:23:55,280 --> 00:23:56,120
ಆದರೆ ಸಮಸ್ಯೆ ಏನೆಂದರೆ…

309
00:23:58,200 --> 00:23:59,760
ಅವಳು ಬೇಜಾರಲ್ಲಿರಲಿಲ್ಲ.

310
00:24:02,120 --> 00:24:02,960
ಅಲ್ವಾ?

311
00:24:05,880 --> 00:24:09,560
ಆದರೆ ಇಷ್ಟು ಸಮಯದಲ್ಲಿ, ನಿನಗೆ
ಅದೇ ನಿಜ ಅನಿಸಲು ಶುರು ಆಗಿದೆ, ಅಲ್ವಾ?

312
00:24:10,200 --> 00:24:11,880
ಇದನ್ನು ಭ್ರಮಾತ್ಮಕ ಸತ್ಯ ಎಂದು ಕರೆಯಲಾಗುತ್ತದೆ,

313
00:24:11,960 --> 00:24:14,720
-ಒಂದು ಸಾಮಾನ್ಯ ಮಾನಸಿಕ ವಿದ್ಯಮಾನ.
-ಅದು ಏನಂತ ನನಗೆ ಗೊತ್ತು, ಅಪ್ಪ.

314
00:24:14,800 --> 00:24:16,120
ನೀವದನ್ನು ವಿವರಿಸುವ ಅಗತ್ಯವಿಲ್ಲ.

315
00:24:16,200 --> 00:24:19,400
ಸಾಕಷ್ಟು ಬಾರಿ ಸುಳ್ಳು ಹೇಳಿದರೆ
ಅದು ನಿಜ ಅನಿಸಲು ಶುರು ಆಗುತ್ತೆ.

316
00:24:21,760 --> 00:24:24,080
ಮತ್ತು ಸತ್ಯಕ್ಕಿಂತ
ಸುಳ್ಳು ಹೆಚ್ಚು ಸಮಾಧಾನಕರವಾಗಿದ್ದರೆ,

317
00:24:25,880 --> 00:24:27,840
ಅದನ್ನು ಹೇಳುತ್ತಲೇ ಇರಲು
ಅದು ಇನ್ನೂ ಹೆಚ್ಚಿನ ಕಾರಣ.

318
00:24:30,400 --> 00:24:32,320
ಆದರೆ ನಿಜ ಏನು, ಜೋಲ್?

319
00:24:32,400 --> 00:24:34,960
-ನನಗದರ ಬಗ್ಗೆ ಮಾತಾಡಲು ಇಷ್ಟವಿಲ್ಲ.
-ಆದರೂ, ನಾವು ಮಾತಾಡಲೇಬೇಕು.

320
00:24:36,960 --> 00:24:39,360
ನಾನು ಇದನ್ನೇ ಹೇಳುತ್ತಿದ್ದದ್ದು.

321
00:24:40,440 --> 00:24:42,760
ನೀವು ಜನರನ್ನು ತುಂಬಾ ಒತ್ತಾಯಿಸುತ್ತೀರಿ.

322
00:24:42,840 --> 00:24:45,440
ನಿನ್ನನ್ನು ವಿಮರ್ಶಿಸುವುದನ್ನು ತಪ್ಪಿಸಿಕೊಳ್ಳಲು
ನನ್ನ ತಪ್ಪು ಹುಡುಕುತ್ತಿರುವೆ.

323
00:24:45,520 --> 00:24:48,680
-ನೀನು ನೃತ್ಯದಿಂದ ಯಾಕೆ ಬರಲಿಲ್ಲ?
-ನಿಮ್ಮ ರೋಗಿಗಳ ಮೇಲೆ ದಬ್ಬಾಳಿಕೆ ಮಾಡಿದಿರಿ.

324
00:24:48,760 --> 00:24:51,160
-ನಿನ್ನ ಗೆಳೆಯರಿಗಾಗಿಯಾ?
-ನನ್ನ ಮೇಲೆ ದಬ್ಬಾಳಿಕೆ ಮಾಡುತ್ತಿದ್ದೀರಿ.

325
00:24:51,240 --> 00:24:53,600
ಕುಡಿದಿದ್ದೆಯಾ? ಅದಕ್ಕೇ ಸಟನ್ ಅನ್ನು
ಒಂಟಿಯಾಗಿ ಬಿಟ್ಟೆಯಾ?

326
00:24:53,680 --> 00:24:55,400
-ಅಪ್ಪ. ನನ್ನ ಮಾತು ಕೇಳಿ.
-ನಶೆ ಮಾಡಿದ್ದೆಯಾ?

327
00:24:55,480 --> 00:24:57,160
ನನಗದರ ಬಗ್ಗೆ ಮಾತಾಡಲು ಇಷ್ಟವಿಲ್ಲ.

328
00:24:57,240 --> 00:25:00,640
ಆ ರಾತ್ರಿ ನೀನು ಸಟನ್ ಜೊತೆ
ಯಾಕೆ ಮನೆಗೆ ಬರಲಿಲ್ಲ?

329
00:25:00,720 --> 00:25:02,520
ನನಗದರ ಬಗ್ಗೆ ಮಾತಾಡಲು ಇಷ್ಟವಿಲ್ಲ!

330
00:25:06,400 --> 00:25:09,080
ಯಾಕೆಂದರೆ ನನಗೆ ಸೆಕ್ಸ್ ಸಿಗುವುದಿತ್ತು! ಸರಿನಾ?

331
00:25:10,040 --> 00:25:11,480
ಅದೇ ಸತ್ಯ!

332
00:25:16,760 --> 00:25:21,200
ನಾನು ಹದಿಹರೆಯದ ಹುಡುಗನಾಗಿದ್ದೆ,
ಮತ್ತು ನನಗೆ ತಿಳಿದಂತೆ ಅಂದು ಬೆಲ್ಲಾಗೆ…

333
00:25:32,360 --> 00:25:35,960
ನಾನು ನನಗೆ ಪ್ರಾಮುಖ್ಯತೆ ನೀಡಿದೆ
ಮತ್ತು ಅವಳು ಸತ್ತಳು. ಅವಳು…

334
00:25:54,560 --> 00:25:55,400
ದೇವರೇ.

335
00:26:03,320 --> 00:26:06,080
ಇದು ಮಾರ್ಗೊ ಮೆಕಿಂಟೈರ್ ಕಂಡ ಕೊನೆಯ ಜಾಗ.

336
00:26:07,600 --> 00:26:08,480
ಅದು ಸ್ಯಾಮ್ ಓಲ್ಸೆನ್ನಾ?

337
00:26:09,240 --> 00:26:11,320
ಇರಬಹುದು. ಆವನು ಹತ್ತಿರದಲ್ಲೇ ವಾಸಿಸೋದು.

338
00:26:11,400 --> 00:26:13,400
ನಾನವನ ಜೊತೆ ಮಾತಾಡುವೆ.
ಅವಳು ಎಲ್ಲಿ ಹೋದಳು ಗೊತ್ತಾ ನೋಡುವೆ.

339
00:26:14,560 --> 00:26:18,400
ಸರಿ. ದೃಶ್ಯಾವಳಿಗಳನ್ನು ಸಾರ್ವಜನಿಕರಿಗೆ ಬಿಡುಗಡೆ
ಮಾಡು. ಏನಾದರೂ ಮಾಹಿತಿ ಸಿಗುತ್ತಾ ನೋಡೋಣ.

340
00:26:18,960 --> 00:26:19,800
ಸರಿ.

341
00:26:40,720 --> 00:26:42,960
ಅವನು ಇತ್ತೀಚೆಗೆ ತುಂಬಾ ಕರಾಳವಾಗಿ ಹೋಗಿದ್ದಾನೆ.

342
00:26:58,400 --> 00:27:01,520
-ನನಗೆ ಇನ್ನೂ ಮಾತಾಡುವ ಮನಸ್ಸಿಲ್ಲ.
-ನೀನು ಒಳ್ಳೆಯ ಸ್ನೇಹಿತ. ನಾನು ಬೇವರ್ಸಿ.

343
00:27:01,600 --> 00:27:03,560
ಹೂಂ, ಅದರ ಬಗ್ಗೆ ಅನುಮಾನವೇ ಇಲ್ಲ.
ಆದರೆ ನಾನು ಹೋಗಬೇಕು.

344
00:27:03,640 --> 00:27:06,400
ಎರಡು ರಾತ್ರಿ ಹಿಂದೆ ತನ್ನ ನಾಯಿಯೊಂದಿಗೆ
ಮಾರ್ಗೊ ಸಿಟಿ ಪಾರ್ಕ್ ಟ್ರೈಲ್ ಒಳಹೋಗೋದನ್ನ

345
00:27:06,480 --> 00:27:07,960
ಪ್ರತ್ಯಕ್ಷದರ್ಶಿಗಳು ನೋಡಿದ್ದಾರೆ.

346
00:27:08,040 --> 00:27:10,280
-ಅಲ್ಲಿಗೆ ಒಂದು ಹುಡುಕಾಟ ತಂಡ ಹೊರಟಿದೆ.
-ಅದು ಬಿಲ್ಲಿಗೆ ಗೊತ್ತಾ?

347
00:27:10,360 --> 00:27:13,200
ಹೌದು, ಖಂಡಿತ ಅವನಿಗೆ ಗೊತ್ತು.
ಅವನು ಸ್ವಲ್ಪ ಸಮಯದಲ್ಲಿ ಅಲ್ಲಿಗೆ ಬರುತ್ತಾನೆ.

348
00:27:13,280 --> 00:27:14,360
ನಾನು ಬರುತ್ತಿದ್ದೇನೆ.

349
00:27:14,440 --> 00:27:15,880
ಬರಬೇಡ. ಪರವಾಗಿಲ್ಲ.

350
00:27:15,960 --> 00:27:16,920
ಸೆತ್?

351
00:27:17,000 --> 00:27:17,960
ಬಾಯ್, ಲ್ಯಾಜ್.

352
00:27:31,040 --> 00:27:34,760
ಮಾರ್ಗೊ ಮೆಕಿಂಟೈರ್ ಅವರು ಕಣ್ಮರೆಯಾದ ಬಗ್ಗೆ
ಅವರ ಕುಟುಂಬದವರು ಕಳವಳ ವ್ಯಕ್ತಪಡಿಸಿದ್ದು,

353
00:27:34,840 --> 00:27:37,720
ಇದು ಅವರ ರೂಢಿಯಂತಿಲ್ಲ ಎಂದು ಹೇಳಿದ್ದಾರೆ.

354
00:27:37,800 --> 00:27:40,560
ಅರವತ್ತರ ವಯಸ್ಸಿನ ಈ ಇಬ್ಬರು ಮಕ್ಕಳ ಅಜ್ಜಿ

355
00:27:40,640 --> 00:27:43,160
ಕಳೆದ 24 ಗಂಟೆಗಳಿಗೂ
ಹೆಚ್ಚು ಕಾಲ ಕಾಣೆಯಾಗಿದ್ದು,

356
00:27:43,240 --> 00:27:45,600
ಹತ್ತಿರದ ಅರಣ್ಯ ಪ್ರದೇಶದ ಹುಡುಕಾಟದಲ್ಲಿ

357
00:27:45,680 --> 00:27:48,200
ಸಹಾಯ ಮಾಡುವಂತೆ
ಸಾರ್ವಜನಿಕರನ್ನು ಪೊಲೀಸರು ಕೋರಿದ್ದಾರೆ.

358
00:28:11,880 --> 00:28:14,200
ಆದರೆ ನಿಜವಾದ ಸಮಸ್ಯೆ ಇದೆ. ಅಂದರೆ, ಬಿಲ್ಲಿಗೆ.

359
00:28:14,280 --> 00:28:17,720
-ನಾನು ಬಿಲ್ಲಿಯಿಂದ ಬೇರೆಯಾಗುತ್ತೇನೆ.
-ನಾನು ಅವಳನ್ನು ನಿಜವಾಗಿಯೂ ನೋಯಿಸಲು ಬಯಸಿದ್ದೆ.

360
00:28:43,080 --> 00:28:43,920
ಮಾರ್ಗೊ!

361
00:28:44,640 --> 00:28:45,520
ಮಾರ್ಗೊ!

362
00:28:47,880 --> 00:28:48,720
ಮಾರ್ಗೊ!

363
00:28:49,360 --> 00:28:50,200
ಮಾರ್ಗೊ!

364
00:28:51,040 --> 00:28:51,880
ಮಾರ್ಗೊ!

365
00:29:02,920 --> 00:29:03,760
ಮಾರ್ಗೊ!

366
00:29:08,600 --> 00:29:09,800
ಮಾರ್ಗೊ!

367
00:29:09,880 --> 00:29:11,080
ಮಾರ್ಗೊ!

368
00:29:49,120 --> 00:29:49,960
ಟೆಡ್ಡಿ.

369
00:29:55,480 --> 00:29:56,840
ಹೇ, ಟೆಡ್ಡಿ. ಮಾರ್ಗೊ ಎಲ್ಲಿ?

370
00:30:04,640 --> 00:30:05,960
ಬಾ, ಅವನು ಅಲ್ಲಿದ್ದಾನೆ ಅನಿಸುತ್ತೆ.

371
00:30:07,600 --> 00:30:08,720
ಅದು ನೀನಾ, ಬಿಲ್ಲಿ?

372
00:30:09,280 --> 00:30:10,400
ಅವನು ಅಲ್ಲಿದ್ದಾನೆ ಅನಿಸುತ್ತೆ.

373
00:30:12,240 --> 00:30:13,080
ಬಾ.

374
00:30:23,640 --> 00:30:25,760
ಬಾ. ಇಲ್ಲಿ ಬಾ.

375
00:30:25,840 --> 00:30:26,680
ಬಿಲ್ಲಿ!

376
00:30:29,320 --> 00:30:30,200
ಇಲ್ಲಿ ಬಾ. ಇಲ್ಲಿ ಬಾ.

377
00:30:30,920 --> 00:30:32,640
ನೀನು ಇಲ್ಲಿರೋದು ನನಗೆ ಗೊತ್ತು.
ನನಗೆ ಕೇಳುತ್ತಿದೆ.

378
00:30:35,320 --> 00:30:36,880
ಬಾ, ಅವನು ಅಲ್ಲಿದ್ದಾನೆ ಅನಿಸುತ್ತೆ.

379
00:30:36,960 --> 00:30:38,080
ನಿನಗೆ ಏನು ಬೇಕು?

380
00:30:56,680 --> 00:30:58,080
ಅವನನ್ನು ತಪ್ಪಿಸಿಕೊಳ್ಳಲು ಬಿಡಬೇಡಿ.

381
00:31:00,480 --> 00:31:01,320
ಹೇ.

382
00:31:01,400 --> 00:31:02,560
ಸಿಕ್ಕಿಬಿದ್ದ.

383
00:31:02,640 --> 00:31:05,640
ಏನಿದು? ಏನಾಗುತ್ತಿದೆ? ಓಲ್ಸೆನ್?

384
00:31:05,720 --> 00:31:07,400
ಓಲ್ಸೆನ್, ನೀನು ಕೊಲೆಗಾರ!

385
00:31:07,880 --> 00:31:10,880
-ಅವಳು ಎಲ್ಲಿದ್ದಾಳೆ? ನನ್ನ ಅಮ್ಮ ಎಲ್ಲಿದ್ದಾಳೆ?
-ಹೇ, ಬಿಲ್ಲಿ, ಶಾಂತವಾಗಿರು. ಶಾಂತವಾಗಿರು!

386
00:31:11,840 --> 00:31:14,600
-ಹೇ, ಹೇ! ಅವನನ್ನು ಬಿಟ್ಟುಬಿಡಿ!
-ಈ ಬಾರಿ ನೀನು ತಪ್ಪಿಸಿಕೊಳ್ಳಲು ಆಗಲ್ಲ.

387
00:31:14,680 --> 00:31:15,880
-ಅವಳು ಎಲ್ಲಿದ್ದಾಳೆ?
-ಬಿಲ್ಲಿ! ಹೇ!

388
00:31:15,960 --> 00:31:17,280
ದರಿದ್ರ ಬೇವರ್ಸಿ!

389
00:31:18,320 --> 00:31:19,640
ನನ್ನ ಅಮ್ಮ ಎಲ್ಲಿ?

390
00:31:48,280 --> 00:31:49,440
ಅವರು ಜಾಗರೂಕರಾಗಿರಬೇಕು.

391
00:31:49,960 --> 00:31:50,800
ಇರುತ್ತಾರೆ, ಬಿಲ್ಲಿ.

392
00:31:52,640 --> 00:31:53,480
ಬಾ.

393
00:31:56,560 --> 00:32:00,320
ಬಿಲ್ಲಿ ಮೆಕಿಂಟೈರ್, ಹಲ್ಲೆ ಮತ್ತು ಹಿಂಸಾಚಾರ
ಮಾಡಿದ್ದಕ್ಕಾಗಿ ನಿಮ್ಮನ್ನು ಬಂಧಿಸಲಾಗಿದೆ.

394
00:32:01,040 --> 00:32:03,000
ನೀವು ಮೌನವಾಗಿರಬಹುದು
ಆದರೆ ಪ್ರಶ್ನಿಸಿದಾಗ ಹೇಳದ್ದು

395
00:32:03,080 --> 00:32:05,800
ನ್ಯಾಯಾಲಯದಲ್ಲಿ ನೀವು ಹೇಳಿದರೆ
ಅದು ನಿಮ್ಮ ಪ್ರಕರಣಕ್ಕೆ ಘಾಸಿ ಮಾಡಬಹುದು.

396
00:32:44,840 --> 00:32:45,680
ಎಷ್ಟು ಕೆಟ್ಟದಾಗಿದೆ?

397
00:32:46,280 --> 00:32:48,400
ರಾತ್ರಿಯಿಡೀ ಆಸ್ಪತ್ರೆಯಲ್ಲಿರಬೇಕಂತೆ.

398
00:32:51,120 --> 00:32:52,520
ಆದರೆ ಅಷ್ಟು ನೋವಾಗುತ್ತಿಲ್ಲ.

399
00:32:53,480 --> 00:32:55,120
ನೀನು ಮಾಡಿದ್ದನ್ನು ಮಾಡಬೇಕಿರಲಿಲ್ಲ.

400
00:32:55,600 --> 00:32:56,600
ನಾನು ಹೆಚ್ಚೇನೂ ಮಾಡಲಿಲ್ಲ.

401
00:32:57,240 --> 00:32:58,520
ಅವನು ನಿನ್ನನ್ನು ಕೊಲ್ಲಬಹುದಿತ್ತು.

402
00:32:59,680 --> 00:33:03,120
ನಿನ್ನ ಮೇಲೆ ದಾಳಿ ಮಾಡಲು ಅವನು
ಗೂಂಡಾಗಳ ಗುಂಪನ್ನೇ ತಂದಿದ್ದ, ಓಲ್ಸೆನ್.

403
00:33:03,200 --> 00:33:04,640
ನಿನಗೆ ಅಸಮಾಧಾನ ಆಗುತ್ತಿಲ್ವಾ?

404
00:33:05,920 --> 00:33:06,840
ನನಗೆ ರೂಢಿಯಾಗಿ ಹೋಗಿದೆ.

405
00:33:13,400 --> 00:33:15,120
ಮತ್ತು ಬಹುಶಃ ಅದು ಒಳ್ಳೆಯದೇ.

406
00:33:15,640 --> 00:33:18,120
ಯಾಕೆಂದರೆ ಪೊಲೀಸರು ಈಗಿನ್ನೂ
ನನ್ನ ಜೊತೆ ಮಾತಾಡಬೇಕಂತ ಹೇಳಿದರು.

407
00:33:20,440 --> 00:33:22,240
ಅದು ವದಂತಿಗಳಿಗೆ ಹೊಸ ಮೇವಾಗುತ್ತೆ, ಅಲ್ವಾ?

408
00:33:24,400 --> 00:33:26,760
ಅಂದಹಾಗೆ, ನೀನು ಅಲ್ಲಿ
ಏನು ಮಾಡುತ್ತಿದ್ದೆ? ನೀನು…

409
00:33:26,840 --> 00:33:28,280
ನೀನು ಹುಡುಕಾಟ ತಂಡದಲ್ಲಿ ಇದ್ದೆಯಾ?

410
00:33:30,000 --> 00:33:31,240
ಅದರ ಬಗ್ಗೆ ಯೋಜನೆ ಮಾಡಿರಲಿಲ್ಲ,

411
00:33:31,680 --> 00:33:34,360
ಆದರೆ ಅದರ ಬಗ್ಗೆ ರೇಡಿಯೊದಲ್ಲಿ ಕೇಳಿದೆ
ಮತ್ತು ಸೇರಲು ನಿರ್ಧರಿಸಿದೆ.

412
00:33:36,320 --> 00:33:37,920
ನಗರದಿಂದ ಹೊರಗೆ ಹೋಗುತ್ತಿದ್ದೆ.

413
00:33:39,160 --> 00:33:41,040
ಆರ್ಕ್ಟಿಕ್ ಚಾರ್ ಮೀನು ಹಿಡಿಯಲು ಹೋಗುತ್ತಿದ್ದೆ.

414
00:33:42,240 --> 00:33:43,080
ಮೀನು ಹಿಡಿಯಕ್ಕಾ?

415
00:33:44,160 --> 00:33:45,000
ರಾತ್ರಿಯಲ್ಲಿ?

416
00:33:47,440 --> 00:33:48,280
ಮೀನುಗಳಿಗೆ ಕಣ್ಣುಗಳಿವೆ.

417
00:33:49,680 --> 00:33:51,920
ಹಗಲಿನಲ್ಲಿ ನಾವು ದಡದಲ್ಲಿರೋದು
ಅವಕ್ಕೆ ಕಾಣುತ್ತೆ.

418
00:33:55,320 --> 00:33:56,680
ನನಗೆ ಎಂದೂ ಇದು ಹೊಳೆಯಲಿಲ್ಲ.

419
00:33:57,880 --> 00:33:58,880
ಅಲ್ಲದೆ, ಶಾಂತವಾಗಿರುತ್ತೆ.

420
00:34:01,200 --> 00:34:02,200
ಒಬ್ಬಂಟಿಯಾಗಿರುವುದು.

421
00:34:14,520 --> 00:34:15,400
ಲ್ಯಾಜ್‌.

422
00:34:17,640 --> 00:34:18,480
ಧನ್ಯವಾದ.

423
00:34:43,560 --> 00:34:44,960
ದೇವರೇ.

424
00:34:50,080 --> 00:34:52,480
-ನೀನು ಹಾಗೆ ಮಾಡೋದನ್ನ ನಿಲ್ಲಿಸಬೇಕು.
-ನಾನು ಮಾತಾಡಬೇಕು.

425
00:34:53,280 --> 00:34:54,200
ಸರಿ, ಒಳಗೆ ಬಾ.

426
00:34:57,080 --> 00:34:58,000
ದೇವರೇ.

427
00:35:10,640 --> 00:35:11,480
ನೀವು ನನ್ನ ತಂದೆ.

428
00:35:18,160 --> 00:35:19,840
ನಾನು ಡಿಎನ್ಎ ಪರೀಕ್ಷೆ ಮಾಡಿಸಿದೆ.

429
00:35:19,920 --> 00:35:22,240
ಇರು, ಇರು, ಇರು, ಇರು, ಇರು. ಏನು ಮಾಡಿಸಿದೆ?

430
00:35:22,960 --> 00:35:24,160
ನಿಮ್ಮ ಹಲ್ಲುಜ್ಜುವ ಬ್ರಷ್ ತಗೊಂಡೆ.

431
00:35:24,240 --> 00:35:26,400
ಹಲ್ಲುಜ್ಜುವ ಬ್ರಷ್-- ದೇವರೇ, ಐಡೆನ್‌. ನೀನು…

432
00:35:26,960 --> 00:35:28,920
-ನನಗೆ ತಿಳಿಯಬೇಕಿತ್ತು.
-ಏನು, ಮತ್ತು ಅದು…

433
00:35:32,280 --> 00:35:36,360
ಅದು ಪಾಸಿಟಿವ್ ಬಂತಾ? ನಮ್ಮ ಡಿಎನ್ಎ ಹೋಲುತ್ತಂತಾ?

434
00:35:36,840 --> 00:35:39,160
ನನ್ನ ತಲೆ ಕೆಡಿಸಲು
ನೀನಿದನ್ನು ಹೇಳುತ್ತಿಲ್ಲ ತಾನೇ?

435
00:35:42,360 --> 00:35:43,880
ನಿಮಗೆ ಫಲಿತಾಂಶಗಳನ್ನು ಇಮೇಲ್ ಮಾಡುತ್ತೇನೆ.

436
00:35:43,960 --> 00:35:46,720
-ಸರಿ.
-ನೀವೇ ನೋಡಬಹುದು.

437
00:35:50,640 --> 00:35:51,480
ಸರಿ.

438
00:35:54,840 --> 00:35:56,240
ಮೊದಲನೆಯದಾಗಿ, ನನಗಿದು ತಿಳಿದಿರಲಿಲ್ಲ.

439
00:35:57,920 --> 00:35:59,000
ನನಗೆ ಗೊತ್ತಿರಲಿಲ್ಲ.

440
00:36:01,080 --> 00:36:02,960
ಸರಿನಾ? ನನ್ನಾಣೆ, ನನಗೆ ಗೊತ್ತಿರಲಿಲ್ಲ.

441
00:36:03,040 --> 00:36:04,120
ಸರಿ.

442
00:36:04,200 --> 00:36:05,200
ನಿನ್ನ ಅಮ್ಮ ಯಾಕೆ ನನಗೆ--

443
00:36:06,800 --> 00:36:08,760
ಇರು, ಹೇಗೆ-- ಅದು ಹೇಗೆ…

444
00:36:11,600 --> 00:36:14,800
ಅಂದರೆ, ನಾವು ಬೇರ್ಪಟ್ಟ ಮೇಲೆ
ನಾವು ಒಂದೇ ಬಾರಿ ಒಟ್ಟಿಗೆ ಇದ್ದದ್ದು.

445
00:36:15,720 --> 00:36:17,240
ನಾವು ಜಾಗ್ರತೆ ವಹಿಸಿದೆವು ಅಂದುಕೊಂಡೆ.

446
00:36:21,080 --> 00:36:22,080
ಸರಿ…

447
00:36:25,240 --> 00:36:27,480
ನೀನು ಯಾಕೆ ಪರೀಕ್ಷೆ ಮಾಡಿಸಿದೆ?

448
00:36:31,240 --> 00:36:32,600
ನನಗೆ ವಿಚಿತ್ರ ಅನಿಸುತ್ತೆ.

449
00:36:33,960 --> 00:36:35,040
ಇಲ್ಲಿಗೆ ಸೇರಿಲ್ಲವೇನೋ ಎಂಬಂತೆ.

450
00:36:36,160 --> 00:36:39,600
ನಾನು ಎಲ್ಲಿಂದ ಬಂದಿದ್ದೇನೆಂದು ತಿಳಿದರೆ
ಸಹಾಯವಾಗುತ್ತೇನೋ ಅಂದುಕೊಂಡೆ.

451
00:36:40,200 --> 00:36:41,720
-ಸಹಾಯ ಆಯಿತಾ?
-ನನಗೆ ಗೊತ್ತಿಲ್ಲ.

452
00:36:42,600 --> 00:36:43,680
ನಿಮಗೆ ನಿಜಕ್ಕೂ ಗೊತ್ತಿರಲಿಲ್ವಾ?

453
00:36:44,160 --> 00:36:45,440
ಇಲ್ಲ, ಇಲ್ಲ.

454
00:36:49,600 --> 00:36:52,160
-ಅಮ್ಮನ ಮೇಲೆ ಕೋಪ ಬರುತ್ತಿದೆಯಾ?
-ನನಗೆ ಗೊತ್ತಿಲ್ಲ, ಐಡೆನ್.

455
00:36:52,240 --> 00:36:53,640
ಅಂದರೆ, ಅವಳಿಗೇ ಇದು ಗೊತ್ತಿಲ್ಲವೇನೋ.

456
00:36:53,720 --> 00:36:56,040
ಅವಳು ನಿಜವಾಗಿಯೂ ಪಾಲ್ ನಿನ್ನ ತಂದೆ
ಅಂದುಕೊಂಡಿರಬಹುದು, ಗೊತ್ತಾ?

457
00:36:57,600 --> 00:36:58,440
ಛೇ.

458
00:37:03,360 --> 00:37:04,200
ಹೂಂ, ನೋಡು.

459
00:37:06,760 --> 00:37:09,280
ನಿನಗೆ ಈಗ ಏನೇನೋ ಭಾವನೆಗಳು
ಮನಸ್ಸಿಗೆ ಬರುತ್ತಿರಬಹುದು.

460
00:37:09,880 --> 00:37:12,760
ತಲೆ ಕೆಡುವುದು ಸಹಜ.

461
00:37:13,320 --> 00:37:14,600
ನಿನಗೆ ನನ್ನ ಜೊತೆ ಮಾತಾಡಬೇಕೆಂದರೆ,

462
00:37:16,240 --> 00:37:17,080
ಯಾವಾಗಲಾದರೂ,

463
00:37:18,560 --> 00:37:19,560
ನಾನು ಇಲ್ಲಿದ್ದೇನೆ, ಸರಿನಾ?

464
00:37:25,560 --> 00:37:27,160
ನೀವು ನನ್ನ ತಂದೆ ಅಂತ ನಿಮಗೆ ತಿಳಿದಿದ್ದರೆ,

465
00:37:28,320 --> 00:37:29,480
ನೀವು ಇಲ್ಲೇ ಇರುತ್ತಿದ್ದಿರಾ?

466
00:37:35,400 --> 00:37:38,920
ನನಗೆ ಬಹಳಷ್ಟು ವಿಷಯಗಳು ಖಚಿತವಿಲ್ಲ, ಐಡೆನ್,

467
00:37:39,000 --> 00:37:39,840
ಆದರೆ…

468
00:37:41,280 --> 00:37:42,120
ಇದರ ಬಗ್ಗೆ ಖಚಿತವಿದೆ.

469
00:37:46,920 --> 00:37:49,800
ನೀನು ಹುಟ್ಟಿದಾಗ ನಾನು ನಿನ್ನನ್ನು ನೋಡಿದ್ದರೆ,

470
00:37:52,600 --> 00:37:57,560
ನೀನು ನನ್ನವನೆಂದು ನನಗೆ ತಿಳಿದಿದ್ದರೆ, ನಾನು…
ನಿನ್ನನ್ನು ಮಗುವಿದ್ದಾಗ ಎತ್ತಿಕೊಂಡಿದ್ದಿದ್ದರೆ…

471
00:37:59,680 --> 00:38:01,640
ಜಗತ್ತಿನಲ್ಲೇನೂ ನನ್ನನ್ನ
ನಿನ್ನಿಂದ ದೂರಸೆಳೆಯುತ್ತಿರಲಿಲ್ಲ.

472
00:39:16,520 --> 00:39:17,360
ನಾನು…

473
00:39:19,120 --> 00:39:21,240
ನಿಮ್ಮ ನಂಬರ್ ಕೇಳುವ ಧೈರ್ಯ ನನಗಿರಲಿಲ್ಲ.

474
00:39:21,320 --> 00:39:23,360
ಅದಕ್ಕೆ ನೇರವಾಗಿ ಮನೆಗೆ ಬಂದಿರಾ?

475
00:39:24,360 --> 00:39:26,080
ಆನ್‌ಲೈನ್ ಹಿಂಬಾಲಿಸುವುದಕ್ಕಿಂತ ಉತ್ತಮ ಅಲ್ವಾ?

476
00:39:29,560 --> 00:39:31,480
ನಾನು ನಿನ್ನನ್ನು ಹೊರಗೆ ಬರುವಂತೆ ಕೇಳುವವನಿದ್ದೆ.

477
00:39:31,560 --> 00:39:33,600
ಯೋಜನೆ ಅದೇ ಇದ್ದದ್ದು,

478
00:39:33,680 --> 00:39:37,360
ಆದರೆ ಆಮೇಲೆ ಅರಿವಾಯಿತು,
ನನಗೆ ಬೇಕಿರೋದು ಡೇಟ್ ಅಲ್ಲ…

479
00:39:38,400 --> 00:39:39,440
ಮನೋವೈದ್ಯೆ ಅಂತ.

480
00:39:42,960 --> 00:39:43,800
ನನಗೆ…

481
00:39:45,200 --> 00:39:48,320
ಕಳೆದ ಕೆಲವು ದಿನಗಳಲ್ಲಿ
ಎರಡು ಮೃತದೇಹಗಳು ಸಿಕ್ಕವು,

482
00:39:48,920 --> 00:39:53,320
ಆದರೆ ಅದು ನನ್ನ ತಲೆಯನ್ನು ಹೆಚ್ಚು ಕೆಡಿಸಲಿಲ್ಲ,
ಯಾಕೆಂದರೆ ನನ್ನ ತಲೆ ಈಗಾಗಲೇ ಸಾಕಷ್ಟು ಕೆಟ್ಟಿದೆ.

483
00:39:56,560 --> 00:39:58,520
ನನ್ನ ಸೋದರಿಯ ಕೊಲೆಯಾಗಿತ್ತು.

484
00:39:59,760 --> 00:40:01,360
ಬಹಳ ಹಿಂದೆ, ಪ್ರೌಢಶಾಲೆಯಲ್ಲಿರುವಾಗ.

485
00:40:02,680 --> 00:40:04,240
ಆದರೆ ನಾನದನ್ನ ಮರೆತು ಮುಂದುವರಿಯಲಿಲ್ಲ. ಎಂದೂ…

486
00:40:05,040 --> 00:40:06,400
ಎಂದೂ ಅದನ್ನು ಹೋಗಲು ಬಿಡಲಿಲ್ಲ.

487
00:40:06,960 --> 00:40:09,680
ಮತ್ತು ನಂತರ ಸಂಬಂಧಗಳೊಂದಿಗೆ, ಮಹಿಳೆಯರೊಂದಿಗೆ,

488
00:40:10,520 --> 00:40:13,160
ನನಗೆ ಸರಿ ಎನಿಸಿದ್ದು ಒಬ್ಬ ಮಹಿಳೆ ಮಾತ್ರ

489
00:40:13,240 --> 00:40:15,200
ಆದರೆ ನಾವು ಒಟ್ಟಿಗೆ ಇದ್ದಾಗ
ಸಂತೋಷವಾಗೂ ಇರಲಿಲ್ಲ.

490
00:40:15,280 --> 00:40:16,760
ಅದು ಏನೋ ಗೊತ್ತಿಲ್ಲ.

491
00:40:18,480 --> 00:40:19,680
ನನಗೆ…

492
00:40:20,320 --> 00:40:22,160
ನನಗೆ ಇದನ್ನೆಲ್ಲಾ ಮೀರಿ ಹೋಗಬೇಕು.

493
00:40:23,200 --> 00:40:24,600
ಆದರೆ ನನಗದನ್ನು ಮಾಡಲು ಸಾಧ್ಯವಿಲ್ಲ…

494
00:40:26,440 --> 00:40:27,440
ಸಹಾಯವಿಲ್ಲದೆ.

495
00:40:30,920 --> 00:40:31,760
ಒಂದು ನಿಮಿಷ.

496
00:40:38,600 --> 00:40:40,120
ಆನ್‌ಲೈನ್ ಹಿಂಬಾಲಿಸಬೇಕಾಗಿಲ್ಲ.

497
00:40:43,720 --> 00:40:45,040
ಸರಿ. ಧನ್ಯವಾದ.

498
00:40:47,560 --> 00:40:48,400
ಬಾಯ್.

499
00:40:50,680 --> 00:40:51,640
ಲ್ಯಾಜ್‌.

500
00:40:53,120 --> 00:40:55,040
ಆ ಮಹಿಳೆ, ಯಾರ ಜೊತೆ ನೀನು ಸಂತೋಷವಾಗಿರಲಿಲ್ಲವೋ,

501
00:40:55,360 --> 00:40:57,360
ಅವಳೂ, ನೀನೂ ಪ್ರೌಢಶಾಲೆಯಲ್ಲಿ ಒಟ್ಟಿಗೆ ಇದ್ದಿರಾ?

502
00:40:57,840 --> 00:40:58,960
ಹೌದು.

503
00:40:59,040 --> 00:41:02,280
ನಿನ್ನ ಸೋದರಿ ಜೀವಂತವಾಗಿದ್ದ ಸಮಯಕ್ಕೆ
ಅವಳು ಅಂಟಿಕೊಂಡಿದ್ದಾಳೆ.

504
00:41:03,680 --> 00:41:07,400
ಅದಕ್ಕೇ ಅದು ಸರಿ ಅನಿಸುತ್ತೆ,
ಸರಿ ಅಲ್ಲದಿದ್ದರೂ ಸಹ.

505
00:41:12,440 --> 00:41:13,800
ಕ್ಷಮಿಸು, ಇದನ್ನು ಉತ್ತರಿಸಬೇಕು.

506
00:41:14,520 --> 00:41:15,600
ಬಾಯ್.

507
00:41:18,760 --> 00:41:20,040
-ಹಾಯ್.
-ಹಾಯ್.

508
00:41:20,960 --> 00:41:24,200
ನೋಡು, ನೀನು ಠಾಣೆಗೆ ಬರಲಾಗುತ್ತಾ
ಅಂತ ಅಂದುಕೊಳ್ಳುತ್ತಿದ್ದೆವು.

509
00:41:24,280 --> 00:41:25,800
ಬಿಲ್ಲಿ ನನ್ನ ಮೇಲೆ ದಾಳಿ ಮಾಡಿದ ಬಗ್ಗೆನಾ?

510
00:41:27,120 --> 00:41:27,960
ಹೌದು.

511
00:41:31,080 --> 00:41:32,560
ನೀನು ಒಬ್ಬ ಡಬ್ಬಾ ಸುಳ್ಳುಗಾರ, ಸೆತ್.

512
00:41:50,920 --> 00:41:53,560
ಮಾರ್ಗೊ ಮೆಕಿಂಟೈರ್ ಎದೆಗೆ ಇರಿಯಲಾಗಿದೆ.

513
00:41:54,400 --> 00:41:56,720
ಗಾಯ ನೋಡಿದರೆ, ವಿಚಿತ್ರಾಕಾರದ
ದಂತದ ಚಾಕುವಿನಿಂದ ಅನಿಸುತ್ತೆ.

514
00:41:56,800 --> 00:42:00,440
ಆಕೆಯ ಕೊಲೆಯ ನಂತರ ಆಕೆಯ ಶವವನ್ನು
ಹೆಚ್ಚು ದೂರ ಸ್ಥಳಾಂತರಿಸಿದಂತೆ ಕಾಣುತ್ತಿಲ್ಲ.

515
00:42:00,520 --> 00:42:03,200
-ಅಂದರೆ ನಮ್ಮ ಪ್ರಕಾರ--
-ಯಾರೋ ಕಾಡಿಗೆ ಚಾಕು ತಂದಿರಬೇಕು.

516
00:42:06,120 --> 00:42:07,400
ಇದು ಪೂರ್ವಯೋಜಿತವಾಗಿತ್ತು.

517
00:42:08,960 --> 00:42:12,920
ನನ್ನ ತಂದೆ ಕೊಲ್ಲಲ್ಪಟ್ಟಾಗ ಬಿಲ್ಲಿ
ಅವನು ಕೆರಿಬಿಯನ್‌ನಲ್ಲಿದ್ದ ಅಂತ ಹೇಳಿದ.

518
00:42:13,000 --> 00:42:14,520
ಆದರೆ ನನಗೆ ಸಂದೇಹವಿದೆ.

519
00:42:14,600 --> 00:42:16,360
ನೀನು ಹೇಳಿದ್ದು ಸರಿ,
ಅವನು ಸುಳ್ಳು ಹೇಳುತ್ತಿದ್ದ.

520
00:42:17,400 --> 00:42:21,080
ನಿನ್ನ ತಂದೆ ತೀರಿಕೊಂಡಾಗ
ಬಿಲ್ಲಿ ಪುನರ್ವಸತಿ ಕೇಂದ್ರದಲ್ಲಿದ್ದ.

521
00:42:21,160 --> 00:42:22,000
ಪುನರ್ವಸತಿಯಲ್ಲಾ?

522
00:42:22,080 --> 00:42:24,240
ಬಿಲ್ಲಿ ತನ್ನ ತಾಯಿಯನ್ನು ಕೊಂದನೆಂದು ಹೇಳೋಣ.

523
00:42:24,320 --> 00:42:28,400
ನಿಮ್ಮ ಮನೋವಿಶ್ಲೇಷಣಾ ಕೌಶಲ್ಯಗಳು
ಪಕ್ಕಾ ಇವೆ ಎಂದು ಹೇಳೋಣ.

524
00:42:28,800 --> 00:42:31,840
ಆದರೂ ಅದು ಯಾವಾಗ ಆಗುತ್ತೆ ಅಂತ
ನಿನಗೆ ಹೇಗೆ ಗೊತ್ತಾಯಿತು?

525
00:42:32,400 --> 00:42:35,080
ಸರಿ, ನಾನು ಇತ್ತೀಚೆಗೆ
ಬಿಲ್ಲಿಯನ್ನು ಭೇಟಿಯಾಗಿದ್ದೆ.

526
00:42:35,880 --> 00:42:37,680
ನಾವು ಮಾತಾಡಿದೆವು ಮತ್ತು ನನಗೆ…

527
00:42:39,200 --> 00:42:40,920
ಏನೋ ಒಂದು ಅನಿಸಿತು.

528
00:42:41,000 --> 00:42:42,320
ಅನಿಸಿತಾ?

529
00:42:42,400 --> 00:42:47,960
ಏನು ಗೊತ್ತಾ? ನಮ್ಮಲ್ಲಿರೋದು ಅನಿಸಿಕೆ ಮಾತ್ರ.
ನಿಮಗೆ ನನ್ನ ಮೇಲೆ ಸಂದೇಹದ ಅನಿಸಿಕೆ ಇದೆ.

530
00:42:48,560 --> 00:42:51,320
ಆದರೆ ನಿಮ್ಮ ಬಳಿ ನನ್ನ ವಿರುದ್ಧ ಯಾವುದೇ
ಪುರಾವೆಗಳಿಲ್ಲ ಮತ್ತು ಸಿಗೋದೂ ಇಲ್ಲ,

531
00:42:51,400 --> 00:42:54,000
ಯಾಕೆಂದರೆ ನಾನು ಮಾರ್ಗೊನ ಕೊಂದಿಲ್ಲ.

532
00:42:54,080 --> 00:42:57,080
-ನಾವು ನಮ್ಮ ತನಿಖೆಯನ್ನು ಇನ್ನೂ ಪ್ರಾರಂಭಿಸಿಲ್ಲ.
-ಸರಿ, ಪ್ರಾರಂಭಿಸೋಣ.

533
00:42:57,160 --> 00:42:58,840
ನನ್ನ ಬೆರಳಚ್ಚು ತಗೊಳ್ಳಿ. ಡಿಎನ್‌ಎ ತಗೊಳ್ಳಿ.

534
00:42:58,920 --> 00:43:01,800
ನನ್ನ ಪ್ರತಿಯೊಂದು ರಂಧ್ರದಿಂದ ಮಾದರಿ ತೆಗೆಯಿರಿ,
ನನ್ನ ಸಂಪೂರ್ಣ ಸಮ್ಮತಿ ಇದೆ.

535
00:43:04,920 --> 00:43:07,040
ನೀನು ಮಾರ್ಗೊ ಮೆಕಿಂಟೈರ್‌ನ ಕೊಂದಿಲ್ಲ
ಅಂತ ನನಗೆ ಗೊತ್ತು.

536
00:43:09,200 --> 00:43:10,800
ಯಾಕೆಂದರೆ ನಾನು ನಿನ್ನನ್ನ ಹಿಂಬಾಲಿಸುತ್ತಿದ್ದೆ.

537
00:43:20,400 --> 00:43:21,320
ಏನು?

538
00:43:24,360 --> 00:43:25,680
ನನಗೆ ನಿನ್ನ ಮೇಲೆ ನಂಬಿಕೆ ಇರಲಿಲ್ಲ.

539
00:43:26,320 --> 00:43:27,320
ಈಗಲೂ ಇಲ್ಲ.

540
00:43:42,760 --> 00:43:44,760
ನಾನು ಆಗಲೇ ತಮಾಷೆ ಮಾಡುತ್ತಿರಲಿಲ್ಲ.

541
00:43:46,800 --> 00:43:50,280
ನೀನು ಒಳ್ಳೆಯ ಸ್ನೇಹಿತ ಮತ್ತು ನಾನು ಬೇವರ್ಸಿ.

542
00:43:55,600 --> 00:43:56,440
ಪರವಾಗಿಲ್ಲ.

543
00:43:57,000 --> 00:43:57,840
ಇಲ್ಲ, ಇದು ಸರಿಯಲ್ಲ.

544
00:43:58,760 --> 00:43:59,600
ಅದು ನಿಜವೇ.

545
00:44:01,000 --> 00:44:02,600
ಮಾರ್ಗೊ ಸತ್ತಿರೋದು ನಿನಗೆ ಹೇಗೆ ಗೊತ್ತಾಯಿತು?

546
00:44:04,840 --> 00:44:05,680
ನಾನವಳನ್ನು ನೋಡಿದೆ.

547
00:44:09,080 --> 00:44:10,000
ದೆವ್ವವಾಗಿ.

548
00:44:12,040 --> 00:44:14,600
ಹೇಳು. ನಿಜವಾಗಿಯೂ ಹೇಗೆ ಗೊತ್ತಾಯಿತು?

549
00:44:18,200 --> 00:44:20,920
ನೀನು ನಿಜವಾಗಿಯೂ ನನ್ನನ್ನು ನಂಬಲಿಲ್ವಾ?
ಇಷ್ಟೂ ಸಮಯ?

550
00:44:21,640 --> 00:44:24,440
ನೋಡು, ಸಟನ್ ಸತ್ತ ನಂತರ,
ನಿನಗೆ ಮಾನಸಿಕ ಅಸ್ವಸ್ಥತೆ ಉಂಟಾಗಿತ್ತು,

551
00:44:24,520 --> 00:44:26,640
ಮತ್ತು ಈಗಲೂ ಹಾಗೇ ಆಗುತ್ತಿದ್ದರೆ,

552
00:44:26,720 --> 00:44:28,560
ನಾನು ನಿನಗಾಗಿ ಇರಬೇಕೆಂದು ಬಯಸಿದ್ದೆ. ಅಷ್ಟೇ.

553
00:44:30,800 --> 00:44:31,760
ಆದರೆ…

554
00:44:33,920 --> 00:44:35,520
ದೆವ್ವಗಳನ್ನು ನೋಡೋದು?

555
00:44:36,480 --> 00:44:37,520
ಬಿಡು.

556
00:44:38,200 --> 00:44:39,480
ನನಗೆ ಅರ್ಥವಾಗುತ್ತೆ, ಸೆತ್.

557
00:44:41,560 --> 00:44:42,520
ನೀನು ನಟಿಸುತ್ತಿದ್ದೆ.

558
00:44:43,320 --> 00:44:47,160
ಇಲ್ಲ. ಇಲ್ಲ,
ನಾನು ನಟಿಸುತ್ತಿರಲಿಲ್ಲ, ಲ್ಯಾಜ್‌. ನಾನು…

559
00:44:48,080 --> 00:44:52,840
ಏನೋ ಗೊತ್ತಿಲ್ಲ, ನಿನ್ನ ತಂದೆಯ ಬಗ್ಗೆ
ಆಘಾತದಲ್ಲಿದ್ದೀಯ ಅಂದುಕೊಂಡೆ.

560
00:44:53,520 --> 00:44:56,840
ಅಥವಾ ಬಹುಶಃ ನಿದ್ರೆಯಿಂದ ವಂಚಿತನಾಗಿ,
ನಿಜವೆನಿಸುವ ಕನಸುಗಳನ್ನು ಕಾಣುತ್ತಿರಬಹುದು,

561
00:44:56,920 --> 00:44:59,320
ಅಥವಾ ಯಾವುದೋ ಹೊಸ ಔಷಧಿ
ನಿನ್ನ ತಲೆ ಜೊತೆ ಆಟವಾಡುತ್ತಿರಬಹುದು,

562
00:44:59,400 --> 00:45:01,560
ಮತ್ತು ಕೆಲವು ವಿಚಿತ್ರ ನೆನಪುಗಳು
ಹಿಂತಿರುಗುತ್ತಿರಬಹುದು

563
00:45:01,640 --> 00:45:04,240
ಮತ್ತು ಅವು ಭ್ರಮೆಗಳಂತೆ ಇವೆಯೇನೋ
ಅಂತ ಅಂದುಕೊಂಡೆ.

564
00:45:05,360 --> 00:45:10,320
ದೆವ್ವಗಳನ್ನು ಬಿಟ್ಟು ಬೇರೆ ಎಷ್ಟೋ ವಿವರಣೆಗಳಿವೆ.

565
00:45:11,080 --> 00:45:12,160
ದೆವ್ವಗಳಾ?

566
00:45:12,880 --> 00:45:16,640
ನಾನು ಈಗ ಸಿಕ್ಕಿಹಾಕಿಕೊಂಡಿದ್ದೇನೆ, ಲ್ಯಾಜ್,
ಯಾಕೆಂದರೆ ಮಾರ್ಗೊ ಈಗ ಸತ್ತಿದ್ದಾಳೆ,

567
00:45:17,240 --> 00:45:18,760
ಮತ್ತು ನಿನಗದರ ಬಗ್ಗೆ ಮೊದಲೇ ಗೊತ್ತಿತ್ತು.

568
00:45:18,840 --> 00:45:22,240
ನನ್ನ ಬಳಿ ಇರುವ ವಿವರಣೆಗಳು ಅದನ್ನು ವಿವರಿಸಲ್ಲ.

569
00:45:25,040 --> 00:45:26,040
ಹಾಗಾಗಿ ದಯವಿಟ್ಟು…

570
00:45:27,320 --> 00:45:29,200
ಏನಾಗುತ್ತಿದೆ ಅಂತ ಹೇಳು.

571
00:45:29,840 --> 00:45:31,600
ನನ್ನ ಉತ್ತರ ಬದಲಾಗಲ್ಲ, ಗೆಳೆಯ.

572
00:45:35,360 --> 00:45:36,200
ಅದು ನಿಜ.

573
00:45:42,240 --> 00:45:45,120
ನೋಡು, ನಾನು ಇದನ್ನು ನಿನಗೆ
ಅಧಿಕೃತವಾಗಿ ತೋರಿಸುವಂತಿಲ್ಲ.

574
00:45:45,920 --> 00:45:49,720
ಆದರೆ ಇದು ನಿನ್ನ ತಂದೆ ಬಿಲ್ಲಿಯ
ಪುನರ್ವಸತಿ ಕೇಂದ್ರಕ್ಕೆ ಬರೆದ ಮೂಲ ಪತ್ರ,

575
00:45:50,440 --> 00:45:51,480
ಇಪ್ಪತ್ತು ವರ್ಷಗಳ ಹಿಂದೆ.

576
00:45:53,960 --> 00:45:57,240
ಬಿಲ್ಲಿ ತನ್ನ ಕಚೇರಿಗೆ ಯಾಕೆ ನುಸುಳುತ್ತಿದ್ದ
ಅಂತ ಅವರು ವಿವರವಾಗಿ ಹೇಳಿದ್ದಾರೆ.

577
00:46:01,840 --> 00:46:05,040
ಬಿಲ್ಲಿ ಅಪ್ಪನಿಂದ
ಟೇಮಾಝಫಾಮ್ ಮಾತ್ರೆ ಕದಿಯುತ್ತಿದ್ದ.

578
00:46:07,600 --> 00:46:11,120
ಮಾರ್ಗೊ ಅಪ್ಪನಿಂದ ಪತ್ರ ಬರೆಸಿಕೊಂಡಳು…

579
00:46:12,160 --> 00:46:13,720
ಔಷಧ ಮತ್ತು ಮದ್ಯ ವ್ಯಸನ ಚಿಕಿತ್ಸೆ

580
00:46:13,800 --> 00:46:15,880
…ಟೇಮಾಝಫಾಮ್ ಮಾತ್ರೆಗಳ ವ್ಯಸನದ ಚಿಕಿತ್ಸೆಗಾಗಿ.

581
00:46:16,960 --> 00:46:19,320
ಅವನು ತನ್ನ ಜೀವನದುದ್ದಕ್ಕೂ ಎದುರಿಸಿದ ವ್ಯಸನ.

582
00:46:22,800 --> 00:46:24,240
ನನಗೆ ಇದನ್ನೆಲ್ಲಾ ಯಾಕೆ ಹೇಳುತ್ತಿದ್ದೀಯಾ?

583
00:46:26,880 --> 00:46:28,880
ಅದು ನಿನ್ನ ತಪ್ಪಾಗಿರಲಿಲ್ಲ, ಜೆನ್ನಾ…

584
00:46:30,160 --> 00:46:31,160
ಬಿಲ್ಲಿಗೆ ಮುತ್ತಿಟ್ಟಿದ್ದು.

585
00:46:32,840 --> 00:46:33,680
ಯಾಕೆಂದರೆ…

586
00:46:35,000 --> 00:46:37,560
ನೃತ್ಯದಂದು ನಿನ್ನ ಗ್ಲಾಸಿಗೆ ಅವನು ಪಕ್ಕಾ
ಮಾತ್ರೆ ಬೆರೆಸಿರುತ್ತಾನೆ.

587
00:46:39,120 --> 00:46:41,640
ಸಟನ್ ಅವನಿಂದ ದೂರ ಆಗುತ್ತಾಳೆ
ಅಂತ ಬಿಲ್ಲಿ ಅಂದುಕೊಂಡಿದ್ದ.

588
00:46:41,720 --> 00:46:45,600
ನಿನಗವನು ಇಷ್ಟ ಅಂತ ಅವನಿಗೆ ಗೊತ್ತಿತ್ತು,
ಹಾಗಾಗಿ ನಶೆ ಬೆರೆಸಿದ, ನಿನ್ನನ್ನು ಬಳಸಿ…

589
00:46:46,800 --> 00:46:48,040
ಸಟನ್‌ಗೆ ಅಸೂಯೆ ಹುಟ್ಟಿಸಲು ನೋಡಿದ.

590
00:46:49,920 --> 00:46:50,840
ದೇವರೇ.

591
00:46:52,800 --> 00:46:55,160
ಹೌದು, ಅವನು ಅಂದು ನನಗೆ ಕುಡಿಯಲು ಕೊಟ್ಟಿದ್ದ.

592
00:46:57,200 --> 00:46:58,600
ನನಗೆ ನೆನಪಿದೆ, ಅವನು…

593
00:47:06,960 --> 00:47:08,040
ಅದಕ್ಕೆ ನಶೆ ಬೆರೆಸಿದ್ದನಾ?

594
00:47:09,920 --> 00:47:11,720
ಅದಕ್ಕೇ ನಿನಗದರ ಬಗ್ಗೆ ಹೆಚ್ಚು ನೆನಪಿಲ್ಲ.

595
00:47:12,480 --> 00:47:14,880
ಅದಕ್ಕೇ ಅಷ್ಟು ಬೇಗ,
ಅಷ್ಟು ಹೆಚ್ಚು ಪರಿಣಾಮ ಆಗಿದ್ದು ನಿನ್ನ ಮೇಲೆ.

596
00:47:20,360 --> 00:47:25,160
ನಿನ್ನ ಮೆದುಳಿನ ಅರಿವಿನ ನಿರ್ಧಾರ ತೆಗೆದುಕೊಳ್ಳುವ
ಪ್ರದೇಶಗಳು ತೀವ್ರವಾಗಿ ದುರ್ಬಲಗೊಂಡಿದ್ದವು.

597
00:47:25,240 --> 00:47:29,480
ಅಂದರೆ, ನಿನಗೆ ನಿನ್ನ ದೇಹದ ಮೇಲೆ ಸ್ವಲ್ಪವೇ,
ಅಥವಾ ಯಾವುದೇ ನಿಯಂತ್ರಣ ಇರಲಿಲ್ಲ.

598
00:47:39,120 --> 00:47:42,720
ಸಟನ್ ನೃತ್ಯವನ್ನು ಬಿಟ್ಟುಹೋಗಿದ್ದು
ನಿನ್ನ ತಪ್ಪಲ್ಲ.

599
00:47:45,440 --> 00:47:46,360
ಮತ್ತು ನನಗೆ ಗೊತ್ತು…

600
00:47:49,920 --> 00:47:51,600
ಅವಳು ಅರ್ಥಮಾಡಿಕೊಳ್ಳುತ್ತಾಳೆಂದು ಗೊತ್ತು.

601
00:47:55,400 --> 00:47:56,240
ದೇವರೇ.

602
00:47:59,920 --> 00:48:00,760
ಧನ್ಯವಾದ.

603
00:48:04,960 --> 00:48:06,760
ನಾನು ಆದರೂ ನಿನಗೆ ನಿಜ ಹೇಳಬೇಕಿತ್ತು.

604
00:48:11,360 --> 00:48:12,200
ಕ್ಷಮಿಸು.

605
00:48:15,480 --> 00:48:16,320
ನನ್ನನ್ನೂ ಕ್ಷಮಿಸು.

606
00:48:19,880 --> 00:48:22,040
ಮಹಿಳೆಯರೇ, ಇದು ದುಃಖಕರ, ದುಃಖದ ದಿನ,

607
00:48:22,120 --> 00:48:23,600
ಯಾಕೆಂದರೆ ಇಲ್ಲಿರುವ ಸೆತ್,

608
00:48:23,680 --> 00:48:25,680
-ಅಧಿಕೃತವಾಗಿ ಮಾರುಕಟ್ಟೆ ತೊರೆಯುತ್ತಿದ್ದಾನೆ.
-ನೀನು, ಸೆತ್.

609
00:48:25,760 --> 00:48:28,280
ಆ ಕೇಶವಿನ್ಯಾಸ ನಿನ್ನಿಂದಾಗಿಯೇ.

610
00:48:29,280 --> 00:48:31,600
ನಿನ್ನ ತಲೆ ಮೇಲಿರೋದು ನನ್ನ ಜವಾಬ್ದಾರಿ ಹೇಗೆ?

611
00:48:32,600 --> 00:48:34,160
ನಿನ್ನ ಮೌನ ಅದನ್ನು ಸಕ್ರಿಯಗೊಳಿಸಿತು.

612
00:48:36,160 --> 00:48:37,000
ಅಪ್ಪ, ಇಲ್ಲಿ ಬನ್ನಿ.

613
00:48:38,080 --> 00:48:39,560
ಅವಳು ತುಂಬಾ ಸುಂದರವಾಗಿದ್ದಳು.

614
00:48:41,960 --> 00:48:42,880
ಹೌದು, ನಿಜ.

615
00:48:45,920 --> 00:48:46,760
ಹಲೋ?

616
00:48:48,160 --> 00:48:49,000
ನನ್ನ ಚಿಂತೆ ಬಿಡಿ.

617
00:48:51,640 --> 00:48:56,160
ಓಹ್, ಹೌದಾ? ಓಹ್, ತುಂಬಾ ಚೆನ್ನಾಗಿದೆ.
ಆದರೆ ಸ್ವಲ್ಪ ಅತಿಯಾಗೇ ಮಿಂಚುತ್ತಿದೆ, ಅಲ್ವಾ?

618
00:49:03,320 --> 00:49:05,760
ಮಿಂಚುತ್ತಿಲ್ಲ. ನಿಮಗೆ ಫ್ಯಾಷನ್ ಬಗ್ಗೆ
ಏನೂ ಗೊತ್ತಿಲ್ಲ.

619
00:49:06,720 --> 00:49:07,560
ಇಷ್ಟ ಆಯಿತಾ?

620
00:49:08,400 --> 00:49:09,320
ಏನು?

621
00:49:11,320 --> 00:49:12,520
ತುಂಬಾ ಇಷ್ಟ ಆಯಿತು!

622
00:49:21,360 --> 00:49:23,480
ನಾನು ಕೆಲವು ದಿನಗಳ ಹಿಂದೆ
ಸ್ಯಾಮ್ ಓಲ್ಸೆನ್ ಮನೆಯಲ್ಲಿದ್ದೆ,

623
00:49:24,520 --> 00:49:27,640
ಮತ್ತು ಅವನ ಬಳಿ ಈ ಆಟಿಕೆ ನಾಯಿ ಇತ್ತು.

624
00:49:29,360 --> 00:49:31,800
ಸಟನ್ ಚಿಕ್ಕ ಮಗುವಾಗಿದ್ದಾಗ
ಅವಳಿಗೆ ಅಜ್ಜಿಯ ನಾಯಿಯನ್ನ ಹುಡುಕಲು

625
00:49:31,880 --> 00:49:33,160
ಅವನು ಸಹಾಯ ಮಾಡಿದನಂತೆ.

626
00:49:33,640 --> 00:49:36,000
ಅವಳು ಆ ನಾಯಿ ಗೊಂಬೆಯನ್ನು
ಅವನಿಗೆ ಧನ್ಯವಾದವಾಗಿ ನೀಡಿದಳು ಅಂದ.

627
00:49:37,440 --> 00:49:38,400
ಸರಿ…

628
00:49:39,600 --> 00:49:40,520
ಅದಕ್ಕೆ?

629
00:49:40,600 --> 00:49:41,440
ಅದಕ್ಕೆ…

630
00:49:44,880 --> 00:49:46,640
ಅಲ್ಲಿ ನೋಡು.

631
00:49:48,680 --> 00:49:49,520
ಅದೇ ಆ ನಾಯಿ.

632
00:49:52,400 --> 00:49:53,560
ಅವಳ ಮಲಗುವ ಕೋಣೆಯಲ್ಲಿ.

633
00:49:56,120 --> 00:49:57,600
ಅವಳು ಕೊಲ್ಲಲ್ಪಟ್ಟ ರಾತ್ರಿಯಂದು.

634
00:49:59,000 --> 00:50:01,240
ಅಂದರೆ ಅವಳು ಚಿಕ್ಕ ಮಗುವಾಗಿದ್ದಾಗ
ಅವನಿಗದನ್ನು ಕೊಡಲಿಲ್ಲ.

635
00:50:03,600 --> 00:50:05,240
ಅವನದನ್ನು ಅವಳ ಮಲಗುವ ಕೋಣೆಯಿಂದ ತಗೊಂಡಿರಬೇಕು…

636
00:50:07,000 --> 00:50:08,120
ಅವಳ ಕೊಲೆಯಾದಾಗ.

637
00:51:07,920 --> 00:51:09,920
ಉಪ ಶೀರ್ಷಿಕೆ ಅನುವಾದ: ಅನುರಾಧ

638
00:51:10,000 --> 00:51:11,920
ಸೃಜನಶೀಲ ಮೇಲ್ವಿಚಾರಕರು
ಮಧುರಾ ಸುಬ್ರಹ್ಮಣ್ಯ
…

