1
00:00:59,640 --> 00:01:01,240
ರೇಚಲ್‌ ಲ್ಯಾಜರಸ್‌
1953-1992

2
00:01:01,320 --> 00:01:03,880
ಸಟನ್ ಲ್ಯಾಜರಸ್‌
1980-1998

3
00:01:18,720 --> 00:01:24,720
ಹರ್ಲಾನ್‌ ಕೊಬೆನ್ಸ್
ಲ್ಯಾಜರಸ್‌

4
00:01:35,240 --> 00:01:36,080
ಲ್ಯಾಜ್‌.

5
00:01:38,080 --> 00:01:39,720
-ಏನು ಮಾಡುತ್ತಿದ್ದೀಯಾ?
-ಕ್ಷಮಿಸು.

6
00:01:44,120 --> 00:01:45,080
ಲ್ಯಾಜ್‌!

7
00:01:46,120 --> 00:01:48,200
ಲ್ಯಾಜ್‌, ಇಲ್ಲ, ನೀನು ತುಂಬಾ ಕುಡಿದಿದ್ದೀಯ.

8
00:01:50,840 --> 00:01:52,560
-ಲ್ಯಾಜ್‌.
-ದಾರಿ ಬಿಡು!

9
00:01:54,400 --> 00:01:56,520
ನಿನ್ನ ಗಾಡಿಯ ಗಾಜು ಒಡೆಯುವೆ.

10
00:01:57,000 --> 00:01:59,320
-ಎಂಜಿನ್ ಆಫ್ ಮಾಡು.
-ದಾರಿ ಬಿಡು!

11
00:01:59,400 --> 00:02:02,560
ನಾನು ಗಂಭೀರವಾಗಿ ಹೇಳುತ್ತಿದ್ದೇನೆ.
ನನ್ನನ್ನು ಪರೀಕ್ಷಿಸಬೇಡ.

12
00:02:12,320 --> 00:02:13,560
ಏನು ಮಾಡುತ್ತಿದ್ದೀಯಾ?

13
00:02:14,040 --> 00:02:16,440
ಇದು ಸಟನ್ ಸತ್ತ ರಾತ್ರಿ
ಅವಳ ಮಲಗುವ ಕೋಣೆಯಲ್ಲಿತ್ತು

14
00:02:16,520 --> 00:02:18,320
ಮತ್ತು ಓಲ್ಸೆನ್‌ ಅದನ್ನು ಇಟ್ಟುಕೊಂಡಿದ್ದ.

15
00:02:18,400 --> 00:02:19,400
ಅವನ ಮನೆಯಲ್ಲಿ.

16
00:02:19,480 --> 00:02:20,960
ಆ ದಿನ ನನಗೆ ಕೊಟ್ಟ.

17
00:02:21,040 --> 00:02:23,280
-ಹೂಂ, ನನಗದು ಗೊತ್ತು.
-ಅಂದರೆ, ದೇವರೇ!

18
00:02:23,360 --> 00:02:26,200
ನಾನು ಬಿಲ್ಲಿ ಮೇಲಿನ ಅನುಮಾನದಲ್ಲಿ,
ಓಲ್ಸೆನ್‌‌ನ ಉಳಿಸೋದರಲ್ಲಿ ಎಷ್ಟು ಮಗ್ನನಾಗಿದ್ದೆ.

19
00:02:26,280 --> 00:02:28,200
ಅವನು ಮಾರ್ಗೊ ದೇಹದ ಪಕ್ಕದಲ್ಲೇ ಇದ್ದ.

20
00:02:28,280 --> 00:02:30,600
ಇರು. ಓಲ್ಸೆನ್ ಸಟನ್ ಮತ್ತು ಮಾರ್ಗೊನ
ಕೊಂದಿರಬಹುದು ಅನಿಸುತ್ತಾ?

21
00:02:30,680 --> 00:02:33,280
ಇಲ್ಲ, ನನಗೆ ಅನಿಸುತ್ತಿಲ್ಲ. ನನಗದು ಗೊತ್ತು.

22
00:02:33,680 --> 00:02:34,960
ಎಲ್ಲಿಗೆ ಹೋಗತ್ತಿದ್ದೆ?

23
00:02:35,440 --> 00:02:36,840
ಹೂಂ, ನನಗವನು ಎಲ್ಲಿದ್ದಾನೆ ಅಂತ ಗೊತ್ತು.

24
00:02:37,880 --> 00:02:40,200
ಅವನು ಆಸ್ಪತ್ರೆಯಲ್ಲಿದ್ದಾನೆ,
ನಾನು ಅವನಿಗೆ ಇದನ್ನು ತೋರಿಸಿ

25
00:02:40,280 --> 00:02:41,760
ಅವನೇನು ಮಾಡಿದನೆಂದು ನನಗೆ ಗೊತ್ತು ಅನ್ನುವೆ.

26
00:02:41,840 --> 00:02:44,680
ಸರಿ. ಸರಿ, ಸರಿ, ಸರಿ, ಅದು ಕೆಲಸ ಮಾಡಲ್ಲ.

27
00:02:44,760 --> 00:02:47,400
ಅವನು ನಮ್ಮ ಸೋದರಿಯನ್ನ ಕೊಂದ, ಜೆನ್.

28
00:02:47,480 --> 00:02:49,920
ಮತ್ತು ಇಂದು ರಾತ್ರಿ ನಾನವನ ಜೀವ ಉಳಿಸಿದೆ.
ನಾನವನನ್ನು ಉಳಿಸಿದೆ.

29
00:02:50,000 --> 00:02:53,920
ಹೇ, ನೀನು ಓಲ್ಸೆನ್‌‌ನ ಪೊಲೀಸರು ಹಿಡಿಯುವ ಮೊದಲು
ಅವನಿಗಿದನ್ನು ತೋರಿಸಿದರೆ,

30
00:02:54,000 --> 00:02:56,000
ನೀನವನಿಗೆ ಎಚ್ಚರಿಕೆ ನೀಡಿದಂತಾಗುತ್ತೆ.

31
00:03:01,240 --> 00:03:02,240
ಹೌದು.

32
00:03:02,840 --> 00:03:05,120
ಹೇ, ಆದರೆ ನೀನು ಹೇಳಿದ್ದು ಸರಿ.

33
00:03:05,680 --> 00:03:08,320
ಹಾಗಾಗಿ, ಅದರ ಬಗ್ಗೆ ಏನು ಮಾಡಬೇಕು ಅಂತ
ಗೊತ್ತಿರುವವರ ಬಳಿ ಅದನ್ನು ಹೇಳೋಣ.

34
00:03:11,640 --> 00:03:13,920
-ಹೇ, ನಾನು ಬಂದೆ.
-ಹೂಂ, ಇಲ್ಲಿ ಒಳಗೆ ಬಾ.

35
00:03:16,040 --> 00:03:16,880
ಏನು…

36
00:03:22,840 --> 00:03:24,880
-ಹಾಯ್.
-ಹಾಯ್.

37
00:03:24,960 --> 00:03:26,160
ನೋಡಿ ಸಂತೋಷವಾಯಿತು.

38
00:03:26,240 --> 00:03:29,320
ಆದರೆ ಬೆಳಗಿನ ಜಾವ 3.30ಕ್ಕೆ ಕರೆದೆ ಎಂದರೆ
ಏನೋ ವಿಷಯ ಇರಬೇಕು.

39
00:03:29,400 --> 00:03:30,360
ನೀನಿದನ್ನು ನೋಡಬೇಕು.

40
00:03:30,440 --> 00:03:33,640
-ಇಲ್ಲ. ಇಲ್ಲ. ಮತ್ತೆ ಹೀಗೆ ಮಾಡಬೇಡ, ಲ್ಯಾಜ್.
-ಸೆತ್‌. ಸೆತ್‌. ದೆವ್ವ, ಪಿಶಾಚಿಗಳಿಲ್ಲ,

41
00:03:33,720 --> 00:03:35,760
ನನ್ನ ಮೇಲಾಣೆ ಮಾಡಿ ಹೇಳುವೆ.

42
00:03:35,840 --> 00:03:37,120
ಇದನ್ನು ಒಮ್ಮೆ ನೋಡು.

43
00:03:39,400 --> 00:03:41,320
ಇಲ್ಲಿ. ಇದನ್ನು ನೋಡಿದೆಯಾ?

44
00:03:42,080 --> 00:03:42,920
ಹೂಂ.

45
00:03:43,400 --> 00:03:45,560
ಸರಿ. ಓಲ್ಸೆನ್‌ ಅಂದು ನನಗೆ ಏನು ಕೊಟ್ಟ ನೋಡು.

46
00:03:46,400 --> 00:03:48,360
ಇದು ಅವಳು ಕೊಲೆಯಾದ ರಾತ್ರಿ ಅವಳ ಕೋಣೆಯಲ್ಲಿತ್ತು.

47
00:03:48,960 --> 00:03:50,200
ಈಗ, ನಮಗೆ ಅವನೆಲ್ಲಿದ್ದಾನಂತ ಗೊತ್ತು.

48
00:03:51,560 --> 00:03:54,920
ಆಘಾತ ಘಟಕ

49
00:04:21,240 --> 00:04:22,880
ವಾರ್ಡ್ ಪ್ಲಾನ್
ಸ್ಯಾಮ್ ಓಲ್ಸೆನ್

50
00:04:46,720 --> 00:04:50,120
ಸರಿ, ನಮಗೆ ಅವನು ಹಜಾರದಲ್ಲಿ ಬೇಕು,
ಸಾಧ್ಯವಾದಷ್ಟು ಬೇಗ ಮತ್ತು ಸದ್ದಿಲ್ಲದೆ.

51
00:05:08,480 --> 00:05:11,720
-ಇದೇನು ತಮಾಷೆನಾ? ನಾವು ಸುಮ್ಮನೆ ಕೂತಿದ್ದೇವೆ.
-ಪ್ರಕ್ರಿಯೆ ಅನುಸರಿಸಬೇಕು, ಲ್ಯಾಜ್.

52
00:05:15,960 --> 00:05:16,840
ಕೊನೆಗೊ.

53
00:05:18,080 --> 00:05:21,000
ಧನ್ಯವಾದ. ನಮಗೆ ಆ ವಿಡಿಯೋ ಬೇಕು.

54
00:05:21,080 --> 00:05:23,680
ಖಂಡಿತ. ಓಲ್ಸೆನ್‌ ಎಲ್ಲಿ? ಅವನನ್ನು ಹಿಡಿದಿರಾ?

55
00:05:25,120 --> 00:05:26,600
ನಿಯಮಗಳನ್ನು ಪಾಲಿಸೋಣ, ಜೋಲ್‌.

56
00:05:26,680 --> 00:05:30,760
ಸರಿನಾ? ಸುಮ್ಮನೆ ಸಂದೇಹದ ಮೇಲೆ ಹೋಗಿ,
ಮುಂದಿನ ಕಥೆ ಕಟ್ಟಲು ಆಗಲ್ಲ.

57
00:05:31,360 --> 00:05:32,360
ವಾರಂಟ್ ಪಡೆಯುತ್ತಿದ್ದೇವೆ.

58
00:05:32,440 --> 00:05:33,680
ಎರಡು ಗಂಟೆ ಮುಂಚೆಯೇ ಹಾಗೆ ಹೇಳಿದಿರಿ.

59
00:05:33,760 --> 00:05:35,640
-ಹೂಂ, ಪ್ರಕ್ರಿಯೆ ಅನುಸರಿಸಬೇಕು.
-ಅದನ್ನೂ ಹೇಳಿದಿರಿ.

60
00:05:35,720 --> 00:05:37,040
ಯಾಕೆಂದರೆ ಅದು ನಿಜ.

61
00:05:37,120 --> 00:05:38,280
ಸರಿ.

62
00:05:38,360 --> 00:05:40,680
ಕಾಯುತ್ತಿರುವಾಗ ಉಳಿದದ್ದೂ ಹೇಳುವೆ,
ಸಟನ್‌ನ ಕೊಲೆಗಾರ

63
00:05:40,760 --> 00:05:42,480
ಕೆಸಾಂಡ್ರಾ, ಹ್ಯಾರಿ, ಮಾರ್ಗೊನ ಸಹ ಕೊಂದನು.

64
00:05:42,560 --> 00:05:44,680
-ಅಂದರೆ ಅದರರ್ಥ--
-ಕ್ಷಮಿಸು, ಹ್ಯಾರಿನಾ? ಅದು ಯಾರು?

65
00:05:44,760 --> 00:05:45,600
ಹ್ಯಾರಿ ನ್ಯಾಶ್‌.

66
00:05:46,360 --> 00:05:49,680
ಅವನನ್ನು ಕೊಂದಿದ್ದಕ್ಕೆ ಒಬ್ಬ ಪಾದ್ರಿಗೆ ಶಿಕ್ಷೆ
ಆಯಿತು. ಆದರೆ ನನ್ನ ಪ್ರಕಾರ ಅವರು ಕೊಲೆಗಾರ ಅಲ್ಲ.

67
00:05:49,760 --> 00:05:51,560
ಪಾದ್ರಿಯೂ ಸಹ ಅದನ್ನೇ ಹೇಳಿದರು.

68
00:05:51,640 --> 00:05:55,160
ಯಾಕೆಂದರೆ ಸಟನ್, ಕೆಸಾಂಡ್ರಾ, ಈ ಹ್ಯಾರಿ
ಮತ್ತು ಮಾರ್ಗೊ ನನ್ನ ತಂದೆಗೆ ಸಂಬಂಧಿಸಿದವರು,

69
00:05:55,240 --> 00:05:56,800
ಹಾಗಾಗಿ ಓಲ್ಸೆನ್‌ ಅವರನ್ನೂ ಕೊಂದ.

70
00:05:56,880 --> 00:05:58,880
ದೇವರೇ, ಲ್ಯಾಜ್.

71
00:05:58,960 --> 00:06:00,360
ನಿನ್ನ ತಂದೆಯನ್ನು ಯಾರೂ ಕೊಲ್ಲಲಿಲ್ಲ.

72
00:06:00,440 --> 00:06:03,640
-ಅದು ಆತ್ಮಹತ್ಯೆ. ಸಾಬೀತಾಗಿದೆ.
-ಅವರು ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ!

73
00:06:03,720 --> 00:06:05,720
-ನೀನು--
-ಸರಿ, ಸರಿ. ಸಾಕು.

74
00:06:07,280 --> 00:06:08,120
ಧನ್ಯವಾದ.

75
00:06:10,040 --> 00:06:11,760
ಓಲ್ಸೆನ್ ಮತ್ತು ಸಟನ್ ಬಗ್ಗೆ ನೀನು ಹೇಳುತ್ತಿರೋದು

76
00:06:11,840 --> 00:06:15,040
ಒಂದು ಒಳ್ಳೆಯ ಸಾಕ್ಷಿ ಆಗಬಹುದು,
ಆದರೆ ಅಷ್ಟೇ ಸಾಕಾಗಲ್ಲ.

77
00:06:15,120 --> 00:06:18,160
-ಆ ಫೋಟೋ ಹೇಗೆ--
-ಹೇ, ಹೇ, ಹೇ. ಅವರು ಮಾತು ಮುಗಿಸಲಿ.

78
00:06:18,240 --> 00:06:21,720
ಉದಾಹರಣೆಗೆ, ನೀನು ಇದು
ಓಲ್ಸೆನ್‌ ಮನೆಯಲ್ಲಿತ್ತು ಎನ್ನಬಹುದು.

79
00:06:22,200 --> 00:06:23,120
ಹೌದು, ಅದಲ್ಲೇ ಇತ್ತು.

80
00:06:23,200 --> 00:06:26,040
ಆದರೆ ಓಲ್ಸೆನ್‌, "ಇಲ್ಲ. ಇದಲ್ಲಿರಲಿಲ್ಲ.
ನಾನಿದನ್ನು ಎಂದೂ ನೋಡಿಲ್ಲ" ಎಂದರೆ?

81
00:06:26,560 --> 00:06:29,320
ಡಿಎನ್ಎ ಪರೀಕ್ಷೆ ಮಾಡಿಸಿ.
ಅದರ ಮೇಲೆಲ್ಲಾ ಅವನ ಕೋಶಗಳು ಇರುತ್ತವೆ.

82
00:06:29,400 --> 00:06:30,920
ಆಮೇಲೆ ಅವನ ಕಾನೂನು ತಂಡ,

83
00:06:31,000 --> 00:06:33,440
"ಈ ಆಟಿಕೆ ಫೋಟೋದಲ್ಲಿರುವ ಆಟಿಕೆಯೇ
ಅಂತ ಏನು ಖಾತ್ರಿ?" ಎಂದರೆ?

84
00:06:34,240 --> 00:06:36,240
ಆದರೆ ಸಟನ್ ಚಿಕ್ಕವಳಿದ್ದಾಗಿನಿಂದ
ಇದವಳ ಬಳಿ ಇತ್ತು.

85
00:06:36,320 --> 00:06:39,200
ಸಟನ್ ಬಳಿ ಎರಡು ನಾಯಿಗಳಿದ್ದವು.
ಅದಕ್ಕೇ ಒಂದನ್ನು ಕೊಟ್ಟಳು.

86
00:06:39,280 --> 00:06:40,600
-ಆದರೆ ಅದು ನಿಜ ಅಲ್ಲ.
-ಅದು ಅಸಂಬದ್ಧ.

87
00:06:40,680 --> 00:06:42,960
-ಅವಳ ಬಳಿ ಎರಡು ನಾಯಿಗಳು ಯಾಕೆ ಇರುತ್ತವೆ?
-ಅವರು ಹಾಗೆ ಹೇಳಬಹುದು.

88
00:06:43,040 --> 00:06:45,600
ಹೂಂ, ಇದು… ದೇವರೇ.

89
00:06:47,200 --> 00:06:49,440
ವಾರಂಟ್ ಬಂದಿದೆ. ಅವನನ್ನು ಕರೆತಾ.

90
00:07:06,600 --> 00:07:08,920
ಸಶಸ್ತ್ರ ಪೊಲೀಸರು! ಸಶಸ್ತ್ರ ಪೊಲೀಸರು!
ಎಲ್ಲಿದ್ದೀರೋ ಅಲ್ಲೇ ಇರಿ!

91
00:07:09,760 --> 00:07:12,240
ಸರಿ, ಸಾಧ್ಯವಾದಷ್ಟು ಬೇಗ,
ಅವನು ಏನನ್ನಾದರೂ ನಾಶಮಾಡುವ ಮುನ್ನ.

92
00:07:12,320 --> 00:07:14,760
-ಎಲ್ಲರೂ ಮುಂದೆ ಬನ್ನಿ!
-ಯಾರೂ ಕದಲಬೇಡಿ!

93
00:07:14,840 --> 00:07:16,360
-ಸಶಸ್ತ್ರ ಪೊಲೀಸ್!
-ಸಶಸ್ತ್ರ ಪೊಲೀಸ್!

94
00:07:17,200 --> 00:07:18,720
-ಸಶಸ್ತ್ರ ಪೊಲೀಸ್!
-ಸಶಸ್ತ್ರ ಪೊಲೀಸ್!

95
00:07:18,800 --> 00:07:20,440
-ಹಿಂದೆ ನಿಲ್ಲಿ!
-ಸಶಸ್ತ್ರ ಪೊಲೀಸ್!

96
00:07:21,360 --> 00:07:22,640
ಇಲ್ಲೇನೂ ಇಲ್ಲ!

97
00:07:22,720 --> 00:07:25,080
-ಏನೂ ಇಲ್ಲ!
-ಸಶಸ್ತ್ರ ಪೊಲೀಸ್! ಇದ್ದಲ್ಲೇ ಇರಿ!

98
00:07:25,160 --> 00:07:26,000
ಇಲ್ಲೇನೂ ಇಲ್ಲ!

99
00:07:28,800 --> 00:07:29,640
ಇಲ್ಲೇನೂ ಇಲ್ಲ!

100
00:07:30,880 --> 00:07:32,320
ಸಶಸ್ತ್ರ ಪೊಲೀಸರು, ಮುಂದೆ ಬನ್ನಿ!

101
00:07:35,000 --> 00:07:35,840
ಇಲ್ಲೇನೂ ಇಲ್ಲ!

102
00:07:47,440 --> 00:07:48,360
ಇಲ್ಲೇನೂ ಇಲ್ಲ!

103
00:07:52,760 --> 00:07:53,760
ಏನೂ ಇಲ್ವಾ?

104
00:07:54,160 --> 00:07:55,240
ಇಲ್ಲಿ ಇಲ್ಲ.

105
00:07:55,320 --> 00:07:58,680
ಸರಿ, ಮೇಲಿನಿಂದ ಕೆಳಕ್ಕೆ.
ನನಗೆ ಸಂಪೂರ್ಣ ಹುಡುಕಾಟ ಬೇಕು. ಸಂಪೂರ್ಣ.

106
00:08:08,520 --> 00:08:09,360
ಏನು?

107
00:08:10,800 --> 00:08:12,120
ಏನು? ಅವನು ಇಲ್ವಾ?

108
00:08:13,000 --> 00:08:15,200
-ಹೂಂ, ಅವನು ಕಾಣುತ್ತಿಲ್ಲ.
-ಅದ್ಭುತ.

109
00:08:15,680 --> 00:08:18,000
ನಿಯಮ ಪಾಲಿಸಿ
ಮತ್ತು ಅವನಿಗೆ ಎಲ್ಲಿಗೆ ಬೇಕಾದರೂ ಓಡಿಹೋಗಲು

110
00:08:18,080 --> 00:08:19,840
ಬೇಕಾದಷ್ಟು ಸಮಯ ನೀಡಿ.

111
00:08:20,600 --> 00:08:21,720
ಲ್ಯಾಜ್, ಕ್ಷಮಿಸು.

112
00:08:21,800 --> 00:08:23,040
ಸರಿ, ಹಾಗಾದರೆ ಪರವಾಗಿಲ್ಲ.

113
00:08:30,400 --> 00:08:32,720
ಅವನು ಸಿಗುತ್ತಾನೆ. ಸರಿನಾ? ನನ್ನನ್ನು ಕ್ಷಮಿಸು.

114
00:08:33,560 --> 00:08:34,400
ನನಗೆ ಗೊತ್ತು.

115
00:08:35,400 --> 00:08:36,320
ನಾನವನ ಹಿಂದೆ ಹೋಗುವೆ.

116
00:08:43,160 --> 00:08:44,000
ಹೇ.

117
00:08:46,520 --> 00:08:47,480
ಓಹ್, ವಾವ್.

118
00:08:48,320 --> 00:08:49,360
ಇದೆಲ್ಲವೂ ನಿನ್ನ ಮೇಲೆ ಮಾತ್ರ

119
00:08:49,440 --> 00:08:51,840
ಪರಿಣಾಮ ಬೀರುತ್ತಿರೋದು ಎಂಬಂತೆ
ವರ್ತಿಸೋದನ್ನ ನಿಲ್ಲಿಸುವೆಯಾ?

120
00:08:51,920 --> 00:08:53,320
-ಹಾಗೇನೂ ಮಾಡುತ್ತಿಲ್ಲ.
-ಇಲ್ವಾ?

121
00:08:53,400 --> 00:08:55,520
ಇಲ್ಲ. ಆದರೆ ನಿನಗೆ ಇವೆಲ್ಲಾ, ಏನೋ ಇವೆಲ್ಲಾ,

122
00:08:55,600 --> 00:08:56,840
ದೆವ್ವಗಳು ಕಾಣುತ್ತಿವೆಯಾ?

123
00:08:56,920 --> 00:08:58,160
-ಇಲ್ಲ.
-ಮತ್ತದನ್ನೇ ಮಾಡುತ್ತಿದ್ದೀಯ.

124
00:08:58,240 --> 00:08:59,480
ನಿನಗೆ ಕಾಣುತ್ತಿರೋದು ಖಚಿತನಾ?

125
00:09:03,480 --> 00:09:04,400
ಅಂದರೆ…

126
00:09:06,560 --> 00:09:08,120
ನಿನಗದು ಕಾಣುತ್ತಿಲ್ಲವಾದರೆ?

127
00:09:10,040 --> 00:09:12,880
ಇಷ್ಟೂ ಸಮಯ ನಾನದನ್ನು ಯೋಚಿಸಿಲ್ಲ ಅಂದುಕೊಂಡೆಯಾ?

128
00:09:13,720 --> 00:09:16,520
ನನಗೆ ಮತ್ತೆ ಹುಚ್ಚು ಹಿಡಿಯುತ್ತಿರಬಹುದು ಅಂತ
ನನಗೆ ಗೊತ್ತಿಲ್ಲ ಅಂದುಕೊಂಡೆಯಾ?

129
00:09:18,560 --> 00:09:19,640
ಇಲ್ಲಿ ಬಾ.

130
00:09:26,640 --> 00:09:27,760
ಟೆಡ್‌ಗೆ ಇದು ಸಿಕ್ಕಿತು, ಸಾರ್ಜ್.

131
00:09:42,920 --> 00:09:43,960
ಇವೆಲ್ಲಾ ಏನು?

132
00:09:45,280 --> 00:09:47,280
ಬಟ್ಟೆಗಳಾ? ಹುಡುಗಿಯರ ಒಳ ಉಡುಪುಗಳು.

133
00:09:50,480 --> 00:09:53,440
ಹೇ, ಒಳ್ಳೆಯ ಕೆಲಸ. ಅವನ್ನು ಬ್ಯಾಗ್‌ಗೆ ಹಾಕಿ.
ಇತರ ಚಿತ್ರಗಳನ್ನು ಪರಿಶೀಲಿಸಿ.

134
00:09:53,520 --> 00:09:54,360
ಸರಿ, ಸರ್.

135
00:10:50,200 --> 00:10:52,480
ಬನ್ನಿ, ಬನ್ನಿ, ಬನ್ನಿ.

136
00:11:08,160 --> 00:11:09,000
ಅಪ್ಪ?

137
00:11:16,680 --> 00:11:18,000
ಕ್ಷಮಿಸಿ, ಅಪ್ಪ.

138
00:11:21,880 --> 00:11:23,520
ಕ್ಷಮಿಸಿ, ಒಂದು ಕ್ಷಣ ಮಾತಾಡಬಹುದಾ?

139
00:11:25,560 --> 00:11:26,400
ದೇವರೇ.

140
00:11:31,920 --> 00:11:33,720
ಇಲ್ಲ. ಮೇಲೆ ನೋಡು.

141
00:11:36,000 --> 00:11:37,520
ನಾನವನ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ.

142
00:11:38,520 --> 00:11:39,400
ಕ್ಷಮಿಸಿ, ಅಪ್ಪ.

143
00:11:40,680 --> 00:11:41,920
ಕ್ಷಮಿಸಿ, ಒಂದು ಕ್ಷಣ ಮಾತಾಡಬಹುದಾ?

144
00:11:43,200 --> 00:11:44,800
ಒಂದು ಕ್ಷಣನಾ?

145
00:11:45,280 --> 00:11:47,920
ಒಂದು ಕ್ಷಣ ಎಷ್ಟು ಬೇಗ ಮಾಯವಾಗುತ್ತೆ.

146
00:11:49,000 --> 00:11:50,960
ಇಗೋ. ಹೋಯಿತು.

147
00:11:51,480 --> 00:11:52,680
ಒಂದು ಕ್ಷಣನಾ?

148
00:11:53,800 --> 00:11:55,040
ಒಂದು ಕ್ಷಣ ಎಷ್ಟು ಬೇಗ ಮಾಯವಾಗುತ್ತೆ.

149
00:11:58,960 --> 00:11:59,800
ಇಗೋ.

150
00:12:01,040 --> 00:12:02,000
ಹೋಯಿತು.

151
00:12:02,600 --> 00:12:03,720
ಕ್ಷಮಿಸಿ. ಹೌದು.

152
00:12:14,360 --> 00:12:15,320
ನಾವು ಮಾತಾಡಬಹುದಾ?

153
00:12:16,080 --> 00:12:16,960
ಖಂಡಿತ ಮಾತಾಡಬಹುದು.

154
00:12:19,120 --> 00:12:20,640
ನನಗೆ ಸಟನ್ ಬಗ್ಗೆ ತುಂಬಾ ಯೋಚನೆ ಬರುತ್ತಿದೆ.

155
00:12:22,360 --> 00:12:25,720
ನನಗೆ ಅನಿಸುತ್ತಿದೆ, ಬಹುಶಃ ನಾನು ಅವಳನ್ನು…

156
00:12:27,000 --> 00:12:28,440
ಹಾಗಾಗೋದನ್ನ ತಡೆಯಲು ಅಲ್ಲಿರಬೇಕಿತ್ತು ಅಂತ.

157
00:12:29,480 --> 00:12:33,080
ಅವಳ ಸಾವು, ಅವಳ ಕೊಲೆ ನನ್ನ ತಪ್ಪು ಅಂತ.

158
00:12:34,080 --> 00:12:35,200
ನಿನ್ನ ತಪ್ಪಾ, ಯಾಕೆ?

159
00:12:35,760 --> 00:12:37,360
ಅವಳು ನೃತ್ಯದಿಂದ ಹೋಗೋದನ್ನ ನಾನು ನೋಡಿದೆ…

160
00:12:39,000 --> 00:12:40,360
ಅವಳು ಬೇಜಾರಲ್ಲಿರೋದು ನೋಡಿದೆ, ಆದರೆ…

161
00:12:41,800 --> 00:12:42,640
ನಾನಲ್ಲೇ ಉಳಿದುಕೊಂಡೆ.

162
00:12:43,960 --> 00:12:46,000
ನಾನು ಅದರ ಬಗ್ಗೆ ಏನು ಮಾಡಬೇಕು?

163
00:12:47,200 --> 00:12:48,040
ನನಗೆ ಗೊತ್ತಿಲ್ಲ.

164
00:12:49,080 --> 00:12:51,800
ನನಗೆ ಧೈರ್ಯ ಹೇಳಲು ಆಗುತ್ತಾ?

165
00:12:51,880 --> 00:12:54,120
ಸಟನ್ ಸತ್ತರೂ ಪರವಾಗಿಲ್ಲ ಅಂತಲಾ?

166
00:12:54,640 --> 00:12:55,680
ಅಲ್ಲ.

167
00:12:56,680 --> 00:12:57,840
ನಿನಗೆ ವಿಮೋಚನೆ ಬೇಕು.

168
00:12:59,040 --> 00:13:00,160
"ನನ್ನನ್ನು ಕ್ಷಮಿಸಿ, ತಂದೆ."

169
00:13:02,240 --> 00:13:04,120
ನಾನು ಚರ್ಚ್ಫಾನ ಫಾದರ್ ಅಲ್ಲ.

170
00:13:06,840 --> 00:13:08,520
ನಾನು ತಪ್ಪೊಪ್ಪಿಗೆ ಕೇಳೋ ಚರ್ಚ್ ತಂದೆಯಲ್ಲ.

171
00:13:10,360 --> 00:13:13,280
ನಾನು ನೀಡಬಹುದಾದ ಅತ್ಯುತ್ತಮವಾದದ್ದು
ಆತ್ಮಸಾಕ್ಷಿಯ ಸಲಹೆ.

172
00:13:14,360 --> 00:13:18,040
ಉದಾಹರಣೆಗೆ, ನೀನು ನಿನ್ನ ಸೋದರಿಯನ್ನು
ಮನೆಗೆ ಕರೆತರುವೆ ಎಂದು ಮಾತು ನೀಡಿದಾಗ,

173
00:13:18,800 --> 00:13:21,520
ನಿನ್ನನ್ನು ಕ್ಷಮಿಸಬಲ್ಲ ಏಕೈಕ ವ್ಯಕ್ತಿ ನೀನೇ.

174
00:13:23,080 --> 00:13:24,160
ಯಾಕೆಂದರೆ ನಿನ್ನ ಆಯ್ಕೆಗಳಿಗೆ…

175
00:13:26,400 --> 00:13:27,520
ಅದರಿಂದಾಗುವ ಸಮಸ್ಯೆಗಳಿಗೆ…

176
00:13:29,200 --> 00:13:32,040
ನೀನು ಮಾತ್ರ ಜವಾಬ್ದಾರ.

177
00:13:35,120 --> 00:13:36,040
ನನಗವಳ ನೆನಪಾಗುತ್ತೆ.

178
00:13:37,840 --> 00:13:38,760
ನನಗವಳ ನೆನಪಾಗುತ್ತೆ.

179
00:13:40,200 --> 00:13:41,960
ನಾವು ಯಾವಾಗಲೂ ಒಟ್ಟಿಗೆ ಇದ್ದವರು.

180
00:13:42,040 --> 00:13:42,880
ಹೌದು.

181
00:13:44,200 --> 00:13:45,760
ಹೌದು, ಯಾಕೆಂದರೆ ಅವಳು ನಿನ್ನ ಅವಳಿ.

182
00:13:46,960 --> 00:13:48,920
ಯಾಕೆಂದರೆ ನೀವು ಶೂನ್ಯದಿಂದ ಒಟ್ಟಿಗೆ ಬೆಳೆದವರು.

183
00:13:50,400 --> 00:13:53,600
ಈಗ ಇದ್ದಕ್ಕಿದ್ದಂತೆ ನಿನ್ನ ಜೀವನದ ಅರ್ಧದಷ್ಟು
ಕಳೆದುಹೋದಂತೆ ಭಾಸವಾಗುತ್ತೆ, ಆದರೆ…

184
00:13:55,800 --> 00:13:57,040
ನೀನು ಇನ್ನೂ ಇಲ್ಲೇ ಇದ್ದೀಯ.

185
00:14:00,840 --> 00:14:01,880
ಮತ್ತದು ನೋವುಂಟುಮಾಡುತ್ತೆ.

186
00:14:08,200 --> 00:14:10,440
ಮತ್ತು ಅದರ ಜೊತೆ ಬದುಕಲು ನೀನು
ಮತ್ತು ನಾನು ಕಲಿಯಬೇಕು.

187
00:14:26,920 --> 00:14:27,840
ಆರಾಮಿದ್ದೀಯಾ, ಮಗನೇ?

188
00:14:33,240 --> 00:14:34,840
ಯಾಕೆ ಹಾಗೆ ಆಗಲು ಬಿಟ್ಟಿರಿ?

189
00:14:36,680 --> 00:14:38,800
ಯಾಕೆ ನನಗೆ ಸಹಾಯ ಮಾಡಲಿಲ್ಲ? ಯಾಕೆ?

190
00:14:40,600 --> 00:14:43,240
ನೀವು ಬರೀ "ಅದು ನಿನ್ನ ತಪ್ಪಲ್ಲ"
ಅಂತಷ್ಟೇ ಹೇಳಬೇಕಿದ್ದದ್ದು.

191
00:14:44,640 --> 00:14:46,160
ನಿಮಗೆ ನನ್ನದೇ ತಪ್ಪು ಅನಿಸಿತ್ತು.

192
00:14:46,240 --> 00:14:47,440
ಇಲ್ಲ. ಖಂಡಿತ ಇಲ್ಲ.

193
00:14:47,520 --> 00:14:50,400
ಹಾಗಾದರೆ ಈಜಲು ಬರದ ಹುಡುಗನನ್ನು
ಮುಳುಗಲು ಯಾಕೆ ಬಿಟ್ಟಿರಿ?

194
00:14:50,480 --> 00:14:52,520
ಯಾಕೆಂದರೆ ನೀವು ಮಾಡಿದ್ದು ಅದನ್ನೇ! ನೀವು!

195
00:14:53,240 --> 00:14:55,440
ನನ್ನ ತಂದೆ, ನನಗೆ ಅತ್ಯಂತ ಮುಖ್ಯವಾದ ವ್ಯಕ್ತಿ,

196
00:14:55,520 --> 00:14:58,320
ನನ್ನ ತಂಗಿಯ ಸಾವಿಗೆ
ನಾನೇ ಹೊಣೆ ಎಂದು ಆರೋಪಿಸಿದಿರಿ!

197
00:14:58,400 --> 00:14:59,680
-ಇಲ್ಲ.
-ಹೌದು!

198
00:14:59,760 --> 00:15:00,960
ಆದರೆ ಅದು ನಿನ್ನ ಅನಿಸಿಕೆ ಆಗಿತ್ತು.

199
00:15:01,040 --> 00:15:02,240
ಈಗಲೂ ಆಗಿದೆ!

200
00:15:02,320 --> 00:15:05,400
-ಆದರೆ ನನ್ನ ಅನಿಸಿಕೆ ಅದಾಗಿಲ್ಲ. ಎಂದಿಗೂ.
-ಹಾಗಾದರೆ ನೀವು ಯಾಕೆ ನನ್ನನ್ನು ರಕ್ಷಿಸಲಿಲ್ಲ?

201
00:15:05,480 --> 00:15:07,480
-ಜೋಲ್‌!
-ನಾನು ಯಾವ ಸ್ಥಿತಿಯಲ್ಲಿದ್ದೆ ಅಂತ ನೋಡಿದ್ದಿರಿ!

202
00:15:07,560 --> 00:15:12,760
ಜೋಲ್‌, ಹೃದಯದಿಂದ ಹೇಳುವೆ,
ನನ್ನ ತಪ್ಪಿದೆ, ನಿಜವಾಗಲೂ,

203
00:15:12,840 --> 00:15:16,720
ಆದರೆ ನಮಗೆ ಒಂದು ಮಗುವಿದ್ದಾಗ
ಮತ್ತು ಆ ಮಗು ಸತ್ತಾಗ,

204
00:15:16,800 --> 00:15:20,200
ನಮ್ಮ ಮುಂದೆ ಒಂದು ಕೂಪ ತೆರೆಯುತ್ತೆ.

205
00:15:21,640 --> 00:15:25,880
ಯಾಕೆಂದರೆ ನಮ್ಮ ಮಕ್ಕಳು ನಮ್ಮ ಮಕ್ಕಳೇ.
ಅವರು ನಮಗಿಂತ ಮುಂಚೆ ಸಾಯಬಾರದು.

206
00:15:28,480 --> 00:15:29,920
ಅದೂ ಸಟನ್ ತೀರಿಕೊಂಡಿದ್ದು.

207
00:15:30,960 --> 00:15:32,680
ಆದರೆ ನಾನು ನಿಮ್ಮ ಮಗುವೇ.

208
00:15:33,600 --> 00:15:38,080
ಗೊತ್ತು. ನೀನು ಮತ್ತು ಜೆನ್ನಾ.
ನಾನು ನಿಮಗಿಬ್ಬರಿಗೂ ದ್ರೋಹ ಮಾಡಿದೆ.

209
00:15:40,000 --> 00:15:43,640
ಆದರೆ ನಿನಗೆ ವಿಶೇಷವಾಗಿ, ಯಾಕೆಂದರೆ ನೀನೂ
ನನ್ನಷ್ಟೇ ಸ್ವಯಂದೂಷಣೆ ಮಾಡಿಕೊಳ್ಳುತ್ತಿದ್ದೆ.

210
00:15:43,720 --> 00:15:47,880
ಆದರೆ ನಿಜವಾದ ಶಾಂತಿಗೆ ಒಂದೇ ದಾರಿ
ತನ್ನನ್ನು ತಾನು ಎದುರಿಸಿಕೊಂಡು ಕ್ಷಮಿಸೋದು

211
00:15:47,960 --> 00:15:50,000
ಅನ್ನೋ ತಿಳುವಳಿಕೆಯೊಂದಿಗೆ,

212
00:15:50,080 --> 00:15:52,400
ನಾನು ನನ್ನ ಮೇಲಿದ್ದಷ್ಟೇ
ನಿನ್ನ ಮೇಲೂ ಕಠಿಣವಾಗಿದ್ದೆ.

213
00:15:53,320 --> 00:15:56,400
ಮತ್ತು ಅದು ಒಬ್ಬ ಯುವಕನನ್ನು
ಒಂಟಿಯಾಗಿ ನಡೆಯಲು ಕಳಿಸುವ ದಾರಿಯಾಗಿರಲಿಲ್ಲ.

214
00:15:56,480 --> 00:15:58,280
ನಿಮಗೆ ಕಾಳಜಿಯೇ ಇಲ್ಲ ಎಂಬಂತಿತ್ತು.

215
00:15:58,360 --> 00:16:00,720
ನಾನು ಒಬ್ಬಂಟಿಯಾಗಿದ್ದೆ.
ನನಗೆ ನಿಭಾಯಿಸಲು ಸಾಧ್ಯವಾಗಲಿಲ್ಲ.

216
00:16:04,120 --> 00:16:05,200
ನನಗೆ ಕಾಳಜಿ ಇತ್ತು.

217
00:16:05,760 --> 00:16:07,960
ಆದರೆ ನೀವದನ್ನು ಎಂದೂ ತೋರಲಿಲ್ಲ!

218
00:16:11,680 --> 00:16:13,960
ನಾನು ಯಾವಾಗಲೂ ಯೋಚಿಸಿದ್ದು…

219
00:16:16,280 --> 00:16:17,520
ನೀನು ಆರಾಮಿದ್ದೀಯ ಅಂತ.

220
00:16:22,200 --> 00:16:23,040
ದೇವರೇ. ಓ ದೇವರೇ.

221
00:16:25,320 --> 00:16:26,200
ಆದರೆ ನಾನು ಆರಾಮಿಲ್ಲ.

222
00:16:42,000 --> 00:16:43,760
ಜೆನ್, ಇದ್ದೀಯಾ?

223
00:16:44,760 --> 00:16:46,160
ಲ್ಯಾಜ್, ಐಡೆನ್‌‌ನ ನೋಡಿದ್ದೀಯಾ?

224
00:16:46,440 --> 00:16:47,960
-ಐಡೆನ್‌ ಅನ್ನು…
-ಹೌದು.

225
00:16:49,480 --> 00:16:51,160
ಯಾವಾಗಿನ ಬಗ್ಗೆ ಮಾತಾಡುತ್ತಿದ್ದೇವೆ?

226
00:16:51,240 --> 00:16:54,200
ಅವನು ನಿನ್ನೆ ರಾತ್ರಿ ಮನೆಗೆ ಹೋಗಲಿಲ್ಲ,
ಮತ್ತು ಫೋನ್‌ಗೆ ಉತ್ತರಿಸುತ್ತಿಲ್ಲ.

227
00:16:54,280 --> 00:16:55,120
ಅವನನ್ನ ನೋಡಿದ್ದೀಯಾ?

228
00:16:56,120 --> 00:16:57,320
-ಹೌದು. ಸರಿ.
-ನೋಡಿದ್ದೀಯಾ?

229
00:16:57,400 --> 00:16:59,920
ಹೌದು. ಜೆನ್, ನಮಗೆ ಒಂದು ನಿಮಿಷ ಕೊಡುವೆಯಾ?

230
00:17:01,600 --> 00:17:02,760
ಹೂಂ. ಸರಿ.

231
00:17:02,840 --> 00:17:05,240
ಕ್ಷಮಿಸು, ಏನಾಗುತ್ತಿದೆ ಇಲ್ಲಿ?
ನೀನವನನ್ನು ನೋಡಿದ್ದೀಯಾ?

232
00:17:05,320 --> 00:17:07,640
ಜೆನ್‌, ಇಲ್ಲೇ ಇರು, ನೀನು ಮಾತಾಡು.

233
00:17:07,720 --> 00:17:10,240
ಅವನು ನಿನ್ನೆ ರಾತ್ರಿ ನನ್ನನ್ನು ನೋಡಲು ಬಂದಿದ್ದ.

234
00:17:10,320 --> 00:17:13,200
-ಏನರ್ಥ?
-ಆಮೇಲೆ ನಾನವನನ್ನು ನಿನ್ನ ಮನೆಯಲ್ಲಿ ಬಿಟ್ಟೆ.

235
00:17:13,280 --> 00:17:15,800
-ನೀನವನನ್ನು ನನ್ನ ಮನೆಗೆ ಕರೆತರಲಿಲ್ಲ.
-ನೀನು ಅಲ್ಲಿ ನಿಂತಿದ್ದೆ,

236
00:17:15,880 --> 00:17:17,720
ಕಿಟಕಿಯ ಬಳಿ, ಹಾಗಾಗಿ ನಾನು ಅಲ್ಲಿಂದ ಹೊರಟೆ.

237
00:17:17,800 --> 00:17:19,840
ಅವನು ಮನೆಗೆ ಬಂದಿಲ್ಲ ಅಂತ ನಾನು ಈಗಷ್ಟೇ ಹೇಳಿದೆ!

238
00:17:21,000 --> 00:17:23,800
ಮತ್ತು, ಕ್ಷಮಿಸು,
ಅವನು ನಿನ್ನನ್ನು ನೋಡಲು ಯಾಕೆ ಬಂದಿದ್ದ?

239
00:17:23,880 --> 00:17:25,400
ನಿನ್ನನ್ನ ಸುಮ್ಮನೆ ಬಿಡಲು ಹೇಳಿದ್ದೆ ಅವನಿಗೆ!

240
00:17:28,760 --> 00:17:30,720
ಅವನು ಪಿತೃತ್ವ ಪರೀಕ್ಷೆ ಮಾಡಿಸಿದ್ದ.

241
00:17:32,800 --> 00:17:37,160
ಅವನೇ ಸ್ವಂತವಾಗಿ, ಸರಿನಾ?
ನನಗೂ ಅದಕ್ಕೂ ಸಂಬಂಧವಿರಲಿಲ್ಲ. ಅವನು…

242
00:17:38,880 --> 00:17:41,840
ಅವನು ನನ್ನ ಬ್ರಷ್ ತಗೊಂಡು,
ಅದರಿಂದ ಬೇಕಾದುದನ್ನು ತಗೊಂಡು ಕಳಿಸಿದ, ಮತ್ತು…

243
00:17:43,120 --> 00:17:46,560
ನಿನ್ನೆ ಫಲಿತಾಂಶಗಳು ಬಂದವು,
ನಾನು ಅವನ ತಂದೆ, ಪಾಲ್ ಅಲ್ಲ ಅಂತ.

244
00:17:46,640 --> 00:17:48,640
-ಏನು?
-ಈಗ ಬೇಡ, ಜೆನ್.

245
00:17:51,160 --> 00:17:54,880
ನೋಡು, ಕ್ಷಮಿಸು,
ನಾನಿದನ್ನು ಹುಡುಕಿಕೊಂಡು ಹೋಗಲಿಲ್ಲ.

246
00:17:57,680 --> 00:17:58,600
ಆದರೆ ನಾವು…

247
00:18:00,040 --> 00:18:02,960
ನಾನು, ಪಾಲ್ ಒಂದಾದ ಮೇಲೆ
ನಾವು ಒಮ್ಮೆ ಮಾತ್ರ ಸೇರಿದ್ದು.

248
00:18:03,840 --> 00:18:04,680
ಹೌದು.

249
00:18:07,160 --> 00:18:08,120
ಐಡೆನ್‌ ಪಾಲ್‌‌ನ ಮಗ.

250
00:18:10,360 --> 00:18:12,720
ಅದೇ ನಿಜ. ಪಾಲ್ ಅವನನ್ನು ಬೆಳೆಸಿದ್ದು.

251
00:18:12,800 --> 00:18:16,200
ನೋಡು, ಅವನ ಸ್ಥಾನ ಪಡೆಯುವುದು ನನ್ನ ಉದ್ದೇಶವಲ್ಲ.

252
00:18:16,280 --> 00:18:17,120
-ನಿಜವಾಗಲೂ?
-ನಾನು--

253
00:18:17,200 --> 00:18:18,280
ಕೇಳಿ.

254
00:18:18,360 --> 00:18:19,320
ಕ್ಷಮಿಸಿ.

255
00:18:20,440 --> 00:18:21,280
ಕ್ಷಮಿಸಿ, ನಾನು…

256
00:18:22,760 --> 00:18:24,880
ನಿಮಗೆ ತಿಳಿಸಬೇಕು ಅಂದುಕೊಂಡೆ.
ಸಿಸಿಟಿವಿ ದೃಶ್ಯಾವಳಿ ಸಿಕ್ಕಿದೆ.

257
00:18:25,880 --> 00:18:28,240
ನೆನ್ನೆ ರಾತ್ರಿ ಓಲ್ಸೆನ್‌ ಕಾರು
ನಗರದಿಂದಾಚೆ ಉತ್ತರಕ್ಕೆ ಹೋಗುತ್ತಿತ್ತು.

258
00:18:29,320 --> 00:18:32,200
-ಎಲ್ಲಿಗೆ? ಗೊತ್ತಾ?
-ಅವನು ಊರಿನ ಹೊರಗೆ ಹೋದ ಮೇಲೆ, ನಮಗೆ ಕಾಣಲ್ಲ.

259
00:18:32,280 --> 00:18:33,520
-ಸರಿ, ನನಗೆ ತೋರಿಸುವೆಯಾ?
-ಹಾಂ.

260
00:18:36,280 --> 00:18:37,880
ನಿಜಕ್ಕೂ ಏನೂ ಕಾಣಲ್ಲ, ಆದರೆ…

261
00:18:39,920 --> 00:18:41,640
ಅವನ ಜೊತೆ ಯಾರೋ ಇದ್ದಾರೆ.

262
00:18:41,720 --> 00:18:43,880
ಹೌದು, ಆದರೆ ಗುಣಮಟ್ಟ ತುಂಬಾ ಕೆಟ್ಟದಾಗಿದೆ,
ಏನೂ ಕಾಣುತ್ತಿಲ್ಲ.

263
00:18:43,960 --> 00:18:45,000
-ಅಯ್ಯೋ ದೇವರೇ.
-ಏನು?

264
00:18:47,240 --> 00:18:49,400
ಅದು ಐಡೆನ್‌ ನೆನ್ನೆ ರಾತ್ರಿ ಧರಿಸಿದ್ದ ಜಾಕೆಟ್.

265
00:18:50,040 --> 00:18:50,880
ತೋರಿಸು.

266
00:18:52,400 --> 00:18:53,720
ಆದರೆ… ಯಾಕೆ…

267
00:18:53,800 --> 00:18:55,800
ಕ್ಷಮಿಸು, ನಿನ್ನ ಅರ್ಥ
ಅದು ಐಡೆನ್ ಇರಬಹುದು ಅಂತಲಾ?

268
00:18:57,440 --> 00:18:59,120
-ಅವನು ನಿನ್ನೆ ರಾತ್ರಿ ಮನೆಗೆ ಬರಲಿಲ್ಲ.
-ಸರಿ…

269
00:18:59,880 --> 00:19:00,720
ಸರಿ. ಪರಿಶೀಲಿಸುವೆ.

270
00:19:09,880 --> 00:19:12,720
ಮತ್ತು ಅವನು ಓಲ್ಸೆನ್ ಜೊತೆ ಇದ್ದ ಮಾತ್ರಕ್ಕೆ,
ಈಗಲೂ ಇದ್ದಾನೆ ಎಂದಲ್ಲ, ಸರಿನಾ?

271
00:19:13,520 --> 00:19:14,440
ನಾವವನನ್ನು ಹುಡುಕುತ್ತೇವೆ.

272
00:19:15,960 --> 00:19:19,120
ನಾನು ಪಾಲ್‌ಗೆ ಅವನನ್ನು ಹುಡುಕಲು ಸಹಾಯ ಮಾಡುವೆ.
ಅವನು ಬಂದಾಗ ನೀನು ಮನೆಯಲ್ಲಿದ್ದಹಾಗಿರುತ್ತೆ.

273
00:19:19,200 --> 00:19:21,320
ಆ ಹುಡುಗ ನನ್ನ ಸರ್ವಸ್ವ.

274
00:19:21,400 --> 00:19:23,600
ನಿನಗೂ ಅವನಿಗೂ ಸಂಬಂಧ ಇಲ್ಲ, ನೀನವನ ತಂದೆಯಲ್ಲ,

275
00:19:23,680 --> 00:19:25,400
ಹಾಗಾಗಿ ಈಗವನ ಮೇಲೆ ಹಕ್ಕು ಸಾಧಿಸಲು ನೋಡಬೇಡ.

276
00:19:25,480 --> 00:19:27,320
-ಬೆಲ್ಲಾ, ನಾನು ಹಾಗೆ--
-ಹೂಂ, ನೀನು ಹಾಗೇ ಹೇಳಿದ್ದು.

277
00:19:44,960 --> 00:19:47,200
ಪೊಲೀಸರಿಗೆ ಮೊದಲ ದಿನದಿಂದಲೂ
ನನ್ನ ಮೇಲೆಯೇ ಅನುಮಾನವಿತ್ತು.

278
00:19:47,280 --> 00:19:49,120
ಪ್ರತಿ ಬಾರಿ ದರೋಡೆ ನಡೆದಾಗ,

279
00:19:50,080 --> 00:19:51,480
ಯಾರನ್ನು ಪ್ರಶ್ನಿಸುತ್ತಿದ್ದರು ಗೊತ್ತಾ?

280
00:19:53,280 --> 00:19:54,760
ಅದು ಹೇಗನಿಸುತ್ತೆ ಅಂತ ಊಹಿಸಬಲ್ಲಿರಾ

281
00:19:54,840 --> 00:19:56,960
ಜನರು ನಿಮ್ಮನ್ನು ಯಾವಾಗಲೂ
ಅನುಮಾನದಿಂದ ನೋಡುವುದು?

282
00:19:58,360 --> 00:19:59,720
ಸಿಸಿಟಿವಿ ದೃಶ್ಯಾವಳಿ ಸಿಕ್ಕಿದೆ.

283
00:19:59,800 --> 00:20:02,280
ನೆನ್ನೆ ರಾತ್ರಿ ಓಲ್ಸೆನ್‌ ಕಾರು
ನಗರದಿಂದಾಚೆ ಉತ್ತರಕ್ಕೆ ಹೋಗುತ್ತಿತ್ತು.

284
00:20:03,480 --> 00:20:04,960
ನಗರದಿಂದ ಹೊರಗೆ ಹೋಗುತ್ತಿದ್ದೆ.

285
00:20:05,040 --> 00:20:07,280
ಆರ್ಕ್ಟಿಕ್ ಚಾರ್ ಮೀನು ಹಿಡಿಯಲು ಹೋಗುತ್ತಿದ್ದೆ.

286
00:20:16,360 --> 00:20:18,400
ಆರ್ಕ್ಟಿಕ್ ಚಾರ್ ಸ್ಥಳೀಯ ಮೀನುಗಾರಿಕಾ ಪ್ರದೇಶ

287
00:20:18,480 --> 00:20:21,040
ಎತ್ತರವಾದ ನೀರು
ನಿರ್ದೇಶನಗಳು

288
00:20:21,440 --> 00:20:24,000
23 ನಿಮಿಷ (6 ಮೈಲುಗಳು)
ಅತಿ ವೇಗದ ದಾರಿ

289
00:20:30,760 --> 00:20:31,600
ಸೆತ್‌.

290
00:20:33,040 --> 00:20:34,000
ಓಲ್ಸೆನ್‌ ಕಾಣುತ್ತಿಲ್ಲ.

291
00:20:35,080 --> 00:20:37,560
ಅವನ ಕಾರು ಯಾವ ಕ್ಯಾಮೆರಾದಲ್ಲೂ ಕಂಡುಬರುತ್ತಿಲ್ಲ.

292
00:20:37,640 --> 00:20:39,160
ಅಂದರೆ ಅವನು ಎಲ್ಲೋ ಅಡಗಿಕೊಂಡಿರಬೇಕು.

293
00:20:39,840 --> 00:20:41,800
ಸರಿ, ಹುಡುಕಾಟ ಮುಂದುವರಿಸು. ಇವನ್ನು ನೋಡು.

294
00:20:43,120 --> 00:20:46,120
ಇದು ವೀಡಿಯೊದಿಂದ ಬಂದಿರೋದು,
ಮತ್ತಿವು ನಿಮಗೆ ಓಲ್ಸೆನ್ ಮನೆಯಲ್ಲಿ ಸಿಕ್ಕಿದ್ದು.

295
00:20:47,640 --> 00:20:48,520
ಸಟನ್‌ನ ಮಲಗುವ ಕೋಣೆ.

296
00:20:49,280 --> 00:20:50,320
ಹೌದು.

297
00:22:05,680 --> 00:22:07,480
ಓಲ್ಸೆನ್ ಕಾರು ಇಲ್ಲಿದೆ!

298
00:22:18,320 --> 00:22:20,520
ಮೇಡಂ? ಲ್ಯಾಜ್‌ಗೆ ಓಲ್ಸೆನ್‌ನ ಕಾರು ಸಿಕ್ಕಿದೆ.

299
00:22:41,480 --> 00:22:44,880
ಇಲ್ಲ, ಇಲ್ಲ. ಇಲ್ಲ! ಇಲ್ಲ!

300
00:23:02,240 --> 00:23:05,120
ಇಲ್ಲ! ದಯವಿಟ್ಟು ಬೇಡ.

301
00:23:05,200 --> 00:23:08,120
ಇರು, ನಾನು ಹಿಡಿದುಕೊಳ್ಳುವೆ. ಒಳಗೆ ಎಳೆದುಕೋ.

302
00:23:08,200 --> 00:23:09,800
ಹಿಂದಕ್ಕೆ ಎಳೆ. ಸೌಮ್ಯವಾಗಿ ಮೇಲೆ ತಾ.

303
00:23:10,200 --> 00:23:11,440
ಇದನ್ನು ಹೇಗೆ ಕೊಲ್ಲೋದು?

304
00:23:11,520 --> 00:23:13,440
ತಿನ್ನೋದನ್ನ ಮಾತ್ರ ಕೊಲ್ಲಬೇಕು.

305
00:23:14,640 --> 00:23:15,920
ಇದನ್ನ ವಾಪಸ್ ಹಾಕೋಣ.

306
00:23:16,640 --> 00:23:17,520
ಇಗೋ ಹೋಯಿತು.

307
00:23:18,800 --> 00:23:19,640
ಐಡೆನ್‌!

308
00:23:22,360 --> 00:23:25,960
ಐಡೆನ್‌, ಹೋಗಿ ನನ್ನ ಕಾರಲ್ಲಿ ಕಾಯಿ.
ನೀನು ಬಂದ ಕಾರಿನ ಪಕ್ಕದಲ್ಲಿದೆ.

309
00:23:26,600 --> 00:23:28,160
ನನಗಿಲ್ಲೇ ಇರಬೇಕು. ನಾನಿಲ್ಲಿ ಆರಾಮಿರುವೆ.

310
00:23:28,240 --> 00:23:30,280
ಐಡೆನ್‌, ನಿನ್ನಪ್ಪ-ಅಮ್ಮನಿಗೆ
ತುಂಬಾ ಚಿಂತೆಯಾಗಿದೆ.

311
00:23:31,080 --> 00:23:32,200
ನೀವು ನನ್ನ ಅಪ್ಪ.

312
00:23:32,280 --> 00:23:33,200
ನಿನ್ನಮ್ಮ ಮತ್ತು ಪಾಲ್.

313
00:23:34,360 --> 00:23:36,080
-ನನಗೆ ಸ್ಯಾಮ್ ಜೊತೆ ಇರಬೇಕು.
-ಐಡೆನ್.

314
00:23:36,160 --> 00:23:38,600
-ನನಗೆ ಮನೆಗೆ ಹೋಗಲು ಇಷ್ಟ ಇಲ್ಲ.
-ನಾನಿದನ್ನು ನಿಭಾಯಿಸಲಾ?

315
00:23:40,800 --> 00:23:41,640
ಏನಂದೆ?

316
00:23:41,720 --> 00:23:44,520
ನೋಡು, ಏನೂ ಆಗಿಲ್ಲ, ಸರಿನಾ?

317
00:23:45,360 --> 00:23:46,280
ಏನೂ ಆಗಿಲ್ಲ.

318
00:23:47,560 --> 00:23:50,160
ಮತ್ತು ನಾನವನಿಗೆ ಮನೆಗೆ ಕರೆ ಮಾಡಿ
ಅವನು ಚೆನ್ನಾಗಿದ್ದಾನೆ ಅಂತ ಹೇಳಲು ಹೇಳಿದೆ.

319
00:23:50,240 --> 00:23:51,440
ಆದರೆ ಅವನಿಗೆ ಸ್ವಲ್ಪ ಏಕಾಂತ ಬೇಕು.

320
00:23:52,080 --> 00:23:54,240
ಅವನಿಗೆ ಅದರ ಹಕ್ಕಿದೆ. ಎಲ್ಲರಿಗೂ ಇದೆ.

321
00:23:56,240 --> 00:23:59,440
ಸಟನ್ ಕೊಲೆಯಾದ ರಾತ್ರಿ ತೆಗೆದದ್ದು.
ಮೇಲಿನ ಎಡ ಮೂಲೆ ನೋಡು.

322
00:24:00,080 --> 00:24:02,160
ಮನುಷ್ಯಾಕೃತಿಯ ಮೇಲೆ. ಕಂಡಿತಾ?

323
00:24:03,400 --> 00:24:05,440
ಪೊಲೀಸರು ಇದನ್ನು ನೋಡಿದ್ದಾರೆ
ಮತ್ತು ಇಲ್ಲಿಗೆ ಬರುತ್ತಿದ್ದಾರೆ.

324
00:24:09,000 --> 00:24:10,160
ಕಾರಿಗೆ ಹೋಗು.

325
00:24:11,840 --> 00:24:12,680
ಹೋಗು ಅಂದೆ!

326
00:24:20,120 --> 00:24:21,360
ನಾನು ಏನೂ ಮಾಡಲಿಲ್ಲ--

327
00:24:23,560 --> 00:24:24,680
ನೀನವಳನ್ನು ಕೊಂದೆ!

328
00:24:25,760 --> 00:24:27,840
ಅದನ್ನು ನಿರಾಕರಿಸುವ ಧೈರ್ಯ ಮಾಡಬೇಡ!

329
00:24:28,240 --> 00:24:30,280
ನನಗವಳು ಇಷ್ಟ ಇದ್ದಳು. ಇಷ್ಟ ಇದ್ದಳು!

330
00:24:33,640 --> 00:24:35,760
ಅವಳನ್ನು ಪ್ರೀತಿಸಿ ರಕ್ಷಿಸಿದೆ,

331
00:24:36,880 --> 00:24:38,120
ಜೀವನದಲ್ಲೂ, ನಂತರವೂ.

332
00:24:38,200 --> 00:24:39,840
ನಾನವಳ ಸಮಾಧಿ ನೋಡಿಕೊಳ್ಳುತ್ತೇನೆ.

333
00:24:40,720 --> 00:24:41,640
ಬೇರೆ ಯಾರೂ ಮಾಡದಿದ್ದಾಗಲೂ.

334
00:24:42,720 --> 00:24:43,840
ನೀನು ದೂರ ಹೋದೆ.

335
00:24:44,920 --> 00:24:47,520
ನಾನವಳಿಗಾಗಿ ಏನು ಮಾಡಿದ್ದೇನೆಂದು ತೋರಿಸಲು
ನಿಮ್ಮನ್ನು ಅಲ್ಲಿಗೆ ಒಯ್ಯಬೇಕಾಯಿತು.

336
00:24:47,600 --> 00:24:49,160
ಹೇ! ಹೇ!

337
00:24:54,280 --> 00:24:55,840
ಸಟನ್ ಲ್ಯಾಜರಸ್‌
1980-1998

338
00:24:55,920 --> 00:24:57,000
ಎಲ್ಲಿ ಹೋದೆ?

339
00:24:58,480 --> 00:24:59,440
ನೀನವಳನ್ನು ಕೊಂದೆ.

340
00:24:59,920 --> 00:25:01,720
ಇಲ್ಲ, ನಿನಗೆ ಅರ್ಥವಾಗುತ್ತಿಲ್ಲ.

341
00:25:04,480 --> 00:25:06,760
ನಾನು ಯಾವಾಗಲೂ ಸಟನ್‌ಗೆ
ತುಂಬಾ ಗೌರವ ತೋರುತ್ತಿದ್ದೆ.

342
00:25:11,480 --> 00:25:12,440
ಹೇಳು.

343
00:25:12,520 --> 00:25:15,120
ಆ ರಾತ್ರಿ ಏನಾಯಿತು ಹೇಳು!

344
00:25:15,760 --> 00:25:18,680
ನೀನು ನಮ್ಮ ಮನೆಗೆ ನುಗ್ಗಿದೆ! ಹೇಗೆ?

345
00:25:18,760 --> 00:25:21,200
-ಹೇಗೆ?
-ನೀನು ಕಲ್ಲಿನ ಕೆಳಗೊಂದು ಕೀಲಿ ಇಡುತ್ತಿದ್ದೆ.

346
00:25:22,920 --> 00:25:24,480
ನಾನು ವರ್ಷಗಳ ಕಾಲ ಒಳಹೊರಗೆ ಹೋಗಿಬರುತ್ತಿದ್ದೆ.

347
00:25:26,520 --> 00:25:28,360
ಏನೋ ಕೆಟ್ಟ ಕೆಲಸ ಮಾಡಲಲ್ಲ.

348
00:25:29,440 --> 00:25:32,440
ಸಟನ್ ಕೋಣೆಯಲ್ಲಿ ಸಮಯ ಕಳೆಯಲು ಹೋಗುತ್ತಿದ್ದೆ,

349
00:25:33,200 --> 00:25:34,680
ಅವಳು ಮಲಗುವ ಸ್ಥಳದ ಹತ್ತಿರ ಇರಲು.

350
00:25:34,760 --> 00:25:35,840
ಆ ನಾಯಿ,

351
00:25:37,280 --> 00:25:39,200
ನಾನವಳನ್ನು ಮೊದಲ ಬಾರಿ ಭೇಟಿಯಾದಾಗ
ಅವಳ ಬಳಿ ಅದು ಇತ್ತು.

352
00:25:39,680 --> 00:25:42,680
ಅವಳು ವಿಶ್ವವಿದ್ಯಾಲಯಕ್ಕೆ ಹೋಗುತ್ತಿದ್ದಳು,
ಹಾಗಾಗಿ ಅವಳ ನೆನಪಿಗಾಗಿ ನನಗದು ಬೇಕಿತ್ತು.

353
00:25:43,600 --> 00:25:45,280
-ಅದಕ್ಕೇ ನಾನಲ್ಲಿಗೆ ಬಂದಿದ್ದೆ.
-ಸುಳ್ಳ!

354
00:25:45,680 --> 00:25:48,560
-ನೀನವಳನ್ನು ಕೊಲ್ಲಲು ಬಂದಿದ್ದೆ!
-ಹಾಗಲ್ಲ.

355
00:25:48,640 --> 00:25:50,040
ಹಾಗಲ್ಲ ಅದು.

356
00:25:50,120 --> 00:25:52,480
ಹಾಗಲ್ಲ ಅದು. ದಯವಿಟ್ಟು, ಅದು ಹಾಗಲ್ಲ.

357
00:25:57,640 --> 00:25:58,600
ಕ್ಷಮಿಸು.

358
00:25:59,520 --> 00:26:01,000
ಸರಿ. ಸರಿ.

359
00:26:07,520 --> 00:26:08,760
ಹಾಗಲ್ಲವೆಂದರೆ ಮತ್ತೆ ಹೇಗಾಗಿತ್ತು?

360
00:26:10,200 --> 00:26:11,880
ದಯವಿಟ್ಟು. ದಯವಿಟ್ಟು.

361
00:26:15,720 --> 00:26:17,240
ಸಟನ್ ನೃತ್ಯದಿಂದ

362
00:26:18,560 --> 00:26:19,400
ಬೇಗ ವಾಪಸ್ ಬಂದಳು,

363
00:26:20,200 --> 00:26:21,360
ಮತ್ತು ನಿನ್ನ ಮೇಲಾಣೆ,

364
00:26:23,040 --> 00:26:24,320
ನಾನು ಕೋಣೆಯಿಂದ ಹೊರ ಬರುತ್ತಿದ್ದಂತೆ,

365
00:26:26,040 --> 00:26:27,120
ಅವಳು ಇದ್ದಕ್ಕಿದ್ದಂತೆ ಬಂದಳು.

366
00:26:28,880 --> 00:26:31,840
-ಕೋಣೆಗೆ ಮಾತ್ರವಲ್ಲ. ನನ್ನ ತೋಳುಗಳಿಗೆ.
-ನೀನು ಹೇಗೆ ಒಳಗೆ ಬಂದೆ.

367
00:26:32,640 --> 00:26:34,000
ಅವಳು ನನ್ನ ಬಳಿಗೆ ಬರುತ್ತಿದ್ದಳು,

368
00:26:35,000 --> 00:26:36,320
ಮತ್ತವಳ ತೋಳುಗಳು ನನ್ನ ಸುತ್ತಾ ಇದ್ದವು,

369
00:26:37,840 --> 00:26:39,040
ನನ್ನ ಕುತ್ತಿಗೆಯ ಸುತ್ತ.

370
00:26:39,120 --> 00:26:40,720
ಅವಳು ನನ್ನ ಮೇಲೆ ಬಿದ್ದಳು.

371
00:26:40,800 --> 00:26:42,000
ಬಿಡು ನನ್ನನ್ನ!

372
00:26:42,560 --> 00:26:43,640
ನನ್ನನ್ನು ಮುದ್ದಾಡಿದಳು.

373
00:26:46,160 --> 00:26:47,280
ಹಾಗಾಗಿ ನಾನವಳಿಗೆ ಮುತ್ತಿಟ್ಟೆ.

374
00:26:47,760 --> 00:26:50,960
ನಾನವಳ ಮುಖವನ್ನು ನನ್ನ ಕೈಯಲ್ಲಿ ಹಿಡಿದು
ತುಂಬಾ ಪ್ರೀತಿಯಿಂದ ಅವಳಿಗೆ ಮುತ್ತಿಟ್ಟೆ.

375
00:26:51,040 --> 00:26:53,160
ದರಿದ್ರ ವಿಕೃತಕಾಮಿ!

376
00:27:05,840 --> 00:27:07,600
ಅವಳೇ ಅದನ್ನು ಶುರು ಮಾಡಿದ್ದು!

377
00:27:08,400 --> 00:27:09,920
ಅವಳು ನನ್ನನ್ನು ಹಿಡಿದಳು!

378
00:27:10,760 --> 00:27:12,120
ಅವಳು ಮಾಡುತ್ತಿರೋದವಳಿಗೆ ತಿಳಿದಿತ್ತು.

379
00:27:14,800 --> 00:27:16,800
ಮತ್ತು ನಂತರ ನೀನು ಮನೆಗೆ ಬರೋದು ನನಗೆ ಕೇಳಿತು.

380
00:27:16,880 --> 00:27:18,560
ಲ್ಯಾಜ್! ಲ್ಯಾಜ್!

381
00:27:19,000 --> 00:27:20,080
ನನಗೆ ಬೇರೆ ದಾರಿ ಇರಲಿಲ್ಲ.

382
00:27:21,200 --> 00:27:22,160
ನನ್ನಿಂದ ಹಾಗೆ ಮಾಡಿಸಿದಳು.

383
00:27:24,120 --> 00:27:25,320
ಹೊಡೆಯುವಂತೆ
ಮಾಡಿದಳು. ಅವಳು…

384
00:27:43,200 --> 00:27:45,000
ಅವಳನ್ನು ನೃತ್ಯದಿಂದ ಹೋಗಲು ಯಾಕೆ ಬಿಟ್ಟೆ?

385
00:27:54,960 --> 00:27:56,120
ನನ್ನನ್ನು ಬಿಡು!

386
00:27:56,200 --> 00:27:57,040
ಬಿಡು!

387
00:27:59,360 --> 00:28:00,200
ಅಪ್ಪ!

388
00:28:35,120 --> 00:28:35,960
ಜೋಲ್‌!

389
00:28:39,040 --> 00:28:40,120
ಲ್ಯಾಜ್!

390
00:28:42,440 --> 00:28:43,280
ಲ್ಯಾಜ್!

391
00:29:08,000 --> 00:29:10,160
ಧನ್ಯವಾದ. ಧನ್ಯವಾದ, ಮಗನೇ.

392
00:29:20,920 --> 00:29:24,560
ನಮಗೆ ಓಲ್ಸೆನ್ ಮನೆಯಲ್ಲಿ ಸಟನ್ ಕೋಣೆಯ
ಫೋಟೋಗಳು ಸಿಕ್ಕಿವೆ,

393
00:29:25,760 --> 00:29:26,800
ಅವಳ ವಸ್ತುಗಳ ಫೋಟೋ,

394
00:29:28,160 --> 00:29:29,880
ಎಲ್ಲವೂ ಅವಳ ಕೊಲೆಯಾದ ಸಮಯದ್ದು.

395
00:29:33,280 --> 00:29:34,520
ಹಾಗಾಗಿ ಓಲ್ಸೆನ್‌ ಕೊಲೆಗಾರ.

396
00:29:38,080 --> 00:29:39,160
ಈಗಲಾದರೂ ನನ್ನ ಮಾತು ಒಪ್ಪುವಿರಾ?

397
00:29:40,800 --> 00:29:41,960
ಒಪ್ಪಿದೆ.

398
00:29:46,040 --> 00:29:48,480
ನಾವಿಲ್ಲಿಗೆ ಬರೋದು ತಡವಾಗಿದ್ದರೆ
ಅವನಿಗೆ ಏನು ಮಾಡುತ್ತಿದ್ದೆ?

399
00:30:02,000 --> 00:30:04,640
ನಾನು ನಿನ್ನ ಜೊತೆ ನಿಲ್ಲಬೇಕೆಂದು
ನಿನ್ನ ತಂದೆ ಇಷ್ಟಪಡುತ್ತಿದ್ದರು.

400
00:30:07,280 --> 00:30:09,640
ನನ್ನ ಸಂಖ್ಯೆ ನಿನ್ನ ಬಳಿ ಇದೆ.
ಯಾವಾಗ ಬೇಕಾದರೂ ಕರೆ ಮಾಡು.

401
00:30:14,120 --> 00:30:15,200
ಅಪ್ಪ ಗೌರವಿಸುತ್ತಿದ್ದರು,

402
00:30:17,400 --> 00:30:18,360
ನಿಮ್ಮನ್ನ, ಗೊತ್ತಲ್ಲಾ?

403
00:30:21,960 --> 00:30:22,880
ನನಗವರ ನೆನಪಾಗುತ್ತೆ.

404
00:30:42,400 --> 00:30:43,720
ಐಡೆನ್‌ ಆರಾಮಿದ್ದಾನಾ?

405
00:30:44,240 --> 00:30:45,160
ನನಗೆ ಗೊತ್ತಿಲ್ಲ.

406
00:30:45,800 --> 00:30:47,240
ಅವನು ನಮ್ಮ ಜೊತೆ ಮಾತಾಡುತ್ತಿಲ್ಲ.

407
00:30:49,880 --> 00:30:51,120
ಇಲ್ಲ, ಕ್ಷಮೆ ಕೇಳಬೇಡ.

408
00:30:51,200 --> 00:30:53,920
ನಾನು… ನಾನು ಕೇಳುತ್ತಿರಲಿಲ್ಲ.

409
00:30:55,040 --> 00:30:56,640
ಒಂದು ವಿಷಯ ಹೇಳಬೇಕಷ್ಟೇ,

410
00:30:57,800 --> 00:30:59,280
ನಾನು ಯಾವಾಗಲೂ ಅವನಿಗಾಗಿ ಇರುತ್ತೇನೆ.

411
00:31:05,720 --> 00:31:06,920
ನನಗೆ ಐಡೆನ್ ಬಗ್ಗೆ ಚಿಂತೆಯಾಗಿದೆ.

412
00:31:08,080 --> 00:31:09,120
ಏನು ಚಿಂತೆ?

413
00:31:11,760 --> 00:31:15,480
ಅವನು ಇತರ ಮಕ್ಕಳಂತೆ ಇಲ್ಲದಿರುವ ಬಗ್ಗೆ,
ಅಥವಾ ಇತರ ಮಕ್ಕಳಿಗೆ ಇಷ್ಟವಾಗದಿರುವ ಬಗ್ಗೆ,

414
00:31:15,560 --> 00:31:18,160
ಅಥವಾ, ನನಗೆ ಗೊತ್ತಿಲ್ಲ,
ಅವನನ್ನು ವಿಚಿತ್ರವೆಂದುಕೊಳ್ಳುವ ಬಗ್ಗೆ.

415
00:31:19,280 --> 00:31:20,120
ಸರಿ.

416
00:31:22,320 --> 00:31:25,000
ನಾನು ಯೋಚಿಸುತ್ತಿದ್ದೆ,
ನೀನು ಅವನೊಂದಿಗೆ ಕಳೆದ ಸ್ವಲ್ಪ ಸಮಯದಲ್ಲಿ,

417
00:31:25,080 --> 00:31:29,520
ನಿನಗೆ ಅವನಲ್ಲಿ ನೀನು ಕಾಣುತ್ತೀಯ, ಹೇಗಾದರೂ?

418
00:31:31,440 --> 00:31:33,240
ಸಟನ್‌ಗೆ ಹಾಗಾದಾಗ ನೀನು ಹುಚ್ಚನಂತೆ ಆಗಿದ್ದೆ,

419
00:31:33,320 --> 00:31:35,640
ಮತ್ತು ಐಡೆನ್‌ಗೆ ಅಂತಹದ್ದೇನೂ ಆಗಿಲ್ಲ,
ಆದರೆ ನಾನು…

420
00:31:38,200 --> 00:31:41,040
ಆದರೆ ಸಟನ್ ಸಾಯುವ ಮೊದಲು
ನನಗೆ ಸಮಸ್ಯೆಗಳಿದ್ದವಾ ಅಂತ ಕೇಳುತ್ತಿದ್ದೀಯಾ?

421
00:31:41,120 --> 00:31:41,960
ಹೂಂ.

422
00:31:43,080 --> 00:31:44,240
ಕ್ಷಮಿಸು, ನಾನು ಕೇಳಲೇಬೇಕು.

423
00:31:47,320 --> 00:31:49,520
ನಿಜ ಹೇಳಬೇಕೆಂದರೆ, ನನಗೆ ಗೊತ್ತಿಲ್ಲ.

424
00:31:51,120 --> 00:31:52,200
ಹೂಂ.

425
00:31:54,760 --> 00:31:57,960
ನಿನ್ನಪ್ಪ ಅವನ ಜತೆ ಒಂದೆರಡು ಬಾರಿ ಮಾತಾಡಿದ್ದರು.
ಸಮಾಲೋಚನೆಗಳನ್ನು ನಡೆಸಿದ್ದರು.

426
00:31:59,520 --> 00:32:01,760
ಆದರೆ… ಐಡೆನ್‌ಗೆ ಅದು ಇಷ್ಟವಿರಲಿಲ್ಲ

427
00:32:01,840 --> 00:32:04,160
ಮತ್ತವನಿಂದ ಅದನ್ನು ಮಾಡಿಸುವುದು
ಅವನನ್ನು ಇನ್ನೂ ಹಾಳು ಮಾಡುತ್ತಿತ್ತು.

428
00:32:05,400 --> 00:32:06,600
ಹೂಂ, ಇಲ್ಲ.

429
00:32:08,720 --> 00:32:10,920
ಅವನಿಗೆ ಮಾತಾಡಬೇಕಿರಬಹುದು.

430
00:32:16,560 --> 00:32:17,400
ನಾವು…

431
00:32:18,720 --> 00:32:20,680
ಇದರ ಬಗ್ಗೆ ನಾವು ಸಂಪರ್ಕದಲ್ಲಿರಬಹುದಾ?

432
00:32:22,960 --> 00:32:23,960
ಹೂಂ.

433
00:32:24,320 --> 00:32:25,280
ಸರಿನಾ?

434
00:32:26,280 --> 00:32:27,600
ಆದರೆ ನಾನು ಪಾಲ್‌ಗೆ ಹೇಳಬೇಕು, ಹಾಗಾಗಿ…

435
00:32:28,040 --> 00:32:29,000
ಖಂಡಿತ.

436
00:33:04,600 --> 00:33:05,880
ನನಗೆ ಅರ್ಥವಾಗದಿರೋದು ಏನೆಂದರೆ,

437
00:33:06,600 --> 00:33:09,280
ಐಡೆನ್ ಸುರಕ್ಷಿತವಾಗಿದ್ದಾನೆ,
ಓಲ್ಸೆನ್ ಸಿಕ್ಕಿಬಿದ್ದಿದ್ದಾನೆ,

438
00:33:09,360 --> 00:33:12,040
ಆದರೆ ಇನ್ನೂ ಮುಕ್ತಾಯದಂತೆ ಅನ್ನಿಸುತ್ತಿಲ್ಲ.

439
00:33:12,120 --> 00:33:13,240
ಹೂಂ, ನಂಗೂನು.

440
00:33:13,320 --> 00:33:16,240
ಯಾಕೆಂದರೆ ಸಟನ್ ವಾಪಸ್ ಬರಲ್ಲ.

441
00:33:17,040 --> 00:33:17,880
ಇಲ್ಲ.

442
00:33:20,040 --> 00:33:22,800
ನಮ್ಮ ಪರಿಸ್ಥಿತಿಯಲ್ಲಿರುವ ಜನರು
ಅದಕ್ಕೇ ಹೇಳೋದು ಅನಿಸುತ್ತೆ,

443
00:33:23,840 --> 00:33:25,160
"ಈಗ ನಾವು ದುಃಖಿಸಬಹುದು" ಅಂತ.

444
00:33:28,000 --> 00:33:29,560
ಬಹುಶಃ ನಾವು ಈಗ ಅದೇ ಹಂತದಲ್ಲಿದ್ದೇವೆ.

445
00:33:31,880 --> 00:33:35,880
ಹೇ, ಐಡೆನ್ ಅಪ್ಪನಿಂದ ಒಬ್ಬ ರೋಗಿಯಾಗಿ
ಒಂದೆರಡು ಸಮಾಲೋಚನೆ ಪಡೆದಿರೋದು

446
00:33:36,400 --> 00:33:37,360
ನಿನಗೆ ಗೊತ್ತಿತ್ತಾ?

447
00:33:39,680 --> 00:33:41,960
ಹೂಂ. ಹೌದು, ಮಾರ್ಗೊ ನನಗೆ ಹೇಳಿದ್ದಳು.

448
00:33:42,520 --> 00:33:46,640
ಅವನಿಗೆ ಕೆಲವು ನಿಜವಾದ ಸಮಸ್ಯೆಗಳಿವೆ,
ಸಹಾಯದ ಅಗತ್ಯವಿದೆ ಅಂತ ಹೇಳಿದ್ದಳು,

449
00:33:46,720 --> 00:33:49,160
ಆದರೆ ಅದು ನಮಗೆ ತಿಳಿಯುವ ಮೊದಲಾಗಿತ್ತು, ಅವನು…

450
00:33:53,080 --> 00:33:56,320
ಲ್ಯಾಜ್, ಐಡೆನ್‌ನ ಸಮಸ್ಯೆಗಳಿಗೆ
ನೀನು ಕಾರಣ ಅಂತ ಅಂದುಕೊಳ್ಳಬೇಡ.

451
00:33:56,400 --> 00:33:57,920
ಹಾಗಾಗಲ್ಲ. ನೀನು ಹೇಗದಕ್ಕೆ ಕಾರಣವಾಗಬಹುದು?

452
00:34:00,680 --> 00:34:03,440
-ಆಕಸ್ಮಿಕವಾಗಿ, ಬಹುಶಃ.
-ಹೇ, ಕೇಳು,

453
00:34:04,520 --> 00:34:06,280
ನೀವಿಬ್ಬರೂ ತುಂಬಾ ಅನುಭವಿಸಿದ್ದೀರಿ.

454
00:34:07,080 --> 00:34:11,040
ಬಹುಶಃ ಈಗ ನೀವು
ಒಟ್ಟಿಗೆ ಗುಣಮುಖರಾಗಲು ಪ್ರಾರಂಭಿಸಬಹುದು.

455
00:34:17,160 --> 00:34:19,360
ನೀನು ಸುಮ್ಮನೆ ಅಲ್ಲಿ ಕೂತಿರೋದು
ನಾನು ಖರೀದಿಸಲಿ ಅಂತನಾ?

456
00:34:19,440 --> 00:34:20,280
ಹೂಂ, ಹೌದು.

457
00:34:20,880 --> 00:34:21,800
ಏನು ಬೇಕು?

458
00:34:22,240 --> 00:34:23,440
ಎಲ್ಲವೂ.

459
00:34:30,920 --> 00:34:31,760
-ಆರಾಮಾ?
-ಹೂಂ.

460
00:34:34,160 --> 00:34:35,080
ಅಪ್ಪಿಕೊಳ್ಳುವೆಯಾ?

461
00:34:38,320 --> 00:34:39,360
-ಬಿಗಿಯಾಗಿ.
-ಹೂಂ.

462
00:34:56,640 --> 00:34:58,760
-ಹಲೋ?
-ಹೇ. ಹೇ, ನಾನು ಲ್ಯಾಜ್.

463
00:35:00,680 --> 00:35:02,200
ನಾನು ಯೋಚಿಸುತ್ತಿದ್ದೆ…

464
00:35:04,680 --> 00:35:08,480
ಧನ್ಯವಾದ. ಸಂತೋಷ.

465
00:35:09,480 --> 00:35:10,560
-ನಿಜವಾಗಲೂ.
-ಹೂಂ.

466
00:35:10,640 --> 00:35:14,120
ಲ್ಯಾಜ್, ಒಂದು ಮಾತು ಹೇಳುವೆ,
ನಾನು ಸಂಜೆಯವರೆಗೆ ಮಾತ್ರ ಕೆಲಸ ಮಾಡೋದು.

467
00:35:15,040 --> 00:35:19,960
ಹೂಂ. ಸರಿ. ಈಗ ಸಂಜೆ ದಾಟಿ ತಡವಾಗಿದೆ, ಅಲ್ವಾ?

468
00:35:20,040 --> 00:35:22,280
ತುಂಬಾ… ತುಂಬಾ ತಡವಾಗಿದೆ.

469
00:35:22,360 --> 00:35:23,960
ತುಂಬಾನೇ ತಡ ಅನ್ನಬಹುದು.

470
00:35:24,360 --> 00:35:26,280
-ತುಂಬಾ ತಡ.
-ಸಮಾಲೋಚನೆಗೆ.

471
00:35:27,000 --> 00:35:28,960
ಸಮಾಲೋಚನೆಗೆ, ಖಂಡಿತ.

472
00:35:30,040 --> 00:35:31,080
ಸರಿ, ಹೂಂ.

473
00:35:32,160 --> 00:35:34,240
ಆದರೆ ಕುಡಿಯಲು…

474
00:35:36,720 --> 00:35:39,200
ಒಟ್ಟಿಗೆ ಸಮಯ ಕಳೆಯಲು?

475
00:35:41,400 --> 00:35:44,680
-ಅದು ಅನೈತಿಕ, ಅಲ್ವಾ?
-ಇಲ್ಲ, ಆದರೆ ಅದು ಒಳ್ಳೆಯದು.

476
00:35:45,240 --> 00:35:46,800
-ಒಳ್ಳೆಯದಾ?
-ಹೌದು,

477
00:35:47,400 --> 00:35:48,920
ಯಾಕೆಂದರೆ ಈ ಸಂಜೆ,

478
00:35:49,440 --> 00:35:51,920
ನಿನಗೆ ಕರೆ ಮಾಡುವ ಮೊದಲು,
ಇದ್ದಕ್ಕಿದ್ದಂತೆ ನನಗೆ ಹೊಳೆಯಿತು…

479
00:35:53,160 --> 00:35:54,800
ನನಗೆ ಇನ್ನೊಬ್ಬ ಚಿಕಿತ್ಸಕರು ಸಿಗಬಹುದು,

480
00:35:55,640 --> 00:35:58,600
ಆದರೆ ಇನ್ನೊಬ್ಬ ನೀನು ಸಿಗಲ್ಲ.

481
00:36:04,520 --> 00:36:05,800
ಇವತ್ತು ಏನಾದರೂ ಆಯಿತಾ?

482
00:36:06,560 --> 00:36:09,720
ತುಂಬಾ ಆಯಿತು. ಹೂಂ, ತುಂಬಾನೇ.

483
00:36:09,800 --> 00:36:13,360
ಅಂದರೆ, ಇವತ್ತು ತಲೆ ಕೆಟ್ಟು ಹೋಯಿತು.

484
00:36:14,320 --> 00:36:15,800
ಸರಿ, ಹಾಗಾದರೆ ನನ್ನ ಪುಸ್ತಕ ತರುವೆ,

485
00:36:15,880 --> 00:36:18,640
-ಮತ್ತು ನಿನ್ನ ಸಮಾ--
-ಇಲ್ಲ, ಬೇಡ, ಬೇಡ, ನಿನ್ನ ಪುಸ್ತಕ ಬೇಡ.

486
00:36:18,720 --> 00:36:19,560
ನಾವು…

487
00:36:21,520 --> 00:36:22,600
ನಾವು ಹೊರಗೆ ಹೋಗೋಣ.

488
00:36:27,560 --> 00:36:29,720
ಅಥವಾ ಇಲ್ಲೇ ಇರೋಣ.

489
00:36:30,840 --> 00:36:32,760
ಅಥವಾ, ಏನೋ ಗೊತ್ತಿಲ್ಲ, ಬಹುಶಃ…

490
00:36:34,760 --> 00:36:37,080
ಏನೋ ಗೊತ್ತಿಲ್ಲ. ನಿನಗೆ ಬೇಕಾದಂತೆ ಮಾಡೋಣ.

491
00:36:38,680 --> 00:36:39,520
ಸರಿ.

492
00:36:41,640 --> 00:36:43,320
ಇದು ಸಂಪೂರ್ಣವಾಗಿ ಅನುಚಿತ.

493
00:36:44,120 --> 00:36:46,400
-ಕ್ಷಮಿಸು.
-ನಾನು ಇನ್ನು ಮುಂದೆ ನಿನ್ನ ಚಿಕಿತ್ಸಕಿಯಲ್ಲ,

494
00:36:46,480 --> 00:36:48,000
ಅರ್ಥವಾಯಿತಾ?

495
00:36:48,080 --> 00:36:49,240
ನಿನಗೆ ಕೋಪ ಬಂದಿದೆ.

496
00:36:49,320 --> 00:36:50,200
ನಾನು ಹೋಗಿ ನಿನಗೆ

497
00:36:51,160 --> 00:36:55,000
ಬೇರೆ ಇಬ್ಬರು ಚಿಕಿತ್ಸಕರ
ಸಂಪರ್ಕ ವಿವರಗಳನ್ನು ತಂದುಕೊಡುವೆ.

498
00:36:55,080 --> 00:36:55,920
ತುಂಬಾ ಕೋಪ ಬಂದಿದೆ.

499
00:36:56,000 --> 00:36:59,600
ಸರಿ, ನಾನು ಕ್ಷಮೆ ಕೇಳಬೇಕು.

500
00:37:03,360 --> 00:37:04,440
ಮನದಾಳದಿಂದ.

501
00:37:07,960 --> 00:37:08,920
ಕ್ಷಮಿಸು.

502
00:37:09,600 --> 00:37:11,120
ಕ್ಷಮಿಸಿದೆ.

503
00:37:16,560 --> 00:37:17,800
ಅವರಿಬ್ಬರೂ ಚೆನ್ನಾಗಿದ್ದಾರೆ.

504
00:37:20,520 --> 00:37:21,520
ಸರಿ, ಹಾಗಾದರೆ…

505
00:37:23,720 --> 00:37:25,480
ಕುಡಿಯಲು ಎಲ್ಲಿಗೆ ಹೋಗೋಣ?

506
00:38:09,240 --> 00:38:10,200
ಏನು?

507
00:38:12,360 --> 00:38:14,920
ನಿನ್ನ ತಂದೆ ತೀರಿಕೊಂಡ ದಿನ
ಓಲ್ಸೆನ್ 200 ಮೈಲಿ ದೂರದಲ್ಲಿದ್ದ.

508
00:38:15,960 --> 00:38:17,160
ಇದು ನಂಬುವಂತಹ ಸಾಕ್ಷಿ.

509
00:38:18,440 --> 00:38:20,320
ಪಕ್ಕಾ ನಂಬಬಹುದು. ದಾಖಲಿತ ಪುರಾವೆಗಳಿವೆ.

510
00:38:22,120 --> 00:38:23,200
ಅವನ ಮನೆ ಬುಡಮೇಲು ಮಾಡಿ.

511
00:38:24,520 --> 00:38:27,520
ಅವನು ಕಪಾರಿತೋಷಕ ಇಟ್ಟುಕೊಳ್ಳುತ್ತಾನೆ.
ನನ್ನ ತಂದೆಯ ಪತ್ರದ ಉಳಿದ ಭಾಗ ಅವನ ಬಳಿ ಇರುತ್ತೆ.

512
00:38:27,600 --> 00:38:31,240
ನಮಗೆ ಒಂದು ಪುಟ ಮಾತ್ರ ಸಿಕ್ಕಿದ್ದು,
ಇನ್ನೂ ಇದೆ, ಅವನ ಮನೆಯಲ್ಲೇ ಇರುತ್ತೆ, ಪಕ್ಕಾ.

513
00:38:31,840 --> 00:38:33,640
ನಾವು ಆ ಸ್ಥಳವನ್ನು ಪೂರ್ತಿ ಹುಡುಕಿದೆವು.

514
00:38:34,960 --> 00:38:36,720
ನಿನ್ನ ತಂದೆಗೆ ಸಂಬಂಧಿಸಿದ ಏನೂ ಅಲ್ಲಿಲ್ಲ.

515
00:38:38,120 --> 00:38:39,480
ಒಪ್ಪಿಕೊಳ್ಳೋದು ಕಷ್ಟ ಅಂತ ನನಗೆ ಗೊತ್ತು,

516
00:38:40,800 --> 00:38:42,240
ಆದರೆ ಅದು ಖಚಿತ, ಲ್ಯಾಜ್.

517
00:38:44,240 --> 00:38:45,760
ನಿನ್ನ ತಂದೆಯದು ಆತ್ಮಹತ್ಯೆ,

518
00:38:48,680 --> 00:38:49,520
ಕ್ಷಮಿಸು.

519
00:38:56,160 --> 00:38:58,480
ಲ್ಯಾಜ್, ಕೇಳು. ಗೆಳೆಯ.

520
00:39:01,240 --> 00:39:03,400
ಐ ಲವ್ ಯು, ಸರಿನಾ? ಹಾಗಾಗಿ ನನ್ನನ್ನು ನಂಬು,

521
00:39:04,080 --> 00:39:05,320
ಓಲ್ಸೆನ್ ನಿನ್ನ ತಂದೆಯನ್ನ ಕೊಂದಿಲ್ಲ.

522
00:39:05,400 --> 00:39:07,200
ಯಾರೂ ಕೊಂದಿಲ್ಲ. ಅದು ಆತ್ಮಹತ್ಯೆ.

523
00:39:07,280 --> 00:39:08,840
ಮತ್ತು ಕೆಸಾಂಡ್ರಾ?

524
00:39:08,920 --> 00:39:10,440
ಮತ್ತು ಹ್ಯಾರಿ ಮತ್ತು ಮಾರ್ಗೊ?

525
00:39:10,520 --> 00:39:12,640
ಹೂಂ, ಅವನನ್ನು ಇನ್ನೂ ಪ್ರಶ್ನಿಸುತ್ತಿದ್ದೇವೆ,
ಆದರೆ ಅವನು…

526
00:39:13,680 --> 00:39:15,360
ಸಟನ್ ಕೊಲೆಯನ್ನು
ಮಾತ್ರ ಒಪ್ಪಿಕೊಳ್ಳುತ್ತಿದ್ದಾನೆ.

527
00:39:15,440 --> 00:39:16,400
ಸೆತ್‌.

528
00:39:16,480 --> 00:39:19,000
ಸೆತ್, ನಾನು ಸತ್ತ ಜನರನ್ನು ನೋಡುತ್ತಿದ್ದೇನೆ.

529
00:39:19,080 --> 00:39:21,160
ಈಗ ನಿನ್ನನ್ನು ನೋಡುತ್ತಿರುವಂತೆಯೇ
ಅವರನ್ನು ನೋಡುತ್ತಿದ್ದೇನೆ.

530
00:39:21,240 --> 00:39:23,320
ಅವರದು ಕೊಲೆ. ಎಲ್ಲರದೂ.

531
00:39:23,400 --> 00:39:26,120
ಮತ್ತು ಅವರಲ್ಲೊಬ್ಬರಾದ ನನ್ನ ತಂದೆ ಕೂಡ
ಅವರು ಕೊಲೆಯಾದರು ಎಂದರು.

532
00:39:26,600 --> 00:39:29,560
ಕೇಳು, ಗೆಳೆಯ, ಕೇಳು, ಇವೆಲ್ಲಕ್ಕೂ ಸಂಬಂಧವಿದೆ.

533
00:39:30,000 --> 00:39:32,120
ನಾನು ಸಟನ್‌ನ ನೋಡಿದೆ, ಅವಳು ನನ್ನ ಬಳಿಗೆ ಬಂದಳು,

534
00:39:32,200 --> 00:39:34,040
ಮತ್ತವಳನ್ನು ಓಲ್ಸೆನ್
ಕೊಲೆ ಮಾಡಿದ್ದಂತ ನಮಗೆ ಗೊತ್ತು.

535
00:39:36,400 --> 00:39:38,400
ಓಲ್ಸೆನ್ ನಿನ್ನ ತಂದೆಯನ್ನು ಕೊಂದಿಲ್ಲ.

536
00:40:19,280 --> 00:40:21,840
ಸರಿ, ಬೇಗ ಬಾ.

537
00:40:26,520 --> 00:40:27,360
ಬಾ.

538
00:40:28,080 --> 00:40:29,400
ಬೇಗ, ಬಾಗಿಲು ತೆರೆದು ಬಾ.

539
00:40:31,640 --> 00:40:35,240
ಅಪ್ಪ, ನೀವು ನನಗೆ ಏನೂ ಹೇಳಬೇಕಾಗಿಲ್ಲ,
ನನಗೆ ಸ್ವಲ್ಪ ಮಾರ್ಗದರ್ಶನವಷ್ಟೇ ಬೇಕು.

540
00:40:35,960 --> 00:40:37,600
ದಯವಿಟ್ಟು. ದಯವಿಟ್ಟು.

541
00:40:41,800 --> 00:40:43,840
ಡಾಕ್ಟರ್, ಡಾಕ್ಟರ್.

542
00:40:47,040 --> 00:40:48,800
ಸ್ವಲ್ಪ ಸಮಯ ಕೊಡಿ. ತಯಾರಾಗುವೆ.

543
00:40:50,080 --> 00:40:52,480
ದಿನವೆಲ್ಲಾ ಇದರ ಬಗ್ಗೆನೇ ಯೋಚಿಸುತ್ತಿದ್ದೆ.

544
00:40:53,920 --> 00:40:55,880
ನಾನು ಕರೆಯುವವರೆಗೂ ಬರಬೇಡಿ.

545
00:41:00,400 --> 00:41:01,240
ಒಂದು ನಿಮಿಷ.

546
00:41:02,400 --> 00:41:03,240
ಇಲ್ಲ.

547
00:41:05,160 --> 00:41:06,120
ನೀನು ಯಾರಂತ ನನಗೆ ಗೊತ್ತು.

548
00:41:25,320 --> 00:41:26,960
ಹೆಚ್ಚಿನ ವಿವರಣೆ: ಉಸಿರುಗಟ್ಟಿಸಿ ಮೃತರ ಕೊಲೆ.

549
00:41:29,000 --> 00:41:31,080
ಇಮೋಜಿನ್ ಕಾರ್ಸ್‌ವುಡ್ ಕೊಲೆಗಾಗಿ ಶಿಕ್ಷೆ

550
00:41:33,080 --> 00:41:34,320
ಅರ್ಲೋ ಜೋನ್ಸ್‌.

551
00:41:37,080 --> 00:41:38,960
ನಂಬಿಕೆಯ ಮಹಾನ್ ಮೋಸಗಾರ.

552
00:41:39,040 --> 00:41:41,880
ಆದರೆ, "ಪ್ರತೀಕಾರ ನನ್ನದು"
ಅನ್ನುತ್ತಾನೆ ಕರ್ತನು.

553
00:41:41,960 --> 00:41:44,520
"ನನ್ನದು ಮತ್ತು ಅರ್ಲೋ ಜೋನ್ಸ್‌ನದ್ದು!"

554
00:41:55,680 --> 00:41:56,680
ಹೇ, ನೋಡು,

555
00:41:58,160 --> 00:42:01,480
ನೀರಸ, ಎಚ್ಚರಿಸುವ ಜುನಿಪರ್‌ ಕಟ್ಟುಕಥೆಗಳು.

556
00:42:02,120 --> 00:42:04,440
ಮುಂದಿನ ಪೂರ್ತಿ ಸಮಾಲೋಚನೆಯಲ್ಲಿ
ಇದನ್ನೇ ಯಾಕೆ ಓದಬಾರದು?

557
00:42:10,840 --> 00:42:12,160
ನೋಡು,

558
00:42:12,240 --> 00:42:13,160
ದೇವರು ನನ್ನ ಬಳಿಗೆ ಬಂದು,

559
00:42:13,240 --> 00:42:16,080
ಮತ್ತು ಗೊತ್ತಲ್ಲಾ, ಇದೆಲ್ಲಾ ಆಗುತ್ತಿರುವಾಗ
ಅವನೂ ತುಂಬಾ ನಿರತನಾಗಿದ್ದಾನೆ,

560
00:42:16,160 --> 00:42:19,800
ಹಾಗಾಗಿ, ಅವನ ಬದಲು
"ಶಿಕ್ಷೆ ವಿಧಿಸಲು" ನನಗೆ ಹೇಳಿದ.

561
00:42:20,360 --> 00:42:23,240
ನಾನು, "ಸಂತೋಷದಿಂದ" ಅಂದೆ.

562
00:42:23,320 --> 00:42:24,280
ಅಸಲಿಗೆ,

563
00:42:24,960 --> 00:42:28,680
ನಮ್ಮ ಡಾ. ಲ್ಯಾಜರಸ್‌ ತಮ್ಮ ಹೆಸರಿಗೆ ತಕ್ಕಂತೆ

564
00:42:29,160 --> 00:42:30,760
ಸಾವಿನಿಂದ ಎದ್ದು ಬರುತ್ತಾರಾ ನೋಡೋಣ.

565
00:43:14,400 --> 00:43:15,360
ಲ್ಯಾಜರಸ್‌!

566
00:43:19,040 --> 00:43:20,480
ಲ್ಯಾಜರಸ್‌!

567
00:43:22,280 --> 00:43:23,560
ನೀನು ಏನು ಅಂತ ನನಗೆ ಗೊತ್ತು!

568
00:43:23,960 --> 00:43:26,200
-ಬೇಗ!
-ಮತ್ತು ಇದಿನ್ನೂ ಮುಗಿದಿಲ್ಲ!

569
00:43:28,120 --> 00:43:29,360
ಕರೆ…
ಕೆಲಸದ ಸ್ಥಳ

570
00:43:29,800 --> 00:43:30,640
ಲ್ಯಾಜರಸ್‌!

571
00:43:32,160 --> 00:43:34,000
-ಹಲೋ?
-ನಾನು ಜೋಲ್ ಲ್ಯಾಜರಸ್‌.

572
00:43:34,080 --> 00:43:37,360
-ನಮಸ್ಕಾರ, ಡಾ. ಲ್ಯಾಜರಸ್‌.
-ಹೂಂ, ಇಲ್ಲ, ಕೇಳಿ, ಕೇಳಿ, ಕೇಳಿ.

573
00:43:37,440 --> 00:43:40,440
-…ತುಂಬಾ ಸಮಯ ಆಯಿತು.
-ಅರ್ಲೋ ಜೋನ್ಸ್‌. ಬಾಯಿ ಮುಚ್ಚಿ!

574
00:43:40,920 --> 00:43:43,480
ನೀವು ಈಗಲೇ ಅರ್ಲೋ ಜೋನ್ಸ್ ಕೋಣೆಗೆ ಹೋಗಿ

575
00:43:43,840 --> 00:43:45,400
ಅವನು ಅಲ್ಲಿದ್ದಾನಾ ಅಂತ ನನಗೆ ಹೇಳಿ.

576
00:43:45,480 --> 00:43:46,680
ಅವನು ಬದುಕಿದ್ದಾನಾ?

577
00:43:48,720 --> 00:43:50,800
ಸುರಕ್ಷಿತ ಮನೋವೈದ್ಯಕೀಯ ಘಟಕ

578
00:44:08,080 --> 00:44:12,080
ಇದಿನ್ನೂ ಮುಗಿದಿಲ್ಲ.

579
00:44:12,160 --> 00:44:14,600
ಇದು ವಾಕ್ಯದ ಅಂತ್ಯದಂತೆ ಕಾಣುತ್ತಿದೆ.
ಆರಂಭದಂತೆ ಅಲ್ಲ.

580
00:44:15,760 --> 00:44:16,880
ಹಾಗಾಗಿ, ಬಹುಶಃ…

581
00:44:18,160 --> 00:44:19,480
ಮೊದಲನೇ ಪುಟ ಇರಬಹುದಾ?

582
00:44:21,280 --> 00:44:25,200
ನನ್ನ ಪ್ರೀತಿಯ ಜೋಲ್ ಮತ್ತು ಜೆನ್ನಾ ಅವರಿಗೆ

583
00:45:33,360 --> 00:45:35,360
ಉಪ ಶೀರ್ಷಿಕೆ ಅನುವಾದ: ಅನುರಾಧ

