1
00:00:11,971 --> 00:00:14,181
ದಿ ಸಮ್ಮರ್ ಐ ಟರ್ನ್ಡ್ ಪ್ರಿಟ್ಟಿಯಲ್ಲಿ
ಈ ಹಿಂದೆ

2
00:00:14,265 --> 00:00:17,351
ಫಿಂಚ್ ಒಳ್ಳೆಯ ಶಾಲೆ, ಹಾಗಾಗಿ ಅದಕ್ಕೆ
ಅರ್ಜಿ ಸಲ್ಲಿಸಿದೆ ಅಂತ ಎಲ್ಲರಿಗೂ ಹೇಳಿದೆ.

3
00:00:17,435 --> 00:00:20,980
ಆದರೆ ಅದಕ್ಕೂ ಹೆಚ್ಚು ನಿಜವೆಂದರೆ,
ನನಗೆ ಅವನ ಹತ್ತಿರ ಇರಬೇಕಿತ್ತು.

4
00:00:21,063 --> 00:00:22,106
ಈಗ, ಮೂರು ವರ್ಷ ಕಳೆದಿದೆ.

5
00:00:22,189 --> 00:00:24,734
ನಾವು ಇದೆಲ್ಲಾ ಜೀವನಪೂರ್ತಿ ಮಾಡುತ್ತೇವೆ.

6
00:00:24,817 --> 00:00:27,111
-ನನಗೆ ವಿದೇಶ ಅಧ್ಯಯನ ಸಿಕ್ಕಿತು!
-ಪ್ಯಾರಿಸ್‌ನಲ್ಲಾ?

7
00:00:27,194 --> 00:00:30,114
ಸಮರ್ಪಣಾ ಸಮಾರಂಭಕ್ಕೆ
ನೀನು, ಕೊನ್ರಾಡ್ ಭಾಷಣ ತಯಾರಿ ಮಾಡಿದ್ದೀರಾ?

8
00:00:30,197 --> 00:00:32,783
ಸುಸಾನ್ನಾಳ ಸ್ಮಾರಕ ಉದ್ಯಾನ ನೋಡಲು
ಕಸಿನ್ಸ್‌ನ ಅರ್ಧ ಜನರು ಬರುತ್ತಿದ್ದಾರೆ.

9
00:00:32,867 --> 00:00:36,287
ಕ್ಯಾಪ್ ಮತ್ತು ಗೌನ್ ತರಲು ಹೋಗಿದ್ದೆ, ಆದರೆ ನನ್ನ
ಹೆಸರು ಪಟ್ಟಿಯಲ್ಲಿಲ್ಲ. ನಾನು ಪದವಿ ಪಡೆಯಲ್ಲ.

10
00:00:36,370 --> 00:00:39,498
ನಾವಿಬ್ಬರೂ ಮತ್ತೆ ಮತ್ತೆ ಒಂದಾಗೋದಕ್ಕೆ,
ಇದು ಎಂದೂ ಮುಗಿದಂತೆ ಅನ್ನಿಸೋದೇ ಇಲ್ಲ.

11
00:00:39,582 --> 00:00:41,208
ಆ ಬೇಸಿಗೆ ಕ್ಲಿನಿಕ್ ಕೆಲಸ ನನಗೆ ಸಿಕ್ಕಿತು.

12
00:00:41,292 --> 00:00:42,877
-ನಿನಗೆ ಎಂದಾದರೂ ಪ್ರೀತಿ ಆಗಿದೆಯಾ?
-ಒಮ್ಮೆ.

13
00:00:42,960 --> 00:00:44,253
ಮತ್ತೆ, ಅವಳ ಹೆಸರು ಏನು?

14
00:00:44,336 --> 00:00:46,422
-ಬೆಲ್ಲಿ.
-ಇರು, ನಿನ್ನ ತಮ್ಮನ ಪ್ರೇಯಸಿನಾ?

15
00:00:46,505 --> 00:00:50,718
ಹೇ, ಜೆರ್. ಕೇಳು, ನಾನು ಸಮರ್ಪಣೆ ಸಮಾರಂಭಕ್ಕೆ
ಬರಲು ಆಗಲ್ಲ.

16
00:00:50,801 --> 00:00:53,679
ಕ್ಯಾಬೊದಲ್ಲಿ ನಡೆದದ್ದು
ಕ್ಯಾಬೊದಲ್ಲಿಯೇ ಉಳಿಯಬೇಕು.

17
00:00:53,763 --> 00:00:55,890
ವಸಂತ ರಜೆಯ ಸಮಯದಲ್ಲಿ ನೀನು
ಲೇಸಿ ಬರೋನ್ ಜೊತೆ ಸರಸ ಮಾಡಿದೆಯಾ?

18
00:00:55,973 --> 00:00:57,641
-ಛೇ.
-ಅದೆಲ್ಲಾ ಆಗಿದ್ದು ನಾವು ದೂರ ಆಗಿದ್ದಾಗ.

19
00:00:57,725 --> 00:00:58,893
ನನಗದು ದೊಡ್ಡ ವಿಷಯ ಆಗಿರಲಿಲ್ಲ.

20
00:00:58,976 --> 00:01:00,603
-ನನಗದು ದೊಡ್ಡ ವಿಷಯ!
-ನಿನ್ನ ಮೇಲಾಣೆ!

21
00:01:00,686 --> 00:01:01,979
ನೀನು ಎಲ್ಲವನ್ನೂ ಹಾಳು ಮಾಡಿದೆ!

22
00:01:07,568 --> 00:01:10,988
ದಿ ಸಮ್ಮರ್
ಐ ಟರ್ನ್ಡ್ ಪ್ರಿಟ್ಟಿ

23
00:01:20,581 --> 00:01:22,333
ಬೆಲ್ಸ್, ಕಾಫಿ ಕುಡಿದು ಬರೋಣ್ವಾ?

24
00:01:22,875 --> 00:01:27,922
ಮಾಧ್ಯಮ ನೀತಿಶಾಸ್ತ್ರದ ಮಧ್ಯಂತರ ಪರೀಕ್ಷೆಯಲ್ಲಿ
ಕನಿಷ್ಟ ಬಿ ಸಿಗಬೇಕು

25
00:01:28,005 --> 00:01:29,840
ಇಲ್ಲದಿದ್ದರೆ ಎಲ್ಲವೂ ಹಾಳಾಗುತ್ತೆ ಅಂದಿದ್ದೆ.

26
00:01:31,133 --> 00:01:33,052
ಸರಿ. ನೀನು ಮಜಾನೇ ಇಲ್ಲ.

27
00:01:37,431 --> 00:01:38,766
ಇರು. ಇದೇನಿದು?

28
00:01:39,600 --> 00:01:43,729
"ಕ್ಯಾಬೊಗೆ ಪ್ರಮುಖ ವಿಮಾನ ನವೀಕರಣ"?
ನೀನು ಯಾವಾಗ ಕ್ಯಾಬೊಗೆ ಹೋಗುತ್ತಿರುವೆ?

29
00:01:44,480 --> 00:01:47,191
ಹೂಂ, ಕೊನೆ ಕ್ಷಣದಲ್ಲಿ
ಟಿಕೆಟ್ ಮಾಡಿದೆ ಅಂತ ಹೇಳಿದೆನಲ್ಲಾ?

30
00:01:47,858 --> 00:01:50,611
ನೀನು ಮೆಕ್ಸಿಕೋಗೆ ಹೋಗುತ್ತಿದ್ದೀಯ
ಅಂದಿದ್ದರೆ ನನಗೆ ನೆನಪಿರುತ್ತಿತ್ತು.

31
00:01:50,694 --> 00:01:54,698
ಬೆಲ್ಸ್, ಇದು ನನ್ನ ಕೊನೆಯ ವಸಂತ ರಜೆ.
ಮತ್ತು ನೀನು ಫಿಲ್ಲಿಯಲ್ಲಿ ಇರುತ್ತೀಯ. ಹಾಗಾಗಿ…

32
00:01:54,782 --> 00:01:57,034
ಹೂಂ, ಆದರೆ ಕಸಿನ್ಸ್‌ನಲ್ಲಿ
ಭೇಟಿಯಾಗಬಹುದು ಅಂತ ನಿರ್ಧರಿಸಿದ್ದೆವು.

33
00:01:57,117 --> 00:01:59,662
ಮತ್ತು ನೀನು ನಿನ್ನ ಅಪ್ಪನ ಜೊತೆ
ಹೆಚ್ಚು ಸಮಯ ಕಳೆಯಲಿರುವೆ ಅಂದುಕೊಂಡೆ.

34
00:02:00,204 --> 00:02:03,749
ಸರಿ. ಅಪ್ಪನ ಬಗ್ಗೆ ತಪ್ಪಿತಸ್ಥ ಭಾವನೆ ಮೂಡಿಸಬೇಡ.
ಕೊನೆಯ ವಾರಾಂತ್ಯ ತಾನೇ ಅವರನ್ನು ಭೇಟಿ ಮಾಡಿದೆ.

35
00:02:04,625 --> 00:02:08,420
ನಿಮ್ಮ ನಡುವೆ ಏನಾದರೂ ಆಯಿತಾ?
ಆಗಿನಿಂದ ಸ್ವಲ್ಪ ಬೇಜಾರಿನಲ್ಲಿರುವೆ.

36
00:02:09,713 --> 00:02:12,508
ನನ್ನ ಸತ್ತ ತಾಯಿಯ ಸಮಾಧಿಗೆ
ಭೇಟಿ ನೀಡುವುದಕ್ಕಿಂತ ಕೆಟ್ಟದ್ದೇನೂ ಆಗಿಲ್ಲ.

37
00:02:12,591 --> 00:02:17,304
ಹೇ. ಸರಿ. ಅದು ಸರಿಯಲ್ಲ. ನೀನು ಸ್ವಲ್ಪ
ಸ್ವಾರ್ಥಿ ಆಗುತ್ತಿದ್ದೀಯ ಅನಿಸುತ್ತೆ.

38
00:02:19,139 --> 00:02:23,686
ಸರಿ. ಕ್ಷಮಿಸು. ನನ್ನ ತಲೆ ತಿನ್ನೋದು ಬಿಡು.
ನಿನಗೆ ಕ್ಯಾಬೊಗೆ ಬರಬೇಕೆಂದರೆ, ಬಾ.

39
00:02:23,769 --> 00:02:25,855
ಇಲ್ಲ. ನಿನ್ನ ಹುಡುಗರ ಪ್ರವಾಸದಲ್ಲಿ ನಾನು ಬರಲ್ಲ.

40
00:02:25,938 --> 00:02:27,815
ಹುಡುಗರು ಮಾತ್ರ ಅಲ್ಲ.
ಸಂಸ್ಥೆಯ ಹುಡುಗಿಯರೂ ಬರುತ್ತಾರೆ.

41
00:02:28,399 --> 00:02:31,402
ಅಂದರೆ ಹುಡುಗಿಯರನ್ನು ಕರೆದಿದ್ದೀರ.
ಪ್ರೇಯಸಿಯರನ್ನಲ್ಲ. ಸರಿ.

42
00:02:31,485 --> 00:02:34,738
ನೋಡು, ನೀನು ಅದೆಂತಹ
ಕುಡುಕ ಕುಣಿತ ನಿರೀಕ್ಷಿಸುತ್ತಿದ್ದೀಯೋ

43
00:02:34,822 --> 00:02:37,032
-ಅದರಲ್ಲಿ ನನಗೆ ಆಸಕ್ತಿ ಇಲ್ಲ.
-ಹಾಗಲ್ಲ.

44
00:02:37,116 --> 00:02:39,493
-ಮತ್ತೇನು?
-ನಿನಗೇನಾಗಿದೆ ಈಗ?

45
00:02:39,577 --> 00:02:41,620
ನೀನು ಹೋಗುತ್ತಿರೋದೂ ಹೇಳಿಲ್ಲ ನೀನು.

46
00:02:41,704 --> 00:02:43,956
ನಿನಗೆ ಸಂಸ್ಥೆಯವರೊಂದಿಗೆ
ನಾನೇನು ಮಾಡಿದರೂ ಹಿಡಿಸಲ್ಲ, ಅದಕ್ಕೇ.

47
00:02:44,039 --> 00:02:45,332
ನಾನು ಯಾವಾಗ ಹಾಗೆ ಹೇಳಿದೆ?

48
00:02:45,416 --> 00:02:47,293
ಹೇಳಬೇಕಿಲ್ಲ. ಮಾಡೋದು ನೋಡಿದರೆ ಗೊತ್ತಾಗುತ್ತೆ,

49
00:02:47,376 --> 00:02:50,212
ಮಧ್ಯಂತರ ಪರೀಕ್ಷೆಯಲ್ಲಿ ಫೇಲಾಗೋ
ಮೂರ್ಖ ನಾನು, ಕ್ಷಮಿಸು.

50
00:02:50,296 --> 00:02:52,089
ವಸಂತ ರಜೆಯಲ್ಲಿ ಮಜಾ ಮಾಡಬೇಕು
ಅಂದುಕೊಂಡೆ, ಕ್ಷಮಿಸು.

51
00:02:52,172 --> 00:02:54,133
ನೇರವಾಗಿ ಅಗ್ರ ಶ್ರೇಣಿಯಲ್ಲಿ ಪಾಸಾಗಿ
ವೈದ್ಯಕೀಯ ಮಾಡುತ್ತಿರೊ

52
00:02:54,216 --> 00:02:55,843
ಕೊನ್ರಾಡ್ ಥರ ಹುಡುಗ ಅಲ್ಲ ನಾನು, ಕ್ಷಮಿಸು.

53
00:02:55,926 --> 00:03:00,014
ದೇವರೇ, ಏನು?
ನಿನ್ನ ಕೀಳರಿಮೆಗೆ ನನ್ನನ್ನು ದೂಷಿಸಬೇಡ.

54
00:03:01,140 --> 00:03:02,600
-ಏಳಯಿಂದ ಬಂತೋ ಅದು?
-ಹೂಂ,

55
00:03:02,683 --> 00:03:05,227
ನನ್ನಿಂದಂತೂ ಅಲ್ಲ, ನಿನ್ನ ಅಪ್ಪನಿಂದ ಇರಬಹುದು.

56
00:03:05,311 --> 00:03:08,522
ವಾಹ್. ಸರಿ, ನಿನಗೆ ನಾನು ಅಷ್ಟು ಮೂರ್ಖ
ಮತ್ತು ಸ್ವಾರ್ಥಿ ಅನಿಸುತ್ತೆಂದರೆ

57
00:03:08,606 --> 00:03:11,775
ನನ್ನ ಜೊತೆ ಯಾಕೆ ಇದ್ದೀಯ?
ಸಾಯಲಿ. ನಾನು ನಿನ್ನ ಸಮಯ ವ್ಯರ್ಥ ಮಾಡಲ್ಲ.

58
00:03:11,859 --> 00:03:13,319
ಏನೇನೋ ಮಾತಾಡಬೇಡ.

59
00:03:13,402 --> 00:03:16,864
ನಿನ್ನ ಪ್ರಕಾರ ನಾನು ಯಾವಾಗಲೂ ಏನೇನೋ ಮಾತಾಡೋದು.
ಸಾಕಾಗಿದೆ! ನಮ್ಮ ಸಂಬಂಧ ಇಲ್ಲಿಗೆ ಮುಗಿಯಿತು.

60
00:03:17,489 --> 00:03:19,491
-ನಿಜವಾಗಲೂ?
-ನಿಜವಾಗಲೂ.

61
00:03:19,575 --> 00:03:21,577
-ಸರಿ, ಸರಿ. ನಿನಗೆ ಹಾಗೆ ಅನಿಸುತ್ತೆಂದರೆ--
-ಹೌದು.

62
00:03:21,660 --> 00:03:23,495
-ಒಳ್ಳೆಯದು! ಸರಿ, ಅದ್ಭುತ! ಬಾಯ್.
-ಬಾಯ್!

63
00:03:26,790 --> 00:03:30,294
ನಾನು ವಸಂತ ರಜೆಗೆ ಮನೆಗೆ ಹೋಗಿದ್ದೆ,
ಮತ್ತು ನಾವು ಇನ್ನೂ ಮಾತಾಡಿರಲಿಲ್ಲ.

64
00:03:32,713 --> 00:03:36,008
ಐದು ದಿನಗಳು ಕಳೆದಿವೆ, ಅವನು ಇನ್ನೂ ನನಗೆ
ಸಂದೇಶ ಕಳಿಸಿಲ್ಲ ಅಂತ ನಂಬಲು ಆಗುತ್ತಿಲ್ಲ.

65
00:03:36,091 --> 00:03:38,761
ನೀನೂ ಅವನಿಗೆ ಸಂದೇಶ ಕಳಿಸಿಲ್ಲ, ಅಲ್ವಾ?

66
00:03:38,844 --> 00:03:41,764
ಹೂಂ, ಆದರೆ ಸುಮ್ಮನೆ ಜಗಳ ಶುರು ಮಾಡಿದ್ದು ಅವನು.

67
00:03:42,514 --> 00:03:45,476
ನನ್ನ ಜೊತೆ ಒಂದೆರಡು ದಿನ
ನೀನೂ ನ್ಯೂಯಾರ್ಕ್‌ಗೆ ಬಾ.

68
00:03:45,559 --> 00:03:48,437
ನನ್ನ ಸಂದರ್ಶನ ಮುಗಿದ ನಂತರ
ಸ್ವಲ್ಪ ಊರು ಸುತ್ತೋಣ.

69
00:03:48,520 --> 00:03:51,231
-ನನಗೆ ಬೇಜಾರಾಗಿದೆ.
-ಇನ್ಸ್ಟಾಗ್ರಾಂ ನೋಡಿದ್ದು ಸಾಕು!

70
00:03:51,732 --> 00:03:54,068
ಏನಾಯಿತು ಅಂತ ನನಗೆ ಇನ್ನೂ ಗೊತ್ತಿಲ್ಲ.

71
00:03:54,151 --> 00:03:55,152
ತೋರಿಸು.

72
00:03:56,278 --> 00:03:58,322
-ಸರಿ, ನಾನು ಹೊರಡುತ್ತಿರುವೆ!
-ಬಾಯ್, ಅಮ್ಮ!

73
00:03:58,781 --> 00:03:59,782
ಕ್ಯಾಬೋದಲ್ಲಿ ನಡೆದದ್ದು

74
00:03:59,865 --> 00:04:02,534
ಒಳ್ಳೆಯ ಸುದ್ದಿ ಏನೆಂದರೆ ಅವನು
ನೊಂದು ನೀರಾಗಿರುವಂತೆ ಕಾಣುತ್ತಾನೆ.

75
00:04:03,160 --> 00:04:05,746
ಅಂದರೆ, ಅವನಿಗೆ ಅವನ ಅಂಕಗಳ ಬಗ್ಗೆ
ಬೇಜಾರಿದೆ ಅಂತ ಗೊತ್ತಿತ್ತು, ಆದರೆ ನಾನು…

76
00:04:05,829 --> 00:04:09,083
ಈ ಗೀಳು ಸಾಕು. ಏನಾಗುತ್ತಿದೆ ಅಂತ ನಿನಗೆ
ಗೊತ್ತಾಗಬೇಕೆಂದರೆ ಅವನನ್ನೇ ಕೇಳು.

77
00:04:09,166 --> 00:04:12,002
-ಹೌದು, ಆದರೆ ಅವನೇ--
-ಅವನು ವಾಪಸ್ ಬಂದಾಗ ಅವನ ಜೊತೆ ಮಾತಾಡು.

78
00:04:12,086 --> 00:04:14,922
ಹುಡುಗರು ನಾಯಿಗಳಂತೆ.
ತಪ್ಪು ಮಾಡಿದಾಗ ಅಡಗಿಕೊಳ್ಳುತ್ತಾರೆ,

79
00:04:15,005 --> 00:04:18,384
ಮತ್ತು ಜಗತ್ತಿನ ಅತ್ಯುತ್ತಮ ಪ್ರೇಮಿಗಳೂ ಕೂಡ
ಕೆಲವೊಮ್ಮೆ ಕೆಟ್ಟದಾಗಿ ವರ್ತಿಸುತ್ತಾರೆ.

80
00:04:18,467 --> 00:04:21,178
ಅವನಿಗೆ ಅದರ ಬಗ್ಗೆ ಬೇಜಾರಿದೆ ಅಂತ
ನಿನಗೂ ಗೊತ್ತು. ಅವನು ಜೆರ್ ಕಣೇ.

81
00:04:21,261 --> 00:04:23,889
ನೀನು ಅವನ ಗಾಳಿ.
ನೀನಿಲ್ಲದೆ ಅವನು ಉಸಿರಾಡಲೂ ಆಗಲ್ಲ.

82
00:04:29,603 --> 00:04:31,438
ಟೇಲರ್ ಹೇಳಿದ್ದು ಸರಿ ಅಂತ
ನಿಜಕ್ಕೂ ಅಂದುಕೊಂಡಿದ್ದೆ,

83
00:04:32,523 --> 00:04:35,526
ಹಾಗಾಗಿ, ನಾವು ಕಾಲೇಜಿಗೆ ವಾಪಸಾದಾಗ,
ನಾನು ಅವನನ್ನು ನೋಡಲು ಹೋಗಿದ್ದೆ.

84
00:04:36,193 --> 00:04:38,278
ನೀನು ನಿಜಕ್ಕೂ ನನ್ನ ಜೊತೆ
ಮಾತಾಡಲು ಬರುತ್ತಿರಲಿಲ್ವಾ?

85
00:04:38,362 --> 00:04:40,698
ಅಂದರೆ, ನೀನು ಜಗಳವಾಡಿ
ಬಾಗಿಲಿನಿಂದ ಹೊರಗೆ ನಡೆದೆ,

86
00:04:40,781 --> 00:04:44,201
-ಒಂದು ವಾರ ಮಾತೂ ಆಡಲಿಲ್ಲ.
-ನಾನು ಬೇವರ್ಸಿ, ಬೆಲ್ಲಿ.

87
00:04:44,284 --> 00:04:46,286
ನಾನು ತಪ್ಪು ಮಾಡಿದೆ, ದೊಡ್ಡ ತಪ್ಪು ಮಾಡಿದೆ.

88
00:04:46,370 --> 00:04:48,122
ಹೇ. ಇಲ್ಲ. ಪರವಾಗಿಲ್ಲ.

89
00:04:50,666 --> 00:04:53,085
ಇಲ್ಲ. ಇಲ್ಲ, ಇದು ಸರಿ ಅಲ್ಲ.

90
00:04:53,168 --> 00:04:55,879
ನನ್ನ ವಾರ ಕೆಟ್ಟದಾಗಿತ್ತು,
ಆ ಕೋಪ ನಾನು ನಿನ್ನ ಮೇಲೆ ತೋರಿದೆ.

91
00:04:57,047 --> 00:04:58,757
ಕ್ಷಮಿಸು. ನನ್ನನ್ನು ಕ್ಷಮಿಸು, ಬೆಲ್ಲಿ.

92
00:04:59,341 --> 00:05:04,221
ನೋಡು, ನಾವು ಜಗಳವಾಡಿದೆವು.
ಇದು ಪ್ರಪಂಚದ ಅಂತ್ಯವಲ್ಲ.

93
00:05:07,016 --> 00:05:08,225
ಅಂದರೆ…

94
00:05:09,143 --> 00:05:10,853
ಅಂದರೆ ನೀನು ಮತ್ತೆ ನನ್ನ ಜೊತೆಯಾಗುವೆಯಾ?

95
00:05:12,688 --> 00:05:14,523
ನಾವು ಎಂದೂ ಬೇರೆ ಆಗಲಿಲ್ಲ.

96
00:05:19,445 --> 00:05:22,614
ಬೆಲ್ಲಿ, ನಾನು ಕ್ಯಾಬೊದಲ್ಲಿದ್ದಾಗ…

97
00:05:24,324 --> 00:05:25,242
ನಾನಂದುಕೊಂಡೆ…

98
00:05:25,325 --> 00:05:26,785
-ಹೇ.
-ನಾವಿಬ್ಬರೂ…

99
00:05:34,293 --> 00:05:36,837
ಇಷ್ಟು ಚಿಕ್ಕ ವಿಷಯಕ್ಕೆ ನಿನ್ನ
ಕಳೆದುಕೊಳ್ಳುತ್ತಿದ್ದೆ ಅಂತ ನಂಬಲಾಗುತ್ತಿಲ್ಲ.

100
00:05:39,590 --> 00:05:40,841
ನೀನು ನನ್ನನ್ನ ಎಂದೂ ಕಳೆದುಕೊಳ್ಳಲ್ಲ.

101
00:05:51,560 --> 00:05:55,230
ಇದನ್ನು ನಿನಗಾಗಿ ತಂದೆ. ಕಡಲತೀರದಲ್ಲಿದ್ದೆ.
ನಿನ್ನ ನೆನೆಪಾಗುತ್ತಿತ್ತು.

102
00:05:55,314 --> 00:05:57,733
ನಾವು ಮತ್ತೆ ಮಾತಾಡುತ್ತೇವಾ
ಅಂತಲೂ ಗೊತ್ತಿರಲಿಲ್ಲ.

103
00:05:57,816 --> 00:05:58,901
ಅಷ್ಟೇನೂ ಚೆನ್ನಾಗಿಲ್ಲ.

104
00:05:58,984 --> 00:06:01,945
-ನೀನಿದನ್ನು ಹಾಕಿಕೊಳ್ಳಬೇಕಿಲ್ಲ.
-ಇಲ್ಲ. ನನಗೆ ತುಂಬಾ ಇಷ್ಟ ಆಯಿತು.

105
00:06:05,616 --> 00:06:06,617
ಐ ಲವ್ ಯು.

106
00:06:22,841 --> 00:06:24,551
ಅರ್ಥವಿಲ್ಲದ್ದು!

107
00:06:32,101 --> 00:06:35,229
ಏನ್ ಮಾಡ್ಬೇಕಂತ ಹೇಳು?
ನಾನ್ ನನ್ನೇ ದ್ವೇಷಿಸ್ತೀನಿ, ಐ ಆ್ಯಮ್ ಸಾರಿ."

108
00:06:50,828 --> 00:06:51,912
ಟೇಲರ್ ಬಂದಿದ್ದಾಳೆ.

109
00:06:52,454 --> 00:06:54,039
-ನಾನು ಮಲಗಿದ್ದೇನೆ.
-ಅರ್ಥ ಆಯಿತು.

110
00:06:59,211 --> 00:07:00,212
ಅವಳು ಮಲಗಿದ್ದಾಳೆ.

111
00:07:00,796 --> 00:07:03,465
-ಅವಳ ಜೊತೆ ಮಾತಾಡಬೇಕಷ್ಟೇ.
-ಅವಳು ಈಗ ವಿಶ್ರಾಂತಿ ಪಡೆಯಬೇಕು ಅನಿಸುತ್ತೆ.

112
00:07:05,467 --> 00:07:07,886
ಸರಿ. ಇದು ಉಪಾಹಾರದ ಬರ್ರಿಟೋ.

113
00:07:07,970 --> 00:07:11,390
ಅವಳಿಗೆ ಇಷ್ಟವಾಗುವಂತೆ, ಗರಿಗರಿಯಾದ ಬೇಕನ್ ಜೊತೆ.
ಅವಳಿಗೆ ಏನಾದರೂ ತಿನ್ನಿಸು.

114
00:07:11,473 --> 00:07:14,309
ಸರಿ. ಬಾಯ್.

115
00:07:20,649 --> 00:07:24,444
ಬೆಲ್ಲಿ, ನನ್ನಾಣೆ.
ನನಗೆ ಲೇಸಿ ಬಗ್ಗೆ ಗೊತ್ತಿರಲಿಲ್ಲ.

116
00:07:24,528 --> 00:07:27,030
ನಿನಗಾಗಿ ನಾನು
ಅವರಿಬ್ಬರನ್ನೂ ಕೊಂದಿರುತ್ತಿದ್ದೆ. ಸರಿನಾ?

117
00:07:27,114 --> 00:07:29,616
ದಯವಿಟ್ಟು ನನಗೆ ಮರಳಿ ಕರೆ ಮಾಡು.
ಅಂದರೆ, ಮರಳಿ ಕರೆ ಮಾಡು.

118
00:07:30,617 --> 00:07:32,786
-ಇಲ್ಲ, ನಾನಾಗಿದ್ದರೆ ಹತ್ತಿರ ಹೋಗುತ್ತಿರಲಿಲ್ಲ…
-ಟೇ--

119
00:07:32,870 --> 00:07:35,455
-…ಸಾಮಾನು ಭದ್ರವಾಗಿರಬೇಕೆಂದರೆ.
-ಹೇಗಿದ್ದಾಳೆ ಹೇಳು.

120
00:07:35,539 --> 00:07:37,291
ಗೊತ್ತಿಲ್ಲ. ಅವಳು ನನ್ನ ಜೊತೆನೂ ಮಾತಾಡುತ್ತಿಲ್ಲ.

121
00:07:37,374 --> 00:07:41,378
ನಿನ್ನ ಮಿಂಡಿ ನನ್ನ ಸಂಸ್ಥೆಯಲ್ಲೇ ಇರೋದು.
ಹಾಗಾಗಿ ನಾನೂ ಇದರಲ್ಲಿ ಭಾಗಿ ಅಂದುಕೊಂಡಿದ್ದಾಳೆ.

122
00:07:41,461 --> 00:07:43,839
-ಟೇಲರ್. ನನ್ನ ಮಾತು ಕೇಳು.
-ಇಲ್ಲ, ನಾನು ಯಾವಾಗಲೂ ನಿನ್ನ ಪರ ಇದ್ದೆ.

123
00:07:43,922 --> 00:07:46,133
ನಾನು ಜೆರೆಮಾಯಾ ತಂಡಕ್ಕಾಗಿ ಹೋರಾಡಿದವಳು.

124
00:07:46,216 --> 00:07:48,719
ನೀನು ಅವಳಿಗೆ ಹೀಗೆ ಮೋಸ ಮಾಡೋ ಬೇವರ್ಸಿ
ಅಂತ ನನಗೆ ಗೊತ್ತಿರಲಿಲ್ಲ!

125
00:07:48,802 --> 00:07:50,971
-ಇದು ಹುಚ್ಚುತನ!
-ನಾನು ಮೋಸ ಮಾಡಲಿಲ್ಲ. ನಮ್ಮ ಸಂಬಂಧ ಮುರಿದಿತ್ತು.

126
00:07:51,054 --> 00:07:55,142
ಇಲ್ಲ. ಅದು ಕಟ್ಟುಕತೆ.
ನೀನು ನೆಪ ಹೇಳಿ ಇದರಿಂದ ತಪ್ಪಿಸಿಕೊಳ್ಳಲು ಆಗಲ್ಲ.

127
00:07:55,225 --> 00:07:58,103
ಎರಡು ನಿಮಿಷ ಬೇರೆ ಆಗಿದ್ದಿರಿ ನೀವು, ಜೆರೆಮಾಯಾ.

128
00:07:58,187 --> 00:08:01,899
ಆಮೇಲೆ ಆ ದರಿದ್ರ ಎರಡು ಕಾಸಿನ
ಬ್ರೇಸ್ಲೆಟ್ ಕೊಟ್ಟು ಅವಳನ್ನು ಒಲಿಸಿಕೊಂಡೆ.

129
00:08:01,982 --> 00:08:04,359
eನು ಮಾಡುತ್ತಿದ್ದೀಯಾ ನೀನು?
ಏನುು ಯೋಚಿಸುತ್ತಿದ್ದೆ?

130
00:08:04,443 --> 00:08:06,486
-ನಿನಗೆ ಮೋಸಗಳ ಬಗ್ಗೆ ಚೆನ್ನಾಗಿ ಗೊತ್ತಲ್ವಾ?
-ಏನು?

131
00:08:06,570 --> 00:08:09,239
ಕೇಳಿತು, ತಾನೇ?
ಡೇವಿಸ್ ಮತ್ತು ಮಿಯಾ ಹೇಗಿದ್ದಾರೆ?

132
00:08:09,990 --> 00:08:14,244
ನನ್ನ ಕಡೆ ತಿರುಗಿಸಬೇಡ.
ನೀನು ಆದರ್ಶವಾಗಬೇಕಿತ್ತು.

133
00:08:14,328 --> 00:08:18,707
ನೀನು ಅವಳಿಗೆ ಅರ್ಹನಾಗಬೇಕಿತ್ತು. ನೀನು ಆಗಲಿಲ್ಲ.
ನೀನು ಅರ್ಹ ಇರಲೂ ಇಲ್ಲ ಅನಿಸುತ್ತೆ.

134
00:08:21,168 --> 00:08:22,211
ಇಲ್ಲಿಂದ ಸುಮ್ಮನೆ ಹೋಗುವೆಯಾ?

135
00:08:28,550 --> 00:08:29,468
ಸ್ಟೀವನ್

136
00:08:33,513 --> 00:08:35,390
ಹೇ, ನಾನು ಟೇಲರ್. ನಿಮ್ಮ ಸಂದೇಶ ಬಿಡಿ.

137
00:08:38,185 --> 00:08:40,395
ಆಡಮ್ ನಿನ್ನನ್ನೂ ಈ ಸಭೆಗೆ ಕರೆದನಾ, ಹಾಂ?

138
00:08:41,271 --> 00:08:44,524
ಹಾಂ. ಹೂಂ. ರವಿವಾರ ಕಳೆಯಲು ಎಂತಹ ಮಜವಾದ ರೀತಿ.

139
00:08:44,608 --> 00:08:46,902
ದೊಡ್ಡವರು ಮಾತಾಡುತ್ತಿರುವಾಗ
ಹಿಂದೆ ಕೂತು ಕೇಳೋದು.

140
00:08:46,985 --> 00:08:49,363
ನಾನು ಶುಕ್ರವಾರ ಕಳಿಸಿದ ಫೈಲ್ ಓದಿದೆಯಾ?

141
00:08:50,614 --> 00:08:55,244
-ಹೌದು. ಹೌದು. ಹಾಂ. ಹಾಂ. ಹೌದು.
-ಅಂದರೆ, ಅದು ಸ್ಟಾರ್ಕೆಡ್ ಎಕ್ಸ್ ಅಂತ ನೋಡಿದೆಯಾ?

142
00:08:56,495 --> 00:08:58,497
ಸ್ಟಾರ್ಕೆಡ್ ಎಕ್ಸ್, ಗೇಮಿಂಗ್ ಸ್ಟಾರ್ಟ್-ಅಪ್?

143
00:08:58,580 --> 00:09:00,415
ದೇವರೇ. ನೀನು ಗೇಮರ್ ಅಂತ ನನಗೆ ಗೊತ್ತಿತ್ತು.

144
00:09:00,499 --> 00:09:02,459
ಯಪ್ಪಾ. ಸ್ವಲ್ಪವಾದರೂ
ಪುಸ್ತಕದ ಹುಳುಗಿಂತ ಭಿನ್ನವಾಗಿರು.

145
00:09:02,542 --> 00:09:05,921
ಸರಿ, ಇಲ್ಲ. ಇಲ್ಲ, ಸಮಾಧಾನ. ಸರಿನಾ?
ನಾನು ಅದನ್ನು ಪ್ರೊಗ್ರಾಂ ಮಾಡುತ್ತಿದ್ದೆ.

146
00:09:06,004 --> 00:09:08,048
ಪ್ರಿನ್ಸ್‌ಟನ್‌ನಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್.

147
00:09:08,131 --> 00:09:10,509
-ನೆನಪಿದೆಯಾ?
-ಸರಿ. ಹೌದು, ಅದನ್ನು ಹೇಗೆ ಮರೆಯಲಿ?

148
00:09:10,592 --> 00:09:12,678
ಅದು ನಿನ್ನ ಇಮೇಲ್ ಸಹಿಯಲ್ಲಿದೆ.

149
00:09:13,720 --> 00:09:15,180
ನೋಡು. ನನಗೊಂದು ಉಪಕಾರ ಮಾಡು, ಸರಿನಾ?

150
00:09:15,264 --> 00:09:20,185
ಆ ಫೈಲ್ ಅನ್ನು ಓದಿದ ಮೇಲೆ,
ನಿನ್ನ ಪ್ರೇಯಸಿಗೆ ಕರೆ ಮಾಡು. ಸರಿನಾ?

151
00:09:20,727 --> 00:09:24,481
ಹೂಂ, ಅದು, ನಾನು ನನ್ನ ಪ್ರೇಯಸಿಯಿಂದ ಬೇರೆ ಆದೆ.

152
00:09:24,564 --> 00:09:28,485
ಅವಳು ನನ್ನ ಮಾಜಿ. ಅಂದರೆ, ಮಾಜಿ-ಮಾಜಿ--

153
00:09:28,568 --> 00:09:30,946
ದೇವರೇ. ಇಲ್ಲ, ಬೇಡ, ಬೇಡ.
ನಿಲ್ಲಿಸು. ತಕ್ಷಣವೇ, ಇಲ್ಲ.

154
00:09:31,029 --> 00:09:33,115
ವೈಯಕ್ತಿಕ ವಿಷಯಗಳು ಬೇಡ. ಸರಿನಾ?

155
00:09:33,198 --> 00:09:36,827
ನಿನ್ನ ಸಣ್ಣ ನಾಟಕಗಳಲ್ಲಿ ಭಾಗಿಯಾಗುವ
ಸಹೋದ್ಯೋಗಿ ಅಲ್ಲ ನಾನು.

156
00:09:37,452 --> 00:09:39,246
-ನನಗದೆಲ್ಲಾ ಬೇಕಿಲ್ಲ.
-ಹೂಂ.

157
00:09:41,415 --> 00:09:43,959
ಸರಿ. ಸ್ಟಾರ್ಕೆಡ್ ಎಕ್ಸ್?

158
00:09:44,042 --> 00:09:46,712
ಎಲ್ಲಾ ಹೂಡಿಕೆದಾರರು
ಅದರ ಮೇಲೆಗರಲು ಪ್ರಯತ್ನಿಸುತ್ತಾರೆ.

159
00:09:46,795 --> 00:09:50,048
-ನಾವೂ ಆ ಆಟದಲ್ಲಿ ತೊಡಗಬೇಕು.
-ಸರಿ. ಸರಿ. ಅರ್ಥವಾಯಿತು.

160
00:09:50,132 --> 00:09:51,133
ಧನ್ಯವಾದ.

161
00:10:14,156 --> 00:10:16,867
ಡಿನ್ನರ್?

162
00:10:32,799 --> 00:10:35,844
ನೀನು ಗ್ರಂಥಾಲಯಕ್ಕೆ ಹೋಗಬೇಕು ಅಷ್ಟೇ.
ಒಂದೊಂದೇ ವಿಷಯ ಶುರು ಮಾಡು.

163
00:10:37,346 --> 00:10:40,223
ಹೂಂ, ಆದರೆ ಎಲ್ಲವೂ ಅವನ ಬಳಿಗೇ ಕರೆದೊಯ್ಯುತ್ತೆ.

164
00:10:41,558 --> 00:10:44,311
ಅಂದರೆ, ನನಗೆ ಓದಲೂ ಆಗಲ್ಲ.

165
00:10:44,394 --> 00:10:47,564
ಕರೆ ಮಾಡಿ ನನ್ನ ಬೇಸಿಗೆ ಕೆಲಸವನ್ನೂ ಬಿಡಬೇಕು,

166
00:10:47,647 --> 00:10:52,027
ಯಾಕೆಂದರೆ ನಾನು
ಕಸಿನ್ಸ್‌ನಲ್ಲಿ ಇರಲ್ಲ, ಜೆರೆಮಾಯಾನಿಂದಾಗಿ.

167
00:10:53,612 --> 00:10:55,572
ಆಮೇಲೆ ನಾನು ಸುಸಾನ್ನಾರ ಸ್ಮರಣಾರ್ಥಕ್ಕೆ
ಹೋಗಲು ಆಗಲ್ಲ ಅಂತ

168
00:10:55,655 --> 00:10:59,076
ನನ್ನ ಅಮ್ಮನಿಗೆ ತಿಳಿಸುವುದು ಹೇಗಂತ ನೋಡಬೇಕು,

169
00:10:59,159 --> 00:11:00,619
ಅದೂ ಸಹ ಜೆರೆಮಾಯಾನಿಂದಾಗಿ.

170
00:11:02,329 --> 00:11:04,456
ಮತ್ತು ನಾನು ಮತ್ತೆಂದೂ ಬೇಸಿಗೆ ಮನೆಗೆ
ಹೋಗದೇ ಇರಬಹುದು.

171
00:11:04,539 --> 00:11:05,957
ಅದೂ ದರಿದ್ರ ಜೆರೆಮಾಯಾನಿಂದಾಗಿ!

172
00:11:06,041 --> 00:11:08,251
ಒಂದೊಂದೇ ವಿಷಯ ನಿನಗೆ ಸರಿಹೊಂದಲ್ಲ.

173
00:11:08,335 --> 00:11:11,004
ಇಲ್ಲ! ಇಲ್ಲ. ಏನೂ ಸರಿಯಾಗಲ್ಲ,
ಯಾಕೆಂದರೆ ಎಲ್ಲವೂ…

174
00:11:12,464 --> 00:11:13,673
ದೇವರೇ.

175
00:11:17,302 --> 00:11:19,221
ಹೇ, ಏನೂ ಆಗಲ್ಲ.

176
00:11:20,722 --> 00:11:22,599
ಗುಂಪು ಅಧ್ಯಯನದ ನಂತರ ಸಿಗುವೆ ನಿನಗೆ.

177
00:11:22,682 --> 00:11:27,270
ಇದು ಲೇಸಿಯನ್ನು ಮಾತ್ರ ತಪ್ಪಿಸುವ ಬಗ್ಗೆ ಅಲ್ಲ.
ನನಗೆ ಎಲ್ಲೆಡೆ ಜೆರೆಮಾಯಾ ಕಾಣುತ್ತಾನೆ.

178
00:11:31,650 --> 00:11:33,652
ಅವನು ಇಲ್ಲದೇ ಇದ್ದಾಗಲೂ.

179
00:12:20,574 --> 00:12:22,033
ಇರು. ಇರು, ಇರು, ಇರು.

180
00:12:30,584 --> 00:12:35,839
ನಾನು ಹೋದಲ್ಲೆಲ್ಲಾ, ನಮ್ಮ ನೆನಪು ಇದೆ.
ನಮ್ಮ ಒಳ್ಳೆಯ ಸಮಯದ ನೆನಪು.

181
00:12:35,922 --> 00:12:37,174
ನಾನು ಸಿದ್ಧ.

182
00:12:39,301 --> 00:12:41,094
-ಅದ್ಭುತ ಕೆಲಸ.
-ಚೆನ್ನಾಗಿ ಎಸೆದೆ.

183
00:12:41,178 --> 00:12:43,263
-ಚೆನ್ನಾಗಿತ್ತು.
-ಅದಕ್ಕಿಂತ ಉತ್ತಮ ಎಸೆತ ಸಾಧ್ಯವಿಲ್ಲ.

184
00:12:45,223 --> 00:12:48,560
ಹಾಗಾಗಿ… ನಾನು ಇಲ್ಲಿ ಇರಬಾರದು ಅಷ್ಟೇ.

185
00:12:59,362 --> 00:13:00,739
-ಹಾಯ್.
-ಅಮ್ಮ, ಹಾಯ್.

186
00:13:01,364 --> 00:13:04,284
ಚಿಕ್ಕ ಸಹಾಯ ಬೇಕು.
ನನ್ನ ಜನನ ಪ್ರಮಾಣಪತ್ರ ಕಳಿಸುವೆಯಾ?

187
00:13:04,367 --> 00:13:05,827
ಇಂದೇ ರಾತ್ರಿಯೊಳಗೆ, ಸಾಧ್ಯವಾದರೆ.

188
00:13:05,911 --> 00:13:10,040
ನಿನಗೂ ಹಲೋ, ಮುದ್ದು ಮಗಳೇ. ನಾನು ಆರಾಮಿದ್ದೇನೆ.
ಕೇಳಿದ್ದಕ್ಕೆ ಧನ್ಯವಾದ. ಹೇಗಿದ್ದೀಯಾ?

189
00:13:10,123 --> 00:13:12,042
ಕ್ಷಮಿಸು. ಅಮ್ಮ, ಹೇಗಿದ್ದೀಯಾ?

190
00:13:13,043 --> 00:13:14,669
ತುಂಬಾ ನೀರಸ ಸಮ್ಮೇಳನದಲ್ಲಿ ಇದ್ದೇನೆ.

191
00:13:14,753 --> 00:13:17,297
ಹಾಗಾಗಿ, ನಿನ್ನ
ಜನನ ಪ್ರಮಾಣಪತ್ರ ನನ್ನ ಬಳಿ ಇಲ್ಲ.

192
00:13:17,380 --> 00:13:18,965
ಅಂದಹಾಗೆ, ಯಾಕೆ ಬೇಕು ಅದು?

193
00:13:19,049 --> 00:13:23,178
ಪಾಸ್‌ಪೋರ್ಟ್ ಮಾಡಿಸಲು.
ನಾನು ಅಧ್ಯಯನಕ್ಕೆ ಪ್ಯಾರಿಸ್‌ಗೆ ಹೋಗುತ್ತಿರುವೆ.

194
00:13:25,305 --> 00:13:28,558
ಅದ್ಭುತ! ಅಭಿನಂದನೆಗಳು, ಚಿನ್ನ.

195
00:13:29,976 --> 00:13:31,061
ಜೆರ್ ಬೇಜಾರಲ್ಲಿದ್ದಾನಾ?

196
00:13:31,645 --> 00:13:33,980
ನಿನ್ನ ನೆನಪಾಗುತ್ತೆ ಅವನಿಗೆ,
ಆದರೆ ಹೆಮ್ಮೆಯೂ ಆಗಿರಬಹುದು.

197
00:13:34,064 --> 00:13:35,065
ಹೂಂ.

198
00:13:37,025 --> 00:13:39,444
-ಅಮ್ಮ, ನಾನು ಹೋಗಬೇಕು.
-ಸರಿ. ಲವ್ ಯು.

199
00:13:44,741 --> 00:13:47,410
ಗುರೂ, ಒತ್ತಡದಲ್ಲಿದ್ದೀಯ. ಸ್ವಲ್ಪ…

200
00:13:48,703 --> 00:13:49,788
ಸಮಾಧಾನದಲ್ಲಿರು.

201
00:13:49,871 --> 00:13:52,749
ನಾನು ತಂದ ಹೊಸ ನಶೆ ಮಾಡು.
ಸ್ವಲ್ಪ ನೋವು ಕಡಿಮೆಯಾಗಬಹುದು.

202
00:13:53,416 --> 00:13:55,835
ನಾನು ನನ್ನ ಜೀವನದ
ಅತ್ಯಂತ ಮುಖ್ಯ ವ್ಯಕ್ತಿಯನ್ನು ಕಳೆದುಕೊಂಡೆ.

203
00:13:55,919 --> 00:13:58,129
ನೋವಾಗೋದು ಸಹಜ ತಾನೇ?

204
00:13:58,213 --> 00:14:00,674
ನನಗೂ ಬೇರೆಯಾಗೋ ನೋವು ಅರ್ಥ ಆಗುತ್ತೆ.
ಆಗಲ್ಲ ಅಂದುಕೊಂಡೆಯಾ?

205
00:14:00,757 --> 00:14:01,758
ಶಾನ್ ಹೋದಾಗ ಹೇಗಿದ್ದೆ ನಾನು?

206
00:14:01,841 --> 00:14:04,177
ನೀವಿಬ್ಬರೂ ಒಂದೆರಡು ನಿಮಿಷ
ಜೊತೆಗಿದ್ದವರು, ರೆಡ್ಬರ್ಡ್.

207
00:14:04,261 --> 00:14:07,347
-ನನಗೆ ಆ ಸಂಬಂಧ ಮುಖ್ಯವಾಗಿತ್ತು.
-ಎಂತಹ ದೊಡ್ಡ ತಪ್ಪು ಮಾಡಿದೆ ನಾನು.

208
00:14:08,390 --> 00:14:11,268
ಗುರೂ, ನನಗೆ ನಿನ್ನ ಹುಡುಗಿ ಇಷ್ಟ, ನಿಜವಾಗಲೂ.

209
00:14:11,351 --> 00:14:15,480
ಮತ್ತು ಪ್ರೀತಿಯಿಂದ ಹೇಳುತ್ತಿರುವೆ.
ಆಗ ನೀವಿಬ್ಬರೂ ಬೇರೆಯಾಗಿದ್ದಿರಿ ತಾನೇ?

210
00:14:15,564 --> 00:14:18,858
ಮತ್ತು ನೀನು ತುಂಬಾ ಕುಡಿದಿದ್ದೆ,
ಲೇಸಿ ನಿನ್ನ ಮೈಮೇಲೇ ಬೀಳುತ್ತಿದ್ದಳು--

211
00:14:18,942 --> 00:14:22,529
ಇದೆಲ್ಲಾ ನೆಪ ಅಷ್ಟೇ! ನಾನು ವಾಪಸಾದ ತಕ್ಷಣ
ಅವಳಿಗೆ ಸತ್ಯ ಹೇಳಬೇಕಿತ್ತು.

212
00:14:22,612 --> 00:14:25,198
ಹೌದು. ಹೌದು, ಬಹುಶಃ.

213
00:14:34,833 --> 00:14:40,297
ನನ್ನ ತಾಯಿಯನ್ನು ಕಳೆದುಕೊಂಡಾಗಿನಿಂದ
ಬೆಲ್ಲಿಯೇ ನನ್ನ ಪ್ರಪಂಚವಾಗಿದ್ದಾಳೆ.

214
00:14:43,049 --> 00:14:44,718
ಅವಳು ನನಗೆ ಸರ್ವಸ್ವ.

215
00:14:46,636 --> 00:14:48,513
ಮತ್ತು ಅವಳನ್ನು ಕಳೆದುಕೊಳ್ಳುವುದು ನನಗೆ…

216
00:14:51,474 --> 00:14:55,770
ಛೇ, ನಾನು ನನ್ನ ಅತ್ಯುತ್ತಮ ಭಾಗವನ್ನು
ಕಳೆದುಕೊಂಡಂತೆ ಅನಿಸುತ್ತೆ.

217
00:14:56,396 --> 00:14:57,939
ಹೂಂ, ಅದು ಸುಂದರ ವಿಷಯ, ಕಣೋ.

218
00:15:02,485 --> 00:15:03,486
ಹೋಗು, ಅವಳಿಗಾಗಿ ಹೋರಾಡು.

219
00:15:03,945 --> 00:15:06,823
ಕ್ಷಮೆ ಕೇಳೋದು ಬಿಡು. ನಿನ್ನ ಪ್ರೀತಿ ತೋರಿಸು.

220
00:15:09,534 --> 00:15:12,662
-ಎಷ್ಟು ಸುಲಭ ಎಂಬಂತೆ ಹೇಳುವೆ.
-ಖಂಡಿತ ಸುಲಭ ವಿಷಯ ಅಲ್ಲ.

221
00:15:17,417 --> 00:15:18,710
ನನಗೆ ನಂಬಲು ಆಗುತ್ತಿಲ್ಲ.

222
00:15:18,793 --> 00:15:21,921
ಅಷ್ಟು ಪ್ರೀತಿಸುವಂತೆ ನಟಿಸುತ್ತಾನೆ,
ಆದರೆ ಅವನೂ ಎಲ್ಲರಂತೆ ಮೋಸಗಾರ.

223
00:15:22,756 --> 00:15:25,133
ಅವನು ನಮ್ಮ ವಸತಿ ನಿಲಯಕ್ಕೆ ಬಂದರೆ,
ಕಣ್ಣಲ್ಲಿ ಕಣ್ಣಿಟ್ಟು ಪ್ರಶ್ನಿಸುವೆ.

224
00:15:26,051 --> 00:15:28,595
-ನಗಬೇಡ, ದಯವಿಟ್ಟು.
-ಅದು ಸಮಸ್ಯೆ ಆಗಲ್ಲ.

225
00:15:28,678 --> 00:15:31,181
ನೀನು ನಾಳೆ ಪ್ಯಾರಿಸ್‌ಗೆ ಹೋಗುತ್ತಿಲ್ಲ
ಅನ್ನೋದೇ ಬೇಜಾರು.

226
00:15:32,390 --> 00:15:34,726
-ನಾನು ಅವನ ಜೊತೆ ತುಂಬಾ ಕಠಿಣವಾಗಿದ್ದೇನಾ?
-ನೋಡು.

227
00:15:36,561 --> 00:15:41,650
ಅವನು ನೀವಿಬ್ಬರೂ ಬೇರೆಯಾಗಿದ್ದೀರಿ
ಅಂದುಕೊಂಡಿದ್ದರೆ, ಇದು ಮೋಸ ಅಲ್ಲ.

228
00:15:41,733 --> 00:15:43,360
ಆದರೆ ಅದನ್ನು ರಹಸ್ಯವಾಗಿಟ್ಟಿದ್ದು?

229
00:15:43,902 --> 00:15:46,071
ಅವನು ಮಾಡಿದ್ದು ತಪ್ಪು ಅಂತ ಅವನಿಗೆ ಗೊತ್ತಿತ್ತು,

230
00:15:46,154 --> 00:15:50,992
ಮತ್ತು ಅದನ್ನು ಮುಚ್ಚಿಟ್ಟ.
ಅದು ನನಗೆ ಸರಿ ಅನಿಸುತ್ತಿಲ್ಲ.

231
00:15:52,202 --> 00:15:56,081
ಅನಿಕಾಗೆ ತಿಳಿದಿರದ ಸಂಗತಿಯೆಂದರೆ
ನನ್ನದೂ ಒಂದು ರಹಸ್ಯವಿದೆ.

232
00:15:57,916 --> 00:16:00,168
ಅದು ಕಳೆದ ವರ್ಷದ ಕ್ರಿಸ್‌ಮಸ್‌ನ ಮರುದಿನ.

233
00:16:00,251 --> 00:16:03,338
ನನ್ನ ತಾಯಿ ಬರಹಗಾರರ ಸಮ್ಮೇಳನದಲ್ಲಿದ್ದರು.
ಸ್ಟೀವನ್ ಸ್ನೇಹಿತರನ್ನು ಭೇಟಿ ಮಾಡುತ್ತಿದ್ದ.

234
00:16:03,421 --> 00:16:05,674
ಜೆರ್ ತನ್ನ ತಂದೆ ಮತ್ತು ಕೊನ್ರಾಡ್ ಜೊತೆ
ಸ್ಕೀಯಿಂಗ್ ಹೋಗುತ್ತಿದ್ದ.

235
00:16:06,633 --> 00:16:08,259
ಜಗತ್ತಿನ ನನ್ನ
ಅತಿ ನೆಚ್ಚಿನ ಸ್ಥಳದಲ್ಲಿರಬಹುದಾದಾಗ

236
00:16:08,343 --> 00:16:10,929
ಮನೆಯಲ್ಲಿ ಯಾಕೆ ಒಂಟಿಯಾಗಿರೋದು ಅಂದುಕೊಂಡೆ.

237
00:16:11,471 --> 00:16:13,848
ಹಾಗಾಗಿ, ನಾನು ಸ್ಟೀವನ್ ಕಾರನ್ನು ಎರವಲು ಪಡೆದು
ಕಸಿನ್ಸ್‌ಗೆ ಹೋದೆ.

238
00:16:20,647 --> 00:16:23,233
ಅಯ್ಯೋ, ಛೇ, ಛೇ, ಛೇ.

239
00:16:24,150 --> 00:16:26,361
ದೇವರೇ. ಸರಿ,
ಕೆವಿನ್ ಆಗಿದ್ದರೆ ಏನು ಮಾಡುತ್ತಿದ್ದ?

240
00:16:26,444 --> 00:16:29,406
ಕೆವಿನ್ ಆಗಿದ್ದರೆ ಏನು ಮಾಡುತ್ತಿದ್ದ? ಸರಿ.

241
00:16:43,253 --> 00:16:44,838
ಸ್ಟೀವನ್, ಬಾಗಿಲು ತೆಗೆ. ನಾನು.

242
00:16:50,343 --> 00:16:51,219
ಬೆಲ್ಲಿ.

243
00:16:51,845 --> 00:16:52,762
ಆರಾಮಿದ್ದೀಯಾ?

244
00:16:53,680 --> 00:16:56,766
ಹೂಂ. ಹೂಂ. ಕ್ಷಮಿಸು. ಫ್ಲಾಶ್ ಕಣ್ಣಿಗೆ ಬಿತ್ತು.

245
00:16:57,308 --> 00:16:59,102
-ಸರಿ.
-ಮುಂದಿನವರು.

246
00:17:11,156 --> 00:17:13,199
ಬೆಲ್ಲಿ. ಬೇಡ. ದಯವಿಟ್ಟು. ಹೋಗಬೇಡ.

247
00:17:13,283 --> 00:17:16,619
ನಾನು ನನ್ನ ಜೀವನದ ಅತಿ ದೊಡ್ಡ ತಪ್ಪು ಮಾಡಿದೆ.
ದಯವಿಟ್ಟು ನನ್ನ ಜೊತೆ ಮಾತಾಡು.

248
00:17:17,996 --> 00:17:20,540
ನೋಡು, ನಾನು ನಿನಗೆ ಏನು ಬೇಕಾದರೂ ಹೇಳುತ್ತೇನೆ.
ನಾನು ನಿನಗೆ ಏನು…

249
00:17:20,623 --> 00:17:22,917
ನಮ್ಮ ನಡುವೆ ಇನ್ನು ಯಾವ ರಹಸ್ಯವೂ ಬೇಡ.

250
00:17:24,919 --> 00:17:25,920
ಸರಿ.

251
00:17:29,507 --> 00:17:30,508
ಅದು ಹೇಗಾಯಿತು?

252
00:17:31,968 --> 00:17:34,471
ನಾನು ತುಂಬಾ ಬೇಜಾರಲ್ಲಿದ್ದೆ. ಕುಡಿದಿದ್ದೆ.

253
00:17:36,514 --> 00:17:37,557
ಅವಳು ಅಲ್ಲೇ ಇದ್ದಳು.

254
00:17:40,226 --> 00:17:41,227
ಎಷ್ಟು ಬಾರಿ?

255
00:17:46,441 --> 00:17:47,442
ಎರಡು ಬಾರಿ.

256
00:17:49,527 --> 00:17:52,197
-ಜೆರ್, ನೀನು ನನಗೆ ಹೀಗೆ ಹೇಗೆ ಮಾಡಲು ಸಾಧ್ಯ?
-ಬೆಲ್ಲಿ, ದಯವಿಟ್ಟು.

257
00:17:52,280 --> 00:17:53,698
ನಾನು ನಿನಗೆ ಅರ್ಹನಲ್ಲ ಅಂತ ನನಗೆ ಗೊತ್ತು.

258
00:17:53,782 --> 00:17:56,034
ಈ ಜಗತ್ತಿನ ಎಲ್ಲರಿಗಿಂತ
ಹೆಚ್ಚಾಗಿ ನಿನ್ನನ್ನ ಪ್ರೀತಿಸುತ್ತೇನೆ,

259
00:17:56,117 --> 00:17:57,494
ನಿನ್ನನ್ನು ನೋವಿನಲ್ಲಿ ನೋಡಲು ಆಗಲ್ಲ,

260
00:17:57,577 --> 00:18:02,081
-ಮತ್ತು ಅದನ್ನು ಹಿಂಪಡೆಯಲು ಏನಾದರೂ ಮಾಡುವೆ!
-ಸಾಕು, ನಿಲ್ಲಿಸು. ಮಾದಿರೋದು ಹಿಂಪಡೆಯಲು ಆಗಲ್ಲ.

261
00:18:02,165 --> 00:18:03,374
ಬೆಲ್ಲಿ, ದಯವಿಟ್ಟು.

262
00:18:04,042 --> 00:18:07,045
ಕ್ಷಮಿಸು. ನಿಜವಾಗಲೂ ಕ್ಷಮಿ--
ನಾನು ನಿನ್ನನ್ನು ಬಿಟ್ಟು ಯಾರನ್ನೂ ಪ್ರೀತಿಸಿಲ್ಲ.

263
00:18:08,421 --> 00:18:11,883
ನಾನೂ ಅವನನ್ನು ಪ್ರೀತಿಸುತ್ತೇನೆ.
ಮತ್ತು ಅವನನ್ನು ಕ್ಷಮಿಸಬೇಕು ಅನಿಸುತ್ತಿದೆ.

264
00:18:11,966 --> 00:18:14,385
ಹೇಗೆ ಅಂತ ಗೊತ್ತಿಲ್ಲ, ಅಷ್ಟೇ.

265
00:18:16,721 --> 00:18:19,557
ನಿನ್ನೊಬ್ಬನಿಂದ ನಾನು ಎಂದೂ
ನೋವು ಪಡೆಯಲ್ಲ ಅಂದುಕೊಂಡಿದ್ದೆ.

266
00:18:22,018 --> 00:18:24,187
ಆದರೆ ನೀನೇ ನನಗೆ ಅತಿ ಹೆಚ್ಚು ನೋವು ಕೊಟ್ಟಿರೋದು.

267
00:18:33,279 --> 00:18:34,656
ಲೋರೆಲ್!

268
00:18:35,281 --> 00:18:36,407
-ಎಲಿಯಟ್!
-ಹೇ!

269
00:18:36,491 --> 00:18:39,786
ಹೇ. ವಾವ್. ಅದ್ಭುತ ಪುಸ್ತಕಗಳನ್ನು ತಂದಿರುವೆ.

270
00:18:39,869 --> 00:18:43,456
ಹೂಂ. ಗೊತ್ತಾ, ಈಗಾಗಲೇ ಮಾನ್ಕ್ರೀಫ್ ಅನುವಾದವನ್ನು
ಎರಡು ಬಾರಿ ಓದಿದ್ದೇನೆ, ಹಾಗಾಗಿ…

271
00:18:43,540 --> 00:18:45,124
-ಎಲ್ಲರೂ ಹಾಗೇ ಮಾಡೋದು.
-ಹಾಂ.

272
00:18:45,834 --> 00:18:47,293
ಹೂಂ, ಈ ವರ್ಷ ನಿರ್ಧರಿಸಿರುವೆ

273
00:18:47,377 --> 00:18:51,840
ಕೊನೆಗೂ 'ಅ ಲಾ ರಿಶರ್ಶ್ ಡು ಟೆಂಪ್ಸ್ ಪೆಡು'
ಅನ್ನು ಮೂಲ ಫ್ರೆಂಚ್‌ನಲ್ಲಿ ಓದಬೇಕು ಅಂತ.

274
00:18:52,590 --> 00:18:54,759
ಓದು. ಜೇವನವನ್ನು ಅನುಭವಿಸು.

275
00:18:55,426 --> 00:18:58,638
ಅದು, ನೀನು ಮತ್ತು ನಾನು, ನಾವು ನಮ್ಮದೇ ಆದ
ಪುಸ್ತಕ ಗುಂಪನ್ನು ಶುರು ಮಾಡಬಹುದ,

276
00:18:58,721 --> 00:19:00,682
ನಿನಗೆ ಆಸಕ್ತಿ ಇದ್ದರೆ.

277
00:19:00,765 --> 00:19:04,811
ದುರದೃಷ್ಟವಶಾತ್, ಪ್ರೊಫೆಸರ್ ಪಾರ್ಕ್ ಕಾಲೇಜಿನ
ಮೊದಲ ವರ್ಷದಲ್ಲೇ ಫ್ರೆಂಚ್ ಕಲಿಯೋದು ಬಿಟ್ಟರು.

278
00:19:04,894 --> 00:19:07,188
ಜಾನ್, ನೀನು ಇಲ್ಲಿ ಏನು ಮಾಡುತ್ತಿದ್ದೀಯಾ?

279
00:19:07,272 --> 00:19:08,815
ನಿನ್ನ ಜೊತೆ ಮಾತಾಡಲು ಬಂದೆ.

280
00:19:08,898 --> 00:19:10,525
ಒಂದಿಯಾಗಿ. ಪ್ರೊಫೆಸರ್.

281
00:19:11,442 --> 00:19:12,443
ಸರಿ.

282
00:19:13,444 --> 00:19:14,529
ಆಮೇಲೆ ಸಿಗೋಣಾ, ಎಲಿಯಟ್?

283
00:19:15,488 --> 00:19:16,656
ಖಂಡಿತ. ಹೂಂ.

284
00:19:17,240 --> 00:19:20,535
ನೋಡಲು ಬರುವೆಯೆಂದರೆ
ನಾನು ಫ್ಲಾಬರ್ಟ್ ವಿಚಾರ ಸಂಕಿರಣದಲ್ಲಿ ಸಿಗುವೆ.

285
00:19:20,618 --> 00:19:22,495
-ಸರಿ. ಅದ್ಭುತ.
-ಸರಿ.

286
00:19:25,748 --> 00:19:26,875
ಏನದು?

287
00:19:26,958 --> 00:19:29,502
ಮತ್ತೆ, ಸಹಾಯಕರು ಈಗ
ಪ್ರಾಧ್ಯಾಪಕರುಗಳ ಜೊತೆ ಸರಸ ಮಾಡಬಹುದಾ?

288
00:19:29,586 --> 00:19:32,547
ಅವನು ಸಹಾಯಕ ಅಲ್ಲ. ಮತ್ತು ಬಹುಶಃ
ನಾನೂ ಅವನ ಜೊತೆ ಸರಸ ಮಾಡುತ್ತಿದ್ದೇನೇನೋ.

289
00:19:32,630 --> 00:19:34,090
ಹಾಗಾದರೆ ನಾನವನಿಗೆ ಉಪಕಾರ ಮಾಡಿದೆ.

290
00:19:34,173 --> 00:19:36,259
ನೀನು ಐದು ನಿಮಿಷದಲ್ಲಿ
ಅವನನ್ನು ಹುರಿದು ತಿನ್ನುತ್ತಿದ್ದೆ.

291
00:19:36,342 --> 00:19:38,720
ಅಂದಹಾಗೆ, ಇತಿಹಾಸ ಪ್ರಾಧ್ಯಾಪಕರಿಗೆ
ಸಾಹಿತ್ಯ ಸಮ್ಮೇಳನದಲ್ಲಿ ಏನು ಕೆಲಸ?

292
00:19:38,803 --> 00:19:41,097
ಸಂಭಾವ್ಯ ಮಿಶ್ರ ಕೋರ್ಸ್‌ಗಳ ಸಂಶೋಧನೆ.

293
00:19:41,180 --> 00:19:44,142
ನಮ್ಮ ಪ್ರಾಧ್ಯಾಪಕರು ಇತಿಹಾಸವನ್ನು ಮತ್ತೊಮ್ಮೆ
ಮಾದಕವಾಗಿಸಲು ಪ್ರಯತ್ನಿಸುತ್ತಿದ್ದಾರೆ.

294
00:19:45,518 --> 00:19:47,687
ಅದನ್ನು ಮಾಡಲು ಸಾಹಿತ್ಯ ಸಮ್ಮೇಳನವೇ ಸಿಕ್ಕಿದ್ದಾ?

295
00:19:47,770 --> 00:19:48,897
ಏನು ಹೇಳಲಿ?

296
00:19:49,772 --> 00:19:54,444
ಹಳೆಯ ಇಂಗ್ಲಿಷ್ ಮಹಾಕಾವ್ಯದ ನಾಟಕಗಳಿಗಾಗಿ
ದಯವಿಟ್ಟು ಬಾಲ್‌ರೂಮ್ ಬಿ ಗೆ ಹೋಗಿ.

297
00:19:55,069 --> 00:19:56,321
ಧನ್ಯವಾದ.

298
00:19:58,698 --> 00:20:00,575
-ಅದು ತುಂಬಾ--
-ನೀರಸವಾಗಿರುತ್ತೆ.

299
00:20:00,658 --> 00:20:01,993
ಹೂಂ.

300
00:20:02,911 --> 00:20:03,870
ಸರಿ.

301
00:20:06,039 --> 00:20:08,833
ಹೊಸ ಯೋಜನೆ. ಇದನ್ನು ಕುಡಿಯಲು ಒಂದು ಜಾಗ
ಹುಡುಕೋಣ. ವೈನ್ ಓಪನರ್ ಕದಿಯೋಣ.

302
00:20:08,917 --> 00:20:10,752
-ನಾನು ಹಾಗೆ ಮಾಡಲು ಆಗಲ್ಲ.
-ಸ್ವಲ್ಪ ಶ್ರಮ ಪಡು.

303
00:20:22,180 --> 00:20:24,349
ಸ್ಟ್ಯಾನ್ಫೋರ್ಡ್ ಮೆಡಿಕಲ್ ಸೆಂಟರ್

304
00:20:26,517 --> 00:20:28,853
ಸರಿ, ಮೊದಲ ದಿನಕ್ಕೆ ಸ್ವಾಗತ.

305
00:20:29,729 --> 00:20:32,982
ಬೇಸಿಗೆ ಮುಗಿಯುವಷ್ಟರಲ್ಲಿ, ನಿಮ್ಮಲ್ಲರ್ಧದಷ್ಟು
ಜನ ಇನ್ನೂ ಇಲ್ಲಿಯೇ ಇರುತ್ತಾರೆ ಅಂದುಕೊಳ್ಳುವೆ.

306
00:20:33,566 --> 00:20:35,485
ನನಗೆ ಕೋಪ ಬರಿಸದಿದ್ದರೆ, ಎಲ್ಲವೂ ಸರಿಯಿರುತ್ತೆ.

307
00:20:37,779 --> 00:20:39,572
ಸರಿ, ಮೊದಲ ರೋಗಿ.

308
00:20:39,656 --> 00:20:42,575
15 ವರ್ಷದ ಹುಡುಗ,
ಮೂರ್ಛೆರೋಗದ ದೂರಿನೊಂದಿಗೆ ಬಂದವನು.

309
00:20:43,201 --> 00:20:45,161
ಏನಾಗುತ್ತಿರಬಹುದು ಹೇಳುವಿರಾ?

310
00:20:46,621 --> 00:20:49,374
ಮೊದಲ ವರ್ಷದವರೊಂದಿಗೆ ಶುರು ಮಾಡೋಣ.
ಏನು ಹೇಳುವಿರಿ?

311
00:20:49,457 --> 00:20:50,583
-ಸರಿ, ಅದು--
-ಸರಿ--

312
00:20:52,877 --> 00:20:55,546
ಪ್ರೌಢಾವಸ್ಥೆಯ ಹಾರ್ಮೋನುಗಳಾಗಿರಬಹುದು.
ಅವನಿಗೆ 15 ವರ್ಷ. ಬಹುಶಃ--

313
00:20:55,630 --> 00:20:57,465
ಜ್ವರದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾನೆ,

314
00:20:57,548 --> 00:21:00,134
ಮತ್ತು ಅವನ ವಯಸ್ಸಿನಲ್ಲಿ
ಮೂರ್ಛೆರೋಗಕ್ಕೆ ಜ್ವರ ಅತಿ ಸಾಮಾನ್ಯ ಕಾರಣ.

315
00:21:00,218 --> 00:21:02,845
-ಒಳ್ಳೆಯದು.
-ಅವನಿಗೆ ವಾಕರಿಕೆ ಔಷಧಿ ಸಹ ನೀಡಿದ್ದಾರೆ.

316
00:21:02,929 --> 00:21:05,223
-ಅದರಿಂದಲೂ ಅಪಾಯ ಹೆಚ್ಚಿರಬಹುದು.
-ಚೆನ್ನಾಗಿ ಗಮನಿಸಿರುವೆ.

317
00:21:06,057 --> 00:21:08,142
ಕೆಲವೊಮ್ಮೆ ಉತ್ತರ ಸ್ಪಷ್ಟವಾಗಿರುತ್ತೆ.

318
00:21:08,226 --> 00:21:11,521
ಖಂಡಿತ. ಧನ್ಯವಾದ, ಡಾಕ್ಟರ್ ನಮಾಜಿ.
ನಾನದನ್ನು ನೆನಪಿಟ್ಟುಕೊಳ್ಳುವೆ.

319
00:21:11,604 --> 00:21:12,981
ಸರಿ. ಮುಂದಿನ ರೋಗಿ.

320
00:21:14,190 --> 00:21:17,110
ನನ್ನನ್ನು ಮೊದಲ ದಿನವೇ ಹೊರಹೋಗುವ
ವೈದ್ಯಕೀಯ ವಿದ್ಯಾರ್ಥಿಯನ್ನಾಗಿ ಮಾಡುತ್ತಿರುವೆಯಾ?

321
00:21:17,193 --> 00:21:19,779
-ಪಕ್ಕಾ ಅದು ವದಂತಿ ಅಷ್ಟೇ.
-ಪರವಾಗಿಲ್ಲ. ನಾನು ಸೋಲಲು ತಯಾರಿರುವೆ.

322
00:21:19,862 --> 00:21:21,280
ಮುಂದಿನದರಲ್ಲಿ ಸರಿಪಡಿಸಿಕೊಳ್ಳುವೆ.

323
00:21:21,364 --> 00:21:23,950
ನಿನ್ನ ತಮ್ಮನ ಪ್ರೇಯಸಿಯ ಮೇಲಿನ
ಪ್ರೀತಿಯನ್ನು ಮರೆಯಲು

324
00:21:24,033 --> 00:21:26,244
ನಮಾಜಿಯವರ ಬೂಟು ನೆಕ್ಕುತ್ತಿರುವೆ ಅಷ್ಟೇ.

325
00:21:26,327 --> 00:21:29,080
-ನಿನಗೆ ಆ ವಿಷಯ ಯಾಕೆ ಹೇಳಿದೆನೋ?
-ನಿನಗೆ ಹೇಳಲು ಆಸೆಯಾಗಿತ್ತು, ಅದಕ್ಕೇ.

326
00:21:29,831 --> 00:21:30,832
ಇರಲಿ.

327
00:21:31,457 --> 00:21:34,252
ಶೈಕ್ಷಣಿಕ ಸಮ್ಮೇಳನದಲ್ಲಿ ಸಮಯ ಕಳೆಯಲು
ಅತ್ಯಂತ ಸುರಕ್ಷಿತ ಸ್ಥಳ

328
00:21:34,335 --> 00:21:37,380
ಹೋಟೆಲ್‌ನ ಜಿಮ್. ಅದ್ಭುತ!

329
00:21:37,463 --> 00:21:40,049
ನನಗೆ ನಿನ್ನ ಫೋನ್ ಕೊಡು.
ನನ್ನದು ಸತ್ತಿದೆ, ಮಕ್ಕಳಿಗೆ ಕರೆ ಮಾಡಬೇಕು.

330
00:21:40,133 --> 00:21:44,053
ಕೋಣೆಯಲ್ಲಿ ಬಿಟ್ಟು ಬಂದೆ. ಅಲ್ಲದೆ ಮಕ್ಕಳು
ಆರಾಮಿದ್ದಾರೆ. ಅಲ್ಲದೇ, ನೀನು ತಲೆಕೆಳಗಿದ್ದೀಯ.

331
00:21:44,137 --> 00:21:45,596
ಹೂಂ. ಹೂಂ, ಹೌದು.

332
00:21:49,642 --> 00:21:50,768
ಏನು ಮಾಡುತ್ತಿದ್ದೀಯಾ?

333
00:21:51,185 --> 00:21:53,229
ಹೃದಯದ ಹೊರೆ ಇಳಿಸಿಕೊಳ್ಳುತ್ತಿದ್ದೇನೆ.

334
00:21:53,813 --> 00:21:54,814
ಯಾಕಾದರೂ ಕೇಳಿದೆನೋ?

335
00:21:55,857 --> 00:21:58,651
ಗೊತ್ತಾ, ನಮ್ಮ ಮದುವೆ ಹಾಳಾದರೂ,

336
00:21:58,735 --> 00:22:02,030
ನಾವು ಮಕ್ಕಳಿಗೆ ಒಳ್ಳೆಯ ಪೋಷಕರಾಗಿ ಉಳಿದೆವು.

337
00:22:02,822 --> 00:22:03,823
ಹೂಂ, ಅದು ನಿಜ.

338
00:22:07,577 --> 00:22:09,078
ದೇವರೇ. ಈಗಷ್ಟೇ ನೆನಪಾಯಿತು.

339
00:22:09,954 --> 00:22:11,080
ಬೆಲ್ಲಿ ಕರೆ ಮಾಡಿದ್ದಳು,

340
00:22:11,956 --> 00:22:15,334
ಅವಳು ಮುಂದಿನ ಸೆಮಿಸ್ಟರ್ ಪ್ಯಾರಿಸ್‌ನಲ್ಲಿ
ಓದಲು ಹೋಗುತ್ತಿದ್ದಾಳಂತೆ.

341
00:22:16,461 --> 00:22:19,547
ಪ್ಯಾರಿಸ್ ಪೊಲೀಸರು ಕ್ವಾಸಿಮೋಡೊನನ್ನು
ಹೇಗೆ ಹುಡುಕಿದರು ಗೊತ್ತಾ?

342
00:22:20,381 --> 00:22:21,883
ಅವನ ಬೆನ್ನು ಹತ್ತಿ.

343
00:22:23,051 --> 00:22:24,761
ಮತ್ತೆ ಅದೇ ಜೋಕ್ ಬೇಡ.

344
00:22:25,595 --> 00:22:26,929
ನಿನಗೆ ನನ್ನ ಜೋಕುಗಳು ಇಷ್ಟ ಇದ್ದವು.

345
00:22:27,013 --> 00:22:29,515
ಎಷ್ಟು ನಗುತ್ತಿದ್ದೆಯೆಂದರೆ
ನಿನ್ನ ಮೂಗಿನಿಂದ ಬಿಯರು ಹೊರಗೆ ಬರುತ್ತಿತ್ತು.

346
00:22:29,599 --> 00:22:32,268
ಅಸಲಿಗೆ, ಅದೇ ಕಾರಣಕ್ಕೆ ತಾನೇ
ನೀನು ಮೊದಲ ಡೇಟ್‌ನಲ್ಲೇ ನನ್ನ ಜೊತೆ ಮಲಗಿದ್ದು?

347
00:22:32,351 --> 00:22:35,980
ಅದು ನಕಲಿ ನಗು.
ನನಗೆ ಮೊದಲಿಂದ ನಿನ್ನ ಜೊತೆ ಮಲಗೋದಿತ್ತು.

348
00:22:37,899 --> 00:22:38,900
ನಿಜವಾಗಲೂ?

349
00:22:40,068 --> 00:22:41,152
ನಾನು ಅದನ್ನು ಬಳಸಬಹುದಾ?

350
00:22:42,361 --> 00:22:44,155
-ಖಂಡಿತ, ಬಳಸಿ.
-ನಮ್ಮದು ಆಯಿತು.

351
00:22:44,238 --> 00:22:45,239
ಧನ್ಯವಾದ.

352
00:23:00,004 --> 00:23:01,089
ಇಲ್ಲಿಗೆ ಯಾಕೆ ಬಂದೆ?

353
00:23:01,172 --> 00:23:03,591
ಏನು-- ನೀನು ಇಡೀ ದಿನ
ನನ್ನ ಸಂದೇಶಗಳಿಗೆ ಪ್ರತಿಕ್ರಿಯಿಸಿಲ್ಲ.

354
00:23:04,342 --> 00:23:07,136
ಅಂತಿಮ ಪರೀಕ್ಷೆಯ ಸಮಯ. ತುಂಬಾ ಒತ್ತಡ ಇದೆ.

355
00:23:07,220 --> 00:23:08,971
ಟೇ, ಆರಾಮಿದ್ದೀಯಾ? ಏನಾಯಿತು?

356
00:23:10,223 --> 00:23:11,474
ನನಗೆ ಹಸಿವಾಗಿದೆ.

357
00:23:12,642 --> 00:23:15,895
ಸರಿ. ಏನಾದರೂ ತಿಂದು ಬರೋಣ. ಒಳಗೆ ಬಾ.

358
00:23:20,149 --> 00:23:21,150
ಸರಿ.

359
00:23:40,211 --> 00:23:41,754
ತಿನ್ನಲು ಎಲ್ಲಿಗೆ ಹೋಗೋಣ?

360
00:23:42,672 --> 00:23:43,673
ಗೊತ್ತಿಲ್ಲ.

361
00:23:49,470 --> 00:23:50,471
ಏನು?

362
00:23:54,517 --> 00:23:55,810
ನಾನು ಮಿಯಾ ಜೊತೆ ಸಂಬಂಧ ಮುರಿದೆ.

363
00:24:01,983 --> 00:24:03,442
ನನಗಾಗಿ ಮಾಡಿಲ್ಲ ತಾನೇ?

364
00:24:04,152 --> 00:24:05,153
ಏನು?

365
00:24:08,739 --> 00:24:09,782
ಕ್ಷಮಿಸು.

366
00:24:10,533 --> 00:24:13,786
ನಾನು ನಿನ್ನ ಜೊತೆ ಮಾತ್ರ ಇರಲು ಬಯಸುವೆ ಅಂತ
ನಿನಗೆ ಖುಷಿ ಆಗುತ್ತೆ ಅಂದುಕೊಂಡೆ.

367
00:24:13,870 --> 00:24:16,205
ಅಂದರೆ, ಅಂದು ರಾತ್ರಿ, ಒಟ್ಟಿಗೆ ಮಲಗಿದ ನಂತರ.

368
00:24:16,289 --> 00:24:18,040
ಸ್ಟೀವನ್, ಅದು ಸರಿಯಲ್ಲ.

369
00:24:18,124 --> 00:24:20,877
ಮತ್ತು ನಾನು ಮೊದಲೇ ಹೇಳಿದ್ದೇನೆ,
ನನಗೆ ಗಂಭೀರ ಸಂಬಂಧ ಬೇಡ ಅಂತ.

370
00:24:20,960 --> 00:24:23,796
ಸರಿ. ನಮ್ಮ ಮಧ್ಯೆ ಇದು ಯಾವಾಗಲೂ ಗಂಭೀರವೇ.
ಅದು ನಿನಗೂ ಗೊತ್ತು.

371
00:24:23,880 --> 00:24:25,715
-ದೇವರೇ!
-ಸುಮ್ಮನೆ ಆಟ ಆಡೋದು ಬಿಟ್ಟು

372
00:24:25,798 --> 00:24:27,800
ನಿಜವಾಗಲೂ ಜೊತೆಯಾಗೋಣ,
ಒಬ್ಬರಿಗೊಬ್ಬರು ನೋವು ಕೊಡೋದು ಬೇಡ.

373
00:24:27,884 --> 00:24:30,553
-ನಮ್ಮಿಬ್ಬರ ಬಗ್ಗೆ ಅವರಿಗೆ ಗೊತ್ತೂ ಇಲ್ಲ!
-ಪರವಾಗಿಲ್ಲ. ಇದು ಆದರೂ ತಪ್ಪೇ.

374
00:24:32,138 --> 00:24:34,557
ಟೇಲರ್, ನೀನೂ ನಾನೂ ಹೊಸದಾಗಿ ಆರಂಭಿಸೋಣ.

375
00:24:34,640 --> 00:24:37,727
-ಮುಕ್ತವಾಗಿ, ಸ್ಪಷ್ಟವಾಗಿ, ಸ್ವಚ್ಛವಾಗಿ.
-ಸ್ಟೀವನ್, ನಾವು ಮೊದಲೂ ಪ್ರಯತ್ನಿಸಿದ್ದೇವೆ.

376
00:24:37,810 --> 00:24:39,687
-ಲಕ್ಷಾಂತರ ಬಾರಿ.
-ಆಗ ನಾವು ಮಕ್ಕಳಾಗಿದ್ದೆವು.

377
00:24:39,770 --> 00:24:42,356
-ನಮ್ಮ ಸಂಬಂಧ ನಡೆಯಲ್ಲ. ಎಂದೂ ನಡೆಯಲ್ಲ.
-ಟೇಲರ್, ನಿನ್ನೊಬ್ಬಳ ಜೊತೆ ಮಾತ್ರ

378
00:24:42,440 --> 00:24:43,900
-ನಾನು ಇರಲು ಬಯಸೋದು.
-ದೇವರೇ.

379
00:24:43,983 --> 00:24:47,320
-ನಿನ್ನನ್ನು ಪ್ರೀತಿಸುತ್ತೇನೆ ಅನಿಸುತ್ತೆ.
-ನಿಲ್ಲಿಸು. ನಿಲ್ಲಿಸು! ಇಲ್ಲ. ಬೇಡ.

380
00:24:47,403 --> 00:24:49,530
-ಇದು ನನ್ನಿಂದ ಆಗಲ್ಲ. ನೀನು ಸುಮ್ಮನೆ--
-ಏನು ಮಾತಾಡು--

381
00:24:49,614 --> 00:24:51,782
-ಕಾರು ನಿಲ್ಲಿಸು, ನಾನು ಇಳಿಯಬೇಕು.
-ಟೇಲರ್, ಬೇಡ.

382
00:24:51,866 --> 00:24:53,284
ದಯವಿಟ್ಟು ನನ್ನ ಮಾತು ಕೇಳು.

383
00:24:53,367 --> 00:24:55,244
-ನಾನು ಅಷ್ಟೇ ಕೇಳುತ್ತಿರೋದು.
-ನನ್ನನ್ನು ಇಳಿಸು!

384
00:24:55,328 --> 00:24:56,579
ನಾವು ರಸ್ತೆಯ ಮಧ್ಯದಲ್ಲಿದ್ದೇವೆ.

385
00:24:56,662 --> 00:24:59,123
-ನಾನು ಹಾಗೆ ಮಾಡಲ್ಲ.
-ನನಗೆ ಅದೆಲ್ಲಾ ಬೇಕಿಲ್ಲ. ನನಗೆ ಹೋಗಬೇಕು.

386
00:24:59,207 --> 00:25:01,292
ನಿಲ್ಲಿಸು, ನನಗೆ ಇಳಿಯಬೇಕು!

387
00:25:01,375 --> 00:25:03,753
ಸರಿ! ಸರಿ! ಸರಿ. ಥತ್!

388
00:25:03,836 --> 00:25:06,088
ಇಗೋ, ನಿಲ್ಲಿಸುತ್ತಿರುವೆ! ಸರಿನಾ?

389
00:25:11,552 --> 00:25:12,845
ಟೇಲರ್, ಏನಿದು?

390
00:25:27,944 --> 00:25:29,862
ಟೇಲರ್, ನಾನು ಹೇಳಿದೆ ನನಗೆ ಇದು--

391
00:25:31,822 --> 00:25:33,115
ದೇವರೇ!

392
00:25:36,202 --> 00:25:37,995
-ಟೇಲರ್!
-ಹಾಯ್.

393
00:25:40,373 --> 00:25:41,874
ನನ್ನನ್ನು ಕ್ಷಮಿಸು.

394
00:25:42,458 --> 00:25:45,002
ಏನಾಯಿತು? ನೀವು ಅವನ ಜೊತೆ ಇದ್ದೆಯಾ?
ನಿನಗೆ ಪೆಟ್ಟಾಗಿದೆಯಾ?

395
00:25:46,545 --> 00:25:49,507
-ಏನಾಯಿತು?
-ನಾನು ಕಾರಲ್ಲಿ ಇರಲಿಲ್ಲ.

396
00:25:49,590 --> 00:25:51,884
-ಸರಿ.
-ನಾವು ವಾದ ಮಾಡುತ್ತಿದ್ದೆವು.

397
00:25:53,928 --> 00:25:56,722
ನಾನು ಹೊರಗೆ ಹಾರಿದೆ,
ಅವನು ನನ್ನ ಹಿಂದೆ ಬರಲು ಪ್ರಯತ್ನಿಸುತ್ತಿದ್ದ.

398
00:25:56,806 --> 00:25:57,890
ಸರಿ.

399
00:26:00,142 --> 00:26:01,269
ಏನು?

400
00:26:04,313 --> 00:26:09,151
-ಏನು? ಹೇ. ಏನಾಯಿತು?
-ಇದೆಲ್ಲಾ ನನ್ನ ತಪ್ಪು.

401
00:26:09,235 --> 00:26:11,612
ಇಲ್ಲ, ಇಲ್ಲ, ಇಲ್ಲ. ಇದು ನಿನ್ನ ತಪ್ಪಲ್ಲ.

402
00:26:12,446 --> 00:26:13,906
ಹೌದು, ನನ್ನದೇ ತಪ್ಪು.

403
00:26:13,990 --> 00:26:15,533
ನೀವು ಸ್ಟೀವನ್ ಕೊಂಕ್ಲಿನ್ ಜೊತೆಯವರಾ?

404
00:26:15,616 --> 00:26:17,618
ಹಾಂ. ಹಾಂ. ಅವನು ಆರಾಮಿದ್ದಾನಾ?

405
00:26:17,702 --> 00:26:21,289
ಸದ್ಯದ ಸ್ಕ್ಯಾನ್‌ಗಳಲ್ಲಿ ಪಕ್ಕೆಲುಬಿನ ಮುರಿದಿದೆ
ಮತ್ತು ಮಿದುಳಿಗೆ ಪೆಟ್ಟಾಗಿದೆ ಅಂತ ಕಂಡುಬಂದಿದೆ.

406
00:26:21,831 --> 00:26:24,583
-ಮಿದುಳಿಗೆ ಪೆಟ್ಟಾ? ಏನು--
-ಹೂಂ, ಮೂಗೇಟಾಗಿದೆ.

407
00:26:24,667 --> 00:26:27,003
ಊತ ಕಡಿಮೆ ಆಗುವವರೆಗೂ
ಸ್ಥಿತಿ ಎಷ್ಟು ಗಂಭೀರವಾಗಿದೆ ಅಂತ ಗೊತ್ತಾಗಲ್ಲ.

408
00:26:27,086 --> 00:26:29,588
ಅಳ್ಳಿಯವರೆಗೂ, ಮಂಪರಿನಲ್ಲಿ ಇಟ್ಟಿರುತ್ತೇವೆ.

409
00:26:29,672 --> 00:26:31,841
ಹಾಗಾದರೆ, ಸುಮ್ಮನೆ ಕಾದು ನೋಡಬೇಕಾ?

410
00:26:31,924 --> 00:26:33,467
ಕೆಲವು ಕಾಗದಗಳನ್ನು ಭರ್ತಿ ಮಾಡಬೇಕು,

411
00:26:33,551 --> 00:26:35,678
ಅವರ ಪರವಾಗಿ ನೀವು ಯಾರಾದರೂ
ನಿರ್ಧಾರ ತೆಗೆದುಕೊಳ್ಳಬೇಕಾಗುತ್ತೆ.

412
00:26:35,761 --> 00:26:38,306
-ನಿಮ್ಮಿಬ್ಬರಲ್ಲಿ ಯಾರಾದರೂ ತಗೋಬಹುದಾ?
-ನಾನು ಅವನ ತಂಗಿ. ಕ್ಷಮಿಸಿ.

413
00:26:38,389 --> 00:26:39,640
ತಂಗಿ ಎಂದರೆ ತಗೋಬಹುದು.

414
00:26:39,724 --> 00:26:42,226
ಸರಿ. ಎಂತಹ ನಿರ್ಧಾರ--

415
00:26:42,310 --> 00:26:44,228
ಅಲ್ಲಿ ಕಾಗದದಲ್ಲಿ ಇದೆ.

416
00:26:47,648 --> 00:26:50,818
ಅಪ್ಪ-ಅಮ್ಮನಿಗೆ ಮತ್ತೆ ಕರೆ ಮಾಡಬೇಕು.
ಇಬ್ಬರ ಫೋನೂ ಹತ್ತಲಿಲ್ಲ.

417
00:26:50,901 --> 00:26:53,654
-ಸರಿ, ನಾನು ನೋಡುವೆ. ಕರೆ ಮಾಡುವೆ.
-ಸರಿ.

418
00:26:54,822 --> 00:26:56,490
ಸ್ಟೀವನ್‌ನ ಇನ್ಶೂರೆನ್ಸ್ ಬಗ್ಗೆ
ನನಗೆ ಗೊತ್ತಿಲ್ಲ,

419
00:26:56,574 --> 00:26:58,784
ಅವನ ಕೆಲಸದ್ದಾ, ಅಪ್ಪ-ಅಮ್ಮನದ್ದಾ ಅಂತ!

420
00:26:58,868 --> 00:27:01,078
ಅವನ ರಕ್ತದ ಗುಂಪು ನನಗೇನು ಗೊತ್ತು?

421
00:27:01,162 --> 00:27:05,583
ಸ್ಟೀವನ್ ಸಾರ್ವತ್ರಿಕ ದಾನಿ ಅಂತ
ಕೊಚ್ಚಿಕೊಳ್ಳುತ್ತಿದ್ದದ್ದು ನನಗೆ ನೆನಪಿದೆ.

422
00:27:05,666 --> 00:27:07,710
ಖಂಡಿತ, ಅವನು
ಎಲ್ಲದರ ಬಗ್ಗೆ ಕೊಚ್ಚಿಕೊಳ್ಳುತ್ತಾನೆ.

423
00:27:10,212 --> 00:27:13,299
-ಸರಿ. ಒ-ನೆಗೆಟಿವ್. ಅವನದ್ದು ಒ-ನೆಗೆಟಿವ್.
-ಒ-ನೆಗೆಟಿವ್.

424
00:27:13,966 --> 00:27:14,925
ಸರಿ.

425
00:27:15,009 --> 00:27:17,011
-ಮತ್ತೆ ನಿನ್ನ ಅಪ್ಪ-ಅಮ್ಮನಿಗೆ ಕರೆ ಮಾಡುವೆ.
-ಸರಿ.

426
00:27:17,511 --> 00:27:21,182
ಇನ್ನೂ ಬೇರೆಯವರಿಗೂ ವಿಷಯ ತಿಳಿಸಬೇಕು ಅನಿಸುತ್ತೆ.

427
00:27:22,183 --> 00:27:23,434
ಜೆರ್‌ಗೆ ವಿಷಯ ತಿಳಿಸಲಾ?

428
00:27:26,062 --> 00:27:29,523
ಗೊತ್ತಿಲ್ಲ. ಒಂದು ಗಂಟೆಯ ಹಿಂದೆ,
ಅವನ ಬಗ್ಗೆ ಯೋಚಿಸಿದರೆ ವಾಂತಿ ಬರುತ್ತಿತ್ತು.

429
00:27:29,607 --> 00:27:33,361
ಆದರೆ ಈಗ… ಅವನು ಇಲ್ಲಿದ್ದರೆ
ಚೆನ್ನಾಗಿರುತ್ತಿತ್ತು ಅನಿಸುತ್ತಿದೆ.

430
00:27:33,444 --> 00:27:34,445
ನನಗೆ ಗೊತ್ತು.

431
00:27:35,404 --> 00:27:37,990
ನನಗೆ ಸಮಾಧಾನವಾಗಲು ಏನು ಹೇಳಬೇಕಂತ
ಅವನಿಗೆ ಗೊತ್ತಿರುತ್ತಿತ್ತು.

432
00:27:41,702 --> 00:27:43,621
ಇವತ್ತಿಗೆ ನಾನು ನಿನ್ನ ಜೆರ್ ಆಗುವೆ.

433
00:27:44,455 --> 00:27:45,956
-ಸರಿ.
-ನಿನ್ನ ಅಪ್ಪ-ಅಮ್ಮನನ್ನು ಹುಡುಕುವೆ.

434
00:27:46,040 --> 00:27:48,709
ಜೆರ್ ಪೆದ್ದನಿಗೂ ಕರೆ ಮಾಡುವೆ. ಸರಿನಾ?

435
00:27:48,793 --> 00:27:52,129
ನೀನು ಕಾಗದಗಳನ್ನು ಭರ್ತಿ ಮಾಡು,
ಉಳಿದದ್ದು ನಾನು ನೋಡಿಕೊಳ್ಳುವೆ.

436
00:27:52,213 --> 00:27:54,298
-ನಾನು ಮಾಡುವೆ.
-ಸರಿ. ಧನ್ಯವಾದ.

437
00:27:55,007 --> 00:27:56,759
-ಕೊನ್ರಾಡ್‌ಗೂ ಕರೆ ಮಾಡುವೆಯಾ?
-ಕೊನ್ರಾಡ್.

438
00:27:56,842 --> 00:27:59,428
ಇದೆಲ್ಲಾ ಅವನಿಗೆ ಚೆನ್ನಾಗಿ ಅರ್ಥ ಆಗಬಹುದು,
ಅದಕ್ಕಾಗಿ. ಧನ್ಯವಾದ.

439
00:27:59,512 --> 00:28:01,847
ಹೂಂ. ಖಂಡಿತ. ಕೊನ್ರಾಡ್‌ಗೆ ಕರೆ ಮಾಡುವೆ.

440
00:28:06,602 --> 00:28:08,729
-ಮುಂದಿನ ವಿಮಾನದಲ್ಲೇ ಬಂದುಬಿಡುವೆ.
-ಇಲ್ಲ, ಪರವಾಗಿಲ್ಲ.

441
00:28:08,813 --> 00:28:10,731
ಲೋರೆಲ್ ಮತ್ತು ಜಾನ್
ಆ ಹೊತ್ತಿಗೆ ಬಹುಶಃ ಇಲ್ಲಿರುತ್ತಾರೆ.

442
00:28:10,815 --> 00:28:14,860
ಸರಿ. ಸರಿ, ವೈದ್ಯರು ಏನು ಹೇಳಿದರೋ
ಅದನ್ನೇ ನಿಖರವಾಗಿ ಹೇಳು.

443
00:28:14,944 --> 00:28:17,196
ಅವನು ಬೇವರ್ಸಿ. ಸುಮ್ಮನೆ ನಿರ್ಲಕ್ಷಿಸಿ ಹೋದ.

444
00:28:17,279 --> 00:28:18,864
ಏನಾಗುತ್ತಿದೆ ತಿಳಿಯಲು ನೋಡುತ್ತಿದ್ದೇವೆ, ಆದರೆ…

445
00:28:18,948 --> 00:28:20,908
ಬಹುಶಃ ನಾನು ಸಹಾಯ ಮಾಡಬಹುದು.
ಎಲ್ಲಿ ಸೇರಿಸಿದ್ದೀರಿ?

446
00:28:20,991 --> 00:28:25,454
ಪ್ರಾವಿಡೆನ್ಸ್ ಜನರಲ್‌ನಲ್ಲಿ. ಆದರೆ ನೀನು ಹೇಗೆ--

447
00:28:25,538 --> 00:28:26,747
ಅದನ್ನು ನಾನು ನೋಡಿಕೊಳ್ಳುವೆ.

448
00:28:28,165 --> 00:28:29,583
ನನಗೆ ಏನಾದರೂ ಮಾಡಬೇಕು, ಅಷ್ಟೇ.

449
00:28:32,503 --> 00:28:33,921
ಹೇ, ಬೆಲ್ಲಿ ಹೇಗಿದ್ದಾಳೆ?

450
00:28:34,004 --> 00:28:36,173
-ಪರವಾಗಿಲ್ಲ.
-ಹೌದಾ? ಸರಿ.

451
00:28:36,799 --> 00:28:37,967
-ಹೂಂ.
-ಹೂಂ, ಒಳ್ಳೆಯದು.

452
00:28:38,050 --> 00:28:39,009
ಸರಿ.

453
00:28:40,052 --> 00:28:42,513
-ಸರಿ, ನನಗೆ ವಿಷಯ ತಿಳಿಸುತ್ತಿರು, ಸರಿನಾ?
-ಹೂಂ, ಸರಿ.

454
00:28:42,596 --> 00:28:43,597
ಸರಿ.

455
00:28:45,724 --> 00:28:47,351
ಡಾ. ನಮಾಜಿ. ಕ್ಷಮಿಸಿ.

456
00:28:48,018 --> 00:28:49,019
ಏನಾಯಿತು?

457
00:28:49,103 --> 00:28:51,605
ನನ್ನ ಒಬ್ಬ ಸ್ನೇಹಿತ ಕಾರು ಅಪಘಾತಕ್ಕೀಡಾದ.

458
00:28:52,690 --> 00:28:54,608
ತುಂಬಾ ಆಪ್ತ ಸ್ನೇಹಿತ. ಕುಟುಂಬದವನಂತೆ.

459
00:28:54,692 --> 00:28:57,194
ಪ್ರಾವಿಡೆನ್ಸ್ ಜನರಲ್‌ನಲ್ಲಿದ್ದಾನೆ.

460
00:28:57,278 --> 00:29:00,197
ಅಲ್ಲಿ ನರವಿಜ್ಞಾನದಲ್ಲಿ ನಿಮಗೆ
ಯಾರದಾದರೂ ಪರಿಚಯ ಇದೆಯಾ?

461
00:29:00,281 --> 00:29:02,241
ನರವಿಜ್ಞಾನದ ಮುಖ್ಯಸ್ಥರು
ನನ್ನ ಸ್ನೇಹಿತಳ ಸ್ನೇಹಿತೆ.

462
00:29:02,324 --> 00:29:03,993
ಸರಿ, ಅವನ ಹೆಸರು ಸ್ಟೀವನ್ ಕೊಂಕ್ಲಿನ್.

463
00:29:04,076 --> 00:29:07,746
ನೀವು ಕರೆ ಏನಾದರೂ ಮಾಡಬಹುದಾ?

464
00:29:09,999 --> 00:29:12,001
-ನಾನು ಏನು ಮಾಡಬಹುದು ನೋಡುತ್ತೇನೆ.
-ಧನ್ಯವಾದ.

465
00:29:12,877 --> 00:29:14,795
ರಜೆ ಬೇಕಾ?

466
00:29:17,715 --> 00:29:19,884
ಇಲ್ಲ. ಪರವಾಗಿಲ್ಲ.

467
00:29:20,801 --> 00:29:21,802
ಸರಿ.

468
00:29:24,889 --> 00:29:26,140
ಹೂಂ. ಸರಿ.

469
00:29:27,683 --> 00:29:30,186
ಪ್ರಾವಿಡೆನ್ಸ್ ಜನರಲ್ ಹಾಸ್ಪಿಟಲ್

470
00:29:50,372 --> 00:29:51,624
ಜೆರ್ ಲಾಬಿಯಲ್ಲಿದ್ದಾನೆ.

471
00:29:52,249 --> 00:29:53,250
ಹೂಂ, ನನಗೆ ಗೊತ್ತು, ಚಿನ್ನ.

472
00:29:53,834 --> 00:29:55,961
ನಮಗೆ ಬೇಕಾದರೆ ಅಂತ ಹತ್ತಿರದಲ್ಲೇ ಇದ್ದಾನೆ.

473
00:29:56,045 --> 00:29:58,631
ನಿನ್ನ ಬಳಿ ಬಂದು ಮಾತಾಡಲು ಪ್ರಯತ್ನಿಸಲ್ಲ.

474
00:29:59,924 --> 00:30:03,010
ಎಷ್ಟು ಒಳ್ಳೆಯವನು.
ಅವನು ಯಾಕೆ ಅಷ್ಟು ಒಳ್ಳೆಯವನು?

475
00:30:04,678 --> 00:30:05,971
ನಾನು ಅವನಿಗೆ ಸಂದೇಶ ಕಳಿಸಲಾ?

476
00:30:07,515 --> 00:30:08,682
ಸ್ಟೀವನ್ ಆರಾಮಾಗುತ್ತಾನಾ?

477
00:30:08,766 --> 00:30:09,934
ಇಸಾಬೆಲ್ ಕೊಂಕ್ಲಿನ್?

478
00:30:10,893 --> 00:30:12,228
ಹಾಂ.

479
00:30:12,311 --> 00:30:14,647
ನಾನು ಡಾಕ್ಟರ್ ಜುನ್ ಕ್ವಾನ್.
ನರವಿಜ್ಞಾನ ತಂಡದ ಮುಖ್ಯಸ್ಥ.

480
00:30:14,730 --> 00:30:17,650
-ಇನ್ನು ನಾನು ನಿಮ್ಮ ಅಣ್ಣನ ಚಿಕಿತ್ಸೆ ನೋಡುವೆ.
-ಯಾಕೆ? ಅವನ ಪರಿಸ್ಥಿತಿ ಹದಗೆಟ್ಟಿದೆಯಾ?

481
00:30:17,733 --> 00:30:20,486
ಇಲ್ಲ. ಯಾರೋ ಮುಖ್ಯ ವ್ಯಕ್ತಿಗಳು
ನಿಮ್ಮ ಕಾಳಜಿ ವಹಿಸುತ್ತಿದ್ದಾರೆ.

482
00:30:21,654 --> 00:30:23,864
ನನಗೆ ಸ್ಟ್ಯಾನ್‌ಫೋರ್ಡ್‌ನಲ್ಲಿರುವ
ಸಹೋದ್ಯೋಗಿಯಿಂದ ಕರೆ ಬಂತು.

483
00:30:25,032 --> 00:30:26,617
ಸ್ಟೀವನ್‌ಗೆ ಮಂಪರು ಬರಿಸಿದ್ದಾರೆ. ಮಲಗಿದ್ದಾನೆ.

484
00:30:26,700 --> 00:30:30,246
ಈಗ ಸ್ಥಿರವಾಗಿದ್ದಾನೆ. ಸಿಟಿ ಸ್ಕ್ಯಾನ್
ಮಾಡಲು ಹೇಳಿದ್ದೇನೆ. ನೀವು ಅವನನ್ನು ನೋಡಿದಿರಾ?

485
00:30:31,205 --> 00:30:32,456
ಅಲ್ಲಿಗೆ ಕರೆದುಕೊಂಡು ಹೋಗುವೆ.

486
00:30:32,540 --> 00:30:35,167
ಇಬ್ಬರು ಮಾತ್ರ ನೋಡಲು ಬರಬಹುದು.
ಕುಟುಂಬದವರು ಮಾತ್ರ.

487
00:30:35,251 --> 00:30:39,255
ಹಾಗಾಗಿ, ಇವರು ಸ್ಟೀವನ್‌ನ ಇನ್ನೊಬ್ಬ ಸಹೋದರಿ
ಅಂದುಕೊಳ್ಳುವೆ. ನನ್ನ ಜೊತೆ ಬನ್ನಿ.

488
00:30:47,388 --> 00:30:49,390
-ನಿನ್ನ ಗೆಳೆಯನ ಬಗ್ಗೆ ಏನಾದರೂ ಗೊತ್ತಾಯಿತಾ?
-ಇಲ್ಲ.

489
00:30:50,724 --> 00:30:52,476
ನೀನು ಅಲ್ಲಿಗೆ ಹೋಗಬಾರದಿತ್ತಾ?

490
00:30:52,560 --> 00:30:54,228
ಹೋಗಿ ಏನು ಮಾಡಲಿ ಅಂತಲೂ ನನಗೆ ಗೊತ್ತಿಲ್ಲ.

491
00:30:54,311 --> 00:30:55,896
ನಾನು ಇನ್ನೂ ವೈದ್ಯನೂ ಅಲ್ಲ.

492
00:30:56,522 --> 00:30:58,566
ಅಲ್ಲದೇ, ಕಳೆದ ಕೆಲವು ವರ್ಷಗಳಿಂದ
ನಾವು ಹೆಚ್ಚು ಮಾತೂ ಆಡಿಲ್ಲ.

493
00:31:00,276 --> 00:31:01,610
ಫೋನ್ ಬಳಸುವಂತಿಲ್ಲ.

494
00:31:02,278 --> 00:31:03,654
ಹಾಂ.

495
00:31:03,737 --> 00:31:05,573
ರಕ್ತ ತೆಗೆಯುವ ಕೆಲಸ ಹೇಗಾಯಿತು?

496
00:31:05,656 --> 00:31:06,782
-ಚೆನ್ನಾಗಾಯಿತು.
-ಚೆನ್ನಾಗಿತ್ತು.

497
00:31:11,912 --> 00:31:13,038
ಇದನ್ನು ತಪ್ಪಾಗಿ ಹೆಸರಿಸಲಾಗಿದೆ.

498
00:31:14,123 --> 00:31:16,458
ಅದು ನನ್ನದು. ಅದು ನನ್ನ ತಪ್ಪು.

499
00:31:16,542 --> 00:31:19,712
-ರೋಗಿಯನ್ನು ಅಪಾಯಕ್ಕೆ ಸಿಲುಕಿಸುವ ತಪ್ಪು ಇದು.
-ಈಗಲೇ ಅದನ್ನು ಸರಿಪಡಿಸುವೆ.

500
00:31:19,795 --> 00:31:21,797
ನಾನು ಅವಕಾಶ ಕೊಟ್ಟಾಗ ನೀನು ಮನೆಗೆ ಹೋಗಬೇಕಿತ್ತು.

501
00:31:21,880 --> 00:31:23,799
-ಮತ್ತೆ ಹೀಗೆ ಆಗಲ್ಲ.
-ಇಲ್ಲ, ಆಗಲ್ಲ.

502
00:31:23,882 --> 00:31:26,594
ಇಲ್ಲಿಗೆ ನಿನ್ನ ಕೆಲಸ ಮುಗಿಯಿತು.
ನೀನು ಇನ್ನೂ ಇದಕ್ಕೆ ಸಿದ್ಧನಿಲ್ಲ.

503
00:31:28,137 --> 00:31:31,974
ಒಂದು ತಪ್ಪಿಗೆ ನನ್ನನ್ನು ತೆಗೆದುಹಾಕುವಿರಾ?
ಡಾಕ್ಟರ್ ನಮಾಜಿ, ದಯವಿಟ್ಟು. ನಾನು ಹಾಗೆ--

504
00:31:32,057 --> 00:31:33,684
ನಿನಗೆ ಇದು ಒಂದು ತಪ್ಪು ಅನಿಸಬಹುದು.

505
00:31:34,268 --> 00:31:36,687
ಆದರೆ ಇದು ನೀನು
ನಿನ್ನ ಮಿತಿಗಳನ್ನು ಅರಿಯದಿರುವ ಬಗ್ಗೆ,

506
00:31:36,770 --> 00:31:39,356
ಇದು ಹೊಣೆಗಾರಿಕೆಯನ್ನು ಹೆಚ್ಚಿಸುತ್ತೆ.
ನನ್ನ ಹೊಣೆಗಾರಿಕೆಯನ್ನು.

507
00:31:39,440 --> 00:31:41,233
-ಡಾಕ್ಟರ್ ನಮಾಜಿ, ನಾನು--
-ಇಲ್ಲ.

508
00:31:42,109 --> 00:31:43,986
ಮತ್ತೆ ಮುಂದಿನ ವರ್ಷ ಪ್ರಯತ್ನಿಸು.

509
00:32:07,843 --> 00:32:09,470
ಸ್ಟೀವನ್, ನಾನು ನಿನಗೆ ಒಂದು ರಹಸ್ಯ ಹೇಳಲಾ?

510
00:32:10,304 --> 00:32:12,348
ನಿನ್ನಷ್ಟು ನಾನು ಯಾರನ್ನೂ ಪ್ರೀತಿಸಿಲ್ಲ.

511
00:32:16,769 --> 00:32:18,437
ಅದು ಎಷ್ಟು ಭಯ ಮೂಡಿಸುತ್ತೆ, ಗೊತ್ತಾ?

512
00:32:23,400 --> 00:32:28,906
ನನಗೆ ಕಾಳಜಿ ಇಲ್ಲ ಎಂಬಂತೆ ನಟಿಸುತ್ತೇನೆ,
ಆದರೆ ನನಗೆ ತುಂಬಾ, ತುಂಬಾ ಕಾಳಜಿ ಇದೆ.

513
00:32:33,494 --> 00:32:36,163
ನೀನು ಸ್ವಲ್ಪ ಸಮಯದಲ್ಲೇ ಬಂದು
ನಾನು ಇದಕ್ಕೆ ಅರ್ಹಳಲ್ಲ ಎನ್ನುವೆ

514
00:32:36,246 --> 00:32:38,165
ಎಂಬ ಭಯ ಇದೆ.

515
00:32:38,874 --> 00:32:42,544
"ಅಸಲಿಗೆ, ನೀನು ನನಗೆ ಅರ್ಹಳಲ್ಲ"
ಎನ್ನುವೆಯೇನೋ ಅಂತ.

516
00:32:55,224 --> 00:32:57,601
ಹಾಗಾಗಿ, ನಾನೇ ನಿನ್ನನ್ನು ದೂರ ತಳ್ಳುತ್ತಿದ್ದರೆ,

517
00:32:57,685 --> 00:33:00,020
ನೀನು ನನಗೆ ಏನೂ ಆಗಬೇಕಿಲ್ಲ ಎಂಬಂತೆ ನಟಿಸಿದರೆ,

518
00:33:00,104 --> 00:33:01,522
ನೀನು ನನಗೆ ನೋಯಿಸಲು ಆಗಲ್ಲ ಅಂದುಕೊಂಡೆ.

519
00:33:03,816 --> 00:33:06,276
ಅದನ್ನು ಹೇಗೆ ನಿಲ್ಲಿಸುವುದೋ ಗೊತ್ತಿಲ್ಲ.

520
00:33:17,121 --> 00:33:19,373
ಗೊತ್ತಾ, ನಾವು ಮೊದಲ ಬಾರಿಗೆ ಒಂದಾದಾಗ,

521
00:33:19,456 --> 00:33:21,792
ನೀನು ನನಗೆ ಹೇಳಿದ್ದು ನೆನಪಿದೆಯಾ, ನೀನು ನನಗೆ…

522
00:33:21,875 --> 00:33:24,169
ನೀನು ನಮ್ಮನ್ನು ಎಂದೂ ಬಿಟ್ಟುಕೊಡಲ್ಲ ಎಂದಿದ್ದೆ.

523
00:33:27,131 --> 00:33:31,009
ನನಗೆ ಅದನ್ನು ನಂಬಲು ತುಂಬಾ ಆಸೆ ಇತ್ತು.

524
00:33:48,277 --> 00:33:50,738
ಒಂದು ಒಳ್ಳೆಯ ಸುದ್ದಿ ಇದೆ.
ಸಿಟಿ ಸ್ಕ್ಯಾನ್‌ನಲ್ಲಿ ಏನೂ ಬಂದಿಲ್ಲ.

525
00:33:50,821 --> 00:33:53,240
"ಸಿಟಿ ಸ್ಕ್ಯಾನ್‌ನಲ್ಲಿ ಏನೂ ಬಂದಿಲ್ಲ"
ಎಂದರೆ ಏನರ್ಥ?

526
00:33:53,323 --> 00:33:55,534
ಸ್ಟೀವನ್‌ನ ಮೆದುಳಿನ ಊತ ಕಡಿಮೆಯಾಗಿದೆ,

527
00:33:55,617 --> 00:33:57,953
ನಾವು ಅವನ ಮಂಪರು ಔಷಧಿ ಕಡಿಮೆ ಮಾಡಬಹುದು.

528
00:33:58,036 --> 00:33:59,705
ಅವನು ಎಚ್ಚರಗೊಳ್ಳಲು ಸ್ವಲ್ಪ ಸಮಯವಾಗುತ್ತೆ.

529
00:33:59,788 --> 00:34:01,623
ಅವರನ್ನು ಭೇಟಿ ಮಾಡಬಹುದು ಎಂದಾಗ ತಿಳಿಸುತ್ತೇವೆ.

530
00:34:01,707 --> 00:34:02,708
ಧನ್ಯವಾದ.

531
00:34:05,627 --> 00:34:09,757
-ಅವನು ಆರಾಮಿದ್ದಾನೆ. ಅವನು ಸರಿಯಾಗುತ್ತಾನೆ.
-ನನಗೆ ಭಯವಾಗುತ್ತಿತ್ತು.

532
00:34:17,181 --> 00:34:19,057
ಇದನ್ನು ನಿನ್ನ ಮೇಲೆ ಹಾಕಿದ್ದಕ್ಕೆ ಕ್ಷಮಿಸು.

533
00:34:19,141 --> 00:34:21,477
ಸ್ಟೀವನ್ ಮತ್ತು ನಾನು ಮತ್ತೆ ಒಂದಾಗೋದು
ನಿನಗಿಷ್ಟ ಇಲ್ಲ ಅಂತ ಗೊತ್ತು.

534
00:34:21,560 --> 00:34:23,687
ಇಲ್ಲ. ನಾನು ಹಾಗೆ ಅಂದುಕೊಳ್ಳಬಾರದಿತ್ತು.

535
00:34:23,771 --> 00:34:27,107
ಇಲ್ಲ, ನೀನು ಹೇಳಿದ್ದು ಸರಿ.
ನಾನು ಗೊಂದಲದಲ್ಲಿದ್ದೆ.

536
00:34:28,192 --> 00:34:31,779
ಸ್ಟೀವನ್‌ನನ್ನು ಬಿಟ್ಟುಕೊಡಲು ಇಷ್ಟವಿಲ್ಲದೆ,
ಆದರೆ ಡೇವಿಸ್‌ನನ್ನೂ ಜೊತೆ ಇಟ್ಟುಕೊಂಡು,

537
00:34:31,862 --> 00:34:36,158
ಅಂದರೆ, ನೋವಾಗದಿರಲಿ ಅಂತ.
ಇದು ಮೂರ್ಖತನ, ಸ್ವಾರ್ಥ.

538
00:34:37,159 --> 00:34:39,328
ಮತ್ತು ಸ್ಟೀವನ್
ಸರಿಯಾದ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದ,

539
00:34:39,411 --> 00:34:43,081
ಮತ್ತು ನನಗೆ ಭಯ ಆಯಿತು. ಆದರೆ ಇದೆಲ್ಲವೂ, ಇದು…

540
00:34:48,128 --> 00:34:52,758
ನನಗನ್ನಿಸುತ್ತೆ… ಇದೆಲ್ಲದರಿಂದ ನನಗೆ ಅರಿವಾಗಿದೆ,
ನಾನು ಇಷ್ಟು ಹೆದರುತ್ತಿದ್ದರೂ ಸಹ,

541
00:34:52,841 --> 00:34:58,388
ನನಗೆ ಸ್ಟೀವನ್‌ನನ್ನು ಮತ್ತೆ ಕಳೆದುಕೊಳ್ಳುವ
ಭಯವಿದೆ, ಪ್ರಯತ್ನಿಸದಿರಲು ಹೆಚ್ಚು ಭಯವಿದೆ.

542
00:35:03,185 --> 00:35:04,770
ನಾನು ಡೇವಿಸ್‌ನಿಂದ ಬೇರೆಯಾಗುತ್ತೇನೆ.

543
00:35:07,105 --> 00:35:09,775
ನೀನು ಏನು ಮಾಡಬೇಕೆಂದರೂ, ನಾನು ಜೊತೆ ನಿಲ್ಲುವೆ.

544
00:35:19,076 --> 00:35:22,287
ಸರಿ. ನಾನು ಈಗ ಹೇಗೆ ಕಾಣುತ್ತಿದ್ದೇನೆ?
ಮಾದಕವಾಗಿ ಕಾಣುತ್ತಿದ್ದೇನಾ?

545
00:35:23,413 --> 00:35:25,582
-ನಾನು ಸುಳ್ಳು ಹೇಳಲ್ಲ.
-ಅಷ್ಟು ಕೆಟ್ಟದಾಗಿ ಕಾಣುತ್ತಿದ್ದೇನಾ?

546
00:35:28,836 --> 00:35:31,255
ಮನೆಗೆ ವಾಪಸ್ ಹೋಗು, ಏನಾದರೂ ತಿನ್ನು.

547
00:35:31,797 --> 00:35:32,798
ಸ್ನಾನ ಮಾಡು.

548
00:35:34,424 --> 00:35:35,509
ವೈದ್ಯರು ಹೇಳಿದ್ದು ಕೇಳಿತಲ್ಲಾ?

549
00:35:35,592 --> 00:35:37,469
ಅವನು ಇನ್ನೂ ಸ್ವಲ್ಪ ಹೊತ್ತು ಏಳಲ್ಲ.

550
00:35:37,553 --> 00:35:38,554
ಸರಿ. ಧನ್ಯವಾದ, ಚಿನ್ನ.

551
00:35:43,559 --> 00:35:44,685
ಹೇ, ಇರು.

552
00:35:47,521 --> 00:35:50,357
ನಿನಗೆ ಮತ್ತೆ ಜೆರೆಮಾಯಾ
ಜೊತೆ ಆಗಬೇಕೆಂದರೆ, ಆಗಿಬಿಡು.

553
00:35:51,024 --> 00:35:53,485
-ನಾನು ಹಾಗೆ ಹೇಳಲಿಲ್ಲ--
-ಮತ್ತು ಅವನು ಬೇಡಿಕೊಳ್ಳುವಂತೆ ಮಾಡು, ಖಂಡಿತ,

554
00:35:53,569 --> 00:35:56,029
ಆದರೆ ಕಳೆದ ನಾಲ್ಕು ವರ್ಷಗಳ ಸಂಬಂಧವನ್ನು

555
00:35:56,113 --> 00:35:58,323
ಹಾಗೇ ಸುಮ್ಮನೆ ಕಳೆದುಕೊಳ್ಳಬೇಡ.

556
00:36:02,077 --> 00:36:04,037
ಅಂದರೆ, ನಿನಗೆ ಇನ್ನೂ ಅದು ಬೇಕಿದ್ದರೆ.

557
00:36:09,042 --> 00:36:10,085
ಸರಿ.

558
00:36:19,344 --> 00:36:20,345
ಲೋರ್.

559
00:36:23,599 --> 00:36:24,683
ನಾವು ಏಳಬೇಕು.

560
00:36:26,226 --> 00:36:27,311
ಬಾಯಿ ಮುಚ್ಚು.

561
00:36:28,979 --> 00:36:30,606
ಇನ್ನೂ ಬೆಳಿಗ್ಗೆ ಏಳಲು ಆಗಲ್ವಾ ನಿನಗೆ?

562
00:36:33,483 --> 00:36:35,319
ಕಣ್ಣು ಕೆರೆಯುತ್ತಿದೆ.

563
00:36:36,153 --> 00:36:38,447
ಕಣ್ಣಿಗೆ ಹಾಕುವ ಹನಿ ತರುವೆಯಾ?

564
00:36:38,530 --> 00:36:39,740
ಹೂಂ.

565
00:36:50,167 --> 00:36:51,376
ದೇವರೇ!

566
00:36:53,045 --> 00:36:54,296
ಜಾನ್, ಇಲ್ಲಿ ಬಾ!

567
00:36:55,839 --> 00:36:57,841
-ದೇವರೇ. ಅಮ್ಮ, ಎಲ್ಲಿದ್ದೆ?
-ಏನು?

568
00:36:57,925 --> 00:36:59,593
-ಈಗಷ್ಟೇ ನಿನ್ನ ಸಂದೇಶಗಳು ಬಂದವು.
-ಏನಾಯಿತು?

569
00:36:59,676 --> 00:37:03,388
ಏನಾಗುತ್ತಿದೆ? ಸ್ಟೀವನ್ ಅಪಘಾತಕ್ಕೀಡಾದನಾ?
ಈಗ ಹೇಗಿದ್ದಾನೆ?

570
00:37:03,472 --> 00:37:04,640
ಆರಾಮಾಗುತ್ತಾನಂತೆ.

571
00:37:05,974 --> 00:37:10,062
ನಾನು ಧೈರ್ಯ ತಂದುಕೊಳ್ಳಲು ನೋಡುತ್ತಿದ್ದೆ.
ಆದರೆ ತುಂಬಾ ಭಯವಾಗಿತ್ತು.

572
00:37:11,647 --> 00:37:13,065
ಬೀನ್… ಬಾಯಿ ಮುಚ್ಚು.

573
00:37:13,148 --> 00:37:15,734
ನಿನಗೆ ಎಷ್ಟು ಭಯವಾಗಿತ್ತೋ, ಊಹಿಸಲೂ ಆಗುತ್ತಿಲ್ಲ.

574
00:37:15,817 --> 00:37:20,113
ನನ್ನನ್ನು ಕ್ಷಮಿಸು. ಅಲ್ಲಿ ಒಬ್ಬಳೇ ಇದ್ದೆಯಾ?

575
00:37:20,739 --> 00:37:24,952
ಇಲ್ಲ, ಇಲ್ಲ. ಟೇಲರ್ ಇಲ್ಲಿದ್ದಾಳೆ,
ತುಂಬಾ ಸಹಾಯ ಮಾಡುತ್ತಿದ್ದಾಳೆ.

576
00:37:26,787 --> 00:37:30,248
ಜೆರ್ ಕೂಡ ಇದ್ದಾನೆ. ರಾತ್ರಿಯೆಲ್ಲಾ ಇಲ್ಲೇ ಇದ್ದ.

577
00:37:30,332 --> 00:37:32,918
ಅಮ್ಮ, ಎಲ್ಲವೂ ತುಂಬಾ ವಿಚಿತ್ರವಾಗಿವೆ.

578
00:37:33,001 --> 00:37:35,462
ಕೇಳು, ಚಿನ್ನ. ನಾನು ಆದಷ್ಟು ಬೇಗ ಅಲ್ಲಿಗೆ ಬರುವೆ

579
00:37:35,545 --> 00:37:39,007
ಮತ್ತು ನಿನ್ನ ಅಪ್ಪನನ್ನೂ ಹುಡುಕಿ
ಅವರಿಗೆ ವಿಷಯ ತಿಳಿಸುವೆ.

580
00:37:40,092 --> 00:37:41,426
ಐ ಲವ್ ಯು, ಬೆಲ್ಲಿ.

581
00:37:42,052 --> 00:37:43,470
ನಾನು ಕೂಡ, ಅಮ್ಮ.

582
00:37:46,098 --> 00:37:47,557
ಸ್ಟೀವನ್‌ಗೆ ಕಾರು ಅಪಘಾತವಾಯಿತಾ?

583
00:37:47,641 --> 00:37:49,810
-ಅವನು ಚೆನ್ನಾಗಿದ್ದಾನೆ. ಆರಾಮಾಗುತ್ತಾನಂತೆ.
-ಸರಿ. ಛೇ!

584
00:37:49,893 --> 00:37:52,187
ಆದರೆ ಬೆಲ್ಲಿ ನೆನ್ನೆ ರಾತ್ರಿ
ನಮ್ಮಿಬ್ಬರಿಗೂ ಕರೆ ಮಾಡಲು ನೋಡಿದ್ದಾಳೆ.

585
00:37:52,270 --> 00:37:55,065
-ಪರವಾಗಿಲ್ಲ. ಅದು--
-ಐದು ನಿಮಿಷಗಳಲ್ಲಿ ಲಾಬಿಯಲ್ಲಿ ಸಿಗು!

586
00:38:06,535 --> 00:38:08,495
ಕೊನ್ರಾಡ್: ಸ್ಟೀವನ್ ಬಗ್ಗೆ ಏನಾದ್ರೂ ಅಪಡೇಟ್ಸ್?

587
00:38:16,503 --> 00:38:18,839
ನಾವು ವರ್ಷಗಳಿಂದ
ಒಬ್ಬರನ್ನೊಬ್ಬರು ಹೆಚ್ಚು ನೋಡಿರಲಿಲ್ಲ,

588
00:38:18,922 --> 00:38:21,049
ಮತ್ತು ನಾವು ಒಂಟಿಯಾಗಿ ಒಟ್ಟಿಗೆ ಇರಲಿಲ್ಲ…

589
00:38:21,133 --> 00:38:22,134
ಹೇ.

590
00:38:22,217 --> 00:38:23,969
…ಆ ದಿನ ಮೋಟೆಲ್‌ನಲ್ಲಿ ಬಿಟ್ಟು.

591
00:38:24,052 --> 00:38:25,387
-ಹೇ.
-ಹೇ.

592
00:38:32,728 --> 00:38:34,146
ಕೋಲು ಯಾಕೆ ಹಿಡಿದಿದ್ದೀಯಾ?

593
00:38:37,441 --> 00:38:39,985
-ನೀನು ಕಳ್ಳ ಅಂದುಕೊಂಡೆ.
-ಖಂಡಿತ ಅಂದುಕೊಂಡಿರುತ್ತೀಯ.

594
00:38:45,198 --> 00:38:46,116
ಜೆರ್ ಎಲ್ಲಿದ್ದಾನೆ?

595
00:38:46,908 --> 00:38:49,119
ಅವನು ಮತ್ತು ನಿನ್ನ ತಂದೆ
ಚಾಮೋನಿಕ್ಸ್‌ಗೆ ಹೋಗುತ್ತಿದ್ದಾರೆ.

596
00:38:51,246 --> 00:38:52,247
ಸರಿ.

597
00:38:53,206 --> 00:38:55,042
ನೀನೂ ಅವರನ್ನು
ಅಲ್ಲಿಯೇ ಭೇಟಿಯಾಗುವವನಿದ್ದೆ, ಅಲ್ವಾ?

598
00:38:55,125 --> 00:38:57,711
ಹೂಂ. ಆದರೆ ಹವಾಮಾನದಿಂದಾಗಿ
ನನ್ನ ವಿಮಾನ ತಡ ಆಯಿತು.

599
00:38:57,794 --> 00:39:00,047
ಅವರು 28ನೇ ತಾರೀಖಿಗೆ ನನಗಾಗಿ
ಮರು ಬುಕ್ ಮಾಡಲು ನೋಡುತ್ತಿದ್ದಾರೆ.

600
00:39:01,757 --> 00:39:02,799
ನೀನಿಲ್ಲೇನು ಮಾಡುತ್ತಿದ್ದೀಯಾ?

601
00:39:04,009 --> 00:39:07,137
ಅಮ್ಮ ಬೆಟ್ಟದಾಚೆಯ ಆಶ್ರಮಕ್ಕೆ ಹೋಗಿದ್ದಾಳೆ,
ಸ್ಟೀವನ್ ನ್ಯೂ ಯಾರ್ಕ್‌ನಲ್ಲಿದ್ದಾನೆ.

602
00:39:07,220 --> 00:39:10,223
ಮನೆಯಲ್ಲಿ ಒಬ್ಬಂಟಿಯಾಗಿದ್ದೆ, ಹಾಗಾಗಿ…

603
00:39:33,914 --> 00:39:35,874
ನಿನ್ನ ಮುಖ ಪೂರ್ತಿ ಚಾಕೊಲೇಟ್ ಅಂಟಿಕೊಂಡಿದೆ.

604
00:39:35,957 --> 00:39:37,459
-ಇಲ್ಲ, ಸುಳ್ಳು.
-ಏನು ಮಾಡಿದೆ?

605
00:39:37,542 --> 00:39:40,212
-ಸಮಯ ಉಳಿಯಲಿ ಅಂತ ನೇರ ಬಾಯಿ ಹಾಕಿದೆಯಾ?
-ಬಾಯಿ ಮುಚ್ಚು.

606
00:39:43,298 --> 00:39:44,466
ಚಳಿ ಆಗುತ್ತಿದೆಯಾ? ಬೆಂಕಿ ಹಚ್ಚಲಾ?

607
00:39:50,055 --> 00:39:52,724
ಇಲ್ಲ, ತುಂಬಾ ತಡವಾಗಿದೆ.

608
00:39:53,308 --> 00:39:54,768
ನಾನು ಮಲಗುವೆ ಅನಿಸುತ್ತೆ.

609
00:39:56,853 --> 00:39:58,230
ಬೆಲ್ಲಿ, ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು.

610
00:39:59,731 --> 00:40:01,149
ನಿನ್ನನ್ನು ನೋಡಿ ಖುಷಿಯಾಯಿತು.

611
00:40:06,238 --> 00:40:07,239
ನನಗೂ.

612
00:40:15,455 --> 00:40:17,874
ಮರುದಿನ ಬೆಳಿಗ್ಗೆ, ನಾನು ಎದ್ದಾಗ,

613
00:40:17,958 --> 00:40:20,460
ಅವನು ಹೋಗಿರಬಹುದೆಂಬ
ವಿಚಿತ್ರ ಭಾವನೆ ಮೂಡುತ್ತಿತ್ತು.

614
00:40:32,264 --> 00:40:33,265
ಆರಾಮಿದ್ದೀಯಾ?

615
00:40:35,433 --> 00:40:36,726
ಇಲ್ಲ. ನನ್ನನ್ನು ಬಿಟ್ಟುಬಿಡು.

616
00:40:36,810 --> 00:40:40,814
-ನೋವಾಗುತ್ತಿದೆಯಾ? ನಡೆದಾಡಲು ಆಗುತ್ತಾ?
-ನೀನು ಹೋಗಿರುತ್ತೀಯ ಅಂದುಕೊಂಡೆ.

617
00:40:40,897 --> 00:40:43,733
ಇಲ್ಲ. ಇನ್ನೂ ಇಲ್ಲೇ ಇದ್ದೇನೆ.

618
00:40:47,612 --> 00:40:49,781
-ಏಳಲು ಸಹಾಯ ಮಾಡುವೆ.
-ಬೇಡ, ಬೇಡ, ಬೇಡ.

619
00:40:49,865 --> 00:40:52,784
-ನನಗೆ… ನನಗೆ ಒಂದು ನಿಮಿಷ ಕೊಡು.
-ಸರಿ.

620
00:41:02,252 --> 00:41:05,088
ಒಂದರಿಂದ ಹತ್ತರಲ್ಲಿ ಹೇಳುವುದಾದರೆ
ಎಷ್ಟು ನೋವಿದೆ?

621
00:41:05,547 --> 00:41:06,631
ಹನ್ನೊಂದು.

622
00:41:06,715 --> 00:41:09,926
-ನೋವು ತಡೆಯಲಾಗದ ಚಿಕ್ಕ ಪಾಪು ನೀನು.
-ಇಲ್ಲ, ಹಾಗೇನಿಲ್ಲ.

623
00:41:11,553 --> 00:41:13,638
ಅಂದರೆ ಜೋರಾಗೇ ಬಿದ್ದಿದ್ದೀಯ.

624
00:41:15,265 --> 00:41:20,103
ನಿಜವಾಗಲೂ, ಕಾರ್ಟೂನ್‌ಗಳಲ್ಲಿ ಪ್ರಾಣಿಗಳು
ಬಾಳೆಹಣ್ಣಿನ ಸಿಪ್ಪೆ ಮೇಲೆ ಜಾರಿ ಬೀಳುತ್ತವಲ್ಲಾ…

625
00:41:21,688 --> 00:41:23,106
ನನ್ನನ್ನು ಪ್ರಾಣಿ ಅನ್ನುತ್ತಿದ್ದೀಯಾ?

626
00:41:30,197 --> 00:41:33,158
ನಾನು ನಿನ್ನನ್ನು ಎತ್ತಿ ಹಾಸಿಗೆ ಮೇಲೆ ಮಲಗಿಸುವೆ.

627
00:41:33,241 --> 00:41:35,452
ಇಲ್ಲ. ಇಲ್ಲ, ಇಲ್ಲ, ಇಲ್ಲ. ಸುಮ್ಮನೆ, ಸುಮ್ಮನೆ…

628
00:41:35,535 --> 00:41:36,953
ಇಲ್ಲ. ಸುಮ್ಮನೆ ಬಿಡು… ನಾನು ತುಂಬಾ ಭಾರ.

629
00:41:37,037 --> 00:41:38,413
-ನನ್ನನ್ನು ಇಲ್ಲಿಯೇ ಬಿಟ್ಟುಬಿಡು.
-ಸರಿ.

630
00:41:38,496 --> 00:41:42,584
ಜೆರ್ ಥರ ಭಾರ ಎತ್ತಿ ಅಭ್ಯಾಸ ಇಲ್ಲ ನನಗೆ, ನಿಜ.
ಆದರೆ ನಿನ್ನನ್ನು ಎತ್ತಲು ಆಗುತ್ತೆ, ಬೆಲ್ಲಿ.

631
00:41:44,127 --> 00:41:45,128
ತಯಾರಾ?

632
00:41:47,088 --> 00:41:48,673
-ಸರಿ, ಬಾ.
-ಸರಿ.

633
00:41:50,217 --> 00:41:52,302
ಏನೂ ಆಗಿಲ್ಲ. ತಯಾರಾ?

634
00:41:57,098 --> 00:41:58,183
ಕಾಲು ನೋಡಿಕೊಂಡು.

635
00:42:02,771 --> 00:42:04,022
-ನಿನಗೇನೂ ಆಗಿಲ್ಲ.
-ಹೂಂ.

636
00:42:10,153 --> 00:42:12,072
ಆಗಲೇ ನನಗೆ ಅಚಾನಕ್ಕಾಗಿ ಆ ಯೋಚನೆ ಬಂದಿದ್ದು,

637
00:42:12,906 --> 00:42:15,158
ನನ್ನ ಒಂದು ಭಾಗ
ನಿನ್ನನ್ನು ಯಾವಾಗಲೂ ಪ್ರೀತಿಸುತ್ತೆ.

638
00:42:27,170 --> 00:42:30,131
ನಾವು ಒಟ್ಟಿಗೆ ದಿನವನ್ನು ಕಳೆದವು,
ಆದರೆ ಒಟ್ಟಿಗೇ ಅಲ್ಲ.

639
00:42:34,886 --> 00:42:39,557
ಜಾರ್ಜ್ ಬೈಲಿ ಏನು ಮಾಡತ್ತಿದ್ದೀಯಾ?
ನನ್ನ ಹುಡುಗಿಯನ್ನು ಕದಿಯಲು ನೋಡುತ್ತಿದ್ದೀಯಾ?

640
00:42:39,975 --> 00:42:41,935
ಏನರ್ಥ?

641
00:42:43,061 --> 00:42:47,524
"ಒಮ್ಮೆಲೇ ಕೆಳಗೆ ಕೂರು." ಕು, ಖಾಲಿ, ಖಾಲಿ, ಸು?

642
00:42:51,444 --> 00:42:52,279
ಕುಕ್ಕರಿಸು.

643
00:42:53,363 --> 00:42:54,364
ಕುಕ್ಕರಿಸು?

644
00:42:57,951 --> 00:43:01,788
ಲೂಯಿಸ್, ಇದು
ಒಂದು ಸುಂದರ ಸ್ನೇಹದ ಪ್ರಾರಂಭ ಅನಿಸುತ್ತೆ.

645
00:43:04,124 --> 00:43:06,418
ಅವಳು ಲಾಸ್ಲೋ ಜೊತೆನೇ ಚೆಂದ.

646
00:43:06,501 --> 00:43:09,838
ನಿನಗೆ ಹುಚ್ಚು. ರಿಕ್ ಮತ್ತು ಇಲ್ಸಾ
ಒಬ್ಬರಿಗೊಬ್ಬರು ಮಾಡಲ್ಪಟ್ಟವರು.

647
00:43:09,921 --> 00:43:12,173
ಲಾಸ್ಲೋ ರೆಸಿಸ್ಟೆನ್ಸ್‌ಗಾಗಿ
ಮಾಡುತ್ತಿದ್ದ ಕೆಲಸಕ್ಕೆ ಹೋಲಿಸಿದರೆ

648
00:43:12,257 --> 00:43:14,634
ಅವರ ಪುಟ್ಟ ಪ್ರೇಮಕಥೆ ಏನೇನೂ ಅಲ್ಲ.

649
00:43:14,718 --> 00:43:17,262
ದೇವರೇ, ಗುರೂ. ಏನು?

650
00:43:17,345 --> 00:43:18,847
ನಾನು ಇನ್ನಷ್ಟು ಉರುವಲು ತರುವೆ.

651
00:43:20,265 --> 00:43:22,267
ಗೊತ್ತಾ, ಇಷ್ಟು ಸಿನಿಕತನ ಇರಲು
ನೀನಿನ್ನೂ ತುಂಬಾ ಚಿಕ್ಕವನು.

652
00:43:22,350 --> 00:43:23,727
ಹೂಂ, ಹೂಂ.

653
00:43:30,817 --> 00:43:31,818
-ಬೆಲ್ಲಿ.
-ಹೇ.

654
00:43:31,901 --> 00:43:34,404
ಬೆಲ್ಲಿ… ಹೇ. ಕ್ಷಮಿಸು,
ಇಲ್ಲಿ ನನ್ನ ನೆಟ್‌ವರ್ಕ್ ಕೆಟ್ಟದಾಗಿದೆ.

655
00:43:34,487 --> 00:43:36,865
ಬೆಟ್ಟದ ಮೇಲೆ ಚಳಿಯಲ್ಲಿ ನಡುಗುತ್ತಿದ್ದೇನೆ.
ನೀನು ಏನು ಮಾಡುತ್ತಿದ್ದೀಯಾ?

656
00:43:36,948 --> 00:43:38,950
ನಾನು ಕಸಿನ್ಸ್‌ನಲ್ಲಿದ್ದೇನೆ.

657
00:43:39,034 --> 00:43:41,786
ತುಂಬಾ ಒಂಟಿತನ ಕಾಡಿತು,
ಹಾಗಾಗಿ ಕಾರಿನಲ್ಲಿ ಇಲ್ಲಿಗೆ ಬಂದೆ.

658
00:43:41,870 --> 00:43:43,955
ಒಳ್ಳೆಯದು. ಟೇಲರ್ ಜೊತೆ ಬಂದೆಯಾ?

659
00:43:44,706 --> 00:43:46,124
ಇಲ್ಲ. ಒಬ್ಬಳೇ ಬಂದೆ.

660
00:43:46,791 --> 00:43:48,418
ಹೂಂ, ನೀನೂ ನನ್ನ ಜೊತೆ ಇಲ್ಲಿದ್ದರೆ ಚೆನ್ನಿತ್ತು.

661
00:43:48,501 --> 00:43:50,628
ಕೊನ್ರಾಡ್ ವಿಮಾನ ಹವಾಮಾನದಿಂದಾಗಿ ತಡವಾಯಿತು,

662
00:43:50,712 --> 00:43:52,130
ಹಾಗಾಗಿ ಇಲ್ಲಿ ಅಪ್ಪನ ಜೊತೆ ಸಿಲುಕಿರುವೆ.

663
00:43:52,881 --> 00:43:54,799
ಹೌದು, ಅವನು, ಅವನು--

664
00:43:54,883 --> 00:43:56,885
-ಏನು?
-ಹಲೋ?

665
00:43:56,968 --> 00:43:59,012
-ಬೆಲ್ಲಿ, ಕೇಳುತ್ತಿದೆಯಾ?
-ಜೆರ್…

666
00:43:59,095 --> 00:44:00,638
ನೀನು ಹೇಳುತ್ತಿರೋದು ನನಗೆ ಕೇಳುತ್ತಿಲ್ಲ.

667
00:44:01,389 --> 00:44:02,682
ಇರಲಿ. ಅದು…

668
00:44:02,766 --> 00:44:03,767
ಏನು?

669
00:44:04,351 --> 00:44:07,270
ಇರು, ನಾಳೆ ಕರೆ ಮಾಡುವೆ, ಸರಿನಾ? ಬಾಯ್, ಬೆಲ್ಸ್.

670
00:44:07,354 --> 00:44:09,189
ಸರಿ. ಸರಿ. ಲವ್ ಯು.

671
00:44:14,736 --> 00:44:17,781
ಹೇ, ನಾನು… ನಾನು ಜೆರ್‌ಗೆ ನೀನೂ ಇಲ್ಲೇ
ಇರುವುದರ ಬಗ್ಗೆ ಹೇಳುತ್ತಿದ್ದೆ. ಅದು…

672
00:44:17,864 --> 00:44:19,324
ಪರವಾಗಿಲ್ಲ.

673
00:44:19,407 --> 00:44:22,327
ಕೊನ್ರಾಡ್ ನನ್ನ ಜೊತೆ ಕಸಿನ್ಸ್‌ನಲ್ಲಿ ಇದ್ದದ್ದು
ನಾನು ಜೆರೆಮಾಯಾಗೆ ಎಂದೂ ಹೇಳಲಿಲ್ಲ.

674
00:44:22,410 --> 00:44:23,745
ಯಾಕೆಂದರೆ ಹೇಳಲು ಏನೂ ಇರಲಿಲ್ಲ.

675
00:44:24,913 --> 00:44:28,833
ಕೊನ್ರಾಡ್ ಜೊತೆ ಏನೂ ಆಗಲಿಲ್ಲ.
ಎಂದೂ ಏನೂ ಆಗುವ ಸಾಧ್ಯತೆಯೂ ಇಲ್ಲ.

676
00:44:39,177 --> 00:44:41,429
ಮರುದಿನ ಬೆಳಿಗ್ಗೆ, ಕೊನ್ರಾಡ್ ಹೋಗಿದ್ದ.

677
00:44:44,474 --> 00:44:46,559
ನಾನು ಅಂದುಕೊಂಡಂತೆಯೇ ಅವನು ಹೊರಟುಹೋಗಿದ್ದ.

678
00:44:50,063 --> 00:44:52,941
ವಿದಾಯ ಹೇಳದೆ. ಭೂತದಂತೆ ಹೋಗಿಬಿಟ್ಟಿದ್ದ.

679
00:45:01,199 --> 00:45:04,327
ಮೆರಿ ಕ್ರಿಸ್ಮಸ್, ಬೆಲ್ಲಿ
ನಿನ್ ನೋಡಿ ಖುಷಿ ಆಯ್ತು

680
00:45:04,411 --> 00:45:07,747
ಕೊನ್ರಾಡ್ ಫಿಷರ್, ಭೂತಕಾಲದ ಕ್ರಿಸ್ಮಸ್ ಭೂತ.

681
00:45:16,172 --> 00:45:19,592
12. ನಾವೆಲ್ ಬೈ ಆಥರ್
ಜೆನ್ನಿ ಹಾನ್, "ಪಿ.ಎಸ್. ಐ _______ ಲವ್ ಯು"

682
00:45:28,685 --> 00:45:31,438
ಸ್ಟಿಲ್

683
00:45:46,411 --> 00:45:53,042
ನೀನೇ ಸ್ಟೀವನ್‌ಗೆ ಸಹಾಯ ಮಾಡಿದ
ಸ್ಟ್ಯಾನ್ಫೋರ್ಡ್‌ನ ಸಂಪರ್ಕ ಹೊಂದಿರೋ ವ್ಯಕ್ತಿನಾ?

684
00:45:56,129 --> 00:45:59,048
ಥ್ಯಾಂಕ್ ಯು. ಎಚ್ಚರ ಇದ್ದಾನೆ.
ನಾವೂ ಚೆನ್ನಾಗಿದ್ದೀವಿ.

685
00:46:16,816 --> 00:46:18,026
ಒಳಗೆ ಬನ್ನಿ.

686
00:46:24,365 --> 00:46:26,201
-ಹೇ.
-ಚಪ್ಪಲಿ ತೆಗೆದು ಬಾ.

687
00:46:26,284 --> 00:46:29,454
ನಾನು ಒಂದು ನಿಮಿಷ ಅಷ್ಟೇ ಇಲ್ಲಿರೋದು.
ನಾನು ಒಳಗೆ ಬರುತ್ತಿದ್ದೆ ಮತ್ತು--

688
00:46:29,537 --> 00:46:31,789
ಮೊದಲ ದಿನವೇ ನನ್ನ ತೆಗೆದುಹಾಕಿದ ಬಗ್ಗೆ
ತಮಾಷೆ ಮಾಡೋಣ ಅಂದುಕೊಂಡೆಯಾ?

689
00:46:31,873 --> 00:46:34,292
ಇಲ್ಲ, ಬೇವರ್ಸಿ. ನಿನ್ನ ಗೆಳೆಯ ಹೇಗಿದ್ದಾನೆ ಅಂತ
ಕೇಳಲು ಬಂದೆ.

690
00:46:34,375 --> 00:46:36,961
ಹೂಂ, ಅವನು ಪರವಾಗಿಲ್ಲ. ಧನ್ಯವಾದ.

691
00:46:37,045 --> 00:46:38,046
ಒಳ್ಳೆಯದು.

692
00:46:38,588 --> 00:46:39,923
ಹೇ, ಇದು ನಿನಗಾಗಿ.

693
00:46:40,006 --> 00:46:40,924
ಧನ್ಯವಾದ.

694
00:46:41,007 --> 00:46:42,091
ಪರವಾಗಿಲ್ಲ.

695
00:46:45,386 --> 00:46:46,471
ಮತ್ತೆ, ನೋಡು…

696
00:46:47,680 --> 00:46:48,806
ನಿನ್ನೆಯ ಬಗ್ಗೆ…

697
00:46:50,225 --> 00:46:52,602
-ನಮಾಜಿ ಕಠಿಣ ವ್ಯಕ್ತಿ ಅಂತ ಎಲ್ಲರಿಗೂ ಗೊತ್ತು.
-ನಾನು ಆರಾಮಿದ್ದೇನೆ.

698
00:46:54,270 --> 00:46:55,772
ಒಳ್ಳೆಯದು. ಅದು…

699
00:46:57,315 --> 00:47:00,610
ಅಸಲಿಗೆ, ನಾನು ಹೇಳಲು ಬಂದಿದ್ದು
ಅವರು ಹೇಳಿದ್ದು ಸರಿ ಅಂತ.

700
00:47:02,820 --> 00:47:05,448
ಅಂದರೆ, ನೋಡು, ನಾನು ಯಾವಾಗಲೂ ನಿನಗೆ
ಸತ್ಯವನ್ನೇ ಹೇಳೋದು ಅಂತ ಗೊತ್ತು ತಾನೇ?

701
00:47:06,032 --> 00:47:09,452
ಮತ್ತು ಸತ್ಯ ಏನೆಂದರೆ,
ನೀನು ತುಂಬಾ ಬುದ್ಧಿವಂತ, ನಿಜ,

702
00:47:09,536 --> 00:47:11,913
ಆದರೆ ನಿನ್ನ ಭಾವನೆಗಳ ಕಡೆ ಸ್ವಲ್ಪ ಗಮನಹರಿಸು.

703
00:47:11,996 --> 00:47:12,997
ಏನು?

704
00:47:13,748 --> 00:47:16,960
ಹೂಂ, ನೀನು ನಿನ್ನ ಭಾವನೆಗಳನ್ನು
ಎಷ್ಟಾದರೂ ನಿರ್ಲಕ್ಷಿಸಬಹುದು.

705
00:47:17,043 --> 00:47:18,253
ಆದರೆ ಅವು ಎಲ್ಲೂ ಹೋಗಲ್ಲ.

706
00:47:19,546 --> 00:47:24,467
ಮತ್ತು ನೀನು ಅವನ್ನು ಎದುರಿಸಲು ಹೆದರುವವರೆಗೆ,
ಅವು ನಿನ್ನನ್ನ ನಿಯಂತ್ರಿಸುತ್ತವೆ, ನೀನವನ್ನಲ್ಲ.

707
00:47:30,181 --> 00:47:31,599
ಹಲೋ ಹೇಳಿದ್ದರೆ ಸಾಕಿತ್ತು.

708
00:47:32,767 --> 00:47:33,768
ಹಲೋ.

709
00:47:36,521 --> 00:47:38,398
ಸ್ಟೀವನ್, ಭೇಟಿ ಮಾಡಲು ತಯಾರಿದ್ದೀಯಾ?

710
00:47:38,481 --> 00:47:40,066
-ಹೂಂ.
-ನೀನು ಎದ್ದೆ.

711
00:47:40,149 --> 00:47:41,150
ಸರಿ.

712
00:47:42,360 --> 00:47:43,695
-ಪಕ್ಕೆಲುಬುಗಳ ಬಗ್ಗೆ ಎಚ್ಚರ.
-ಆರಾಮಾಗಿ.

713
00:47:43,778 --> 00:47:45,697
ಇಲ್ಲ, ಇಲ್ಲ, ಇನ್ನೊಂದನ್ನು ಮುರಿದುಬಿಡು.

714
00:47:45,780 --> 00:47:47,949
ಬರೀ ಬಿರುಕಿದೆ ಅಷ್ಟೇ, ಚಿಕ್ಕ ಮಗು ನೀನು.

715
00:47:48,491 --> 00:47:51,953
ಅಪ್ಪ-ಅಮ್ಮ…
ಅಪ್ಪ-ಅಮ್ಮ ಹೇಗಿದ್ದಾರೆ? ಎಲ್ಲಿದ್ದಾರೆ?

716
00:47:52,036 --> 00:47:53,413
-ದಾರಿಯಲ್ಲಿದ್ದಾರೆ.
-ಹೇ.

717
00:47:57,834 --> 00:47:58,835
ಹಾಯ್.

718
00:48:00,295 --> 00:48:03,548
ಒಂದೆರಡು ನಿಮಿಷ ನೀವು ಮಾತಾಡಿಕೊಳ್ಳಿ.
ನೀನು ಬದುಕಿರೋದು ಸಂತೋಷ.

719
00:48:08,720 --> 00:48:11,264
ಎಲ್ಲರನ್ನೂ ಹೆದರಿಸಿಬಿಟ್ಟೆ ನೀನು, ಗೊತ್ತಾ?

720
00:48:11,931 --> 00:48:12,974
ಬೆಲ್ಲಿಗೆ ಚಿಂತೆಯಾಗಿತ್ತು.

721
00:48:13,057 --> 00:48:15,727
ನಿನ್ನದು ನಾಟಕ ನಡೆಯುತ್ತಿತ್ತು ಅಂತ
ನನಗೆ ಗೊತ್ತು. ನಿಜವಾಗಲೂ.

722
00:48:16,227 --> 00:48:17,895
ನಾನು ಕೋಮಾದಲ್ಲಿದ್ದೆ. ಹಾಗಾಗಿ…

723
00:48:17,979 --> 00:48:21,316
ಹೂಂ, ಆದರೆ ಅದೂ ಔಷಧಿಯಿಂದಾಗಿ.

724
00:48:26,154 --> 00:48:29,574
ಸ್ಟೀವನ್, ತಮಾಷೆ ಮಾಡುತ್ತಿದ್ದೇನೆ.
ನನಗೂ ನಿನ್ನ ಬಗ್ಗೆ ಚಿಂತೆಯಾಗಿತ್ತು, ಖಂಡಿತ.

725
00:48:29,657 --> 00:48:31,743
ಹೂಂ, ಹೂಂ. ಗೊತ್ತಾ, ನಾನು ಎದ್ದಾಗಿನಿಂದ

726
00:48:31,826 --> 00:48:33,828
ನೀನು ಹೇಳಿದ್ದರ ಬಗ್ಗೆ ಯೋಚಿಸುತ್ತಿದ್ದೆ.

727
00:48:33,911 --> 00:48:35,413
-ಅಪಘಾತಕ್ಕೆ ಮುಂಚೆ ಹೇಳಿದ್ದರ ಬಗ್ಗೆ.
-ನಾನೂ.

728
00:48:35,496 --> 00:48:36,914
ಮತ್ತು ನೀನು ಹೇಳಿದ್ದು ಸರಿ.

729
00:48:39,792 --> 00:48:41,127
ನಾನು, ನೀನು, ಜೊತೆ ಇರಲು ಆಗಲ್ಲ.

730
00:48:43,046 --> 00:48:44,047
ಏನು?

731
00:48:47,759 --> 00:48:51,137
ನಾವು ನ್ಯೂಯಾರ್ಕ್‌ನಲ್ಲಿ ಆ ದಿನ
ಒಬ್ಬರನ್ನೊಬ್ಬರು ಭೇಟಿಯಾಗಿರದೆ ಇದ್ದಿದ್ದರೆ,

732
00:48:51,220 --> 00:48:53,806
ನಮ್ಮ ಜೀವನ ಚೆನ್ನಾಗಿರುತ್ತಿತ್ತು,
ನಾವು ಚೆನ್ನಾಗಿರುತ್ತಿದ್ದೆವು.

733
00:48:53,890 --> 00:48:55,767
ಹಾಗಾಗಿ, ನಾವು ಭೇಟಿಯೇ ಆಗಿಲ್ಲ ಎಂಬಂತೆ ಇರೋಣ.

734
00:49:00,730 --> 00:49:03,941
ನಿನ್ನ ವಿಷಯಕ್ಕೆ ಬಂದಾಗ
ನನ್ನ ಆಲೋಚನೆಗಳು ಎಂದೂ ಸ್ಪಷ್ಟವಾಗಿರಲ್ಲ, ಟೇ.

735
00:49:06,778 --> 00:49:08,029
ನಿನ್ನನ್ನು ಬಿಡಲು ನನಗಾಗಲಿಲ್ಲ.

736
00:49:09,739 --> 00:49:11,699
ನನಗೆ ಸವಾಲುಗಳು ಇಷ್ಟ, ಆದರೆ…

737
00:49:15,328 --> 00:49:16,579
ಇದು ಎಚ್ಚರಿಕೆಯ ಕರೆ.

738
00:49:18,081 --> 00:49:21,709
ನೀನು ಹೇಳಿದ್ದು ಸರಿ.
ನಾನು, ನೀನು, ಜೊತೆ ಇರಲು ಆಗಲ್ಲ.

739
00:49:26,214 --> 00:49:28,549
ಒಳ್ಳೆಯದು. ಹಾಗಾದರೆ ನಾವಿಬ್ಬರೂ
ಒಮ್ಮತದಲ್ಲಿ ಇದ್ದೇವೆ.

740
00:49:29,050 --> 00:49:31,386
-ಹೌದು, ಹೌದು. ಕೊನೆಗೂ.
-ನಾನು ಬೆಲ್ಲಿಯನ್ನು ಹುಡುಕಿ ಬರುವೆ.

741
00:49:42,438 --> 00:49:46,234
ಮೊದಲ ಪ್ರೇಮಗಳು ಮುಖ್ಯ.
ಮತ್ತು ಕೊನ್ರಾಡ್ ನನ್ನ ಮೊದಲ ಪ್ರೇಮ.

742
00:49:47,151 --> 00:49:50,113
ನನ್ನ ಜೀವನದುದ್ದಕ್ಕೂ,
ನಾನವನನ್ನು ಪ್ರೀತಿಯಿಂದ ನೆನೆಸಿಕೊಳ್ಳುತ್ತೇನೆ,

743
00:49:50,196 --> 00:49:53,533
ಮೊದಲ ಸಾಕುಪ್ರಾಣಿಯನ್ನು,
ಓಡಿಸಿದ ಮೊದಲ ಕಾರನ್ನು ನೆನೆಸಿಕೊಂಡಂತೆಯೇ,

744
00:49:55,159 --> 00:49:57,120
ಆದರೆ ಅವು ಕೊನೆಯವಷ್ಟು ಮುಖ್ಯವಲ್ಲ.

745
00:50:10,091 --> 00:50:11,426
ಸ್ಟೀವನ್ ಆರಾಮಾಗುತ್ತಾನಂತೆ.

746
00:50:12,677 --> 00:50:13,761
ದೇವರ ದಯೆ.

747
00:50:19,142 --> 00:50:21,144
ಸ್ವಲ್ಪ ಓಡಾಡಿ ಬರೋಣಾ?

748
00:50:23,229 --> 00:50:24,772
ಹೂಂ, ಹೂಂ, ನನಗೂ ಅದೇ ಬೇಕು.

749
00:50:30,319 --> 00:50:33,781
ನನಗೆ ನಿನ್ನ ಮೇಲೆ
ತುಂಬಾ ಕೋಪ ಬಂದಿತ್ತು… ಇನ್ನೂ ಇದೆ.

750
00:50:34,449 --> 00:50:35,950
ಕೋಪ ಮಾಡಿಕೊಳ್ಳುವ ಹಕ್ಕು ನಿನಗಿದೆ.

751
00:50:36,492 --> 00:50:39,620
ನಾನು ಹಾಗೆ ಮಾಡಿದ್ದಕ್ಕೆ ನನಗೆ ವಿಷಾದವಿದೆ,
ನಿನಗೆ ಮೊದಲೇ ಹೇಳಲಿಲ್ಲ ಅಂತ ಕೂಡ.

752
00:50:39,704 --> 00:50:42,498
ಅಷ್ಟು ಕೆಟ್ಟದಾಗಿ
ವಿಷಯ ನಿನಗೆ ತಿಳಿಯಿತು, ಕ್ಷಮಿಸು.

753
00:50:43,249 --> 00:50:47,128
ನಿನಗೆ ಮತ್ತೆ ನನ್ನ ಮೇಲೆ ನಂಬಿಕೆ ಬರಲು
ನಾನು ತುಂಬಾ ಶ್ರಮಿಸಬೇಕು ಅಂತ ಗೊತ್ತು,

754
00:50:47,211 --> 00:50:50,673
ಆದರೆ ನೀನು ಒಪ್ಪಿದ್ದರೆ ನಾನು
ಎಲ್ಲವನ್ನೂ ಮಾಡಲು ಸಿದ್ಧ.

755
00:50:54,677 --> 00:50:55,845
ನನ್ನನ್ನೂ ಕ್ಷಮಿಸು.

756
00:50:58,264 --> 00:50:59,265
ಕ್ಷಮೆ ಯಾಕೆ?

757
00:51:01,392 --> 00:51:07,565
ಆ ಜಗಳ ಮತ್ತು ಕ್ಯಾಬೊದಲ್ಲಿ ಆದ ಎಲ್ಲಕ್ಕೂ
ನಾನೂ ಕಾರಣ. ಹಾಗಾಗಿ, ಕ್ಷಮಿಸು.

758
00:51:10,860 --> 00:51:13,070
ನಾವು ಬೇರ್ಪಟ್ಟಿದ್ದೇವೆ ಅಂತ
ನೀನು ಅಂದುಕೊಂಡಿದ್ದೆ ಅಂತ ಗೊತ್ತು.

759
00:51:15,031 --> 00:51:16,032
ನಿಜವಾಗಲೂ?

760
00:51:17,825 --> 00:51:18,826
ಹೂಂ, ಆದರೆ ನನಗೆ…

761
00:51:18,910 --> 00:51:23,164
ನೀನು ಅಷ್ಟು ಸುಲಭವಾಗಿ ಹೇಗೆ
ಬೇರೆಯವರೆಡೆಗೆ ಹೋದೆ ಅಂತ ಅರ್ಥವಾಗುತ್ತಿಲ್ಲ.

762
00:51:23,247 --> 00:51:25,374
ಅಂದರೆ, ನನ್ನಿಂದ ಏನೂ ಮಾಡಲು ಆಗುತ್ತಿರಲಿಲ್ಲ.

763
00:51:25,458 --> 00:51:27,794
ನೀನು ಹೇಗೆ ಬೇರೆಯವರ ಜೊತೆ ಸೆಕ್ಸ್ ಮಾಡಿದೆ?

764
00:51:27,877 --> 00:51:30,838
ಇಲ್ಲ, ಬೆಲ್ಲಿ,
ಆ ಪೂರ್ತಿ ವಾರ ನನ್ನಲ್ಲಿ ಭಾವನೆಗಳೇ ಇರಲಿಲ್ಲ.

765
00:51:31,339 --> 00:51:34,467
ನಾನು ಅಲ್ಲಿ ಇದ್ದಂತೆಯೂ ನನಗೆ ಅನಿಸುತ್ತಿರಲಿಲ್ಲ
ಲೇಸಿ ಮತ್ತು ನಾನು…

766
00:51:34,550 --> 00:51:35,468
ನಾವು ಸೆಕ್ಸ್ ಮಾಡಿದಾಗ.

767
00:51:37,261 --> 00:51:42,183
ಅದಾದ ಮೇಲೆ, ನಾನು ಬಚ್ಚಲುಮನೆಯಲ್ಲಿ
ಎಷ್ಟು ಹೊತ್ತು ಕೂತು ಅತ್ತೆನೋ ನನಗೇ ಗೊತ್ತಿಲ್ಲ,

768
00:51:43,476 --> 00:51:46,896
ಇಷ್ಟೆಲ್ಲದರ ಮೇಲೆ ನಾನು ನಿನಗೆ
ಹೇಗೆ ಯೋಗ್ಯ ಅಂತ ಯೋಚಿಸುತ್ತಾ.

769
00:51:50,817 --> 00:51:55,988
ಒಂದು ತಪ್ಪಿಗೆ ಇಷ್ಟೆಲ್ಲಾ ವರ್ಷಗಳ ಪ್ರೀತಿ
ಹಾಳು ಮಾಡಿಕೊಳ್ಳೋದು ಬೇಡ.

770
00:51:58,407 --> 00:52:05,164
ಅಂದರೆ, ನಮ್ಮಿಬ್ಬರ ಪ್ರೀತಿ ನಮ್ಮ
ತಪ್ಪುಗಳಿಗಿಂತ ಹೆಚ್ಚು ಅಂತ ನಮಗೆ ಅನಿಸುತ್ತೆಂದರೆ

771
00:52:07,416 --> 00:52:09,252
ನಾವು ಬಹುಶಃ ಮತ್ತೆ ತಾಜಾವಾಗಿ ಶುರು ಮಾಡಬಹುದು.

772
00:52:10,211 --> 00:52:13,840
ನನಗದು ಬೇಕು, ಬೆಲ್ಸ್. ನನಗದು ಖಂಡಿತ ಬೇಕು.

773
00:52:15,758 --> 00:52:18,052
ಮತ್ತೆಂದೂ ಹೀಗೆ ನನಗೆ ನೋಯಿಸಬೇಡ.

774
00:52:18,719 --> 00:52:19,720
ನನ್ನಾಣೆ.

775
00:52:23,349 --> 00:52:24,433
ನನ್ನಾಣೆ.

776
00:52:38,447 --> 00:52:40,116
ನಾನು ಇದನ್ನು ಮತ್ತೆ ಹಾಳು ಮಾಡಲ್ಲ.

777
00:52:41,826 --> 00:52:42,827
ಹಾಳು ಮಾಡಲ್ಲ.

778
00:52:43,953 --> 00:52:46,289
ಸ್ಟೀವನ್‌ಗೆ ಹೀಗಾದ ಮೇಲೆ, ನನಗೆ ಅರ್ಥವಾಯಿತು.

779
00:52:47,331 --> 00:52:50,793
ಜೀವನ ತುಂಬಾ ಚಿಕ್ಕದು,
ಅದನ್ನು ಪ್ರೀತಿಸುವವರೊಂದಿಗೆ ಕಳೆಯಬೇಕು.

780
00:52:53,379 --> 00:52:55,798
ನನಗೆ ಸದಾ ನಿನ್ನ ಜೊತೆ ಇರಬೇಕು. ಏನೇ ಆದರೂ.

781
00:52:57,633 --> 00:52:59,385
ನೀನಿಲ್ಲದೆ ನನ್ನ ಜೀವನವನ್ನು ಊಹಿಸಲೂ ಆಗಲ್ಲ.

782
00:53:00,219 --> 00:53:01,721
ನನಗೂ.

783
00:53:01,804 --> 00:53:06,684
ಬೆಲ್ಲಿ, ಇದು ಎಂದೆಂದಿಗೂ ನಮ್ಮದೇ ಕಥೆ.
ನಿನ್ನದು ಮತ್ತು ನನ್ನದು. ಬೇರೆಯವರದ್ದಲ್ಲ.

784
00:53:10,938 --> 00:53:12,106
ಏನು ಯೋಚಿಸುತ್ತಿರುವೆ?

785
00:53:14,066 --> 00:53:16,277
ಅದು… ಭವಿಷ್ಯ. ಇದೊಂದು ಹುಚ್ಚುತನದಂತೆ.

786
00:53:16,360 --> 00:53:17,945
ಇಲ್ಲ, ಏನು? ಹೇಳು.

787
00:53:21,449 --> 00:53:23,117
-ನೀನು…
-ಹೌದು.

788
00:53:23,951 --> 00:53:25,578
ನಾನು ಏನು ಹೇಳುತ್ತೇನಂತಲೂ ನಿನಗೆ ಗೊತ್ತಿಲ್ಲ.

789
00:53:27,747 --> 00:53:28,748
ಹೇಳಿ ನೋಡು.

790
00:53:33,878 --> 00:53:34,754
ಇಸಾಬೆಲ್ ಕೊಂಕ್ಲಿನ್,

791
00:53:36,380 --> 00:53:37,214
ನನ್ನ ಮದುವೆ ಆಗುವೆಯಾ?

792
00:53:39,258 --> 00:53:41,177
ಹೌದು. ಹೌದು. ಆಗುವೆ.

793
00:53:51,562 --> 00:53:52,563
ಐ ಲವ್ ಯು.

794
00:53:53,105 --> 00:53:54,357
ನಾನೂ ಕೂಡ.

795
00:54:20,007 --> 00:54:21,926
ಜೆನ್ನಿ ಹ್ಯಾನ್
ಪುಸ್ತಕದ ಆಧಾರದ ಮೇಲೆ

796
00:55:56,937 --> 00:55:58,939
ಉಪ ಶೀರ್ಷಿಕೆ ಅನುವಾದ: ಅನುರಾಧ

797
00:55:59,023 --> 00:56:01,025
ಸೃಜನಶೀಲ ಮೇಲ್ವಿಚಾರಕರು
ಸುಬ್ಬಯ್ಯ ಕೆಜಿ
ಲ್ಲ.

