1
00:00:11,971 --> 00:00:14,140
ದಿ ಸಮ್ಮರ್ ಐ ಟರ್ನ್ಡ್ ಪ್ರಿಟ್ಟಿಯಲ್ಲಿ
ಈ ಹಿಂದೆ…

2
00:00:14,223 --> 00:00:16,392
ಐ ಲವ್ ಯು. ಅದು ಎಂದಿಗೂ ಬದಲಾಗಲ್ಲ.

3
00:00:16,475 --> 00:00:18,644
ನಿನ್ನ ತಮ್ಮನನ್ನು ಮದುವೆಯಾಗುತ್ತಿದ್ದೇನೆ,
ನಾನು ನಿನ್ನನ್ನು

4
00:00:18,728 --> 00:00:21,063
ಅವನ ಜೊತೆ ಅಲ್ಲಿ ನಿಲ್ಲಲು ಬಿಡಬೇಕಾ?
ಅವನ ಮದುವೆಯ ದಿನದಂದು?

5
00:00:21,147 --> 00:00:23,524
ನಾನು ಈ ಅಭ್ಯಾಸ
ಮತ್ತು ರಾತ್ರಿಯ ಊಟವನ್ನು ಮುಗಿಸಬೇಕು…

6
00:00:23,607 --> 00:00:25,526
ಆಮೇಲೆ ನಾನು ನನ್ನ
ಆತ್ಮೀಯ ಸ್ನೇಹಿತನನ್ನು ಮದುವೆಯಾಗಬಹುದು.

7
00:00:25,609 --> 00:00:29,697
ಅವನು ಯಾವ ಹುಡುಗಿಯ ಜೊತೆ ಇರುತ್ತಾನೆ
ಅಂತ ನಾನಂದುಕೊಂಡೆನೋ, ನೀನು ಹಾಗೇ ಇದ್ದೀಯ.

8
00:00:29,780 --> 00:00:31,490
-ಏನಾದರೂ?
-ಇಲ್ಲ. ನಿನಗೆ?

9
00:00:31,574 --> 00:00:32,408
ಏನೂ ಇಲ್ಲ.

10
00:00:32,491 --> 00:00:34,910
ನನ್ನ ಮತ್ತು ಡೆನೀಸ್ ನಡುವೆ ಏನೂ ಇಲ್ಲ.

11
00:00:35,369 --> 00:00:37,663
ಕೊನ್ರಾಡ್ ಅವನಿಗೆ ಇನ್ನೂ
ನನ್ನ ಮೇಲೆ ಭಾವನೆಗಳಿವೆ ಅಂದ.

12
00:00:37,747 --> 00:00:39,749
ಅವನು ನನಗೆ ಹೀಗೆ ಮಾಡಿದ ಅಂತ ನಂಬಲಾಗುತ್ತಿಲ್ಲ.

13
00:00:40,791 --> 00:00:42,752
-ನೀನಿದನ್ನು ಮಾಡಬಾರದು ಅನಿಸುತ್ತೆ.
-ಯಾವುದನ್ನು?

14
00:00:42,835 --> 00:00:43,669
ಜೆರೆಮಾಯಾನ ಜೊತೆ ಮದುವೆ.

15
00:00:43,753 --> 00:00:45,755
ನಿನಗೆ ಮನಸ್ಸಿಲ್ಲ ಅನಿಸುತ್ತೆ.

16
00:00:45,838 --> 00:00:47,506
ಇದು ನಿನಗಾಗಿ. ಸುಸಾನ್ನಾಳಿಂದ.

17
00:00:47,590 --> 00:00:48,799
ಜೆರ್ ಬಳಿಯೂ ಒಂದು ಇದೆ.

18
00:00:50,217 --> 00:00:53,471
ನೀನು ಇನ್ನು ನನ್ನ ಅಣ್ಣನಲ್ಲ.
ನೀನು ನನ್ನ ಪಾಲಿಗೆ ಸತ್ತಿದ್ದೀಯ. ಇದು ನಿನಗೆ.

19
00:00:53,554 --> 00:00:54,388
ಪ್ರಿಯ ಕೊನ್ರಾಡ್,

20
00:00:54,472 --> 00:00:56,724
ನಿನ್ನಲ್ಲಿ ಒಂದು ಭಾಗವಿದೆ
ಅದು ಯಾವಾಗಲೂ ಅವನನ್ನು ಪ್ರೀತಿಸುತ್ತೆ,

21
00:00:56,807 --> 00:00:58,476
ಮತ್ತದು ನೀನಂದುಕೊಂಡಿರುವುದಕ್ಕಿಂತ ದೊಡ್ಡದು.

22
00:00:58,559 --> 00:01:00,019
ಅವನನ್ನು ಅಳಿಸಿಹಾಕಲು ನನ್ನ ಮದುವೆಯಾಗಬೇಡ.

23
00:01:02,229 --> 00:01:04,690
ದಯವಿಟ್ಟು 10:20ಕ್ಕೆ
ಪ್ಯಾರಿಸ್‌ಗೆ ಒಂದು ಟಿಕೆಟ್ ಕೊಡುವಿರಾ?

24
00:01:05,566 --> 00:01:08,527
ನಿನಗೆ ಗೊತ್ತಿರಲಿ… ಏನೇ ಆಗಲಿ,

25
00:01:08,611 --> 00:01:10,488
ನಿನ್ನ ಜೊತೆ ಇರುವುದು,
ನಿನ್ನನ್ನು ಪ್ರೀತಿಸುವುದು…

26
00:01:11,071 --> 00:01:12,281
ನನಗೆ ಮೌಲ್ಯಯುತವಾಗಿತ್ತು.

27
00:01:20,289 --> 00:01:23,542
ದಿ ಸಮ್ಮರ್
ಐ ಟರ್ನ್ಡ್ ಪ್ರಿಟ್ಟಿ

28
00:01:26,504 --> 00:01:28,881
ಎರಡು-ನಾಲ್ಕು-ಆರು ವಿಮಾನಕ್ಕೆ
ಇದು ಕೊನೆಯ ಬೋರ್ಡಿಂಗ್ ಕರೆ…

29
00:01:28,964 --> 00:01:31,509
-ಮುಂದಿನವರು, ದಯವಿಟ್ಟು.
-ಪಾಸ್‌ಪೋರ್ಟ್ ಮತ್ತು ಟಿಕೆಟ್, ದಯವಿಟ್ಟು?

30
00:01:32,802 --> 00:01:34,804
-ನೀವು.
-ನೀವು ಹೋಗಿ.

31
00:01:34,887 --> 00:01:36,806
ಟಿಕೆಟ್ ಮತ್ತು ಪಾಸ್‌ಪೋರ್ಟ್. ಧನ್ಯವಾದ.

32
00:01:38,516 --> 00:01:40,059
-ನಿಮ್ಮ ಪ್ರಯಾಣವನ್ನು ಆನಂದಿಸಿ.
-ಧನ್ಯವಾದ.

33
00:01:41,143 --> 00:01:43,604
ಮಿಸ್? ಪಾಸ್‌ಪೋರ್ಟ್
ಮತ್ತು ಟಿಕೆಟ್ ಕೊಡಿ, ದಯವಿಟ್ಟು.

34
00:01:45,564 --> 00:01:46,565
ಟಿಕೆಟ್ ಮತ್ತು ಪಾಸ್‌ಪೋರ್ಟ್.

35
00:01:51,320 --> 00:01:52,613
ನಿಮ್ಮ ಹಾರಾಟವನ್ನು ಆನಂದಿಸಿ.

36
00:01:54,031 --> 00:01:55,616
-ನಿಮ್ಮ ಪ್ರಯಾಣ ಸುರಕ್ಷಿತವಾಗಿರಲಿ.
-ಧನ್ಯವಾದ.

37
00:01:57,159 --> 00:01:58,577
ಪಾಸ್‌ಪೋರ್ಟ್ ಮತ್ತು ಟಿಕೆಟ್ ಕೊಡಿ.

38
00:02:09,588 --> 00:02:12,299
ಪ್ಯಾರಿಸ್‌ಗೆ ಎರಡು-ನಾಲ್ಕು-ಆರು ವಿಮಾನಕ್ಕಾಗಿ
ಬೋರ್ಡಿಂಗ್, ಕೊನೆಯ ಕರೆ.

39
00:02:12,383 --> 00:02:14,260
ಹೇ, ಅಪ್ಪ. ನನಗೆ ಗೊತ್ತು ನೀವು ಬಹುಶಃ--

40
00:02:14,343 --> 00:02:15,803
ಕೊನೀ. ಅವನು ಹೇಗಿದ್ದಾನೆ?

41
00:02:17,388 --> 00:02:20,015
ಪಾಪ. ಅವನೇ ನಿಲ್ಲಿಸಿದ್ದು ಅನ್ನುತ್ತಿದ್ದಾನೆ,

42
00:02:20,099 --> 00:02:23,060
ಆದರೆ ನಮಗಿಬ್ಬರಿಗೂ ಗೊತ್ತು
ಅದು ಬಹುಶಃ ಬೆಲ್ಲಿಯ ನಿರ್ಧಾರ ಅಂತ.

43
00:02:25,563 --> 00:02:27,565
-ಮದುವೆನಾ?
-ಹೌದು, ಮದುವೆ!

44
00:02:28,399 --> 00:02:29,650
ಎಂತಹ ಗೊಂದಲ.

45
00:02:29,733 --> 00:02:32,528
ಕೇಳು, ನಾನು ಇನ್ನೂ ಕೆಲವು ಗಂಟೆಗಳ ಕಾಲ
ಇಲ್ಲೇ ಇರುತ್ತೇನೆ.

46
00:02:32,611 --> 00:02:34,238
ನೀನು ಅವನನ್ನು ನೋಡಿಕೊಳ್ಳುವೆ, ಅಲ್ವಾ?

47
00:02:38,492 --> 00:02:39,326
ಕೊನ್ರಾಡ್?

48
00:02:39,410 --> 00:02:40,244
ಹೌದು.

49
00:02:42,746 --> 00:02:45,374
ಹೂಂ. ಹೂಂ. ಸರಿ. ಖಂಡಿತ.

50
00:02:48,544 --> 00:02:49,545
ನಾನು ನೋಡಿಕೊಳ್ಳುವೆ.

51
00:02:52,131 --> 00:02:53,424
ಅದ್ಭುತ. ಧನ್ಯವಾದ.

52
00:03:09,607 --> 00:03:13,277
ಕುಡಿ! ಕುಡಿ! ಕುಡಿ! ಕುಡಿ!

53
00:03:13,360 --> 00:03:15,905
-ಸರಿ. ಹೂಂ.
-ಹೇ, ಏನಿದು?

54
00:03:16,614 --> 00:03:19,617
ಹೇ, ಕೇಳು. ಹೂಂ.
ನಾನು ನಿನ್ನನ್ನು ಬೆಂಬಲಿತ್ತಿದ್ದೇನೆ, ಕಣೋ. ಹಾಂ!

55
00:03:19,700 --> 00:03:21,994
ಸರಿ. ಹೇ, ಬಾರ್‌ಟೆಂಡರ್, ಇನ್ನೂ ಎರಡು ಕೊಡುವಿರಾ?

56
00:03:22,077 --> 00:03:24,413
ಈಗ ನೀರು ತರಿಸೋಣ, ಸರಿನಾ?

57
00:03:24,496 --> 00:03:26,957
-ಡೆನೀಸ್, ಡೆನೀಸ್.
-ಸರಿನಾ? ದಯವಿಟ್ಟು?

58
00:03:27,041 --> 00:03:30,044
ನೋಡು, ನಾನು ಬೀರಾಲಜಿಯಲ್ಲಿ ಪರಿಣಿತ, ಸರಿನಾ?
ನನಗಿನ್ನೂ ಅಮಲೂ ಏರಿಲ್ಲ.

59
00:03:30,127 --> 00:03:32,838
ಅವನು ಕುಡಿಯಲಿ, ಅಮ್ಮ.
ಅವನ ಮದುವೆ ಈಗಷ್ಟೇ ನಿಂತಿದೆ.

60
00:03:32,922 --> 00:03:34,089
-ಕಪಾಳಕ್ಕೆ ಹೊಡೆಯುವೆ.
-ಸರಿ.

61
00:03:34,173 --> 00:03:36,425
ಮದುವೆ ನಿಲ್ಲಲಿಲ್ಲ. ನಾನು ನಿಲ್ಲಿಸಿದೆ.

62
00:03:36,508 --> 00:03:39,094
ನಿಜ, ನೀನೇ ನಿಲ್ಲಿಸಿದೆ. ಯಾಕೆ ಗೊತ್ತಾ?

63
00:03:39,178 --> 00:03:41,805
ಯಾಕೆಂದರೆ ನನ್ನ ಹುಡುಗನಿಗೆ
ಈಗಲೇ ಕಟ್ಟಿಹಾಕಿಕೊಳ್ಳುವುದು ಇಷ್ಟ ಇಲ್ಲ.

64
00:03:41,889 --> 00:03:43,974
ಬೆಲ್ಲಿಗಿಂತ ಮಾದಕ ಹುಡುಗರು,
ಹುಡುಗಿಯರು ಸಾಕಷ್ಟು ಇದ್ದಾರೆ.

65
00:03:44,058 --> 00:03:45,059
-ಇಗೋ.
-ಧನ್ಯವಾದ.

66
00:03:45,142 --> 00:03:45,976
ಅವಳು ನನ್ನ ತಂಗಿ.

67
00:03:46,060 --> 00:03:48,437
-ಕ್ಷಮಿಸು. ಕೇಳು, ಬಾರ್ ಸುತ್ತಲೂ ನೋಡಿ.
-ದೇವರೇ.

68
00:03:48,520 --> 00:03:51,315
ಬಾರ್ ಸುತ್ತಲೂ ನೋಡು.
ಈ ಬಾರ್ ತುಂಬಾ ಮಾದಕ ಜನರು ತುಂಬಿದ್ದಾರೆ.

69
00:03:51,398 --> 00:03:53,233
ಹುಡುಗರು, ಹುಡುಗಿಯರು, ನಿನಗೆ ಏನು ಬೇಕಾದರೂ.

70
00:03:53,317 --> 00:03:55,402
ನನಗೆ ತಿಳಿಸು, ನಾನು ಕರೆತರುವೆ.

71
00:03:55,486 --> 00:03:58,864
ಅಥವಾ ನಾವು ಈ ಫೋನ್ ಬಳಸಿ
ಸ್ವಲ್ಪ ಕ್ಯಾಬೊ ಹುಡುಗಿಯನ್ನು ಕರೆಸಬಹುದು.

72
00:03:58,948 --> 00:04:00,491
-ಸರಿ, ಹುಡುಗ, ಹಾಯಾಗಿ ಹೋಗು.
-ಕೇಳಿಲ್ಲಿ.

73
00:04:00,574 --> 00:04:03,327
ನಮಗೆ ಒಂದು ಹುಡುಗಿ ಖಂಡಿತ ಗೊತ್ತು,
ಸಾಮಾನಿಗಾಗಿ ಇಲ್ಲಿವರೆಗೆ ಬರುವವಳು.

74
00:04:03,410 --> 00:04:06,330
ಸರಿ. ದಯವಿಟ್ಟು 10% ಕಡಿಮೆ
ಅಸಹ್ಯಕರವಾಗಿ ವರ್ತಿಸಬಹುದಾ?

75
00:04:07,164 --> 00:04:08,165
ಗೆಳೆಯ, ನಿಜವಾಗಲೂ…

76
00:04:09,416 --> 00:04:11,877
ನಾನು ಈಗ ಬಂದೆ, ಸರಿನಾ? ನೀನು ಸ್ವಲ್ಪ

77
00:04:11,961 --> 00:04:14,630
ಇವನನ್ನು ಅವರು
ಸ್ಟ್ರಿಪ್ ಕ್ಲಬ್‌ಗೆ ಒಯ್ಯದಂತೆ ನೋಡಿಕೊಳ್ಳುವೆಯಾ?

78
00:04:14,713 --> 00:04:16,924
-ಹೂಂ, ನಾನು ನೋಡಿಕೊಳ್ಳುವೆ.
-ದಯವಿಟ್ಟು? ಧನ್ಯವಾದ.

79
00:04:17,967 --> 00:04:20,094
-ಧನ್ಯವಾದ.
-ಇದು ನೋವು ನಿವಾರಕ.

80
00:04:20,177 --> 00:04:22,179
-ನೋವಿನ ಮಾತ್ರೆಯಂತೆ.
-ಸ್ವಲ್ಪ ಸುಮ್ಮನಿರುವೆಯಾ?

81
00:04:22,262 --> 00:04:24,723
-ಹೇ, ನಾವು ಸ್ವಲ್ಪ ಮಾತಾಡಬಹುದಾ? ಅದು…
-ಹೂಂ.

82
00:04:28,018 --> 00:04:29,311
ಹುಚ್ಚು ರಾತ್ರಿ, ಅಲ್ವಾ?

83
00:04:29,395 --> 00:04:31,188
-ತುಂಬಾ ಹುಚ್ಚು.
-ಹೌದು.

84
00:04:31,271 --> 00:04:32,648
ನನಗೆ ಜೆರ್ ಬಗ್ಗೆ ಬೇಜಾರಾಗುತ್ತಿದೆ.

85
00:04:32,731 --> 00:04:35,734
-ಹೌದು, ನಿನ್ನ ತಂಗಿ ಬಗ್ಗೆಯೂ, ಎಲ್ಲಿದ್ದಾಳೋ.
-ಖಂಡಿತ. ಹೌದು.

86
00:04:39,697 --> 00:04:40,823
ನಾವು…

87
00:04:42,032 --> 00:04:44,410
ನಾವು ಆಗಲೇ ಮಾತಾಡುತ್ತಿದ್ದ
ವಿಷಯದ ಬಗ್ಗೆ ಮಾತಾಡೋಣಾ?

88
00:04:44,493 --> 00:04:46,829
-ಹೂಂ.
-ಅಥವಾ ಹಾಗೆ ಮಾಡಿದರೆ ನಾವು ಕೆಟ್ಟವರಾಗುತ್ತೇವಾ?

89
00:04:49,123 --> 00:04:50,457
ನನಗೆ ಗೊತ್ತಿಲ್ಲ. ಅಂದರೆ…

90
00:04:51,709 --> 00:04:52,710
ಸಾಯಲಿ.

91
00:04:53,669 --> 00:04:56,088
ಸಾಯಲಿ, ಸರಿನಾ? ಕೆಟ್ಟವರಾಗೋಣ.

92
00:05:01,927 --> 00:05:03,929
ಅವನಿಗೆ ಏಟು ತಿನ್ನಬೇಕಾ?

93
00:05:05,389 --> 00:05:07,891
-ದೇವರೇ.
-ಹಾಂ! ಹಾಂ!

94
00:05:07,975 --> 00:05:09,435
ಸರಿ. ಸರಿ. ಸರಿ.

95
00:05:10,436 --> 00:05:11,895
ನೀನು ಅವನಿಗೆ ಫೋನ್ ಮಾಡಲಿಲ್ಲ ತಾನೇ?

96
00:05:11,979 --> 00:05:15,107
ಇಲ್ಲ, ನಿನ್ನೆ ರಾತ್ರಿ ಅವನು ಹಾಗೆ ಮಾಡಿದ ಮೇಲೆ,
ನಾನು ಯಾಕೆ ಅವನಿಗೆ ಕರೆ ಮಾಡಲಿ?

97
00:05:15,190 --> 00:05:18,777
ಜೆರ್ ಅವನನ್ನು ನೋಡಿ ಜೈಲಿಗೆ ಹೋಗುವ ಮೊದಲು
ನಾವು ಅವನನ್ನು ಇಲ್ಲಿಂದ ಹೊರಗೆ ಕಳಿಸಬೇಕು.

98
00:05:21,280 --> 00:05:22,281
ಏನು ಮಾಡುತ್ತಿದ್ದೀಯಾ?

99
00:05:23,323 --> 00:05:26,076
-ನಾನು ನನ್ನ ತಮ್ಮನ ಜೊತೆ ಮಾತಾಡಬೇಕು.
-ಇಲ್ಲ. ನೀನು ಇಲ್ಲಿಂದ ಹೋಗಬೇಕು.

100
00:05:26,160 --> 00:05:28,120
-ಸ್ಟೀವನ್, ನನಗೆ--
-ನನ್ನ ತಂಗಿ ನಿನ್ನ ಜೊತೆ ಇದ್ದಾಳಾ?

101
00:05:28,203 --> 00:05:29,204
ಇಲ್ಲ.

102
00:05:30,372 --> 00:05:31,373
ಅವಳು ಇಲ್ಲಿಲ್ವಾ?

103
00:05:32,499 --> 00:05:34,501
-ಅವಳು ಎಲ್ಲಿದ್ದಾಳೆ ಅನ್ನೋದು ನಿನಗೆ ಬೇಕಿಲ್ಲ.
-ಸರಿ.

104
00:05:34,585 --> 00:05:36,128
ದರಿದ್ರ ನಾಯಿ.

105
00:05:36,211 --> 00:05:37,796
ಸರಿ, ಸ್ಟೀವನ್, ನೀನು ಒಳಗೆ ಹೋಗಿ

106
00:05:37,880 --> 00:05:40,299
ಜೆರ್ ಇಲ್ಲಿಗೆ ಬರದಂತೆ ನೋಡಿಕೊಳ್ಳುವೆಯಾ?

107
00:05:40,924 --> 00:05:42,384
ದಯವಿಟ್ಟು?

108
00:05:42,468 --> 00:05:43,510
-ಹೂಂ, ಸರಿ.
-ಸರಿ.

109
00:05:46,055 --> 00:05:47,097
ಅಸಲಿಗೆ…

110
00:05:48,849 --> 00:05:51,018
ನೀನಿದನ್ನು ಮುಗಿಸಿದ ನಂತರ, ನಾವು ಇನ್ನೂ…

111
00:05:51,101 --> 00:05:52,853
ಹೂಂ, ಮಾತಾಡೋಣ. ಹೂಂ.

112
00:05:53,479 --> 00:05:54,480
ಸರಿ.

113
00:05:58,025 --> 00:05:59,818
ಕಿಟಕಿಗಳಿಂದ ಸ್ವಲ್ಪ ದೂರ ಸರಿಯುವೆಯಾ?

114
00:06:02,279 --> 00:06:04,114
ಇಲ್ಲಿ ಏನು ಮಾಡುತ್ತಿದ್ದೀಯಾ?

115
00:06:04,198 --> 00:06:06,950
ನೀನು ಕ್ಯಾಲಿಫೋರ್ನಿಯಾಗೆ
ಅರ್ಧದಾರಿ ಹೋಗಿ ಆಗಿದೆ ಅಂದುಕೊಂಡಿದ್ದೆ.

116
00:06:07,034 --> 00:06:10,704
ಮುಂದಿನ ಹತ್ತು ವರ್ಷಗಳ ಕಾಲ
ನಿನ್ನ ಗುಹೆಯಲ್ಲಿ ಅಡಗಿ ಕೂರಲು.

117
00:06:10,788 --> 00:06:13,624
ಹೌದು, ಅದೇ ಯೋಚಿಸಿದ್ದೆ,
ಆದರೆ ಅಪ್ಪ ಕರೆ ಮಾಡಿದರು. ಅವರು…

118
00:06:14,500 --> 00:06:15,667
ಮದುವೆ ನಿಲ್ಲಿಸಿದರಾ?

119
00:06:16,502 --> 00:06:18,754
ಅಭಿನಂದನೆಗಳು. ನಿನಗೆ ಖುಷಿಯಾಗಿರಬೇಕು.

120
00:06:20,714 --> 00:06:21,715
ಜೆರೆಮಾಯಾ ಹೇಗಿದ್ದಾನೆ?

121
00:06:23,300 --> 00:06:25,844
ವಧು ಓಡಿಹೋದ ಮೇಲೆ,
ಅಣ್ಣ ಬೆನ್ನಿಗೆ ಚೂರಿ ಹಾಕಿದ ಮೇಲೆ

122
00:06:25,928 --> 00:06:29,598
ಒಬ್ಬ ವ್ಯಕ್ತಿ ಹೇಗೆ ತಾನೇ ಇರುತ್ತಾನೆ?

123
00:06:29,681 --> 00:06:31,266
ನನಗೆ ಗೊತ್ತು. ಸರಿನಾ? ನನಗೆ ಗೊತ್ತು.

124
00:06:32,142 --> 00:06:33,227
ನಾನು ತಪ್ಪು ಮಾಡಿದೆ.

125
00:06:34,061 --> 00:06:35,479
ಅದು ನನ್ನ ತಪ್ಪು. ನನಗೆ ಗೊತ್ತು.

126
00:06:39,441 --> 00:06:43,779
ಅದು-- ಅಂದರೆ, ಅದು ಕೇವಲ 50% ನಿಮ್ಮ ತಪ್ಪು.

127
00:06:45,155 --> 00:06:46,573
ಇನ್ನರ್ಧ ಅವರದು.

128
00:06:48,659 --> 00:06:51,912
ಟೇಲರ್, ದಯವಿಟ್ಟು.
ನಾನು ಅವನಿಗೆ ಹೇಗಾದರೂ ಸಹಾಯ ಮಾಡಬೇಕು.

129
00:06:51,995 --> 00:06:54,540
-ಅವನು ನನ್ನ ತಮ್ಮ.
-ನೋಡು, ನನಗೆ ಗೊತ್ತು. ನನಗೆ ಅರ್ಥವಾಗುತ್ತೆ.

130
00:06:54,623 --> 00:06:55,624
ನಿಜವಾಗಲೂ.

131
00:06:56,959 --> 00:06:59,128
ಆದರೆ ಈಗ ನೀನು ಅವನಿಗೆ ಬೇಕಿಲ್ಲ.

132
00:07:04,299 --> 00:07:06,468
-ಅವನು ಇಂದು ರಾತ್ರಿ ಇಲ್ಲಿ ಮಲಗುತ್ತಾನಾ?
-ಹೌದು.

133
00:07:08,512 --> 00:07:09,513
ಸರಿ.

134
00:07:10,848 --> 00:07:13,725
-ಹೂಂ, ನಾನು ಮನೆಗೆ ಹಿಂತಿರುಗುತ್ತೇನೆ.
-ಅವಳು ಮನೆಯಲ್ಲಿ ಇಲ್ಲ.

135
00:07:18,355 --> 00:07:19,523
ಅವಳು ಆರಾಮಿದ್ದಾಳಾ?

136
00:07:22,526 --> 00:07:23,527
ನನಗೆ ಗೊತ್ತಿಲ್ಲ.

137
00:07:29,241 --> 00:07:31,243
ಜೆರ್ ಏನಾದರೂ ತಿನ್ನಬೇಕು.

138
00:07:31,326 --> 00:07:33,745
ಅವನಿಗೆ ಹಸಿವಿಲ್ಲ ಅನ್ನುತ್ತಾನೆ,
ಆದರೆ ಅವನಿಗೆ ಚೀಸ್‌ಬರ್ಗರ್ ಕೊಡು.

139
00:07:33,829 --> 00:07:35,455
-ಹೂಂ. ಹೂಂ, ಸರಿ.
-ಅದು ಸಹಾಯ ಮಾಡುತ್ತೆ.

140
00:07:35,539 --> 00:07:36,665
ಇರು.

141
00:07:36,748 --> 00:07:38,125
ಬೆಲ್ಲಿ ಬಗ್ಗೆ…

142
00:07:41,378 --> 00:07:43,755
ಅವಳು ಲೋರೆಲ್‌ಗೆ ಸ್ವಲ್ಪ ಸಮಯ
ಒಂಟಿಯಾಗಿರಬೇಕು ಅಂದುಕೊಂಡಿದ್ದಾಳೆ ಎಂದಳು.

143
00:07:44,339 --> 00:07:48,010
ಹಾಗಾಗಿ, ನಮಗೆ ಒಂದು ಉಪಕಾರ ಮಾಡು,
ಅವಳನ್ನು ಒಂಟಿಯಾಗಿ ಬಿಟ್ಟುಬಿಡು.

144
00:07:50,721 --> 00:07:52,806
ಅವಳ ಜೊತೆ ಮಾತಾಡಿದರೆ ನಿನಗೆ ತಿಳಿಸುವೆ.

145
00:07:55,642 --> 00:07:56,643
ಧನ್ಯವಾದ.

146
00:07:57,227 --> 00:07:59,229
ಸರಿ. ಇಲ್ಲಿಂದ ಹೋಗು.

147
00:08:12,492 --> 00:08:14,703
ಇಂದು ರಾತ್ರಿಯೊಳಗೆ
ನಾವು ಹೂಗಳನ್ನು ತೆಗೆಯದಿದ್ದರೆ

148
00:08:14,786 --> 00:08:15,746
ಪೇಜ್ ಅವನ್ನು ಎಸೆಯುವಳಂತೆ.

149
00:08:16,455 --> 00:08:19,082
ಪರವಾಗಿಲ್ಲ. ಅದು-- ನಾನು ಅವಳ ಜೊತೆ ಮಾತಾಡುವೆ.

150
00:08:20,500 --> 00:08:21,418
ಧನ್ಯವಾದ.

151
00:08:22,878 --> 00:08:24,087
ಎಂತಹ ವಿನಯ.

152
00:08:24,171 --> 00:08:25,339
ಹೆಚ್ಚು ಕಾಲ ಉಳಿಯಲ್ಲ.

153
00:08:25,422 --> 00:08:26,298
ಕೇಲಿ ಎಲ್ಲಿ?

154
00:08:26,924 --> 00:08:29,509
ನಿಮಗೆ ಬೇಕಿಲ್ಲ ಎಂಬ ಕಾರಣಕ್ಕೆ
ಈ ಕಾರ್ಯಕ್ರಮವನ್ನು ಆಯೋಜಿದ ಮಹಿಳೆನಾ?

155
00:08:29,593 --> 00:08:32,304
ತನ್ನ ಹೆತ್ತವರ ಸಾಮಾನು
ಪ್ಯಾಕ್ ಮಾಡಲು ಸಹಾಯ ಮಾಡುತ್ತಿದ್ದಾಳೆ.

156
00:08:32,387 --> 00:08:34,598
ಅವಳ ಹೆತ್ತವರನ್ನು ಆಹ್ವಾನಿಸಿದೆ ಅಂತ
ಇನ್ನೂ ನಂಬಲಾಗುತ್ತಿಲ್ಲ.

157
00:08:34,681 --> 00:08:36,058
ನೀನು ನಾಚಿಕೆಯಿಲ್ಲದವನು, ಗೊತ್ತಾ?

158
00:08:36,141 --> 00:08:38,268
ತಲೆ ತಿನ್ನಬೇಡ. ನನ್ನ ಮನಸ್ಥಿತಿ ಸರಿಯಿಲ್ಲ.

159
00:08:38,352 --> 00:08:40,771
ಮೊದಲೇ ನಾನವರನ್ನು ನಾಳೆ
ವೆಲ್‌ಫ್ಲೀಟ್‌ಗೆ ಕರೆದುಕೊಂಡು ಹೋಗಬೇಕು.

160
00:08:40,854 --> 00:08:41,897
ತಮಾಷೆ ಮಾಡುತ್ತಿದ್ದೀಯಾ?

161
00:08:41,980 --> 00:08:45,275
ಇಲ್ಲಿರುವ ಬದಲು ನಿನ್ನ ಭಾವೀ ಅತ್ತೆ-ಮಾವಂದರಿಗೆ
ಚಾಲಕನಾಗುವವನಿದ್ದೀಯಾ--

162
00:08:46,860 --> 00:08:48,779
ಏನು ಗೊತ್ತಾ? ಬಿಡು.

163
00:08:48,862 --> 00:08:50,322
ಹೂಂ.

164
00:08:50,405 --> 00:08:53,533
ತಿನ್ನದೇ ಇರುವ ಆಹಾರವನ್ನು ಏನು ಮಾಡುತ್ತಿದ್ದೀರಿ?
ಅದನ್ನು ದಾನ ಮಾಡಬಹುದಾ?

165
00:08:53,617 --> 00:08:55,118
ಆಗಲ್ಲ. ಹೊಣೆಗಾರಿಕೆ ಸಮಸ್ಯೆಗಳು.

166
00:08:55,786 --> 00:08:58,664
ಸರಿ. ನಾವು ಹಣ ಕೊಟ್ಟಿದ್ದರಿಂದ
ನಾವದನ್ನು ತೆಗೆದುಕೊಳ್ಳುತ್ತೇವೆ.

167
00:08:59,456 --> 00:09:01,583
"ನಾವು ಹಣ ಕೊಟ್ಟಿದ್ದಾ?" ನಾನು ಹಣ ಕೊಟ್ಟಿದ್ದು.

168
00:09:02,125 --> 00:09:04,753
ದೇವರೇ, ನೀನು ಎಂದೂ ಇದರ ಬಗ್ಗೆ
ಬಾಯಿ ಮುಚ್ಚಲ್ಲ ಅಲ್ವಾ?

169
00:09:04,836 --> 00:09:06,922
ಅಂದಹಾಗೆ, ಇದು ಕೆಟ್ಟ ಉಪಾಯ ಅಂತ

170
00:09:07,005 --> 00:09:08,966
ನಾನು ಮೊದಲೇ ಹೇಳಿದ್ದೆ. ಆದರೆ ಕೇಳಿದೆಯಾ? ಇಲ್ಲ.

171
00:09:09,049 --> 00:09:11,301
ನಾನು ಮರೆತೆ. ಇರು.
ನೀನು ಅತ್ಯುತ್ತಮ ಪೋಷಕಿ, ಅಲ್ವಾ?

172
00:09:12,094 --> 00:09:15,264
ನಿನ್ನ ಮಗಳು ಈ ಬೇಸಿಗೆಯಲ್ಲಿ ನಿನ್ನಿಂದ
ಎಷ್ಟು ಸಮಯ ದೂರ ಇದ್ದಳು? ಒಂದು ತಿಂಗಳಾ? ಎರಡಾ?

173
00:09:15,347 --> 00:09:17,432
ಕನಿಷ್ಠ ಎರಡು ಕ್ಷಣಗಳಲ್ಲಿ
ನಾನು ನನ್ನ ಮಕ್ಕಳ ಹಠಕ್ಕೆ ಮಣಿಯಲಿಲ್ಲ.

174
00:09:17,516 --> 00:09:19,559
ನನ್ನ ಮಗನ ಬಗ್ಗೆ
ಕಾಳಜಿ ವಹಿಸಿದ್ದಕ್ಕೆ ಕ್ಷಮೆ ಇರಲಿ.

175
00:09:19,643 --> 00:09:22,521
ನನ್ನ ಮಗಳ ಬಗ್ಗೆ ಕಾಳಜಿ ಇದ್ದದ್ದಕ್ಕೇ
ಈ ಮದುವೆ ನಿಲ್ಲಿಸಲು ಪ್ರಯತ್ನಿಸಿದ್ದು.

176
00:09:22,604 --> 00:09:25,315
-ಇದು ತಪ್ಪು ಅಂತ ನನಗೆ ಗೊತ್ತಿತ್ತು.
-ಗೊತ್ತಿದ್ದರೆ, ಯಾಕೆ ತಡೆಯಲಿಲ್ಲ?

177
00:09:25,399 --> 00:09:26,900
ಏಕೆಂದರೆ ನನಗವಳನ್ನ ಕಳೆದುಕೊಳ್ಳಲಿಷ್ಟ ಇಲ್ಲ!

178
00:09:26,984 --> 00:09:28,944
ಯಾಕೆಂದರೆ ನಿನ್ನ ಇನ್ನೊಬ್ಬ ಮಗ
ಬಂದು ನನ್ನ ಬಳಿ ಕೇಳಿಕೊಂಡ.

179
00:09:29,611 --> 00:09:31,154
ನಾನು ಏನು ಹೇಳಬೇಕು?

180
00:09:31,238 --> 00:09:33,156
ನಾನೇನು ಮಾಡುತ್ತಿದ್ದೇನೆಂದು
ನನಗೂ ತಿಳಿದಿಲ್ಲ ಅಂತಲಾ?

181
00:09:33,240 --> 00:09:35,534
-ಅದೇನಾ ನಿನಗೆ ಬೇಕಿರೋದು?
-ಇಲ್ಲ.

182
00:09:36,326 --> 00:09:37,536
ಅಸಲಿಗೆ, ಹೌದು.

183
00:09:46,503 --> 00:09:47,504
ಬಾ, ಮೂರ್ಖ.

184
00:09:48,088 --> 00:09:51,675
-ಇದನ್ನು ಮಹಿಳಾ ಆಶ್ರಯಕ್ಕೆ ತಗೊಂಡು ಹೋಗೋಣ.
-ಸರಿ, ಆದರೆ ನಾನು ಶಾಂಪೇನ್ ಇಟ್ಟುಕೊಳ್ಳುತ್ತೇನೆ.

185
00:09:51,758 --> 00:09:52,759
ಗೊತ್ತಿತ್ತು.

186
00:09:54,011 --> 00:09:54,845
ಇದು ಚೆನ್ನಾಗಿದೆ.

187
00:09:58,807 --> 00:10:00,809
-ಹೇ, ಜೆರ್, ಅದನ್ನು ನಿಲ್ಲಿಸು, ಸರಿನಾ?
-ಏನು?

188
00:10:00,892 --> 00:10:03,103
-ಅದನ್ನು ಕಳೆದುಕೊಳ್ಳುತ್ತೀಯ.
-ಯಾಕೆ? ನನಗದು ಬೇಕಿಲ್ಲ.

189
00:10:03,979 --> 00:10:07,399
ಇರು, ಕ್ಷಮಿಸಿ, ಮಿಸ್.
ನಿಮಗೆ ನಿಶ್ಚಿತಾರ್ಥದ ಉಂಗುರ ಬೇಕಾ?

190
00:10:07,482 --> 00:10:10,027
-ಇಲ್ಲ. ನಾನಿದನ್ನು ನಿನ್ನ ಜೇಬಿನಲ್ಲಿಡುವೆ.
-ಅದು ನಿನ್ನ ಅಮ್ಮನ ಉಂಗುರ.

191
00:10:12,529 --> 00:10:14,781
ಇಲ್ಲಿಗೆ ಸಾಕು. ಸರಿನಾ, ಜೆರ್?

192
00:10:16,074 --> 00:10:18,618
-ಸ್ವಲ್ಪ ಮಲಗು, ಸರಿನಾ?
-ನನಗೆ ಶಿಶುಪಾಲಕರು ಬೇಕಿಲ್ಲ.

193
00:10:18,702 --> 00:10:19,786
ನಾನು ಮಗುವಲ್ಲ.

194
00:10:20,829 --> 00:10:22,372
ಮೂತಿ ಎಲ್ಲಾ ಊಟ ಮಾಡಿಕೊಂಡಿದ್ದೀಯ.

195
00:10:23,540 --> 00:10:26,001
ಒರಟಿ. ಒರಟಿ.

196
00:10:26,084 --> 00:10:27,502
ಅದು ತುಂಬಾ, ತುಂಬಾ--

197
00:10:27,586 --> 00:10:30,547
ಅವಳು-- ಅವಳು ನನ್ನ ಜೊತೆ
ತುಂಬಾ ಒರಟು. ಒರಟು ಅಲ್ವಾ?

198
00:10:30,630 --> 00:10:32,632
ಇಲ್ಲ, ಅವಳು ಅದ್ಭುತ.

199
00:10:35,761 --> 00:10:37,971
ಹೂಂ, ಕನಿಷ್ಠ ಪಕ್ಷ ಬೆಲ್ಲಿ ಬದಲು
ನನ್ನ ಬಳಿ ಇದ್ದೀಯ.

200
00:10:39,848 --> 00:10:45,562
ನನಗೆ ನಿನ್ನ ಮೇಲೆ ಪ್ರೀತಿ ಇದೆ. ತುಂಬಾ ಪ್ರೀತಿ,
ಆದರೆ ನಾನಿಲ್ಲಿರೋದು ಬೆಲ್ಲಿ ಸಿಗುತ್ತಿಲ್ಲ ಅಂತ.

201
00:10:48,190 --> 00:10:50,275
ಅವಳು ಕೊನ್ರಾಡ್ ಜೊತೆ ಓಡಿಹೋದಳಾ?

202
00:10:50,359 --> 00:10:52,069
-ಇಲ್ಲ.
-ಇಲ್ಲ. ಖಂಡಿತ ಇಲ್ಲ.

203
00:10:52,944 --> 00:10:54,237
ನೀವು ಖಂಡಿತ ತಪ್ಪು.

204
00:10:54,321 --> 00:10:58,492
ಅವಳು ಈಗ ಕ್ಯಾಲಿಫೋರ್ನಿಯಾಗೆ ಹೋಗುವ ವಿಮಾನದಲ್ಲಿ,
ಕೊನ್ರಾಡ್ ಪಕ್ಕದಲ್ಲಿ ಕುಳಿತಿದ್ದಾಳೆ ಅನಿಸುತ್ತೆ.

205
00:10:59,701 --> 00:11:00,702
ನಾನು ಸರಿ ಅಂತ ನಿಮಗೆ ಗೊತ್ತು.

206
00:11:05,290 --> 00:11:06,291
ಏನು?

207
00:11:07,209 --> 00:11:08,377
ಏನೂ ಇಲ್ಲ. ಏನೂ ಇಲ್ಲ, ಜೆರ್.

208
00:11:10,253 --> 00:11:13,799
ಏನು? ನೀನು ಅವಳ ಜೊತೆ ಮಾತಾಡಿದೆ ಅಲ್ವಾ? ಏನು?

209
00:11:13,882 --> 00:11:16,259
-ನಾನದನ್ನು ನಿಭಾಯಿಸಬಲ್ಲೆ ಅಂತ ನಿನಗನಿಸಲಿಲ್ವಾ?
-ಜೆರ್, ನಿಲ್ಲಿಸು. ಇಲ್ಲ.

210
00:11:17,260 --> 00:11:19,012
ನಾವು ಕೊನ್ರಾಡ್ ಜೊತೆ
ಮಾತಾಡಿದೆವು, ಸರಿನಾ? ಅವನು--

211
00:11:20,180 --> 00:11:23,517
ಅವನು ಮನೆಯಲ್ಲೇ ಇದ್ದಾನೆ
ಮತ್ತು ನನ್ನ ತಂಗಿಯ ಹತ್ತಿರ ಎಲ್ಲೂ ಇಲ್ಲ.

212
00:11:25,477 --> 00:11:29,606
ಸರಿ. ಸರಿ. ಬಹುಶಃ ನಾನು ಅಲ್ಲಿಗೆ ಹೋಗಿ
ಅವನ ಮುಖಕ್ಕೆ ಮತ್ತೊಮ್ಮೆ ತದುಕಬೇಕು.

213
00:11:29,689 --> 00:11:31,483
ಇರಲಿ, ಜೆರ್, ಬಿಡು.

214
00:11:31,566 --> 00:11:33,985
ಹೂಂ, ಹೌದು, ಹೂಂ. ಅವನದಕ್ಕೂ ಯೋಗ್ಯನಲ್ಲ.

215
00:11:36,405 --> 00:11:39,950
ಸುಮ್ಮನೆ ಇಲ್ಲಿ ಕೂತು, ಅಮಲಿಳಿಸಿ,
ನೀರು ಕುಡಿದು, ಆ ಬರ್ಗರ್ ಮುಗಿಸು.

216
00:11:43,620 --> 00:11:44,621
ಪೂರ್ತಿ.

217
00:11:52,045 --> 00:11:54,214
ಅವಳು ಕೊನ್ರಾಡ್ ಜೊತೆ ಇಲ್ಲದಿದ್ದರೆ,
ಎಲ್ಲಿದ್ದಾಳೆ?

218
00:12:01,096 --> 00:12:02,264
ಮಿಸ್ಟರ್ & ಮಿಸಸ್ ಫಿಷರ್
ಕಸಿನ್ಸ್ ಇನ್

219
00:12:04,724 --> 00:12:07,185
ಇಲ್ಲ. ಜೆರ್, ಬಿಡು.

220
00:12:08,145 --> 00:12:09,771
"ಶ್ರೀ ಮತ್ತು ಶ್ರೀಮತಿ ಫಿಷರ್,

221
00:12:11,022 --> 00:12:15,569
ಅಭಿನಂದನೆಗಳು ಮತ್ತು ಶುಭಾಶಯಗಳು,
ಜೀವನಪೂರ್ತಿ ಒಟ್ಟಿಗೆ ಸಂತೋಷವಾಗಿರಲಿ."

222
00:12:21,283 --> 00:12:22,826
-ಅವಳಿಗೆ ಕರೆ ಮಾಡುತ್ತಿದ್ದೇನೆ.
-ಬೇಡ. ಬೇಡ. ಬೇಡ.

223
00:12:22,909 --> 00:12:25,495
-ಅದು ಒಳ್ಳೆಯ ಉಪಾಯ ಅಲ್ಲ ಅನಿಸುತ್ತೆ.
-ನಾನು ನಿನ್ನನ್ನು ಕೇಳಲಿಲ್ಲ, ಸರಿನಾ?

224
00:12:25,579 --> 00:12:26,538
ಯಾರೂ ನಿನ್ನನ್ನು ಕೇಳಲಿಲ್ಲ.

225
00:12:27,414 --> 00:12:30,667
-ಅದಲ್ಲ-- ಕ್ಷಮಿಸು.
-ತಮಾಷೆ ಬೇಡ. ಟೇ, ಫೋನ್ ಕೊಡು.

226
00:12:31,334 --> 00:12:35,005
-ಕೊಡು-- ಅವಳ ಜೊತೆ ಮಾತಾಡಬೇಕು. ಸರಿನಾ?
-ಸರಿ, ಏನು ಹೇಳುವೆ, ಜೆರ್?

227
00:12:37,299 --> 00:12:38,592
ಅದು-- ನಾವು--

228
00:12:39,801 --> 00:12:41,678
ನಮಗೆ-- ನಾವು ಒಟ್ಟಿಗೆ--

229
00:12:41,761 --> 00:12:43,513
ನನಗೆ-- ನನಗವಳು ಬೇಕು--

230
00:12:45,474 --> 00:12:46,558
ಥತ್.

231
00:12:46,641 --> 00:12:48,477
ಜೆರ್, ವಿಶ್ರಾಂತಿ ಪಡೆಯೋಣ, ಸರಿನಾ?

232
00:12:48,560 --> 00:12:50,061
ವಿಶ್ರಾಂತಿ ಪಡೆಯೋಣ.

233
00:12:50,145 --> 00:12:52,647
ಹಲ್ಲುಜ್ಜು, ನೀರು ಕುಡಿ, ಮಲಗು.

234
00:12:55,275 --> 00:12:56,276
ಹೂಂ.

235
00:13:00,864 --> 00:13:02,616
-ನೀನು ಆರಾಮಿದ್ದೀಯ.
-ಸುಮ್ಮನೆ ಬಿಟ್ಟುಬಿಡು.

236
00:13:11,666 --> 00:13:12,667
ಹೇ.

237
00:13:14,377 --> 00:13:16,296
ಅವಳು ಹಿಂತಿರುಗಿ ಬಂದರೆ
ನನ್ನನ್ನು ಎಬ್ಬಿಸಿ, ಸರಿನಾ?

238
00:13:17,380 --> 00:13:19,174
-ಹೂಂ.
-ಸರಿ.

239
00:13:22,844 --> 00:13:26,264
ನಾನು ನನ್ನ ಜೀವನ ಹಾಳು ಮಾಡಿಕೊಂಡೆ,
ನನ್ನನ್ನು ಪ್ರೀತಿಸಿದ ಎಲ್ಲರಿಗೂ ನೋವುಂಟುಮಾಡಿದೆ.

240
00:13:28,058 --> 00:13:31,853
ನನಗೆ ಒಂದೇ ತೋಚಿದ್ದು,
ಅವರಿಂದ ದೂರ ಸಾಗರದಾಚೆ ಹೋಗೋದು.

241
00:14:03,426 --> 00:14:06,846
ಮಹಿಳೆಯರೇ ಮತ್ತು ಮಹನೀಯರೇ,
ನಾವು ಪ್ಯಾರಿಸ್ ತಲುಪಲಿದ್ದೇವೆ.

242
00:14:06,930 --> 00:14:11,142
ಸ್ಥಳೀಯ ಸಮಯ ಬೆಳಿಗ್ಗೆ 11:15,
ಹವಾಮಾನ ಪ್ರಸ್ತುತ ಬಿಸಿಲಿನಿಂದ ಕೂಡಿದೆ.

243
00:14:11,226 --> 00:14:13,645
ನಾವು 15 ನಿಮಿಷಗಳಲ್ಲಿ ಕೆಳಗೆ ಇಳಿಯುತ್ತೇವೆ.

244
00:14:48,221 --> 00:14:49,055
ಟೇಲರ್
ಲವ್ ಯು

245
00:14:49,139 --> 00:14:51,224
ಅಮ್ಮ - ಲವ್ ಯು, ಬೀನ್.
ನಿನಗೆ ಬೇಕಿದ್ದಲ್ಲಿ ನಾವಿಲ್ಲಿದ್ದೇವೆ.

246
00:14:54,269 --> 00:14:56,062
ಮುಂದಿನವರು!

247
00:14:59,524 --> 00:15:01,318
ಮಿಸ್, ಬನ್ನಿ!

248
00:15:01,610 --> 00:15:02,444
ಹಲೋ.

249
00:15:02,527 --> 00:15:05,030
ದಯವಿಟ್ಟು ನಿಮ್ಮ ಪಾಸ್‌ಪೋರ್ಟ್ ಅನ್ನು
ಸರಿಯಾದ ಪುಟಕ್ಕೆ ತೆರೆದಿಡಿ.

250
00:15:07,532 --> 00:15:08,908
ನನಗೆ ಅರ್ಥವಾಗುತ್ತಿಲ್ಲ.

251
00:15:09,034 --> 00:15:10,327
ದಯವಿಟ್ಟು ಪಾಸ್‌ಪೋರ್ಟ್ ಕೊಡಿ.

252
00:15:10,410 --> 00:15:11,411
ಹೂಂ, ಹೂಂ.

253
00:15:15,665 --> 00:15:17,542
ಛೇ. ಥತ್.

254
00:15:19,169 --> 00:15:20,837
ನಿಮ್ಮ ಪ್ರವಾಸದ ಉದ್ದೇಶವೇನು?

255
00:15:23,340 --> 00:15:24,466
-ಮೊಜೆಲ್?
-ಹಾಯ್.

256
00:15:29,596 --> 00:15:32,307
-ನಾನು ವಿದ್ಯಾರ್ಥಿನಿ.
-ವಿದ್ಯಾರ್ಥಿ ವೀಸಾನಾ?

257
00:15:33,475 --> 00:15:36,603
ಇಲ್ಲ. ನನಗೆ-- ನಾನು--

258
00:15:36,686 --> 00:15:38,021
-ವೀಸಾ ಇಲ್ವಾ?
-ಇಲ್ಲ.

259
00:15:39,689 --> 00:15:41,399
ಅಂದರೆ, ನನ್ನ ಬಳಿ ಒಂದು ಇತ್ತು

260
00:15:41,483 --> 00:15:44,152
ಆದರೆ ನಾನು ಈ ಕಾರ್ಯಕ್ರಮದಲ್ಲಿ
ನನ್ನ ಸ್ಥಾನವನ್ನು ಬಿಟ್ಟುಕೊಟ್ಟೆ.

261
00:15:46,613 --> 00:15:49,366
ಮತ್ತು ನಿನ್ನೆ ರಾತ್ರಿ,
ನನ್ನ ಬಳಿ ಅದು ಇನ್ನೂ ಇದೆ ಅಂತ ಗೊತ್ತಾಯಿತು.

262
00:15:49,449 --> 00:15:52,869
ಹಾಗಾಗಿ ನಾನು-- ನಾನು ಶಾಲೆಗೆ ಹೋಗಿ--

263
00:15:52,952 --> 00:15:54,371
ಸಿಕ್ಕಿತು.

264
00:15:55,872 --> 00:15:56,998
ನನಗೆ ಸಿಕ್ಕಿತು.

265
00:16:02,170 --> 00:16:03,004
ಧನ್ಯವಾದ.

266
00:16:06,424 --> 00:16:07,258
ದೇವರೇ.

267
00:16:59,894 --> 00:17:03,982
ಅಂತರಾಷ್ಟ್ರೀಯ ಕಲಿಕಾ ಸಂಸ್ಥೆ

268
00:17:04,065 --> 00:17:06,067
ಸ್ವಾಗತ

269
00:17:35,513 --> 00:17:37,432
ನಾನು…

270
00:17:37,974 --> 00:17:39,184
ನೋಂದಣಿ…

271
00:17:41,644 --> 00:17:42,771
ನಿಮಗೆ ಇಂಗ್ಲಿಷ್ ಬರುತ್ತಾ?

272
00:17:42,854 --> 00:17:45,190
ಹೌದು. ಏನು ಬೇಕಿತ್ತು?

273
00:17:45,273 --> 00:17:48,276
ನಾನು ಫಿಂಚ್ ಕಾಲೇಜಿನ ಅಮೇರಿಕನ್ ವಿದ್ಯಾರ್ಥಿನಿ.

274
00:17:48,359 --> 00:17:50,111
ನೋಂದಣಿ ಮಾಡಿಕೊಳ್ಳಲು ಬಂದಿದ್ದೇನೆ.

275
00:17:50,195 --> 00:17:51,821
ಹೂಂ, ನಿಮ್ಮ ಹೆಸರೇನು?

276
00:17:52,489 --> 00:17:53,490
ಇಸಾಬೆಲ್ ಕೊಂಕ್ಲಿನ್.

277
00:17:55,658 --> 00:17:57,285
-ಕೆ ಜೊತೆಗಾ?
-ಸಿ.

278
00:18:00,663 --> 00:18:03,500
-ನೀವು ಕಾಯುವ ಪಟ್ಟಿಯಲ್ಲಿದ್ದಿರಿ. ಅಲ್ವಾ?
-ಹೌದು.

279
00:18:06,461 --> 00:18:09,130
ದುರದೃಷ್ಟವಶಾತ್, ನೀವು ಗಡುವನ್ನು ದಾಟಿದ್ದೀರಿ.

280
00:18:09,214 --> 00:18:11,341
ನಾವು ಈಗಾಗಲೇ ನಿಮ್ಮ ಸ್ಥಾನವನ್ನು
ಬೇರೆಯವರಿಗೆ ನೀಡಿದ್ದೇವೆ.

281
00:18:11,424 --> 00:18:13,927
ಇಲ್ಲ, ನಾನು ನಿನ್ನೆ ರಾತ್ರಿ
ಯಾರೊಂದಿಗೋ ಮಾತಾಡಿದೆ.

282
00:18:14,010 --> 00:18:16,387
ಅವರು ನನಗೆ ಇನ್ನೂ ಸ್ಥಳವಿದೆ ಎಂದು ಹೇಳಿದರು.

283
00:18:16,471 --> 00:18:18,306
ನಾನು ಬರಬಹುದು ಎಂದರು.

284
00:18:18,389 --> 00:18:21,726
ಅವರ ಹೆಸರು ಆಂಟೊಯಿನ್ ಅಂತ ಅನಿಸುತ್ತೆ.

285
00:18:21,810 --> 00:18:23,561
-ಆಂಟೋನನ್.
-ಹೌದು.

286
00:18:24,854 --> 00:18:25,814
ಆಂಟೋನನ್?

287
00:18:25,897 --> 00:18:26,856
ಹಾಂ?

288
00:18:31,611 --> 00:18:34,697
ಈ ಕಾರ್ಯಕ್ರಮದಲ್ಲಿ ಇನ್ನೂ ಜಾಗ ಇದೆ ಅಂತ
ಈ ಹುಡುಗಿಗೆ ಹೇಳಿದೆಯಾ?

289
00:18:35,406 --> 00:18:37,325
ಹೌದು, ಇದೆ.

290
00:18:43,164 --> 00:18:44,707
ಇಲ್ಲಿ ನೋಡು.

291
00:18:45,333 --> 00:18:46,584
ಹಾಗಾದರೆ ಎಲ್ಲವೂ ಸರಿಯಿದೆಯಾ?

292
00:18:47,418 --> 00:18:49,838
ಇದು ಕಳೆದ ತಿಂಗಳ ಹಳೆಯ ಸ್ಪ್ರೆಡ್‌ಶೀಟ್!

293
00:18:49,963 --> 00:18:53,216
ನಾನು ಎಷ್ಟು ಬಾರಿ ಹೇಳಿದ್ದೇನೆ,
ನವೀಕರಿಸಿ ನೋಡು ಅಂತ?

294
00:18:55,677 --> 00:18:58,471
ಕ್ಷಮಿಸಿ, ಆದರೆ ನನ್ನ ಸಹೋದ್ಯೋಗಿ
ತಪ್ಪು ಮಾಡಿದ್ದಾರೆ.

295
00:18:59,556 --> 00:19:01,516
ಕಾರ್ಯಕ್ರಮವು ಸಂಪೂರ್ಣವಾಗಿ ತುಂಬಿದೆ.

296
00:19:02,809 --> 00:19:04,769
ಇಲ್ಲ. ಆದರೆ ನೀವು ಪರವಾಗಿಲ್ಲ ಎಂದಿರಿ.

297
00:19:04,853 --> 00:19:08,940
ಆಂಟೋನನ್, ನಿನ್ನೆ ಫೋನ್‌ನಲ್ಲಿ,
ನನಗೆ ಜಾಗ ಇದೆ ಅಂತ ನೀವು ಹೇಳಿದಿರಿ.

298
00:19:09,023 --> 00:19:12,443
ಕ್ಷಮಿಸಿ, ನಾನು ತಪ್ಪು ಹೇಳಿದ್ದೇನೆ.
ಮುಂದಿನ ವರ್ಷ ನೀವು ಮತ್ತೆ ಅರ್ಜಿ ಸಲ್ಲಿಸಬಹುದು.

299
00:19:12,527 --> 00:19:14,904
ಇಲ್ಲ, ಇಲ್ಲ, ಇಲ್ಲ. ನಿಮಗೆ ಅರ್ಥವಾಗುತ್ತಿಲ್ಲ.

300
00:19:14,988 --> 00:19:18,199
ನಾನು ಇದಕ್ಕಾಗಿಯೇ ಇಲ್ಲಿಯವರೆಗೂ ಬಂದಿದ್ದೇನೆ.
ಈಗ ಮನೆಗೆ ಹಿಂತಿರುಗಲು ಆಗಲ್ಲ.

301
00:19:18,283 --> 00:19:22,245
ಕ್ಷಮಿಸಿ, ಆದರೆ ನೀವು ಪ್ಯಾರಿಸ್‌ವರೆಗೆ ಬರೀ

302
00:19:22,328 --> 00:19:24,247
ಸ್ಥಳ ಸಿಗಬಹುದು ಅನ್ನೋ ಭರವಸೆಯಲ್ಲಿ ಬಂದಿರಾ?

303
00:19:24,330 --> 00:19:26,666
ಅವರು ನನಗಾಗಿ ಒಂದು ಸ್ಥಳವಿದೆ ಎಂದು ಹೇಳಿದರು.

304
00:19:29,502 --> 00:19:30,587
ನಿಷ್ಪ್ರಯೋಜಕ!

305
00:19:32,005 --> 00:19:33,965
ಇನ್ನು ಮುಂದೆ ನೀನು ಫೋನ್ ಉತ್ತರಿಸಬೇಡ.

306
00:19:36,968 --> 00:19:37,886
ಆಂಟೋನನ್?

307
00:19:41,764 --> 00:19:45,018
ದಯವಿಟ್ಟು, ನೀವು ಏನಾದರೂ ಮಾಡಬಹುದಾ?

308
00:19:45,101 --> 00:19:48,438
ನಾನು ಕೊಠಡಿ ಹಂಚಿಕೊಳ್ಳುವೆ,
ಸ್ಥಳವಿರುವ ತರಗತಿಗಳನ್ನು ತೆಗೆದುಕೊಳ್ಳುವೆ.

309
00:19:48,521 --> 00:19:52,066
ಏನಾದರೂ ಮಾಡುವೆ. ನನಗಿದು ಖಂಡಿತ ಬೇಕು.

310
00:19:52,150 --> 00:19:55,528
ಅದು ಸಾಧ್ಯವಿಲ್ಲ. ಕ್ಷಮಿಸಿ.

311
00:20:07,540 --> 00:20:09,250
ನಾನು ನಿಮಗಾಗಿ ಯಾರಿಗಾದರೂ ಕರೆ ಮಾಡಬಹುದಾ?

312
00:20:09,334 --> 00:20:11,920
ನಿಮ್ಮ ಹೆತ್ತವರು? ಯಾರಾದರೂ ಇರಬೇಕು--

313
00:20:12,003 --> 00:20:14,297
ಇಲ್ಲ. ಇಲ್ಲ, ಪರವಾಗಿಲ್ಲ.

314
00:20:15,256 --> 00:20:16,633
ನಿಮಗೆ ತೊಂದರೆ ಕೊಟ್ಟಿದ್ದಕ್ಕೆ ಕ್ಷಮಿಸಿ.

315
00:20:39,072 --> 00:20:42,075
ದೇವರೇ, ಬೆಲ್ಲಿ. ನೀನು ಹೋದಾಗಿನಿಂದ ನನಗೆ
ತುಂಬಾ ಚಿಂತೆಯಾಗಿದೆ.

316
00:20:42,158 --> 00:20:43,284
ಎಲ್ಲಿದ್ದೀಯಾ?

317
00:20:46,204 --> 00:20:49,290
ಅಮ್ಮ, ನಾನು-- ನಾನು ಮೂರ್ಖ ಕೆಲಸ ಮಾಡಿದೆ.

318
00:20:50,833 --> 00:20:53,044
ನೀನು ಎಲ್ಲಿರುವೆ ಹೇಳು,
ನಾನು ಕರೆದುಕೊಂಡು ಹೋಗಲು ಬರುವೆ.

319
00:20:56,005 --> 00:20:57,423
ಪ್ಯಾರಿಸ್.

320
00:21:00,176 --> 00:21:03,137
ಏನು? "ಪ್ಯಾರಿಸ್" ಎಂದೆಯಾ?

321
00:21:04,097 --> 00:21:05,765
ಹೌದು, ನಾನು ವಿಮಾನ ನಿಲ್ದಾಣದಲ್ಲಿದ್ದೆ…

322
00:21:05,848 --> 00:21:08,184
-ಅಯ್ಯೋ.
-…ಮತ್ತು ಪ್ಯಾರಿಸ್‌ಗೆ ವಿಮಾನ ಕಂಡಿತು, ಮತ್ತು…

323
00:21:08,267 --> 00:21:11,646
ಏನೋ ಗೊತ್ತಿಲ್ಲ, ಬಹುಶಃ ಇದು
ಮಾತ್ರ ನನ್ನ ಬಳಿ ಉಳಿದಿರೋದು ಅನಿಸಿತು.

324
00:21:11,729 --> 00:21:15,233
ಅದಕ್ಕೇ ಇಲ್ಲಿಗೆ ಬಂದುಬಿಟ್ಟೆ, ನನಗನಿಸುತ್ತೆ…

325
00:21:15,316 --> 00:21:17,527
ನನ್ನ ಬಳಿ ಏನೂ ಇಲ್ಲ, ಹಾಗಾಗಿ…

326
00:21:17,610 --> 00:21:18,820
ದೇವರೇ, ಬೀನ್.

327
00:21:19,570 --> 00:21:22,240
ನಾನು ಕಾರ್ಯಕ್ರಮಕ್ಕೆ ಕರೆ ಮಾಡಿದೆ
ಮತ್ತು ಕಚೇರಿಯ ವ್ಯಕ್ತಿ

328
00:21:22,323 --> 00:21:24,659
ನನಗೆ ಇನ್ನೂ ಒಂದು ಸ್ಥಾನವಿದೆ ಎಂದರು,
ಅದಕ್ಕೇ ಇಲ್ಲಿಗೆ ಬಂದೆ,

329
00:21:24,742 --> 00:21:28,329
ಆದರೆ ಅದು ತಪ್ಪಿ ಹೇಳಿದ್ದಂತೆ, ಹಾಗಾಗಿ…

330
00:21:29,747 --> 00:21:31,249
ಮನೆಗೆ ಬಾ, ಬೆಲ್ಲಿ.

331
00:21:31,332 --> 00:21:34,168
ಇಲ್ಲ. ಇಲ್ಲ, ನಾನು ಫಿಂಚ್‌ಗೆ
ಹಿಂತಿರುಗಲು ಆಗಲ್ಲ, ಅಮ್ಮ.

332
00:21:35,044 --> 00:21:36,587
ನನ್ನಿಂದ ಆಗಲ್ಲ.

333
00:21:38,548 --> 00:21:42,510
ಹಾಗಾದರೆ, ಈ ವರ್ಷ ಆನ್‌ಲೈನ್‌ನಲ್ಲಿ ಮುಗಿಸು
ಅಥವಾ ಒಂದು ಸೆಮಿಸ್ಟರ್ ರಜೆ ತಗೋ.

334
00:21:42,593 --> 00:21:45,555
ನಿನಗೆ ಆಯ್ಕೆಗಳಿವೆ. ಒಟ್ಟಿಗೆ ನಿರ್ಧರಿಸೋಣ.

335
00:21:46,222 --> 00:21:48,182
ನನಗೆ ಎಲ್ಲರನ್ನೂ ಎದುರಿಸಲು ಆಗಲ್ಲ. ಅಂದರೆ…

336
00:21:49,183 --> 00:21:50,518
ಎಲ್ಲರೂ ನನ್ನನ್ನು ದ್ವೇಷಿಸುತ್ತಿರಬೇಕು.

337
00:21:52,937 --> 00:21:54,605
ಯಾರೂ ನಿನ್ನನ್ನು ದ್ವೇಷಿಸಲ್ಲ, ಬೀನ್.

338
00:21:55,940 --> 00:21:57,066
ಯಾರೂ ಇಲ್ವಾ?

339
00:21:58,693 --> 00:22:02,697
ಖಂಡಿತ, ಜೆರೆಮಾಯಾ ಬೇಜಾರಲ್ಲಿದ್ದಾನೆ,
ಆದರೆ ನಾವೆಲ್ಲರೂ ಇದನ್ನು ಒಟ್ಟಿಗೆ ನಿಭಾಯಿಸೋಣ.

340
00:22:02,780 --> 00:22:03,990
ನನ್ನಾಣೆ.

341
00:22:07,076 --> 00:22:08,619
ನಾನು ದೊಡ್ಡ ತಪ್ಪು ಮಾಡಿದೆನಾ?

342
00:22:11,456 --> 00:22:16,002
ಕೇಳು, ಒಂದು ಶಾಂತ ಜಾಗ ಹುಡುಕಿ ಕೂರು,

343
00:22:16,085 --> 00:22:18,588
ಆಮೇಲೆ ಸಿಗುವ ಮುಂದಿನ ವಿಮಾನದಲ್ಲಿ
ಟಿಕೆಟ್ ಖರೀದಿಸಿ ಮನೆಗೆ ಬಾ.

344
00:22:18,671 --> 00:22:22,091
ನನ್ನ ಕಾರ್ಡ್ ಬಳಸು.
ಎಷ್ಟು ಖರ್ಚಾದರೂ ತೊಂದರೆ ಇಲ್ಲ. ಸರಿನಾ?

345
00:22:24,886 --> 00:22:25,887
ಬೆಲ್ಲಿ?

346
00:22:26,804 --> 00:22:27,805
ಸರಿ.

347
00:22:28,973 --> 00:22:31,517
ದಯವಿಟ್ಟು ನಾನು ಇಲ್ಲಿದ್ದೇನೆ ಅಂತ
ಯಾರಿಗೂ ಹೇಳಬೇಡ.

348
00:22:31,601 --> 00:22:33,853
ಯಾಕೆಂದರೆ ಅದು… ಅದು ತುಂಬಾ ಮುಜುಗರದ ಸಂಗತಿ.

349
00:22:36,022 --> 00:22:37,148
ನಾನು ಯಾರಿಗೂ ಹೇಳಲ್ಲ.

350
00:22:38,024 --> 00:22:40,693
ವಿಮಾನ ಮಾಹಿತಿ ಸಿಕ್ಕಾಗ ನನಗೆ ಸಂದೇಶ ಕಳಿಸು.

351
00:22:42,236 --> 00:22:43,279
ಐ ಲವ್ ಯು, ಬೆಲ್ಲಿ.

352
00:22:51,412 --> 00:22:52,413
ನಾನು ಕೂಡ.

353
00:23:52,056 --> 00:23:53,057
ಹೇ?

354
00:23:56,060 --> 00:23:57,061
ಹೇ.

355
00:24:04,235 --> 00:24:05,862
-ಹೇ.
-ಹೇ.

356
00:24:06,445 --> 00:24:08,072
ನಿನ್ನ ಮೇಲೆ ಜೊಲ್ಲು ಸುರಿಸಿದ್ದರೆ ಕ್ಷಮಿಸು.

357
00:24:08,156 --> 00:24:09,991
ಓಹ್, ಇಲ್ಲ, ಪರವಾಗಿಲ್ಲ. ಪರವಾಗಿಲ್ಲ.

358
00:24:10,074 --> 00:24:11,742
ಹಿಂದಿನ ನೆನಪಾಯಿತು.

359
00:24:13,077 --> 00:24:14,495
ಸರಿ, ನನ್ನ ಫೋನ್ ಯಾರ ಬಳಿ ಇದೆ?

360
00:24:30,094 --> 00:24:32,305
ನಿನಗೆ ಇದನ್ನು ವಾಪಸ್ ಕೊಟ್ಟ ಬಗ್ಗೆ
ಪಶ್ಚಾತ್ತಾಪ ಪಡಿಸಬೇಡ.

361
00:24:53,159 --> 00:24:54,160
ಅವಳು ಕರೆ ಮಾಡಿಲ್ಲ.

362
00:24:57,622 --> 00:24:59,332
ನಿನಗೆ ಊಟ ಮತ್ತು ಸ್ನಾನ ಬೇಕು.

363
00:25:01,459 --> 00:25:02,460
ನನಗೆ ಹಸಿವಿಲ್ಲ.

364
00:25:05,588 --> 00:25:09,425
ನಾನು ಅವನಿಗೆ ತಿಂಡಿ ತಂದುಕೊಡುವೆ,
ಮತ್ತು ಚೆಕ್ಔಟ್ ಆಗುವ ಮೊದಲು ಪ್ಯಾಕ್ ಮಾಡಬೇಕು.

365
00:25:09,508 --> 00:25:10,343
ನಾನು ನೋಡಿಕೊಳ್ಳುವೆ.

366
00:25:11,928 --> 00:25:12,762
ಹೂಂ.

367
00:25:23,773 --> 00:25:25,233
ನಾನು ಮತ್ತೆ ಮಲಗುತ್ತೇನೆ.

368
00:25:25,316 --> 00:25:29,320
ಹೂಂ, ಸರಿ, ಆದರೆ ನೀನು ಸ್ನಾನ ಮಾಡಿ

369
00:25:29,403 --> 00:25:31,656
ಬೇರೆ ಬಟ್ಟೆ ಹಾಕಿಕೊಂಡರೆ ನಿನಗೆ ಆರಾಮೆನಿಸಬಹುದು.

370
00:25:31,739 --> 00:25:34,242
ನನ್ನ ಬಟ್ಟೆಗಳು ಮನೆಯಲ್ಲಿವೆ

371
00:25:34,325 --> 00:25:36,452
ಮತ್ತು ಅವನು ಅಲ್ಲಿರುವಾಗ ನಾನಲ್ಲಿಗೆ ಹೋಗಲ್ಲ.

372
00:25:38,955 --> 00:25:41,332
ಸರಿ, ನೋಡು,
ನಾನು ನಿನ್ನ ಬಟ್ಟೆಗಳನ್ನು ತರುವೆ. ಸರಿನಾ?

373
00:25:43,501 --> 00:25:45,086
ಟೇಲರ್ ಹಿಂತಿರುಗಿದಾಗ. ಹಾಂ?

374
00:25:45,795 --> 00:25:47,713
ನನಗೆ ಶಿಶುಪಾಲಕರು ಬೇಕಿಲ್ಲ ಅಂದೆ.

375
00:25:48,673 --> 00:25:49,674
ನೀನು ಹೋಗಬಹುದು.

376
00:26:25,167 --> 00:26:26,002
ಧನ್ಯವಾದ.

377
00:26:31,132 --> 00:26:32,300
ನನ್ನ ಬ್ಯಾಗ್ ಎಲ್ಲಿದೆ?

378
00:26:32,383 --> 00:26:33,509
ಯಾರಾದರೂ--

379
00:26:35,761 --> 00:26:37,930
ನನ್ನ ಬ್ಯಾಗ್ ಕಾಣುತ್ತಿಲ್ಲ.

380
00:26:38,014 --> 00:26:42,143
ಅದರಲ್ಲಿ ಬಹಳ ಬೆಲೆಬಾಳುವ,
ಅಮೂಲ್ಯವಾದ ಉಂಗುರವಿತ್ತು.

381
00:26:42,226 --> 00:26:43,728
ನಾನು ಆ ಉಂಗುರ ಕಳೆದುಕೊಳ್ಳುವಂತಿಲ್ಲ.

382
00:26:43,811 --> 00:26:47,315
ಅದು ಅಷ್ಟು ಅಮೂಲ್ಯ ಎಂದರೆ,
ಅದನ್ನು ಬ್ಯಾಗ್‌ನಲ್ಲಿ ಇಡಬಾರದಿತ್ತು, ಅಲ್ವಾ?

383
00:26:49,525 --> 00:26:50,943
ಸರಿ. ಸರಿ.

384
00:26:52,278 --> 00:26:53,195
ಸರಿ.

385
00:26:55,823 --> 00:26:59,660
ಯಾರೂ ಏನೂ ನೋಡಲಿಲ್ವಾ? ಥತ್.

386
00:27:00,244 --> 00:27:02,246
ಸರಿ. ಸರಿ.
ನನ್ನ ಏರ್‌ಟ್ಯಾಗ್ ಹುಡುಕಬೇಕು. ನಡಿ. ಹೂಂ.

387
00:27:02,330 --> 00:27:03,581
ವಸ್ತುಗಳು
ಬೆಲ್ಲಿ ಏರ್‌ಟ್ಯಾಗ್

388
00:27:07,251 --> 00:27:09,211
ಛೇ. ಬೇಗ.

389
00:27:36,655 --> 00:27:38,366
ಜೆರ್? ನಾನು ಲೋರೆಲ್.

390
00:27:43,621 --> 00:27:44,622
ನಿಮಗೆ ಏನು ಬೇಕು?

391
00:27:46,207 --> 00:27:47,792
ನೀನು ಹೇಗಿದ್ದೀಯ ಅಂತ ಕೇಳಬೇಕಿತ್ತು.

392
00:27:48,542 --> 00:27:50,669
ನೀವು ಹೇಗಿದ್ದೀರಿ ಅಂತ ನನಗೆ ಗೊತ್ತು.
ತುಂಬಾ ಖುಷಿಯಾಗಿರಬೇಕಲ್ವಾ?

393
00:27:51,337 --> 00:27:53,172
ಅದು ನಿಜ ಅಲ್ಲ.

394
00:27:53,255 --> 00:27:55,257
ನಿಮ್ಮಿಬ್ಬರಿಗಾಗಿಯೂ ನನಗೆ ತುಂಬಾ ಬೇಸರವಾಗಿದೆ.

395
00:27:55,341 --> 00:27:56,384
ಕಟ್ಟುಕಥೆ.

396
00:27:57,760 --> 00:27:59,512
ಬೆಲ್ಲಿ ನನ್ನನ್ನು ಮದುವೆಯಾಗೋದು
ನಿಮಗಿಷ್ಟ ಇರಲಿಲ್ಲ.

397
00:28:02,014 --> 00:28:04,266
-ಸರಿ. ನೀವು ಹೋಗಬಹುದು.
-ದಯವಿಟ್ಟು ನನ್ನನ್ನು ಒಳಗೆ ಬರಲು ಬಿಡು.

398
00:28:04,350 --> 00:28:06,811
ಇಷ್ಟು ಬೇಜಾರಲ್ಲಿ
ನಿನ್ನನ್ನು ನಾನು ಒಬ್ಬನೇ ಇರಲು ಬಿಡಲ್ಲ.

399
00:28:07,645 --> 00:28:09,939
ನೀವು ನನ್ನ ತಾಯಿಯಲ್ಲ, ಲೋರ್.

400
00:28:10,606 --> 00:28:13,025
ನನ್ನ ಬಗ್ಗೆ ಕಾಳಜಿ ಇದೆ ಅಂತ ನಟಿಸೋದು ಬಿಟ್ಟು

401
00:28:13,109 --> 00:28:15,361
ನಿಮ್ಮ ಮಗಳನ್ನು ನಾನು ಮದುವೆಯಾಗಿಲ್ಲ
ಅಂತ ಆಚರಿಸಿ ಹೋಗಿ.

402
00:28:15,820 --> 00:28:16,821
ಇರು--

403
00:28:17,905 --> 00:28:18,906
ಜೆರ್.

404
00:28:21,117 --> 00:28:22,118
ಸರಿ, ಅದು--

405
00:28:24,078 --> 00:28:25,746
ನಿನ್ನ ಮನಸ್ಸು ಬದಲಾಯಿಸಿದರೆ ನಾನಿಲ್ಲಿದ್ದೇನೆ.

406
00:28:43,222 --> 00:28:45,099
-ಹೇ, ಕೇಳು…
-ಜೆರ್ ಸಾಮಾನು ತಗೋತ್ತಿದ್ದೇನೆ.

407
00:28:45,182 --> 00:28:47,059
ಅವನಿಗೆ ಅವನ ಬಟ್ಟೆಗಳು ಬೇಕು, ಮತ್ತು…

408
00:28:47,143 --> 00:28:50,020
ಅವನ ಕೆಲವು ವಸ್ತುಗಳನ್ನು ಎತ್ತಿಟ್ಟೆ.
ನಾನು ಅದನ್ನು ತರುವವನಿದ್ದೆ.

409
00:28:54,817 --> 00:28:56,402
ಹಾಗಾದರೆ ನಾನು ಸರಿಯಾದ ಸಮಯಕ್ಕೆ ಬಂದೆ.

410
00:29:02,408 --> 00:29:03,993
ಅಲ್ಲಿ ಗೇಟೋರೇಡ್ ಇದೆ.

411
00:29:04,076 --> 00:29:07,580
ಕೆಂಪು ಬಣ್ಣದದು, ಅದು ಮಾತ್ರ ಅವನ
ಹ್ಯಾಂಗ್ಓವರ್‌ಗೆ ಸಹಾಯ ಮಾಡೋದು.

412
00:29:07,663 --> 00:29:09,957
-ತರೋಣ ಅಂತಿದ್ದೆ.
-ನೀನು ಏನು ಮಾಡಲು ನೋಡುತ್ತಿದ್ದೀಯಾ?

413
00:29:12,668 --> 00:29:13,669
ಸಹಾಯ ಮಾಡಲು ನೋಡುತ್ತಿದ್ದೇನೆ.

414
00:29:13,752 --> 00:29:15,796
ಗೇಟೋರೇಡ್ ಕೊಟ್ಟರೆ ಸಾಲಲ್ಲ.

415
00:29:15,880 --> 00:29:17,339
ಗೊತ್ತು, ಆದರೆ ನನಗೆ ಏನಾದರೂ ಮಾಡಬೇಕು.

416
00:29:17,423 --> 00:29:18,716
ನಿನಗೇನು ಬೇಕು ಅನ್ನೋದು ಯಾರಿಗೂ ಮುಖ್ಯವಲ್ಲ.

417
00:29:18,799 --> 00:29:19,967
ನನ್ನ ಅರ್ಥ ಅದಲ್ಲ.

418
00:29:20,050 --> 00:29:22,344
ಇದು ನೀನು ಸರಿಪಡಿಸಬೇಕಾದ ಸಮಸ್ಯೆಯಲ್ಲ.

419
00:29:22,428 --> 00:29:23,888
ನೀನೇ ಸಮಸ್ಯೆ.

420
00:29:25,556 --> 00:29:27,475
ನನ್ನ ತಂಗಿಗೆ ಅದನ್ನೆಲ್ಲಾ ಯಾಕೆ ಹೇಳಿದೆ, ಹಾಂ?

421
00:29:29,226 --> 00:29:30,311
ಯಾಕೆ?

422
00:29:31,228 --> 00:29:32,730
ಏನು ಗೊತ್ತಾ? ಪರವಾಗಿಲ್ಲ.

423
00:29:33,564 --> 00:29:34,899
ಪರವಾಗಿಲ್ಲ. ಅದು ಮುಗಿದಿದೆ.

424
00:29:38,527 --> 00:29:40,404
ನಿನಗೆ ನಿಜಕ್ಕೂ
ಜೆರ್‌ಗೆ ಸಹಾಯ ಮಾಡಬೇಕಾ? ನಿಜಕ್ಕೂ?

425
00:29:41,197 --> 00:29:42,823
ಅವನನ್ನು ಒಂಟಿಯಾಗಿ ಬಿಟ್ಟುಬಿಡು.

426
00:30:03,511 --> 00:30:04,929
ಕ್ಷಮಿಸಿ. ಕ್ಷಮಿಸಿ.

427
00:30:29,537 --> 00:30:32,331
ಥತ್. ಇಲ್ಲ, ಇಲ್ಲ, ಇಲ್ಲ!

428
00:30:39,463 --> 00:30:40,464
ಅಯ್ಯೋ!

429
00:30:47,680 --> 00:30:49,431
ಬೆಲ್ಲಿಯ ಏರ್‌ಟ್ಯಾಗ್

430
00:31:19,420 --> 00:31:20,421
ಸ್ವಲ್ಪ ಜಾಗ.

431
00:31:31,599 --> 00:31:32,600
ಬಟ್ಟೆ ಹಾಕಿದ್ಯಾ?

432
00:31:32,683 --> 00:31:34,184
ಹೋಗು ಇಲ್ಲಿಂದ.

433
00:31:34,268 --> 00:31:36,687
ಸ್ಟೀವನ್ ನಿನ್ನ ಕೀಲಿ
ಮತ್ತು ಇತರ ವಸ್ತುಗಳನ್ನು ನನಗೆ ಕೊಟ್ಟ.

434
00:31:37,771 --> 00:31:40,983
ಅವನು ಮತ್ತು ಲೋರೆಲ್
ಹೂಗಳನ್ನು ಆಸ್ಪತ್ರೆಗೆ ತಗೊಂಡು ಹೋಗುತ್ತಿದ್ದಾರೆ.

435
00:31:44,570 --> 00:31:49,074
ನೀನು ಇಷ್ಟು ಹೊತ್ತಿಗೆ
ಎದ್ದು ಕೂತಿರುತ್ತೀಯ ಅಂದುಕೊಂಡೆ.

436
00:31:50,492 --> 00:31:53,996
ಹೌದು, ನಾನು ಅದರ ಬಗ್ಗೆ ಯೋಚಿಸಿದೆ
ಆದರೆ ಆಮೇಲೆ, "ಏನು ಪ್ರಯೋಜನ?" ಅನಿಸಿತು.

437
00:31:54,830 --> 00:31:58,626
ಸರಿ, ನಾನು ನಿನಗೆ ಬೆಳಗಿನ ಉಪಾಹಾರದ ಬಫೆಯಿಂದ
ಉಳಿದ ಕೆಲವು ತಿಂಡಿಗಳನ್ನು ತಂದಿದ್ದೇನೆ, ಹಾಗಾಗಿ…

438
00:31:59,209 --> 00:32:01,754
-ವೇಫಲ್ಸ್, ಮೊಟ್ಟೆ, ಹ್ಯಾಶ್ ಬ್ರೌನ್ಸ್… ಬೇಡವಾ?
-ಸಾಕು.

439
00:32:01,837 --> 00:32:03,380
ನೀನು ವಾಂತಿ ಬರಿಸುತ್ತಿದ್ದೀಯ.

440
00:32:05,257 --> 00:32:06,258
ಗೇಟೋರೇಡ್?

441
00:32:09,219 --> 00:32:10,220
-ಕೆಂಪಾ?
-ಹೌದು.

442
00:32:12,681 --> 00:32:14,183
ಬೇಕು, ದೇವರ ದಯೆ.

443
00:32:15,059 --> 00:32:16,518
ಬೇಕಾ? ಬಂದು ತಗೋ.

444
00:32:18,604 --> 00:32:19,605
ನಿಜವಾಗಲೂ?

445
00:32:23,651 --> 00:32:24,652
ಬಾ.

446
00:32:43,712 --> 00:32:45,047
ಸ್ಟೀವನ್‌ಗೆ ಧನ್ಯವಾದ ಹೇಳಿದೆ ಅನ್ನು.

447
00:32:50,010 --> 00:32:51,095
ಏನು?

448
00:32:53,180 --> 00:32:55,849
ಹೂಂ, ಅಸಲಿಗೆ
ಗೇಟೋರೇಡ್ ಕೊಟ್ಟಿದ್ದು ಕೊನ್ರಾಡ್.

449
00:32:55,933 --> 00:32:58,519
ಓಹ್, ಅಯ್ಯೋ. ಏನಾದರೂ ಪತ್ರ ಇದೆಯಾ?

450
00:32:58,602 --> 00:33:02,439
"ಕ್ಷಮಿಸು, ನಾನು ನಿನ್ನ ಜೀವನ ಹಾಳುಮಾಡಿದೆ.
ಇಗೋ ಸ್ವಲ್ಪ ಗೇಟೋರೇಡ್" ಅಂತ.

451
00:33:02,523 --> 00:33:04,858
-ಅದು ನ್ಯಾಯವೇ.
-ನಾನು ಮತ್ತೆ ಮಲಗುತ್ತೇನೆ.

452
00:33:04,942 --> 00:33:07,027
ಇರು. ಜೆರ್… ಸುಮ್ಮನೆ ಕೂರು. ಕೂರು.

453
00:33:10,572 --> 00:33:11,782
ನನ್ನ ಜೊತೆ ಮಾತಾಡು.

454
00:33:13,617 --> 00:33:14,827
ನಾನು ನಿನಗಾಗಿ ಏನು ಮಾಡಬಹುದು?

455
00:33:19,331 --> 00:33:20,332
ನಿಜ ಹೇಳು.

456
00:33:21,875 --> 00:33:23,085
ಅವಳು ನಿನ್ನ ಜೊತೆ ಮಾತಾಡಿದಳಾ?

457
00:33:23,752 --> 00:33:25,045
ಇಲ್ಲ, ಜೆರ್, ನನ್ನ ಮೇಲಾಣೆ.

458
00:33:34,430 --> 00:33:37,641
ಅವಳಿಲ್ಲದೆ ಏನು ಮಾಡಬೇಕೆಂದು ನನಗೆ ತಿಳಿದಿಲ್ಲ.
ಹೇಗಿರಬೇಕು ಎಂದು ನನಗೆ ತಿಳಿದಿಲ್ಲ…

459
00:33:38,851 --> 00:33:40,602
ಅವಳೇ ನನಗೆ ಸರ್ವಸ್ವ.

460
00:33:41,687 --> 00:33:42,896
ಅವಳು ನನ್ನ ಇಡೀ ಜೀವನ.

461
00:33:43,981 --> 00:33:46,316
ನಾನು ಅದನ್ನು ಹೇಗೆ ಬಿಟ್ಟುಬಿಡಲಿ?

462
00:33:46,400 --> 00:33:48,485
ಹೂಂ, ಅವಳು ನಿನ್ನ ಇಡೀ ಜೀವನ ಅಲ್ಲ, ಜೆರ್,

463
00:33:50,821 --> 00:33:54,533
ಮತ್ತು ಅವಳು ಆಗಿದ್ದರೆ, ಅದು ಸರಿಯಲ್ಲ.

464
00:33:56,660 --> 00:33:58,036
ಹೌದು, ಬಹುಶಃ ನೀನು ಹೇಳಿದ್ದು ಸರಿ…

465
00:33:58,829 --> 00:34:01,665
ಅವಳು ಆ ಬಾಗಿಲಿನಿಂದ ನಡೆದು ಬರುತ್ತಾಳೆ ಅಂತ
ನಾನು ಇನ್ನೂ ಕಾಯುತ್ತಿದ್ದೇನೆ.

466
00:34:05,627 --> 00:34:08,797
ಅಂದರೆ, ಇದು ನಿಜವಲ್ಲ.
ಎಲ್ಲಾ ಹೀಗೆ ಮುಗಿಯಲು ಸಾಧ್ಯವಿಲ್ಲ.

467
00:34:10,048 --> 00:34:12,217
-ನಾನು ಅಸಹ್ಯ ಅಲ್ವಾ?
-ಇಲ್ಲ, ನೀನು ಅಸಹ್ಯ ಅಲ್ಲ.

468
00:34:14,511 --> 00:34:16,054
ಸರಿ, ಬಹುಶಃ ಸ್ವಲ್ಪ ಅಸಹ್ಯ.

469
00:34:32,446 --> 00:34:33,447
ಮತ್ತೆ, ನೀನು ಹಾಗೂ ಸ್ಟೀವ್-ಒ?

470
00:34:34,072 --> 00:34:36,867
ಏನು? ಇಲ್ಲ, ನಾನು-- ನಾನು-- ಇಲ್ಲ.

471
00:34:37,826 --> 00:34:40,537
ಸರಿ, ನನಗೆ ಗೊತ್ತಿಲ್ಲ, ಬಹುಶಃ.

472
00:34:41,955 --> 00:34:44,333
ಹೂಂ, ಖಂಡಿತ, ಬಹುಶಃ.

473
00:34:48,754 --> 00:34:50,714
ನನಗಿಂತ ನಿನ್ನ ಅದೃಷ್ಟ ಚೆನ್ನಾಗಿರಲಿ.

474
00:34:54,927 --> 00:34:55,928
ತಿಂಡಿ ತಂದಿದ್ದಕ್ಕೆ ಧನ್ಯವಾದ.

475
00:35:01,934 --> 00:35:02,935
ಸ್ನಾನ ಮಾಡು.

476
00:35:24,581 --> 00:35:25,999
ಶುಭ ಸಂಜೆ!

477
00:35:26,875 --> 00:35:28,627
ಅಲ್ಲಿ ಯಾರದೋ ಬಳಿ ನನ್ನ ಬ್ಯಾಗ್ ಇದೆ…

478
00:35:29,169 --> 00:35:30,128
ಪಾಸ್‌ವರ್ಡ್?

479
00:35:32,631 --> 00:35:36,260
ದಯವಿಟ್ಟು ನನ್ನ ಬ್ಯಾಗ್ ಬೇಕು.

480
00:35:36,635 --> 00:35:37,970
ಪಾಸ್‌ವರ್ಡ್ ಇಲ್ಲದೆ ಪ್ರವೇಶವಿಲ್ಲ.

481
00:35:38,512 --> 00:35:41,974
ದಯವಿಟ್ಟು? ನಾನು ಅಲ್ಲಿಗೆ ಬೇಗನೆ ಹೋಗಿ
ತಕ್ಷಣವೇ ಹೊರಗೆ ಬರುತ್ತೇನೆ.

482
00:35:42,516 --> 00:35:43,892
ಪಾಸ್‌ವರ್ಡ್ ಇಲ್ಲದೆ ಪ್ರವೇಶವಿಲ್ಲ.

483
00:35:56,697 --> 00:35:59,283
ಮ್ಯಾಕ್ಸ್, ನೀನು ಫೋನ್ ಯಾಕೆ ಉತ್ತರಿಸುತ್ತಿಲ್ಲ?
ನನಗೆ ಕರೆ ಮಾಡು.

484
00:35:59,366 --> 00:36:01,368
ನನಗೆ ನಿನ್ನ ಪರಿಚಯ ಇದೆ ಅನಿಸುತ್ತೆ.

485
00:36:01,451 --> 00:36:03,161
ಕ್ಷಮಿಸಿ.
ನಾನು ನನ್ನ ಪ್ರೇಯಸಿಗಾಗಿ ಕಾಯುತ್ತಿದ್ದೇನೆ.

486
00:36:03,829 --> 00:36:05,163
ನೀನು ಸುಳ್ಳು ಹೇಳಬೇಕಿಲ್ಲ.

487
00:36:05,247 --> 00:36:06,373
ನಾನು ಸುಳ್ಳು ಹೇಳುತ್ತಿಲ್ಲ.

488
00:36:07,541 --> 00:36:09,126
-ಜಾಗ ಬಿಡು.
-ಸುಳ್ಳು ಹೇಳಬೇಡ.

489
00:36:09,209 --> 00:36:11,879
-ಜಾಗ ಬಿಡು.
-ಹೇ, ಲೂಸಿ, ನಾನು--

490
00:36:13,046 --> 00:36:15,757
ದೇವರೇ, ನನಗೆ ನೀನು ಎಲ್ಲೂ ಸಿಗಲಿಲ್ಲ.
ನಾನು ಹೊರಡುವವಳಿದ್ದೆ.

491
00:36:15,841 --> 00:36:17,843
-ದೇವರ ದಯೆ, ನೀನು ಹೋಗಲಿಲ್ಲ.
-ಹೌದು.

492
00:36:17,926 --> 00:36:19,595
ಇವಳು ನಿನ್ನ ಪ್ರೇಯಸಿನಾ?

493
00:36:20,554 --> 00:36:21,638
ಹೌದು.

494
00:36:23,181 --> 00:36:24,016
ಪಾಸ್‌ವರ್ಡ್

495
00:36:24,850 --> 00:36:25,684
ಲಾ ಜಿತೇ.

496
00:36:27,227 --> 00:36:28,061
ಸರಿ.

497
00:36:29,479 --> 00:36:30,397
ಬಾ.

498
00:36:35,777 --> 00:36:38,238
-ಅಂದಹಾಗೆ, ನನ್ನ ಹೆಸರು ಜೆಮ್ಮಾ.
-ಇಸಾಬೆಲ್.

499
00:36:53,211 --> 00:36:54,963
ಬೆಲ್ಲಿಯ ಏರ್‌ಟ್ಯಾಗ್
ಕೊನೆ ನೋಟ ಇಂದು ರಾತ್ರಿ 9:36

500
00:37:17,861 --> 00:37:20,906
ಅಲ್ಲಿರುವುದು ನನ್ನ ಸ್ನೇಹಿತ. ನನ್ನ ಜೊತೆ ಬಾ.

501
00:37:23,116 --> 00:37:24,034
ಸರಿ.

502
00:37:38,090 --> 00:37:39,091
ಜಾಗ ಬಿಡಿ.

503
00:37:39,174 --> 00:37:42,219
ಹುಡುಗರೇ! ಏನು ಕಥೆ?
ಫೋನ್‌ಗಳಿಗೆ ಯಾಕೆ ಉತ್ತರಿಸುತ್ತಿರಲಿಲ್ಲ?

504
00:37:42,302 --> 00:37:44,513
ಹೇ, ಚಿನ್ನ, ಕ್ಷಮಿಸು.
ಇಲ್ಲಿ ನೆಟ್‌ವರ್ಕ್ ಕೆಟ್ಟದಾಗಿದೆ.

505
00:37:44,596 --> 00:37:46,098
ಜೆಮ್ಮಾ, ಎಲ್ಲಿದ್ದೆ ನೀನು?

506
00:37:46,181 --> 00:37:49,768
ಹೊರಗೆ, ನಿಮ್ಮನ್ನು ಹುಡುಕುತ್ತಿದ್ದೆ,
ಆಮೇಲೆ ಒಬ್ಬ ವಿಕೃತಕಾಮಿ ಹಿಂದೆ ಬಂದ.

507
00:37:49,851 --> 00:37:52,813
-ಏನು?
-ಇಸಾಬೆಲ್, ಇದು ನನ್ನ ಪ್ರೇಯಸಿ, ಮ್ಯಾಕ್ಸ್

508
00:37:52,896 --> 00:37:54,731
ಮತ್ತು ನನ್ನ ಸ್ನೇಹಿತರು, ಸೆಲೀನ್ ಮತ್ತು ಬೆನಿಟೋ.

509
00:37:54,815 --> 00:37:55,649
-ಹಲೋ…
-ಹಾಯ್…

510
00:37:55,732 --> 00:37:57,192
-ನಮಸ್ಕಾರ!
-ಹಾಯ್…

511
00:38:01,321 --> 00:38:02,447
ನಾನು ಈಗ ಬಂದೆ.

512
00:38:07,619 --> 00:38:08,620
.ಕೇಳಿ

513
00:38:11,081 --> 00:38:12,582
ಹೇ, ಕೇಳಿ, ಅದು ನನ್ನ ಬ್ಯಾಗ್.

514
00:38:15,711 --> 00:38:16,545
ಏನಾಗುತ್ತಿದೆ?

515
00:38:20,173 --> 00:38:22,217
ಹೇ, ಅದು ನನ್ನ ಬ್ಯಾಗ್.

516
00:38:26,388 --> 00:38:27,472
ಹಲೋ? ಅದು ನನ್ನ ಬ್ಯಾಗ್.

517
00:38:27,556 --> 00:38:29,266
"ಹಲೋ? ಅದು ನನ್ನ ಬ್ಯಾಗ್."

518
00:38:32,102 --> 00:38:33,103
ಬಾಯ್, ಹುಡುಗಿ.

519
00:38:35,063 --> 00:38:36,064
ನನಗೆ ಗೊತ್ತಿಲ್ಲ.

520
00:38:38,025 --> 00:38:40,110
ಅಬ್ಬಾ. ದೇವರೇ!

521
00:38:40,193 --> 00:38:41,319
ನಿನ್ನ ಸಮಸ್ಯೆ ಏನು, ನಾಯಿ?

522
00:38:41,403 --> 00:38:42,237
ಏನಾಗುತ್ತಿದೆ?

523
00:38:42,320 --> 00:38:43,155
ಅವ ನನ್ನ ಬ್ಯಾಗ್ ಕದ್ದ!

524
00:38:43,530 --> 00:38:44,990
ಅವಳು ಹುಚ್ಚಿ. ಇದು ನನ್ನ ಬ್ಯಾಗ್.

525
00:38:45,073 --> 00:38:46,825
ನಿಜವಾಗಲೂ? ಸರಿ, ಹೂಂ.

526
00:38:47,784 --> 00:38:49,619
ಇದು ನಿನ್ನ ಬಟ್ಟೆನಾ? ಹೌದಾ?

527
00:38:51,371 --> 00:38:52,372
ಹಾಗೆ, ಹುಡುಗಿ!

528
00:38:55,083 --> 00:38:56,168
-ಹುಚ್ಚ.
-ಹೂಂ. ಸರಿ.

529
00:38:56,668 --> 00:38:57,711
ನಡಿ, ನಡಿ!

530
00:38:57,794 --> 00:38:58,795
ಸರಿ, ಇರು.

531
00:39:01,423 --> 00:39:02,424
ನೀನು ಆರಾಮಿದ್ದೀಯಾ?

532
00:39:03,091 --> 00:39:05,510
ಹೂಂ. ಈ ದರಿದ್ರದವನು ನನ್ನ ಬ್ಯಾಗ್ ಕದ್ದಿದ್ದ.

533
00:39:06,636 --> 00:39:08,513
ಸರಿ, ನಿನಗೆ ಕುಡಿಯಲು ಏನಾದರೂ ಬೇಕು. ತರೋಣ ಬಾ.

534
00:39:08,597 --> 00:39:09,639
ಹೂಂ. ಹೇ…

535
00:39:16,772 --> 00:39:19,399
ಅಂದರೆ, ಎಷ್ಟು ಧೈರ್ಯ.
ಏನು, ಮದುವೆಯನ್ನು ಹಾಳು ಮಾಡಿ

536
00:39:19,483 --> 00:39:21,526
ಆಮೇಲೆ ಅದನ್ನು ಗೇಟೋರೇಡ್ ನೀಡಿ
ಸರಿಪಡಿಸಲು ಬಯಸುತ್ತಾನಾ?

537
00:39:21,610 --> 00:39:22,778
-ಬಟ್ಟೆ ಕೊಟ್ಟು?
-ನಿಜ.

538
00:39:22,861 --> 00:39:24,529
ಇದೊಂದು ರೋಗ ಅಂತ ನಿನಗಾಣಿಸುತ್ತಿಲ್ಲವಾ?

539
00:39:26,281 --> 00:39:28,366
ಅವರು ಪ್ರೌಢಶಾಲೆಯಲ್ಲಿ
ಡೇಟ್ ಮಾಡುತ್ತಿದ್ದರು, ಅಷ್ಟೇ,

540
00:39:28,450 --> 00:39:32,454
ಮತ್ತು ನಂತರ, ಇದ್ದಕ್ಕಿದ್ದಂತೆ,
ಮದುವೆಗೆ ಸ್ವಲ್ಪ ಮೊದಲು, ಅವನಿಗೆ--

541
00:39:32,537 --> 00:39:35,999
ಇಲ್ಲ, ಆದರೆ ಇದು ಕೇವಲ ಪ್ರೌಢಶಾಲಾ ಸಂಬಂಧವಲ್ಲ.

542
00:39:36,083 --> 00:39:40,045
ಅದು ಬೆಲ್ಲಿ ಮತ್ತು ಕೊನ್ರಾಡ್, ಅಂದರೆ,
ಅವರ ಎಲ್ಲಾ ಮಹಾಗಾಥೆ, ಅನಂತ, ಆತ್ಮ ಸಂಗಾತಿ ಕಥೆ.

543
00:39:40,128 --> 00:39:42,839
-ಸ್ವರ್ಗದಲ್ಲಿ ಬರೆಯಲ್ಪಟ್ಟಿರೋದು.
-ಅದೆಲ್ಲಾ ನಾಲ್ಕು ವರ್ಷ ಹಿಂದಿನ ಕಥೆ.

544
00:39:44,841 --> 00:39:48,595
ಸರಿ, ಅದು ನಿಜಕ್ಕೂ ಅಷ್ಟು ಹಿಂದಿನ ಕಥೆನಾ,
ನನಗೆ ಗೊತ್ತಿಲ್ಲ.

545
00:39:48,678 --> 00:39:49,888
ಏನು?

546
00:39:52,891 --> 00:39:55,018
ನನಗೆ ಏನು ಗೊತ್ತಿಲ್ಲ? ಬಾಯಿಬಿಡು, ಜಿವೆಲ್.

547
00:39:55,977 --> 00:39:59,356
ಹೂಂ, ಕ್ರಿಸ್‌ಮಸ್‌ನಲ್ಲಿ ಅವರ ನಡುವೆ ಏನೋ ಆಯಿತು.

548
00:39:59,439 --> 00:40:01,316
ಈ ಹಿಂದಿನ ಕ್ರಿಸ್‌ಮಸ್‌ನಲ್ಲಾ? ಸೆಕ್ಸ್ ಮಾಡಿದರಾ?

549
00:40:01,399 --> 00:40:02,567
ಇಲ್ಲ, ಅವರು ಸೆಕ್ಸ್ ಮಾಡಲಿಲ್ಲ.

550
00:40:02,651 --> 00:40:04,903
-ಏನು?
-ಇಲ್ಲ, ಅವಳು--

551
00:40:04,986 --> 00:40:07,572
ಅವಳು ಕಸಿನ್ಸ್‌ನಲ್ಲಿ ಅವನನ್ನು ಭೇಟಿಯಾದಳು,

552
00:40:07,656 --> 00:40:10,242
ಮತ್ತು ಏನೂ ಆಗಲಿಲ್ಲ,
ಆದರೆ ಅವರು ಒಟ್ಟಿಗೆ ಇದ್ದರು

553
00:40:10,325 --> 00:40:12,494
ಮತ್ತು ಜೆರೆಮಾಯಾಗೆ ಅದು ಗೊತ್ತಿರಲಿಲ್ಲ
ಆದರೆ ಆಮೇಲೆ ತಿಳಿದುಬಂತು,

554
00:40:12,577 --> 00:40:15,080
ಅದಕ್ಕೇ… ಕ್ಯಾಬೊ.

555
00:40:16,873 --> 00:40:18,208
ಕ್ಯಾಬೊ ಏನು?

556
00:40:25,382 --> 00:40:29,427
ವಸಂತ ರಜೆಯ ಸಮಯದಲ್ಲಿ ಜೆರೆಮಾಯಾ
ಲೇಸಿ ಬರೋನ್ ಜೊತೆ ಮಲಗಿದ.

557
00:40:29,511 --> 00:40:30,887
ಜೆರೆಮಾಯಾ ಬೆಲ್ಲಿಗೆ ಮೋಸ ಮಾಡಿದನಾ?

558
00:40:31,471 --> 00:40:34,808
ನಾನು ಕಳೆದ 24 ಗಂಟೆಗಳಿಂದ
ಅವನ ಕಣ್ಣೀರು ಒರೆಸುತ್ತಿದ್ದೇನೆ,

559
00:40:34,891 --> 00:40:38,562
ಮತ್ತು ಅವನು ಲೇಸಿ ಬರೋನ್ ಜೊತೆ
ನನ್ನ ತಂಗಿಗೆ ಮೋಸ ಮಾಡಿದನಾ--

560
00:40:38,645 --> 00:40:41,064
ಲೇಸಿ ಬರೋನ್ ಯಾರು?

561
00:40:41,148 --> 00:40:43,567
ಅಂದರೆ, ಅವರು ಆಗ ಬೇರ್ಪಟ್ಟಿದ್ದರು, ಆದರೆ ಹೌದು.

562
00:40:43,650 --> 00:40:45,026
ವಾಹ್! ನೀನು--

563
00:40:47,571 --> 00:40:50,699
ಇದರ ಮಧ್ಯೆ, ಅವರು ನಮ್ಮ ಬಗ್ಗೆ
ಮಾತಾಡುತ್ತಾ ಸುತ್ತುತ್ತಿದ್ದಾರಾ?

564
00:40:50,782 --> 00:40:52,659
ನಮ್ಮ ಬಗ್ಗೆನಾ?

565
00:40:52,742 --> 00:40:55,495
ಅವರಿಗೆ ಹೋಲಿಸಿದರೆ ನಾವು ಎಷ್ಟೋ ಉತ್ತಮ.
ತಮಾಷೆ ಮಾಡುತ್ತಿದ್ದೀಯಾ?

566
00:40:55,579 --> 00:40:57,873
ಕನಿಷ್ಠ ಪಕ್ಷ ನಾವು ಮಾತಾಡುತ್ತಿದ್ದೇವೆ.

567
00:40:58,456 --> 00:41:01,751
ಸರಿ, ಹಾಗಾದರೆ ಮಾತಾಡೋಣ. ನಿಜವಾಗಿ.

568
00:41:05,255 --> 00:41:06,673
-ಸರಿ.
-ಅದರ ಬಗ್ಗೆ ಮಾತಾಡೋಣ.

569
00:41:07,674 --> 00:41:08,800
ಹೂಂ. ಹೂಂ, ಸರಿ.

570
00:41:35,118 --> 00:41:36,912
-ಸರಿ, ಇರು.
-ಏನು?

571
00:41:36,995 --> 00:41:40,123
ನಾವು ಇದನ್ನು ಮತ್ತೆ ಮಾಡಲಿದ್ದರೆ, ನಾನು--
ನಾನು ಒಂದು ವಿಷಯ ಹೇಳಬೇಕು.

572
00:41:41,499 --> 00:41:42,584
ಸರಿ.

573
00:41:43,627 --> 00:41:45,754
ಹೂಂ, ಹೂಂ, ಖಂಡಿತ. ಹೂಂ.

574
00:41:54,638 --> 00:41:56,723
ಅಂದು ಆಸ್ಪತ್ರೆಯಲ್ಲಿ,

575
00:41:58,558 --> 00:42:04,314
ನೀನು… ನಮ್ಮ ಬಗ್ಗೆ
ನಿನ್ನ ಮನಸ್ಸನ್ನು ಬದಲಾಯಿಸಿದಾಗ…

576
00:42:07,901 --> 00:42:09,819
ಆಗ-- ನನಗೆ ತುಂಬಾ ಬೇಜಾರಾಯಿತು.

577
00:42:12,739 --> 00:42:13,740
ಕ್ಷಮಿಸು.

578
00:42:14,574 --> 00:42:18,536
ಅಂದರೆ, ನೀನು ಹೇಳಿದ ವಿಷಯಗಳು ಕಠೋರವಾಗಿದ್ದವು
ಆದರೆ ಅವು ನಿಜವಾಗಿದ್ದವು, ಗೊತ್ತಾ,

579
00:42:20,038 --> 00:42:21,206
ಮತ್ತು ಅವು ಈಗಲೂ ನಿಜ.

580
00:42:22,165 --> 00:42:26,461
ಹಾಗಾದರೆ ನಿನಗೆ ಇದ್ದಕ್ಕಿದ್ದಂತೆ
ನಾನು ಯಾಕೆ ಬೇಕು?

581
00:42:28,964 --> 00:42:31,258
ನನಗೆ ನೀನು ಎಂದೂ ಬೇಡವಿರಲಿಲ್ಲ, ಟೇಲರ್.

582
00:42:32,008 --> 00:42:33,385
ಇಲ್ಲ, ಆದರೆ ನಿನಗೆ ನಾನು ಬೇಕಾಗಿರಲಿಲ್ಲ.

583
00:42:35,011 --> 00:42:36,763
ಆ ದಿನ ಆಸ್ಪತ್ರೆಯಲ್ಲಿ,
ನಿನಗೆ ನಾನು ಬೇಕಿರಲಿಲ್ಲ.

584
00:42:36,846 --> 00:42:38,265
ಯಾಕೆಂದರೆ ನಿನಗೆ ನಾನು ಬೇಕಾಗಿರಲಿಲ್ಲ.

585
00:42:39,683 --> 00:42:42,686
ಟೇಲರ್, ಸಾವಿನ ದವಡೆಗೆ ಹೋಗಿ ಬರುವ ಮುನ್ನ
ನನಗೆ ಕೊನೆಯದಾಗಿ ನೆನಪಿರುವ ವಿಷಯ

586
00:42:42,769 --> 00:42:45,730
ನಾನು ನನ್ನ ಭಾವನೆಗಳನ್ನು ಹೇಳುವಾಗ
ನೀನು ಕಾರಿನಿಂದ ಹೊರಗೆ ಓಡುತ್ತಿದ್ದದ್ದು.

587
00:42:45,814 --> 00:42:49,109
-ಇಲ್ಲ, ನಾನು ಇನ್ನೂ ಅದೇ ವ್ಯಕ್ತಿ.
-ಹೌದು. ಆದರೆ ನನಗೆ ಆ ವ್ಯಕ್ತಿ ಇಷ್ಟ.

588
00:42:51,111 --> 00:42:53,863
ತಾನು ಕಾಳಜಿ ವಹಿಸುವ ಜನರಿಗಾಗಿ
ಯಾವಾಗಲೂ ಇರುವ ವ್ಯಕ್ತಿ,

589
00:42:53,947 --> 00:42:56,116
ಕಠಿಣವಾದ ವಿಷಯವನ್ನು ಹೇಳಲು ಹೆದರದ ವ್ಯಕ್ತಿ,

590
00:42:56,199 --> 00:42:58,326
ಅವಳ ಆತ್ಮೀಯ ಸ್ನೇಹಿತೆ
ಒಬ್ಬ ರಾಕ್ಷಸಿಯಂತೆ ಆಡುತ್ತಿದ್ದರೂ ಸಹ,

591
00:42:58,410 --> 00:43:00,829
ಆದರೆ ವಿಷಯ ಏನೆಂದರೆ,
ನೀನು ನಿನ್ನ ಸ್ನೇಹಿತರಿಗೆ ಆ ವ್ಯಕ್ತಿ.

592
00:43:03,623 --> 00:43:06,042
ನೀನು ನನಗೆ ಆ ವ್ಯಕ್ತಿಯಾಗಲು ಯಾಕೆ ಸಾಧ್ಯವಿಲ್ಲ?

593
00:43:11,840 --> 00:43:13,925
ಹುಡುಗರೊಂದಿಗೆ ಹೇಗೆ ಇರಬೇಕೆಂದು ನನಗೆ ತಿಳಿದಿರುವ

594
00:43:15,218 --> 00:43:16,469
ಏಕೈಕ ಮಾರ್ಗ ಅದು.

595
00:43:18,847 --> 00:43:19,848
ನನಗೆ ಅರ್ಥವಾಗುತ್ತೆ.

596
00:43:21,558 --> 00:43:22,934
ನನಗೆ ಅರ್ಥವಾಗುತ್ತೆ. ಅರ್ಥವಾಗುತ್ತೆ.

597
00:43:24,102 --> 00:43:27,605
ಆದರೆ ಕೆಲವು ದಿನಗಳಿಂದ ..ನೀನು ನನ್ನ ಜೊತೆ..
ನನಗೆ ಬೇಕಿರುವಹಾಗೆ ನಡೆದು ಕೊಳ್ಳುತಿದ್ದೀಯ.

598
00:43:29,524 --> 00:43:30,525
ಮತ್ತು ನನಗೆ ತಿಳಿಯಬೇಕಾದದ್ದು,

599
00:43:32,277 --> 00:43:35,697
ನಾವು ಪ್ರೇಮಿಗಳಾದರೂ ನೀನು ಹಾಗಿರುವುದನ್ನು
ಮುಂದುವರೆಸುತ್ತೀಯಾ ಅಂತ.

600
00:43:39,868 --> 00:43:40,910
ಹೂಂ, ನನಗದು ಬೇಕು.

601
00:43:46,666 --> 00:43:48,126
ಆದರೆ ಅದು ಕೆಲಸ ಮಾಡದಿದ್ದರೆ?

602
00:43:49,502 --> 00:43:52,255
-ನಮ್ಮ ಸಂಬಂಧ ಕೆಲಸ ಮಾಡದಿದ್ದರೆ?
-ಆ ಅಪಾಯ ಯಾವಾಗಲೂ ಇರುತ್ತೆ,

603
00:43:54,299 --> 00:43:56,259
ಆದರೆ ನಿನಗಾಗಿ ನಾನದನ್ನು ತೆಗೆದುಕೊಳ್ಳಲು ಸಿದ್ಧ.

604
00:44:01,139 --> 00:44:03,183
ನಾನೂ ಕೂಡ ಸಿದ್ಧ.

605
00:44:06,519 --> 00:44:08,188
ಹೌದು, ನಮಗಾಗಿ.

606
00:44:26,289 --> 00:44:30,293
100% ಸ್ಪಷ್ಟವಾಗಿ ಹೇಳಬೇಕೆಂದರೆ,
ನಮ್ಮ ಸಂಬಂಧ ಕೇವಲ ಲೈಂಗಿಕತೆಯ ಬಗ್ಗೆ ಅಲ್ಲ.

607
00:44:32,921 --> 00:44:35,382
-ಅಂದರೆ, ನಿನ್ನ ಜೊತೆ ಸೆಕ್ಸ್ ಅದ್ಭುತ.
-ನಿನ್ನ ಜೀವನದ ಅತ್ಯುತ್ತಮ ಸೆಕ್ಸ್.

608
00:44:35,465 --> 00:44:36,466
ಪ್ರಶ್ನೆಯೇ ಇಲ್ಲ.

609
00:44:50,772 --> 00:44:51,773
ಐ ಲವ್ ಯು.

610
00:44:53,400 --> 00:44:54,401
ನಾನು ಕೂಡ.

611
00:45:14,629 --> 00:45:17,549
ಹೂಂ, ನಾನು ಆ ವ್ಯಕ್ತಿಯನ್ನು
ನನ್ನ ಬ್ಯಾಗ್ ಜೊತೆ ನೋಡಿದೆ, ಮತ್ತು…

612
00:45:18,258 --> 00:45:20,468
ಮತ್ತು ನನಗೆ ಗೊತ್ತಿಲ್ಲ, ಕೋಪ ಬಂತು.

613
00:45:22,804 --> 00:45:25,890
ಹೂಂ, ಅದು ನನ್ನ ಜೀವನದ ಕೊನೆಯ 36 ಗಂಟೆಗಳು.

614
00:45:26,891 --> 00:45:28,309
ಹೂಂ, ದೇವರೇ.

615
00:45:28,393 --> 00:45:30,311
ಅದು ದೊಡ್ಡ ಕಥೆ.

616
00:45:30,687 --> 00:45:33,231
ಸ್ವಲ್ಪ ಇರು. ಮದುವೆಯ ವಿಷಯಕ್ಕೆ ಹಿಂತಿರುಗೋಣ.

617
00:45:33,314 --> 00:45:37,569
ಅಂದರೆ, ನೀನು ಜೆರ್ರಿಯನ್ನು ಬಿಟ್ಟು ವಿಮಾನ
ಹತ್ತಿದೆ ಮತ್ತು ಆಗಿಂದ ನೀವಿಬ್ಬರೂ ಮಾತಾಡಿಲ್ವಾ?

618
00:45:38,486 --> 00:45:42,031
ಜೆರೆಮಾಯಾ… ಇಲ್ಲ.

619
00:45:42,115 --> 00:45:44,159
ಅಣ್ಣನ ಜೊತೆಗಿನ ಕಥೆ ಏನು?

620
00:45:44,242 --> 00:45:47,203
ಇಸಾಬೆಲ್, ನೀನು ಅಣ್ಣನನ್ನು
ವಿಮಾನ ನಿಲ್ದಾಣದಲ್ಲಿ ಬಿಟ್ಟು ಬಂದೆ

621
00:45:47,287 --> 00:45:49,414
ಅವನು ತನ್ನ ಇಡೀ ಜೀವನವನ್ನು ನಿನಗಾಗಿ
ಹಾಳುಮಾಡಿಕೊಂಡ ನಂತರವೂ.

622
00:45:50,123 --> 00:45:53,334
ಹೂಂ, ಸರಿ, ಅಂದರೆ,
ನಾನು ಅವನನ್ನು ಹಾಗೆ ಮಾಡಲು ಕೇಳಲಿಲ್ಲ.

623
00:45:55,211 --> 00:45:56,212
ಅದ್ಭುತ.

624
00:45:57,922 --> 00:45:58,923
ನೀನು ದಿಟ್ಟೆ.

625
00:45:59,007 --> 00:46:01,217
ಇಲ್ಲ. ನಾನು ಕೆಟ್ಟವಳು, ಅಷ್ಟೇ.

626
00:46:01,301 --> 00:46:02,635
ನಾವಿದಕ್ಕಿಂತ ಕೆಟ್ಟದ್ದು ನೋಡಿದ್ದೇವೆ.

627
00:46:02,719 --> 00:46:04,888
-ಕೆಟ್ಟದ್ದು ಮಾಡಿದ್ದೇವೆ.
-ತುಂಬಾ ಕೆಟ್ಟದ್ದು.

628
00:46:04,971 --> 00:46:06,055
ಹೂಂ.

629
00:46:06,139 --> 00:46:07,140
ಇಲ್ಲ, ಮತ್ತು ನಿಜವಾಗಲೂ…

630
00:46:08,099 --> 00:46:10,935
ಸೆಲೀನ್, ನೀನು ಎಷ್ಟು
ವಿವಾಹಿತ ಪುರುಷರೊಂದಿಗೆ ಮಲಗಿದ್ದೀಯಾ?

631
00:46:11,019 --> 00:46:14,272
ಓಹ್, ನಾನು ಈಗ ಹಾಗೆ ಮಾಡಲ್ಲ,
ಅಲ್ಲದೆ ಅವರು ಮದುವೆಯಾದವರು, ನಾನಲ್ಲ.

632
00:46:14,898 --> 00:46:16,733
-ಜಾಣೆ.
-ನಾನು ನನ್ನ ಅಜ್ಜಿಗೆ

633
00:46:16,816 --> 00:46:18,776
ವ್ಯಾಪಾರ ಶಾಲೆಗೆ ಹೋಗುತ್ತಿದ್ದೇನೆ ಅಂತ ಹೇಳಿ,

634
00:46:18,860 --> 00:46:21,488
ಅವಳು ನನಗೆ ಕೊಟ್ಟ ಎಲ್ಲಾ ಹಣವನ್ನು
ಕಲಾ ಸಾಮಗ್ರಿಗಳಿಗೆ ಬಳಸಿದೆ.

635
00:46:21,571 --> 00:46:23,531
ಹೌದು, ಮತ್ತು ನೀನು ಹಾಕಿರುವ
ಆ ಚರ್ಮದ ಜಾಕೆಟ್ ಮೇಲೆ.

636
00:46:24,240 --> 00:46:26,159
ಹೇಳು, ಬೆನ್ನಿ, ಹಾಂ? ನೀನು?

637
00:46:26,242 --> 00:46:28,244
ನೀನು ಒಂದು ಹುಡುಗಿಯನ್ನು
ಮದುವೆಯಾಗುವ ಹಂತದಲ್ಲಿ ಇದ್ದೆ ಅಲ್ವಾ…

638
00:46:29,787 --> 00:46:31,289
ಸಂಗಾತಿ ವೀಸಾಗಾಗಿ?

639
00:46:31,372 --> 00:46:33,833
ಸುಮ್ಮನಿರು. ನಾನದನ್ನು ಮಾಡಲಿಲ್ಲ.

640
00:46:33,917 --> 00:46:35,293
ನೀನು ಕಲಾ ಶಾಲೆಗೆ ಸೇರಿದ ಮಾತ್ರಕ್ಕೆ.

641
00:46:36,711 --> 00:46:37,712
ಅದೂ ನಿಜ.

642
00:46:39,005 --> 00:46:41,925
ನೋಡು, ಯಾವುದೇ ಹಾನಿಯನ್ನುಂಟುಮಾಡದೆ

643
00:46:42,008 --> 00:46:43,676
ನೀನು ಇಪ್ಪತ್ತರ ವಯಸ್ಸನ್ನು ದಾಟಲ್ಲ.

644
00:46:43,760 --> 00:46:45,220
ಇಲ್ಲದಿದ್ದರೆ, ನೀನು ಬದುಕಿದಂತೆಯೇ ಅಲ್ಲ.

645
00:46:47,805 --> 00:46:48,932
ಸರಿ, ಒಬ್ಬ ಅಪರಿಚಿತ ವ್ಯಕ್ತಿಗೆ…

646
00:46:49,891 --> 00:46:52,268
ಇಷ್ಟು ಪ್ರೀತಿ ತೋರಿದ್ದಕ್ಕೆ ಧನ್ಯವಾದ.

647
00:46:52,977 --> 00:46:56,773
ಅಂದರೆ, ಈಗ ನಿಮಗೆ ನನ್ನ ಬಗ್ಗೆ
ಬೇಕಾದಷ್ಟು ಗೊತ್ತು, ಆದರೆ…

648
00:46:59,025 --> 00:47:01,653
ನಾನು ಈಗ ವಿಮಾನ ನಿಲ್ದಾಣಕ್ಕೆ ಹೊರಡಬೇಕು.

649
00:47:02,862 --> 00:47:05,156
ಇರು, ಏನು? ನೀನು ಇಂದು ರಾತ್ರಿ ಹೋಗುತ್ತಿದ್ದೀಯಾ?

650
00:47:05,240 --> 00:47:09,327
ಹೌದು, ನನಗೆ ಐದು ಗಂಟೆಗಳಲ್ಲಿ
ಹಿಂತಿರುಗುವ ವಿಮಾನವಿದೆ.

651
00:47:11,788 --> 00:47:14,666
ಅಥವಾ… ನೀನು ಉಳಿದುಕೊಳ್ಳಬಹುದು.

652
00:47:15,917 --> 00:47:19,295
ಇಲ್ಲ, ನಾನು ನನ್ನ ಸ್ಥಾನ ಕಳೆದುಕೊಂಡೆ
ಅಂದೆನಲ್ಲಾ. ಹಾಗಾಗಿ…

653
00:47:19,379 --> 00:47:22,507
ಅದಕ್ಕೆ? ನೀನು ನಿನ್ನ ಕದ್ದ ಬ್ಯಾಗ್ ಅನ್ನು
ಹುಡುಕಿ, ಒಬ್ಬ ವ್ಯಕ್ತಿಯನ್ನು ಥಳಿಸಿದ್ದೀಯ.

654
00:47:22,590 --> 00:47:26,719
ನಿನಗೆ ನಿಜಕ್ಕೂ ಬೇಕಿದ್ದರೆ, ಪ್ಯಾರಿಸ್‌ನಲ್ಲಿ
ಉಳಿದುಕೊಳ್ಳಲು ಖಂಡಿತ ದಾರಿ ಹುಡುಕಬಹುದು.

655
00:47:26,803 --> 00:47:28,471
ನಿನ್ನನ್ನು ಏನು ತಡೆಯುತ್ತಿದೆ?

656
00:47:28,555 --> 00:47:31,432
ಮನೆಯಲ್ಲಿ ನಿನಗಾಗಿ
ಏನೂ ಒಳ್ಳೆಯದು ಕಾಯುತ್ತಿರುವಂತಿಲ್ಲ.

657
00:47:31,516 --> 00:47:33,476
ಎಂತಹ ಒರಟಿ ನೀನು?

658
00:47:33,560 --> 00:47:35,186
ಅದನ್ನು ನೆನಪಿಸಿದ್ದಕ್ಕೆ ಧನ್ಯವಾದ.

659
00:47:37,647 --> 00:47:42,652
ಇಲ್ಲ, ನಾನು ಮನೆಗೆ ಹಿಂತಿರುಗಿ
ನನ್ನ ಜೀವನದ ಬಗ್ಗೆ ಯೋಚಿಸಬೇಕು.

660
00:47:45,154 --> 00:47:47,073
ನಿಮ್ಮೆಲ್ಲರನ್ನೂ ಭೇಟಿಯಾಗಿ
ನಿಜಕ್ಕೂ ಸಂತೋಷವಾಯಿತು.

661
00:47:51,286 --> 00:47:52,620
ಮಿಸ್ಟರ್. ಜೂಲ್ಸ್!

662
00:47:52,745 --> 00:47:53,997
ದಯವಿಟ್ಟು ಇನ್ನೊಂದು ಸುತ್ತು.

663
00:47:54,080 --> 00:47:55,039
ಅದು ಸಾಕು.

664
00:47:55,123 --> 00:47:57,292
-ಇರು. ಇಲ್ಲ.
-ಹೌದು. ಹೌದು, ಹೌದು. ನಿನಗೆ ಸಮಯವಿದೆ.

665
00:47:58,042 --> 00:47:59,043
ನಿನಗೆ ಸಮಯವಿದೆ.

666
00:47:59,127 --> 00:48:00,712
-ನಡಿ.
-ಕುಡಿ.

667
00:48:02,589 --> 00:48:03,590
ಸರಿ.

668
00:48:32,619 --> 00:48:33,870
ಬೆಲ್ಲಿ

669
00:48:37,498 --> 00:48:38,416
ಬೆಲ್ಸ್…

670
00:48:41,336 --> 00:48:42,337
ಹಾಯ್.

671
00:48:44,756 --> 00:48:46,674
ನೀನು ಕರೆ ಮಾಡುವೆ ಅಂದುಕೊಂಡಿದ್ದೆ.

672
00:48:48,343 --> 00:48:49,344
ನಿಜವಾಗಲೂ?

673
00:48:50,011 --> 00:48:51,721
ನನ್ನನ್ನುಕೊಲ್ಲಬೇಕು ಅನಿಸುತ್ತಿಲ್ವಾ?

674
00:48:56,184 --> 00:48:58,227
ಏನೋ ಗೊತ್ತಿಲ್ಲ, ಸ್ವಲ್ಪ…

675
00:48:59,979 --> 00:49:03,441
ಆದರೆ ನನಗೆ,
ನೀನಿಲ್ಲದೆ ನನಗೆ ನಿದ್ದೆಯೂ ಬರಲ್ಲ. ಹಾಗಾಗಿ…

676
00:49:07,612 --> 00:49:08,613
ಹೂಂ.

677
00:49:10,073 --> 00:49:12,200
ಇದು ಕೆಟ್ಟದಾಗಿದೆ, ಗೊತ್ತಾ?

678
00:49:13,284 --> 00:49:16,120
ಗೊತ್ತು. ನನಗೆ ನಿನ್ನ ಬಗ್ಗೆ ಚಿಂತೆಯಾಗಿತ್ತು.

679
00:49:17,747 --> 00:49:18,748
ಧನ್ಯವಾದ.

680
00:49:21,751 --> 00:49:25,588
ಗೊತ್ತಾ, ಟೇಲರ್ ಮತ್ತು ನಿನ್ನ ಅಣ್ಣ ಬೆಳಿಗ್ಗೆ
ಸೋಫಾ ಮೇಲೆ ಗಟ್ಟಿ ತಬ್ಬಿ ಮಲಗಿದ್ದನ್ನು ನೋಡಿದೆ.

681
00:49:25,672 --> 00:49:27,715
ದೇವರೇ. ಇಲ್ಲ.

682
00:49:28,591 --> 00:49:30,968
ಹೂಂ. ಹೂಂ. ನನಗನಿಸುತ್ತೆ…

683
00:49:31,678 --> 00:49:34,097
ಹೂಂ, ನಮ್ಮ ಸಮಸ್ಯೆಗಳು
ಅವರಿಗೆ ಮಜಾ ಕೊಟ್ಟಿತು ಅನಿಸುತ್ತೆ.

684
00:49:35,723 --> 00:49:36,724
ಬೇವರ್ಸಿಗಳು.

685
00:49:39,686 --> 00:49:41,437
ಹೇ, ಏನಿದು?

686
00:49:44,607 --> 00:49:46,526
ಮನೆಗೆ ಬರುವೆಯಾ, ಮಾತಾಡೋಣ.

687
00:49:47,819 --> 00:49:51,197
ಜೆರೆಮಾಯಾ… ನಾನು ಪ್ಯಾರಿಸ್‌ನಲ್ಲಿದ್ದೇನೆ.

688
00:49:53,282 --> 00:49:54,283
ಪ್ಯಾರಿಸಾ?

689
00:49:57,245 --> 00:49:58,246
ಹೌದು, ನಾನು--

690
00:50:00,123 --> 00:50:02,166
ನನಗೆ ಯೋಚಿಸಲು ಸ್ವಲ್ಪ ಸಮಯ ಬೇಕಿತ್ತು.

691
00:50:05,420 --> 00:50:09,257
ಸರಿ, ನನಗೂ ಯೋಚಿಸಲು ಸ್ವಲ್ಪ ಸಮಯ ಸಿಕ್ಕಿತು,

692
00:50:09,340 --> 00:50:13,094
ಮತ್ತು ಇಲ್ಲಿ ಎಲ್ಲಾ ನಿಜಕ್ಕೂ ಗೊಂದಲಮಯವಾಗಿವೆ.
ಮದುವೆ ಒಂದು ಕೆಟ್ಟ ಉಪಾಯ ಆಗಿತ್ತು.

693
00:50:13,177 --> 00:50:16,305
ಆದರೆ ಅದರರ್ಥ ವಿಷಯಗಳು
ಕೊನೆಗೊಳ್ಳಲೇಬೇಕು ಅಂತಲ್ಲ, ಅಲ್ವಾ?

694
00:50:16,389 --> 00:50:18,850
ಅಂದರೆ, ಎಲ್ಲವೂ ಮೊದಲಿದ್ದ
ಸ್ಥಿತಿಗೆ ಹಿಂತಿರುಗಬಹುದು.

695
00:50:20,893 --> 00:50:24,939
ನಾನು… ನನಗೆ ಅದು ಸಾಧ್ಯವಿಲ್ಲ ಅನಿಸುತ್ತೆ, ಜೆರ್.

696
00:50:30,570 --> 00:50:32,697
ಅಂದರೆ, ನಾನು ಯಾರೆಂದು ಕೂಡ ನನಗೆ ಈಗ ತಿಳಿದಿಲ್ಲ.

697
00:50:32,780 --> 00:50:34,407
ಆದರೆ ನೀನು ಯಾರೆಂದು ನನಗೆ ಗೊತ್ತು,

698
00:50:35,950 --> 00:50:39,954
ಮತ್ತು ನಾನು ನಿನಗದನ್ನು ಪ್ರತಿದಿನ ನೆನಪಿಸುವೆ.
ಮನೆಗೆ ವಾಪಸ್ ಬಾ.

699
00:50:43,875 --> 00:50:46,586
ನನಗೆ ನಿನ್ನನ್ನು ನೋಯಿಸಲು ಇಷ್ಟವಿಲ್ಲ, ಜೆರ್.

700
00:50:47,837 --> 00:50:53,509
ನಾನು ಬೇಸಿಗೆಯ ಮೊದಲು ಇದ್ದ ವ್ಯಕ್ತಿಯಲ್ಲ,

701
00:50:53,593 --> 00:50:59,766
ಮತ್ತು ನೀನಿಲ್ಲದೆ ನಾನು ಎಂತಹ ವ್ಯಕ್ತಿ ಆಗಬಹುದು
ಎಂಬುದನ್ನು ನಾನು ಕಂಡುಹಿಡಿಯಬೇಕು.

702
00:51:02,018 --> 00:51:03,269
ಏನದರ ಅರ್ಥ?

703
00:51:08,816 --> 00:51:10,151
ನಾನಿಲ್ಲೇ ಉಳಿದುಕೊಳ್ಳುವೆ ಅನಿಸುತ್ತೆ.

704
00:51:13,196 --> 00:51:14,197
ಅದ್ಭುತ.

705
00:51:15,656 --> 00:51:17,283
ಹೌದು, ಅದು ಅದ್ಭುತ. ನೀನು ಹಾಗೇ ಮಾಡು.

706
00:51:19,952 --> 00:51:21,662
ಮತ್ತೆಂದೂ ನನಗೆ ಕರೆ ಮಾಡಬೇಡ.

707
00:51:31,506 --> 00:51:34,008
ನೀನು ನನ್ನಷ್ಟು ಬಲಶಾಲಿಯಾಗಬೇಕೆಂದರೆ
ಚೆನ್ನಾಗಿ ತಿನ್ನಬೇಕು.

708
00:51:36,761 --> 00:51:38,095
ವಾಹ್. ನಿಜವಾಗಲೂ?

709
00:51:45,561 --> 00:51:46,562
ಕೊಡು.

710
00:52:10,878 --> 00:52:11,879
ಹೇ, ಇರು.

711
00:52:12,713 --> 00:52:14,590
ವಾಹ್. ಮತ್ತೆ…

712
00:52:34,360 --> 00:52:35,361
ಛೇ.

713
00:52:37,655 --> 00:52:38,823
ಅವರು ಅದನ್ನು ತಲುಪಿಸಿದರಾ?

714
00:52:40,867 --> 00:52:42,952
ಹೌದು, ನಾನು ಇಲ್ಲಿಗೆ ಬಂದಾಗ ಅದು
ಮುಂದಿನ ಬಾಗಿಲಲ್ಲಿತ್ತು.

715
00:52:45,288 --> 00:52:46,747
ಅದು ಅಮ್ಮನದ್ದು.

716
00:52:46,831 --> 00:52:49,917
ಸ್ವಚ್ಛಗೊಳಿಸುತ್ತಿರುವಾಗ
ಗರಾಜ್‌ನಲ್ಲಿ ಸಿಕ್ಕಿತು.

717
00:52:50,001 --> 00:52:51,210
ಅದು ನಿನ್ನ…

718
00:52:53,421 --> 00:52:54,630
ಮದುವೆಯ ಉಡುಗೊರೆ ಆಗಬೇಕಿತ್ತು.

719
00:52:54,714 --> 00:52:56,424
ಅವಳು ಇಲ್ಲಿಲ್ಲ,
ಅದಕ್ಕಾಗಿ ನೀನು ಇನ್ನೂ ಇಲ್ಲಿದ್ದರೆ.

720
00:52:56,507 --> 00:52:58,551
ನಾನು ಇಲ್ಲಿರುವುದು ಅವಳಿಗಾಗಿ ಅಲ್ಲ, ನಿನಗಾಗಿ.

721
00:53:01,971 --> 00:53:03,222
ನೀನು ನನಗಾಗಿ ಇಲ್ಲಿಲ್ಲ.

722
00:53:05,433 --> 00:53:06,893
-ಜೆರ್…
-ಕೊನ್…

723
00:53:17,153 --> 00:53:18,529
ನನಗೆ ಏನು ಹೇಳಬೇಕೆಂದು ತಿಳಿಯುತ್ತಿಲ್ಲ…

724
00:53:20,656 --> 00:53:23,326
-ಕ್ಷಮಿಸು.
-ಬೇಕಿಲ್ಲ. ನಾನು ಚೆನ್ನಾಗಿದ್ದೇನೆ.

725
00:53:24,911 --> 00:53:28,164
ಹೇ, ಬೆಲ್ಲಿ ಪ್ಯಾರಿಸ್‌ನಲ್ಲಿದ್ದಾಳೆ
ಅಂತ ಗೊತ್ತಾ?

726
00:53:30,291 --> 00:53:31,208
ಏನು?

727
00:53:33,753 --> 00:53:35,671
ಹಾಗಾದರೆ ಅವಳು ನಿನಗೆ ಕರೆ ಮಾಡಲಿಲ್ವಾ?

728
00:53:36,797 --> 00:53:39,800
ನನಗೆ ಮಾತ್ರನಾ? ಸರಿ, ಅದರರ್ಥ ಏನಿರಬಹುದು?

729
00:53:39,884 --> 00:53:40,885
ಏನು ನಿನ್ನ ಅರ್ಥ…

730
00:53:43,971 --> 00:53:45,765
ಅವಳು ಪ್ಯಾರಿಸ್‌ನಲ್ಲಿದ್ದಾಳೆ ಅಂದರೆ ಏನರ್ಥ?

731
00:53:48,267 --> 00:53:51,145
ದೇವರೇ, ಇದನ್ನು ನಿನಗೆ ಹೇಳಲು
ನನಗೆ ಅವಕಾಶ ಸಿಕ್ಕಿದ್ದು ಸಂತೋಷ.

732
00:53:53,814 --> 00:53:54,815
ಅವಳಲ್ಲೇ ಉಳಿಯುತ್ತಿದ್ದಾಳೆ.

733
00:53:55,900 --> 00:53:57,193
ಹಿಂದಿರುಗುತ್ತಿಲ್ಲ.

734
00:53:59,153 --> 00:54:00,905
ಹಾಗಾಗಿ, ನೀನು ಇಲ್ಲಿದ್ದದ್ದು ವ್ಯರ್ಥ.

735
00:54:02,406 --> 00:54:05,368
ಅವಳು ನನ್ನನ್ನು ಆಯ್ಕೆ ಮಾಡಲಿಲ್ಲ,
ಆದರೆ ನಿನ್ನನ್ನೂ ಆಯ್ಕೆ ಮಾಡಲಿಲ್ಲ.

736
00:54:07,912 --> 00:54:12,458
ಹಾಗಾಗಿ, ನೀನು ಯಾಕೆ ಇಲ್ಲಿಂದ ಕ್ಯಾಲಿಫೋರ್ನಿಯಾಗೆ
ತೊಲಗಬಾರದು, ಮತ್ತೆಂದೂ ಇಲ್ಲಿಗೆ ಹಿಂದಿರುಗದಂತೆ.

737
00:54:28,516 --> 00:54:30,017
ನನ್ನನ್ನು ಭೇಟಿ ಮಾಡಿದ್ದಕ್ಕೆ ಧನ್ಯವಾದ.

738
00:54:30,101 --> 00:54:33,604
ದಿನವಿಡೀ ಟ್ರಾಫಿಕ್‌ನಲ್ಲಿ ಕುಳಿತು,
ಕೇಲಿಯ ಹೆತ್ತವರ ಜಗಳವನ್ನು ಕೇಳುತ್ತಾ…

739
00:54:33,688 --> 00:54:34,814
ನನಗೆ ಕುಡಿಯಲು ಏನಾದರೂ ಬೇಕು.

740
00:54:35,481 --> 00:54:38,442
-ನನ್ನ ವಿಮಾನ ಕೆಲವು ಗಂಟೆಗಳಲ್ಲಿ ಹೊರಡಲಿದೆ.
-ನೀನು ಹೊರಡುತ್ತಿದ್ದೀಯಾ?

741
00:54:42,238 --> 00:54:44,699
-ಜೆರೆ ಬಗ್ಗೆ ಮಾತಾಡಬೇಕು ಎಂದಿರಿ?
-ಹೌದು, ಅದು…

742
00:54:45,408 --> 00:54:46,826
ಹೌದು, ಅವನು ಹೇಗಿದ್ದಾನೆ?

743
00:54:48,202 --> 00:54:50,287
-ನೀವೇ ಯಾಕೆ ಅವನನ್ನು ಕೇಳಬಾರದು?
-ಕೇಳು.

744
00:54:50,371 --> 00:54:52,748
ನನಗೆ ಅಂತಹ ಕೆಲಸಗಳು ಚೆನ್ನಾಗಿ ಬರಲ್ಲ ಅಂತ
ನಮಗಿಬ್ಬರಿಗೂ ಗೊತ್ತು.

745
00:54:52,832 --> 00:54:54,583
ಅದಕ್ಕೇ ನಾನು ನಿನಗವನನ್ನು
ನೋಡಿಕೊಳ್ಳಲು ಹೇಳಿದ್ದು.

746
00:54:54,667 --> 00:54:58,004
ನಂಬಿ, ಅದು… ಅವನಿಗೆ ಈಗ ನಾನು ಖಂಡಿತ ಬೇಡ.

747
00:54:58,087 --> 00:55:02,550
ಹೇ, ಜೆರ್ ಇದನ್ನು ಹಾಳು ಮಾಡಲು ಏನೇ ಮಾಡಿರಲಿ,
ಅವನು ನಿನ್ನ ತಮ್ಮ,

748
00:55:02,633 --> 00:55:06,470
-ಸ್ವಲ್ಪ ಸಂಯಮ ತೋರಿಸು.
-ಅವನು ಏನೂ ಮಾಡಲಿಲ್ಲ.

749
00:55:08,723 --> 00:55:09,724
ನಾನು ಮಾಡಿದ್ದು.

750
00:55:11,267 --> 00:55:12,351
ಏನು?

751
00:55:15,438 --> 00:55:17,356
ನಾನವಳಿಗೆ ಅವಳನ್ನು ಪ್ರೀತಿಸುತ್ತೇನೆ
ಎಂದು ಹೇಳಿದೆ.

752
00:55:19,775 --> 00:55:20,776
ಯಾರಿಗೆ?

753
00:55:22,319 --> 00:55:23,320
ಬೆಲ್ಲಿಗೆ.

754
00:55:27,450 --> 00:55:29,285
ಯಾಕೆ ಹಾಗೆ ಮಾಡಿದೆ?

755
00:55:29,368 --> 00:55:30,661
ಯಾಕೆಂದರೆ ನನಗವಳ ಮೇಲೆ ಪ್ರೀತಿ ಇದೆ.

756
00:55:34,874 --> 00:55:36,751
-ಅಯ್ಯೋ.
-ಹೌದು…

757
00:55:39,170 --> 00:55:40,629
ನನಗೇನು ಮಾಡಬೇಕೋ ಗೊತ್ತಿಲ್ಲ, ಅಪ್ಪ.

758
00:55:44,717 --> 00:55:46,093
ನಾನು ಮದುವೆಯನ್ನು ಹಾಳುಮಾಡಿದೆ.

759
00:55:47,553 --> 00:55:48,554
ಎಲ್ಲವನ್ನೂ ಹಾಳುಮಾಡಿದೆ.

760
00:55:49,847 --> 00:55:52,600
ನಾನು ಅವನಿಗೆ ಬೇಜಾರು ಮಾಡಿದೆ,
ಮತ್ತು ಅದಕ್ಕೂ ಕೆಟ್ಟದೆಂದರೆ ನನಗದು ಬೇಕಿತ್ತು.

761
00:55:55,644 --> 00:55:58,189
ನಾನು ಅದಕ್ಕಾಗಿ ಪ್ರಾರ್ಥಿಸಿದೆ,
ಅವಳು ತನ್ನ ಮನಸ್ಸನ್ನು ಬದಲಾಯಿಸಲಿ ಅಂತ.

762
00:56:00,524 --> 00:56:01,734
ಎಷ್ಟು ಕೆಟ್ಟವನು ನಾನು.

763
00:56:06,030 --> 00:56:07,740
ನನಗೆ ಸಹಿಸಲು ಆಗುತ್ತಿಲ್ಲ. ಅಂದರೆ, ಅವನು…

764
00:56:13,120 --> 00:56:14,955
ಅವನು ತುಂಬಾ ಬೇಜಾರಲ್ಲಿದ್ದಾನೆ

765
00:56:15,039 --> 00:56:18,375
ಮತ್ತು ಅದರ ಬಗ್ಗೆ ನಾನು ಏನೂ ಮಾಡಲು ಆಗುತ್ತಿಲ್ಲ.
ನಾನು ಇಲ್ಲೇ ಉಳಿದುಕೊಂಡರೆ,

766
00:56:20,836 --> 00:56:22,671
ಅವನು ನಾನು ಹೇಳೋದನ್ನ ಕೇಳಿಸಿಕೊಂಡರೆ…

767
00:56:27,259 --> 00:56:30,137
ಅವನು ನನ್ನನ್ನು ಎಂದಿಗೂ ಕ್ಷಮಿಸುತ್ತಾನನಿಸಲ್ಲ,
ಮತ್ತು ಬಹುಶಃ ಕ್ಷಮಿಸಬಾರದು ಸಹ.

768
00:56:34,308 --> 00:56:35,309
ಹಾಗಾಗಿ, ನಾನು ಹೊರಡುವೆ.

769
00:56:37,144 --> 00:56:38,771
ಅಥವಾ ನೀನವನಿಗೆ ಸಮಯ ನೀಡುತ್ತಿದ್ದೀಯ.

770
00:56:40,731 --> 00:56:42,066
ಕೆಲವೊಮ್ಮೆ ಅಷ್ಟೇ ಮಾಡಲು ಆಗೋದು.

771
00:56:42,775 --> 00:56:43,901
ನಿಮಗೆ ಗೊತ್ತಿರಲೇಬೇಕು.

772
00:56:43,984 --> 00:56:47,029
ನನಗೆ ಗೊತ್ತಿರಲೇಬೇಕು. ಗೊತ್ತಿರಲೇಬೇಕು.

773
00:56:50,491 --> 00:56:53,119
ನಿನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾಗ,
ನಾವವಳನ್ನು ಕಳೆದುಕೊಂಡಾಗ,

774
00:56:54,745 --> 00:56:59,416
ನೀನಷ್ಟೆಲ್ಲ ಹೊರೆ ಹೊತ್ತದ್ದು ನನಗೆ ಬೇಜಾರಾಯಿತು,
ಆದರೆ ನೀನು ನನ್ನನ್ನು ಶತ್ರುವಿನಂತೆ ನೋಡಿದೆ.

775
00:56:59,500 --> 00:57:02,545
-ಇದೆಲ್ಲಾ ಈಗ ಯಾಕೆ?
-ನಾನು ಹೇಳುತ್ತಿರೋದು ಏನೆಂದರೆ,

776
00:57:02,628 --> 00:57:05,464
ನೀನು ನನ್ನ ಮಗ, ನಾನು ನಿನಗಾಗಿ ಅಲ್ಲಿರಬೇಕಿತ್ತು,
ಆದರೆ ನೀನು ನನಗೆ ಅವಕಾಶ ನೀಡಲಿಲ್ಲ.

777
00:57:05,548 --> 00:57:08,175
ಯಾಕೆಂದರೆ ನೀವು ಎಲ್ಲವನ್ನೂ ಕೆಡಿಸುತ್ತಿದ್ದಿರಿ.

778
00:57:08,843 --> 00:57:09,969
ಅದೇ.

779
00:57:15,015 --> 00:57:16,475
ಮತ್ತು ನಾನು ಅದರೊಂದಿಗೆ ಬದುಕಬೇಕಾಗಿತ್ತು.

780
00:57:19,728 --> 00:57:21,897
ನಿನ್ನನ್ನು ಪ್ರೀತಿಸುವ ಜನರಿದ್ದಾರೆ,

781
00:57:21,981 --> 00:57:25,359
ಮತ್ತು ನೀನವರ ಮೇಲೆ ಅವಲಂಬಿತನಾಗುವೆ
ಎಂದು ನಾನು ನಂಬಿದೆ, ಮತ್ತು ನೀನು ಹಾಗೆ ಮಾಡಿದೆ.

782
00:57:28,028 --> 00:57:29,029
ಅವನೂ ಅದನ್ನೇ ಮಾಡುತ್ತಾನೆ.

783
00:58:15,534 --> 00:58:17,536
ನಾನಿದ್ದೇನೆ. ನಿನಗಾಗಿ ನಾನಿರುವೆ.

784
00:58:30,841 --> 00:58:32,843
ನನ್ನ ಜೀವನದಲ್ಲಿ ಈ ಸ್ತಂಭಗಳಿದ್ದವು…

785
00:58:33,719 --> 00:58:38,974
ಕಸಿನ್ಸ್, ನನ್ನ ಕುಟುಂಬ, ಟೇಲರ್… ಜೆರ್.

786
00:58:40,935 --> 00:58:45,439
ನಾನು ಸುರಕ್ಷಿತವಾಗಿದ್ದೇನೆ,
ಸದೃಢ ನೆಲದಲ್ಲಿದ್ದೇನೆ ಎಂಬ ಭಾವನೆ ನೀಡುವವರು.

787
00:58:47,900 --> 00:58:50,194
ಆದರೆ ಈಗ ಅವರು ಹೋಗಿದ್ದಾರೆ,
ಉಳಿದಿರೋದು ನಾನು ಮಾತ್ರ.

788
00:58:51,570 --> 00:58:53,530
ನಾನು ಎಲ್ಲಿಗೆ ಹೋಗುತ್ತಿದ್ದೇನೆಂದು
ನನಗೆ ತಿಳಿದಿಲ್ಲ,

789
00:58:54,573 --> 00:58:57,910
ನನ್ನ ಭವಿಷ್ಯ ಏನು
ಅಥವಾ ಯಾರೊಂದಿಗೆ ಅಂತಲೂ ಗೊತ್ತಿಲ್ಲ,

790
00:59:00,371 --> 00:59:01,372
ಆದರೆ ನನಗೆ ಒಂದು ಗೊತ್ತು…

791
00:59:02,915 --> 00:59:05,417
ಪುನರ್ನಿರ್ಮಾಣ ಯಾವಾಗಲೂ ಸಾಧ್ಯ.

792
00:59:07,253 --> 00:59:08,254
ಸಾಧ್ಯವಿರಲೇಬೇಕು.

793
00:59:33,529 --> 00:59:35,447
ಜೆನ್ನಿ ಹ್ಯಾನ್
ಪುಸ್ತಕದ ಆಧಾರದ ಮೇಲೆ

794
01:01:13,462 --> 01:01:15,464
ಉಪ ಶೀರ್ಷಿಕೆ ಅನುವಾದ: ಅನುರಾಧ

