WEBVTT

00:39.750 --> 00:42.416
ಪ್ರತಿ ಬ್ಯಾಲೆರಿನಾಳ ಎದೆಯಲ್ಲೂ…

00:42.916 --> 00:44.916
ಹರಿಯುತ್ತಿದೆ ಕೆಚ್ಚೆದೆಯ ರಕ್ತ.

00:53.291 --> 00:56.333
ಅವರು ನೋವನ್ನು ಸೌಂದರ್ಯವನ್ನಾಗಿಸುತ್ತಾರೆ.

01:00.625 --> 01:03.458
ಅವ್ಯವಸ್ಥೆಯನ್ನು ನಿಖರತೆಯನ್ನಾಗಿಸುತ್ತಾರೆ.

01:09.375 --> 01:11.958
ದೇಹವನ್ನು ಕಲೆಯಾಗಿಸುತ್ತಾರೆ.

01:15.458 --> 01:20.625
ಬೆವರು, ರಕ್ತ, ತ್ಯಾಗ.

01:23.208 --> 01:25.916
ಆದರೆ ಎಲ್ಲರೂ
ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಆಗಲ್ಲ…

01:45.916 --> 01:47.875
ಮಿಸ್ ಥೋರ್ನ, ಪ್ರದರ್ಶನ ಎರಡು ದಿನಗಳಲ್ಲಿದೆ.

01:47.958 --> 01:49.916
ಬೋನ್ಸ್ ಅಭ್ಯಾಸಗಳಲ್ಲಿ
ಗಂಭೀರವಾಗಿ ಪಾಲ್ಗೊಳ್ಳದಿದ್ದರೆ,

01:50.000 --> 01:51.416
ಅವಳ ಜಾಗ ನಾನು ತಗೋಬೇಕಾಗುತ್ತೆ.

01:51.500 --> 01:53.625
ಅವಳ ಬಸ್ ತಡವಾಗಿ ಬಂದಿತು.
ಇನ್ನೇನು ತಲುಪಬಹುದು ಅವಳು.

01:53.708 --> 01:56.541
ಅವಳು ತಡವಾಗಿದ್ದು
ಅವಳ ಬಳಿ ಗಡಿಯಾರ ಇಲ್ಲದ್ದಕ್ಕೆ.

01:57.166 --> 01:58.958
ಕ್ಷಮಿಸು, ನನ್ನ ಲಿಮೊ
ತಡವಾಗಿ ಬಂತು, ಪ್ರಿನ್ಸೆಸ್.

02:01.708 --> 02:03.000
ನೃತ್ಯ ಮಾಡೋಣಾ ಏನು?

02:06.083 --> 02:06.958
ಸರಿ.

02:07.041 --> 02:08.750
ಐದು, ಆರು, ಏಳು, ಎಂಟು.

02:08.833 --> 02:12.916
ಮತ್ತೆ ಒಂದು, ಎರಡು, ಮೂರು, ನಾಲ್ಕು,
ಐದು, ಆರು ಹಾಗೂ ಇನ್ನೂ ನಾಲ್ಕು.

02:13.000 --> 02:17.625
ಎಂಟು-- ಒಂದು, ಎರಡು, ಮೂರು,
ನಾಲ್ಕು, ಐದು, ಆರು, ಏಳು, ಎಂಟು.

02:17.708 --> 02:19.041
ಎರಡು-- ನಿಲ್ಲಿಸಿ!

02:19.583 --> 02:21.041
ಸರಿ. ಮತ್ತೆ ಸೂಟೆನಸ್‌ಯಿಂದ.

02:21.125 --> 02:21.958
ಬೇಗ.

02:22.208 --> 02:23.041
ಏನಾಯಿತು?

02:23.125 --> 02:23.958
ನಡಿ. ಗ್ರೇಸ್…

02:24.041 --> 02:25.875
ಯಾವಾಗಲೂ ಇದೇ ಅವಳದ್ದು.

02:26.083 --> 02:28.166
ಕೇಳುತ್ತಿದೆಯಾ, ಗ್ರೇಸ್?

02:28.750 --> 02:29.875
ಬೇಗ. ನಡಿ.

02:29.958 --> 02:31.791
ಐದು, ಆರು, ಏಳು, ಎಂಟು. ಮತ್ತು ಒಂದು…

02:35.541 --> 02:39.583
ಮತ್ತೆ ಒಂದು, ಎರಡು, ಮೂರು, ನಾಲ್ಕು,
ಐದು, ಆರು…

02:39.666 --> 02:41.916
ನೆನಪಿರಲಿ, ನಾಳೆ ಬುಡಪೆಸ್ಟ್‌ಗೆ
ವಿಮಾನದಲ್ಲಿ ಹೋಗುತ್ತಿದ್ದೀರ,

02:42.000 --> 02:43.708
ನಿಮ್ಮ ಜೀವನವೇ
ಇದರ ಮೇಲೆ ನಿಂತಿದೆ ಎಂಬಂತೆ ನರ್ತಿಸಿ.

02:43.791 --> 02:45.125
ಒಂಟಿಯಾಗಿ.

02:49.125 --> 02:50.500
ನಿಲ್ಲಿಸಿ!

02:51.708 --> 02:53.500
ಏನಿದು? ಪ್ರಿನ್ಸೆಸ್!

02:53.583 --> 02:55.333
ನಿನ್ನ ಸರದಿಗೆ ಕಾಯಿ.

02:55.416 --> 02:56.541
ಸರಿ, ಕ್ಲೋಯಿ,

02:56.625 --> 02:59.625
ನಿನ್ನ ಅಕ್ಕನನ್ನು ನಂಬು, ಸರಿನಾ?
ಅವಳು ನಿನಗೆ ಸಂಕೇತ ನೀಡುತ್ತಾಳೆ.

02:59.708 --> 03:03.541
ಏಳು, ಎಂಟು. ಮತ್ತೆ, ಒಂದು, ಎರಡು,
ಮೂರು, ನಾಲ್ಕು, ಐದು…

03:03.625 --> 03:05.125
ಸುಂದರವಾಗಿದೆ, ಕ್ಲೋಯಿ.

03:05.208 --> 03:07.083
ನೆನಪಿರಲಿ, ತಂಡದಲ್ಲಿ ಒಗ್ಗಟ್ಟು ಮುಖ್ಯ.

03:07.166 --> 03:08.416
ಹೌದು, ಒಗ್ಗಟ್ಟು.

03:09.458 --> 03:14.750
ಮತ್ತು ಒಂದು, ಎರಡು, ಮೂರು, ನಾಲ್ಕು,
ಐದು, ಆರು, ಏಳು, ಎಂಟು.

03:14.833 --> 03:16.458
ಮತ್ತೆ ಒಂದು…

03:24.666 --> 03:27.708
ವಿರಾಮ ತಗೊಳ್ಳಿ ಎಲ್ಲರೂ. ಸರಿ.

03:30.458 --> 03:32.458
ಏಯ್, ನಿನಗೆ ಎಣಿಸಲು ಬರಲ್ವಾ?

03:33.958 --> 03:35.416
ನಿನ್ನ ಜೊತೆ ಮಾತಾಡುತ್ತಿದ್ದೇನೆ.

03:35.500 --> 03:37.750
ಪಾದ ಮಡಚುವಾಗ ತಿರುಗಿದೆ ನೀನು, ನಾಯಿ.

03:38.125 --> 03:39.041
ಬೋನ್ಸ್!

03:39.125 --> 03:40.625
ಸೋಲೋ ಬೇಕೆಂದರೆ ನೀನೇ ಮಾಡಿಕೋ.

03:40.708 --> 03:42.375
-ನಾನು ಬಿಡುತ್ತಿದ್ದೇನೆ.
-ಮಿಸ್ ಥೋರ್ನ?

03:42.458 --> 03:43.333
ನೋಡಿದಿರಾ?

03:43.416 --> 03:45.083
ಅವಳಿಗೆ ಆಗಬೇಕಾಗಿದ್ದೇ.

03:45.291 --> 03:47.916
ಸನ್‌ಸೆಟ್
ಡಾನ್ಸ್ ಎಲ್ಎ

04:05.583 --> 04:07.083
ನೀನವಳಿಗೆ ಹೊಡೆಯಬಾರದಿತ್ತು.

04:07.916 --> 04:09.291
ಅದು ಆಕಸ್ಮಿಕವಾಗಿ ಆಗಿದ್ದು.

04:10.625 --> 04:12.375
ಅವಳ ಮುಖ ನನ್ನ ಮುಷ್ಠಿಗೆ ಬಂದು ಬಿತ್ತು.

04:12.458 --> 04:16.333
ನಿನ್ನ ಸ್ಪರ್ಧೆ ಪ್ರಾಯೋಜಿಸುತ್ತಿರುವುದು
ಅವಳ ಅಮ್ಮ, ಹಾಗಾಗಿ…

04:16.791 --> 04:20.291
ಮೂಗು ಮುರಿಯುವ ಮುನ್ನ
ಕೃತಜ್ಞತೆ ತೋರಬಾರದಿತ್ತೇ?

04:20.375 --> 04:22.541
ಬುಡಪೆಸ್ಟ್ ಪ್ರದರ್ಶನ
ನಿನ್ನ ಜೀವನವನ್ನೇ ಬದಲಿಸಬಲ್ಲದು

04:22.625 --> 04:25.541
ಅನ್ನೋದನ್ನ ಅರ್ಥ ಮಾಡಿಕೋ.

04:25.625 --> 04:27.666
ಬ್ಯಾಲೆ ಶ್ರೀಮಂತರ ಕ್ರೀಡೆ.

04:28.250 --> 04:29.625
ನಾನು ಹೇಳುತ್ತಲೇ ಇದ್ದೇನೆ,

04:30.208 --> 04:31.333
ನಾನಿಲ್ಲಿ ಸೇರಿದವಳಲ್ಲ ಅಂತ.

05:04.500 --> 05:06.458
ಹಂಗರಿ

05:06.541 --> 05:10.083
ಅಮ್ಮ, ನೀನು ಮಲಗಿರಬೇಕು,
ಆದರೆ ನಾವು ಈಗಿನ್ನೂ ತಲುಪಿದೆವು…

05:10.166 --> 05:11.625
ದಾರಿ ಬದಲಿಸಿದ ನಂತರ.

05:12.458 --> 05:14.916
ನನ್ನನ್ನು ಬಸ್ಸಿನಲ್ಲಿ ಒಯ್ಯುತ್ತಿದ್ದಾರೆ,
ನನಗಾಗಿ ಪ್ರಾರ್ಥಿಸು.

05:17.958 --> 05:20.708
ಬುಡಪೆಸ್ಟ್ 361

05:25.083 --> 05:26.833
ಯಾರಿಗಾದರೂ ಹೊಗೆ ವಾಸನೆ ಬರುತ್ತಿದೆಯಾ?

05:28.625 --> 05:30.125
ಇದೆಲ್ಲಾ ಒಂದು ಕೆಟ್ಟ ಕನಸಿನಂತಿದೆ.

05:30.208 --> 05:32.666
ವಿಮಾನದ ದಾರಿ ಬದಲಿಸಬೇಕಾಯಿತು,
ಏರ್‌ಪೋರ್ಟ್‌ನಲ್ಲಿ ಸಾಮಾನು ಕಳೆದುಹೋಯಿತು.

05:32.750 --> 05:34.625
ಈಗ, ಬಸ್ ಹಾಳಾಗಿದೆ, ಹಾಗಾಗಿ…

05:34.708 --> 05:38.541
ಆದರೆ-- ಇಲ್ಲ, ನಾನು ಭರವಸೆ ಕೊಡುವೆ,
ನಾಳೆ ನನ್ನ ನರ್ತಕಿಯರು ವೇದಿಕೆ ಮೇಲಿರುತ್ತಾರೆ.

05:38.625 --> 05:40.666
ನಾವು ದಾರಿಯಲ್ಲಿದ್ದೇವೆ.

05:41.541 --> 05:44.291
ಇಲ್ಲ, ಇಲ್ಲ. ಕಾರ್ಯಕ್ರಮ ಬದಲಿಸಬೇಕಿಲ್ಲ.
ಇಲ್ಲ, ಅದು ಬೇಕಿಲ್ಲ.

05:44.375 --> 05:48.250
ಖಂಡಿತ ನನ್ನ ನರ್ತಕಿಯರು
ಪ್ರದರ್ಶನಕ್ಕೆ ಬರುತ್ತಾರೆ.

05:48.333 --> 05:51.500
ಮಿಸ್ ಥೋರ್ನ, ಮುಂದಿನ ಪಟ್ಟಣ
ಎರಡೇ ಕಿಲೋಮೀಟರ್ ದೂರ ಇರೋದು,

05:51.583 --> 05:53.875
-ಆದರೆ ನನ್ನ ಕೈಪಿಡಿ ಪ್ರಕಾರ--
-ಅವರು ಏನು ಹೇಳಿದರು?

05:53.958 --> 05:58.250
ಅದು, ಕಲಾ ನಿರ್ದೇಶಕರು
ನಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದಾರೆ.

05:59.083 --> 06:01.416
-ಆದರೆ--
-ಪರ್ಯಾಯ ಹುಡುಕುತ್ತಿದ್ದಾರಾ?

06:01.958 --> 06:02.791
ಹೂಂ.

06:03.416 --> 06:04.416
ಹುಡುಕುತ್ತಿದ್ದಾರೆ.

06:05.708 --> 06:07.791
ಹುಡುಗಿಯರೇ,
ನಿಮ್ಮ ಬ್ಯಾಲೆ ಚೀಲಗಳನ್ನು ಎತ್ತಿಕೊಳ್ಳಿ.

06:07.875 --> 06:08.708
ನಡೀರಿ.

06:08.791 --> 06:11.458
ನಾವು ಬಸ್ಸಲ್ಲೇ ಇದ್ದರೆ,
ಖಂಡಿತ ಪ್ರದರ್ಶನ ತಲುಪಲ್ಲ.

06:13.250 --> 06:14.750
ಹೂಂ. ಸರಿ.

06:16.541 --> 06:17.458
ಸರಿ.

06:17.541 --> 06:19.208
ದೇವರೇ.

06:19.291 --> 06:22.083
ಎಷ್ಟು ನಿಸರ್ಗವೇ ತುಂಬಿದೆ.

06:24.750 --> 06:26.750
-ಅದ್ಭುತ.
-ಸುಂದರವಾಗಿದೆ.

06:26.833 --> 06:29.250
ತೋಳಗಳು ನಿಮ್ಮ ಮೇಲೆ ಕರುಣೆ ತೋರಲಿ.

06:38.125 --> 06:40.208
ಬನ್ನಿ, ಹುಡುಗಿಯರೇ. ಬೇಗ.

06:43.583 --> 06:45.666
ನಾವು ಬಸ್ಸಲ್ಲೇ ಇರಬೇಕಿತ್ತು.

06:46.416 --> 06:48.916
ನನಗೆ ನ್ಯುಮೋನಿಯ ಆದರೆ ಮೊಕದ್ದಮೆ ಹಾಕುವೆ.

06:49.000 --> 06:51.041
ಮೊದಲು, ಅವಳಿಗೆ ಬಸ್ ಬೇಕಿರಲಿಲ್ಲ.
ಈಗ ಅವಳಿಗೆ ಬಸ್ ಬೇಕು.

06:51.125 --> 06:52.416
ಯಾವುದರಲ್ಲಾದರೂ ನೆಮ್ಮದಿ ಇದೆಯಾ?

06:52.500 --> 06:53.958
ನಿನ್ನ ಸುತ್ತಲಂತೂ ಇಲ್ಲ.

06:54.041 --> 06:55.666
ಇರಿ ಎಲ್ಲರೂ.

06:55.750 --> 06:59.083
-ಇಲ್ಲಿ ಒಂದು ಹೊಟೇಲ್ ಇರಬಹುದು.
-ದೇವರ ದಯೆ. ಬನ್ನಿ.

06:59.166 --> 07:02.125
ಟೆರೆಮೋಕ್ ಇನ್ನ್

07:08.958 --> 07:11.041
ಯಾರಿಗಾದರೂ ನೆಟ್‌ವರ್ಕ್ ಸಿಗುತ್ತಿದೆಯಾ?

07:11.125 --> 07:12.625
ಎರಡು ಕಡ್ಡಿ ಇದೆ.

07:13.958 --> 07:16.208
ನಾವು ಶೂನ್ಯ ವಲಯದಲ್ಲಿದ್ದೇವೆ ಅನಿಸುತ್ತೆ.

07:19.875 --> 07:20.750
ಹಾಯ್.

07:20.833 --> 07:23.375
ಹಾಯ್. ಹಲೋ. ಹಾಯ್. ನಾವು ನಿಮ್ಮ ಫೋನ್ ಬಳಸಬಹುದೇ?

07:23.458 --> 07:25.333
ನಮ್ಮ ಬಸ್ ಹಾಳಾಯಿತು,
ನಾವಿಲ್ಲಿ ಸಿಕ್ಕಿಬಿದ್ದಿದ್ದೇವೆ.

07:25.416 --> 07:26.458
-ನಮಗೆ--
-ಯೂರಿ!

07:27.375 --> 07:28.916
ಅವರಿಗೆ ಬರಲು ಬಿಡು.

07:32.458 --> 07:33.416
ಕ್ಷಮಿಸಿ.

07:33.500 --> 07:35.833
ನನ್ನ ತಮ್ಮ ಮೂಕ. ಅವನಿಗೆ ಗೊಂದಲವಾಗುತ್ತೆ.

07:35.916 --> 07:40.250
ನನಗೆ ಅರ್ಥ ಆಗುತ್ತೆ. ನನ್ನ ತಂಗಿ ಕಿವುಡಿ,
ಅವಳಿಗೆ ಎಲ್ಲಾ ಸನ್ನೆಯಲ್ಲಿ ತೋರಿಸಬೇಕು.

07:40.333 --> 07:41.291
ಸುಮ್ಮನಿರು.

07:41.375 --> 07:42.958
ನನ್ನ ಹೆಸರು ಒಸಿಪ್.

07:43.041 --> 07:44.250
ನನ್ನಿಂದ ಏನು ಸಹಾಯ ಬೇಕಿತ್ತು?

07:44.333 --> 07:46.125
ನಮಗೆ ಕ್ಯಾಬ್ ಬೇಕಿತ್ತು.

07:46.208 --> 07:47.666
ನೀವದರ ವ್ಯವಸ್ಥೆ ಮಾಡಬಹುದಾ?

07:47.750 --> 07:48.750
ಖಂಡಿತ.

07:49.833 --> 07:52.458
ಇಷ್ಟು ಸುಂದರ ಮಹಿಳೆಯರು ಚಳಿಯಲ್ಲಿ ಹೊರಗಿರಬಾರದು.

07:53.541 --> 07:54.458
ಬನ್ನಿ, ಬನ್ನಿ.

07:56.500 --> 07:57.750
ಇಲ್ಲಿಗೆ ಯಾಕೆ ಬಂದಿದ್ದೀರಿ?

07:57.833 --> 07:59.125
ನಾವು ಬ್ಯಾಲೆರಿನಾಗಳು.

08:03.750 --> 08:06.458
ಅಬ್ಬಬ್ಬಾ. ಇದು ನನಗೆ ಬೇಕಿರುವಂತಹುದೇ ಜಾಗ.

08:10.666 --> 08:12.833
ಇದು ತುಂಬಾ ವಿಚಿತ್ರವಾಗಿದೆ.

08:12.916 --> 08:14.583
ಮಿಸ್ ಥೋರ್ನ.

08:14.666 --> 08:16.041
ಇದು ನನ್ನ ಸಭ್ಯತೆಗೆ ವಿರುದ್ಧ.

08:16.125 --> 08:18.750
ಜನರು ಜೂಜಾಡುತ್ತಿದ್ದಾರೆ.
ನನಗಿದನ್ನು ನೋಡಲು ಆಗಲ್ಲ.

08:18.833 --> 08:20.375
ಕಣ್ಣು ಮುಚ್ಚಿಕೋ. ನಾನು ಕುಡಿಯಲು ಏನಾದರೂ ತರುವೆ.

08:38.958 --> 08:39.958
ನನ್ನ ಫೋಟೋ ತೆಗಿ.

08:40.625 --> 08:41.916
ಝೋಯಿ, ಮಕ್ಕಳಂತೆ ಆಡಬೇಡ.

08:42.083 --> 08:44.541
…ಆದರೆ ಈ ಜಾಗ ಅದ್ಭುತವಾಗಿದೆ.

08:52.333 --> 08:53.333
ಅದು…

08:54.333 --> 08:56.041
ಅದು ನನ್ನ ಬಾಸ್.

08:56.125 --> 08:57.916
ಆ ಸಮಯದಲ್ಲಿ ಅವಳು ಅದ್ಭುತವಾಗಿದ್ದಳು.

08:58.958 --> 09:01.125
ಮುಂದಿನ ಫೋನ್ಟೇಯ್ನ್ ಅನ್ನುತ್ತಿದ್ದರು ಅವಳನ್ನು.

09:01.791 --> 09:03.500
ಆದರೆ ಒಂದು ಅಪಘಾತವಾಯಿತು.

09:04.125 --> 09:05.625
ಅವಳು ಮತ್ತೆಂದೂ ನರ್ತಿಸಲಿಲ್ಲ.

09:07.333 --> 09:10.083
ಏನಿದು ಜಾಗ? ಬ್ಯಾಲೆರಿನಾಗಳ ಚಿತ್ರವೆಲ್ಲಾ ಇದೆ.

09:10.166 --> 09:12.416
ಇದು ನನ್ನ ಬಾಸ್‌ನ ಹೆಮ್ಮೆ ಮತ್ತು ಸಂತೋಷದ ಜಾಗ.

09:12.500 --> 09:13.666
ಒರಟು ಅಂದುಕೊಳ್ಳಬೇಡಿ,

09:13.750 --> 09:15.500
-ಆದರೆ ನಮ್ಮ ಬಳಿ ಹೆಚ್ಚು ಸಮಯವಿಲ್ಲ.
-ಗೊತ್ತು.

09:15.583 --> 09:16.750
ನಾವು ಬುಡಪೆಸ್ಟ್ ತಲುಪಬೇಕು.

09:16.833 --> 09:18.916
-ನನ್ನ ಹುಡುಗಿಯರಲ್ಲಿ ನಾಳೆ ನರ್ತಿಸುತ್ತಿದ್ದಾರೆ.
-ತಗೊಳ್ಳಿ.

09:19.041 --> 09:20.041
ಏನಿದು ದರಿದ್ರ?

09:21.083 --> 09:22.166
ಇವರೆಲ್ಲಾ ಒದ್ದೆ ಇದ್ದಾರೆ!

09:23.291 --> 09:24.541
ಇವಳು…

09:25.500 --> 09:26.625
ಇವಳು ಸೋನಿಯಾ.

09:26.708 --> 09:28.125
ತುಂಬಾ ಕರುಣಾಮಯಿ.

09:28.708 --> 09:31.625
ಕಾಯುತ್ತಿರುವಾಗ ನೀವು ಡ್ರೈಯರ್ ಬಳಸಬಹುದಂತೆ.

09:31.708 --> 09:35.916
-ಒಳ್ಳೆಯದು, ಆದರೆ ನಮಗೆ--
-ಇಲ್ಲ. ದಯವಿಟ್ಟು. ದಯವಿಟ್ಟು.

09:36.000 --> 09:39.083
ಟೆರೆಮೋಕ್ ಇನ್ನ್‌ನಲ್ಲಿ
ಬ್ಯಾಲೆರಿನಾಗಳಿಗೆ ಅತ್ಯುತ್ತಮ ಸೇವೆ ಸಿಗಬೇಕು.

09:39.166 --> 09:41.041
ನಿಮ್ಮ ಬಳಿ ಒಣ ಬಟ್ಟೆಗಳಿವೆಯಾ?

09:44.500 --> 09:47.500
ಟೂಟುಗಳಲ್ಲಿ ನೀವು ಪುಟ್ಟ ಬಿಳಿ ಹಕ್ಕಿಗಳ
ಗುಂಪಿನಂತೆ ಕಾಣುತ್ತಿದ್ದೀರಿ.

09:49.000 --> 09:50.375
ಇದು ಅವಮಾನಕರವಾಗಿದೆ.

09:50.583 --> 09:51.750
ಒಂದೊಂದು ತಿನ್ನಿ.

09:52.583 --> 09:54.458
ಧನ್ಯವಾದ. ನನಗೆ ಹಸಿವಾಗಿದೆ.

09:54.541 --> 09:56.458
ಜಾಗ್ರತೆ, ಬಟ್ಟೆ ಗಲೀಜು ಮಾಡಿಕೊಳ್ಳಬೇಡಿ.

09:56.541 --> 09:57.500
ಹಾಗಾಗಲ್ಲ,

09:57.583 --> 09:59.500
ಯಾಕೆಂದರೆ ನಾನಿಲ್ಲಿ ತಿನ್ನಲ್ಲ.

10:04.458 --> 10:05.583
-ಮಾಂಸದ ಸೂಪ, ಬೇಡ.
-ಪರವಾಗಿಲ್ಲ.

10:05.666 --> 10:07.416
ಅದರಲ್ಲಿ ಇಬೊಲಾ ತುಂಬಿರುತ್ತೆ.

10:07.500 --> 10:09.583
ಇ. ಕೋಲೈ. ಅದರಲ್ಲಿ ಇ. ಕೋಲೈ ತುಂಬಿರುತ್ತೆ.

10:09.666 --> 10:11.916
ಏನೋ ಒಂದು. ನೀನೆಂದೂ ಪ್ರಯಾಣವೇ ಮಾಡಿಲ್ಲ.

10:12.000 --> 10:14.833
-ಹುಡುಗಿಯರೇ, ದಯವಿಟ್ಟು.
-ಅವರು ಕಿತ್ತಾಡಿಕೊಳ್ಳುತ್ತಿದ್ದಾರೆ. ಅಂದರೆ…

10:15.750 --> 10:16.958
ಒಟ್ಟಿಗೆ ನೃತ್ಯ ಹೇಗೆ ಮಾಡುತ್ತಾರೆ?

10:17.041 --> 10:18.208
ದೇವರು ನಮಗೆ

10:18.291 --> 10:20.541
ಕೆಟ್ಟವರನ್ನು ತೋರುವ ಮೂಲಕ ಪ್ರೀತಿ ಕಲಿಸುತ್ತಾನೆ.

10:20.625 --> 10:23.250
ಟೆರೆಮೋಕ್‌ನಲ್ಲಿ ಬ್ಯಾಲೆರಿನಾಗಳು…

10:24.041 --> 10:25.541
ಅಬ್ಬಬ್ಬಾ.

10:26.416 --> 10:27.666
ಇಗೋ ಇಲ್ಲಿದ್ದೀರಿ ನೀವು.

10:27.750 --> 10:29.375
-ಹಾಯ್.
-ಹಲೋ.

10:29.458 --> 10:31.041
ನನ್ನ ಪರಿಚಯ ಹೇಳುವೆ.

10:31.125 --> 10:33.916
ನನ್ನ ಹೆಸರು ಡೆವೋರಾ ಕಾಸಿಮೇರ್,
ಟೆರೆಮೋಕ್ ಇನ್ನ್ ಮಾಲೀಕಳು.

10:34.000 --> 10:38.375
ಒಸಿಪ್ ನಿಮ್ಮದು ಯಾವುದೋ
ದೊಡ್ಡ ಪ್ರದರ್ಶನ ಇದೆ ಅಂದ, ಅಲ್ವಾ?

10:38.458 --> 10:39.583
ಹೌದು, ನಾವು ಬುಡಪೆಸ್ಟ್‌ನ

10:39.666 --> 10:42.416
ಅಂತರಾಷ್ಟ್ರೀಯ ಬ್ಯಾಲೆ ಸಮಾರಂಭದಲ್ಲಿ
ಪ್ರದರ್ಶನ ನೀಡುತ್ತಿದ್ದೇವೆ.

10:42.500 --> 10:46.333
ಅಂದರೆ, ಕೊಚ್ಚಿಕೊಳ್ಳುತ್ತಿಲ್ಲ,
ಆದರೆ ಇದು ದೊಡ್ಡ ವಿಷಯ.

10:46.416 --> 10:48.416
ಪ್ರಪಂಚದ ಅತ್ಯುತ್ತಮ ನರ್ತಕರಿಗೆ ಮಾತ್ರ
ಆಹ್ವಾನ ಇರೋದು.

10:48.500 --> 10:49.541
ನನಗೆ ಗೊತ್ತು.

10:49.625 --> 10:52.125
ನಾನೂ ನರ್ತಕಿಯಾಗಿದ್ದೆ.

10:52.208 --> 10:54.583
ನಿಮ್ಮನ್ನು ಪಟ್ಟಣಕ್ಕೆ ಕರೆದೊಯ್ಯಲು
ಮಿನಿವ್ಯಾನ್ ಕರೆಸಬೇಕಾ?

10:54.666 --> 10:56.041
ಆಕೆ ಮಾಲೀಕರು… ಆಕೆ ನರ್ತಕಿ.

10:56.125 --> 10:58.166
-ಹೌದು. ಧನ್ಯವಾದ. ತುಂಬಾ ಧನ್ಯವಾದಗಳು.
-ಪರವಾಗಿಲ್ಲ.

11:14.750 --> 11:15.750
ಪಾಶ.

11:15.833 --> 11:18.208
-ನಿಮ್ಮ ತಂದೆಗೆ ನನ್ನ ನಮನಗಳನ್ನು ತಿಳಿಸಿ.
-ಹೂಂ.

11:18.291 --> 11:19.958
ಖಂಡಿತ, ಅಜ್ಜ.

11:24.166 --> 11:26.416
ಝೋಲಿ, ಏನು ವಿಶೇಷ?

11:30.916 --> 11:32.916
ನಿಮ್ಮ ತಂದೆಗೆ ತಲುಪಲಿ.

11:35.541 --> 11:38.166
ನಿಮ್ಮ ಸೂಕ್ಷ್ಮತೆಗಾಗಿ ಧನ್ಯವಾದ, ಪಾಶ.

11:49.833 --> 11:50.750
ಏನಾಯಿತು?

11:52.083 --> 11:53.083
ಕಿವಿಯದು…

11:53.250 --> 11:54.416
ಒದ್ದೆಯಾಯಿತು ಅನಿಸುತ್ತೆ.

11:56.583 --> 11:57.875
ನನಗೆ ಒಂದಕ್ಕೆ ಹೋಗಬೇಕು.

11:59.166 --> 12:00.833
ನನ್ನ ತಂಗಿಗೆ ಶೌಚಕ್ಕೆ ಹೋಗಬೇಕಂತೆ.

12:02.625 --> 12:04.291
ನನ್ನ ಜೊತೆ ಬಾ, ಚಿನ್ನ.

12:08.458 --> 12:10.541
ಇಲ್ಲ. ಅದು ಬೇಕಿಲ್ಲ. ಧನ್ಯವಾದ.

12:10.625 --> 12:13.041
ನಾನು ಕರೆದೊಯ್ಯುವೆ. ಧನ್ಯವಾದ.

12:14.291 --> 12:17.083
ಬಚ್ಚಲುಮನೆ ಮೇಲಿನ ಮಹಡಿಯಲ್ಲಿದೆ.

12:31.041 --> 12:32.958
ಈ ಕಡೆ, ಅನಿಸುತ್ತೆ.

13:08.791 --> 13:09.875
ಕೇಳಿ.

13:12.583 --> 13:14.500
ಅವನು ನಾವು ನರ್ತಿಸಲಿ ಅಂತ ಹಾಗೆ ಮಾಡುತ್ತಿರಬೇಕು.

13:15.250 --> 13:16.833
ಶುಗರ್ ಪ್ಲಮ್ ನುಡಿಸುತ್ತಿದ್ದಾನೆ.

13:16.916 --> 13:19.291
ಅಂದರೆ… ನಮ್ಮ ನೃತ್ಯದ ಅಭ್ಯಾಸ ಮಾಡಬಹುದು.

13:20.833 --> 13:22.583
ನನಗೆ ಅಭ್ಯಾಸ ಬೇಕು.

13:22.666 --> 13:24.791
ಸರಿ, ಹೋಗೋಣ. ನಾವು ಹೋಗಬೇಕು.

13:24.875 --> 13:26.250
ಬನ್ನಿ. ನಡೀರಿ!

13:58.583 --> 14:00.083
ಬಾ, ಬೋನ್ಸ್!

14:36.416 --> 14:37.958
ನನ್ನ ಮೇಜಿನ ಮೇಲೆ ರಕ್ತ ಬೇಡ.

14:38.041 --> 14:39.416
ಕ್ಷಮಿಸು, ಅಮ್ಮ.

14:39.500 --> 14:42.625
ಮಿಶಿನಾಯಾ ಕೊರೊಲೆವಾ, ದಯವಿಟ್ಟು.

14:43.958 --> 14:46.875
ನೀನು… ವಿವೇಚನೆಯುಳ್ಳ ಮಹಿಳೆ.

14:48.666 --> 14:49.791
ಅದು ನಿಜ.

14:50.541 --> 14:52.791
ಮುಂದಿನ ಸಲ, ನಿನ್ನ ನಾಲಗೆ ತೆಗೆದುಕೊಳ್ಳುವೆ.

15:47.958 --> 15:50.250
-ಬೇಕಿದ್ದರೆ ನೀನೇ ಒಂಟಿ ಪಾತ್ರ ಮಾಡು.
-ಸರಿ.

15:51.750 --> 15:53.000
ನೋಡಿಕೊಂಡು, ಪ್ರಿನ್ಸೆಸ್.

15:57.541 --> 15:59.500
ಆಗೋ ಅಲ್ಲಿ, ಪುಟ್ಟ ಹಕ್ಕಿಯೇ.

15:59.583 --> 16:01.583
-ಇಂದು ನಮ್ಮ ಜೊತೆ ಪಾರ್ಟಿ ಮಾಡು, ಸರಿನಾ?
-ಬೇಡ, ಧನ್ಯವಾದ.

16:01.666 --> 16:03.916
ಬಾ. ಸರಸ ಮಾಡೋಣ. ನೀನು ನನಗೆ ಇಷ್ಟವಾಗುವಂತಹವಳು.

16:04.000 --> 16:05.000
ಹೇ!

16:05.708 --> 16:07.208
ಬಿಡು ನನ್ನನ್ನ!

16:07.958 --> 16:09.250
ಒರಟು ಇಷ್ಟಾನಾ ನಿನಗೆ?

16:11.000 --> 16:12.333
ಅದನ್ನೇ ಕೊಡುವೆ.

16:14.125 --> 16:15.666
ಅಬ್ಬಾ, ಹಾಗೇ ಮಾಡಬೇಕು.

16:15.750 --> 16:17.958
ಹುಡುಗಿಯರೇ, ನಿಮ್ಮ ವಸ್ತುಗಳನ್ನು ಎತ್ತಿಕೊಳ್ಳಿ.
ಇಲ್ಲಿಂದ ಹೊರಡೋಣ!

16:23.125 --> 16:26.000
ನನ್ನಂತಹವನಿಗೆ ಅಗೌರವ ತೋರಿದರೆ
ಏನಾಗುತ್ತೆ ನೋಡಿದೆಯಾ?

16:27.333 --> 16:30.125
ನನ್ನನ್ನ ಯಾರಾದರೂ ಪರೀಕ್ಷಿಸಬಯಸುವಿರಾ?

16:30.208 --> 16:32.375
ಇದು ಮಾರ್ಕೋವಿಚ್ ಪ್ರಾಂತ್ಯ.

16:32.458 --> 16:33.958
ನನ್ನ ಅಪ್ಪನ ಕೋಪಕ್ಕೆ ಗುರಿಯಾಗುತ್ತೀರಾ?

16:37.791 --> 16:40.625
ಬಹುಶಃ ನಿನಗೇನೋ ಹೇಳಲು ಇರಬಹುದು.

16:40.708 --> 16:42.833
ಕ್ಷಮಿಸಿ. ಇಲ್ಲ. ನನಗೇನೂ ಮಾಡಬೇಡಿ.

16:42.916 --> 16:45.291
ಹೇ. ಹೇ, ಪಾಶ.

16:45.375 --> 16:46.833
ಸಮಾಧಾನ.

16:46.916 --> 16:49.041
ಹೇ, ಸ್ವಲ್ಪ ಕುಡಿ.

16:51.791 --> 16:53.916
ಪಾಶ, ಕೇಳು. ಸಮಾಧಾನ.

16:54.000 --> 16:55.666
ಏನು ಗದ್ದಲ ಇದು?

16:56.666 --> 16:57.666
ಮಿಶಿನಾಯಾ ಕೊರೊಲೆವಾ.

16:57.750 --> 17:00.250
ನನ್ನ ಬಾರಲ್ಲಿ ಒಂದು ಮಹಿಳೆಯನ್ನು ಕೊಂದೆಯಾ?

17:03.333 --> 17:06.000
ಸಮಾಧಾನ. ಎಲ್ಲಾ ಸರಿಹೋಗುತ್ತೆ.

17:06.083 --> 17:08.125
ಇಲ್ಲ. ಅವನು ಅವಳ ಮೇಲೆ ಗುಂಡು ಹಾರಿಸಿದ.

17:09.791 --> 17:12.458
ಮುಖಕ್ಕೆ ಗುಂಡು ಹಾರಿಸಿದ.

17:13.041 --> 17:14.375
ಪೊಲೀಸರನ್ನು ಕರೆಯಿರಿ.

17:14.458 --> 17:16.416
ಹೂಂ. ಹೋಗು. ಪ್ರಯತ್ನಿಸು. ಪೊಲೀಸರನ್ನು ಕರೆ.

17:19.416 --> 17:22.125
ಬೋನ್ಸ್. ಬೋನ್ಸ್. ಬೋನ್ಸ್!

17:27.083 --> 17:29.625
ದಯವಿಟ್ಟು! ದಯವಿಟ್ಟು!
ಪೊಲೀಸ್! ಪೊಲೀಸರನ್ನು ಕರೆ!

17:30.291 --> 17:31.291
ಮಹಿಳೆಯರೇ.

17:31.916 --> 17:32.875
ಮಹಿಳೆಯರೇ!

17:32.958 --> 17:34.583
ನಾನು ಪೊಲೀಸರಿಗೆ ಕರೆ ಮಾಡುವೆ.

17:35.583 --> 17:36.625
ಒಸಿಪ್,

17:37.583 --> 17:39.625
ಅವರಿಗೆ ರಕ್ಷಾ ಕೊಠಡಿಯನ್ನು ತೋರಿಸು.

17:39.833 --> 17:42.375
ನೆಲಮಾಳಿಗೆ. ಈಗಲೇ.

17:45.458 --> 17:47.291
ಎಲ್ಲವೂ ಸರಿಹೋಗುತ್ತೆ.

17:49.750 --> 17:51.000
ನಾನು ಮಾತು ಕೊಡುವೆ.

18:00.041 --> 18:01.041
ಹೇ!

18:01.125 --> 18:02.125
ಅವಳನ್ನು ತಡೆಯಿರಿ!

18:02.541 --> 18:03.458
ಹೇ!

18:05.333 --> 18:06.333
ಅವಳನ್ನು ತಡೆಯಿರಿ!

18:15.500 --> 18:21.541
ಪ್ರೆಟಿ ಲೀಥಲ್

18:25.250 --> 18:26.916
ಹುಚ್ಚುತನ ಸಾಕು.

18:27.000 --> 18:29.250
ಒಸಿಪ್ ಜತೆ ಹೋಗಿ.
ಅವನು ನಿಮ್ಮನ್ನು ನೋಡಿಕೊಳ್ಳುತ್ತಾನೆ.

18:30.500 --> 18:31.750
ನಾನವರನ್ನು ಬೇರ್ಪಡಿಸಿ

18:32.208 --> 18:33.083
ನಿಶಬ್ದವಾಗಿರಿಸುವೆ.

18:33.291 --> 18:34.666
ಬನ್ನಿ.

18:34.750 --> 18:35.666
ನನ್ನ ಜೊತೆ ಬನ್ನಿ.

18:36.750 --> 18:39.250
ಎಲ್ಲವೂ ಸರಿಹೋಗುತ್ತೆ.

18:40.958 --> 18:42.000
ಈ ಕಡೆ.

19:08.541 --> 19:09.541
ಏಯ್, ಕುಳ್ಳಿ.

19:10.125 --> 19:11.125
ದಾರಿ ಮರೆತೆಯಾ?

19:11.833 --> 19:13.000
ನನಗೆ ಕಿವಿ ಕೇಳಲ್ಲ.

19:13.625 --> 19:15.291
ಏನ್-- ಇರು.

19:15.375 --> 19:16.791
ನಿನಗೆ ಕಿವಿ ಕೇಳಲ್ವಾ?

19:23.583 --> 19:24.833
ನಿನಗೆ ಹಚ್ಚೆಗಳು ಇಷ್ಟಾನಾ?

19:27.625 --> 19:28.666
ನೀನು…

19:29.833 --> 19:31.208
ಸುಂದರವಾಗಿದ್ದೀಯ.

19:31.291 --> 19:32.166
ಅಂದರೆ…

19:33.916 --> 19:36.750
ಮುದ್ದಾಗಿದ್ದೀಯ.

19:39.708 --> 19:40.916
ಸರಿ.

19:42.125 --> 19:44.000
ಬಂದೂಕು ತಾನಾಗೇ ಸಿಡಿಯಿತು.

19:44.083 --> 19:45.041
ಇಲ್ಲ.

19:45.125 --> 19:46.791
ಇಲ್ಲ, ನನಗೆ ಸುಳ್ಳು ಹೇಳಬೇಡ, ಸರಿನಾ?

19:46.875 --> 19:48.541
ಅವನು ನಮ್ಮ ಮುಂದೆಯೇ ಅವರ ಮೇಲೆ ಗುಂಡು ಹಾರಿಸಿದ.

19:48.625 --> 19:50.000
ನೀನು ಪೊಲೀಸರನ್ನು ಕರೆಸುವೆ ತಾನೇ?

19:50.083 --> 19:52.041
-ನನ್ನ ಬಾಸ್ ಕರೆ ಮಾಡುತ್ತಿದ್ದಾರೆ. ಈಗಲೇ.
-ಸರಿ.

19:52.125 --> 19:53.833
ಅವರೇ ಎಲ್ಲಾ ನೋಡಿಕೊಳ್ಳೋದು, ಸರಿನಾ?

19:53.916 --> 19:55.500
ಇದೊಂದು ದುರಂತ, ಸರಿನಾ?

19:56.750 --> 19:57.833
ದೇವರೇ…

19:57.916 --> 19:59.333
ದೇವರೇ, ನನಗೆ ಉಸಿರಾಡಲು ಆಗುತ್ತಿಲ್ಲ.

19:59.875 --> 20:01.041
ನನಗೆ ಉಸಿರಾಡಲು ಆಗುತ್ತಿಲ್ಲ!

20:01.125 --> 20:03.333
-ಸರಿ, ಏನಾದರೂ ಮಾಡು.
-ಹೇ.

20:03.833 --> 20:04.875
ಹೇ.

20:05.708 --> 20:06.625
ಇದನ್ನು ತಿನ್ನು,

20:07.625 --> 20:09.833
ಕೆಲವೇ ಕ್ಷಣದಲ್ಲಿ ಆರಾಮಾಗುವೆ. ಸರಿನಾ?

20:25.625 --> 20:28.500
ನನ್ನ ಬಾರ್‌ನಲ್ಲಿ ಎಷ್ಟು ಗೊಂದಲ ಸೃಷ್ಟಿಸಿದ್ದೀಯ.

20:28.583 --> 20:32.500
ಬೇಗ ಆ ಬ್ರಿಟಿಷಳನ್ನು
ನೆಲದ ಮೇಲಿಂದ ತೆಗೆದು ಬಿಸಾಕಿ.

20:35.208 --> 20:37.083
ಹೂಂ, ಅವಳು ಹೇಳಿದಂತೆ ಮಾಡಿ.

20:38.208 --> 20:40.750
ನಾವು ಮಾತಾಡಬೇಕು.

20:43.750 --> 20:46.958
ಇನ್ನಷ್ಟು ರಕ್ತದ ಕಲೆ ಹರಡಿದಿರಾ? ಸೋನಿಯಾ…

20:47.041 --> 20:48.250
ನೆಲ ಒರೆಸು.

20:51.583 --> 20:52.666
ಬಾ.

21:08.500 --> 21:09.916
ಒಬ್ಬ ಬ್ಯಾಲೆರಿನಾ ಸಿಕ್ಕಿದಳು.

21:13.875 --> 21:15.125
ಏನಷ್ಟು ದೊಡ್ಡ ವಿಷಯ?

21:16.125 --> 21:18.958
ಈ ಹುಚ್ಚು, ಅಮಲೇರಿದ ಮಹಿಳೆ ನನ್ನ ಮೇಲೆ ಬಿದ್ದಳು,

21:19.041 --> 21:20.750
ಬಂದೂಕು ಸಿಡಿಯಿತು.

21:22.541 --> 21:23.916
ಅದು ನನ್ನ ತಪ್ಪಲ್ಲ.

21:24.000 --> 21:26.000
ಬ್ಯಾಲೆರಿನಾಗಳು ಬೇರೆ ಕಥೆ ಹೇಳುತ್ತಾರೆ.

21:26.083 --> 21:29.708
ಹೂಂ, ಅವರು ಸಹಕರಿಸದಿದ್ದರೆ,
ನೀನು ಯಾವಾಗಲೂ ಮಾಡುವುದನ್ನು ಮಾಡು.

21:29.791 --> 21:33.041
ನಾಲಗೆ ಕತ್ತರಿಸು ಅಥವಾ ಕತ್ತು ಸೀಳು.

21:34.708 --> 21:35.958
ಇದನ್ನು ಮುಗಿಸಬಹುದು.

21:36.041 --> 21:39.125
ಕೂರು. ಇಷ್ಟು ನಡೆದಾಡಿ
ನನಗೆ ತಲೆಸುತ್ತು ಬರಿಸುತ್ತಿದ್ದೀಯ.

21:39.791 --> 21:42.125
ನಾವು ಥಟ್ಟನೇ ಪ್ರತಿಕ್ರಿಯಿಸಬಾರದು.

21:42.208 --> 21:45.500
ಆರು ಅಮೆರಿಕನ್ನರು ಕಾಣೆಯಾದರೆ
ಸುದ್ದಿ ಹೊರಬರುತ್ತೆ.

21:45.583 --> 21:48.458
ನಾವು ಎಲ್ಲಾ ಮಾಹಿತಿ ಪಡೆದು

21:48.541 --> 21:50.291
ತಂತ್ರಗಳನ್ನು ಬಳಸಬೇಕಾಗುತ್ತೆ.

21:50.375 --> 21:52.833
ಆದರೆ ಚಿಂತೆ ಬೇಡ,
ನಿನ್ನನ್ನು ನಾನು ನೋಡಿಕೊಳ್ಳುವೆ.

21:56.708 --> 21:57.958
ನೀನು ನನ್ನನ್ನು ನೋಡಿಕೊಳ್ಳುವೆಯಾ?

21:59.791 --> 22:01.166
ನನಗೆ ಸರಿಯಾಗಿ ಕೇಳಿತಾ?

22:02.291 --> 22:03.291
ಹೌದು,

22:04.083 --> 22:05.791
ಆದರೆ ಅದಕ್ಕೊಂದು ಬೆಲೆ ಇದೆ.

22:08.000 --> 22:09.416
ಜಾಗ್ರತೆ.

22:10.583 --> 22:13.041
ನಾನು ಕಟುಕ ಲೋಥರ್‌ನ ಮಗ.

22:15.000 --> 22:16.666
ಡೆವೋರಾ,

22:16.750 --> 22:20.083
ನನ್ನ ಕುಟುಂಬದ ವಿರುದ್ಧ ಹೋದರೆ
ಕರುಣೆ ಅನ್ನೋದನ್ನ ನೋಡಲ್ಲ ನೀನು.

22:23.375 --> 22:25.166
ನನ್ನ ಅಪ್ಪನನ್ನು ಕರೆಸುವಂತೆ ಮಾಡಬೇಡ.

22:26.375 --> 22:28.125
ನಾನವನನ್ನು ಭೇಟಿಯಾಗಬೇಕು.

22:28.208 --> 22:31.791
ಅವನು ಬಹಳಷ್ಟು ಬಾರಿ
ನನ್ನ ಆಹ್ವಾನಗಳನ್ನು ನಿರಾಕರಿಸಿದ್ದಾನೆ.

22:31.875 --> 22:33.500
ನನ್ನ ಅಪ್ಪ ನಿರತ ಮನುಷ್ಯ.

22:33.583 --> 22:37.208
ಅವನ ಬಳಿ ಹಳ್ಳಿಗಾಡಿಗೆಲ್ಲಾ ಓಡಾಡುವಷ್ಟು
ಸಮಯ ಇಲ್ಲ, ಆದರೆ ಒಂದು ಕರೆ ಮಾಡಿದರೆ…

22:37.916 --> 22:40.166
ಇಲ್ಲಿಗೆ ಬಂದು ನಿನ್ನ ಕಥೆ ನೋಡಿಕೊಳ್ಳುತ್ತಾನೆ.

22:49.541 --> 22:52.333
ಅನೇಕ ವರ್ಷಗಳಿಂದ,
ನಾನು ನಿನ್ನ ಅಪ್ಪನಿಗೆ ಹಣ ನೀಡಿದ್ದೇನೆ,

22:52.416 --> 22:55.375
ನನ್ನ ಪ್ರೀತಿಯ ಅಪ್ಪನಿಂದ ಬಂದ ಸಾಲ ಅದು.

22:55.458 --> 22:57.750
ಆದರೆ ಇಂದು ಆ ಪಾವತಿಗಳು ನಿಲ್ಲುತ್ತವೆ.

22:58.875 --> 23:03.875
ನಿನ್ನ ಅಪ್ಪನಿಗೆ ಹೇಳು, ಹಣ ಬೇಕಿದ್ದರೆ,
ನನ್ನನ್ನು ಬಂದು ಭೇಟಿಯಾಗಲಿ.

23:05.875 --> 23:08.416
ನನ್ನ ಲಕೋಟೆ ಹಿಂದಿರುಗಿಸು.

23:19.291 --> 23:22.291
ಇಲ್ಲ, ರಸ್ತೆಯಲ್ಲಿ ಯಾರೂ ಇರಲಿಲ್ಲ.

23:22.916 --> 23:26.458
ನೀವು ಎಲ್ಲಿ ಸಿಕ್ಕಿಬಿದ್ದಿದ್ದೀರಿ ಅಂತ
ನಿಮ್ಮ ಕುಟುಂಬ ಅಥವಾ ಸ್ನೇಹಿತರಿಗೆ ಗೊತ್ತಾ?

23:26.541 --> 23:28.083
ಇಲ್ಲ. ಇಲ್ಲ.

23:28.166 --> 23:30.166
-ಪ್ರದರ್ಶನದವರಿಗೆ?
-ಇಲ್ಲ. ಇಲ್ಲ.

23:30.250 --> 23:31.291
ಹೇ, ಗ್ರೇಸ್.

23:32.416 --> 23:33.666
ಬೋನ್ಸಿ-ಜೋನ್ಸಿ!

23:33.750 --> 23:34.750
ನೀನು ಹಿಂದಿರುಗಿದೆಯಾ?

23:35.625 --> 23:38.083
ಬೋನಿ, ಇವಳು…

23:40.291 --> 23:41.541
ನೀನು ಯಾರು?

23:41.625 --> 23:43.250
ನಾನು ಮುಖ್ಯವಲ್ಲ.

23:43.333 --> 23:45.791
-ನೀನು ಹೇಳು--
-ಗ್ರೇಸ್, ಈ ಸೂಳೆಗೆ ಏನೂ ಹೇಳಬೇಡ.

23:46.625 --> 23:48.708
ಆ ಹುಡುಗಿ ತುಂಬಾ ಒರಟಿ.

23:49.208 --> 23:51.583
ಅವಳಿಗೆ ನನ್ನನ್ನ ಕಂಡರೆ ಆಗಲ್ಲ,
ಯಾಕೆಂದರೆ ನಾನು ಯಾವಾಗಲೂ ಅವಳು

23:51.666 --> 23:52.916
ನರಕಕ್ಕೆ ಹೋಗುತ್ತಾಳಂತ ಹೇಳುತ್ತೇನೆ.

23:53.000 --> 23:54.500
ಅವಳನ್ನು ಬಿಡು.

23:54.583 --> 23:56.875
ನಾವಿಬ್ಬರೂ ಆತ್ಮೀಯ ಸ್ನೇಹಿತರಾಗಬಹುದು.

23:56.958 --> 23:58.083
ಮಜಾ.

23:58.166 --> 23:59.583
ಒಟ್ಟಿಗೆ ಅನಾನಸ್ ಪಿಜ್ಜಾ ತಿನ್ನೋಣ!

23:59.666 --> 24:01.291
ನೀವು ಇವಳಿಗೆ ಏನು ಮಾಡಿದಿರಿ?

24:01.375 --> 24:02.250
ಸುಮ್ಮನಿರು.

24:02.333 --> 24:03.333
ಗ್ರೇಸ್?

24:04.916 --> 24:06.291
ನನ್ನ ಗೆಳತಿಯಾಗು.

24:06.375 --> 24:09.583
ನೀವು ಟೆರೆಮೋಕ್ ಇನ್ನ್‌ಗೆ ಬಂದಿದ್ದೀರಿ ಅಂತ
ಯಾರಿಗೆ ಗೊತ್ತು?

24:09.666 --> 24:10.833
ಎಲ್ಲರಿಗೂ ಗೊತ್ತು!

24:11.375 --> 24:13.125
ನನ್ನ ತಂದೆಗೆ, ಅವಳ ಹೆತ್ತವರಿಗೆ,

24:13.208 --> 24:15.375
ಇಡೀ ಬ್ಯಾಲೆ ಕಂಪನಿಗೆ ಗೊತ್ತು, ಸರಿನಾ?

24:15.458 --> 24:17.875
-ಅವರು ನಮ್ಮನ್ನು ಹುಡುಕಿ ಬರುತ್ತಾರೆ.
-ಬೋನಿ,

24:17.958 --> 24:20.958
ನೀನು ಸುಳ್ಳು ಹೇಳಿದರೆ
ನಾನು ನಿನ್ನ ಆತ್ಮವನ್ನು ಹೇಗೆ ರಕ್ಷಿಸೋದು?

24:24.916 --> 24:25.916
ಯಾರೂ ಬರುತ್ತಿಲ್ಲ.

24:26.000 --> 24:27.625
ಗ್ರೇಸ್, ದರಿದ್ರ ಪೆದ್ದಿ.

24:29.750 --> 24:31.000
ನನಗೆ ಡೆವೋರಾಳನ್ನ ನೋಡಬೇಕು.

24:33.125 --> 24:35.875
ದಯವಿಟ್ಟು ನಮಗೆ ಸಹಾಯ ಮಾಡಿ.

24:35.958 --> 24:37.708
ಮಾಡುತ್ತಿದ್ದೆ, ಆದರೆ…

24:37.791 --> 24:39.708
ಡೆವೋರಾಳ ಮಾತು ಕೇಳದಿದ್ದರೆ,

24:40.333 --> 24:42.208
ನಾಲಗೆಯೇ ಕತ್ತರಿಸಿಬಿಡುತ್ತಾಳೆ.

25:22.125 --> 25:23.166
ಡಾಕ್ಟರ್,

25:23.250 --> 25:25.250
ಇಲ್ಲಿ ಕೀಟಗಳ ಸಮಸ್ಯೆ ಇದೆ.

25:34.083 --> 25:35.083
ಪಾಶ.

25:37.833 --> 25:39.416
ಡೆವೋರಾಗೆ ಏನು ಬೇಕಿತ್ತು?

25:40.625 --> 25:41.625
ಏನೂ ಇಲ್ಲ.

25:44.583 --> 25:46.250
ಈ ದರಿದ್ರ ಜಾಗದಿಂದ ಹೊರಡೋಣ.

25:46.333 --> 25:48.916
ಪಾಶ, ಲಕೋಟೆ ನನಗೆ ಕೊಡು.

25:49.583 --> 25:50.750
ಹಣವನ್ನು ಕೊಡು.

25:52.125 --> 25:53.333
ಅದನ್ನು ಡೆವೋರಾಗೆ ಹಿಂದಿರುಗಿಸಿದೆ.

25:54.250 --> 25:55.375
ಏನು?

25:55.458 --> 25:57.041
ನಾವು ಖಾಲಿ ಕೈ ವಾಪಸ್ ಹೋಗುವಂತಿಲ್ಲ.

25:57.125 --> 25:59.250
ನಿನ್ನ ತಂದೆ ನಮ್ಮನ್ನು ಕೊಲ್ಲುತ್ತಾರೆ, ಪಾಶ.

25:59.333 --> 26:00.416
ಬಾಯಿ ಮುಚ್ಚು.

26:00.791 --> 26:03.291
ಆ ಜೀಸಸ್ ಹುಡುಗಿ, ಪೂರ್ತಿ ಬಾಯಿ ಬಿಟ್ಟಳು.

26:03.375 --> 26:05.125
ಆದರೆ ಆ ಓಡಿಹೋದವಳು ತೊಂದರೆಯಾಗಬಹುದು.

26:05.208 --> 26:07.041
ಅವಳು ಉಳಿದವರಂತಲ್ಲ.

26:07.125 --> 26:10.583
ಈ ನರ್ತಕಿಯರಿಂದ ನನಗೆ ಒಂದೇ ತೊಂದರೆ ಎಂದರೆ
ಯಾರಿಗಾದರೂ ಅವರ ಇಲ್ಲಿನ ಇರುವಿಕೆ ತಿಳಿಯೋದು.

26:10.666 --> 26:12.958
ಯಾರಿಗೂ ಗೊತ್ತಿಲ್ಲ, ಮಿಶಿನಾಯಾ ಕೊರೊಲೆವಾ.

26:13.041 --> 26:15.375
ಒಳ್ಳೆಯದು. ಹಾಗಾದರೆ ಡಾಕ್ಟರ್ ಈ ಕೆಲಸ ಮುಗಿಸಲಿ.

26:15.458 --> 26:18.208
ಒಸಿಪ್, ನರ್ತಕಿಯರ ವಸ್ತುಗಳನ್ನು
ಯೂರಿಗೆ ಸುಡಲು ಕೊಡು.

26:29.416 --> 26:30.916
ಹಲೋ, ಅಮ್ಮ.

26:31.000 --> 26:33.541
ಏನು ಮಾಡುತ್ತಿದ್ದೀಯ, ಪುಟ್ಟ ತುಂಟ?

26:34.666 --> 26:36.416
ಹಂಗೇರಿಯನ್ ಬೇಕಿಲ್ಲ.

26:37.083 --> 26:39.041
ಈ ಸೂಳೆಗೆ ಕಿವಿ ಕೇಳಲ್ಲ, ಮಾತು ಬರಲ್ಲ.

26:41.333 --> 26:42.375
ಬಾ.

26:42.833 --> 26:44.375
ನನ್ನ ಜೊತೆ ಬಾ, ಚಿನ್ನ.

26:45.375 --> 26:46.750
ಈ ಹುಡುಗರು.

27:05.625 --> 27:09.250
ನನ್ನ ದೊಡ್ಡ ಹುಡುಗ ಇಷ್ಟು ಸೂಕ್ಷ್ಮ ಹೇಗೆ?

27:09.875 --> 27:11.333
ಕ್ಷಮಿಸು, ಅಮ್ಮ.

27:11.416 --> 27:13.500
ಇದು ನಿನ್ನ ತಪ್ಪಲ್ಲ.

27:13.583 --> 27:15.958
ನಾನು ನಿನ್ನ ಜೊತೆ ತುಂಬಾ ಸೌಮ್ಯವಾಗಿದ್ದೆ.

27:18.791 --> 27:20.000
ಸಿಕ್ಕಿತು!

28:03.208 --> 28:04.875
ದರಿದ್ರ ದಡ್ಡ ಹುಡುಗಿ.

28:04.958 --> 28:06.750
ನನ್ನ ಮೇಲೆ ಯಾಕೆ ಕೋಪ?

28:06.833 --> 28:08.541
ನಿನ್ನನ್ನು ಪ್ರೀತಿಸುತ್ತೇನೆ.

28:08.625 --> 28:09.958
ಏನಾಗಿದೆ ನಿನಗೆ?

28:10.041 --> 28:11.958
ಒಸಿಪ್ ನನಗೆ ಜೇಬಲ್ಲಿದ್ದ ಚಾಕ್ಲೆಟ್ ಕೊಟ್ಟ.

28:12.791 --> 28:15.708
ನನಗೆ ವಿಚಿತ್ರ ಅನಿಸುತ್ತಿದೆ,
ಆದರೆ ಒಳಗೆ ಬೆಚ್ಚಗೂ ಅನಿಸುತ್ತಿದೆ.

28:16.750 --> 28:18.166
-ನಿನಗೆ ಅಮಲೇರಿದೆ.
-ಅಮಲಾ?

28:18.250 --> 28:22.250
ನನಗೆ ಅಮಲೇರುವಂತಿಲ್ಲ. ಅಮಲೇರುವಂತಿಲ್ಲ!
ನನಗೆ ಅಮಲೇರುವಂತಿಲ್ಲ!

28:22.333 --> 28:23.375
ಪ್ರದರ್ಶನದ ಕಥೆ ಏನು?

28:23.458 --> 28:24.375
ವಾಂತಿ ಬಂದಂತಾಗುತ್ತಿದೆ.

28:24.458 --> 28:26.500
ಅವರು ನಿನಗೇನು ಕೊಟ್ಟರೋ
ಅದೆಲ್ಲಾ ದೇಹದಿಂದ ಹೊರಗೆ ಬರಲಿ.

28:26.583 --> 28:28.250
-ನಡಿ.
-ಆಗುತ್ತಿಲ್ಲ. ಸಹಾಯ ಬೇಕು.

28:28.333 --> 28:30.458
ನನ್ನಿಂದ ಆಗಲ್ಲ, ಬೋನಿ. ಸಹಾಯ ಮಾಡು.

28:30.541 --> 28:33.500
ಎಂತಹ ಬ್ಯಾಲೆರಿನಾಗೆ
ವಾಂತಿ ಬರಿಸಿಕೊಳ್ಳಲು ಬರಲ್ಲ?

28:40.416 --> 28:41.583
ಮಾಂಸದ ಸೂಪ್.

28:46.875 --> 28:49.000
ಒಸಿಪ್, ನನಗಾಗಿ ಪಲಿಂಕಾ ಜ್ಯೂಸ್ ತಾ.

28:49.083 --> 28:50.333
ಸರಿ.

28:50.875 --> 28:52.208
ಒಂದು ನಿಮಿಷದಲ್ಲಿ ಬರುವೆ.

29:21.750 --> 29:22.750
ಛೇ!

29:23.500 --> 29:25.666
ಅವನು ಬರುತ್ತಿದ್ದಾನೆ. ನಿದ್ದೆ ಬಂದಂತೆ ನಟಿಸು.

29:39.791 --> 29:41.083
ಗ್ರೇಸ್?

29:50.583 --> 29:51.875
ಗ್ರೇಸ್?

29:57.083 --> 29:58.500
ಇನ್ನಷ್ಟು ಮಜಾ ಮಾಡಲು ತಯಾರಾ?

29:58.583 --> 29:59.875
ಛೇ.

30:01.791 --> 30:02.916
ನೀನು…

30:03.000 --> 30:04.333
ನೀನು ವಾಂತಿ ಮಾಡಿದ್ದೀಯ.

30:04.416 --> 30:05.458
ಹೇ.

30:06.041 --> 30:07.041
ಹೇ.

30:07.125 --> 30:08.375
ಪರವಾಗಿಲ್ಲ.

30:09.083 --> 30:10.208
ಪರವಾಗಿಲ್ಲ.

30:10.875 --> 30:11.916
ಗೊತ್ತಾ…

30:13.375 --> 30:15.250
ನೀನು ಪುಟ್ಟ ಹಂಸದಂತೆ ಕಾಣುತ್ತೀಯ.

30:16.916 --> 30:18.000
ನಾನು ಎಂದಿಗೂ…

30:19.000 --> 30:21.625
ನಾನು ಎಂದಿಗೂ ಯಾರಿಗೂ ಇದನ್ನು ಹೇಳಿಲ್ಲ, ಆದರೆ…

30:25.125 --> 30:26.458
ನನಗೆ…

30:26.541 --> 30:28.333
ನನಗೆ ಹಕ್ಕಿಗಳ ಮೇಲೆ ಕಾಮ.

30:30.875 --> 30:32.250
ನನಗನಿಸುತ್ತೆ…

30:32.333 --> 30:34.041
ನನಗವುಗಳ ಕತ್ತು ಇಷ್ಟ ಇರಬೇಕು.

30:36.083 --> 30:37.708
ನಯವಾಗಿ…

30:41.541 --> 30:45.000
ದೇವರು ನಿನಗೆ ಶಾಪ ನೀಡಲಿ, ಸೈತಾನ! ಸೈತಾನ!

30:45.083 --> 30:47.750
ಛೇ, ನಿನಗೆ ಕೆಟ್ಟ ಅಮಲೇರಿದೆ.

30:47.833 --> 30:49.083
ಪರವಾಗಿಲ್ಲ.

30:53.291 --> 30:54.291
ಓಡು.

30:54.375 --> 30:55.333
ಓಡು.

30:56.333 --> 30:58.833
ದೇವರೇ! ದೇವರೇ,
ನಾನು ಹೊರಗೆ ಹೋಗಬೇಕು. ತಪ್ಪಿಸಿಕೊಳ್ಳಬೇಕು.

30:58.916 --> 31:01.166
ಎಷ್ಟಾದರೂ ಪ್ರಾರ್ಥಿಸಿಕೋ.

31:02.208 --> 31:04.708
ನೀನು ಎಲ್ಲೂ ಹೋಗಲು ಆಗಲ್ಲ, ಬ್ಯಾಲೆರಿನಾ.

31:05.791 --> 31:06.791
ಹೇ!

32:06.291 --> 32:07.833
ದೇವರೇ! ದೇವರೇ!

32:09.958 --> 32:10.958
ದಯವಿಟ್ಟು.

32:20.041 --> 32:22.958
ದಯವಿಟ್ಟು, ಬೇಡ. ದಯವಿಟ್ಟು, ಬೇಡ.

32:23.041 --> 32:25.666
ನಿನ್ನ ನೃತ್ಯದ ದಿನಗಳು ಮುಗಿದವು, ಬ್ಯಾಲೆರಿನಾ.

32:25.750 --> 32:27.291
ಇಲ್ಲ. ಬೇಡ.

33:19.291 --> 33:21.750
ನನಗೆ ಒಂದು ಟ್ರೇ ಪೂರ್ತಿ ಶಾಟ್ಸ್ ಕೊಡು.

33:21.833 --> 33:22.916
ಸಂಭ್ರಮಿಸುತ್ತಿದ್ದೇವಾ?

33:23.000 --> 33:24.083
ಇಲ್ಲ.

33:24.166 --> 33:25.541
ಇದು ದುರಂತಕ್ಕಾಗಿ.

33:26.500 --> 33:28.208
ಒಟ್ಟು ಈ ಐದು ಬ್ಯಾಲೆರಿನಾಗಳಲ್ಲಿ,

33:28.291 --> 33:31.250
ಸುಮಾರು 100 ವರ್ಷದ ತರಬೇತಿ,

33:31.333 --> 33:35.166
ಪರಿಶ್ರಮ, ನೋವು, ಉತ್ಸಾಹ ಮತ್ತು ಶಿಸ್ತು ಇದೆ.

33:35.250 --> 33:37.041
ಒಬ್ಬ ಮೂರ್ಖನ ತಪ್ಪಿನಿಂದಾಗಿ

33:37.125 --> 33:39.583
ಅದೆಲ್ಲಾ ನಾಶವಾಗಲಿದೆ.

33:43.000 --> 33:44.083
ಹಾಗಾಗಿ, ಇಲ್ಲ…

33:44.750 --> 33:46.458
ನಾನು ಸಂಭ್ರಮಿಸುತ್ತಿಲ್ಲ.

33:47.000 --> 33:48.375
ದುಃಖಿಸುತ್ತಿದ್ದೇನೆ.

33:50.208 --> 33:53.041
ಅವರ ತ್ಯಾಗಗಳು ವ್ಯರ್ಥವಾಗದಿರಲಿ.

33:53.958 --> 33:54.916
ತಗೊಳ್ಳಿ.

33:58.375 --> 33:59.541
ಅದ್ಭುತ.

34:00.833 --> 34:01.833
ಅದ್ಭುತ.

34:06.291 --> 34:07.958
ಭೇಷ್. ಅದ್ಭುತ.

34:14.500 --> 34:15.625
ಬರುತ್ತಿರಲಿ.

34:15.708 --> 34:18.041
ನನಗೆ ಪಾಶ
ಮತ್ತವನ ಗೆಳೆಯರು ಕಂಠಮಟ್ಟ ಕುಡಿದಿರಬೇಕು.

34:34.000 --> 34:36.250
ಕುಡಿ, ಇಲಿ ಮರಿ.

34:40.416 --> 34:41.416
ಅವಳಿಗೇನಾಗಿದೆ?

34:41.500 --> 34:43.291
ಎಂದಿಗಿಂತ ಹೆಚ್ಚು ವಿಚಿತ್ರವಾಗಾಡುತ್ತಿದ್ದಾಳೆ.

34:43.375 --> 34:44.875
ಈ ಮೂರ್ಖ ಅವಳಿಗೆ ನಶೆ ನೀಡಿದ.

34:44.958 --> 34:46.125
ನಾವು ಇಲ್ಲಿಂದ ತಪ್ಪಿಸಿಕೊಳ್ಳಬೇಕು.

34:46.208 --> 34:47.541
ಇಲ್ಲ. ನಿಜವಾಗಲೂ?

34:49.041 --> 34:51.791
ಅಧಿಕಾರಿಗಳು ಬಂದು ಅವರ ಕೆಲಸ ಮಾಡುವವರೆಗೂ

34:51.875 --> 34:53.500
ನಿನಗೆ ಕಾಯಲು ಆಗಲಿಲ್ವಾ?

34:53.583 --> 34:55.208
ಯಾಕೆ ಸಮಸ್ಯೆ ಉಂಟುಮಾಡಿದೆ?

34:55.291 --> 34:57.208
ಮಿಸ್ ಥೋರ್ನ ಸತ್ತಿದ್ದಾರೆ.

34:57.291 --> 35:00.250
ಪೊಲೀಸರು ಬರುವವರಿದ್ದರೆ,
ಇಷ್ಟರಲ್ಲಿ ತಲುಪುತ್ತಿದ್ದರು.

35:00.333 --> 35:02.625
ನಿನಗರ್ಥ ಮಾಡಿಕೊಳ್ಳಲು ಕಷ್ಟ ಅಂತ ಗೊತ್ತು,
ಯಾಕೆಂದರೆ ಇಡೀ ಜೀವನ ನಿನಗೆ

35:02.708 --> 35:04.166
ಒಂದು ಕರೆ ಮಾಡಿದರೆ ಸಹಾಯ ಸಿಗುತ್ತಿತ್ತು.

35:05.833 --> 35:07.500
ಆದರೆ ಇಲ್ಲಿ ನಮಗೆ ನಾವೇ ಎಲ್ಲಾ.

35:07.583 --> 35:09.625
ಯಾರೂ ನಮ್ಮನ್ನು ಕಾಪಾಡಲು ಬರುತ್ತಿಲ್ಲ.

35:09.708 --> 35:10.875
ಅದು ತಪ್ಪು.

35:11.375 --> 35:13.916
ನಾವು ಜಗತ್ತಿನ ಇನ್ನೊಂದು ಬದಿಯಲ್ಲಿರುವ
ಕೆಲವು ವಿದೇಶಿಯರು ಅಷ್ಟೇ.

35:14.000 --> 35:17.500
ಈ ಸನ್ನಿವೇಶದಿಂದ ಹೊರಬರಲು ಅವರಿಗೆ ಅತಿ ಸುಲಭ,
ಅತಿ ಅಗ್ಗದ ಮಾರ್ಗ ನಮ್ಮನ್ನು ಕೊಲ್ಲುವುದು.

35:17.583 --> 35:19.416
ನಾವು ಇಲ್ಲಿಂದ ತಪ್ಪಿಸಿಕೊಳ್ಳಬೇಕು.

35:19.500 --> 35:22.500
"ನಾವು ಇಲ್ಲಿಂದ ತಪ್ಪಿಸಿಕೊಳ್ಳಬೇಕು"
ಅನ್ನೋದನ್ನ ನಿಲ್ಲಿಸು.

35:22.583 --> 35:24.208
ನಾವು ಇಲ್ಲೇ ಉಳಿದುಕೊಂಡರೆ ಸಾಯುತ್ತೇವೆ,

35:24.291 --> 35:27.625
"ನಾವು ಇಲ್ಲಿಂದ ತಪ್ಪಿಸಿಕೊಳ್ಳಬೇಕು" ಅಂತ
ಮತ್ತೆ ಮತ್ತೆ ಹೇಳೋದರಿಂದ ಏನೂ ಆಗಲ್ಲ.

35:27.708 --> 35:30.791
ಮಾತು ಕಡಿಮೆ, ಕೆಲಸ ಜಾಸ್ತಿ ಮಾಡಬೇಕು ಯಾಕೆಂದರೆ…

35:32.500 --> 35:33.875
ನಾವು ಇಲ್ಲಿಂದ ತಪ್ಪಿಸಿಕೊಳ್ಳಬೇಕು.

35:54.750 --> 35:55.750
ಎಲ್ಲರನ್ನೂ ಕೊಲ್ಲಿ

35:57.000 --> 35:58.166
ಚಿಂತಿಸಬೇಡ.

35:58.250 --> 35:59.833
ನಾನು ಈಗಲೇ ಬರುತ್ತೇನೆ.

36:02.291 --> 36:03.708
ನಿನಗೆ ಮಜಾ ಬೇಕಾ?

36:03.791 --> 36:05.625
ಪಾಶ, ಮಜಾ ಬೇಕಾ?

36:05.708 --> 36:07.875
ತಗೋ. ನಾನು ಕೊಡುವೆ.

36:10.208 --> 36:12.208
-ಹಾಗೆ, ಪಾಶ!
-ಚೆನ್ನಾಗಿದೆ.

36:12.291 --> 36:13.708
ಶುಭ ಸಂಜೆ, ಗೆಳೆಯರೇ.

36:20.083 --> 36:24.208
ಪಾಶ, ಮುಂದೊಂದು ದಿನ
ನೀನು ಬಹುಶಃ ಬೀದಿಗೆ ಬೇಳುವೆ.

36:30.916 --> 36:32.041
ಆರ್ಟ್ಯೋಮ್,

36:32.958 --> 36:34.500
ಆ ಮೂರ್ಖ ಇಲ್ಲೇನು ಮಾಡುತ್ತಿದ್ದಾನೆ?

36:34.583 --> 36:36.125
ಡೆವೋರಾ.

36:36.208 --> 36:37.333
ಡಾಕ್ಟರ್.

36:37.916 --> 36:39.333
ನನ್ನ ಮುದ್ದು.

36:41.458 --> 36:43.416
-ಗುಂಡು ತೆಗೆದೆಯಾ?
-ಇನ್ನೇನು ಮತ್ತೆ?

36:43.500 --> 36:45.125
ಒಳ್ಳೆಯದು.

36:46.083 --> 36:49.250
ನಾನು ಹಲ್ಲುಗಳು, ಕಣ್ಣುಗಳು
ಮತ್ತು ಬೆರಳ ತುದಿಗಳನ್ನು ತೆಗೆಯುವೆ.

36:49.333 --> 36:51.583
ಆಮೇಲೆ ಬ್ಯಾಲೆರಿನಾಗಳಿಗೂ ಹಾಗೇ ಮಾಡೋಣ.

36:51.666 --> 36:54.416
ಆಗ ಯಾರೂ ಅವರನ್ನು ಗುರುತಿಸಲು ಆಗಲ್ಲ.

36:55.791 --> 36:57.000
ಅದ್ಭುತ.

36:57.750 --> 36:59.875
ಅವಳು ನನಗೆ ಆ ದೃಶ್ಯಾವಳಿಯ ಟೇಪ್ ಕೊಡಲ್ಲ.

37:01.083 --> 37:02.833
ಈಗ ಈ ಮೂರ್ಖ ಡಾಕ್ಟರ್‌ನನ್ನು ಸಹ ಕರೆಸಿದ್ದಾಳೆ,

37:02.916 --> 37:04.583
ಆಗ ಅವಳು ನನ್ನ ಅಪ್ಪನಿಗೆ,

37:04.666 --> 37:06.708
"ನಾನಿದನ್ನು ನಿಭಾಯಿಸಿದ್ದು,
ಪಾಶ ಅಲ್ಲ" ಅನ್ನಬಹುದಲ್ಲ?

37:10.541 --> 37:12.500
ನೀನು ಆ ಬ್ಯಾಲೆರಿನಾಗಳನ್ನು ಕೊಲ್ಲು.

37:15.041 --> 37:16.625
ನಿನ್ನ ತಂದೆ ಹೆಮ್ಮೆಪಡುತ್ತಾರೆ.

37:16.916 --> 37:17.833
ಗೊತ್ತು.

37:29.250 --> 37:30.416
ಬನ್ನಿ.

37:33.916 --> 37:35.083
ಈ ಕಡೆ.

37:43.250 --> 37:44.375
ಇರಿ. ಇರಿ.

37:51.750 --> 37:53.833
ಬನ್ನಿ, ಇಲ್ಲಿಂದ ಹೋಗಬಹುದು.

37:56.791 --> 37:58.833
"ಸೈತಾನ ನಿನ್ನನ್ನು ಬಂಧನಕ್ಕೆ ಎಸೆಯುತ್ತಾನೆ,

37:58.916 --> 38:01.625
"ಪರೀಕ್ಷೆಗೊಡ್ಡುತ್ತಾನೆ, ಆದರೆ ಭಯಪಡಬೇಡ."

38:03.000 --> 38:06.916
ದಿವ್ಯಜ್ಞಾನ ಅಧ್ಯಾಯ ಎರಡು, ಕಾವ್ಯ ಹತ್ತು.

38:08.000 --> 38:10.041
ನಿನ್ನ ಭಜನೆ ಮೆಲ್ಲಗೆ ಮಾಡಿಕೋ.

38:12.750 --> 38:13.875
ಥತ್.

38:15.083 --> 38:18.416
ಕೇಳಿ, ನಾವು ಗೋಡೆಗಳ ಮೂಲಕ ಹೋಗಬಹುದು ಅನಿಸುತ್ತೆ.

38:23.333 --> 38:24.833
ಹಿಂದೆ ಹೋಗಿ. ಹೋಗಿ, ಹೋಗಿ.

38:24.916 --> 38:26.458
ಹೋಗು! ಹೋಗು!

38:28.458 --> 38:31.708
ನಾಗರಹಾವು ನಿಮ್ಮ ಜೀವ ತೆಗೆಯಲು ಬರುತ್ತಿದ್ದೇನೆ.

38:45.041 --> 38:47.125
ಹೇ. ಅಮಲೇರಿದೆಯಾ ನಿನಗೆ?

38:48.625 --> 38:49.833
ಹಾಗೇನಿಲ್ಲ.

38:56.000 --> 38:57.791
-ಅವರನ್ನು ಹುಡುಕು.
-ಸರಿ.

39:14.333 --> 39:15.791
ಇಬ್ಬರು ಇದ್ದಾರೆ.

39:17.166 --> 39:19.041
ನನಗೆ ಸಾಯಲು ಇಷ್ಟ ಇಲ್ಲ.

39:19.125 --> 39:21.000
ನಾವವರನ್ನು ಹೂಡೆದುರುಳಿಸಬಹುದನಿಸುತ್ತೆ.

39:21.083 --> 39:22.916
"ಹೂಡೆದುರುಳಿಸೋದಾ"? ನಿನಗೆ ಹುಚ್ಚಾ?

39:24.875 --> 39:26.375
ಇಲ್ಲ, ನಿಜವಾಗಲೂ, ಕೇಳಿ.

39:26.458 --> 39:29.083
ನನ್ನಲ್ಲಿ ಅಷ್ಟು ಬಲ ಇಲ್ಲ. ನಿಜವಾಗಲೂ.

39:29.166 --> 39:30.250
ಸುಮ್ಮನಿರು.

39:30.333 --> 39:32.208
ನಾನು ನಿನ್ನ ನೃತ್ಯ ನೋಡಿದ್ದೇನೆ.

39:32.291 --> 39:35.375
ಜನರು ನಮ್ಮನ್ನು ನಾಜೂಕು, ಪುಟ್ಟ ಹುಡುಗಿಯರು
ಅಂದುಕೊಳ್ಳುತ್ತಾರೆ, ಆದರೆ ನಾವು ಹಾಗಲ್ಲ.

39:35.458 --> 39:38.083
ಹುಷಾರಿಲ್ಲದಿರಲಿ, ನೋವಿರಲಿ,
ಕಾಲಲ್ಲಿ ರಕ್ತವೇ ಸೋರುತ್ತಿರಲಿ,

39:38.166 --> 39:39.791
ನಾವು ಮುಖದ ಮೇಲೆ ನಗು ಹೊತ್ತು ನರ್ತಿಸುತ್ತೇವೆ.

39:39.875 --> 39:41.666
ಹಾಗಾಗಿ ನೀನು ಬಲಶಾಲಿ ಅಲ್ಲ ಅನ್ನಬೇಡ.

39:41.750 --> 39:42.750
ಸರಿನಾ?

39:51.208 --> 39:53.041
-ಇಲ್ಲಿ ಕೇಳಿ.
-ಏನು?

39:55.083 --> 39:56.375
ನಮ್ಮ ಬ್ಯಾಲೆ ಚೀಲಗಳು!

40:12.333 --> 40:13.291
ವ್ಲಾಡ್!

40:13.958 --> 40:14.916
ವ್ಲಾಡ್!

40:16.166 --> 40:18.041
ಒಸಿಪ್ ಸತ್ತಿದ್ದಾನೆ.

40:18.125 --> 40:19.916
ಇದು ಪಾಶಗೆ ಒಳ್ಳೆಯದಲ್ಲ.

40:21.375 --> 40:22.583
ಅವರು ಇಲ್ಲಿದ್ದಾರೆ.

40:23.083 --> 40:24.208
ಹೂಂ.

40:27.458 --> 40:30.083
ಹುಡುಗಿಯರೇ, ನಮಗೆ ನೀವಲ್ಲಿದ್ದೀರಿ ಅಂತ ಗೊತ್ತು.

40:30.166 --> 40:31.875
-ಹೊರಗೆ ಬನ್ನಿ.
-ಅವನ ಬಳಿ ಬಂದೂಕಿದೆ.

40:32.291 --> 40:34.000
ಇದು ನಿಮ್ಮ ಕೊನೆಯ ಅವಕಾಶ.

40:34.083 --> 40:35.416
ಹಾಳಾಗಿ ಹೋಗು!

41:23.583 --> 41:24.958
ಬೇವರ್ಸಿ…

41:27.958 --> 41:29.166
ಅಯ್ಯೋ!

41:41.625 --> 41:42.708
ಇಲ್ಲ! ಇಲ್ಲ!

41:42.791 --> 41:43.791
ಇಲ್ಲ!

41:44.791 --> 41:47.125
ಝೋಯಿ! ಝೋಯಿ, ಸಹಾಯ ಮಾಡು!

41:47.208 --> 41:48.166
ಅವನಿಗೆ ಗುಂಡು ಹಾರಿಸು.

41:48.250 --> 41:50.166
-ಗುಂಡು ಹಾರಿಸು, ಝೋಯಿ. ಗುಂಡು ಹಾರಿಸು!
-ಸರಿ. ಸರಿ.

41:54.583 --> 41:56.958
ಸರಿ, ಈಗಲೇ ಬಂದೂಕು ತಗೋ. ಈಗಲೇ ಬಂದೂಕು ತಗೋ.

41:57.250 --> 41:58.375
ಅಯ್ಯೋ, ದರಿದ್ರ.

41:58.458 --> 42:00.208
-ಕ್ಷಮಿಸಿ.
-ಅವನಲ್ಲಿ ಕ್ಷಮೆ ಕೇಳಬೇಡ.

42:00.291 --> 42:01.666
ನಾವು ಸತ್ತೆವು. ಪಕ್ಕಾ ಸತ್ತೆವು.

42:01.750 --> 42:02.833
ನನಗೊಂದು ಬ್ಲೇಡ್ ಕೊಡು.

42:02.916 --> 42:04.375
ಏನಾಗುತ್ತಿದೆಯೋ ನನಗೆ ಗೊತ್ತಿಲ್ಲ.

42:08.666 --> 42:09.666
ನೀನು ಹೋಗುವೆ.

42:09.750 --> 42:10.875
ಅವರನ್ನು ಕೊಲ್ಲು.

42:10.958 --> 42:12.750
-ಫೇಡಿ--
-ಇಲ್ಲ, ಇಲ್ಲ, ಇಲ್ಲ. ಸರಿ.

42:15.500 --> 42:16.541
ಬನ್ನಿ.

42:16.625 --> 42:18.541
ಇವರು ಕಂಠಮಟ್ಟ ಕುಡಿದಿದ್ದಾರೆ, ಗಟ್ಟಿಗರೂ ಅಲ್ಲ.

42:18.625 --> 42:20.416
ನಾವು ಅದ್ಭುತ ಬ್ಯಾಲೆರಿನಾಗಳು.

43:01.416 --> 43:02.666
ಇಲ್ಲ! ಬೇಡ!

43:06.958 --> 43:09.500
ಬೇಡ… ಬಿಡು… ಅಂದೆ.

44:22.208 --> 44:23.791
ಅಬ್ಬಾ ದೇವರೇ!

44:27.458 --> 44:29.291
ಆ ಕಾಲು ಬ್ಲೇಡ್ ಅದ್ಭುತವಾಗಿದೆ.

44:30.125 --> 44:31.333
ಆಕಸ್ಮಿಕ ಆದರೆ ಒಳ್ಳೆಯದೇ.

44:31.416 --> 44:33.291
ನಾನೂ ಒಂದು ಇಟ್ಟುಕೊಳ್ಳುವೆ.

44:44.000 --> 44:45.541
ಅಂದರೆ ಆ ಕಡೆಯಿಂದ ಹೋಗಲು ಆಗಲ್ಲ.

44:45.625 --> 44:47.875
ಇನ್ನೊಂದು ಸುತ್ತು ಕುಡಿಯೋಣ.

44:47.958 --> 44:49.583
-ಕೇಳಿಸಿತಾ?
-ಏನು?

44:49.666 --> 44:52.041
ಇಷ್ಟೆಲ್ಲಾ ಆದ ಮೇಲೂ
ಅವಳು ಹೇಗೆ ಸಂಭ್ರಮಿಸುತ್ತಿದ್ದಾಳೆ?

44:52.125 --> 44:53.750
ಅವರು ಮಿಸ್ ಥೋರ್ನರನ್ನು ಕೊಂದರು.

44:53.833 --> 44:55.791
ಗಮನ ಇಲ್ಲಿರಲಿ.
ಹಿಂದಿನ ಬಾಗಿಲು ಹುಡುಕಬೇಕು ನಾವು.

44:55.875 --> 44:57.666
ಇರು, ಹಿಂದಿನ ಬಾಗಿಲು ಯಾಕೆ
ಮೇಲಿನ ಮಹಡಿಗೆ ಹೋಗುತ್ತೆ?

44:57.750 --> 44:59.333
ನಾವು ಯಾಕೆ ಮೇಲಿನ ಮಹಡಿಗೆ ಹೋಗಬೇಕು?

44:59.416 --> 45:01.500
ದೇವರೇ, ತುರ್ತು ನಿರ್ಗಮನ ಏನಾದರೂ ಇರಬೇಕ--

45:01.583 --> 45:03.958
ಯಾಕೆಂದರೆ ಕ್ಲೋಯಿ ಶೌಚಕ್ಕಾಗಿ
ಮೇಲಿನ ಮಹಡಿಗೆ ಹೋದಳು.

45:04.041 --> 45:05.750
ನೀನವಳನ್ನು ಬಿಟ್ಟು ಹೋಗುವವಳಿದ್ದೆಯಾ?

45:09.958 --> 45:13.041
ದೇವರೇ. ನೀವು ಕ್ಲೋಯಿಯನ್ನು ಮರೆತೇಹೋಗಿದ್ದಿರಿ.

45:13.125 --> 45:15.916
ಸರಿ. ನಾವು ಹೋಗಿ,
ಸಹಾಯ ಸಿಕ್ಕ ಮೇಲೆ ಬಂದು ಅವಳನ್ನು ಕರೆದೊಯ್ಯೋಣ.

45:16.000 --> 45:18.291
ಇಲ್ಲ, ಅದು ತುಂಬಾ ತಡವಾಗಬಹುದು.

45:18.375 --> 45:20.958
ಅವಳು ಒಂಟಿಯಾಗಿದ್ದಾಳೆ.
ಅವಳ ಶ್ರವಣ ಸಾಧನವೂ ಹಾಳಾಗಿದೆ.

45:21.041 --> 45:24.458
ಅವಳನ್ನು ನೋಡಿಕೊಳ್ಳುವೆ ಅಂತ
ಅಪ್ಪನಿಗೆ ಹೇಳಿದ್ದೆ.

45:24.541 --> 45:26.791
ಹೂಂ, ಅದ್ಭುತವಾಗಿ
ನೋಡಿಕೊಳ್ಳುತ್ತಿದ್ದೀಯ, ಅಲ್ವಾ?

45:26.875 --> 45:29.500
ಬಾಯಿ ಮುಚ್ಚು, ಪ್ರಿನ್ಸೆಸ್.
ಯಾಕೆ ಯಾವಾಗಲೂ ಇಷ್ಟು ಸ್ವಾರ್ಥಿ ನೀನು?

45:29.583 --> 45:31.291
ನಾನು ನನ್ನ ತಂಗಿಯನ್ನು ಬಿಟ್ಟುಹೋಗಲ್ಲ.

45:31.375 --> 45:33.166
ಯಾರೂ ಯಾರನ್ನೂ ಬಿಟ್ಟುಹೋಗಲ್ಲ.

45:33.250 --> 45:34.625
ನೀನು ಹಾಗೆ ಮಾಡು ಬೇಕಿದ್ದರೆ.

45:35.875 --> 45:37.166
ನಾನು ಇಲ್ಲಿಂದ ಹೊರಟೆ.

45:37.250 --> 45:38.541
ಗ್ರೇಸ್, ಹೋಗೋಣ.

45:45.375 --> 45:47.583
ಸರಿ. ಏನೋ ಒಂದು.

45:48.125 --> 45:49.166
ನೀವೆಲ್ಲರೂ ಕೆಲಸಕ್ಕೆ ಬಾರದವರು.

45:51.166 --> 45:52.875
ಖುಷಿಯಾಗಿ ಸಾಯಿರಿ.

45:55.875 --> 45:57.166
ಬನ್ನಿ.

46:08.875 --> 46:10.500
ಈ ಮೆಟ್ಟಿಲುಗಳು ಮೇಲಕ್ಕೆ ಹೋಗುತ್ತವೆ,

46:10.583 --> 46:12.333
ನೀನು ಮೇಲಿದ್ದರೆ, ಇವು ಕೆಳಕ್ಕೆ ಬರುತ್ತವೆ.

46:13.625 --> 46:16.291
ಜೀವನದಲ್ಲಿ ಇದೇ ಮೊದಲ ಬಾರಿಗೆ
ನಿನ್ನ ಮೇಲೆ ಅಸೂಯೆ ಮೂಡುತ್ತಿದೆ.

46:16.375 --> 46:18.708
ನಿನ್ನ ನೆರೆಯವರ ಅಮಲಿನ ಮೇಲೆ ಆಸೆ ಬೇಡ.

46:32.458 --> 46:35.458
ಕೇಳಿ, ಕ್ಲೋಯಿ ಇನ್ನೂ ಇಲ್ಲಿ ಒಳಗೆ ಇರಬಹುದು.

46:41.791 --> 46:42.875
ಏನು ಮಾಡುತ್ತಿದ್ದೀರ?

46:42.958 --> 46:45.500
ಇನ್ನಷ್ಟು ಸಮಸ್ಯೆ ತರುವ ಮುನ್ನ ಕೆಳಕ್ಕೆ ಹೋಗಿ.

46:45.583 --> 46:46.791
ಹೋಗುವಂತೆ ಮಾಡು ನೋಡೋಣ.

46:49.208 --> 46:50.375
ಸಮಾಧಾನ.

46:50.458 --> 46:52.375
ಮಾತಾಡಿ ಬಗೆಹರಿಸೋಣ, ಸರಿನಾ?

46:52.458 --> 46:54.541
ನನ್ನ ತಂಗಿ ಎಲ್ಲಿ?

46:54.625 --> 46:56.083
ಆ ಕಿವುಡಿನಾ?

46:56.166 --> 46:58.541
ಹಜಾರದ ಆ ಬದಿ ಇದ್ದಾಳೆ, ಮಜಾ ಮಾಡುತ್ತಿದ್ದಾಳೆ.

46:58.625 --> 47:00.458
ಈಗ, ನನ್ನನ್ನು ಹೋಗಲು ಬಿಡಿ.

47:00.541 --> 47:02.125
ಬಿಡುತ್ತಿದ್ದೆ, ಆದರೆ…

47:02.208 --> 47:04.041
ನನಗೆ ಪ್ರತೀಕಾರದ ಹುಚ್ಚು.

47:18.458 --> 47:20.125
ಏನಾಯಿತು?

47:25.708 --> 47:27.791
ಬ್ಯಾಲೆರಿನಾಗಳು.

48:36.458 --> 48:37.416
ಹೇ.

48:40.250 --> 48:41.166
ಕೊನೆಗೂ.

48:41.250 --> 48:44.333
ನಾನು ವೈ-ಫೈ ಬಗ್ಗೆ ಮಾತಾಡಲು
ಯಾರಾದರೂ ಸಿಗುತ್ತಾರಾ ಅಂತ ಹುಡುಕುತ್ತಲೇ ಇದ್ದೆ.

48:45.541 --> 48:46.458
ಏನು?

48:46.541 --> 48:48.750
ನಿಮ್ಮ ನೆಟ್‌ವರ್ಕ್ ತುಂಬಾ ಕೆಟ್ಟದಾಗಿದೆ.

48:48.833 --> 48:51.750
ಅಂದರೆ, ನಿಜವಾಗಲೂ,
ನಾನದನ್ನು ಎಂದೋ ಸರಿಪಡಿಸುತ್ತಿದ್ದೆ.

48:51.833 --> 48:53.958
ನಾನೊಂದು ರಿಯಾಲಿಟಿ ಟಿವಿ ಶೋ ನೋಡುತ್ತಿದ್ದೇನೆ,

48:54.041 --> 48:56.291
ಒಂದು ಡೇಟಿಂಗ್ ಶೋ,
ಅದನ್ನು ನೋಡುತ್ತಿದ್ದೇನೆ, ವಿಪರ್ಯಾಸವೆಂದರೆ,

48:56.375 --> 48:58.000
ರಹಸ್ಯವಾಗಿ, ನನಗದು ಇಷ್ಟ ಆಗುತ್ತಿದೆ, ಮತ್ತು…

48:58.083 --> 48:59.875
ಇನ್ನೂ ಮೂರು, ಮೂರು ಸಂಚಿಕೆ ಹಿಂದಿದ್ದೇನೆ.

48:59.958 --> 49:01.166
ಏನು ಮಾತಾಡುತ್ತಿದ್ದೀಯ?

49:01.250 --> 49:04.333
ಡೇಟಿಂಗ್ ಶೋನಲ್ಲಿ ನಿಜವಾದ ಪ್ರೀತಿ
ಸಿಗುತ್ತೆ ಅಂತ ನಿಮಗೆ ಅನಿಸುತ್ತಾ?

49:04.416 --> 49:08.833
ಯಾಕೆಂದರೆ ಒಂದು ಬಾರಿ, ನಾನು ಶ್ರೀಮಂತರು
ಹೆಸರು ಗಳಿಸಲು ಹೋಗುವ ಡೈವ್ ಬಾರ್‌ಗೆ ಹೋಗಿದ್ದೆ,

49:08.916 --> 49:10.916
ಅಲ್ಲಿ ಒಬ್ಬ ನಾಟಿ ವೈದ್ಯೆ ಸಿಕ್ಕಿದ್ದಳು ಮತ್ತು…

49:12.125 --> 49:14.375
ಅದು, ಅವಳು ನನಗೆ ಹೃದಯದಲ್ಲಿ
ಏನೋ ತೊಂದರೆ ಇದೆ ಅಂತ ಹೇಳಿದ್ದಳು.

49:15.583 --> 49:16.500
ಗೊತ್ತು.

49:16.583 --> 49:19.625
ಪ್ರೀತಿಯ ವಿಷಯಕ್ಕೆ ಬಂದಾಗ,

49:20.791 --> 49:22.458
ನನ್ನ ಹೃದಯದಲ್ಲಿ ದೊಡ್ಡ ತೂತು ಇದೆ ಅಂತ ಹೇಳಿದಳು,

49:23.208 --> 49:26.541
ಹಾಗಾಗಿ ಈಗ ಅದರ ಬಗ್ಗೆ ಮಾತಾಡಲು

49:26.625 --> 49:28.125
ನಾನು ತುಂಬಾ ಭಾವಹೀನಳಾಗಿ ಹೋಗಿರುವೆ.

49:28.208 --> 49:31.291
ಹಾಗಾಗಿ, ನಾನು ಮತ್ತೆ ಕೆಳಗೆ ಹೋಗುವೆ,
ಮತ್ತು ನೀನು ವೈ-ಫೈ ನೋಡಿಕೋ.

49:32.166 --> 49:33.333
ಸರಿನಾ?

49:36.333 --> 49:37.416
ಧನ್ಯವಾದ.

50:24.291 --> 50:25.958
ಕ್ಲೋಯಿ. ದೇವರ ದಯೆ.

50:28.000 --> 50:29.125
ದೇವರು ಕರುಣಾಮಯಿ.

50:32.666 --> 50:33.875
ಅಬ್ಬಬ್ಬಾ.

50:34.708 --> 50:35.791
ವಾಹ್…

50:36.791 --> 50:38.166
ಇವಳು ನಿಜಕ್ಕೂ ಹುಚ್ಚಿ.

50:38.791 --> 50:39.958
ನೀನು ಆರಾಮಿದ್ದೀಯಾ?

50:40.125 --> 50:41.791
ಹೂಂ, ಯಾಕಿರಲ್ಲ?

50:42.708 --> 50:45.041
ನಿನ್ನ ಬಟ್ಟೆಗಳಿಗೆ ಏನಾಯಿತು?

50:45.625 --> 50:47.416
ಅದು ರಕ್ತನಾ?

50:48.208 --> 50:49.416
ಅದು ಮುತ್ತಿನ ಗುರುತಾ?

50:50.625 --> 50:51.708
ಝೋಯಿ. ಬಾಯಿ ಮುಚ್ಚು!

50:51.875 --> 50:52.708
ಸಾಕು, ನಿಲ್ಲಿಸು!

50:55.000 --> 50:56.000
ನಿನ್ನ ಕೆಲಸ ನೋಡಿಕೋ.

50:56.083 --> 50:57.000
ಅದ್ಭುತ.

50:57.750 --> 50:58.666
ಅದನ್ನು ವಾಪಸ್ ಇಡು.

50:59.375 --> 51:00.375
ಝೋಯಿ?

51:01.833 --> 51:03.166
ನಾವು ಇಲ್ಲಿಂದ ಹೋಗಬೇಕು.

51:03.625 --> 51:04.458
ಸ್ವಲ್ಪ ಹೊತ್ತು ಕಾಯಬಹುದಾ?

51:04.958 --> 51:07.666
ಒಬ್ಬ ಮುದ್ದು ಹುಡುಗ ನನಗೆ ಹಚ್ಚೆ ಹಾಕುವೆ ಅಂದ.

51:09.625 --> 51:12.375
ಹುಡುಗ ಹಚ್ಚೆ ಹಾಕುತ್ತಾನೆ
ಅಂತ ಕಾಯುತ್ತಿದ್ದಾಳಂತೆ.

51:13.708 --> 51:14.708
ಏನು ಮಾಡಲಿ?

51:15.375 --> 51:17.333
ನಮ್ಮತ್ತ ನೋಡಬೇಡ. ಅವಳು ನಿನ್ನ ತಂಗಿ.

51:24.291 --> 51:25.708
ಯಾರೋ ಬರುತ್ತಿರೋ ಸದ್ದು. ಓಡಿ.

51:39.750 --> 51:41.166
ಸದ್ದು ಮಾಡಬೇಡಿ.

51:59.916 --> 52:00.833
ನೀನಾ?

52:03.708 --> 52:05.041
ನೀನು ಹೋದೆ ಅಂದುಕೊಂಡೆ.

52:06.166 --> 52:07.583
ಒರಟಾಗಿ ಮಾತಾಡಬೇಡ. ಅವಳು ಅಳುತ್ತಿದ್ದಾಳೆ.

52:07.666 --> 52:08.750
ಇಲ್ಲ, ಅಳುತ್ತಿಲ್ಲ.

52:08.833 --> 52:11.583
ನನಗೆ ಅಲರ್ಜಿ ಇದೆ,
ಮತ್ತು ಇಲ್ಲಿ ತುಂಬಾ ಧೂಳು ಇದೆ.

52:11.666 --> 52:13.791
ತಗೋ. ಇದು ನಿನ್ನ ಅಮಲಿಳಿಸುತ್ತೆ.

52:19.791 --> 52:21.333
ಒಂಟಿಯಾಗಿ ತುಂಬಾ ದೂರ ಹೋಗಲಿಲ್ಲ ನೀನು.

52:21.416 --> 52:23.166
ನಿಮ್ಮ ಬಗ್ಗೆ ಪಾಪ ಅನಿಸಿತು, ವಾಪಸ್ ಬಂದೆ.

52:23.250 --> 52:25.041
ಹೌದು, ಹೌದು.

52:25.125 --> 52:27.250
ಚಳಿಯಲ್ಲಿ ಹೆಪ್ಪುಗಟ್ಟಿರುತ್ತೀಯ,
ಅದಕ್ಕೇ ಇಲ್ಲಿ ಅಡಗಿ ಕೂತಿದ್ದೀಯ.

52:29.375 --> 52:32.375
ಅಸಲಿಗೆ, ಅವರು ಮಿಸ್ ಥೋರ್ನ ಅವರ ದೇಹಕ್ಕೆ
ಏನು ಮಾಡುತ್ತಿದ್ದರು ಅಂತ ನೋಡಿದೆ.

52:32.458 --> 52:35.166
ಅವರ ಬೆರಳ ತುದಿಗಳನ್ನು ಕತ್ತರಿಸಿ,
ಕಣ್ಣುಗುಡ್ಡೆಗಳನ್ನು ಕೀಳುತ್ತಿದ್ದಾರೆ.

52:35.250 --> 52:37.000
ದೇವರೇ.

52:38.083 --> 52:39.375
ಮಿಸ್ ಥೋರ್ನಗೆ ಏನಾಯಿತು?

52:40.083 --> 52:41.750
ಅವರು ಸತ್ತು ಹೋದರು.

52:41.958 --> 52:43.000
ತಮಾಷೆ ಮಾಡಬೇಡ.

52:43.625 --> 52:44.750
ಹಾಗೆ ಯಾಕೆ ಹೇಳುತ್ತಿದ್ದೀಯ?

52:44.958 --> 52:48.291
ಒಮ್ಮೆಯಾದರೂ ನನ್ನ ಮಾತು ಕೇಳುವೆಯಾ?

52:55.875 --> 52:57.416
ಮಹನೀಯರೇ…

52:58.000 --> 53:03.125
ನಾನು ನಿಮಗೆ, ನಿಮ್ಮ ಆಸೆಗಳಿಗೆ
ಒಂದು ಸುರಕ್ಷಿತ ಅಡ್ಡಾ ನೀಡಿದ್ದೇನೆ.

53:03.208 --> 53:04.791
ಈಗ ಬದಲಿಗೆ ಒಂದು ಉಪಕಾರ ಕೇಳುವೆ.

53:05.500 --> 53:09.958
ಈ ಮನೆಯಲ್ಲಿ ನಾಲ್ಕು ಪುಟ್ಟ
ತುಂಟ ಹುಡುಗಿಯರು ಬಚ್ಚಿಟ್ಟುಕೊಂಡಿದ್ದಾರೆ.

53:10.041 --> 53:12.875
ಅವರನ್ನು ಬೇಟೆಯಾಡಿ, ಹುಡುಕಿ,

53:12.958 --> 53:14.750
ಮತ್ತು ಅವರನ್ನು ಮುಗಿಸಿ.

53:20.541 --> 53:21.833
ನೀನು ಬರೋದು ತಡವಾಯಿತು.

53:23.333 --> 53:25.166
ನನ್ನ ಹುಡುಗರು ಆ ಕೆಲಸ ಮುಗಿಸಿದ್ದಾರೆ.

53:26.500 --> 53:29.541
ನಿನ್ನ ಹುಡುಗರೆಲ್ಲಾ ಸತ್ತಿದ್ದಾರೆ.

53:29.625 --> 53:32.791
ನಿನ್ನ ಅಪ್ಪ ಇನ್ನೂ ಮೈಲುಗಟ್ಟಲೆ ದೂರ ಇದ್ದಾನೆ,

53:32.875 --> 53:34.791
ಮತ್ತು ನೀನು ಈಗ ಒಬ್ಬಂಟಿ,

53:35.458 --> 53:36.791
ಇಲಿ ಮರಿ.

53:38.416 --> 53:39.458
ಹೇ, ಅದನ್ನು ಕದ್ದಿದ್ದು ನಾನು.

53:39.541 --> 53:41.416
ನನ್ನ ತಂದೆಯ ಕ್ಲಬ್‌ನಲ್ಲಿ
ಗುಂಡು ಹೊಡೆಯಲು ಕಲಿಸುತ್ತಾರೆ.

53:41.500 --> 53:42.791
ನನಗಿದನ್ನು ಚಲಾಯಿಸಲು ಗೊತ್ತು.

53:42.875 --> 53:44.708
ಕ್ಷಮಿಸು. ನೋಡಿದಾಗ ನಂಬುವೆ.

53:48.125 --> 53:49.166
ಸರಿ ಹಾಗಾದರೆ.

53:49.708 --> 53:50.916
ಏನಿದು?

53:55.666 --> 53:57.458
ದೇವರೇ! ನೀನು ಫೋನ್ ಹುಡುಕಿದೆ.

53:58.166 --> 53:59.291
ದೇವರೇ.

53:59.375 --> 54:01.125
ನಾನು ಪೊಲೀಸರಿಗೆ ಕರೆ ಮಾಡುವೆ.

54:01.208 --> 54:02.125
ಜಾಗ ಬಿಡಿ.

54:02.208 --> 54:03.833
ಆದಷ್ಟು ಬೇಗ ನಮ್ಮನ್ನು ಇಲ್ಲಿಂದ ಪಾರಾಗಿಸುವೆ.

54:06.333 --> 54:08.916
ಈ ಪ್ರಾಚೀನ ವಸ್ತುವನ್ನು
ಬಳಸೋದು ಹೇಗೆ ಅಂತ ಯಾರಿಗಾದರೂ ಗೊತ್ತಾ?

54:09.500 --> 54:12.083
ಆ ಚಕ್ರವನ್ನು ನಿನ್ನ ಬೆರಳಲ್ಲಿ ತಿರುಗಿಸಿ
ಡಯಲ್ ಮಾಡಬೇಕು, ಪೆದ್ದಿ.

54:12.875 --> 54:14.500
ಸರಿ. ಹೂಂ.

54:17.666 --> 54:18.875
ಅಬ್ಬಾ.

54:24.541 --> 54:27.500
ಕರೆ ಮಾಡಲು ಇದು ಅತ್ಯಂತ ಅದಕ್ಷ ವಿಧಾನ.

54:27.583 --> 54:29.125
ನೂರು ವರ್ಷಗಳೇ ಹಿಡಿಯುತ್ತಿದೆ.

54:31.125 --> 54:32.416
ಅಪ್ಪ, ಇಲ್ಲ.

54:33.041 --> 54:34.500
ನಾನು ತುಂಬಾ ಕುಡಿದಿಲ್ಲ.

54:38.833 --> 54:40.875
ಇಲ್ಲ, ವ್ಲಾಡ್ ನನ್ನನ್ನು ಮನೆಗೆ ಕರೆತರಲು ಆಗಲ್ಲ.

54:40.958 --> 54:42.125
ಅವನು ಸತ್ತಿದ್ದಾನೆ.

54:44.125 --> 54:45.125
ಹೌದು.

54:45.958 --> 54:47.041
ಫೇಡಿ ಕೂಡ.

54:49.916 --> 54:51.125
ನಾನು ಟೆರೆಮೋಕ್‌ನಲ್ಲಿದ್ದೀನಿ.

54:54.125 --> 54:55.375
ಹೂಂ, ಅರ್ಥವಾಯಿತು.

54:56.916 --> 54:58.208
ಧನ್ಯವಾದ, ಅಪ್ಪ.

54:59.083 --> 55:01.416
ಧನ್ಯವಾದ. ಧನ್ಯವಾದ.

55:08.750 --> 55:09.666
ಡೆವೋರಾ.

55:12.875 --> 55:14.791
ನನ್ನ ಅಪ್ಪ ಇಲ್ಲಿಗೆ ಬರುತ್ತಿದ್ದಾರೆ.

55:15.666 --> 55:17.083
ಸುಳ್ಳು ಹೇಳುತ್ತಿದ್ದೀಯ.

55:17.166 --> 55:19.625
ಲೋಥರ್ ಮಾರ್ಕೋವಿಚ್ ಸತ್ತರೂ

55:19.708 --> 55:21.041
ಟೆರೆಮೋಕ್ ಇನ್ನ್‌ಗೆ ಬರಲ್ಲ.

55:21.125 --> 55:22.166
ಬರುತ್ತಿದ್ದಾರೆ.

55:23.125 --> 55:25.000
ತುಂಬಾ ಅಸಮಾಧಾನಗೊಂಡಿದ್ದಾರೆ.

55:26.500 --> 55:28.250
ನೀನು ನನ್ನ ಜೊತೆ ಆಟವಾಡಬಾರದಿತ್ತು.

55:28.666 --> 55:30.291
ಈಗ ನೀನು ಅವರಿಗೆ ಉತ್ತರಿಸಬೇಕು.

55:33.541 --> 55:36.041
ನಾನದಕ್ಕೆ ಸಿದ್ಧಳಾಗಬೇಕು ಅನಿಸುತ್ತೆ.

56:15.500 --> 56:17.416
ಆ ಕಡೆ ಹೋಗಿ.
ಅವರು ಮೆಟ್ಟಿಲು ಏರಿ ಹೋಗುತ್ತಿದ್ದರು.

56:18.625 --> 56:19.666
ಅವರನ್ನು ಹುಡುಕಿ!

56:35.458 --> 56:37.583
ಯಾರಾದರೂ ನಿನ್ನ ಮೇಲೆ ದಾಳಿ ಮಾಡಿದರೆ,

56:37.791 --> 56:39.500
ಗೋಟಿಗೆ ಒದ್ದುಬಿಡು.

56:40.000 --> 56:43.541
-ಐ ಲವ್ ಯು.
-ನಾನೂ ಕೂಡ.

57:15.166 --> 57:17.333
ಎಲ್ಲರೂ ಬಚ್ಚಿಟ್ಟುಕೊಳ್ಳಿ. ಬಚ್ಚಿಟ್ಟುಕೊಳ್ಳಿ.

57:44.125 --> 57:45.708
ಅದ್ಭುತ ರುಚಿ, ವಾಹ್.

57:55.708 --> 57:58.625
ನೀವು ಕರೆ ಮಾಡಿದ ಸಂಖ್ಯೆ ಕಾರ್ಯನಿರತವಾಗಿದೆ.
ದಯವಿಟ್ಟು ನಿರೀಕ್ಷಿಸಿ.

58:09.416 --> 58:11.791
-ಪೊಲೀಸ್.
-ಸಹಾಯ ಬೇಕು! ಟೆರೆಮೋಕ್ ಇನ್ನ್‌ನಲ್ಲಿದ್ದೇವೆ.

58:13.500 --> 58:15.875
ಹಲೋ? ಹಲೋ? ನಮಗೆ ಸಹಾಯ ಬೇಕು.

58:27.250 --> 58:28.416
ಪೆದ್ದಿ.

58:34.791 --> 58:36.166
ಹೋಗಿ, ಹೋಗಿ, ಹೋಗಿ.

58:43.666 --> 58:45.166
-ಕ್ಲೋಯಿ.
-ಬನ್ನಿ, ಬನ್ನಿ, ಬನ್ನಿ!

58:45.250 --> 58:47.375
-ಅಗೋ ಅಲ್ಲಿ!
-ಇನ್ನಷ್ಟು ಬರುತ್ತಿದ್ದಾರೆ. ಹೋಗಿ, ಹೋಗಿ.

58:49.958 --> 58:51.625
ಇಲ್ಲೂ ಇನ್ನಷ್ಟು ಬರುತ್ತಿದ್ದಾರೆ. ಈ ಕಡೆ.

58:53.625 --> 58:54.458
ಹೋಗಿ.

59:02.875 --> 59:04.791
ನಾವು ಇಲ್ಲಿಗೇಕೆ ವಾಪಸ್ ಬಂದೆವು?

59:11.916 --> 59:14.250
ಸರಿ, ಸರಿ. ಹೇ, ಹೇ, ಹೇ.

59:14.333 --> 59:17.958
ನಾನು, ನನ್ನ ಗೆಳತಿಯರು,
ಇಲ್ಲಿಂದ ಹೋಗುತ್ತಿದ್ದೇವೆ ಅಷ್ಟೇ, ಸರಿನಾ?

59:18.041 --> 59:20.208
ಯಾರಿಗೂ ನೋವಾಗಬೇಕಿಲ್ಲ.

59:20.291 --> 59:22.958
ಎಲ್ಲರೂ ಬಾಗಿಲ ಬಳಿ ಹೋಗಿ. ಬಾಗಿಲು. ಹೋಗಿ, ಹೋಗಿ.

59:26.333 --> 59:29.166
ನಾವು ಬದುಕುಳಿಯಬೇಕೆಂದರೆ,
ಒಂದು ತಂಡವಾಗಿ ಕೆಲಸ ಮಾಡಬೇಕು.

59:35.625 --> 59:37.833
ಹೊರಗೆ ಹೋಗಲು ಏಕೈಕ ಮಾರ್ಗ ಒಟ್ಟಿಗೆ ಹೋಗೋದು.

59:39.958 --> 59:41.166
ಮೊದಲ ಸ್ಥಾನಗಳು,

59:41.250 --> 59:42.750
ಆರು, ಏಳು, ಎಂಟು.

01:00:04.125 --> 01:00:05.333
ಬುರ್ರಿ.

01:01:00.500 --> 01:01:01.625
ಜೋಡಿಯಾಗಿ?

01:01:01.708 --> 01:01:02.916
ಖಂಡಿತ.

01:01:08.583 --> 01:01:09.916
ಒಟ್ಟಿಗೆ!

01:01:11.458 --> 01:01:13.125
-ಪೆಟ್ಟಾಗಿದೆಯಾ?
-ಆರಾಮಿದ್ದೇನೆ.

01:01:15.416 --> 01:01:16.583
ಬೇರೆಯಾಗಿ!

01:02:40.083 --> 01:02:42.375
ನೀನು ಇನ್ನು ಮುದ್ದು ಅಲ್ಲ.

01:02:54.375 --> 01:02:55.291
ಛೇ.

01:02:56.416 --> 01:02:57.875
ಬಂದೂಕು! ಕ್ಲೋಯಿ!

01:03:00.208 --> 01:03:01.625
-ಬಂದೂಕು!
-ಛೇ!

01:04:01.125 --> 01:04:03.291
ಸರಿನಾ? ಸರಿ.

01:04:04.750 --> 01:04:07.291
ಅಲ್ಲಿ. ನಾವು ಆ ಕಿಟಕಿ ದಾಟಿ ಹೋಗಬಹುದು. ಬನ್ನಿ.

01:04:07.375 --> 01:04:10.000
ಸರಿ, ಹೋಗೋಣ. ಬನ್ನಿ.

01:04:22.416 --> 01:04:23.458
ಮೂರ್ಖ!

01:04:23.541 --> 01:04:26.000
ನನಗೆ ಬಂದೂಕು ಕೊಡು. ಬೇಗ. ಬಂದೂಕು.

01:04:27.958 --> 01:04:28.916
ಹೋಗು. ತಗೋ. ತಗೋ.

01:04:29.000 --> 01:04:31.708
ಹೋಗು! ಹೋಗು, ಗ್ರೇಸ್, ಹೋಗು. ನಡಿ.

01:04:39.458 --> 01:04:40.458
ಮತ್ತೆ ಬಂದೆಯಾ?

01:04:59.791 --> 01:05:02.625
ಹೋಗುತ್ತಿರು, ಸರಿನಾ?
ನಾನು ಹಿಂದೆಯೇ ಬರುವೆ. ಹೋಗು.

01:05:04.625 --> 01:05:05.958
ನಾನು ನಿನಗಾಗಿ ಕಾಯುವೆ.

01:05:06.750 --> 01:05:07.833
ಬಾ.

01:05:12.916 --> 01:05:14.333
ಮೆಚ್ಚಿದೆ.

01:05:16.416 --> 01:05:18.291
ಅದ್ಭುತ, ಹುಡುಗಿ.

01:05:34.875 --> 01:05:36.208
ನಿನ್ನ ಬಂದೂಕಲ್ಲಿ ಗುಂಡಿಲ್ಲ.

01:05:36.291 --> 01:05:37.958
ನಿನ್ನ ಬಳಿ ಯಾವುದೇ ಆಯ್ಕೆ ಉಳಿದಿಲ್ಲ.

01:05:42.166 --> 01:05:43.666
ನಾನು ಹೇಳಲಿಲ್ವಾ?

01:05:44.333 --> 01:05:45.625
ನಕಲಿ ಕಾಲು.

01:05:56.125 --> 01:05:57.583
ಈಗ, ಮಜಾ ಬರುತ್ತೆ.

01:06:00.083 --> 01:06:02.750
ಗೊತ್ತಾ, ನನ್ನ ಈ ಕಾಲು ನಿನ್ನ ಅಪ್ಪನ ದಯೆ.

01:06:04.291 --> 01:06:06.250
ಏನು? ನನ್ನ ಅಪ್ಪನಾ?

01:06:09.375 --> 01:06:11.208
ಅಯ್ಯೋ, ಪಾಪಿ.

01:06:11.291 --> 01:06:12.291
ಇದು ಇಲ್ಲಿಗೆ ಸಾಕು.

01:06:12.375 --> 01:06:15.875
ನಿನ್ನ ಅಪ್ಪ ಬಂದ ಕೂಡಲೇ
ನೀನು ಅವನ ಬಳಿ ಓಡಿ ಹೋಗೋದು ಬೇಡ.

01:06:15.958 --> 01:06:17.458
ನೋಡು,

01:06:17.541 --> 01:06:20.125
ನನಗೆ ಅವನನ್ನು ನೋಡಬೇಕು.

01:06:28.083 --> 01:06:30.250
ನೀನು ಹುಚ್ಚಿ, ಡೆವೋರಾ.

01:06:32.291 --> 01:06:34.541
ನಮ್ಮಪ್ಪ ನಿನ್ನನ್ನು ಕೊಲ್ಲುತ್ತಾನೆ.

01:06:43.291 --> 01:06:44.416
ದೇವರೇ…

01:06:44.500 --> 01:06:47.166
ಬಾ, ಬೋನ್ಸ್. ಎಲ್ಲಿದ್ದೀಯಾ?

01:06:47.250 --> 01:06:49.791
ಗಾಜು ಗಾಯ ಮಾಡಿತು ಅನಿಸುತ್ತೆ ನನಗೆ.

01:06:49.875 --> 01:06:51.625
ಹೇಗೆ ಅವಳನ್ನು ಬಿಟ್ಟು ಬಂದೆ?

01:06:52.750 --> 01:06:54.291
ಅವಳು ನನ್ನ ಹಿಂದೆಯೇ ಇದ್ದಳು.

01:06:54.375 --> 01:06:55.750
ಏಳು.

01:07:00.208 --> 01:07:02.708
ಬೋನ್ಸ್ ಕಥೆ ಏನು?

01:07:03.333 --> 01:07:04.541
ಸಮಾಧಾನ.

01:07:04.625 --> 01:07:05.750
ನೀವು ಬಚ್ಚಿಟ್ಟುಕೊಳ್ಳಿ,

01:07:05.833 --> 01:07:07.833
ನಾನವಳನ್ನು ಉಳಿಸುವೆ.

01:07:11.416 --> 01:07:13.958
ನಿನ್ನ ಗೆಳತಿಯರು ನಿನ್ನನ್ನು
ಸಾವಿನ ದವಡೆಯಲ್ಲಿ ಬಿಟ್ಟುಹೋದರು.

01:07:14.500 --> 01:07:17.000
ಇಲ್ಲಿ ಬೆಂಬಲ ನೀಡುವವರು ಯಾರೂ ಇಲ್ಲ.

01:07:19.541 --> 01:07:20.500
ಗೊತ್ತಾ,

01:07:20.583 --> 01:07:23.958
ನನ್ನ ಮೊದಲ ಆಡಿಷನ್‌ಗೆ
ನಾನು ಒಂಟಿಯಾಗಿ ಹೋಗಿದ್ದೆ.

01:07:24.041 --> 01:07:25.333
ನನಗಾಗ ಎಂಟು ವರ್ಷ.

01:07:26.333 --> 01:07:28.750
ನಿನ್ನಂತೆಯೇ, ಭಯವನ್ನು ಮೆಟ್ಟಿದವಳು ನಾನು.

01:07:28.833 --> 01:07:30.333
ನಾವು ಒಂದೇ ಅಲ್ಲ.

01:07:30.416 --> 01:07:34.791
ನನ್ನ ಚೊಚ್ಚಲ ಪಾತ್ರ
ಶುಗರ್ ಪ್ಲಂ ಫೇರಿಯದ್ದಾಗಿತ್ತು.

01:07:37.416 --> 01:07:39.583
ಆದರೆ ನಾನು ನರ್ತಿಸಿದೆನಾ?

01:07:40.750 --> 01:07:41.833
ಇಲ್ಲ.

01:07:44.958 --> 01:07:48.625
ನನ್ನ ಅಪ್ಪ ತಪ್ಪು ಮನುಷ್ಯನಿಂದ ಸಾಲ ಪಡೆದಿದ್ದ.

01:07:48.708 --> 01:07:51.625
ಹೆಚ್ಚೆಂದರೆ ತನ್ನನ್ನು ಅವನು
ಕೊಲ್ಲಬಹುದು ಅಂದುಕೊಂಡಿದ್ದ, ಆದರೆ…

01:07:52.750 --> 01:07:56.166
ಅವನು ನನ್ನಪ್ಪ ಅಂದುಕೊಂಡದ್ದಕ್ಕಿಂತ
ಹೆಚ್ಚು ಕ್ರೂರಿಯಾಗಿದ್ದ.

01:07:57.625 --> 01:07:59.416
ಅಪ್ಪ ಸಾಲ ತೀರಿಸದಿದ್ದಾಗ,

01:07:59.833 --> 01:08:01.208
ಮಾರ್ಕೋವಿಚ್…

01:08:02.375 --> 01:08:05.125
ಅಪ್ಪನ ಕಾಲು ಕಿತ್ತುಕೊಳ್ಳಲಿಲ್ಲ.

01:08:06.333 --> 01:08:07.750
ನನ್ನ ಕಾಲು ಕಿತ್ತುಕೊಂಡ.

01:08:09.166 --> 01:08:11.583
ನನಗೆ ಮತ್ತೆಂದೂ ನರ್ತಿಸಲು ಆಗಲಿಲ್ಲ.

01:08:14.291 --> 01:08:16.375
ಒಂದು ದಿನ ನನಗೆ ಅವಕಾಶ ಸಿಗುತ್ತೆ
ಎಂಬ ಭರವಸೆಯಲ್ಲಿ

01:08:16.458 --> 01:08:19.916
ನಾನು ಲೋಥರ್‌ನ ಮಗನನ್ನು ಹತ್ತಿರ ಇಟ್ಟುಕೊಂಡೆ.

01:08:41.208 --> 01:08:45.166
ಒಂದು ಕೊನೆಯ ನೃತ್ಯ.

01:09:53.250 --> 01:09:55.250
"ಮೇಕೆಯಾಗುವುದು."

01:09:57.666 --> 01:09:58.958
ಅಂದರೆ…

01:10:02.708 --> 01:10:05.416
ನಿನ್ನ ಒದ್ದಾಟ ತಮಾಷೆಯಾಗಿದೆ.

01:10:08.541 --> 01:10:11.333
ಕೋಪಗೊಂಡ ಪುಟ್ಟ ಮೇಕೆಯಂತೆ.

01:10:16.500 --> 01:10:18.166
ದಯವಿಟ್ಟು ಇರು. ನಿಲ್ಲಿಸು!

01:10:20.875 --> 01:10:21.958
ನನ್ನಿಂದ ದೂರ ಇರು!

01:10:22.500 --> 01:10:23.666
ನೋಡಿಲ್ಲಿ.

01:10:25.708 --> 01:10:26.833
ಬೇಡ!

01:10:26.916 --> 01:10:29.125
ನಿನ್ನನ್ನು ಹೆಚ್ಚು ಆರಾಮದಾಯಕವಾಗಿಸುವೆ.

01:10:29.208 --> 01:10:31.083
ನನ್ನಿಂದ ದೂರ ಇರು!

01:10:31.750 --> 01:10:33.000
ಇಲ್ಲ!

01:10:34.708 --> 01:10:35.833
ಬಿಡು! ಬಿಡು! ಬಿಡು ನನ್ನನ್ನ!

01:10:41.875 --> 01:10:42.916
ಇಲ್ಲ!

01:10:43.000 --> 01:10:45.083
ಬೇಡ! ಬೇಡ! ಇಲ್ಲ!

01:10:45.166 --> 01:10:46.791
ಬೇಡ, ಬೇಡ, ಬೇಡ!

01:10:47.458 --> 01:10:49.916
ಇಲ್ಲ! ಬೇಡ! ಬೇಡ! ಬೇಡ! ಇಲ್ಲ!

01:10:57.333 --> 01:10:58.625
ತಮಾಷೆ ಮಾಡುತ್ತಿದ್ದೀಯಾ?

01:10:59.291 --> 01:11:01.250
ನನ್ನ ಕಾಲಿನ ಉಗುರು ಯಾವಾಗಲೂ ಮುರಿಯುತ್ತಿರುತ್ತೆ.

01:11:01.666 --> 01:11:03.208
ಆಗ ನಾನೇನು ಮಾಡುತ್ತೇನೆ ಗೊತ್ತಾ?

01:11:03.708 --> 01:11:05.208
ಅವನ್ನು ಕಿತ್ತುಬಿಡುತ್ತೇನೆ.

01:11:05.291 --> 01:11:07.541
ಮುಖದ ಮೇಲೆ ನಗು ಹೊತ್ತು ನೃತ್ಯ ಮಾಡುತ್ತೇನೆ.

01:11:08.375 --> 01:11:10.708
ಯಾಕೆಂದರೆ ನಾನೊಬ್ಬಳು ಬ್ಯಾಲೆರಿನಾ!

01:11:22.500 --> 01:11:23.541
ಬೋನ್ಸ್?

01:11:24.750 --> 01:11:26.041
ದೇವರೇ.

01:11:28.541 --> 01:11:30.416
ಬೋನ್ಸ್? ಇದು ನಾನು. ನಾನು ಬಂದೆ. ನಾನು ಬಂದೆ.

01:11:30.500 --> 01:11:36.250
ಕಾಪಾಡು. ದಯವಿಟ್ಟು. ಡೆವೋರಾ ಹುಚ್ಚಿ!
ನನ್ನನ್ನು ಇಲ್ಲಿ ಕೂಡಿಹಾಕಿದ್ದಾಳೆ!

01:11:36.333 --> 01:11:39.083
-ಇಲ್ಲ! ಬೇಡ, ಬೇಡ, ಬೇಡ!
-ಸರಿ. ಹೋಗುತ್ತಿರು.

01:11:39.166 --> 01:11:41.208
-ದಯವಿಟ್ಟು, ಬೇಡ!
-ಹೋಗುತ್ತಿರು.

01:12:07.041 --> 01:12:09.208
ಇದು ಮೊದಲು ಎಲ್ಲಿತ್ತು?

01:12:32.291 --> 01:12:33.791
ಹಲೋ, ಲೋಥರ್.

01:12:34.458 --> 01:12:37.083
ಪಾಶ ಫೋನನ್ನು ನೀನು ಯಾಕೆ ಉತ್ತರಿಸುತ್ತಿದ್ದೀಯ?

01:12:38.750 --> 01:12:40.875
ನನ್ನ ಮಗನಿಗೆ ಫೋನ್ ಕೊಡು.

01:12:40.958 --> 01:12:43.541
ನಿನಗೆ ನನ್ನ ನೆನಪಿಲ್ಲ,
ಅಲ್ವಾ, ಮಿ. ಮಾರ್ಕೋವಿಚ್?

01:12:44.958 --> 01:12:47.000
ಮತ್ತೆ ನಿನ್ನ ಮಗನನ್ನು ನೋಡಬೇಕೆಂದರೆ,

01:12:47.083 --> 01:12:48.833
ಒಳಗೆ ಬಂದು ಕರೆದುಕೊಂಡು ಹೋಗು.

01:13:10.333 --> 01:13:13.166
ಇಲ್ಲ! ಬೇಡ! ಬೇಡ! ಬೇಡ!

01:13:13.250 --> 01:13:14.791
ದಯವಿಟ್ಟು, ನಿಲ್ಲಿಸು!

01:13:14.875 --> 01:13:16.458
ಬೇಡ, ಬೇಡ, ಬೇಡ!

01:13:27.166 --> 01:13:28.333
ಬಿದ್ದಿರು.

01:13:30.166 --> 01:13:31.291
ಜೋಡಿಯಾಗಿ ನರ್ತಿಸೋಣಾ?

01:13:32.875 --> 01:13:34.250
ನೀನು ಕೇಳೋದೇ ಇಲ್ಲವೇನೋ ಅಂದುಕೊಂಡೆ.

01:13:44.166 --> 01:13:45.750
ಬೇವರ್ಸಿ!

01:13:55.083 --> 01:13:57.875
ಎಷ್ಟೊಂದು ಬಂದೂಕುಗಳು.

01:13:58.791 --> 01:14:02.291
ನಾವು ಪ್ರಿನ್ಸೆಸ್
ಮತ್ತು ಬೋನ್ಸ್‌ಗೆ ಎಚ್ಚರಿಕೆ ನೀಡಬೇಕು.

01:14:06.791 --> 01:14:08.916
ಹಾಗಾದರೆ ನಾವು

01:14:09.625 --> 01:14:11.250
ಒಳಗೆ ಹೋಗಬೇಕು ಅನಿಸುತ್ತೆ.

01:14:33.958 --> 01:14:35.083
ಸಿ-4?

01:14:36.291 --> 01:14:38.166
ನನಗೆ ಕನಿಷ್ಟ 16 ಮಂದಿ ಕಾಣುತ್ತಿದ್ದಾರೆ.

01:14:38.250 --> 01:14:40.750
ಇಲ್ಲ, ಅದು ಒಂದು ರೀತಿಯ ಸ್ಫೋಟಕ.

01:14:40.833 --> 01:14:43.166
ಈ ಜಾಗ ತುಂಬಾ ಸ್ಫೋಟಕ ಇಟ್ಟಿದ್ದಾರೆ.

01:14:43.250 --> 01:14:44.625
ಮಾತು ಬಿಟ್ಟು ಓಡಿ!

01:14:54.458 --> 01:14:56.625
ಕೇಳಿ! ಈ ಜಾಗ ತುಂಬಾ…

01:14:56.708 --> 01:14:58.875
-ಏನು?
-ಸ್ಫೋಟಕಗಳನ್ನು…

01:14:58.958 --> 01:14:59.916
ಈ ಜಾಗ ಸ್ಫೋಟಿಸಲಿದೆ!

01:15:00.125 --> 01:15:02.375
ಏನು? ನೀವು ಯಾಕೆ ವಾಪಸ್ ಬಂದಿರಿ?

01:15:02.458 --> 01:15:04.875
ನಿಮ್ಮನ್ನು ಕಾಪಾಡಲು.

01:15:09.916 --> 01:15:12.208
ಇಲ್ಲ, ಇಲ್ಲ, ಇಲ್ಲ.

01:15:13.500 --> 01:15:16.125
ಇಲ್ಲ, ಇಲ್ಲ. ಇಲ್ಲ. ಇಲ್ಲ.

01:15:34.041 --> 01:15:35.291
ಇಲ್ಲ.

01:15:35.375 --> 01:15:37.916
ಆ ಬೇವರ್ಸಿಯನ್ನು ನನಗೆ ಕೊಡಿ!

01:15:38.000 --> 01:15:40.333
ಇಲ್ಲ. ಅವಳನ್ನು ನನ್ನಿಂದ ದೂರ ಇಡಿ.

01:15:42.375 --> 01:15:44.791
ಡೆವೋರಾ ಕಾಸಿಮೇರ್,

01:15:44.875 --> 01:15:47.750
ನಾವೂ ನಿಮ್ಮಂತೆಯೇ. ನಾವು ಬ್ಯಾಲೆರಿನಾಗಳು!

01:15:47.833 --> 01:15:50.583
ಇಲ್ಲ. ಪೆದ್ದಿಯರಂತೆ ಆಡಬೇಡಿ.
ಅವಳನ್ನು ನಂಬಲು ಆಗಲ್ಲ.

01:15:51.666 --> 01:15:53.458
ನಮಗೆ ನರ್ತಿಸಬೇಕು ಅಷ್ಟೇ.

01:15:54.291 --> 01:15:55.583
ನನಗೂ ಅಷ್ಟೇ ಬೇಕಿದ್ದದ್ದು.

01:15:55.666 --> 01:15:58.625
ಹಾಗಾದರೆ ನಿನಗೆ ಸಿಗದ ಅವಕಾಶ ನಮಗೆ ಕೊಡು.

01:15:58.708 --> 01:16:03.000
ಇಲ್ಲ. ನನ್ನ ಅಪ್ಪ. ಅವರಿಗೆ ತುಂಬಾ ಅಧಿಕಾರ ಇದೆ.
ಅವರು ನಿಮಗೆ ಸಹಾಯ ಮಾಡುವರು.

01:16:03.083 --> 01:16:05.083
ನಿನ್ನ ಅಪ್ಪನಂತಹ ಗಂಡಸರು
ನಮ್ಮಂತಹ ಹುಡುಗಿಯರಿಗೆ ಸಹಾಯ ಮಾಡಲ್ಲ.

01:16:05.166 --> 01:16:07.708
-ಬೇಡ.
-ಅವನು ಡೆವೋರಾಗೆ ಏನು ಮಾಡಿದ ನೋಡು.

01:16:09.291 --> 01:16:10.708
ಇಲ್ಲ.

01:16:17.000 --> 01:16:20.166
ನಿನ್ನಪ್ಪನಿಗೆ ಗುಂಡು ಹಾರಿಸೋದನ್ನ
ನಿಲ್ಲಿಸಲು ಹೇಳು ಇಲ್ಲಾ ನಿನ್ನ ತಲೆ ಒಡೆಯುವೆ.

01:16:20.250 --> 01:16:22.958
ಅಪ್ಪ! ಅಪ್ಪ!

01:16:23.041 --> 01:16:24.041
ಗುಂಡು ಹಾರಿಸೋದು ನಿಲ್ಲಿಸಿ!

01:16:24.125 --> 01:16:25.666
ಗುಂಡು ಹಾರಿಸೋದು ನಿಲ್ಲಿಸಿ!

01:16:31.750 --> 01:16:33.000
ಓಡಿ, ಹುಡುಗಿಯರೇ.

01:16:33.083 --> 01:16:34.791
ಇದು ನನ್ನ ಒಂಟಿ ನೃತ್ಯ.

01:16:36.166 --> 01:16:38.375
ಇದು ನಿಮಗೆ ಅವಕಾಶ.

01:16:42.416 --> 01:16:43.625
ನಡಿ.

01:16:50.625 --> 01:16:51.625
ಛೇ.

01:17:04.000 --> 01:17:06.208
ನೀನು ಯಾರು?

01:17:07.333 --> 01:17:10.666
ನಾನು ಶುಗರ್ ಪ್ಲಂ ಫೇರಿ ಆಗಬೇಕಿದ್ದವಳು.

01:17:12.500 --> 01:17:14.083
ನೂರಾರು, ಸಾವಿರಾರು ಜನರ ಮುಂದೆ

01:17:14.166 --> 01:17:18.250
ಪ್ರದರ್ಶನ ನೀಡಬೇಕಿದ್ದವಳು.

01:17:18.333 --> 01:17:20.750
ರಾಣಿಯ ಮುಂದೆ ನರ್ತಿಸಬೇಕಿದ್ದವಳು.

01:17:22.000 --> 01:17:24.708
ಅದು ನನ್ನ ಜೀವನವಾಗಿರಬೇಕಿತ್ತು.

01:17:32.291 --> 01:17:33.500
ಅಪ್ಪ…

01:17:37.208 --> 01:17:40.875
ಆದರೆ ಅದ್ಯಾವುದೂ ನಡೆಯಲಿಲ್ಲ

01:17:41.666 --> 01:17:43.500
ಯಾಕೆಂದರೆ ನೀನು…

01:17:44.083 --> 01:17:47.666
ನೀನು, ಲೋಥರ್ ಮಾರ್ಕೋವಿಚ್,

01:17:47.750 --> 01:17:49.000
ನೀನು…

01:17:49.833 --> 01:17:53.333
ನನ್ನ ಕಾಲನ್ನು ಕಿತ್ತುಕೊಂಡೆ.

01:18:34.458 --> 01:18:36.333
ಇನ್ಯಾರಿಗೆ ಓಡಿಸಲು ಬರುತ್ತೆ?

01:18:37.750 --> 01:18:39.000
ನನ್ನಿಂದ ಆಗುತ್ತೆ.

01:18:42.958 --> 01:18:44.083
ನರ್ತಿಸೋಣ.

01:18:48.666 --> 01:18:50.458
ಸರಿ. ಸರಿ.

01:18:51.041 --> 01:18:52.791
ಹತ್ತು, ಹತ್ತು, ಹತ್ತು.

01:18:59.541 --> 01:19:01.166
-ಆರಾಮಾ? ಸರಿ.
-ಹೂಂ.

01:20:20.333 --> 01:20:22.375
ನಮಸ್ಕಾರ. ನಾನು, ನನ್ನ ಗೆಳತಿಯರು
ಚೆಕ್-ಇನ್ ಮಾಡೋದು ತಡವಾಯಿತು.

01:20:22.458 --> 01:20:23.458
ನರ್ತಿಸಲು ಬಂದಿದ್ದೇವೆ.

01:20:23.541 --> 01:20:25.166
ನಾವು ಅಮೆರಿಕನ್ನರು.

01:20:28.208 --> 01:20:29.416
ಈ ಕಡೆ ಬನ್ನಿ.

01:20:31.541 --> 01:20:32.875
ಮಿಸ್ ಥೋರ್ನಗಾಗಿ.

01:20:32.958 --> 01:20:34.541
-ಮಿಸ್ ಥೋರ್ನಗಾಗಿ.
-ಮಿಸ್ ಥೋರ್ನಗಾಗಿ.

01:23:26.000 --> 01:23:30.208
ಪ್ರೆಟಿ ಲೀಥಲ್

01:28:43.000 --> 01:28:45.000
ಉಪ ಶೀರ್ಷಿಕೆ ಅನುವಾದ: ಅನುರಾಧ

01:28:45.083 --> 01:28:47.083
ಸೃಜನಶೀಲ ಮೇಲ್ವಿಚಾರಕರು
ಸುಬ್ಬಯ್ಯ ಕೆಜಿ
ಮಾಡೋದು ತಡವಾಯಿತು.
