1
00:00:06,000 --> 00:00:06,840
ಈ ಸರಣಿಯ ಉದ್ದೇಶ ಮನರಂಜನೆ. ಇದು ಕಾಲ್ಪನಿಕ.

2
00:00:06,920 --> 00:00:07,760
ಹೆಸರು, ಸ್ಥಳ, ಘಟನೆ ಇತ್ಯಾದಿ ಲೇಖಕರ ಕಲ್ಪನೆ.

3
00:00:07,840 --> 00:00:08,680
ಯಾವುದೇ ಸಾಮ್ಯತೆ ಕಾಕತಾಳೀಯ.
ಸಂಭಾಷಣೆ ಅಥವಾ ಪಾತ್ರ

4
00:00:08,760 --> 00:00:09,600
ಅವಮಾನಿಸುವ ಉದ್ದೇಶ ಹೊಂದಿಲ್ಲ.

5
00:00:09,680 --> 00:00:10,520
LGBTQUIA+ ಸಮುದಾಯದ ಸಮಸ್ಯೆಯನ್ನು ಬಿಂಬಿಸಿದೆ.

6
00:00:10,600 --> 00:00:11,440
ಅವರನ್ನು ಅಗೌರವದಿಂದ ನೋಡುವ ಉದ್ದೇಶವಿಲ್ಲ.

7
00:00:11,520 --> 00:00:12,360
ಪ್ರಬಲ ಭಾಷೆ ಹೊಂದಿದೆ. ಡ್ರಗ್ಸ್, ಮದ್ಯ, ತಂಬಾಕು

8
00:00:12,440 --> 00:00:13,280
ಮಾಟಮಂತ್ರ ಇತ್ಯಾದಿ ಉತ್ತೇಜಿಸದು.

9
00:00:13,360 --> 00:00:14,520
ಪ್ರಾಣಿ ಹಿಂಸೆ ನಡೆದಿಲ್ಲ. ಅಭಿಪ್ರಾಯಗಳನ್ನು
ಅಮೆಝಾನ್ ಬೆಂಬಲಿಸದು.

10
00:00:14,600 --> 00:00:15,880
ಬಾಲ ಕಲಾವಿದರಿಗೆ ತೊಂದರೆ ಮಾಡಲಾಗಿಲ್ಲ.
ವೀಕ್ಷಕರ ವಿವೇಚನೆಗೆ ಸಲಹೆ ನೀಡಲಾಗಿದೆ.

11
00:00:27,480 --> 00:00:28,720
ಹೇ, ಆ ಸದ್ದನ್ನು ನಿಲ್ಲಿಸು.

12
00:00:29,680 --> 00:00:34,200
-ದೊಡ್ಡ ಟ್ರಕ್ ಬೇಕೆಂದು ನಾನು ಹೇಳಿದ್ದೆ.
-ಅದಕ್ಕೆ ನಿನ್ನ ಅಪ್ಪ ಹಣ ನೀಡುವರೇ?

13
00:00:34,280 --> 00:00:35,120
ಅತ್ತ ಸರಿ!

14
00:00:39,080 --> 00:00:41,360
ತುಂಬಾ ಜಾಗವಿದೆ. ಫ್ಲ್ಯಾಶ್ ಲೈಟ್ ತನ್ನಿ.

15
00:00:44,160 --> 00:00:45,000
ಇಲ್ಲಿ ಹಾಕು.

16
00:00:47,080 --> 00:00:48,000
ಪೆದ್ದ.

17
00:00:53,920 --> 00:00:57,400
-ಮಿ. ದೇವಿ ಪ್ರಸಾದ್!
-ವಿಕ್ಕಿ, ಬಾಗಿಲು ತೆರೆ!

18
00:00:58,000 --> 00:01:01,240
-ಏನಾಯಿತು?
-ಬಾಗಿಲು ತೆರೆಯಿರಿ.

19
00:01:01,320 --> 00:01:02,240
ಏನಾಗಿಲ್ಲ ತಾನೇ?

20
00:01:58,360 --> 00:01:59,200
ಸರ್!

21
00:01:59,280 --> 00:02:02,000
ಒಳಗೆ ಬಂಧಿ ಆಗಿದ್ದಿರಾ?
ತೆರೆಯಲು ಪ್ರಯತ್ನಿಸುತ್ತಿದ್ದೆವು.

22
00:02:06,360 --> 00:02:08,400
ಏನಾಯಿತು, ಮಿ. ದೇವಿ ಪ್ರಸಾದ್?

23
00:02:08,480 --> 00:02:10,400
ಕತ್ತಲಿನಲ್ಲಿ ಭಯವಾಗಿರಬೇಕು.

24
00:02:52,920 --> 00:02:56,520
ಅಧೂರ

25
00:02:59,680 --> 00:03:01,440
ಅಲ್ಲಿ ನಾನು ಏನೋ ನೋಡಿದೆ ಮತ್ತು...

26
00:03:01,560 --> 00:03:04,160
ನೋಡಿ, ನನಗೆ ಹೇಳಬೇಕಾಗಿದ್ದನ್ನು ನಾನು
ಹೇಳಿದ್ದೇನೆ.

27
00:03:13,600 --> 00:03:14,920
-ರಜತ್.
-ಅದು ತುಂಬಾ ಕೆಟ್ಟದ್ದು...

28
00:03:15,400 --> 00:03:16,480
ಸೈಫ್, ಜಾಗ್ರತೆ.

29
00:03:17,280 --> 00:03:19,320
ಜಾಗ್ರತೆಯಿರಲಿ.

30
00:03:21,680 --> 00:03:24,440
ನೀನು ಈ ಕಡೆ ತಿರುಗು. ಅಲ್ಲಿಂದ ಹೋಗು.

31
00:03:29,600 --> 00:03:31,800
-ಕ್ಷಮಿಸು!
-ರಜತ್, ತಲೆ ಕೆಟ್ಟಿದೆಯೇ?

32
00:03:31,880 --> 00:03:33,480
ನನ್ನನ್ನು ಕ್ಷಮಿಸು!

33
00:03:33,560 --> 00:03:35,360
ರಜತ್, ಏನು ಮಾಡುತ್ತಿರುವೆ?

34
00:03:41,720 --> 00:03:42,760
ಮಿ. ಜೈಸಿಂಗ್?

35
00:03:45,120 --> 00:03:47,480
ನಿಮ್ಮ ಸಹೋದ್ಯೋಗಿಗೆ ಎಲ್ಲಾ ಹೇಳಿದೆ, ಸರ್.

36
00:03:48,200 --> 00:03:51,480
ನಿಮ್ಮ ಮತ್ತು ರಜತ್ ಹೊರತಾಗಿ ಬೇರೆ
ಯಾರಾದರೂ ಇಲ್ಲಿದ್ದರೇ?

37
00:03:55,560 --> 00:03:56,840
ಯಾರನ್ನಾದರೂ ನೋಡಿದಿರಾ?

38
00:03:58,120 --> 00:03:59,200
ತುಂಬಾ ಕತ್ತಲಿತ್ತು.

39
00:04:00,120 --> 00:04:01,880
-ಕೇಳಿಸಿತಾ...
-ಏನಿದು?

40
00:04:01,960 --> 00:04:03,920
ರಜತನನ್ನು ಉಳಿಸಲು ನೀವು ಯತ್ನಿಸಲಿಲ್ಲವೇ?

41
00:04:04,000 --> 00:04:06,240
ಖಂಡಿತ ಪ್ರಯತ್ನ ಪಟ್ಟೆ! ಇದೆಂತಹ ಪ್ರಶ್ನೆ?

42
00:04:06,320 --> 00:04:09,280
ದಯವಿಟ್ಟು ಅದನ್ನು ವಾಪಸ್ ನೀಡಿ.
ಮುಖ್ಯವಾದ ಕರೆ ಮಾಡಲಿಕ್ಕಿದೆ.

43
00:04:09,960 --> 00:04:11,720
ಆತಂಕದ ಔಷಧಿ ತೆಗೆದುಕೊಳ್ಳುತ್ತೀರಲ್ಲ?

44
00:04:13,720 --> 00:04:18,080
ನಿಮ್ಮ ಮತ್ತು ನಿಮ್ಮ ಬ್ಯಾಚ್ಮೇಟ್ಗಳ ಎಲ್ಲಾ
ಸಂಗತಿ ನನಗೆ ಗೊತ್ತು.

45
00:04:18,600 --> 00:04:20,960
ನನಗೆ ತಿಳಿದಿಲ್ಲದೇ ಇರುವುದನ್ನು ತಿಳಿಯುವೆ.

46
00:04:21,480 --> 00:04:23,000
ರಜತ್ ನಿಜವಾಗಿ ಹೇಗೆ ಸತ್ತ ಎಂದು.

47
00:04:23,680 --> 00:04:28,200
ಅಥವಾ ಸುಯಾಶ್ ಕಿಸೆಯಲ್ಲಿ ಪತ್ತೆಯಾದ
ಆ ಚೀಟಿಗಳನ್ನು ಯಾರು ಬರೆದರೆಂದು.

48
00:04:30,920 --> 00:04:33,360
ಇಲ್ಲವೇ, ನೀವಾಗಿಯೇ ನನಗೆ ಹೇಳಬಹುದು.

49
00:04:35,240 --> 00:04:37,080
ಆಫೀಸರ್ ಬೇಡಿ, ಎಕ್ಸ್ಕ್ಯೂಸ್ ಮಿ.

50
00:04:37,160 --> 00:04:41,240
ಇವರು ವಿಕಾಸ್ ವಿರ್ಮಾನಿ,
ನೀಲಗಿರಿ ವ್ಯಾಲಿ ಸ್ಕೂಲಿನ ಕಾನೂನು ಸಲಹೆಗಾರರು.

51
00:04:41,360 --> 00:04:45,360
ನಿಮಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆಂದು
ನೆನಪಿಸಲು ಬಯಸುವೆ ಆಫೀಸರ್ ಬೇಡಿ.

52
00:04:45,880 --> 00:04:49,440
ನಿಮ್ಮ ವಿನಂತಿಯಂತೆ ಇಂದು ಅಪರಾಹ್ನ,
ಎಲ್ಲಾ ಸಿಬ್ಬಂದಿಗಳು,

53
00:04:49,520 --> 00:04:52,120
ಮತ್ತು ಹಳೆವಿದ್ಯಾರ್ಥಿಗಳು
ನಿಮ್ಮೊಂದಿಗೆ ಮಾತನಾಡುವರು.

54
00:04:52,200 --> 00:04:55,520
ಆದರೆ ಈ ರೀತಿ ನಮ್ಮ ಕ್ಲೈಂಟುಗಳಿಗೆ
ನೀವು ಕಿರುಕುಳ ನೀಡುವಂತಿಲ್ಲ...

55
00:04:55,600 --> 00:04:56,440
ಸರ್!

56
00:04:56,520 --> 00:04:58,360
ಇನ್ನೊಂದು ಹೆಣ ಸಿಕ್ಕಿದೆ. ಇಲ್ಲಿ ಬನ್ನಿ!

57
00:04:58,720 --> 00:05:02,760
-ಹೌದು ಸರ್.
-ಕಬೀರ್, ಮನೋಜ್, ಇಲ್ಲಿ ಬನ್ನಿ.

58
00:05:02,800 --> 00:05:04,080
ಅಬುಗೆ ಹೊರಬರಲು ಸಹಾಯ ಮಾಡಿ.

59
00:05:06,640 --> 00:05:08,640
-ಅಬು, ಅದನ್ನು ಅಗೆ.
-ಆಯಿತು ಸರ್.

60
00:05:08,720 --> 00:05:10,080
ಅಗೆಯುವುದನ್ನು ಪ್ರಾರಂಭಿಸಿ.

61
00:05:12,160 --> 00:05:13,040
ಅದನ್ನು ಹೊರತೆಗೆಯಿರಿ.

62
00:05:14,480 --> 00:05:15,560
ಅಗೆಯಿರಿ, ಅಗೆಯಿರಿ.

63
00:05:18,200 --> 00:05:19,080
ಆಯಿತು.

64
00:05:19,720 --> 00:05:21,080
ಅದನ್ನು ಹೊರತೆಗೆಯಿರಿ.

65
00:05:21,160 --> 00:05:22,680
ನೀವು ಈ ಸ್ಲ್ಯಾಬ್ ತೆಗೆಯಿರಿ.

66
00:05:23,360 --> 00:05:24,360
ಅದನ್ನು ಹೊರತೆಗೆಯಿರಿ.

67
00:05:25,360 --> 00:05:28,400
ಆ ಕಡೆ ಕೂಡ ಅಗೆಯಿರಿ.
ಹೌದು, ಹಿಂದಿನಿಂದ ಕೂಡ.

68
00:05:32,200 --> 00:05:33,360
ಹಗ್ಗ ಹೊರತೆಗೆಯಿರಿ.

69
00:05:39,000 --> 00:05:40,600
ಅದು ಶಾಲಾ ಸಮವಸ್ತ್ರ.

70
00:05:40,680 --> 00:05:42,400
ಅದು ವಿದ್ಯಾರ್ಥಿಯೊಬ್ಬನ ಹೆಣವಾಗಿರಬೇಕು.

71
00:05:44,600 --> 00:05:46,240
ಕಳೇಬರವನ್ನು ಎಚ್ಚರಿಕೆಯಿಂದ ತೆಗೆಯಿರಿ.

72
00:05:47,280 --> 00:05:48,760
ಹೋಗಿ ಸಾಕ್ಷ್ಯದ ಚೀಲಗಳನ್ನು ತನ್ನಿ.

73
00:05:50,480 --> 00:05:53,240
ಜಾಗ್ರತೆ, ಜಾಗ್ರತೆ.

74
00:05:56,640 --> 00:05:58,000
ಮಣ್ಣು ತೆಗೆಯಿರಿ.

75
00:06:11,000 --> 00:06:11,920
ಮಣ್ಣು ತೆರವುಗೊಳಿಸಿ.

76
00:06:47,720 --> 00:06:51,520
ಸರ್, ಹೊಸ ವಿಂಗಿನಲ್ಲಿ ಏನೋ ನಡೆದಿದೆ.

77
00:06:51,600 --> 00:06:53,360
ಅಲ್ಲಿ ಹುಡುಗನೊಬ್ಬನ ಮೃತದೇಹ ಪತ್ತೆಯಾಗಿದೆ.

78
00:06:55,760 --> 00:06:58,680
ಯಾರ ಹೆಣ ಎಂದು ತಿಳಿದಿಲ್ಲ,
ಆದರೆ ಇದೆ.

79
00:07:38,400 --> 00:07:39,240
ಆದು!

80
00:07:48,320 --> 00:07:49,160
ನಿನಾದ್!

81
00:08:19,960 --> 00:08:23,760
ನಾವು ನರರೋಗತಜ್ಞರನ್ನು ನೋಡಬೇಕು.
ನಾನು ಡಾ. ಗೋಮ್ಸ್ ಜೊತೆ ಮಾತನಾಡಿದೆ.

82
00:08:24,320 --> 00:08:26,160
ಅವರ ಆಸ್ಪತ್ರೆ ಮಾರ್ಕೆಟ್ ರಸ್ತೆಯಲ್ಲಿದೆ.

83
00:08:26,640 --> 00:08:28,640
ಇವತ್ತೇ ವೇದಾಂತನನ್ನು ಕರೆದುಕೊಂಡು ಹೋಗಬೇಕು.

84
00:08:29,120 --> 00:08:33,920
-ಡೀನ್ ಬಳಿ ಮಾತನಾಡುವೆ.
-ಅವರಿಗೆ ವೇದಾಂತ್ ಬಗ್ಗೆ ಯೋಚಿಸಲು ಸಮಯವಿಲ್ಲ.

85
00:08:34,760 --> 00:08:36,400
ನೀನು ಈ ನಿರ್ಧಾರ ತೆಗೆದುಕೊಳ್ಳಬೇಕು.

86
00:08:37,520 --> 00:08:41,000
ಇಲ್ಲೇನು ನಡೆಯುತ್ತಿದೆ
ಎಂದು ನನಗೆ ಅರ್ಥವಾಗುತ್ತಿಲ್ಲ.

87
00:08:41,760 --> 00:08:44,320
ಇಂದು ವಿದ್ಯಾರ್ಥಿಯೊಬ್ಬನ ಹೆಣ ಪತ್ತೆಯಾಗಿದೆ.

88
00:08:44,400 --> 00:08:47,240
ವರ್ಷಗಳಿಂದ ವಿದ್ಯಾರ್ಥಿಯೊಬ್ಬ ಕಾಣೆಯಾಗಿದ್ದರೆ,

89
00:08:48,080 --> 00:08:50,240
ಯಾರೂ ಏಕೆ ಅದರ ಬಗ್ಗೆ ಮಾತನಾಡಿಲ್ಲ?

90
00:08:52,880 --> 00:08:56,640
ನಾನು ಗೇಟ್ ಪಾಸ್
ಮತ್ತು ಕಾರಿನ ವ್ಯವಸ್ಥೆ ಮಾಡುತ್ತೇನೆ.

91
00:08:57,160 --> 00:08:58,520
-ಇನಸ್ಪೆಕ್ಟರ್.
-ಹೇಳಿ.

92
00:08:58,600 --> 00:09:01,280
ದಯವಿಟ್ಟು ನನ್ನ ಜೊತೆ ಬನ್ನಿ,
ನಿಮಗೆ ಕಾಗದಪತ್ರ ನೀಡುವೆ.

93
00:09:31,640 --> 00:09:32,480
ಏನಾಯಿತು?

94
00:09:34,720 --> 00:09:35,520
ಏನಾಯಿತು ನಿನಗೆ?

95
00:09:49,160 --> 00:09:51,840
-ಪೋಷಕರೊಂದಿಗೆ ಡೀನ್ ಮಾತನಾಡುತ್ತಾರೆ.
-ಸರಿ.

96
00:09:51,880 --> 00:09:53,360
ನಮಗೆ ಸ್ವಲ್ಪ ಸಮಯ ನೀಡಿ.

97
00:09:53,440 --> 00:09:55,520
ಹೌದು, ಎಲ್ಲಾ ಮಕ್ಕಳು ಸುರಕ್ಷಿತವಾಗಿದ್ದಾರೆ.

98
00:09:55,640 --> 00:09:57,880
ಆಫೀಸರ್ ಬೇಡಿ, ದಯವಿಟ್ಟು ಅರ್ಥಮಾಡಿಕೊಳ್ಳಿ.

99
00:09:58,000 --> 00:09:59,880
ಮಕ್ಕಳನ್ನು ಮನೆಗೆ ಕಳಿಸುವುದು ನನ್ನ ಆದ್ಯತೆ.

100
00:10:00,000 --> 00:10:02,640
ಹೆತ್ತವರು, ಮಂಡಳಿ ಸದಸ್ಯರಿಂದ ನನಗೆ ಒತ್ತಡವಿದೆ.

101
00:10:02,760 --> 00:10:05,520
ಮಕ್ಕಳು, ಹಳೆ ವಿದ್ಯಾರ್ಥಿಗಳನ್ನು
ಇಲ್ಲಿ ಹೇಗೆ ಇರಿಸುವುದು?

102
00:10:05,600 --> 00:10:07,840
ನೀವೆಲ್ಲರೂ ಇದಕ್ಕೆ ಜವಾಬ್ದಾರರು, ಮಿ. ಸ್ವಾಮಿ.

103
00:10:08,400 --> 00:10:12,320
ತನಿಖೆ ಪೂರ್ಣಗೊಳ್ಳುವ ತನಕ ಯಾರೂ ತೆರಳುವಂತಿಲ್ಲ.
ಸ್ಪಷ್ಟವಾಯಿತೇ?

104
00:10:12,400 --> 00:10:13,760
-ಆಯಿತು.
-ಸರ್.

105
00:10:15,320 --> 00:10:16,160
ಮಿಸೆಸ್. ಸಿನ್ಹಾ?

106
00:10:16,240 --> 00:10:20,520
ನೀಲಗಿರಿಯ 100 ಕಿಮೀ ವ್ಯಾಪ್ತಿಯಲ್ಲಿ ಕಳೆದ
10 ರಿಂದ 15 ವರ್ಷಗಳಲ್ಲಿ

107
00:10:20,600 --> 00:10:25,000
ನಾಪತ್ತೆಯಾದ 14 ರಿಂದ 20 ವರ್ಷದೊಳಗಿನ
ಎಲ್ಲಾ ಪುರುಷರ ಪಟ್ಟಿ ನನಗೆ ಬೇಕು.

108
00:10:25,080 --> 00:10:26,000
ಸರ್.

109
00:10:28,040 --> 00:10:30,960
-ಹಳೆವಿದ್ಯಾರ್ಥಿಗಳನ್ನು ವಿಚಾರಿಸುತ್ತಿರುವಿರಾ?
-ಹೌದು, ಸರ್.

110
00:10:31,080 --> 00:10:33,200
ನಿಮಗೆ ಅರ್ಥವಾಗುತ್ತಿಲ್ಲ.
ನನಗೆ ಮನೆಗೆ ಹೋಗಬೇಕು.

111
00:10:33,280 --> 00:10:35,200
ಶಸ್ತ್ರಕ್ರಿಯೆ ಇದೆ. ನಾನು ಅಲ್ಲಿರಬೇಕು.

112
00:10:35,280 --> 00:10:38,240
ಅದು ಬಹಳ ಮುಖ್ಯ.
ಈಗಾಗಲೇ ನಿಮಗೆ ಅದನ್ನು ಹೇಳಿದ್ದೇನೆ.

113
00:10:38,320 --> 00:10:41,120
ನಾನು ಅಪ್ಪನ ಜೊತೆ ಮಾತನಾಡಿದೆ.
ಅವರು ಕಾರು ಕಳಿಸುತ್ತಾರೆ.

114
00:10:42,720 --> 00:10:45,160
-ಹೂಂ ಸರ್.
-ಆಫೀಸರ್ ಬೇಡಿ, ಏನು ನಡೆಯುತ್ತಿದೆ?

115
00:10:45,240 --> 00:10:47,880
ಮಕ್ಕಳನ್ನು, ಹಳೆವಿದ್ಯಾರ್ಥಿಗಳನ್ನು
ಹೀಗೆ ಇರಿಸಲು ಸಾಧ್ಯವಿಲ್ಲ.

116
00:10:48,000 --> 00:10:50,520
ಸರ್, ಎರಡು ಆತ್ಮಹತ್ಯೆಗಳು ಮತ್ತು ಈಗ ಒಂದು ಹೆಣ.

117
00:10:51,880 --> 00:10:54,720
ತನಿಖೆಗೆ ಒಂದು ಪ್ರಕ್ರಿಯೆ ಇದೆ
ಎಂದು ನಿಮಗೆ ಗೊತ್ತಿದೆಯಲ್ಲ.

118
00:10:54,760 --> 00:10:56,880
ನಮ್ಮ ವಕೀಲರು ಬರುತ್ತಿದ್ದಾರೆ. ಚಿಂತಿಸಬೇಡ.

119
00:10:56,960 --> 00:10:58,520
ಸಂಜೆಯೊಳಗೆ ಹೋಗೋಣ.

120
00:10:58,600 --> 00:10:59,960
ಮಕ್ಕಳು ಹೋಗಬಹುದು.

121
00:11:00,920 --> 00:11:05,000
ಆದರೆ ಸಿಬ್ಬಂದಿ ಮತ್ತು ಹಳೆವಿದ್ಯಾರ್ಥಿಗಳನ್ನು
ಹೋಗಲು ಬಿಟ್ಟರೆ,

122
00:11:06,240 --> 00:11:08,480
ಪ್ರಕರಣ ಕೈತಪ್ಪುವುದು ಸರ್.

123
00:11:09,200 --> 00:11:10,760
ಮಾಲ್ವಿಕ ಜಾಮ್ವಾಲ್. ಬನ್ನಿ.

124
00:11:10,840 --> 00:11:13,960
ಡೀನ್, ವಿದ್ಯಾರ್ಥಿಗಳನ್ನು ಕಳಿಸಲು ನೀವು
ಏರ್ಪಾಟು ಮಾಡಬಹುದು.

125
00:11:14,680 --> 00:11:15,520
ಇರು.

126
00:11:15,600 --> 00:11:17,000
ಬಹಳ ಧನ್ಯವಾದ, ಆಫೀಸರ್.

127
00:11:17,080 --> 00:11:18,920
ಆದರೆ ಹಳೆವಿದ್ಯಾರ್ಥಿಗಳು, ಸಿಬ್ಬಂದಿಗಳಲ್ಲ.

128
00:11:20,480 --> 00:11:22,280
ಮಿ. ಅಯ್ಯರ್, ಮಿಸ್ ನೇಹಾ, ನೀವಿಬ್ರು ಬನ್ನಿ.

129
00:11:22,360 --> 00:11:24,720
ನಮ್ಮ ಸ್ನೇಹಿತನನ್ನು ಕಳೆದುಕೊಂಡು
12 ಗಂಟೆಗಳೂ ಆಗಿಲ್ಲ.

130
00:11:25,320 --> 00:11:30,000
ಪ್ರಶ್ನೆಗಳಿಗೆ ಉತ್ತರಿಸುವ ಸ್ಥಿತಿಯಲ್ಲಿ
ನಾವ್ಯಾರೂ ಇಲ್ಲ.

131
00:11:30,560 --> 00:11:32,880
ನಿಮಗೆ ನಿಮ್ಮ ತನಿಖೆಯದ್ದೇ ಚಿಂತೆ.

132
00:11:33,640 --> 00:11:36,840
ಕ್ಯಾಂಪಸ್ಸಿನಲ್ಲಿ ಹುಡುಗನೊಬ್ಬನ ಮೃತದೇಹ
ದೊರೆತಿದೆ ಎಂದರೆ ಏನರ್ಥ?

133
00:11:36,920 --> 00:11:38,200
ನೀವು ಹೇಳಿ.

134
00:11:39,640 --> 00:11:41,600
ಹೇಗಿದ್ದರೂ ಜಾಮ್ವಾಲ್ ಕುಟುಂಬದವರಿಗೆ

135
00:11:42,400 --> 00:11:44,080
ಇತರರಿಗೆ ಕೆಲಸ ಹೇಳಿಕೊಡಲು ಇಷ್ಟ.

136
00:11:44,560 --> 00:11:45,920
ಸರಿ ತಾನೇ?

137
00:11:46,000 --> 00:11:48,120
ನನ್ನ ಉಪನಾಮೆಯ ಹಿಂದೆ ಬಿದ್ದಿದ್ದೀರಿ.

138
00:11:49,160 --> 00:11:54,200
ಖಂಡಿತ, ಈ ಪ್ರಕರಣಕ್ಕೆ ಜಾಮ್ವಾಲ್ ಹೆಸರು
ಸೇರಿಸಿದರೆ ಇದನ್ನು ದೊಡ್ಡದಾಗಿಸಬಹುದು.

139
00:11:54,280 --> 00:11:57,640
ಅದೇ ಕಾರಣದಿಂದ ಹುಡುಗನ ಸಾವಿನ ಮೇಲೆ
ಗಮನ ಹರಿಸುವ ಬದಲು,

140
00:11:57,720 --> 00:12:00,760
ನೀವು ಆತ್ಮಹತ್ಯೆಯೊಂದನ್ನು ಕೊಲೆ ಎಂದು
ಬಿಂಬಿಸಲು ನಿಂತಿದ್ದೀರಿ.

141
00:12:00,840 --> 00:12:02,200
ಮಿ. ಜಾಮ್ವಾಲ್.

142
00:12:02,280 --> 00:12:06,440
ನನ್ನ ಕುಟುಂಬ ಹೆಸರನ್ನು ನೀವು ಮರೆತ ನಂತರ,
ನಿಮಗೆ ನೆನಪಾಗಬಹುದು

143
00:12:07,000 --> 00:12:09,760
ಈ ಮಕ್ಕಳ ರಕ್ಷಣೆಯೂ ನಿಮ್ಮ ಕರ್ತವ್ಯವೆಂದು.

144
00:12:11,680 --> 00:12:13,760
-ಮಿ. ಜಾಮ್ವಾಲ್.
-ವಿಚಾರಣೆ ನಿಲ್ಲಿಸಿ.

145
00:12:13,840 --> 00:12:15,960
ಆಫೀಸರ್ ಬೇಡಿ ಮಕ್ಕಳನ್ನು ಮನೆಗೆ ಕಳಿಸಲು

146
00:12:16,040 --> 00:12:18,640
ಒಪ್ಪಿದ್ದಾರೆಂದು
ನಿಮಗೆ ಹೇಳಲು ಪ್ರಯತ್ನಿಸುತ್ತಿದ್ದೆ.

147
00:12:23,360 --> 00:12:24,840
ನೀವು ಮರೆತಿರುವಂತಿದೆ

148
00:12:24,920 --> 00:12:26,680
ನಾವು ಮೂರ್ಖರಲ್ಲವೆಂದು.

149
00:12:28,080 --> 00:12:29,840
ಮ್ಯಾಜಿಸ್ಟ್ರೇಟ್ ಬಳಿ ಮಾತನಾಡಿದ್ದೇನೆ.

150
00:12:30,520 --> 00:12:31,720
ನನಗೆ ಕೋರ್ಟ್ ಆದೇಶವಿದೆ.

151
00:12:33,240 --> 00:12:34,320
ಸಿಬ್ಬಂದಿ...

152
00:12:35,440 --> 00:12:36,600
ಮತ್ತು ಹಳೆವಿದ್ಯಾರ್ಥಿಗಳು

153
00:12:38,320 --> 00:12:40,480
ಈ ಕ್ಯಾಂಪಸ್ ತೊರೆಯುವಂತಿಲ್ಲ.

154
00:12:42,960 --> 00:12:45,160
ನಿಮಗೇನು ಬೇಕೋ ಮಾಡಿ.

155
00:12:45,240 --> 00:12:47,000
ಈ ವಿಚಾರಣೆ ನಡೆಯುವುದಿಲ್ಲ.

156
00:12:54,280 --> 00:12:56,080
ಒಳ್ಳೆ ಸುದ್ದಿ. ನಮಗೆ ಅನುಮತಿ ದೊರಕಿದೆ.

157
00:13:00,160 --> 00:13:01,000
ಸುಪ್ರಿಯ.

158
00:13:04,160 --> 00:13:05,600
ಪತ್ತೆಯಾದ ಮೃತದೇಹ

159
00:13:06,720 --> 00:13:07,800
ನಿನಾದನದ್ದಾಗಿರಬೇಕು.

160
00:13:08,560 --> 00:13:12,520
ನೀನು ಹಾಗೆ ಯೋಚಿಸುವೆ ಎಂದು ಗೊತ್ತಿತ್ತು.
ಅವನು ಬಸ್ಸಿನಿಂದ ಕಾಣೆಯಾದ ಎಂದು ಹೇಳಿದ್ದೆ.

161
00:13:12,600 --> 00:13:14,920
-ಶಾಲೆಯಲ್ಲಿ ಹೇಗೆ ಪತ್ತೆಯಾದ?
-ಯಾರು ನೋಡಿದ್ದರು?

162
00:13:15,000 --> 00:13:15,840
ವ್ಯಾಸ್?

163
00:13:17,160 --> 00:13:18,800
ಈ ಕುರಿತು ನನ್ನ ಮಾತು ಸರಿ.

164
00:13:19,480 --> 00:13:20,720
ವೇದಾಂತ್ ಬೇರಾರೂ ಅಲ್ಲ...

165
00:13:23,000 --> 00:13:23,920
ನಿನಾದ್.

166
00:13:24,840 --> 00:13:26,160
ಅಧಿರಾಜ್!

167
00:13:27,680 --> 00:13:29,560
ನಿನ್ನಿಂದ ಕೂಡ ಭೂತಗಳ ಬಗ್ಗೆ ಮಾತು?

168
00:13:30,480 --> 00:13:31,840
ನಿನಗೆ ಕಾಣುವುದಿಲ್ಲವೇ?

169
00:13:33,800 --> 00:13:34,920
ಅವನಿಗೆ ಎಲ್ಲಾ ಗೊತ್ತಿದೆ.

170
00:13:35,720 --> 00:13:36,760
ಅವನು ಎಲ್ಲಾ ಮಾಡಬಲ್ಲ.

171
00:13:37,360 --> 00:13:38,560
ನಿನಗೆ ಹಾಗೆ ಅನಿಸಿಲ್ಲವೇ?

172
00:13:44,520 --> 00:13:46,480
ತಜ್ಞರ ಬಳಿ ಕೊಂಡೊಯ್ಯುತ್ತಿದ್ದೇನೆ.

173
00:13:46,560 --> 00:13:47,400
ಸುಪ್ರಿಯ.

174
00:13:48,160 --> 00:13:49,880
ಈ ರೀತಿ ಅವನನ್ನು ಉಳಿಸಲು ಸಾಧ್ಯವಿಲ್ಲ!

175
00:13:57,600 --> 00:13:59,480
ಈಜುವಾಗ ನನಗೆ ಗಾಯವಾಗಲಿಲ್ಲ.

176
00:13:59,560 --> 00:14:01,960
ನಿನಾದ್ ನನ್ನ ಜೊತೆ
ಸಂಪರ್ಕ ಸಾಧಿಸಲು ಯತ್ನಿಸುತ್ತಿದ್ದ.

177
00:14:02,480 --> 00:14:04,480
ನಿನಾದನಿಗೂ ಇಂತಹುದೇ ಹುಟ್ಟು ಗುರುತು ಇತ್ತು.

178
00:14:19,000 --> 00:14:20,520
ಅವನಿಗೂ ಇದೆ ಅಲ್ಲವೇ?

179
00:14:23,240 --> 00:14:24,800
ಇದನ್ನು ಹೇಗೆ ವಿವರಿಸುವಿರಿ?

180
00:14:25,320 --> 00:14:27,600
ನನ್ನ, ವೇದಾಂತನ ಕೈಯಲ್ಲಿ
ನಿನಾದನ ಹುಟ್ಟುಗುರುತು.

181
00:14:28,120 --> 00:14:30,160
-ಅದು ಕಾಕತಾಳೀಯ.
-ಮತ್ತೆ ಶ್ಯಾಡೊ ಬಾಯ್?

182
00:14:30,240 --> 00:14:32,360
ವೇದಾಂತನಿಗೆ ಗ್ರಾಫಿಕ್ ಕಾದಂಬರಿ ಹೇಗೆ ಸಿಕ್ಕಿತು?

183
00:14:32,440 --> 00:14:33,400
ನೀನೇ ಹೇಳು.

184
00:14:33,480 --> 00:14:36,000
ಏಕೆಂದರೆ ಅದು ನನ್ನ ಕಥೆಯಲ್ಲ, ನಿನಾದನ ಕಥೆ!

185
00:14:37,360 --> 00:14:40,320
ವೇದಾಂತ್ ಅದನ್ನು ನಂಬಿದ್ದಾನೆ ಯಾಕೆಂದರೆ ನಿನಾದ್
ಅವನಿಗಾಗಿ ಇದ್ದಾನೆ!

186
00:14:45,800 --> 00:14:48,840
ಈ ಜಗತ್ತಿನಲ್ಲಿ
ಕೆಲ ವಿಷಯಗಳನ್ನು ವಿವರಿಸಲಾಗದು, ಸುಪ್ರಿಯ.

187
00:14:52,200 --> 00:14:54,320
ನಾನು ಒಮ್ಮೆ ನಿನಾದನನ್ನು ಒಂಟಿಯಾಗಿ ಬಿಟ್ಟೆ.

188
00:14:55,240 --> 00:14:58,600
ಈ ಬಾರಿ ಒಂಟಿಯಾಗಿ ಬಿಡುವುದಿಲ್ಲ.
ಅವನಿಗಾಗಿ ಹೋರಾಡುತ್ತೇನೆ.

189
00:15:00,200 --> 00:15:01,120
ಅಧಿರಾಜ್, ನಿಲ್ಲು!

190
00:15:01,200 --> 00:15:02,040
ನಿನಾದ್!

191
00:15:02,480 --> 00:15:04,080
-ಅಧಿರಾಜ್, ನಿಲ್ಲು!
-ನಿನಾದ್!

192
00:15:04,840 --> 00:15:06,000
ನಿನಾದ್!

193
00:15:06,080 --> 00:15:08,440
-ನನ್ನನ್ನು ಹೋಗಲು ಬಿಡಿ!
-ದಯವಿಟ್ಟು, ಸರ್.

194
00:15:08,520 --> 00:15:11,080
-ನೀವು ಹೋಗುವಂತಿಲ್ಲ. ಒಂದು ನಿಮಿಷ.
-ನಿನಾದ್!

195
00:15:11,160 --> 00:15:12,960
-ನನ್ನ ಮಾತು ಕೇಳಿ. ಸರ್!
-ನನ್ನನ್ನು ಹೋಗಲು ಬಿಡಿ.

196
00:15:13,760 --> 00:15:14,720
ನಿನಾದ್!

197
00:15:16,520 --> 00:15:17,480
ನಾನಿಲ್ಲಿದ್ದೇನೆ!

198
00:15:17,560 --> 00:15:20,000
ಈ ಬಾರಿ ನಿನ್ನನ್ನು ಕೈಬಿಡುವುದಿಲ್ಲ!

199
00:15:20,080 --> 00:15:22,840
ನಿನಗೇನಾಗಿತ್ತು ಎಂದು ತಿಳಿಯುವ ತನಕ
ನಾನು ಬಿಡುವುದಿಲ್ಲ.

200
00:15:29,840 --> 00:15:30,680
ಆರಾಮಿರುವೆಯಾ?

201
00:15:35,520 --> 00:15:38,400
ಮಿಸ್, ಅಭಿ ಯಾರು?

202
00:15:43,160 --> 00:15:45,400
ನನ್ನ ಮನೆಯ ಫೋಟೋದಲ್ಲಿ ಅವನ ಹೆಸರು ನೋಡಿದೆಯಾ?

203
00:15:46,040 --> 00:15:46,920
ಅವನು ನನ್ನ ಮಗ.

204
00:15:50,480 --> 00:15:53,200
ನಿಮ್ಮನ್ನು ನಂಬಬಾರದು ಎಂದು
ಅವನು ಹೇಳುತ್ತಿದ್ದಾನೆ

205
00:15:53,720 --> 00:15:57,440
ಏಕೆಂದರೆ ಅಭಿಗೆ ಮಾಡಿದಂತೆ ನೀವು ನನಗೂ ಮಾಡಬಹುದು.

206
00:15:58,720 --> 00:15:59,600
ನೀವೇನು ಮಾಡಿದಿರಿ?

207
00:16:06,760 --> 00:16:08,680
ಮಿ. ಚೌಹಾನ್ ಅವರ ಪುಸ್ತಕದಂಗಡಿ ಗೊತ್ತೇ?

208
00:16:08,760 --> 00:16:11,640
ಬಸ್ ಟಿಕೆಟುಗಳನ್ನು ಪಡೆಯಲು ಅವರ
ಅಂಗಡಿಯಲ್ಲಿ 30 ನಿಮಿಷಗಳಲ್ಲಿರಿ.

209
00:16:13,480 --> 00:16:16,680
ಅನುಮತಿ ಸ್ಲಿಪ್ ಪಡೆದುಕೊಳ್ಳಿ.
ಶಾಲೆಯಿಂದ ಹೊರಹೋಗಲು ಅದು ಬೇಕು.

210
00:16:16,760 --> 00:16:17,600
ಆಯಿತು ಮೇಡಮ್.

211
00:16:17,680 --> 00:16:20,360
ಮಿ. ಚಂದ್ರ ಪ್ರಕಾಶ್,
ಅವರಿಗೆ ಗೇಟ್ ಪಾಸ್ ನೀಡಿ.

212
00:16:23,480 --> 00:16:24,640
ಮಿ. ಚಂದ್ರ ಪ್ರಕಾಶ್?

213
00:16:25,120 --> 00:16:26,440
ಎಲ್ಲಿದ್ದೀರಿ?

214
00:16:26,520 --> 00:16:27,560
ಏನು?

215
00:16:28,920 --> 00:16:34,080
ನೀವು ನೋಡಿದ್ದು ಡೀನ್ ವ್ಯಾಸ್ ಅವರ ಭೂತವಲ್ಲ,
ಹುಡುಗನದ್ದು ಎಂದು ಅನಿಸುತ್ತದೆ.

216
00:16:34,800 --> 00:16:36,240
ಅದು ಹಲವು ವರ್ಷಗಳ ಹಿಂದೆ.

217
00:16:36,840 --> 00:16:38,560
ನಾನು ಶಾಲೆಗೆ ಆಗಷ್ಟೇ ಸೇರಿದ್ದೆ.

218
00:16:38,640 --> 00:16:42,520
ನಮ್ಮ ಒಬ್ಬ ವಿದ್ಯಾರ್ಥಿ ನಾಪತ್ತೆಯಾಗಿದ್ದ.
ಅವನ ಹೆತ್ತವರು ಪ್ರತಿದಿನ ಬರುತ್ತಿದ್ದರು,

219
00:16:43,040 --> 00:16:46,480
ಅವನನ್ನು ಹುಡುಕಲು. ಅವನು ನಮ್ಮ ಬಸ್ ಹತ್ತಿದ್ದ,
ಆದರೆ ಮನೆ ತಲುಪಲಿಲ್ಲ.

220
00:16:46,560 --> 00:16:48,680
ಅವನ ಹೆಸರು ನೆನಪಾಗುತ್ತಿಲ್ಲ.

221
00:16:51,960 --> 00:16:54,000
ಮಿ. ಚಂದ್ರ ಪ್ರಕಾಶ್! ಅರೆ!

222
00:17:16,680 --> 00:17:17,560
ಹೋಮೋ!

223
00:17:17,640 --> 00:17:19,960
ನೀನು ಮಾಲ್ವಿಕಾ ಅಳುವಂತೆ ಮಾಡಿದೆ.

224
00:17:20,520 --> 00:17:22,920
ನಿನಗೆ ಪಾಠ ಕಲಿಸಬೇಕಿದೆ.

225
00:17:25,080 --> 00:17:27,760
ಎಲ್ಲರೂ ನಿನ್ನನ್ನು ಮರೆಯುತ್ತಾರೆ.

226
00:17:28,320 --> 00:17:29,400
ಹೋಯಿತು.

227
00:17:45,560 --> 00:17:48,480
ಒಂದು ದಿನ ನನ್ನಂತೆ ನೀನೂ ಶಕ್ತಿಹೀನನಾಗುವೆ ದೇವ್.

228
00:17:49,160 --> 00:17:53,760
ನೀನು, ನಿನ್ನ ಹೆಸರು, ನಿನ್ನ ಕುಟುಂಬ,
ನಿನ್ನ ರಕ್ಷಕರಿಗೂ ನಿನ್ನನ್ನು ಉಳಿಸಲು ಆಗದು!

229
00:17:56,440 --> 00:17:58,560
ಆ ದಿನ ನೋಡಲು ನೀನಿರುವುದಿಲ್ಲ.

230
00:18:43,000 --> 00:18:45,720
ಅಧಿರಾಜ್, ಎದ್ದೇಳು.

231
00:18:47,480 --> 00:18:48,320
ಏಳು.

232
00:18:49,240 --> 00:18:50,160
ಬಾ.

233
00:18:55,760 --> 00:18:57,240
ನಾನು ಸಹ ಹುಡುಕುತ್ತಿದ್ದೇನೆ.

234
00:18:57,720 --> 00:18:58,560
ನಿನಾದನನ್ನು.

235
00:19:01,240 --> 00:19:02,080
ಬಾ.

236
00:19:02,720 --> 00:19:03,760
ಬಾ!

237
00:19:11,160 --> 00:19:14,560
ಆ ದಿನದಿಂದ, ನಾನು ಆ ಹೆಸರಿನ ಬಗ್ಗೆ
ಯೋಚಿಸುವುದನ್ನು ನಿಲ್ಲಿಸಿಲ್ಲ.

238
00:19:15,320 --> 00:19:16,160
ನಿನಾದ್.

239
00:19:17,200 --> 00:19:19,920
ನೀನು ಅವನ ದಾಖಲೆಗಳಿಗಾಗಿ ಹುಡುಕುತ್ತಿದ್ದೆ.

240
00:19:21,040 --> 00:19:22,080
ನನ್ನ ಸ್ನೇಹಿತನಾಗಿದ್ದ.

241
00:19:23,000 --> 00:19:25,800
ಶಾಲೆಯ ಕೊನೆಯ ದಿನ ನಾವೆಲ್ಲರೂ ಮನೆಗೆ ವಾಪಸಾದೆವು.

242
00:19:29,680 --> 00:19:31,040
ಅವನು ಹೋಗಲಿಲ್ಲ.

243
00:19:32,240 --> 00:19:34,800
ಹೊಸ ವಿಂಗಿನ ಜಾಗದಲ್ಲಿ ಮೃತದೇಹ ಪತ್ತೆಯಾಗಿದ್ದು,

244
00:19:36,400 --> 00:19:37,680
ಅದು ಅವನದ್ದೆಂದು ಗೊತ್ತು.

245
00:19:39,040 --> 00:19:40,720
ಈಗ ಎಲ್ಲಾ ಅರ್ಥವಾಗುತ್ತಿದೆ.

246
00:19:42,440 --> 00:19:46,640
ಈ ಎಲ್ಲಾ ಘಟನೆಗಳು ಆ ಕಟ್ಟಡಕ್ಕೆ
ಹೇಗೆ ನಂಟು ಹೊಂದಿವೆ ಎಂದು.

247
00:19:48,200 --> 00:19:51,720
ಮತ್ತು ಹೊಸ ವಿಂಗ್ ನಿರ್ಮಾಣಕ್ಕೆ ಡೀನ್ ವ್ಯಾಸ್
ಏಕೆ ವಿರೋಧಿಸಿದ್ದರೆಂದು.

248
00:19:53,000 --> 00:19:55,320
ನಿನಾದನನ್ನು ಅಲ್ಲಿ ಹೂತಿದ್ದು
ಅವರಿಗೆ ತಿಳಿದಿತ್ತು.

249
00:19:57,000 --> 00:20:01,560
ಆ ರಾತ್ರಿ ಕಾಡಿನಲ್ಲಿ ಅವರು ಅಲೆಯುತ್ತಿದ್ದುದನ್ನು
ಶಾಲೆಯ ಕಾವಲುಗಾರರು ನೋಡಿದ್ದರು.

250
00:20:02,320 --> 00:20:06,720
ಬೆಳಿಗ್ಗೆ, ಕಾಡಿನ ಹಾದಿನಲ್ಲಿ ಮಣ್ಣು
ಮತ್ತು ಫ್ಲ್ಯಾಶ್ ಲೈಟ್ ನೋಡಿದ್ದೆ.

251
00:20:07,280 --> 00:20:08,400
ಅವರಿಗೆ ಭಯವಾಗಿತ್ತು.

252
00:20:09,640 --> 00:20:12,000
ಮರುದಿನ ಹೊಸ ವಿಂಗ್ ಕಾಮಗಾರಿ ಆರಂಭಗೊಳ್ಳಲಿತ್ತು.

253
00:20:13,080 --> 00:20:15,080
ನಿನಾದನ ಮೃತದೇಹ ಸಾಗಿಸಲು ಯತ್ನಿಸಿದ್ದರು.

254
00:20:16,160 --> 00:20:19,040
ಆದರೆ ಅವರು ನಿನಾದನ ಆತ್ಮವನ್ನು
ಎಬ್ಬಿಸಿ ಬಿಟ್ಟರು.

255
00:20:20,160 --> 00:20:22,880
ಕೋಪೋದ್ರಿಕ್ತ ಆತ್ಮ,

256
00:20:23,480 --> 00:20:27,280
15 ವರ್ಷಗಳಿಂದ ಸೇಡಿಗಾಗಿ ಕಾಯುತ್ತಿದ್ದ ಆತ್ಮ.

257
00:20:28,800 --> 00:20:31,400
ನಿನಾದ್ ತನ್ನನ್ನು ಹಿಂಸಿಸಿದವರನ್ನು
ಶಿಕ್ಷಿಸುತ್ತಿದ್ದಾನೆ.

258
00:20:31,920 --> 00:20:37,080
ಡೀನ್, ಸುಯಾಶ್, ರಜತ್,
ಎಲ್ಲರೂ ಹೇಗೋ ಶಾಮೀಲಾಗಿದ್ದಾರೆ.

259
00:20:38,320 --> 00:20:41,000
ಇದರ ಬಗ್ಗೆ ನಾನು ಹೇಳಿದರೆ
ನನಗೆ ಹುಚ್ಚು ಅಂದುಕೊಳ್ಳುತ್ತಾರೆ.

260
00:20:42,560 --> 00:20:44,080
ನೀನು ಮಹಾಭಾರತ ಓದಿರುವೆಯಾ?

261
00:20:45,080 --> 00:20:48,640
ನಮಗೆ ಜೀವನದಲ್ಲಿ ಎರಡು ಆಯ್ಕೆಗಳಿವೆ.

262
00:20:50,680 --> 00:20:54,320
ನಾವು ನಮ್ಮ ಸನ್ನಿವೇಶಗಳನ್ನು ಒಪ್ಪಿಕೊಳ್ಳಬೇಕು,
ಅಥವಾ...

263
00:20:54,400 --> 00:20:57,040
ಅವುಗಳನ್ನು ಬದಲಾಯಿಸುವ
ಜವಾಬ್ದಾರಿ ವಹಿಸಿಕೊಳ್ಳಬೇಕು.

264
00:20:58,640 --> 00:21:01,760
ನಿನಾದನನ್ನು ಅರ್ಥಮಾಡಿಕೊಳ್ಳಬಲ್ಲವನು
ನೀನು ಮಾತ್ರ ಅಧಿರಾಜ್.

265
00:21:03,480 --> 00:21:04,320
ಅದನ್ನು ಯೋಚಿಸು.

266
00:21:05,200 --> 00:21:08,920
ಆ ದಿನ ನಿನಾದನೊಂದಿಗೆ ಏನಾಯಿತು?

267
00:21:11,080 --> 00:21:13,240
ವ್ಯಾಸ್ ಬಸ್ ನಿಲ್ದಾಣಕ್ಕೆ ಕರೆದೊಯ್ದಿಲ್ಲ.

268
00:21:16,320 --> 00:21:20,440
ನಿನಾದನ ಬಸ್ ಟಿಕೆಟ್ ಖರೀದಿಸಿದವರಿಗೆ
ಅವನು ಬಸ್ ಹತ್ತುವುದಿಲ್ಲ ಎಂದು ಗೊತ್ತಿತ್ತು.

269
00:21:21,320 --> 00:21:24,680
ಈ ಸತ್ಯವನ್ನು ಬೆಳಕಿಗೆ ತರುವುದು
ಈಗ ನಿನ್ನ ಜವಾಬ್ದಾರಿ.

270
00:21:28,160 --> 00:21:29,640
ನನಗೆ ಇಲ್ಲಿಂದ ಹೋಗಬೇಕಿದೆ.

271
00:21:33,560 --> 00:21:34,400
ಗೇಟ್ ಪಾಸ್

272
00:21:34,480 --> 00:21:37,480
ಸರ್, ಮಕ್ಕಳಿಗೆ ಬಸ್ ಟಿಕೆಟ್ ಖರೀದಿಸಬೇಕು.

273
00:21:38,160 --> 00:21:39,000
ಅಂಗಡಿಯಿಂದ.

274
00:21:39,560 --> 00:21:41,320
ಏನಿದು?

275
00:21:41,400 --> 00:21:43,880
ಸಾಮಾನು ಇಳಿಸಲು ಸಮಯವಿರಲಿಲ್ಲ.

276
00:21:44,400 --> 00:21:45,640
ತೆರೆಯಿರಿ.

277
00:21:47,520 --> 00:21:48,760
ಚಲಾಯಿಸು. ಹೋಗೋಣ.

278
00:21:50,080 --> 00:21:52,280
ಪೊಲೀಸ್

279
00:21:58,760 --> 00:22:02,360
ದೇವಿ ಪ್ರಸಾದ್, ಶಾಲೆಯಲ್ಲಿ ಏನೋ ನಡೆದಿದೆ.

280
00:22:02,440 --> 00:22:04,480
ಇನ್ನೊಬ್ಬ ಹಳೆ ವಿದ್ಯಾರ್ಥಿಯ ಆತ್ಮಹತ್ಯೆ.

281
00:22:04,560 --> 00:22:07,680
ಅಷ್ಟೇ ಅಲ್ಲ.
ಅವರಿಗೆ ಒಂದು ಮೃತದೇಹ ಕೂಡ ಸಿಕ್ಕಿದೆ.

282
00:22:07,760 --> 00:22:10,920
ಅದು ಒಬ್ಬ ವಿದ್ಯಾರ್ಥಿಯದ್ದು ಎಂದು ಹೇಳಲಾಗಿದೆ.

283
00:22:11,040 --> 00:22:14,920
ಕ್ಯಾಂಪಸ್ಸಿಗೆ ಪ್ರವೇಶ, ನಿರ್ಗಮನವನ್ನು
ಕೋರ್ಟ್ ನಿಷೇಧಿಸಿದೆ.

284
00:22:15,720 --> 00:22:16,560
ದೇವಿ ಪ್ರಸಾದ್

285
00:22:16,640 --> 00:22:19,800
ಹಳೆ ವಿದ್ಯಾರ್ಥಿಗಳ ಹೆಸರುಗಳೆಲ್ಲ
ಕೋರ್ಟ್ ಆದೇಶದಲ್ಲಿದೆ ಅಂದುಕೊಳ್ಳುವೆ.

286
00:22:19,880 --> 00:22:21,440
ನಾವು ಕೆಲಸ ಮಾಡುತ್ತಿದ್ದೇವೆ ಸರ್.

287
00:22:21,520 --> 00:22:22,360
ಮಿ. ಜಾಮ್ವಾಲ್...

288
00:22:26,160 --> 00:22:27,000
ಮಿ. ಜಾಮ್ವಾಲ್?

289
00:22:27,920 --> 00:22:31,880
ನಿಮ್ಮನ್ನು ಕ್ಯಾಂಪಸ್ಸಿನಿಂದ ಹೇಗಾದರೂ
ಹೊರಗೆ ಕಳುಹಿಸುತ್ತೇವೆ. ಚಿಂತಿಸಬೇಡಿ.

290
00:22:33,920 --> 00:22:37,920
ಡೀನ್ ಸ್ವಾಮಿ, ನನಗೆ ಚಿಂತೆಯಿಲ್ಲ.
ಭಯದಿಂದ ತಪ್ಪಿಸಿಕೊಳ್ಳುತ್ತಿಲ್ಲ.

291
00:22:38,440 --> 00:22:40,480
ಆಫೀಸರ್ ಬೇಡಿ ಎದುರೇ ಹೋಗುತ್ತೇನೆ.

292
00:22:41,720 --> 00:22:43,160
ನಿಲ್ಲಿಸಲು ಅವರು ಪ್ರಯತ್ನಿಸಲಿ.

293
00:22:48,640 --> 00:22:51,560
ಏನೂ ಆಗಲ್ಲ, ಭಯ ಬೇಡ.

294
00:22:51,640 --> 00:22:53,760
ಇದು ಸುರಕ್ಷಿತವಾಗಿರುತ್ತೆ.

295
00:22:54,280 --> 00:22:57,720
ಎಲ್ಲವೂ ಸರಿಯಾಗುತ್ತೆ ಎಂದು ನಂಬುವುದು ಮುಖ್ಯ.

296
00:22:57,800 --> 00:23:00,280
ಕುಳಿತುಕೊಳ್ಳಿ.
ಸ್ವಲ್ಪ ಹೊತ್ತಿನಲ್ಲಿ ಬರುವೆ.

297
00:23:12,400 --> 00:23:15,320
"ಮೊರ್ಸ್ ನಾನ್ ಎಸ್ಟ್ ಫಿನಿಸ್. "

298
00:23:18,080 --> 00:23:19,760
ಸಾವು ಅಂತ್ಯವಲ್ಲ.

299
00:23:20,720 --> 00:23:22,800
ನನ್ನ ಮಗಳು ತೀರಿ ಹೋದ ಮೇಲೆ,

300
00:23:23,440 --> 00:23:24,960
ನಾನೂ ಹತಾಶಳಾಗಿದ್ದೆ.

301
00:23:26,680 --> 00:23:28,520
ಆಗ ನನಗೆ ಅರ್ಥವಾಗಿರಲಿಲ್ಲ,

302
00:23:29,640 --> 00:23:31,360
ಆದರೆ ಈಗ ನಾನು ನಂಬುತ್ತೇನೆ.

303
00:23:32,920 --> 00:23:34,800
"ಸಾವು ಅಂತ್ಯವಲ್ಲ. "

304
00:23:42,920 --> 00:23:45,280
ಮಾತನಾಡಬೇಕೆಂದು ಯಾವತ್ತಾದರೂ ಅನಿಸಿದರೆ...

305
00:23:49,720 --> 00:23:50,640
ನನ್ನೊಂದಿಗೆ ಅಲ್ಲ.

306
00:23:51,840 --> 00:23:54,400
ನೀವು ಕಳೆದುಕೊಂಡಿರುವವರೊಂದಿಗೆ.

307
00:23:56,120 --> 00:23:58,960
ನಿಮ್ಮ ಸಂದೇಶವನ್ನು ಅವರಿಗೆ ತಲುಪಿಸಬಲ್ಲೆ.

308
00:24:09,440 --> 00:24:10,280
ಸುಪ್ರಿಯ?

309
00:24:11,000 --> 00:24:11,920
ಸುಪ್ರಿಯ.

310
00:24:13,960 --> 00:24:14,800
ಸುಪ್ರಿಯ.

311
00:24:15,600 --> 00:24:19,520
ಮುಗಿಯಿತು. ನಮ್ಮ ನರ್ಸರಿ ಪೂರ್ಣಗೊಂಡಿದೆ.

312
00:24:19,600 --> 00:24:23,080
-ಅದ್ಭುತವಾಗಿದೆ. ಇದು ನಿನಗೆ.
-ಧನ್ಯವಾದ.

313
00:24:26,760 --> 00:24:28,480
ಸುಪ್ರಿಯ ಘೋಷ್
ಅನಿರುದ್ಧ್ ಸೆನ್ - ಅಭಿ

314
00:24:28,560 --> 00:24:30,440
ಓಹ್, ನನ್ನ ಮಗು.

315
00:24:30,520 --> 00:24:32,320
ಓಹ್, ಚಿನ್ನಾ!

316
00:24:32,400 --> 00:24:34,600
ನಿನ್ನ ಕೈ ಇಷ್ಟು ಪುಟ್ಟದಾಗಿವೆ, ಮಗು.

317
00:24:35,520 --> 00:24:37,000
ಕ್ಯಾಮೆರಾ ನೋಡು.

318
00:24:37,080 --> 00:24:40,840
ರೆಡಿ? ಮೂರು, ಎರಡು, ಒಂದು, ಸ್ಮೈಲ್!

319
00:24:41,600 --> 00:24:43,040
ಚೆನ್ನಾಗಿದೆ.

320
00:24:43,720 --> 00:24:44,560
ಸುಪ್ರಿಯ.

321
00:24:48,680 --> 00:24:49,680
ಸುಪ್ರಿಯ?

322
00:24:52,680 --> 00:24:53,520
ಸುಪ್ರಿಯ?

323
00:24:56,760 --> 00:24:58,320
ಏನಾಯಿತು?

324
00:25:01,040 --> 00:25:01,960
ಬಾಯ್ಮುಚ್ಚು.

325
00:25:02,960 --> 00:25:04,000
ಏಕೆ ರೇಗಾಡುತ್ತಿರುವೆ?

326
00:25:13,720 --> 00:25:15,800
ನನಗೆ ನಿನ್ನ ಮತ್ತು ಅಭಿಯದ್ದೇ ಚಿಂತೆ.

327
00:25:16,200 --> 00:25:19,040
ಇವು ಪೋಸ್ಟ್ ಪಾರ್ಟಂ ಡಿಪ್ರೆಶನ್ ನ
ಗಂಭೀರ ಲಕ್ಷಣಗಳು.

328
00:25:19,120 --> 00:25:21,600
-ಮನಃಶಾಸ್ತ್ರಜ್ಞರನ್ನು ನೋಡಬೇಕು.
-ನಾನು ಅವನ ತಾಯಿ!

329
00:25:21,680 --> 00:25:23,240
ನಾನು ಮಾಡುತ್ತಿರುವುದು ನಂಗೊತ್ತು.

330
00:25:47,080 --> 00:25:51,200
ಸುಪ್ರಿಯ, ಅಭಿ ಎಲ್ಲಿ? ಮಲಗಿದ್ದಾನೆಯೇ?

331
00:25:51,280 --> 00:25:52,880
ಅಭಿ, ಮಗ?

332
00:25:53,280 --> 00:25:55,240
ನನ್ನ ಮಗು.

333
00:25:56,160 --> 00:25:57,640
ಅಭಿ, ಮಗನೇ!

334
00:26:01,040 --> 00:26:01,880
ಅಭಿ?

335
00:26:05,400 --> 00:26:06,240
ಅಭಿ?

336
00:26:11,800 --> 00:26:13,160
ಅಭಿ.

337
00:26:14,840 --> 00:26:16,000
ಅಭಿ...

338
00:26:18,960 --> 00:26:19,800
ಅಭಿ!

339
00:26:20,920 --> 00:26:21,760
ಸುಪ್ರಿಯ!

340
00:26:22,840 --> 00:26:24,280
ನೀನೇನು ಮಾಡಿದೆ?

341
00:26:24,360 --> 00:26:25,240
ಅಭಿ, ನನ್ನ ಮಗ!

342
00:26:34,560 --> 00:26:35,400
ಅಭಿ!

343
00:26:36,000 --> 00:26:36,840
ಅಭಿ!

344
00:26:38,160 --> 00:26:40,080
ಏನಾಯಿತು? ಛೇ!

345
00:26:40,680 --> 00:26:41,520
ಛೆ!

346
00:26:44,920 --> 00:26:46,240
ಅಭಿ!

347
00:26:52,280 --> 00:26:56,000
ಅನಿ, ಸರ್! ಅನಿ, ಸರ್! ಅನಿ, ಸರ್!

348
00:26:56,080 --> 00:26:58,800
-ಸಹಾಯಕ್ಕಾಗಿ ಯಾರನ್ನಾದರೂ ಕರೆಯಿರಿ!
-ಸುಪ್ರಿಯ ಮೇಡಂ!

349
00:26:58,880 --> 00:27:00,240
ಸುಪ್ರಿಯ ಮೇಡಂ!

350
00:27:29,840 --> 00:27:31,560
ಧನ್ಯವಾದ ಮೇಡಂ.

351
00:27:31,640 --> 00:27:33,040
ಚೌಹಾನ್

352
00:27:33,120 --> 00:27:34,040
ಮಿ. ಚೌಹಾನ್.

353
00:27:34,120 --> 00:27:36,960
-ಹೇಳಿ.
-ಅಧಿರಾಜ್ ಜೈಸಿಂಗ್, 2007 ಬ್ಯಾಚ್.

354
00:27:37,440 --> 00:27:39,120
-ಕ. ಜೈಸಿಂಗ್ ಅವರ ಮೊಮ್ಮಗ?
-ಹೌದು.

355
00:27:39,680 --> 00:27:42,840
ನಿಮ್ಮಲ್ಲಿ ಒಂದು ವಿಷಯ ಕೇಳಬೇಕು.
ನಿನಾದ್ ರಮನ್ ನ ನೆನಪಿದೆಯೇ?

356
00:27:43,480 --> 00:27:44,600
ನನ್ನ ಬ್ಯಾಚಿನಲ್ಲಿದ್ದ.

357
00:27:45,160 --> 00:27:46,480
-ಮಿ. ರಮಣ್ ಅವರ ಮಗ.
-ಹೌದು.

358
00:27:47,240 --> 00:27:49,920
ಅವನು ಮಾಡಿದ್ದು ತಪ್ಪು,
ಮನೆಯಿಂದ ಓಡಿ ಹೋಗಬಾರದಿತ್ತು.

359
00:27:50,680 --> 00:27:55,120
ಕೊನೆಯ ದಿನ, ನನ್ನ ಅಂಗಡಿಗೆ ರಿಬ್ಬನ್
ಮತ್ತು ಇತರ ವಸ್ತು ಖರೀದಿಸಲು ಬಂದಿದ್ದ.

360
00:27:55,920 --> 00:27:57,440
ಅದರ ಹಣ ಇನ್ನೂ ಬಾಕಿ ಇರಿಸಿದ್ದಾನೆ.

361
00:27:58,200 --> 00:28:01,520
ಮಿ. ರಮಣ್ ಅದನ್ನು ಪಾವತಿಸುವುದಾಗಿ ಹೇಳಿದರು,
ನಾನು ನಿರಾಕರಿಸಿದೆ.

362
00:28:02,040 --> 00:28:03,440
ನಿನಾದ್ ಪಾವತಿಸಬೇಕು ನನಗೆ.

363
00:28:04,840 --> 00:28:08,640
ಮಿ. ಚೌಹಾನ್, ಅವರು ಆಗ ಬಸ್ ಟಿಕೆಟುಗಳನ್ನು
ನಿಮ್ಮಿಂದ ಖರೀದಿಸುತ್ತಿದ್ದರೇ?

364
00:28:08,720 --> 00:28:09,560
ಹೌದು, ಖಂಡಿತ.

365
00:28:09,640 --> 00:28:12,040
ನಿನಾದನ ಟಿಕೆಟನ್ನೂ ಇಲ್ಲಿಂದಲೇ ಖರೀದಿಸಿದ್ದರೇ?

366
00:28:12,120 --> 00:28:14,640
ಹೌದು. ಅದನ್ನು ಖರೀದಿಸಲು
ದೇವಿ ಪ್ರಸಾದ್ ಬಂದಿದ್ದ.

367
00:28:15,400 --> 00:28:18,800
ನನಗೆ ನೆನಪಿದೆ, ಏಕೆಂದರೆ ಅವನಿಗೆ
ಒಂದು ಅಪಘಾತವಾಗಿತ್ತು.

368
00:28:19,520 --> 00:28:20,920
ಮೈ ತುಂಬಾ ಮಣ್ಣಿತ್ತು,

369
00:28:21,000 --> 00:28:22,640
ಮತ್ತು ಕುಂಟುತ್ತಿದ್ದ.

370
00:28:23,360 --> 00:28:25,480
ನಾನು ಖರೀದಿಸಲಿಲ್ಲ. ಕೋಚ್ ವ್ಯಾಸ್ ಕರೆದೊಯ್ದರು.

371
00:28:25,560 --> 00:28:29,080
ಟಿಕೆಟ್ ಯಾರೋ ಖರೀದಿಸಿದ್ದರು.
ಆ ದಿನ ಕೋಚ್ ವ್ಯಾಸ್ ನನ್ನನ್ನು ಹೊರ ಕಳಿಸಿದ್ದರು.

372
00:28:29,160 --> 00:28:31,560
ವಾಪಸ್ ಬರುವಾಗ ಅಪಘಾತವಾಗಿತ್ತು.

373
00:28:31,640 --> 00:28:35,080
ಡೀನ್ ವ್ಯಾಸ್ ಅದೃಷ್ಟದ ಬ್ಯಾಚ್ ಎಂದು
ಉಲ್ಲೇಖಿಸುತ್ತಿದ್ದರೆಂದು ಕೇಳಿದ್ದೆ.

374
00:28:35,160 --> 00:28:37,800
ನಿಮ್ಮ ಪದವಿ ಮುಗಿದ ಕೂಡಲೇ ಅವರನ್ನು ಡೀನ್
ಆಗಿ ಆರಿಸಲಾಗಿತ್ತು.

375
00:28:37,880 --> 00:28:40,280
ನೀನು ದೇವಿ ಪ್ರಸಾದನನ್ನು ನೋಡಿದೆಯಾ?
ಆತ ಈಗ ಕೇಟರರ್.

376
00:28:40,360 --> 00:28:43,960
ಡೀನ್, ಸುಯಾಶ್, ರಜತ್,
ಎಲ್ಲರೂ ಹೇಗೋ ಶಾಮೀಲಾಗಿದ್ದಾರೆ.

377
00:28:44,040 --> 00:28:46,880
ನೀನು ಸ್ವಾರ್ಡ್ ಆಫ್ ಆನರ್,
ಅವಳು ಶಿಕ್ಷಕರ ಮಗಳು.

378
00:28:46,960 --> 00:28:50,080
ದೇವ್ ಪ್ರತಾಪ್ ಜಮ್ವಾಲ್ ಆಗಿಯೂ
ನಿನಗೆ ನಮ್ಮ ಬಗ್ಗೆ ಉರಿ?

379
00:28:50,160 --> 00:28:52,040
ದೇವ್ ಪದವಿ ಪಡೆದಾಯಿತು.

380
00:28:52,120 --> 00:28:55,080
ಈಗ ಸಣ್ಣ ಕೆಲಸಗಳಿಗೆ ದೊಡ್ಡ ಟಿಪ್ಸ್
ಯಾರು ಕೊಡುತ್ತಾರೆ?

381
00:28:56,240 --> 00:28:58,800
ನಿನ್ನ ಶೂಗಳನ್ನು ಇಂದು ಯಾರೂ ಪರಿಶೀಲಿಸುವುದಿಲ್ಲ!

382
00:28:58,880 --> 00:29:00,280
ಇವತ್ತೂ ಬಂಕ್ ಮಾಡ್ತೀಯಾ?

383
00:29:02,120 --> 00:29:05,560
ಆ ದಿನ ನಿನಾದನೊಂದಿಗೆ ಏನಾಯಿತು?

384
00:29:05,640 --> 00:29:07,320
ನಿನಗೆ ಯಾವತ್ತೂ ಮಾಲ್ವಿಕ ಬೇಕಿದ್ದಳು.

385
00:29:07,400 --> 00:29:09,840
ಆದರೆ ಮಾಲ್ವಿಕಾಗೆ ಅಧಿರಾಜ್ ಬೇಕಿದ್ದ.

386
00:29:10,400 --> 00:29:13,080
ಹೃದಯ ಚೂರಾಗಿದ್ದ ಮಾಲ್ವಿಕಳನ್ನು
ಕೂಡ ಪುಸಲಾಯಿಸಿದ್ದೆ.

387
00:29:13,160 --> 00:29:16,920
ನಾವು ಅದನ್ನು ಕೊನೆಯ ದಿನ ನೋಡಿದ್ದೆವು.
ಮಾಲ್ವಿಕಳ ಕಣ್ಣೀರನ್ನು ದೇವ್ ಒರಸುತ್ತಿದ್ದ.

388
00:29:17,000 --> 00:29:20,120
"ಮಾಲ್ವಿಕ ಅಳುವಂತೆ ಮಾಡಿದ ನಿನಾದನಿಗೆ
ನಾನು ಶಿಕ್ಷಿಸುತ್ತೇನೆ!"

389
00:29:20,800 --> 00:29:23,080
ನೀನು ಮಾಲ್ವಿಕ ಅಳುವಂತೆ ಮಾಡಿದೆ.

390
00:29:23,160 --> 00:29:25,560
ನಿನಗೆ ಪಾಠ ಕಲಿಸಬೇಕಿದೆ.

391
00:30:03,160 --> 00:30:04,320
ಬೇಗ!

392
00:30:04,400 --> 00:30:07,800
ಇಲ್ಲಿಂದ ಹೊರಹೋಗು!

393
00:30:55,720 --> 00:31:00,320
ನಾಯಿಗೆ ಪಾಠ ಕಲಿಸಬೇಕಿತ್ತು, ಅದಕ್ಕೆ ನಾಯಿಮರಿಗಳು
ಸಾಯಬೇಕಾಯಿತು, ಮಿಸ್.

394
00:31:04,560 --> 00:31:05,400
ವೇದಾಂತ್?

395
00:31:06,560 --> 00:31:09,560
ಅವರಿಗೆ ಪಾಠ ಕಲಿಸಬೇಕಿದೆ.

396
00:31:14,160 --> 00:31:16,680
ವೇದಾಂತನಿಂದ ದೂರವಿರಿ.

397
00:32:09,880 --> 00:32:11,000
ಓದುವ ಕೊಠಡಿ

398
00:32:25,920 --> 00:32:28,400
ನಾಳೆ ಬೆಳಿಗ್ಗೆ ಎಲ್ಲರೂ ಮನೆಗೆ ಹೋಗಬಹುದು.

399
00:32:28,840 --> 00:32:29,960
ಈ ಜನರನ್ನು ಹೊರತುಪಡಿಸಿ.

400
00:32:30,760 --> 00:32:35,080
ಪಾರ್ಥ್, ಇಮಾದ್, ತೇನ್ ಸಿಂಗ್, ಅಧಿರಾಜ್, ದೇವ್,
ಮಾಲ್ವಿಕ.

401
00:32:35,160 --> 00:32:36,640
ಆದರೆ ಸರ್, ಯಾವ ಆಧಾರದ ಮೇಲೆ?

402
00:32:37,360 --> 00:32:39,320
ನಾನು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ.

403
00:32:39,400 --> 00:32:42,240
-ಮಾಲ್ವಿಕ! ನಾವು ಹೊರಡಬೇಕು.
-ಏನಾಯಿತು ದೇವ್?

404
00:32:42,320 --> 00:32:43,560
ಎಲ್ಲಿಗೆ ಹೋಗುತ್ತಿರುವೆ?

405
00:32:43,640 --> 00:32:45,680
-ನಿನ್ನ ಹೆಸರು ಪಟ್ಟಿಯಲ್ಲಿದೆ.
-ಪರವಾಗಿಲ್ಲ.

406
00:32:45,760 --> 00:32:46,640
ಜಾಮ್ವಾಲ್.

407
00:32:47,320 --> 00:32:48,440
ನಿನ್ನನ್ನು ಬಂಧಿಸುವೆ.

408
00:32:48,920 --> 00:32:50,720
ಏಕೆ? ನಾನೇನು ಮಾಡಿದೆ?

409
00:32:51,240 --> 00:32:52,760
ನಾವೇನು ಮಾಡಿದ್ದೇವೆ?

410
00:32:53,600 --> 00:32:58,440
ಸಾಮಾನ್ಯ ಅಧಿಕಾರಿಯೊಬ್ಬರ ಠೊಳ್ಳು ಬೆದರಿಕೆಗಳಿಗೆ
ಭಯ ಪಡುವ ಅಗತ್ಯವಿಲ್ಲ.

411
00:32:58,960 --> 00:33:03,000
ಐದು ನಿಮಿಷಗಳಲ್ಲಿ ಇಲ್ಲಿಗೆ ಕಾರು ಬರುತ್ತದೆ.
ಮಾತನಾಡದೆ ಕಾರು ಹತ್ತಿಬಿಡು.

412
00:33:04,400 --> 00:33:06,160
ನಮ್ಮ ವಕೀಲರು ಅವರೊಂದಿಗೆ ವ್ಯವಹರಿಸುವರು.

413
00:33:11,840 --> 00:33:16,160
ಪೊಲೀಸರು ಗೇಟಿನಲ್ಲಿ ಕಾರುಗಳನ್ನು
ಪರಿಶೀಲಿಸುತ್ತಿದ್ದಾರೆ. ಅಡ್ಮಿನ್ ಬ್ಲಾಕ್ ಈಕಡೆ.

414
00:33:16,720 --> 00:33:18,680
-ಹೋಗಿ, ಜಾಗ್ರತೆ.
-ಧನ್ಯವಾದ.

415
00:33:21,720 --> 00:33:24,000
-ಎಲ್ಲಾ ಅಧಿಕಾರಿಗಳು ಗೇಟಿನಲ್ಲಿರಬೇಕು.
-ಸರ್.

416
00:33:25,640 --> 00:33:27,000
ನಮ್ಮನ್ನು ತಡೆಯಲು ಆಗಲ್ಲ.

417
00:33:28,240 --> 00:33:31,120
ಕಾರು ತರುತ್ತೇನೆ.
ಇಲ್ಲಿಯೇ ಇರು. ಸರಿ ತಾನೇ?

418
00:33:36,200 --> 00:33:37,040
ಆಫೀಸರ್,

419
00:33:37,720 --> 00:33:40,640
ಗೇಟಿನಿಂದ ಹೊರಗೆ ಅಥವಾ ಒಳಗೆ
ಯಾರೂ ಹೋಗದಂತೆ ನೋಡಿಕೊಳ್ಳಿ.

420
00:33:41,520 --> 00:33:43,960
ಅಗತ್ಯ ಬಿದ್ದರೆ, ಬಂಧಿಸಿ.

421
00:33:50,640 --> 00:33:51,560
ಹಲೋ, ಸುಪ್ರಿಯ?

422
00:33:52,840 --> 00:33:54,360
ಸುಪ್ರಿಯ, ಸುಪ್ರಿಯ?

423
00:33:56,120 --> 00:34:00,800
ದೇವ್ ಪ್ರತಾಪ್ ಜಾಮ್ವಾಲ್
ಶಾಲೆಯ ಹೊರಗೆ ಕಾಲಿಡಲು ಸಾಧ್ಯವಿಲ್ಲ.

424
00:34:00,880 --> 00:34:03,640
ಸ್ವಲ್ಪ ಹೊತ್ತಿನಲ್ಲಿ ಅವರ ಚಾಲಕ
ಬರುವರೆಂದು ನಮಗೆ ಮಾಹಿತಿಯಿದೆ.

425
00:34:03,720 --> 00:34:05,840
ಕಾರುಗಳನ್ನು ಶಾಲೆಯ ಒಳಗೆ ಬಿಡಬೇಡಿ.

426
00:34:05,920 --> 00:34:08,840
ಮತ್ತೆ ಹೇಳುತ್ತಿದ್ದೇನೆ,
ಕಾರುಗಳನ್ನು ಶಾಲೆಯ ಒಳಗೆ ಬಿಡಬೇಡಿ.

427
00:34:09,840 --> 00:34:11,840
ದೇವ್! ನಿಲ್ಲು, ದೇವ್!

428
00:34:13,600 --> 00:34:14,640
ನಿಲ್ಲು, ದೇವ್!

429
00:34:16,120 --> 00:34:18,840
ಗೇಟಿನಿಂದ ಹೊರಗೆ ಕಾಲಿಟ್ಟರೆ ನೀನು ಸಾಯುವೆ.

430
00:34:19,920 --> 00:34:22,600
ನೀನು ಕೂಡ ಅವನನ್ನು ನೋಡಿದೆಯಲ್ಲ.
ಅದಕ್ಕೆ ಓಡಿ ಹೋಗುತ್ತಿರುವೆ.

431
00:34:24,040 --> 00:34:28,320
ಸುಯಾಶ್, ರಜತ್ ಮತ್ತು ನೀನು ಆ ದಿನ ನಿನಾದನಿಗೆ
ಹೊಡೆದದ್ದೇ ಅಲ್ಲದೆ ಅವನನ್ನು ಸಾಯಿಸಿದಿರಿ.

432
00:34:28,840 --> 00:34:31,080
ಅದಕ್ಕೆ ವ್ಯಾಸ್ ಬಳಿ ಓಡಿ ಬಂದೆಯಾ?

433
00:34:31,560 --> 00:34:33,160
ನಕಲಿ ಸ್ಲಿಪ್ಗೆ ಸಹಿ ಮಾಡಲು ಅಲ್ಲ,

434
00:34:33,680 --> 00:34:35,800
ಬದಲು ನೀನು ಮಾಡಿದ್ದನ್ನು ಮರೆಮಾಚಲು!

435
00:34:37,280 --> 00:34:39,520
ದೇವ್, ಎಲ್ಲರೆದುರು ಒಪ್ಪಿಕೊ.

436
00:34:40,000 --> 00:34:41,440
ಇಲ್ಲ ಅವನು ಸಾಯಿಸುತ್ತಾನೆ.

437
00:34:46,320 --> 00:34:47,560
ನಾನೇನೂ ಮಾಡಲಿಲ್ಲ.

438
00:34:48,840 --> 00:34:50,320
ನಿನಗೆ ಹುಚ್ಚು.

439
00:34:51,560 --> 00:34:52,920
ನನಗೆ ಹುಚ್ಚು ಎಂದಾದರೆ,

440
00:34:54,680 --> 00:34:57,440
ನೀನು ಶಾಲೆಯ ಗೇಟಿನ ಹೊರಗೆ ಕಾಲಿಟ್ಟು ತೋರಿಸು.

441
00:34:58,120 --> 00:34:58,960
ಅಲ್ಲಿ!

442
00:35:00,040 --> 00:35:01,200
ನನ್ನ ಕಾರುಗಳು ಬಂದವು.

443
00:35:01,800 --> 00:35:02,640
ನೋಡುತ್ತಿರು.

444
00:35:18,360 --> 00:35:20,640
ಏನಾಯಿತು?

445
00:36:13,640 --> 00:36:15,840
ಸರ್, ಕೂಡಲೇ ಗೇಟ್ ಹತ್ತಿರ ಬನ್ನಿ.

446
00:36:49,480 --> 00:36:52,400
ಮಿ. ಮನೋಹರ್. ಮಕ್ಕಳ ಬಳಿ ಹೋಗಿ.
ಎಲ್ಲರೂ ಒಳಗೆ ಹೋಗಿ. ಬೇಗ.

447
00:36:57,440 --> 00:36:58,280
ದೇವ್!

448
00:37:04,160 --> 00:37:05,040
ದೇವ್!

449
00:39:06,160 --> 00:39:08,160
ಉಪ ಶೀರ್ಷಿಕೆ ಅನುವಾದ: ಜಯಶ್ರೀ

450
00:39:08,200 --> 00:39:10,200
ಸೃಜನಶೀಲ ಮೇಲ್ವಿಚಾರಕರು
ಸುಬ್ಬಯ್ಯ ಕೆಜಿ

