1
00:00:12,263 --> 00:00:13,264
ಇದು ನಾನು.

2
00:00:13,848 --> 00:00:15,057
ಅವಳು ಸಿಕ್ಕಿದಳು.

3
00:00:16,934 --> 00:00:19,061
ಸೋಲ್‌ಗೆ ಬರುತ್ತಿದ್ದಾಳೆ,
ಆದರೆ ಜಾಸ್ತಿ ದಿನ ಇರಲ್ಲ.

4
00:00:19,145 --> 00:00:20,438
ನಾನು ಅವಳ ಹಿಂದೆ ಹೋಗಬೇಕು.

5
00:00:29,989 --> 00:00:33,451
ಸೋಲ್, ದಕ್ಷಿಣ ಕೊರಿಯಾ

6
00:00:50,676 --> 00:00:52,845
ಸರಿ. ಸರಿ. ಸರಿ.

7
00:01:30,132 --> 00:01:31,967
ನಿಮ್ಮ ಸ್ನೇಹಿತ ಚೆನ್ನಾಗಿ ಹಾಡ್ತಾನೆ!

8
00:01:32,051 --> 00:01:34,011
ಅವನು ನಿಮ್ಮ ಕಡೆಯವನು ಅಲ್ವಾ?

9
00:01:34,720 --> 00:01:38,974
ಚೀರ್ಸ್!

10
00:01:46,649 --> 00:01:47,775
ಎಲ್ಲಿಗೆ ಹೋಗುತ್ತಿದ್ದೀಯಾ?

11
00:01:49,485 --> 00:01:51,821
ಹೆಚ್ಚು ಸೋಜುಗಾಗಿ!

12
00:02:24,311 --> 00:02:25,187
ಸ್ಥಿತಿ?

13
00:02:25,271 --> 00:02:27,314
ಯಾರೂ ಇಲ್ಲ. ಗುರಿಯು ಸ್ಥಾನದಲ್ಲಿದ್ದಾರೆ.

14
00:02:27,398 --> 00:02:29,650
ಕ್ಯಾಡಿಸ್ ಪ್ರೈವೇಟ್ ಇಂಟೆಲಿಜೆನ್ಸ್
ಸೋಲ್ ಪ್ರಧಾನ ಕಛೇರಿ

15
00:02:29,733 --> 00:02:31,652
ಭದ್ರತೆ ತುಂಬಾ ಇರುತ್ತದೆ.

16
00:02:41,161 --> 00:02:43,998
ಗುರಿ ಕೊನ್ರಾಡ್ ಹೋಟೆಲ್‌ನ
ಒಂಬತ್ತನೇ ಮಹಡಿಯಲ್ಲಿದ್ದಾರೆ.

17
00:02:44,081 --> 00:02:45,082
ಕಾರ್ಯಾಚರಣೆ ಆರಂಭವಾಗಿದೆ.

18
00:02:50,087 --> 00:02:52,756
ಕೊನ್ರಾಡ್

19
00:02:58,095 --> 00:03:01,056
ಇದಕ್ಕೆ ಸಮಯ ಕೊಟ್ಟಿದ್ದಕ್ಕೆ ಧನ್ಯವಾದ.
ನೀವು ಚಿತ್ರಗಳನ್ನು ಕಳಿಸಿದಿರಿ ಅಂತ ಗೊತ್ತು,

20
00:03:01,140 --> 00:03:03,517
ಆದರೆ ನಾನು ಸ್ಥಳವನ್ನು ಖುದ್ದಾಗಿ ನೋಡಲು ಬಯಸಿದೆ.

21
00:03:05,144 --> 00:03:06,437
ಏನು ನಡೆಯುತ್ತಿದೆ?

22
00:03:06,520 --> 00:03:08,898
ಮಿಖೈಲ್ ಕಾರ್ಪೋವ್ ಇಂದು
ಸಂದರ್ಶನಗಳನ್ನು ನೀಡುತ್ತಿದ್ದಾರೆ.

23
00:03:08,981 --> 00:03:09,940
ಯಾರು ಅವರು?

24
00:03:10,024 --> 00:03:12,192
ದಕ್ಷಿಣ ಕೊರಿಯಾಗೆ ರಷ್ಯಾದ ರಾಯಭಾರಿ.

25
00:03:13,027 --> 00:03:15,404
ಅವರು ಪುಟಿನ್‌ರ
ಅತ್ಯುತ್ತಮ ಸ್ನೇಹಿತರಲ್ಲಿ ಒಬ್ಬರು.

26
00:03:19,116 --> 00:03:22,202
ಇದು ಸೀಮಂತಕ್ಕಾಗಿ ನಮ್ಮಲ್ಲಿರುವ
ಅತ್ಯಂತ ಜನಪ್ರಿಯ ಸೆಟ್.

27
00:03:22,286 --> 00:03:24,163
ಗಂಡು ಮಗುವಿಗೆ, ನಿಮಗೆ ಈ ಬಣ್ಣ ಇಷ್ಟವಾಗುತ್ತೆ...

28
00:03:24,246 --> 00:03:26,916
ಕ್ಷಮಿಸಿ. ನಾನು ಶೌಚಾಲಯವನ್ನು ಬಳಸಬೇಕು.

29
00:03:26,999 --> 00:03:29,793
ನನಗೆ ಸಿಗುವ ಆನಂದಗಳಲ್ಲಿ ಇದೂ ಒಂದು.

30
00:03:45,809 --> 00:03:47,186
ಮಿಸ್, ಆರಾಮಿದ್ದೀರಾ?

31
00:03:47,269 --> 00:03:49,188
-ನನ್ನನ್ನು ಕ್ಷಮಿಸಿ.
-ದಯವಿಟ್ಟು ಕುಳಿತುಕೊಳ್ಳಿ.

32
00:03:49,271 --> 00:03:50,648
ನನಗೆ ತಲೆ ಸುತ್ತುತ್ತಿದೆ.

33
00:03:50,731 --> 00:03:53,525
-ವೈದ್ಯರನ್ನು ಕರೆಸಲೇ?
-ಬೇಡ, ದಯವಿಟ್ಟು. ನಾನು ಬರೀ...

34
00:03:53,609 --> 00:03:55,194
ಕಡಿಮೆ ಸಕ್ಕರೆಯ ಮಟ್ಟ, ಅನಿಸುತ್ತೆ.

35
00:03:55,277 --> 00:03:58,113
ಕುಡಿಯಲು ಏನಾದರೂ
ಸಿಹಿಯಾಗಿರುವುದನ್ನು ತಂದುಕೊಡಬಲ್ಲಿರಾ?

36
00:03:58,197 --> 00:04:00,157
-ಬಹುಶಃ ರಸ?
-ಖಂಡಿತ. ಹಾಂ.

37
00:04:00,240 --> 00:04:01,075
ಧನ್ಯವಾದ.

38
00:04:36,860 --> 00:04:38,112
ಕ್ಷಮಿಸಿ. ನನ್ನನ್ನು ಕ್ಷಮಿಸಿ.

39
00:04:38,195 --> 00:04:39,863
-ನೀವು ಅಮೆರಿಕಾದವರಾ?
-ಹೌದು.

40
00:04:40,280 --> 00:04:43,200
-ನೀವು ಮಾಧ್ಯಮದ ಕಡೆಯವರಾ?
-ಇಲ್ಲ.

41
00:04:44,034 --> 00:04:46,161
ಈ ಪ್ರದೇಶಕ್ಕೆ ಸಾರ್ವಜನಿಕರಿಗೆ ಅನುಮತಿ ಇಲ್ಲ.

42
00:04:46,245 --> 00:04:48,831
ಕ್ಷಮಿಸಿ. ನನಗೆ ತಲೆ ಸುತ್ತು ಬಂತು
ಮತ್ತು ನಾನು...

43
00:04:49,456 --> 00:04:51,250
ನಾನು ಹೋಗುತ್ತೇನೆ. ಕ್ಷಮಿಸಿ.

44
00:04:51,875 --> 00:04:52,918
ಒಂದು ನಿಮಿಷ.

45
00:04:54,920 --> 00:04:56,255
ರಸವನ್ನು ಮರೆತಿರಿ.

46
00:04:57,006 --> 00:04:57,923
ಧನ್ಯವಾದ.

47
00:05:11,061 --> 00:05:13,647
ಆಂಬ್ಯುಲೆನ್ಸ್‌ಗೆ ಕರೆ ಮಾಡಿ! ವೈದ್ಯರು ಬೇಕು.

48
00:05:33,375 --> 00:05:35,586
ಇದನ್ನು ಮಾಡಿದ್ದು ಯಾರು? ಅವರೊಂದಿಗೆ ಯಾರಿದ್ದರು?

49
00:05:35,669 --> 00:05:37,046
ಅವರನ್ನು ಹುಡುಕಿ.

50
00:05:43,052 --> 00:05:45,345
ಒಬ್ಬ ಗರ್ಭಿಣಿ ಕೆಳಗಡೆ ಹೋಗುತ್ತಿದ್ದಾಳೆ.

51
00:05:45,429 --> 00:05:46,680
ಅವಳನ್ನು ತಡೆಯಿರಿ.

52
00:06:48,659 --> 00:06:49,618
ಹೇ!

53
00:07:14,685 --> 00:07:16,937
ಅವಳು ಸಭಾಂಗಣದಲ್ಲಿದ್ದಾಳೆ.

54
00:07:17,020 --> 00:07:18,856
ಅವಳು ಹೊರಗೆ ಹೋಗದಂತೆ ತಡೆಯಿರಿ.

55
00:07:20,816 --> 00:07:22,484
-ಮಾತನಾಡು.
-ನಾನು ತೊಂದರೆಯಲ್ಲಿದ್ದೇನೆ.

56
00:07:22,568 --> 00:07:26,029
ಕಾರ್ಪೋವ್‌ನ ಭದ್ರತೆಯವರು ನನ್ನನ್ನು
ಒಂಬತ್ತನೇ ಮಹಡಿಯ ಸಭಾಂಗಣದೊಳಗೆ ಬಂಧಿಸಿದ್ದಾರೆ.

57
00:07:26,113 --> 00:07:27,281
ನನ್ನ ನಿರ್ಗಮನಗಳು ಎಲ್ಲಿವೆ?

58
00:07:27,531 --> 00:07:30,826
ಕೋಣೆಯ ವಾಯುವ್ಯ ಮೂಲೆಯಲ್ಲಿ
ಸೇವಾ ಮೆಟ್ಟಿಲುಗಳಿವೆ,

59
00:07:30,909 --> 00:07:32,536
ಆದರೆ ಅವು ಲಾಬಿ ಕಡೆಗೆ ಹೋಗುತ್ತವೆ.

60
00:07:43,755 --> 00:07:45,215
ತಪ್ಪು ಕೋಣೆಗೆ ಬಂದಿದ್ದೀರಿ!

61
00:08:06,028 --> 00:08:07,863
ಅವಳು ಕಿಟಕಿಯಿಂದ ಹೊರಗೆ ಹೋದಳು.

62
00:08:07,946 --> 00:08:10,824
ಹೋಟೆಲ್ ಮುಂದಿನ ರಸ್ತೆ ಪರಿಶೀಲಿಸಿ.

63
00:08:12,534 --> 00:08:14,203
ಬಿಡು, ನನ್ನ ಬಳಿ ಸೋಜು ಇದೆ!

64
00:08:14,286 --> 00:08:16,747
ಆಟ ಆಡೋದು ನಿಲ್ಲಿಸಿ ಬಾಗಿಲು ತೆಗೆಯೋ!

65
00:08:16,830 --> 00:08:18,957
ತಪ್ಪು ಕೋಣೆಗೆ ಬಂದಿದ್ದೀರಿ ಅಂದೆ!

66
00:09:45,085 --> 00:09:46,253
ನಿಷ್ಕರ್ಷಣಾ ಘಟ್ಟ

67
00:09:48,046 --> 00:09:49,798
ಸಂಜ್ಞೆ ಕಳಿಸಿ

68
00:09:49,881 --> 00:09:50,716
ಕಳಿಸಲಾಗಿದೆ

69
00:09:53,010 --> 00:09:56,430
ನಿಷ್ಕರ್ಷೆಯ ನಿರ್ದೇಶಾಂಕಗಳು ಸಿಕ್ಕಿವೆ.
ಈಗ ಸ್ಥಳಕ್ಕೆ ಹೊರಟಿರುವೆ.

70
00:10:13,488 --> 00:10:16,491
ನಿಷ್ಕರ್ಷಣಾ ಘಟ್ಟ

71
00:12:16,695 --> 00:12:17,654
ನೋಡಿಕೋ!

72
00:12:18,864 --> 00:12:20,115
ಅಯ್ಯೋ, ದೇವರೇ!

73
00:12:24,995 --> 00:12:25,829
ಅಯ್ಯೋ.

74
00:13:00,780 --> 00:13:01,865
ಬಾ.

75
00:13:17,088 --> 00:13:17,923
ಛೆ!

76
00:13:39,277 --> 00:13:40,487
ಸರಿ. ಸರಿ.

77
00:13:41,780 --> 00:13:42,948
ಹೆಚ್ಚುವರಿ ನೆರವು ಕರೆಸಿ!

78
00:13:53,124 --> 00:13:57,754
ಬಟರ್ಫ್ಲೈ

79
00:13:58,964 --> 00:14:04,970
ಕ್ಯಾಡಿಸ್ ರಹಸ್ಯ ತಾಣ
ಗುಪ್ತ ಸ್ಥಳ

80
00:14:07,138 --> 00:14:08,181
ಹಾಯ್, ಮ್ಯಾನಿ.

81
00:14:10,559 --> 00:14:11,810
ನಿನ್ನ ಚೆನ್ನಾಗಿರೋದನ್ನ ನೋಡಿದ್ದೀನಿ.

82
00:14:13,520 --> 00:14:16,898
ನಿನಗೆ ಇನ್ನೆಷ್ಟು ಹೊತ್ತು ಪ್ರಜ್ಞೆ ಇರುತ್ತೋ
ಗೊತ್ತಿಲ್ಲ, ವಿಷಯಕ್ಕೆ ಬರುತ್ತೇನೆ.

83
00:14:18,275 --> 00:14:19,734
ನೀನು ನನಗೆ ದ್ರೋಹ ಮಾಡಿದ್ದು ನನಗೆ ಗೊತ್ತು.

84
00:14:21,278 --> 00:14:25,198
ಸೂಕ್ಷ್ಮವಾದ ಕ್ಯಾಡಿಸ್ ಮಾಹಿತಿಯನ್ನು ಯುಎಸ್
ಗುಪ್ತದಳಕ್ಕೆ ಕೊಡಲು ಪ್ರಯತ್ನಿಸಿದೆ ಅಂತ ಗೊತ್ತು.

85
00:14:25,991 --> 00:14:28,076
ನೀನು ಯಾರ ಜೊತೆ ಕೆಲಸ ಮಾಡುತ್ತಿದ್ದೆ ಹೇಳು.

86
00:14:28,618 --> 00:14:30,328
ನೀನು ದರಿದ್ರದವಳು, ಜೂನೋ.

87
00:14:31,454 --> 00:14:35,542
ಶತ್ರುಗಳಿಗೆ ನೆರವಾಗಲು ನಿನ್ನ ಸ್ವಂತ ದೇಶ,
ನನ್ನ ದೇಶವನ್ನು ಮಾರಿಕೊಳ್ಳುತ್ತೀಯಾ?

88
00:14:36,042 --> 00:14:38,878
ಹಾಗಾಗಲು ಬಿಡುತ್ತೇನೆ ಅಂದುಕೊಂಡೆಯಾ?

89
00:14:39,713 --> 00:14:42,007
ನಾನು ಖಾಸಗಿ ಗುಪ್ತಚರ ವ್ಯವಹಾರದಲ್ಲಿದ್ದೇನೆ.

90
00:14:42,799 --> 00:14:44,968
ನನಗೆ ಇರುವ ಏಕೈಕ ಶತ್ರು ಶಾಂತಿ.

91
00:14:45,051 --> 00:14:46,094
ನೀನು ದೇಶದ್ರೋಹಿ.

92
00:14:47,804 --> 00:14:49,180
ಸಿಐಎ ನಿನ್ನನ್ನು ತಡೆಯುತ್ತದೆ.

93
00:14:49,806 --> 00:14:50,932
ಸಿಐಎನಾ?

94
00:14:52,183 --> 00:14:54,102
ನನಗೆ ಇದನ್ನು ಹೇಳಿಕೊಟ್ಟಿದ್ದು ಯಾರು ಅಂದುಕೊಂಡೆ?

95
00:14:56,271 --> 00:14:57,814
ನೀನು ಯಾರೊಂದಿಗೆ ಕೆಲಸ ಮಾಡುತ್ತಿದ್ದೆ?

96
00:15:02,485 --> 00:15:04,654
ನೀನು ನನ್ನ ಅತ್ಯುತ್ತಮ
ವ್ಯಕ್ತಿಗಳಲ್ಲಿ ಒಬ್ಬನಾಗಿದ್ದೆ.

97
00:15:06,948 --> 00:15:08,283
ನಾನು ಇದನ್ನು ಸರಳಗೊಳಿಸುತ್ತೇನೆ.

98
00:15:08,825 --> 00:15:12,495
ನಾನು ತಿಳಿಯಬೇಕಿರುವುದನ್ನು ಹೇಳು,
ಆಗ ನಾನು ನಿನ್ನ ಕುಟುಂಬವನ್ನು ಕೊಲ್ಲಲ್ಲ.

99
00:15:16,082 --> 00:15:18,460
ಸೋಫಿಗೆ ಈಗ ಎಷ್ಟು, ಐದು ವರ್ಷಗಳಾ?

100
00:15:31,640 --> 00:15:32,974
ನಿನಗೆ ಹತ್ತು ಕ್ಷಣಗಳಿವೆ.

101
00:15:40,690 --> 00:15:41,608
ಸಮಯ ಮುಗಿಯಿತು.

102
00:15:47,447 --> 00:15:48,907
ಆತನ ಹೆಸರು...

103
00:15:49,866 --> 00:15:51,368
ಯಾಕುಬ್ ಡಿಡೆಕ್.

104
00:15:51,451 --> 00:15:53,370
ಅವನು ಮಾಜಿ ಪೋಲಿಷ್ ಗುಪ್ತಚರ.

105
00:16:01,169 --> 00:16:02,337
ಅವನು ಎಲ್ಲಿದ್ದಾನೆ?

106
00:16:03,713 --> 00:16:04,881
ಮಾರ್ಸಾಕ್ಸ್ಲೋಕ್.

107
00:16:08,343 --> 00:16:09,928
ಮಾಲ್ಟಾದಲ್ಲಿ ಮೀನುಗಾರಿಕೆಯ ಗ್ರಾಮ.

108
00:16:13,056 --> 00:16:13,932
ಸರಿ.

109
00:16:16,101 --> 00:16:17,602
ಯಾವುದಕ್ಕಾಗಿ ಕಾಯುತ್ತಿದ್ದೀಯ?

110
00:16:21,189 --> 00:16:24,025
-ಗಂಟೆಯೊಳಗೆ ಮಾಲ್ಟಾದಲ್ಲಿ ತಂಡ ಇರಬೇಕು.
-ಸರಿ.

111
00:16:27,696 --> 00:16:30,532
ಅಮ್ಮ, ನಾವು ಖಾಸಗಿಯಾಗಿ ಮಾತನಾಡಬಹುದೇ?

112
00:16:30,615 --> 00:16:31,700
ಹಾಂ. ತಡಿ.

113
00:16:32,200 --> 00:16:34,327
ಸೋಲ್ ಕಾರ್ಯಾಚರಣೆಯಲ್ಲಿ ಒಂದು ಸಮಸ್ಯೆ ಆಗಿದೆ.

114
00:16:34,411 --> 00:16:39,290
ಕಾರ್ಪೋವ್ ಸತ್ತ, ಆದರೆ ನಿಷ್ಕರ್ಷಿತನ ಅಪಹರಿಸಿ,
ಮೂವರು ಕಾರ್ಯಕರ್ತರನ್ನು ಹೊಡೆದುಹಾಕಿದ್ದಾರೆ.

115
00:16:39,374 --> 00:16:40,917
ಕ್ಯಾಡಿಸ್ ಇದರಲ್ಲಿ ಬಯಲಾಗಿದೆಯಾ?

116
00:16:41,000 --> 00:16:44,671
ಸ್ಥಳೀಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ,
ಆದರೆ ಅದು ನಮ್ಮೆಡೆ ತೋರಿಸುತ್ತಿಲ್ಲ.

117
00:16:44,754 --> 00:16:45,714
ಖಚಿತವಾಗಿರುವೆಯಾ?

118
00:16:46,172 --> 00:16:47,090
ನಿಜವಾಗಿಯೂ?

119
00:16:47,173 --> 00:16:49,759
ಅಮ್ಮ, ಖಚಿತ ಅಂತ ಹೇಳಿದೆ.

120
00:16:51,845 --> 00:16:54,431
ನಮಗೂ ಜಿಆರ್‌ಯುಗೂ ಸಂಬಂಧ
ಕಲ್ಪಿಸುತ್ತಿರುವುದು ಕಾರ್ಪೋವ್ ಒಂದೇ.

121
00:16:54,514 --> 00:16:58,268
ರಷ್ಯಾದ ಗುಪ್ತದಳಕ್ಕೆ ನಾವು ಮಿತ್ರ ಪಡೆಗಳ ಚಲನೆಯ
ಬಗ್ಗೆ ತಿಳಿಸಿರುವುದು ಲ್ಯಾಂಗ್ಲೀಗೆ ಗೊತ್ತಾದರೆ,

122
00:16:58,351 --> 00:17:00,937
-ನೀನು, ನಾನು, ಕ್ಯಾಡಿಸ್, ಯಾವುದೂ ಇರಲ್ಲ.
-ಅರ್ಥವಾಯಿತು.

123
00:17:01,020 --> 00:17:02,981
ರೆಬೆಕ್ಕಾ ಹೇಗಿದ್ದಾಳೆ? ಪರವಾಗಿಲ್ವಾ?

124
00:17:03,064 --> 00:17:06,609
ಸದ್ಯಕ್ಕಿನ್ನೂ ನಮಗೆ
ಅವಳನ್ನು ಸಂಪರ್ಕಿಸಲು ಆಗಿಲ್ಲ.

125
00:17:06,693 --> 00:17:09,446
-ಸರಿ, ಅವಳನ್ನು ಈಗಲೇ ಹುಡುಕಿ.
-ಖಂಡಿತ.

126
00:17:10,155 --> 00:17:12,782
ಅವಳಿಂದ ನಮಗೆಷ್ಟು ಚಿಂತೆ ಅಂತ ಕಾಣುತ್ತಿದೆ.

127
00:17:12,866 --> 00:17:17,370
ರೆಬೆಕ್ಕಾ ಈಗಷ್ಟೇ ಸುಡಾನಿನ ಹಣಕಾಸು ಸಚಿವ
ಮತ್ತು ಅವರ ಭದ್ರತಾ ತಂಡವನ್ನು ಮುಗಿಸಿದಳು.

128
00:17:17,454 --> 00:17:21,416
ವೆನೆಜುವೆಲಾದ ಸೇನಾ ವಿಮಾನವನ್ನು ಉರುಳಿಸಿದಳು,
ಜನ ಅದನ್ನು ಎಂಜಿನ್ ವೈಫಲ್ಯ ಅಂದುಕೊಂಡಿದ್ದಾರೆ.

129
00:17:21,499 --> 00:17:23,251
ನನಗೆ ರೆಬೆಕ್ಕಾ ಬಗ್ಗೆ ಚಿಂತೆ ಇರೋದು

130
00:17:23,334 --> 00:17:25,837
ಯಾಕೆಂದರೆ ಅವಳು ನಮ್ಮ ಅತ್ಯಮೂಲ್ಯ ಆಸ್ತಿ.

131
00:17:28,423 --> 00:17:31,050
ಸೋಲ್ ವಿಧ್ವಂಸದ ಹಿಂದೆ
ಯಾರಿದ್ದಾರೆಂದು ಗೊತ್ತಾಯಿತಾ?

132
00:17:31,134 --> 00:17:34,012
ಇಲ್ಲ. ಯಾರೋ ಒಬ್ಬರು ಮಾಡಿದಂತೆ
ಕಾಣುತ್ತದೆ ಅಷ್ಟೇ.

133
00:17:35,722 --> 00:17:37,974
ಇದನ್ನು ಮಾಡಿದ್ದು ಒಬ್ಬರೇ ಅಂತಿದ್ದೀಯಾ?

134
00:17:38,475 --> 00:17:40,310
ಅವರು ಯುದ್ಧತಂತ್ರದ ತರಬೇತಿ ಪಡೆದವರು

135
00:17:41,644 --> 00:17:45,774
ಮತ್ತು ಹೇಗೋ ಅವರಿಗೆ ನಮ್ಮ ಕಾರ್ಯಾಚರಣೆಯ
ಒಳಮಾಹಿತಿ ಸಿಕ್ಕಿರಬಹುದು.

136
00:17:49,569 --> 00:17:52,197
ಸರಿ. ಈ ಕುರಿತು ನಾನು ಸಂಪೂರ್ಣ
ಸೋಲ್ ಕಚೇರಿ ಜೊತೆಗಿದ್ದೇನೆ.

137
00:17:52,280 --> 00:17:55,283
ಏನೇ ಆದರೂ ಸರಿ, ನನಗೆ ಅವನ ತಲೆ ಬೇಕು.

138
00:17:55,366 --> 00:17:56,201
ಸರಿ.

139
00:20:11,461 --> 00:20:12,629
ಹಲೋ?

140
00:20:12,712 --> 00:20:14,172
ಹೇ, ನಾನು.

141
00:20:16,507 --> 00:20:18,259
ಅವಳನ್ನು ಹುಡುಕಿದೆಯಾ?

142
00:20:18,343 --> 00:20:20,929
ಹೌದು, ಆದರೆ ಒಂದು ಕೆಲಸ ಬಂತು.

143
00:20:22,263 --> 00:20:25,099
ನನ್ನ ಗುರುತು ಪತ್ತೆಯಾಗಿಲ್ಲ,
ನಾನು ಜಾಗೃತನಾಗಿದ್ದೆ.

144
00:20:26,267 --> 00:20:28,478
ಆದರೆ ನಾನು ಸಂಪರ್ಕಿಸುವ ಮೊದಲೇ
ಅವಳು ತಪ್ಪಿಸಿಕೊಂಡಳು.

145
00:20:30,104 --> 00:20:31,356
ಕ್ಷಮಿಸು.

146
00:20:32,440 --> 00:20:34,025
ಆದರೆ ನಾನು ಅವಳನ್ನು ನೋಡಿದೆ, ಅಂಜು.

147
00:20:36,319 --> 00:20:37,779
ಒಂಬತ್ತು ವರ್ಷಗಳಾಗಿವೆ,

148
00:20:39,656 --> 00:20:40,657
ಆದರೆ ಅದು ಅವಳೇ.

149
00:20:42,408 --> 00:20:43,993
ಇದು ಕಷ್ಟ ಎಂದು ನನಗೆ ತಿಳಿದಿದೆ.

150
00:20:46,162 --> 00:20:47,872
ಆದರೆ ಈಗ ಮನೆಗೆ ಬರುವ ಸಮಯ.

151
00:20:47,956 --> 00:20:50,041
ನನ್ನಾಣೆ, ಪ್ರಯತ್ನಿಸಿದೆ.

152
00:20:50,708 --> 00:20:52,335
ನಾನು ನಿಲ್ದಾಣಕ್ಕೆ ಬಂದೆ,

153
00:20:52,418 --> 00:20:55,254
ಟಿಕೆಟ್ ಕೂಡ ಖರೀದಿಸಿದೆ,
ಆದರೆ ಈ ರೈಲನ್ನು ನೋಡುತ್ತಿದ್ದೇನೆ

154
00:20:57,090 --> 00:20:58,383
ಮತ್ತು ಅದನ್ನು ಹತ್ತಲಾಗುತ್ತಿಲ್ಲ.

155
00:20:58,466 --> 00:21:00,468
-ನಾವು ಒಪ್ಪಂದ ಮಾಡಿಕೊಂಡಿದ್ದೇವೆ, ಡೇವಿಡ್.
-ಗೊತ್ತು.

156
00:21:00,551 --> 00:21:02,011
ಒಂದು ಅವಕಾಶ, ಅಷ್ಟೇ.

157
00:21:02,095 --> 00:21:03,596
ಅದನ್ನಷ್ಟೇ ಪಣತೊಡಲು ನಿರ್ಧರಿಸಿದೆವು.

158
00:21:03,930 --> 00:21:05,056
ನನಗೆ ಗೊತ್ತು.

159
00:21:06,683 --> 00:21:08,101
ಆದರೆ ಅವಳಿಗೆ ನನ್ನ ಅಗತ್ಯ ಇದೆ.

160
00:21:11,270 --> 00:21:12,730
ಕ್ಯಾಡಿಸ್‌ಗೆ ನೀನು ಸಿಕ್ಕಿದರೆ,

161
00:21:13,564 --> 00:21:14,565
ನಿನ್ನನ್ನು ಕೊಲ್ಲುತ್ತಾರೆ.

162
00:21:15,942 --> 00:21:17,610
ಅವರು ನಮ್ಮೆಲ್ಲರನ್ನೂ ಕೊಲ್ಲುತ್ತಾರೆ.

163
00:21:17,694 --> 00:21:19,362
ನಾನು ಹಾಗೆ ಆಗಲು ಬಿಡುವುದಿಲ್ಲ.

164
00:21:22,156 --> 00:21:23,866
ಅವಳನ್ನು ಕಾಪಾಡಲಾಗದಿದ್ದರೆ ಏನು?

165
00:21:28,246 --> 00:21:32,417
ನೋಡು, ನೀನು ನಿನ್ನ ವಸ್ತುಗಳನ್ನು ಎತ್ತಿಕೊಂಡು
ಅಡಗುತಾಣಕ್ಕೆ ಹೊರಡು, ಸರಿನಾ?

166
00:21:32,500 --> 00:21:33,668
ಯಾರಿಗೂ ಹೇಳಬೇಡ.

167
00:21:33,751 --> 00:21:37,088
ನಿನ್ನನ್ನು ಪತ್ತೆಮಾಡಲು ನೆರವಾಗುವಂಥ
ಯಾವುದನ್ನೂ ಹಿಂದೆ ಬಿಡಬೇಡ.

168
00:21:37,171 --> 00:21:40,675
ನಾಳೆ 3:00 ಗಂಟೆಗೆ ರೈಲು ಹೊರಡಲಿದೆ.
ದಯವಿಟ್ಟು ಅದನ್ನು ಏರು.

169
00:21:41,592 --> 00:21:44,220
ಒಂದು ಅಥವಾ ಎರಡು ದಿನಗಳಲ್ಲಿ
ನಿನ್ನನ್ನು ಭೇಟಿಯಾಗುತ್ತೇನೆ.

170
00:21:47,432 --> 00:21:48,433
ಕ್ಷಮಿಸು, ಅಂಜು.

171
00:21:49,934 --> 00:21:51,269
ಆದರೆ ಅವಳು ನನ್ನ ಮಗಳು.

172
00:21:52,645 --> 00:21:54,063
ನಾನು ಅವಳನ್ನು ಮತ್ತೆ ಬಿಡಲಾರೆ.

173
00:22:05,658 --> 00:22:06,659
ಹಾಯ್, ನಾನು.

174
00:22:07,493 --> 00:22:08,453
ರೆಬೆಕ್ಕಾ?

175
00:22:09,287 --> 00:22:10,705
ಎಲ್ಲಿದ್ದೀಯಾ? ಆರಾಮಾಗಿದ್ದೀಯಾ?

176
00:22:10,788 --> 00:22:12,582
ನಾನು ಇಟೇವಾನ್‌ನಲ್ಲೆಲ್ಲೋ ಇದ್ದೇನೆ.

177
00:22:12,665 --> 00:22:14,459
ನಾನು ತಪ್ಪಿಸಿಕೊಂಡೆ, ಆದರೆ ಏನಾಯಿತು?

178
00:22:14,542 --> 00:22:16,419
ನಾನು ನಿನ್ನನ್ನು ಅದೇ ಕೇಳಬೇಕಂತಿದ್ದೆ.

179
00:22:16,502 --> 00:22:17,962
ಅದರ ಅರ್ಥವೇನು?

180
00:22:18,046 --> 00:22:19,422
ಆಟ್ವುಡ್ ಮೇಲೆ ದಾಳಿ ಮಾಡಿದರು.

181
00:22:19,505 --> 00:22:22,675
ನಿಷ್ಕರ್ಷಣಾ ತಂಡವು ಯಾರಿಂದಲೋ ಒದೆ ತಿಂದು
ಕೈಕೋಳ ತೊಟ್ಟಿದ್ದಾಗ ಪೊಲೀಸರಿಗೆ ಸಿಕ್ಕರು,

182
00:22:22,759 --> 00:22:25,428
ಹಾಗಾಗಿ ನಿನ್ನನ್ನು ಕೇಳುತ್ತಿದ್ದೇನೆ, ಏನಾಯಿತು?

183
00:22:25,511 --> 00:22:27,597
ಯಾರಿಗೋ ಗೊತ್ತಿತ್ತು. ಸಹಜವಾಗಿ.

184
00:22:27,680 --> 00:22:31,309
ಕಾರ್ಪೋವ್ ಕೆಲಸದ ಬಗ್ಗೆ ಯಾರೋ ಕಂಡುಕೊಂಡು,
ನಿಷ್ಕರ್ಷಣಾ ತಂಡವನ್ನು ಅಪಹರಿಸಿದರು.

185
00:22:31,392 --> 00:22:32,393
ಹೇಗೆ?

186
00:22:33,227 --> 00:22:35,188
ನಾನು ತಿಳಿಯಲು ಪ್ರಯತ್ನಿಸುತ್ತಿದ್ದೇನೆ
ಅಂತ ಅನಿಸಲ್ವಾ?

187
00:22:35,271 --> 00:22:37,065
ಇದು ನನ್ನ ಕಾರ್ಯಾಚರಣೆ, ಜೂನೋ.

188
00:22:37,148 --> 00:22:38,441
ಹೌದು, ಆಗಿತ್ತು.

189
00:22:38,524 --> 00:22:39,859
ಇರಿ, ಇರಿ, ಇರಿ.

190
00:22:39,942 --> 00:22:43,821
ನಿಷ್ಕರ್ಷಣಾ ತಂಡ ಸಿಕ್ಕಿಹಾಕಿಕೊಂಡರೆ
ಅದಕ್ಕಾಗಿ ನನ್ನನ್ನು ಆಪಾದಿಸುತ್ತಿದ್ದೀರಾ?

191
00:22:44,906 --> 00:22:47,742
ನಾನು ವಿಫಲವೇ ಆಗಬಾರದೆಂದುಕೊಂಡ
ಒಂದು ಕಾರ್ಯಾಚರಣೆಯ

192
00:22:47,825 --> 00:22:49,702
ಪ್ರಮುಖ ಗುಪ್ತಚರ ಉಲ್ಲಂಘನೆಯಾಗಿದೆ.

193
00:22:50,369 --> 00:22:52,038
ಯಾರನ್ನು ದೂಷಿಸಬೇಕೆಂದು ನನಗೆ ತಿಳಿದಿಲ್ಲ.

194
00:22:57,293 --> 00:22:58,753
ನನ್ನ ಮೇಲೆ ನಂಬಿಕೆ ಇಲ್ವಾ?

195
00:23:01,672 --> 00:23:04,300
ನಾನು ಕೊರಿಯಾಗೆ ವಿಮಾನದಲ್ಲಿದ್ದೇನೆ.
ನಾನು ಇಳಿದಾಗ ನನಗೆ ಉತ್ತರಗಳು ಬೇಕು.

196
00:23:04,383 --> 00:23:05,635
ದೇವರೇ, ಜೂನೋ.

197
00:23:06,677 --> 00:23:09,347
ಜಗತ್ತಿನಲ್ಲಿ ನನ್ನ ಬಗ್ಗೆ
ಕಾಳಜಿ ತೋರುವ ವ್ಯಕ್ತಿ ನೀವೊಬ್ಬರೇ.

198
00:23:10,223 --> 00:23:11,766
ನಾನು ನಿಮಗೆ ದ್ರೋಹ ಬಗೆಯಲ್ಲ.

199
00:23:12,683 --> 00:23:13,851
ಯಾರೋ ಬಗೆದರು.

200
00:23:20,024 --> 00:23:21,901
ಅವರನ್ನು ಹುಡುಕಿ ನೋಡಿಕೊಳ್ಳುತ್ತೇನೆ.

201
00:23:21,984 --> 00:23:23,277
ಖಂಡಿತ ಮಾಡು.

202
00:23:33,121 --> 00:23:34,872
ಅವಳಿಗೆ ಇದನ್ನು ಒಪ್ಪಿಸುತ್ತಿದ್ದೀಯಾ?

203
00:23:34,956 --> 00:23:38,209
ರೆಬೆಕ್ಕಾ ನಾಲ್ಕು ವರ್ಷಗಳಿಂದ ಕೆಲಸ
ಮಾಡ್ತಿದ್ದಾಳೆ. ತನ್ನ ತಾನು ನೋಡಿಕೊಳ್ಳುತ್ತಾಳೆ.

204
00:23:38,543 --> 00:23:41,546
-ಇದು ತಪ್ಪು ಅನಿಸುತ್ತೆ.
-ತಪ್ಪುಗಳ ಬಗ್ಗೆ ಮಾತಾಡಬೇಕಾ?

205
00:23:48,261 --> 00:23:49,762
ಸೋಲ್ ಐಡಿ ವಿಷಯ ಎಲ್ಲಿಗೆ ಬಂತು?

206
00:23:50,471 --> 00:23:54,350
ಕಣ್ಗಾವಲು ಸ್ಥಳದಲ್ಲಿ ಭದ್ರತಾ ಕ್ಯಾಮೆರಾಗಳ
ದೃಶ್ಯ ಲಭಿಸಿತು,

207
00:23:54,433 --> 00:23:55,852
ಆದರೆ ಅವನ ಗುರುತು ಪತ್ತೆಯಾಗಿಲ್ಲ.

208
00:23:57,979 --> 00:24:01,149
ಕೊರಿಯನ್ ಪುರುಷ, ನಲವತ್ತರ ಅಂತ್ಯ,
ಐವತ್ತರ ಆರಂಭದಲ್ಲಿರಬಹುದು,

209
00:24:01,232 --> 00:24:03,192
ಮಧ್ಯಮ ಎತ್ತರ, ಮಧ್ಯಮ ದೇಹಾಕೃತಿ.

210
00:24:04,318 --> 00:24:08,489
ಕೊರಿಯಾದ ಎನ್ಐಎಸ್‌ನ ನಮ್ಮ ಸಂಪರ್ಕಗಳಿಗೆ
ಇದನ್ನು ಕೊಡು. ಏನಾದರೂ ಗೊತ್ತಾಗುತ್ತಾ ನೋಡು.

211
00:24:12,952 --> 00:24:15,204
ಅವಳನ್ನು ಕಾರ್ಪೋವ್‌ಗೆ ಯಾಕೆ ಹಾಕಿದೆ
ಅಂತ ರೆಬೆಕ್ಕಾಗೆ ಹೇಳಿದೆಯಾ?

212
00:24:15,288 --> 00:24:16,205
ಇಲ್ಲ.

213
00:24:16,914 --> 00:24:18,207
ಅವಳಿಗೆ ಯಾಕಂತಲೂ ಬೇಕಿಲ್ಲ.

214
00:24:19,625 --> 00:24:20,543
ಒಳ್ಳೆಯದು.

215
00:24:21,919 --> 00:24:22,837
ಹೇಳಬೇಡ.

216
00:24:26,465 --> 00:24:28,176
ಏನೋ ಸರಿ ಕಾಣುತ್ತಿಲ್ಲ.

217
00:25:24,357 --> 00:25:28,236
ಇಂಚೆಯಾನ್

218
00:25:51,634 --> 00:25:52,593
ಒಳಗೆ ಬಾ.

219
00:25:52,677 --> 00:25:53,928
ನಮಸ್ಕಾರ.

220
00:25:54,011 --> 00:25:57,056
ನಿನಗಿಂತ ಹಿರಿಯ ಬಂದರೆ
ಎದ್ದೇಳುವ ವ್ಯವಧಾನವೂ ನಿನಗಿಲ್ಲವೇ?

221
00:26:00,559 --> 00:26:01,978
ನನಗಿಂತ ಹಿರಿಯನಾ?

222
00:26:02,395 --> 00:26:03,688
ಇಲ್ಲೇನು ಮಾಡುತ್ತಿದ್ದೀಯ?

223
00:26:04,021 --> 00:26:06,649
ನನಗೆ ನೂಡಲ್ಸ್ ಬೇಕಿತ್ತು,

224
00:26:06,732 --> 00:26:09,068
ಆದರೆ ನಿನ್ನ ಅಂಗಡಿಯಷ್ಟೇ ತೆರೆದಿತ್ತು.

225
00:26:09,151 --> 00:26:11,946
ನನಗೆ ಅವಮಾನ ಮಾಡುವುದಾದರೆ,
ಆ ಕೆಟ್ಟ ಉಚ್ಚಾರಣೆಯನ್ನಾದರೂ ಬಿಡು.

226
00:26:12,029 --> 00:26:13,030
ಯಾವ ಉಚ್ಚಾರಣೆ?

227
00:26:14,073 --> 00:26:16,075
ನೀನು ಹೇಳೋದೇನೂ ನನಗೆ ಅರ್ಥವಾಗುತ್ತಿಲ್ಲ.

228
00:26:18,244 --> 00:26:20,621
-ನೋಡಿ ಸಂತೋಷವಾಯಿತು, ಗೆಳೆಯ.
-ಹಾಂ. ನನಗೂ.

229
00:26:21,205 --> 00:26:23,499
ಎಷ್ಟು ಕಾಲವಾಯಿತು? ಎರಡು, ಮೂರು ತಿಂಗಳು?

230
00:26:24,792 --> 00:26:26,544
ಇತ್ತೀಚೆಗೆ ನಾನು ತುಂಬಾ ನಿರತನಾಗಿದ್ದೆ.

231
00:26:27,586 --> 00:26:28,838
ಏನೋ ಗಂಭೀರವಾದದ್ದಿದ್ದಂತಿದೆ.

232
00:26:29,463 --> 00:26:31,048
ಮಹಡಿಯ ಮೇಲೆ ಮಾತಾಡೋಣವೇ?

233
00:26:35,344 --> 00:26:36,929
ನೀನು ತ್ಯಜಿಸಿದೆ ಅಂದುಕೊಂಡೆ.

234
00:26:37,305 --> 00:26:40,683
ನನಗೆ ಯಕೃತ್ತಿನಲ್ಲಿ ಕೊಬ್ಬಿರುವುದರಿಂದ
ವೈದ್ಯರು ಕುಡಿಯಬಾರದು ಎಂದರು.

235
00:26:42,059 --> 00:26:43,311
ಮತ್ತೇನು ಮಾಡ್ತೀಯಾ?

236
00:26:44,437 --> 00:26:45,813
ಬೇರೆ ವೈದ್ಯರನ್ನು ಹುಡುಕುವೆ.

237
00:26:56,449 --> 00:26:57,366
ಮತ್ತೆ,

238
00:26:58,242 --> 00:26:59,577
ಏನು ನಡೆಯುತ್ತಿದೆ?

239
00:27:02,121 --> 00:27:04,206
ಒಂಬತ್ತು ವರ್ಷಗಳ ಹಿಂದೆ ಮರೆಯಾಗಲು
ನೀನು ನನಗೆ ಸಹಾಯ ಮಾಡಿದೆ.

240
00:27:06,125 --> 00:27:07,668
ನೀನು ಅದನ್ನು ಈಗ ಮತ್ತೆ ಮಾಡಬೇಕು.

241
00:27:08,252 --> 00:27:09,795
ಯಾರಿಗಾದರೂ ಸಿಕ್ಕಿಬಿದ್ದೆಯಾ?

242
00:27:09,879 --> 00:27:11,547
-ಇಷ್ಟರಲ್ಲೇ ಸಿಕ್ಕಿಬೀಳುವೆ.
-ಯಾರಿಗೆ?

243
00:27:12,131 --> 00:27:12,965
ಕ್ಯಾಡಿಸ್.

244
00:27:15,009 --> 00:27:16,469
ನಿನ್ನ ಸ್ವಂತ ಸಂಸ್ಥೆ?

245
00:27:16,552 --> 00:27:19,180
ನಾನು ಕ್ಯಾಡಿಸ್ ಅನ್ನು ಸ್ಥಾಪಿಸಿರಬಹುದು,
ಆದರೆ ಅವರು ಈಗಾಗಿರುವುದು,

246
00:27:19,263 --> 00:27:20,681
ನನ್ನಿಂದಲ್ಲ ಅಂತ ನಿಂಗೊತ್ತು.

247
00:27:29,899 --> 00:27:31,192
ಏನು?

248
00:27:32,610 --> 00:27:35,279
ನೀನು ಸುಮ್ಮನೆ ಸತಿದ್ದರೆ ಆಗಿರೋದು.

249
00:27:36,030 --> 00:27:37,531
ಅದನ್ನು ಹೇಗೆ ಹಾಳುಮಾಡಿಕೊಂಡೆ?

250
00:27:38,491 --> 00:27:41,619
ನಂಬಿದರೆ ನಂಬು ಇಲ್ಲಾ ಬಿಡು,
ಇದನ್ನು ಆಯ್ಕೆ ಮಾಡಿದ್ದು ನಾನೇ.

251
00:27:42,161 --> 00:27:43,204
ಏಕೆ?

252
00:27:43,287 --> 00:27:45,831
ಯಾಕೆಂದರೆ ಕ್ಯಾಡಿಸ್ ಬಳಿ ನನಗೆ ಬೇಕಿರುವುದು
ಒಂದು ಇದೆ.

253
00:27:48,626 --> 00:27:49,543
ರೆಬೆಕ್ಕಾ.

254
00:27:52,713 --> 00:27:54,465
ಅವರಿಗಾಗಿ ಕೆಲಸ ಮಾಡುತ್ತಿದ್ದಾಳೆ, ಯೊಂಗ್ ಶೀಕ್.

255
00:27:58,219 --> 00:27:59,470
ಕೊಲೆಗಾತಿಯಾಗಿ.

256
00:28:02,098 --> 00:28:04,475
ಇಷ್ಟೆಲ್ಲಾ ವರ್ಷಗಳ ಕಾಲ,
ಅವಳು ಸುರಕ್ಷಿತಳು ಅಂದುಕೊಂಡಿದ್ದೆ,

257
00:28:05,017 --> 00:28:07,395
ಆದರೆ ಈಗ, ಅವಳು ಜೂನೋಗಾಗಿ
ಕೆಲಸ ಮಾಡುತ್ತಿದ್ದಾಳೆ ಅಂತ ತಿಳಿದ ಮೇಲೆ,

258
00:28:08,521 --> 00:28:10,523
ಅದು ನಿಜವಾಗಿ ಮರಣದಂಡನೆಯೇ.

259
00:28:11,899 --> 00:28:13,818
ನಾನು ಸುಮ್ಮನಿದ್ದು ಅದಾಗಲು ಬಿಡಲಾಗದು.

260
00:28:17,279 --> 00:28:20,699
ಮತ್ತು ಈಗ, ಅವಳನ್ನು ವಾಪಸ್ ಕರೆತರಲು
ನಿನ್ನ ಜೀವನವನ್ನು ಹಾಳುಮಾಡಿಕೊಳ್ಳುತ್ತೀಯಾ?

261
00:28:20,783 --> 00:28:21,992
ನೀನು ಮಾಡಲ್ವಾ?

262
00:28:25,579 --> 00:28:26,956
ಮತ್ತೆ ನಿನ್ನ ಹೆಂಡತಿ?

263
00:28:27,373 --> 00:28:28,541
ಅವಳಿಗೂ ಹಾಗೇ ಅನಿಸುತ್ತದೆಯೇ?

264
00:28:29,291 --> 00:28:31,001
ಅದು ಚೆನ್ನಾಗಿರುತ್ತೆ, ಆದರೆ...

265
00:28:37,883 --> 00:28:39,301
ನನಗೆ ಸಹಾಯ ಮಾಡುತ್ತೀಯಾ?

266
00:28:41,303 --> 00:28:42,304
ನನಗೆ ಒಂದು ವಾರ ಸಮಯ ಕೊಡು.

267
00:28:42,805 --> 00:28:43,806
ಒಂದು ವಾರ ಸಮಯವಿಲ್ಲ.

268
00:28:43,889 --> 00:28:46,725
ಒಂದು ದಿನದೊಳಗೆ ನನಗೆ ಹೊಸ ಪಾಸ್ಪೋರ್ಟ್ಗಳು ಬೇಕು.
ಹೆಚ್ಚೆಂದರೆ ಎರಡು ದಿನ.

269
00:28:46,809 --> 00:28:47,935
ಅಷ್ಟು ಚೆನ್ನಾಗಿ ಬರಲ್ಲ.

270
00:28:48,018 --> 00:28:50,688
ದೇಶ ಬಿಟ್ಟು ಹೊರಗೆ ಹೋಗುವಷ್ಟು
ಚೆನ್ನಾಗಿದ್ದರೆ ಸಾಕು,

271
00:28:50,771 --> 00:28:52,815
ಆಮೇಲೆ ದೀರ್ಘಾವಧಿಯ ಯೋಜನೆಯನ್ನು ಮಾಡೋಣ.

272
00:28:59,363 --> 00:29:00,406
ಖಂಡಿತ.

273
00:29:04,118 --> 00:29:06,662
ಆದಷ್ಟು ಬೇಗ ನಿನಗೆ ಹಣ
ಮತ್ತು ಫೋಟೋಗಳನ್ನು ಕಳಿಸುವೆ.

274
00:29:08,038 --> 00:29:11,250
ಕೆಲಸ ಮುಗಿದ ಮೇಲೆ, ಈ ಸಂಖ್ಯೆಗೆ ಕರೆ ಮಾಡು.

275
00:29:17,590 --> 00:29:20,259
ನೀವು ಹಿಂತಿರುಗುವುದಿಲ್ಲ, ಅಲ್ಲವೇ?

276
00:29:38,068 --> 00:29:39,653
ನಿನ್ನ ಆರೋಗ್ಯ ಜೋಪಾನ.

277
00:29:40,779 --> 00:29:42,239
ಸರಿಯಾಗಿ ಊಟ ಮಾಡು.

278
00:29:44,283 --> 00:29:48,370
ನಿನ್ನ ನೂಡಲ್ಸ್ ತಿನ್ನದ ಹೊರತು
ನಾನು ಸಾಯಲ್ಲ. ಚಿಂತಿಸಬೇಡ.

279
00:29:57,254 --> 00:29:58,339
ಯೊಂಗ್ ಶೀಕ್...

280
00:30:01,592 --> 00:30:03,135
ತುಂಬಾ ಧನ್ಯವಾದಗಳು.

281
00:30:06,055 --> 00:30:07,014
ಎಲ್ಲದಕ್ಕೂ.

282
00:30:13,896 --> 00:30:17,399
ಇಲ್ಲಿ ಚಳಿ ಜಾಸ್ತಿ ಆಗುತ್ತಿದೆ. ಒಳಗೆ ಹೋಗೋಣ.

283
00:30:45,970 --> 00:30:47,012
ಆಟ್ವುಡ್.

284
00:30:48,681 --> 00:30:49,682
ಒಂದು ನಿಮಿಷ.

285
00:30:52,810 --> 00:30:54,395
ಜಿಪಿಎಸ್ ನಿರ್ದೇಶಾಂಕಗಳು.

286
00:31:00,693 --> 00:31:05,531
ಅಂಡೊಂಗ್

287
00:32:09,970 --> 00:32:11,889
ಧನ್ಯವಾದ, ಆಟ್ವುಡ್. ನನಗೆ ಅದು ಬೇಕಿತ್ತು.

288
00:32:13,390 --> 00:32:15,017
ನೀನು ನನ್ನನ್ನು ಬಳಸಿಕೊಂಡಂತೆ ಅನಿಸುತ್ತಿದೆ.

289
00:32:15,934 --> 00:32:18,062
ಹಾಂ, ನಿನಗೆ ಅದೆಷ್ಟು ಬೇಸರ ತರಿಸಿತು
ಅಂತ ನನಗೆ ಕಾಣಿಸಿತು.

290
00:32:19,563 --> 00:32:23,067
ಕತ್ತಲಾಗುವ ಮುನ್ನ ನಮಗಿನ್ನೂ ಸ್ವಲ್ಪ ಸಮಯವಿದೆ.

291
00:32:25,653 --> 00:32:26,487
ಬೇಡ, ಧನ್ಯವಾದ.

292
00:32:34,787 --> 00:32:36,121
ನನಗೆ ಚಿಂತೆ ಏನು ಗೊತ್ತಾ?

293
00:32:36,830 --> 00:32:38,082
ಈ ವ್ಯಕ್ತಿ ಯಾರೇ ಆಗಿರಲಿ,

294
00:32:38,582 --> 00:32:43,045
ಆತ ನಿನ್ನ ಬಗ್ಗೆ ಆಗಲಿ, ಕಾರ್ಪೋವ್ ಬಗ್ಗೆ ಆಗಲಿ,
ಅಥವಾ ನಿಷ್ಕರ್ಷಣಾ ತಂಡದ ಬಗ್ಗೆ ಯೋಚಿಸಲಿಲ್ಲ.

295
00:32:43,128 --> 00:32:45,547
ನೀವ್ಯಾರೂ ಆತನ ಗುರಿಯಾಗಿರಲಿಲ್ಲ. ನಾನಾಗಿದ್ದೆ.

296
00:32:47,007 --> 00:32:48,425
ಏಕೆಂದು ನನಗೆ ತಿಳಿಯಬೇಕು.

297
00:33:24,962 --> 00:33:25,963
ವಿಮಾನಯಾನ ಚೆನ್ನಾಗಿತ್ತಾ?

298
00:33:28,757 --> 00:33:31,218
-ಅವರು ಕೆಳಗೆ ನಮಗಾಗಿ ಸಿದ್ಧರಿದ್ದಾರೆಯೇ?
-ಹೌದು.

299
00:33:38,892 --> 00:33:39,977
ಅವನು ಸಿಕ್ಕಿದನಾ?

300
00:33:40,060 --> 00:33:42,354
ಇನ್ನೂ ಇಲ್ಲ,
ಆದರೆ ಅವನು ಎಲ್ಲಿದ್ದಾನೆಂದು ನನಗೆ ತಿಳಿದಿದೆ.

301
00:33:42,938 --> 00:33:44,440
ಯಾವುದಕ್ಕಾಗಿ ಕಾಯುತ್ತಿದ್ದೀಯ?

302
00:33:44,523 --> 00:33:45,566
ಕಾಫಿ.

303
00:33:45,983 --> 00:33:47,276
ಆಟ್ವುಡ್ ನನಗಾಗಿ ತರುತ್ತಿದ್ದಾನೆ.

304
00:33:48,444 --> 00:33:50,863
ನೀನಿದನ್ನು ಗಂಭೀರವಾಗಿ
ಪರಿಗಣಿಸಿದಂತೆ ಕಾಣುತ್ತಿಲ್ಲ.

305
00:33:51,655 --> 00:33:54,908
ನನಗೆ ಕುಟುಂಬದಷ್ಟು ಹತ್ತಿರವಾಗಿರುವುದು ನೀವು
ಮಾತ್ರ, ಆದರೆ ನೀವೂ ನನ್ನನ್ನು ನಂಬುವುದಿಲ್ಲ.

306
00:33:54,992 --> 00:33:56,702
ನಾನಿದನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದೇನೆ.

307
00:33:57,786 --> 00:33:59,246
ಅವನು ಎಲ್ಲಿದ್ದಾನೆಂದು ಹೇಗೆ ಬಲ್ಲೆ?

308
00:33:59,329 --> 00:34:01,415
ಪಾರ್ಕಿಂಗ್ ಟಿಕೆಟ್ ಮೇಲಿನ
ಜಿಪಿಎಸ್ ನಿರ್ದೇಶಾಂಕಗಳು.

309
00:34:02,499 --> 00:34:05,794
ನಿನಗೆ ನೆರವಾಗಲು ಕೆಲವು ದಾಂಡಿಗರನ್ನು
ಕಳಿಸುತ್ತಿದ್ದೇನೆ. ಒಲಿವರ್ ನಿಭಾಯಿಸುತ್ತಾನೆ.

310
00:34:06,628 --> 00:34:08,088
ಅವನು ವಾಪಸಾಗಿದ್ದಾನಾ?

311
00:34:08,547 --> 00:34:09,548
ನಿಖರವಾಗಿ ಅಲ್ಲ.

312
00:34:11,049 --> 00:34:13,469
ಬೆಳಿಗ್ಗೆಯೊಳಗೆ ಮುಗಿಸುತ್ತೇನೆ.
ಆಮೇಲೆ ಕರೆ ಮಾಡುತ್ತೇನೆ.

313
00:34:13,844 --> 00:34:15,888
-ರೆಬೆಕ್ಕಾ.
-ಏನು?

314
00:34:17,306 --> 00:34:18,640
ಇದರಲ್ಲಿ ಜಾಗರೂಕಳಾಗಿರು.

315
00:36:28,937 --> 00:36:31,064
-ತಯಾರಾ?
-ಹಾಂ.

316
00:38:22,718 --> 00:38:23,635
ಅವನು ಓಡುತ್ತಿದ್ದಾನೆ.

317
00:38:25,929 --> 00:38:27,389
ಬೇರೆಡೆ ಹೋಗು. ಅವನನ್ನು ಇಲ್ಲಿ ತಡೆಯುವೆ.

318
00:41:09,968 --> 00:41:10,969
ರೆಬೆಕ್ಕಾ.

319
00:41:22,731 --> 00:41:23,648
ಅಪ್ಪ?

320
00:41:26,860 --> 00:41:27,861
ನೀನು...

321
00:41:29,112 --> 00:41:30,322
ನೀನು ತುಂಬಾ ಸುಂದರವಾಗಿದ್ದೀಯ.

322
00:41:32,782 --> 00:41:34,326
ನಾನಂದುಕೊಂಡೆ ನೀನು...

323
00:41:39,247 --> 00:41:40,248
ನೀನು ಬದುಕಿದ್ದೀಯಾ?

324
00:41:43,919 --> 00:41:45,212
ನೀನು ಜೀವಂತವಾಗಿದ್ದೀಯಾ?

325
00:41:45,712 --> 00:41:46,630
ನೋಡು,

326
00:41:47,589 --> 00:41:50,133
ಸದ್ಯಕ್ಕೆ ಇದನ್ನು ಅರ್ಥಮಾಡಿಕೊಳ್ಳುವುದು
ತುಂಬಾ ಕಷ್ಟವಾಗಬಹುದು.

327
00:41:50,217 --> 00:41:52,010
ಇಷ್ಟು ದಿನ, ಎಲ್ಲಿದ್ದೆ?

328
00:41:52,719 --> 00:41:54,846
ನನ್ನ ಜೀವನದ ಒಂಬತ್ತು ವರ್ಷಗಳು,
ನೀನು ಎಲ್ಲಿದ್ದೆ?

329
00:41:57,557 --> 00:41:59,392
ನೀನಿನ್ನೂ ಗನ್ ಕೆಳಗಿಳಿಸಿಲ್ಲ.

330
00:41:59,976 --> 00:42:01,061
ನೀನೂ ಇಳಿಸಿಲ್ಲ.

331
00:42:10,153 --> 00:42:11,988
ನಾನು ನಿನಗೆ ಉತ್ತರ ಕೊಡಬೇಕು, ನನಗೆ ಗೊತ್ತು,

332
00:42:12,072 --> 00:42:14,199
ಆದರೆ ಸದ್ಯಕ್ಕೆ, ನಾವು ಇಲ್ಲಿಂದ ಹೋಗಬೇಕು.

333
00:42:14,282 --> 00:42:16,868
-ನೀನು ಹೇಳುವವರೆಗೂ ನಾನು ಹೋಗಲ್ಲ.
-ನಾವು ಹೋಗಲೇಬೇಕು.

334
00:42:16,952 --> 00:42:19,621
ಹೇಳು. ನನಗೆ 14 ವರ್ಷವಿದ್ದಾಗ
ನೀನೇಕೆ ಬಿಟ್ಟು ಹೋದೆ ಹೇಳು.

335
00:42:19,704 --> 00:42:22,499
ನನ್ನನ್ನೇಕೆ ಅನಾಥಳನ್ನಾಗಿ ಮಾಡಿದೆ ಹೇಳು.

336
00:42:24,251 --> 00:42:27,170
ಹಾಗೆ ಮಾಡಲು ನಿನಗೆ ಹೇಗೆ ಮನಸ್ಸಾಯಿತು?
ಹಾಗೆ ಮಾಡಲು ನಿನಗೆ ಹೇಗೆ...

337
00:42:28,964 --> 00:42:32,467
ನಾನೇನೇ ಮಾಡಿದ್ದರೂ,
ನಿನ್ನನ್ನು ಕಾಪಾಡಲಿಕ್ಕಾಗಿ ಮಾಡಿದೆ.

338
00:42:36,096 --> 00:42:37,472
ನೀನೊಬ್ಬ ಸುಳ್ಳುಗಾರ.

339
00:42:37,555 --> 00:42:39,015
ನಾನು ಹೋಗಬೇಕು.

340
00:42:40,600 --> 00:42:42,227
ಮತ್ತು ನೀನು ನನ್ನೊಂದಿಗೆ ಬರಬೇಕು.

341
00:42:43,561 --> 00:42:45,230
ಇದೆಲ್ಲವೂ ಅದರ ಬಗ್ಗೆಯೇ.

342
00:42:46,064 --> 00:42:47,941
ನಾನು ನಿನ್ನನ್ನು ಮತ್ತೆ ಕಳೆದುಕೊಳ್ಳಲಾರೆ.

343
00:42:50,193 --> 00:42:52,070
ಆದರೆ ಇದು ನನ್ನ ನಿರ್ಧಾರವಲ್ಲ, ನಿನ್ನದು.

344
00:42:53,947 --> 00:42:55,657
ಹಾಗಾಗಿ ನೀನು ನನ್ನ ಜೊತೆ ಬರಬಹುದು...

345
00:42:58,618 --> 00:42:59,828
ಅಥವಾ ನನಗೆ ಗುಂಡು ಹೊಡೆಯಬಹುದು.

346
00:43:18,013 --> 00:43:19,347
ನಾನು ಆಕೆಯೊಂದಿಗೆ ಮಾತನಾಡಬೇಕು.

347
00:43:21,141 --> 00:43:24,227
ಆಕೆ ಯಾರೊಂದಿಗಾದರೂ ಇರಲಿ,
ನಾನು ಈಗಲೇ ಆಕೆಯೊಂದಿಗೆ ಮಾತಾಡಬೇಕು.

348
00:43:32,360 --> 00:43:33,778
ಆತನೇ ಅಂತ ನಿಮಗೆ ಗೊತ್ತಿತ್ತಾ?

349
00:43:34,154 --> 00:43:34,988
ಏನು?

350
00:43:35,071 --> 00:43:39,284
ಆತನ ಹಿಂದೆ ನೀವು ನನ್ನನ್ನು ಕಳಿಸಿದಾಗ,
ಅದು ಆತನೇ ಅಂತ ನಿಮಗೆ ಗೊತ್ತಿತ್ತಾ?

351
00:43:39,367 --> 00:43:40,785
ನೀನೇನು ಹೇಳುತ್ತಿರುವೆ?

352
00:43:40,869 --> 00:43:42,579
ಜೂನೋ, ನನಗೆ ಸುಳ್ಳು ಹೇಳಬೇಡಿ.

353
00:43:42,662 --> 00:43:44,164
ಆತನ ಬಗ್ಗೆ ಬೇಡ.

354
00:43:44,247 --> 00:43:45,999
ಯಾರ ಬಗ್ಗೆ ಹೇಳುತ್ತಿರುವೆ?

355
00:43:48,877 --> 00:43:50,086
ನನ್ನ ತಂದೆಯ ಬಗ್ಗೆ.

356
00:43:57,761 --> 00:43:58,762
ಆತ ಬದುಕಿದ್ದಾರಾ?

357
00:44:04,392 --> 00:44:06,311
ಎಂಥಾ ವಿಚಿತ್ರ.

358
00:44:08,355 --> 00:44:10,565
ಜೂನೋ, ನನ್ನ ತಂದೆಯ ಹಿಂದೆ ನನ್ನನ್ನೇ ಕಳಿಸಿದಿರಾ?

359
00:44:10,648 --> 00:44:12,108
ನಿಜ ಹೇಳಿ, ಜೂನೋ.

360
00:44:12,192 --> 00:44:13,318
ನಿಮಗೆ ಗೊತ್ತಿತ್ತಾ?

361
00:44:14,235 --> 00:44:15,195
ಇಲ್ಲ.

362
00:44:16,321 --> 00:44:17,238
ಹೇಳಿ.

363
00:44:18,114 --> 00:44:21,451
ನನಗೆ ಗೊತ್ತಿರಲಿಲ್ಲ. ದೇವರಾಣೆ.

364
00:44:24,079 --> 00:44:25,288
ಕೇಳು, ರೆಬೆಕ್ಕಾ,

365
00:44:26,081 --> 00:44:27,707
ಡೇವಿಡ್ ಈಗ ಎಲ್ಲಿದ್ದಾನೆ?

366
00:44:29,793 --> 00:44:31,127
ನನ್ನೊಂದಿಗೆ ಇಲ್ಲಿದ್ದಾರೆ.

367
00:44:32,253 --> 00:44:33,254
ನೀನು ಸುರಕ್ಷಿತವೇ?

368
00:44:34,839 --> 00:44:35,799
ಹಾಂ.

369
00:44:36,966 --> 00:44:37,801
ಹಾಂ.

370
00:44:39,594 --> 00:44:42,305
ಇದನ್ನು ಒಟ್ಟಿಗೆ ಬಗೆಹರಿಸೋಣ, ಸರಿನಾ?

371
00:44:42,389 --> 00:44:44,307
ನೀನು ಯಾವುದೇ ನಿರ್ಧಾರ ಮಾಡಬೇಕಿಲ್ಲ.

372
00:44:44,391 --> 00:44:46,184
ನೀನು ಏನನ್ನೂ ಮಾಡಬೇಕಾಗಿಲ್ಲ.

373
00:44:47,018 --> 00:44:48,686
ನಿನಗಾಗಿ ಒಂದು ತಂಡವನ್ನು ಕಳಿಸುತ್ತಿದ್ದೇನೆ.

374
00:44:52,399 --> 00:44:54,025
ಆಮೇಲೆ ನಿನಗಾಗಿ ಬರುತ್ತೇನೆ.

375
00:44:56,236 --> 00:44:57,737
ನಿನಗೇನೂ ಆಗಲ್ಲ.

376
00:44:58,696 --> 00:44:59,906
ಅರ್ಥವಾಯಿತಾ?

377
00:45:06,246 --> 00:45:08,957
-ನಾನು ಹೋಗಬೇಕು. ಆತ ಎದ್ದೇಳುತ್ತಿದ್ದಾರೆ.
-ರೆಬೆಕ್ಕಾ, ಇರು.

378
00:45:16,172 --> 00:45:17,424
ನೀನು ನನಗೆ ಹೊಡೆದೆ.

379
00:45:20,385 --> 00:45:21,594
ನನಗೆ ಕೋಪ ಬಂದಿತ್ತು.

380
00:45:24,305 --> 00:45:25,265
ಅಯ್ಯೋ.

381
00:45:26,099 --> 00:45:27,267
ರಕ್ತ ಸೋರುತ್ತಿದೆ.

382
00:45:27,350 --> 00:45:28,226
ಒಳ್ಳೆಯದು.

383
00:45:30,186 --> 00:45:31,396
ನನಗೆ ಏಳಲು ಸಹಾಯ ಮಾಡುವೆಯಾ?

384
00:45:40,864 --> 00:45:41,948
ಕ್ಷಮಿಸು.

385
00:45:45,452 --> 00:45:46,870
ಅದರಿಂದ ಶುರುಮಾಡಬೇಕಿತ್ತು.

386
00:45:53,334 --> 00:45:54,335
ನಿನ್ನನ್ನು ಪ್ರೀತಿಸುವೆ.

387
00:45:57,005 --> 00:45:58,923
ನಿನ್ನನ್ನು ಊಹಿಸಲಾರದಷ್ಟು ಸ್ಮರಿಸಿಕೊಂಡೆ.

388
00:46:05,889 --> 00:46:06,723
ಇಲ್ಲ!

389
00:46:20,445 --> 00:46:21,404
ಆರಾಮಾಗಿದ್ದೀಯಾ?

390
00:46:32,832 --> 00:46:34,083
ಇತ್ತೀಚಿನ ಸಂದೇಶ
ಜೂನೋ

391
00:46:34,167 --> 00:46:36,336
ಜೂನೋ
ಅವನನ್ನು ಈಗಲೇ ಕೊಲ್ಲು

392
00:46:44,010 --> 00:46:45,178
ನಾವು ಹೋಗಬೇಕು.

393
00:46:59,025 --> 00:47:00,568
ನಿನ್ನಲ್ಲಿ ಪ್ರಶ್ನೆಗಳಿವೆ ಅಂತ ಗೊತ್ತು.

394
00:47:00,985 --> 00:47:03,238
ನನ್ನ ಜೊತೆ ಬಾ,
ನಾನು ನಿನಗೆ ಎಲ್ಲವನ್ನೂ ಹೇಳುತ್ತೇನೆ.

395
00:49:06,235 --> 00:49:08,237
ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ

