1
00:00:08,175 --> 00:00:10,469
ಬಟರ್ಫ್ಲೈ ನ ಹಿಂದಿನ ಸಂಚಿಕೆಯಲ್ಲಿ...

2
00:00:12,263 --> 00:00:14,265
ಯಾರೂ ಇಲ್ಲ. ಗುರಿಯು ಸ್ಥಾನದಲ್ಲಿದ್ದಾರೆ.

3
00:00:18,519 --> 00:00:19,520
ಛೆ!

4
00:00:20,855 --> 00:00:22,148
ಅವಳು ನನ್ನ ಮಗಳು.

5
00:00:23,607 --> 00:00:25,317
ಅವಳನ್ನು ಕಾಪಾಡಲಾಗದಿದ್ದರೆ ಏನು?

6
00:00:25,401 --> 00:00:27,987
ಸದ್ಯಕ್ಕಿನ್ನೂ ನಮಗೆ
ಅವಳನ್ನು ಸಂಪರ್ಕಿಸಲು ಆಗಿಲ್ಲ.

7
00:00:28,070 --> 00:00:30,573
ಅವಳು ನಮ್ಮ ಅತ್ಯಮೂಲ್ಯ ಆಸ್ತಿ.

8
00:00:30,656 --> 00:00:31,782
ಅವನು ಸಿಕ್ಕಿದನಾ?

9
00:00:31,866 --> 00:00:33,534
ಇನ್ನೂ ಇಲ್ಲ,
ಆದರೆ ಅವನು ಎಲ್ಲಿದ್ದಾನೆಂದು ನನಗೆ ತಿಳಿದಿದೆ.

10
00:00:33,617 --> 00:00:35,494
ಬೆಳಿಗ್ಗೆಯೊಳಗೆ ಮುಗಿಸುತ್ತೇನೆ.

11
00:00:39,665 --> 00:00:40,624
ಇಲ್ಲ!

12
00:00:42,460 --> 00:00:43,753
ಆತನೇ ಅಂತ ನಿಮಗೆ ಗೊತ್ತಿತ್ತಾ?

13
00:00:44,044 --> 00:00:45,087
ಆತ ಬದುಕಿದ್ದಾರಾ?

14
00:00:47,465 --> 00:00:48,591
ರೆಬೆಕ್ಕಾ.

15
00:00:51,177 --> 00:00:52,178
ಅಪ್ಪ?

16
00:01:50,694 --> 00:01:52,112
ಇದು ತುಂಬಾ ವಿಚಿತ್ರವಾಗಿದೆ.

17
00:01:55,241 --> 00:01:57,201
ಈಗ ಮಾತನಾಡುತ್ತಿದ್ದೇವೆ. ಇದು ಮುನ್ನಡೆಯೇ.

18
00:01:58,369 --> 00:01:59,995
ಒಂದು ಗಂಟೆಯ ಹಿಂದೆ,

19
00:02:00,079 --> 00:02:03,082
ನನ್ನ ತಂದೆ ಇನ್ನೂ ಬದುಕಿದ್ದಾರಾ ಅಂತ
ತಿಳಿಯಲು ಏನು ಬೇಕಾದರೂ ಮಾಡುತ್ತಿದ್ದೆ.

20
00:02:03,165 --> 00:02:07,169
ಆದರೆ ಈಗ,
ಇಲ್ಲಿ ಬಂದು ತಿಂಡಿಗಳನ್ನು ಖರೀದಿಸುತ್ತಿದ್ದೇವೆ.

21
00:02:08,504 --> 00:02:10,256
ನಾನು ಬಿಟ್ಟುಬರಬೇಕೇನೋ ಅನಿಸುತ್ತಿದೆ.

22
00:02:10,339 --> 00:02:11,715
ಬಿಡಲು ಬಯಸುವೆಯಾ?

23
00:02:11,799 --> 00:02:14,134
ನಾವೆಲ್ಲಿಗೆ ಹೋಗುತ್ತಿದ್ದೇವೆ ಅಂತ ಹೇಳುವೆಯಾ?

24
00:02:19,390 --> 00:02:21,183
-ಬುಸಾನ್.
-ಯಾಕೆ?

25
00:02:22,977 --> 00:02:24,895
ಕೆಲವು ವಸ್ತುಗಳನ್ನು ತೆಗೆದುಕೊಳ್ಳಬೇಕು.

26
00:02:24,979 --> 00:02:27,231
-ಆಮೇಲೆ ಏನು?
-ಆಮೇಲೆ ನಾವು ದೇಶವನ್ನು ತೊರೆಯುತ್ತೇವೆ.

27
00:02:27,314 --> 00:02:28,607
ವರ್ಜೀನಿಯಾಗೆ ವಾಪಸಾ?

28
00:02:30,985 --> 00:02:33,904
ಹಾಂ, ನೀನು ಅಧಿಕೃತವಾಗಿ ಸತ್ತಿರುವಾಗ
ಕಸ್ಟಮ್ಸ್ ದಾಟಿ ಹೋಗಲಾಗದು.

29
00:02:34,780 --> 00:02:36,949
ಹಾಗಾದರೆ, ಎಲ್ಲಿಗೆ?

30
00:02:42,788 --> 00:02:43,914
ವಿಯೆಟ್ನಾಂ.

31
00:02:43,998 --> 00:02:45,332
ಏನು?

32
00:02:45,416 --> 00:02:47,209
ಅಲ್ಲಿ ನಾನು ಬಾಡಿಗೆ ಮನೆ ಮಾಡಿದೆ.

33
00:02:47,293 --> 00:02:50,254
ಅದೊಂದು ಸುಂದರ ದೇಶ.
ಮತ್ತು ಅವರು ಹಸ್ತಾಂತರಿಸುವುದಿಲ್ಲ.

34
00:02:51,338 --> 00:02:54,758
ಸರಿ. ಮತ್ತೆ, ನಾವು ವಿಯೆಟ್ನಾಂನಲ್ಲಿ
ಎಂದೆಂದಿಗೂ ಸಂತೋಷವಾಗಿ ಬದುಕುತ್ತೇವೆಯಾ?

35
00:02:57,469 --> 00:02:59,054
ನನ್ನ ಜೀವನ ನನಗಿಷ್ಟವಾಗಿತ್ತು ಗೊತ್ತಾ?

36
00:02:59,722 --> 00:03:03,058
ನನಗೆ ಹಣ, ಸ್ವಾತಂತ್ರ್ಯಗಳಿದ್ದವು. ಜೂನೋ
ಯಾವಾಗಲೂ ನನ್ನನ್ನು ನೋಡಿಕೊಳ್ಳುತ್ತಿದ್ದರು.

37
00:03:03,142 --> 00:03:06,020
ನನ್ನನ್ನು ಬೆಳೆಸುವ ಜವಾಬ್ದಾರಿಯಿಂದ
ತಪ್ಪಿಸಿಕೊಳ್ಳಲು ತನ್ನ ಸಾವಿನ

38
00:03:06,103 --> 00:03:09,023
ನಾಟಕವಾಡಿದ ವ್ಯಕ್ತಿಗಾಗಿ ನಾನಾಗಿಯೇ
ಎಲ್ಲವನ್ನೂ ಹಾಳುಮಾಡಿಕೊಂಡೆ.

39
00:03:10,065 --> 00:03:11,567
ನಡೆದದ್ದು ಅದಲ್ಲ.

40
00:03:15,529 --> 00:03:16,989
ನಾನು ಜೂನೋಗೆ ಕರೆ ಮಾಡಬೇಕು.

41
00:03:19,241 --> 00:03:23,162
ಅಂದರೆ, ನಾನು ಯಾಕೆ ಓಡುತ್ತಿದ್ದೇನೆ?
ಆಕೆಗೆ ಸಾಯಬೇಕಿರುವುದು ನೀನು.

42
00:03:23,245 --> 00:03:25,122
ನೀನು ಅವಳ ಏಜೆಂಟನ್ನು ಕೊಂದೆ.

43
00:03:25,205 --> 00:03:28,250
ಆಟ್ವುಡ್? ಸಾಕಷ್ಟು ಆಟ್ವುಡ್‌ಗಳಿದ್ದಾರೆ.

44
00:03:28,751 --> 00:03:31,670
ನೀನು ಅವಳ ವಿರುದ್ಧ ತಿರುಗಿದೆ. ಜೂನೋ ಬಗ್ಗೆ
ನಿಂಗೊತ್ತು. ಅವಳು ಇದನ್ನು ಮರೆಯಲ್ಲ.

45
00:03:31,754 --> 00:03:33,088
ಇರಬಹುದೇನೋ.

46
00:03:34,006 --> 00:03:37,593
ಆದರೆ... ಅದನ್ನು ನಾನೇ ಮಾಡಿದೆ ಎಂಬುದು ಖಚಿತವೇ?

47
00:03:49,355 --> 00:03:50,731
ನಿನಗೆ ಅವುಗಳೆಂದರೆ ತುಂಬಾ ಇಷ್ಟವಿತ್ತು.

48
00:03:53,609 --> 00:03:55,569
ಹಾಂ, ನನಗೆ ನೆನಪಿರುವಂತೆಯೇ ಅವುಗಳ ರುಚಿ ಇದೆ.

49
00:04:03,827 --> 00:04:05,579
ಅದಕ್ಕೆ ದುಡ್ಡು ಕೊಟ್ಟುಬಿಡು.

50
00:04:05,663 --> 00:04:08,582
-ಹೇ! ಹೇ!
-ಸಮಾಧಾನ. ನಾನು ಶೌಚಕ್ಕೆ ಹೋಗಬೇಕು.

51
00:04:13,879 --> 00:04:17,091
ಸರಿ.

52
00:04:28,727 --> 00:04:29,979
ಹಲೋ.

53
00:04:30,062 --> 00:04:31,814
ಆತನನ್ನು ಕೊಲ್ಲಲು ಪ್ರಯತ್ನಿಸಿದಿರಾ?

54
00:04:32,189 --> 00:04:33,190
ರೆಬೆಕ್ಕಾ.

55
00:04:35,818 --> 00:04:39,905
ಜೂನೋ, ನನಗೀಗ ಸುಳ್ಳು ಹೇಳಬೇಡಿ.
ನೀವು ಆಟ್ವುಡ್‌ಗೆ ಕಳಿಸಿದ ಸಂದೇಶವನ್ನು ನೋಡಿದೆ.

56
00:04:39,989 --> 00:04:41,407
ಆ ಸಂಖ್ಯೆಯ ಜಾಡು ಪತ್ತೆ ಮಾಡಿ.

57
00:04:41,490 --> 00:04:43,200
ಎಲ್ಲಿದ್ದೀಯಾ? ಅವನ ಜೊತೆ ಇದ್ದೀಯಾ?

58
00:04:45,536 --> 00:04:48,372
ಆತ ಅಪಾಯಕಾರಿ.
ಏನು ಯೋಜಿಸುತ್ತಿದ್ದಾನೋ ಗೊತ್ತಿಲ್ಲ.

59
00:04:50,958 --> 00:04:52,292
ಅವನು ಆಟ್ವುಡ್‌ನ ಕೊಂದ.

60
00:04:55,087 --> 00:04:58,173
ನೀನೆಲ್ಲಿರುವೆ ಅಂತ ಹೇಳು,
ಒಂದು ತಂಡವನ್ನು ಕಳುಹಿಸುತ್ತೇನೆ.

61
00:05:09,643 --> 00:05:10,978
ನನ್ನನ್ನು ವಾಪಸ್ ಕರೆಸಿಕೊಳ್ತೀರಾ?

62
00:05:11,854 --> 00:05:12,855
ಖಂಡಿತ.

63
00:05:14,481 --> 00:05:16,734
ನಿನಗಿಲ್ಲಿ ಯಾವಾಗಲೂ ಜಾಗ ಇರುತ್ತೆ.

64
00:05:20,821 --> 00:05:22,698
ಕೇಳಲು ನಿಜಕ್ಕೂ ಸಂತೋಷವಾಯಿತು.

65
00:05:24,491 --> 00:05:26,035
ಅದು ನಿಜವಲ್ಲದಿದ್ದರೂ ಸಹ.

66
00:05:26,118 --> 00:05:27,953
ಇದು ನಿಜ, ರೆಬೆಕ್ಕಾ.

67
00:05:29,705 --> 00:05:31,373
ನೀನು ಇಲ್ಲಿಗೆ ಸೇರಿದವಳು.

68
00:05:37,504 --> 00:05:38,756
ಮತ್ತೆ ನನ್ನ ತಂದೆ?

69
00:06:05,115 --> 00:06:06,116
ಛೆ!

70
00:06:19,463 --> 00:06:20,547
ಏನಾಯಿತು?

71
00:06:24,218 --> 00:06:25,469
ನಾನಂದುಕೊಂಡೆ ನೀನು...

72
00:06:26,011 --> 00:06:27,137
ಕಾಣೆಯಾದೆ ಅಂತಾನಾ?

73
00:06:31,266 --> 00:06:32,726
ಬೇಜಾರಾಗುತ್ತೆ, ಅಲ್ವಾ?

74
00:06:58,252 --> 00:06:59,545
ಅವಳಿಗೆ ಕರೆ ಮಾಡಿದೆಯಾ?

75
00:07:08,804 --> 00:07:10,806
ನಿನ್ನ ಇಷ್ಟದ ವಿರುದ್ಧ
ನಿನ್ನನ್ನಿಲ್ಲಿ ಇರಿಸಿಕೊಳ್ಳಲಾರೆ,

76
00:07:10,889 --> 00:07:14,685
ಜೂನೋ ಹತ್ತಿರ ನೀನು ಅಪಾಯವಿದ್ದರೂ
ಮುಂದುವರೆಯುವುದಾದರೆ, ನಾನು ನಿನ್ನ ತಡೆಯಲಾರೆ.

77
00:07:14,768 --> 00:07:16,019
ಆದರೆ ನನಗೆ ತಿಳಿಯಬೇಕು.

78
00:07:16,562 --> 00:07:18,897
ನಾನು ಆಕೆಗೆ ಕರೆ ಮಾಡಲಿಲ್ಲ, ಆಯ್ತಾ?
ಆಣೆ ಮಾಡುವೆ.

79
00:07:33,537 --> 00:07:34,788
ನಿನಗೆ ವಯಸ್ಸಾಯಿತು.

80
00:07:34,872 --> 00:07:36,248
ನಿನಗೆ ವಯಸ್ಸಾಯಿತು.

81
00:07:56,768 --> 00:07:57,769
ಏನದು?

82
00:07:58,687 --> 00:07:59,855
ಗೊತ್ತಿಲ್ಲ.

83
00:08:00,522 --> 00:08:03,233
-ಬಹುಶಃ ಅಪಘಾತವೇನೋ.
-ಇರಬಹುದು.

84
00:08:05,485 --> 00:08:06,820
-ಛೆ.
-ಏನು?

85
00:08:07,321 --> 00:08:09,239
ಅದು ಪೊಲೀಸ್ ತಪಾಸಣಾ ಕೇಂದ್ರ.

86
00:08:38,560 --> 00:08:41,271
-ಏನು ಮಾಡುತ್ತಿದ್ದೀಯಾ?
-ಏನು ಮಾಡುತ್ತಿರುವಂತೆ ಕಾಣುತ್ತೆ?

87
00:08:43,315 --> 00:08:44,942
ಯಾರಿಗೂ ಗುಂಡು ಹೊಡೆಯಬೇಡ.

88
00:08:45,442 --> 00:08:46,443
ಯಾರು ಹೇಳುತ್ತಾರೆ?

89
00:08:47,027 --> 00:08:50,864
ನೋಡು, ನಾವು ಶಾಂತರಾಗಿರಬೇಕು, ಆಯ್ತಾ?
ಇದು ವಾಡಿಕೆಯ ತಪಾಸಣಾ ಕೇಂದ್ರ ಆಗಿದ್ದರೆ,

90
00:08:50,948 --> 00:08:53,784
ಯಾರಿಗೂ ತೊಂದರೆಯಾಗದಂತೆ ನಾವು ಜಾರಿಕೊಳ್ಳಬಹುದು.

91
00:08:53,867 --> 00:08:54,910
ಹಾಗಿಲ್ಲದಿದ್ದರೆ?

92
00:09:02,209 --> 00:09:03,126
ನಮಸ್ಕಾರ.

93
00:09:03,710 --> 00:09:05,003
ನಿಮ್ಮ ಪರವಾನಗಿಯನ್ನು ನೋಡಬಹುದೇ?

94
00:09:05,087 --> 00:09:06,046
ಹಾಂ.

95
00:09:11,301 --> 00:09:12,386
ತಗೊಳ್ಳಿ.

96
00:09:18,433 --> 00:09:20,060
ಎಲ್ಲಿಂದ ಬರುತ್ತಿದ್ದೀರಿ?

97
00:09:20,143 --> 00:09:21,103
ಸೋಲ್‌ನಿಂದ.

98
00:09:23,355 --> 00:09:24,690
ಇದೆಲ್ಲಾ ಏನು?

99
00:09:26,358 --> 00:09:27,276
ರೀ, ಸಾಹೇಬರೇ.

100
00:09:32,948 --> 00:09:33,991
ಏನೋ ಸಿಕ್ಕಿತು.

101
00:09:35,617 --> 00:09:36,535
ತೋರಿಸು.

102
00:09:36,994 --> 00:09:40,330
ಗುಮಿಯಲ್ಲಿರುವ ನಮ್ಮ ತಪಾಸಣೆ ಕೇಂದ್ರದಿಂದ.
ಸ್ಥಳೀಯ ಪೊಲೀಸರಿಗೆ ಹೋಲಿಕೆಯೊಂದು ಸಿಕ್ಕಿದೆ.

103
00:09:40,414 --> 00:09:42,582
ಕಾರಿನಿಂದ ಹೊರಬನ್ನಿ, ದಯವಿಟ್ಟು.

104
00:09:43,083 --> 00:09:44,501
ನಾವು ಪ್ರವಾಸದಲ್ಲಿದ್ದೇವೆ.

105
00:09:44,584 --> 00:09:45,836
ಈಗಲೇ ಕಾರಿನಿಂದ ಹೊರಬನ್ನಿ.

106
00:09:45,919 --> 00:09:47,421
ಇದು ನಿಜವಾಗಿಯೂ ಅಗತ್ಯವಿದೆಯೇ?

107
00:09:50,215 --> 00:09:51,550
ಕಾರಿನಿಂದ ಇಳಿಯಿರಿ.

108
00:09:51,883 --> 00:09:55,387
ನಾನು ಸುಮ್ಮನೆ ಹೋಗಬಹುದಾ?
ನನ್ನ ಮಗಳ ಜೊತೆ ಇದ್ದೇನೆ.

109
00:09:55,470 --> 00:09:57,556
ನಾನು ಮತ್ತೆ ಕೇಳಲ್ಲ.

110
00:09:59,057 --> 00:10:00,475
ಹೊರಗೆ ಬಾ. ಈಗಲೇ!

111
00:10:02,019 --> 00:10:04,646
ಪೊಲೀಸರು ಅವರಿಗೆ ಗನ್ ಪಾಯಿಂಟ್ ಅಲ್ಲಿ
ಇಟ್ಟಿದ್ದಾರೆ. ಅವರ ಕಥೆ ಮುಗಿಯಿತು.

112
00:10:04,730 --> 00:10:06,273
ನಿನಗೆ ಡೇವಿಡ್ ಜಂಗ್ ಬಗ್ಗೆ ಗೊತ್ತಿಲ್ಲ.

113
00:10:07,149 --> 00:10:07,983
ಒಂದು...

114
00:10:10,819 --> 00:10:11,737
ಎರಡು...

115
00:10:11,820 --> 00:10:14,072
ಸರಿ! ಸರಿ.

116
00:10:16,908 --> 00:10:19,828
-ನಿನ್ನ ಕೈಗಳನ್ನು ಕಾಣುವಂತೆ ಇರಿಸು!
-ಸರಿ, ಸರಿ.

117
00:10:19,911 --> 00:10:21,204
ನಾನು ಇಳಿಯುತ್ತಿದ್ದೇನೆ.

118
00:10:26,668 --> 00:10:27,794
ಮಿಸ್,

119
00:10:27,878 --> 00:10:29,129
ಆಚೆ ಬನ್ನಿ.

120
00:10:32,716 --> 00:10:34,217
ಇದೇ ಕೊನೆಯ ಎಚ್ಚರಿಕೆ.

121
00:10:34,801 --> 00:10:36,428
ಕಾರಿನಿಂದ ಇಳಿ, ಈಗಲೇ!

122
00:10:36,762 --> 00:10:37,804
ಇಳಿಸು.

123
00:10:48,565 --> 00:10:49,483
ರೆಬೆಕ್ಕಾ...

124
00:10:53,737 --> 00:10:54,738
ಬೇಡ!

125
00:10:59,242 --> 00:11:00,160
ಗನ್ ಬಿಸಾಡು!

126
00:11:06,958 --> 00:11:08,293
-ಮುಂದೆ ಹೋಗು.
-ಸರಿ.

127
00:11:30,357 --> 00:11:31,400
ಹತ್ತು!

128
00:12:44,347 --> 00:12:46,308
ಬಟರ್ಫ್ಲೈ

129
00:12:55,692 --> 00:12:57,319
ಅವನು ಬದುಕಿದ್ದಾನೆಂದು ನಂಬಲಾಗುತ್ತಿಲ್ಲ.

130
00:12:59,112 --> 00:13:01,573
ಇಷ್ಟೆಲ್ಲಾ ವರ್ಷಗಳ ನಂತರ ಮತ್ತೆ ಪ್ರತ್ಯಕ್ಷನಾದ.

131
00:13:03,867 --> 00:13:05,076
ನಿನಗೆ ಅವನ ನೆನಪಿದೆಯಾ?

132
00:13:06,578 --> 00:13:07,954
ಅವನ ಅಂತ್ಯಕ್ರಿಯೆ ನೆನಪಿದೆ.

133
00:13:09,623 --> 00:13:11,374
ನಾನು ಚಿಕ್ಕವನಾಗಿದ್ದಾಗ
ನನ್ನ ಚೆನ್ನಾಗಿ ನೋಡಿಕೊಂಡ.

134
00:13:17,088 --> 00:13:18,882
ನೀವು ಹತ್ತಿರವಾಗಿದ್ದಿರಿ, ಅಲ್ವಾ?

135
00:13:18,965 --> 00:13:21,927
ಜೊತೆಯಾಗಿ ಸಂಸ್ಥೆಯನ್ನು ಆರಂಭಿಸುವಾಗ,
ಬೇರೆ ದಾರಿ ಇರಲ್ಲ.

136
00:13:23,011 --> 00:13:23,929
ಹಾಂ.

137
00:13:24,721 --> 00:13:26,223
ಅವರು ಸಿಕ್ಕಿದರಾ?

138
00:13:26,306 --> 00:13:28,767
ಇನ್ನೂ ಇಲ್ಲ. ಆದರೆ ಈಗಷ್ಟೇ
ಕೊರಿಯಾ ರಾಷ್ಟ್ರೀಯ ಪೊಲೀಸ್ ಇಲಾಖೆಯ

139
00:13:28,850 --> 00:13:31,811
ಕಮ್ಮಿಶನರ್ ಜನರಲ್ ಹ್ವಾಂಗ್
ಅವರೊಂದಿಗೆ ಫೋನಿನಲ್ಲಿ ಮಾತನಾಡಿದೆ.

140
00:13:31,895 --> 00:13:34,898
ಎಲ್ಲಾ ತಪಾಸಣೆ ಕೇಂದ್ರಗಳು ಇನ್ನೂ ಸಕ್ರಿಯವಾಗಿವೆ
ಎಂದು ಭರವಸೆ ಕೊಟ್ಟರು,

141
00:13:34,981 --> 00:13:38,610
ಮತ್ತು ನಮ್ಮ ಗುರಿ ಕಡೆಯದಾಗಿ ಕಂಡ ಕಡೆ
ನೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ

142
00:13:38,693 --> 00:13:41,071
-ಪೊಲೀಸರ ಇರುವಿಕೆಯನ್ನು ಹೆಚ್ಚಿಸುತ್ತಿದ್ದಾರಂತೆ.
-ಧನ್ಯವಾದ.

143
00:13:44,783 --> 00:13:47,452
ಸರಿ. ನನ್ನ ಬಳಿ ಡೇವಿಡ್ ವಿಳಾಸವಿದೆ.

144
00:13:47,536 --> 00:13:50,288
ಸೋಜು ಡಿಸ್ಟಿಲರಿಯಿಂದ
ಒಂದು ಗಂಟೆಯಷ್ಟು ದೂರದ ಮನೆ.

145
00:13:50,372 --> 00:13:53,416
ಎರಡೂ ಅಂಜು ಕಿಮ್ ಎಂಬ ಮಹಿಳೆಯ ಒಡೆತನದಲ್ಲಿವೆ.

146
00:13:53,500 --> 00:13:55,168
ಆಕೆಯ ವಯಸ್ಸು 43,

147
00:13:56,086 --> 00:14:00,715
ಆಕೆ ಸೋಲ್‌ನಲ್ಲಿ ಶಿಪ್ಪಿಂಗ್ ಸಂಸ್ಥೆ ಹೊಂದಿರುವ
ಪ್ರಮುಖ ಉದ್ಯಮಿಯ ಮಗಳು.

148
00:14:00,799 --> 00:14:04,636
ಏಳು ವರ್ಷಗಳ ಹಿಂದೆ, ಅವಳು ಡೇ ಹೊ ಜಂಗ್ ಹೊ ಜಂಗ್
ಎಂಬ ವ್ಯಕ್ತಿಯನ್ನು ಮದುವೆಯಾದಳು.

149
00:14:05,136 --> 00:14:06,263
ಅವನೇ ಡೇವಿಡ್.

150
00:14:08,473 --> 00:14:09,766
ಅವನು ಮತ್ತೆ ಮದುವೆಯಾದ.

151
00:14:11,977 --> 00:14:13,979
ನಾವು ಅವನ ಬಗ್ಗೆ ಏನು ಮಾಡೋಣ?

152
00:14:16,273 --> 00:14:19,359
ನಾವು ಕಾರ್ಪೋವ್‌ನ ಕೊಂದೆವೆಂದು ಅವನಿಗೆ ಗೊತ್ತು.
ಅವನನ್ನು ಮುಗಿಸಬೇಕು.

153
00:14:20,068 --> 00:14:22,529
ಸರಿ. ನಾನು...

154
00:14:23,613 --> 00:14:25,073
ಅದರ ಕೆಲಸ ನೋಡುತ್ತೇನೆ.

155
00:14:30,829 --> 00:14:31,746
ಹೇ, ಅಮ್ಮ?

156
00:14:35,250 --> 00:14:37,377
ಅವನಿಗೆ ಜೆ ಹುನ್ ಬಗ್ಗೆ ಗೊತ್ತು ಅನಿಸುತ್ತಾ?

157
00:14:39,170 --> 00:14:42,424
ಒಬ್ಬ ಸತ್ತ ಕೊರಿಯನ್ ಬಗ್ಗೆ ಅಲ್ಲದೆ
ಚಿಂತಿಸಲು ನಮಗೆ ಬೇಕಾದಷ್ಟು ವಿಷಯಗಳಿವೆ.

158
00:14:45,135 --> 00:14:46,052
ಸರಿ.

159
00:14:55,395 --> 00:14:57,981
ಮನೆಯ ಭದ್ರತಾ ಸಂಸ್ಥೆಯಿಂದ ಯಾರೋ ಬಂದಿದ್ದಾರೆ.

160
00:15:02,652 --> 00:15:04,654
ನಮಸ್ಕಾರ. ನಾನು
ಸಿಸಿಟಿವಿ ಸರಿಪಡಿಸಲು ಬಂದಿದ್ದೇನೆ.

161
00:15:04,738 --> 00:15:06,781
ಓ, ಒಳಗೆ ಬನ್ನಿ, ಒಳಗೆ ಬನ್ನಿ.

162
00:15:06,865 --> 00:15:07,866
ಧನ್ಯವಾದ.

163
00:15:08,617 --> 00:15:11,328
ಹೇ, ನಾನು ನಿನಗೆ ಮತ್ತೆ ಕರೆ ಮಾಡುತ್ತೇನೆ.

164
00:15:15,665 --> 00:15:17,959
ನಿಮಗೆ ಸ್ವಲ್ಪ ಪರ್ಸಿಮನ್ ಬೇಕಾ?

165
00:15:18,043 --> 00:15:19,044
ಏನು?

166
00:15:19,836 --> 00:15:22,672
ಹಳ್ಳಿಯಿಂದ ನನಗೊಂದು ಡಬ್ಬಿ ಬಂದಿದೆ.

167
00:15:22,756 --> 00:15:25,425
ಬೇಡ, ಧನ್ಯವಾದ.

168
00:15:25,508 --> 00:15:27,135
ಅವು ಚುಂಗ್ಡೋ ಪರ್ಸಿಮ್ಮನ್ಗಳು.

169
00:15:27,927 --> 00:15:29,888
ಸರಿ... ನೀವು ಹೇಳಿದಮೇಲೆ ಕೊಡಿ.

170
00:15:32,307 --> 00:15:33,975
-ಕೂತ್ಕೊಳ್ಳಿ.
-ಧನ್ಯವಾದ.

171
00:15:41,733 --> 00:15:43,485
ಎಷ್ಟು ಮುದ್ದಾದ ನಾಯಿ.

172
00:15:44,486 --> 00:15:46,237
ಬೇಕಾದರೆ ಅದನ್ನು ತಗೊಂಡು ಹೋಗಿ.

173
00:15:46,321 --> 00:15:48,531
ತುಂಬಾ ತೊಂದರೆ ಕೊಡುತ್ತೆ.

174
00:15:49,532 --> 00:15:51,493
ನಾನು ಎಂದೂ ನಾಯಿಯನ್ನು ನೋಡಿಕೊಂಡಿಲ್ಲ.

175
00:16:00,502 --> 00:16:02,587
ನೀವು ಒಳ್ಳೆಯ ತಾಯಿಯಾಗಿರುತ್ತಿದ್ದಿರಿ.

176
00:16:04,464 --> 00:16:05,507
ಏನಂದಿರಿ?

177
00:16:08,635 --> 00:16:10,804
ನೀವು ಯಾಕೆ ಮಕ್ಕಳನ್ನು ಹೆರಲಿಲ್ಲ?

178
00:16:13,139 --> 00:16:16,267
ಅದು... ತುಂಬಾ ವೈಯಕ್ತಿಕವಾದ ಪ್ರಶ್ನೆ, ಅಲ್ವಾ?

179
00:16:16,351 --> 00:16:20,021
ನಾಯಿಗಿಂತ ಮಗುವನ್ನು ಬೆಳೆಸುವುದು ಒಳ್ಳೆಯದಲ್ಲವೇ?

180
00:16:24,067 --> 00:16:26,194
ನಾವು ವರ್ಷಗಳ ಕಾಲ... ಪ್ರಯತ್ನಿಸಿದೆವು.

181
00:16:29,406 --> 00:16:31,574
ಬಹುಶಃ ಅದು ಆಗದಿದ್ದದ್ದು ಒಳ್ಳೆಯದಕ್ಕೇನೋ.

182
00:16:33,535 --> 00:16:35,578
ನಿನ್ನ ಗಂಡನಿಂದಾಗಿ...

183
00:16:38,707 --> 00:16:41,292
ಇವತ್ತು ನೀವೆಲ್ಲರೂ ಸಾಯುತ್ತಿದ್ದಿರಿ.

184
00:16:41,376 --> 00:16:42,752
ಏನು ಮಾಡುತ್ತಿರುವೆ?

185
00:16:45,046 --> 00:16:46,631
ನಿನ್ನ ಗಂಡ, ಮಿಸ್ಟರ್ ಚುಲ್ಸು ಲಿಂ...

186
00:16:51,136 --> 00:16:54,180
ಕೆಲವು ಅಪಾಯಕಾರಿ ವ್ಯಕ್ತಿಗಳಿಂದ
ಹಣ ಪಡೆದಿದ್ದಾನೆ.

187
00:16:54,264 --> 00:16:56,349
ದಯವಿಟ್ಟು ನನ್ನ ಮನೆಯಿಂದ ಹೊರಹೋಗಿ!

188
00:17:54,407 --> 00:17:55,241
ಹೇಳಿ?

189
00:17:55,325 --> 00:17:58,328
ಹಲೋ, ಇದು ಅರಿರಂಗ್ ಸಲ್ಯೂಷನ್ಸಾ?

190
00:17:59,037 --> 00:18:00,830
ನೀವು ಹಿಂದಿರುಗುವ ಗ್ರಾಹಕರೇ?

191
00:18:02,123 --> 00:18:03,833
ನಾವು ಈ ಹಿಂದೆ ಒಟ್ಟಿಗೆ ಕೆಲಸ ಮಾಡಿಲ್ಲ,

192
00:18:03,917 --> 00:18:07,128
ಆದರೆ ನೀವು ಅತ್ಯುತ್ತಮ ಖ್ಯಾತಿ ಹೊಂದಿದ್ದೀರಿ,
ಮಿಸ್ಟರ್. ಲೀ.

193
00:18:07,212 --> 00:18:09,422
ದಯವಿಟ್ಟು ನನ್ನನ್ನು ಗನ್ ಎಂದು ಕರೆಯಿರಿ.

194
00:18:10,924 --> 00:18:12,175
ಮತ್ತು ನೀವು?

195
00:18:13,718 --> 00:18:17,722
ನನ್ನ ಹೆಸರು ಜೂನೋ ಲಂಡ್.
ನಾನು ಕ್ಯಾಡಿಸ್ ಗ್ರೂಪ್‌ನ ಸಹ-ಸಂಸ್ಥಾಪಕಿ.

196
00:18:18,348 --> 00:18:19,808
ನೀವು ಯಾರೆಂದು ನನಗೆ ಗೊತ್ತು.

197
00:18:20,350 --> 00:18:22,852
ನಿಮಗಾಗಿ ಒಂದು ಕೆಲಸವಿದೆ,
ನಿಮಗೆ ಆಸಕ್ತಿ ಇದ್ದರೆ.

198
00:18:23,603 --> 00:18:24,771
ಗುರಿ ಯಾರು?

199
00:18:25,563 --> 00:18:27,649
ಡೇವಿಡ್ ಜಂಗ್, ನನ್ನ ಹಳೆಯ ಸಹಚರ.

200
00:18:29,442 --> 00:18:30,944
ಅವನು ಸತ್ತಿದ್ದಾನೆ ಎಂದುಕೊಂಡಿದ್ದೆ.

201
00:18:31,611 --> 00:18:33,071
ನಾನೂ ಅಷ್ಟೇ.

202
00:18:35,114 --> 00:18:36,366
ಇದು ಸುಲಭವಾಗಿರಲ್ಲ.

203
00:18:37,367 --> 00:18:38,743
ನನಗೆ ಸವಾಲು ಇಷ್ಟ.

204
00:18:43,665 --> 00:18:45,041
ಇದು ಬುಸಾನ್ ಅಲ್ಲ.

205
00:18:45,124 --> 00:18:46,376
ಇಲ್ಲ. ಇದು ಡೇಗು.

206
00:18:46,459 --> 00:18:47,836
ಇದು ಬುಸಾನ್ ಎಂದುಕೊಂಡೆ,

207
00:18:47,919 --> 00:18:50,463
ನಂತರ ಸುಂದರವಾದ,
ಹಸ್ತಾಂತರವಿಲ್ಲದ ವಿಯೆಟ್ನಾಂಗೆ ಹೋಗೋಣ.

208
00:18:50,547 --> 00:18:51,923
ಯೋಜನೆಯ ಬದಲಾವಣೆ.

209
00:18:54,509 --> 00:18:55,635
ದೇವರೇ.

210
00:18:57,554 --> 00:18:58,972
ಎಲ್ಲಿಗೆ ಹೋಗುತ್ತಿದ್ದೇವೆ?

211
00:18:59,055 --> 00:19:02,141
ನಾವು ಅಡಗಿಕೊಳ್ಳಬಹುದಾದ ಒಂದು ಜಾಗ ಗೊತ್ತು.
ಅಲ್ಲಿ ನಮ್ಮ ಮುಂದಿನ ನಡೆಯನ್ನು ಯೋಚಿಸೋಣ.

212
00:19:05,353 --> 00:19:07,856
-ಇದೇ.
-ಇದು ಮುಚ್ಚಿದಂತೆ ಕಾಣುತ್ತದೆ.

213
00:19:08,523 --> 00:19:10,942
ಇದರ ಮಾಲೀಕ ನನ್ನ ಗ್ರಾಹಕ. ಒಳ್ಳೆಯ ವ್ಯಕ್ತಿ.

214
00:19:14,237 --> 00:19:15,738
ಈ ಜಗತ್ತಿಗೆ ತುಂಬಾ ಮುಗ್ಧ.

215
00:19:25,874 --> 00:19:28,126
ಒಟ್ಟಿಗೆ ಕೊರಿಯಾಗೆ ಬಂದಿದ್ದು ನೆನಪಿದೆಯಾ?

216
00:19:28,751 --> 00:19:30,837
ನಿನಗೆಷ್ಟು ವಯಸ್ಸು ಆಗ? ಒಂಬತ್ತು.

217
00:19:30,920 --> 00:19:33,298
ಹೌದು. ಅಮ್ಮ ಸತ್ತ ನಂತರವೇ.

218
00:19:36,926 --> 00:19:40,889
ಯಾವಾಗಲೂ ನಿನ್ನನ್ನು ಇಲ್ಲಿಗೆ
ಕರೆತರಬೇಕೆಂದಿದ್ದೆ. ನಿನಗೆ ತೋರಿಸಲು ತುಂಬಾ ಇದೆ.

219
00:19:41,806 --> 00:19:43,641
ನೀನು ಒಳ್ಳೆಯ ಪ್ರವಾಸ ಮಾರ್ಗದರ್ಶಿ.

220
00:19:45,852 --> 00:19:46,853
ಚೆನ್ನಾಗಿದೆ.

221
00:19:49,439 --> 00:19:50,440
ಕುಡಿಯುತ್ತೀಯಾ?

222
00:19:51,816 --> 00:19:53,276
ತಮಾಷೆ ಮಾಡ್ತಿಲ್ಲ ತಾನೆ?

223
00:19:54,235 --> 00:19:56,195
ನನ್ನ ಪುಟ್ಟ ಮಗಳು, ಬೆಳೆದುಬಿಟ್ಟಿದ್ದಾಳೆ.

224
00:19:59,282 --> 00:20:02,410
ಗೊತ್ತಾ, ಇಲ್ಲಿ ಟೋಸ್ಟ್ ಮಾಡುವುದು ಸರಿಯಾದ ಆಚಾರ.

225
00:20:09,375 --> 00:20:10,376
ಚೀರ್ಸ್.

226
00:20:10,460 --> 00:20:11,502
ಚೀರ್ಸ್.

227
00:20:16,633 --> 00:20:18,384
ಇದನ್ನು ನೀನೇ ತಯಾರಿಸುವೆಯಾ?

228
00:20:18,468 --> 00:20:20,386
ಮಕ್ಗಲ್ಲಿ ಮತ್ತು ಸೋಜು.

229
00:20:20,470 --> 00:20:24,349
ನಾನೇ ಅದನ್ನು ತಯಾರಿಸಿ, ವಿತರಕರನ್ನು ಹುಡುಕಿ,
ಖಾತೆಗಳನ್ನು ನೋಡಿಕೊಳ್ಳುತ್ತೇನೆ.

230
00:20:24,432 --> 00:20:25,934
ಇದು ನನ್ನ ಪೂರ್ಣ ಸಮಯದ ಕೆಲಸ.

231
00:20:26,559 --> 00:20:28,895
ನಿಜವಾಗಿ ಹಿಪ್ಸ್ಟರ್ ಆಗೋಕೆ ಕೊರಿಯಾಗೆ ಬಂದೆಯಾ?

232
00:20:30,355 --> 00:20:31,397
ಹಿಪ್ಸ್ಟರ್ ಏನು?

233
00:20:31,856 --> 00:20:37,070
ಹಾಂ. ಮಕ್ಗಲ್ಲಿಯ ಕುಶಲಕರ್ಮಿ.
ಏನು, ಅದು ಶೋಧಿಸದ ಸೋಜು, ಅಲ್ವಾ?

234
00:20:37,153 --> 00:20:39,489
ಇದು ಕೊರಿಯಾದ ಅತ್ಯಂತ ಹಳೆಯ ಮದ್ಯ.

235
00:20:39,572 --> 00:20:42,200
ಸೋಜುಗಿಂತ ಶತಮಾನಗಳ ಹಿಂದೆಯೇ
ಇದನ್ನು ತಯಾರಿಸುತ್ತಿದ್ದರು.

236
00:20:42,951 --> 00:20:44,953
ನೋಡು? ಹಿಪ್ಸ್ಟರ್.

237
00:20:55,213 --> 00:20:58,800
ನಾನು ಚಿಕ್ಕವಳಾಗಿದ್ದಾಗ ನೀನು ನನಗಾಗಿ
ಹಾಡುತ್ತಿದ್ದ ಆ ಹಾಡು ನೆನಪಿದೆಯಾ?

238
00:21:00,343 --> 00:21:02,929
ಮನೆಯಲ್ಲಿ ಒಂಟಿಯಾಗಿ ಬಿಟ್ಟು ಹೋದ
ಮಗುವಿನ ಬಗ್ಗೆ ಅನಿಸುತ್ತೆ.

239
00:21:05,556 --> 00:21:07,016
ಹೇಗೆಂದರೆ...

240
00:22:14,125 --> 00:22:16,252
ಈ ವಸ್ತು ಎಷ್ಟು ನಶೆಯುಂಟುಮಾಡುತ್ತದೆ?

241
00:22:31,559 --> 00:22:33,102
ಏನೋ ಸರಿಯಿಲ್ಲ.

242
00:22:34,937 --> 00:22:37,148
ಹೇ, ನಾನಿದ್ದೇನೆ. ನಾನಿದ್ದೇನೆ.

243
00:22:40,651 --> 00:22:41,736
ಅಲ್ಲಿ ಸ್ವಲ್ಪ...

244
00:22:44,155 --> 00:22:45,239
ಸುಮ್ಮನೆ ಮಲಗು.

245
00:22:46,240 --> 00:22:47,241
ಬಾ.

246
00:24:04,819 --> 00:24:07,655
ಫೋನ್ ಲಾಗ್
ಜೂನೋ

247
00:24:18,624 --> 00:24:19,792
ಹಾಂ, ಬನ್ನಿ.

248
00:24:21,210 --> 00:24:23,421
ನಿಮಗಾಗಿ ಸೆನೆಟರ್ ಡಾಸನ್ ಬಂದಿದ್ದಾರೆ.

249
00:24:23,504 --> 00:24:27,175
ಅವರಿಗೆ ಹೇಳು... ದೇಶದ ಹೊರಗಿದ್ದೇನೆ,
ವಾಪಸ್ ಬಂದಿದ್ದೇ ಕರೆ ಮಾಡುತ್ತೇನೆ ಅಂತ.

250
00:24:27,258 --> 00:24:31,220
ಕ್ಷಮಿಸಿ. ನನ್ನ ಅರ್ಥ,
ಅವರು ಇಲ್ಲಿದ್ದಾರೆ. ಕೆಳಗೆ.

251
00:24:37,894 --> 00:24:39,312
ಜಾರ್ಜ್ ಡಾಸನ್.

252
00:24:39,937 --> 00:24:41,147
ಜೂನೋ ಲಂಡ್.

253
00:24:42,064 --> 00:24:43,691
ಏನು ಸಂತೋಷದ ಆಶ್ಚರ್ಯ.

254
00:24:45,318 --> 00:24:47,737
ಸೋಲ್‌ನಲ್ಲಿ ಕಚೇರಿ ತೆರೆಯುತ್ತಿರುವಿರಿ
ಅಂತ ಕೇಳ್ಪಟ್ಟೆ,

255
00:24:47,820 --> 00:24:50,156
ಆದರೂ ಅಬ್ಬಾ, ಇದು ಮಹಾ ಕಾರ್ಯಾಚರಣೆಯೇ.

256
00:24:50,615 --> 00:24:53,034
ಖಾಸಗಿ ವಲಯದ ಮತ್ತೊಂದು ಸವಲತ್ತು ಅಷ್ಟೇ.

257
00:24:53,117 --> 00:24:55,077
-ಯಾವಾಗ ಹಿಂತಿರುಗಿದಿರಿ?
-ನೆನ್ನೆ ರಾತ್ರಿ.

258
00:24:56,204 --> 00:24:59,123
ಜಗತ್ತಿನ ಈ ಭಾಗದಲ್ಲಿ ನಿಯಂತ್ರಣ ಸಾಧಿಸಲು
ಇದು ಕೆಟ್ಟ ಜಾಗವೇನಲ್ಲ,

259
00:24:59,207 --> 00:25:01,584
ಲ್ಯಾಂಗ್ಲೀಯಲ್ಲಿನ ನಿಮ್ಮ ಮೂಗು ತೂರಿಸುವ
ನೆರೆಹೊರೆಯವರಿಂದ ದೂರವಾಗಿ.

260
00:25:02,501 --> 00:25:05,004
ನಿಮಗೆ ಜಾಗವನ್ನು ತೋರಿಸಲೇ?
ನಾವು ಸಭಾಂಗಣದಲ್ಲಿ ಮಾತನಾಡಬಹುದು.

261
00:25:05,087 --> 00:25:08,299
ಬೇಡ. ನಿಮ್ಮನ್ನು ನೋಡಿಯೇ ಎಷ್ಟೋ ಕಾಲವಾಯಿತು.
ನಾನೇ ಹೊರಗೆ ಕರೆದೊಯ್ಯುವೆ.

262
00:25:10,009 --> 00:25:10,927
ಬನ್ನಿ.

263
00:25:16,307 --> 00:25:18,392
ಹಿಂದೆ ಇದನ್ನು ತಿಂದಿದ್ದೀರಾ?

264
00:25:18,476 --> 00:25:21,646
ಬುಡೆಜಿಗೇ, ಸೇನಾ ಶಿಬಿರದ ಸಾರು.

265
00:25:21,729 --> 00:25:25,149
ಕೊರಿಯಾ ನಿರ್ಗತಿಕವಾಗಿದ್ದ
ಯುದ್ಧದ ನಂತರದ ಕಾಲದಲ್ಲಿ ಬಂದಿತು.

266
00:25:25,233 --> 00:25:29,654
ಹೆಚ್ಚು ಅಮೆರಿಕನ್ ವಸ್ತುಗಳನ್ನು ಬೇಯಿಸಬೇಕಾಯಿತು.
ಬೇಯಿಸಿದ ಕಾಳುಗಳು, ಹಾಟ್ ಡಾಗ್ಸ್.

267
00:25:30,196 --> 00:25:31,030
ರುಚಿಕರ.

268
00:25:31,113 --> 00:25:34,033
ಕೆಲವೊಮ್ಮೆ ಇದನ್ನು ಜಾನ್ಸನ್ ಸ್ಟುವ್ ಅಂತಾರೆ,
ಎಲ್‌ಬಿಜೆ ಅವರಿಗಾಗಿ.

269
00:25:36,244 --> 00:25:39,247
ನೀವು ಅಧ್ಯಕ್ಷರಾದ ನಂತರ,
ನಿಮ್ಮ ಹೆಸರಲ್ಲೂ ಒಂದು ಸೂಪ್ ಮಾಡ್ತಾರೇನೋ.

270
00:25:40,414 --> 00:25:43,084
ಡಾಸನ್ ಚೌಡರ್.

271
00:25:45,253 --> 00:25:46,837
ಚೆನ್ನಾಗಿ ಕೇಳಿಸುತ್ತೆ.

272
00:25:48,422 --> 00:25:51,926
ಈಗ ನೀವು ಸೆನೆಟ್ ಗುಪ್ತಚರ ಸಮಿತಿಯ
ಅಧ್ಯಕ್ಷರಾಗಿರುವುದರಿಂದ ಕಷ್ಟವಾಗಲಾರದು.

273
00:25:52,009 --> 00:25:53,052
ರಾಜಕೀಯ.

274
00:25:55,137 --> 00:25:58,099
ಲ್ಯಾಂಗ್ಲೀ ನಂತರ ಖಾಸಗಿಯಾಗಿ ಮಾಡಿಕೊಂಡ
ನಿಮ್ಮ ಉಪಾಯವೇ ಸರಿ ಅನಿಸುತ್ತದೆ.

275
00:25:58,182 --> 00:26:00,268
ನಾನು ಹೋಗಿ ಜಗತ್ತನ್ನು
ಬದಲಾಯಿಸಲು ಪ್ರಯತ್ನಿಸಬೇಕಾಯಿತು.

276
00:26:00,351 --> 00:26:03,896
ನನಗೂ ಜಗತ್ತನ್ನು ಬದಲಾಯಿಸಬೇಕಂತಿದೆ.
ಅದಕ್ಕಾಗಿ ಹೆಚ್ಚಿನ ಹಣ ಮತ್ತು ಅಧಿಕಾರ ಬೇಕಷ್ಟೇ.

277
00:26:08,943 --> 00:26:10,820
ನಿಮ್ಮನ್ನು ಕಂಡು ಸಂತೋಷವಾಯಿತು, ಜೂನೋ.

278
00:26:12,113 --> 00:26:14,407
ಅದೃಷ್ಟವಶಾತ್, ನೀವು ಇಲ್ಲಿದ್ದೀರಿ.

279
00:26:14,490 --> 00:26:15,491
ಹೇಗೆ?

280
00:26:17,285 --> 00:26:20,621
ದಿವಂಗತ ಮಿಖೈಲ್ ಕಾರ್ಪೋವ್ ಅವರೊಂದಿಗೆ
ಮಾತನಾಡಲು ನಾನು ಸೋಲ್‌ಗೆ ಬಂದೆ.

281
00:26:21,706 --> 00:26:24,083
ಆತ ಕ್ಯಾಡಿಸ್ ಜೊತೆ
ಸ್ವಲ್ಪ ಕೆಲಸ ಮಾಡಿದ್ದರು, ಅಲ್ವಾ?

282
00:26:25,251 --> 00:26:28,462
ಅದು ಕೆಲವು ವರ್ಷಗಳ ಹಿಂದೆ, ನಾವು ಅವರೊಂದಿಗೆ
ಒಂದೆರಡು ಸಲ ಒಪ್ಪಂದ ಮಾಡಿಕೊಂಡಿದ್ದೆವು.

283
00:26:28,546 --> 00:26:30,756
ವ್ಯವಹಾರದಲ್ಲಿರುವ ಎಲ್ಲರೂ
ಕಾರ್ಪೋವ್ ಜೊತೆ ಕೆಲಸ ಮಾಡಿದ್ದರು.

284
00:26:31,966 --> 00:26:34,093
ಆತನಿಗೆ ಎಲ್ಲರ ರಹಸ್ಯ ಗೊತ್ತಿತ್ತು ಅಂತಾರೆ.

285
00:26:34,176 --> 00:26:36,137
ಆತ ಕೊಲೆಯಾಗಿದ್ದು ನನಗೆ ಆಶ್ಚರ್ಯವೆನಿಸಲಿಲ್ಲ.

286
00:26:36,804 --> 00:26:38,389
ಏಕೆ? ನೀವು ಏನು ಕೇಳಿದಿರಿ?

287
00:26:39,724 --> 00:26:40,975
-ಜಾರ್ಜ್...
-ಕ್ಷಮಿಸಿ.

288
00:26:41,559 --> 00:26:43,769
ನೀವು ಹೆಚ್ಚು ಹೇಳುವಿರೇನೋ ಅನಿಸಿತು.

289
00:26:45,271 --> 00:26:47,982
ನಾವು ಯಾಕೆ ಭೇಟಿಯಾಗುತ್ತಿದ್ದೇವೆ ಅಂತ ಕೇಳಲ್ವಾ?

290
00:26:48,065 --> 00:26:49,859
ಅದು ಗೌಪ್ಯವಾದದ್ದು ಅಂದುಕೊಳ್ಳುವೆ.

291
00:26:51,068 --> 00:26:53,487
ನಮ್ಮಿಬ್ಬರ ನಡುವೆಯೇ ಇರಲಿ,

292
00:26:53,571 --> 00:26:56,866
ಆತ ಪ್ರಮುಖ ಯುಎಸ್ ಗುಪ್ತಚರ ಮಾಹಿತಿಯನ್ನು
ರಷ್ಯಾದ ಎಫ್‌ಎಸ್‌ಬಿಗೆ ರವಾನಿಸುತ್ತಿದ್ದ.

293
00:26:56,949 --> 00:26:58,617
ಅದರ ಹಿಂದೆ ಯಾರಿದ್ದರೆಂದು ತಿಳಿಯಬೇಕು.

294
00:27:00,328 --> 00:27:02,913
ಹಂಚಿಕೊಳ್ಳುವಂಥದ್ದು ಏನಾದರೂ ತಿಳಿದು ಬಂದರೆ,
ನಿಮಗೆ ಹೇಳುತ್ತೇನೆ.

295
00:27:04,206 --> 00:27:05,624
ನಿಮ್ಮ ನೆರವಿಗೆ ಧನ್ಯವಾದ.

296
00:27:07,126 --> 00:27:09,545
-ಹಳೆಯ ಕಾಲದಂತೆಯೇ ಇರುತ್ತದೆ.
-ಖಂಡಿತ.

297
00:27:12,757 --> 00:27:15,593
ಅದರ ಬಗ್ಗೆ ಮಾತನಾಡುತ್ತಾ, ಒಲಿವರ್ ಹೇಗಿದ್ದಾನೆ?

298
00:27:16,969 --> 00:27:20,389
ನಿಮ್ಮ ಮಗ ಕುಟುಂಬದ ವ್ಯವಹಾರಕ್ಕೆ ಸೇರಿದ್ದಾನೆ.
ನಿಮಗೆ ಹೆಮ್ಮೆ ಎನಿಸಬೇಕು.

299
00:27:23,100 --> 00:27:24,226
ಅವನನ್ನು ಕೇಳಿದೆ ಅಂತ ಹೇಳಿ.

300
00:27:50,961 --> 00:27:52,797
ನನಗೆ ಮಂಪರು ಮದ್ದು ಕೊಟ್ಟೆಯಾ?

301
00:27:52,880 --> 00:27:54,548
ನಿನಗೆ ನೋವು ಕೊಡಲು ನೋಡಲಿಲ್ಲ.

302
00:27:55,424 --> 00:27:56,759
ನಾನು ತಿಳಿದುಕೊಳ್ಳಬೇಕಿತ್ತು.

303
00:28:04,100 --> 00:28:06,477
ಹಾಂ, ಸರಿ. ನಾನು ಆಕೆಗೆ ಕರೆ ಮಾಡಿದೆ.

304
00:28:08,646 --> 00:28:09,772
ನೀನು ನನ್ನನ್ನು ಹಿಡಿದೆ.

305
00:28:11,690 --> 00:28:14,151
ಅದರ ಬಗ್ಗೆ ನಾನು ಪರಿತಪಿಸಬೇಕು ಅಂದುಕೊಳ್ಳುವೆಯಾ?

306
00:28:14,235 --> 00:28:18,072
ನೀನು ನನ್ನನ್ನು ಕ್ಯಾಡಿಸ್‌ಗೆ ಒಪ್ಪಿಸುವುದಾದರೆ,
ನಾನು ನಿನ್ನನ್ನು ಕರೆದೊಯ್ಯಲಾಗದು.

307
00:28:20,032 --> 00:28:21,367
ನೀನು ಅವಳಿಗೆ ಏನು ಹೇಳಿದೆ?

308
00:28:21,951 --> 00:28:23,244
-ಏನೂ ಇಲ್ಲ.
-ಏನೂ ಇಲ್ಲವಾ?

309
00:28:23,619 --> 00:28:25,413
ಆಕೆಯೊಂದಿಗೆ ಮಾತಾಡಬೇಕಿತ್ತು ಅಷ್ಟೇ.

310
00:28:29,083 --> 00:28:30,418
ನೀನು ನನ್ನನ್ನು ಹುಡುಕಿದೆ.

311
00:28:31,710 --> 00:28:34,505
ನೀನು ನನ್ನನ್ನು ಕ್ಯಾಡಿಸ್‌ನಿಂದ ಬೇರ್ಪಡಿಸಿದೆ,

312
00:28:34,588 --> 00:28:37,925
ಮತ್ತು ಈ ಹಾಳಾದ ಅಪ್ಪ-ಮಗಳ ವಿಹಾರಕ್ಕೆ
ನೀನೇ ನನ್ನನ್ನು ಕರೆತಂದೆ.

313
00:28:38,008 --> 00:28:40,344
-ನೀನು ಅದ್ಯಾವುದನ್ನೂ ಮಾಡಬೇಕಿರಲಿಲ್ಲ.
-ಖಂಡಿತ ಮಾಡಿದೆ.

314
00:28:40,428 --> 00:28:42,555
ಅಯ್ಯೋ... ಯಾಕೆ?

315
00:28:43,305 --> 00:28:44,640
ಏಕೆಂದರೆ ನಿನ್ನನ್ನು ಪ್ರೀತಿಸುತ್ತೇನೆ.

316
00:28:49,812 --> 00:28:51,480
ಇಲ್ಲ, ನೀನು ನನ್ನನ್ನು ಬಿಟ್ಟುಹೋದೆ.

317
00:28:53,190 --> 00:28:57,069
ನಿನ್ನನ್ನು ಭಯೋತ್ಪಾದಕರು ಕೊಂದರು ಅಂತ
ಅಂದುಕೊಳ್ಳುತ್ತಲೇ ನನ್ನನ್ನು ಬೆಳೆಯಲು ಬಿಟ್ಟೆ.

318
00:28:57,903 --> 00:29:00,531
ನಿನ್ನನ್ನು ಸುರಕ್ಷಿತವಾಗಿಡುವ ದಾರಿ
ಅದೊಂದೇ ಆಗಿತ್ತು.

319
00:29:00,614 --> 00:29:01,532
ತಡಿ.

320
00:29:02,450 --> 00:29:05,953
ಇಷ್ಟು ದಿನ ನಿನಗೆ ನೀನೇ
ಹೀಗೆ ಹೇಳಿಕೊಳ್ಳುತ್ತಾ ಇದ್ದೆಯಾ?

321
00:29:28,684 --> 00:29:29,643
ಹೇ.

322
00:29:41,238 --> 00:29:42,239
ಬಾ.

323
00:29:51,916 --> 00:29:53,501
ಬಿಡು.

324
00:30:02,218 --> 00:30:05,888
ಫಿಲಿಪೀನ್ಸ್‌ನ ಜೋಲೋ ದ್ವೀಪದಲ್ಲಿ
ನಾನೊಂದು ತಂಡವನ್ನು ಮುನ್ನಡೆಸುತ್ತಿದ್ದೆ.

325
00:30:07,765 --> 00:30:11,852
ಹ್ಯೂಗೋ ಮಾಲ್ಡೋನಾಡೋ ಮತ್ತವನ ಭಯೋತ್ಪಾದಕ
ಘಟಕವನ್ನು ಭೇದಿಸಲು ನಮ್ಮನ್ನು ನೇಮಿಸಿದ್ದರು.

326
00:30:13,771 --> 00:30:15,481
ಅವರು ಅಪಾಯಕಾರಿ ಎಂದು ನಮಗೆ ತಿಳಿದಿತ್ತು,

327
00:30:15,564 --> 00:30:17,399
ಆದರೆ ನಾವು ಅವರನ್ನು ಕಡಿಮೆ ಅಂದಾಜು ಮಾಡಿದೆವು.

328
00:30:42,716 --> 00:30:43,676
ಹೋಗು!

329
00:30:43,759 --> 00:30:47,054
ಅವರ ಜಾಲವು ಖಂಡಗಳಾದ್ಯಂತ ಹರಡಿತ್ತು,

330
00:30:47,137 --> 00:30:48,847
ನಾವು ಬರುವುದು ಅವರಿಗೆ ತಿಳಿದಿತ್ತು.

331
00:30:49,306 --> 00:30:50,641
ನೀವು ಇದನ್ನು ನೋಡಬೇಕು.

332
00:30:59,358 --> 00:31:02,152
ಆ ಜನ ನಿರ್ದಯಿಗಳಾಗಿದ್ದರು.

333
00:31:03,320 --> 00:31:06,240
ಅವರು ಮನೆಗಳನ್ನು ಸುಟ್ಟುಹಾಕಿದ್ದರು,
ಇಡೀ ಕುಟುಂಬಗಳನ್ನೇ ಕೊಂದಿದ್ದರು.

334
00:31:06,323 --> 00:31:08,242
ತಮ್ಮ ಗುರಿಯನ್ನು ತಲುಪಲು
ಏನೇ ಆದರೂ ಮಾಡುತ್ತಿದ್ದರು.

335
00:31:08,325 --> 00:31:12,830
ಜಂಗ್, ರೆಬೆಕ್ಕಾ

336
00:31:19,378 --> 00:31:22,965
ಅವರ ಬಳಿ ನಿನ್ನ ಚಿತ್ರ,
ನಿನ್ನ ಜನ್ಮ ಪ್ರಮಾಣಪತ್ರ ಇದ್ದವು...

337
00:31:24,842 --> 00:31:26,093
ನಿನ್ನ ಶಾಲೆಯ ವೇಳಾಪಟ್ಟಿ.

338
00:31:28,512 --> 00:31:30,055
ನಾವು ಅವರ ಗುರಿಯಾಗಿದ್ದೆವು.

339
00:31:31,557 --> 00:31:35,144
ನಾನು ನಿನ್ನ ಬಳಿ ಬರುವ ಮೊದಲೇ,
ನಮ್ಮ ಮೇಲೆ ದಾಳಿ ಮಾಡಿದರು.

340
00:31:35,227 --> 00:31:37,313
ನನ್ನ ಇಡೀ ತಂಡವನ್ನು ಕೊಂದರು.

341
00:31:38,147 --> 00:31:42,443
ನಾನು ಬದುಕುಳಿದೆ, ಆದರೆ ನಾನು ಸಾಯುವವರೆಗೂ
ಅವರು ಬಿಡಲ್ಲ ಅಂತ ಗೊತ್ತಿತ್ತು,

342
00:31:42,526 --> 00:31:45,988
ಮತ್ತು ಅವರು ನಿನ್ನನ್ನು ಹುಡುಕಿ, ನನ್ನ ತಲುಪಲು
ನಿನ್ನನ್ನು ಕೊಲ್ಲುತ್ತಾರೆಂದೂ ಗೊತ್ತಿತ್ತು!

343
00:31:47,448 --> 00:31:49,033
ಅದಕ್ಕೇ ನಾನು ಸಾಯಬೇಕಾಯಿತು.

344
00:31:51,577 --> 00:31:52,494
ಆದ್ದರಿಂದ...

345
00:31:54,079 --> 00:31:58,000
ಇನ್ನೊಂದು ದೇಶದಲ್ಲಿರುವ ದುಷ್ಟರಿಂದ
ನನ್ನನ್ನು ಕಾಪಾಡಲು ನೀನು ಕಣ್ಮರೆಯಾದೆ.

346
00:31:59,501 --> 00:32:01,920
ನಾನು ಸರಿಯಾದದ್ದನ್ನೇ ಮಾಡುತ್ತಿದ್ದೆ ಅಂದುಕೊಂಡೆ,

347
00:32:03,005 --> 00:32:04,590
ಕಠಿಣವಾದದ್ದನ್ನು.

348
00:32:04,673 --> 00:32:06,800
ತಂದೆಯಾದವನು ಅದನ್ನೇ ಮಾಡುವನು ಎಂದುಕೊಂಡೆ.

349
00:32:09,219 --> 00:32:12,222
ನೋಡು, ನನ್ನಿಂದಾಗಿ ನೀನು ಅನುಭವಿಸಿರುವುದನ್ನು
ಇದಕ್ಕೆ ಹೋಲಿಸಲಾಗದೆಂದು ನನಗೆ ಗೊತ್ತು...

350
00:32:14,975 --> 00:32:16,727
ಆದರೆ ಅದು ನನ್ನನ್ನು ನಾಶಮಾಡಿತು.

351
00:32:25,569 --> 00:32:27,112
ನಾನು ನಿನ್ನನ್ನು ಪ್ರತಿದಿನ ನೆನೆದೆ.

352
00:32:30,699 --> 00:32:34,787
ಮತ್ತು ಪ್ರತಿದಿನ, ನಾನು ತಪ್ಪು ನಿರ್ಧಾರ
ಮಾಡಿದೆನಾ ಅಂತ ನನ್ನನ್ನು ನಾನೇ ಕೇಳಿಕೊಂಡೆ.

353
00:32:38,082 --> 00:32:41,669
ಆದರೆ ನಿನ್ನನ್ನು ಇಲ್ಲಿ ನೋಡುತ್ತಾ,
ನನ್ನ ಕಣ್ಣ ಮುಂದೆ,

354
00:32:42,544 --> 00:32:43,754
ಜೀವಂತವಾಗಿ...

355
00:32:47,257 --> 00:32:48,884
ಅದೆಲ್ಲವೂ ಸಾರ್ಥಕವಾಯಿತೆಂದು ಗೊತ್ತು.

356
00:33:02,564 --> 00:33:06,235
ನೀನು ಸತ್ತ ದಿನದ ಬಗ್ಗೆ ತಿಳಿದುಕೊಳ್ಳಲು
ಅದರ ಕುರಿತು ಎಲ್ಲವನ್ನೂ ಓದಿದೆ.

357
00:33:08,529 --> 00:33:10,322
ಮಾಲ್ಡೋನಾಡೋ ಇನ್ನೂ ಬಲಶಾಲಿಯಾಯಿತು.

358
00:33:13,409 --> 00:33:15,786
ಅದಕ್ಕೇ ನೀನು ನನ್ನ ಬಳಿ ವಾಪಸ್ ಬರಲಿಲ್ವಾ?

359
00:33:29,425 --> 00:33:31,677
ಹೇ. ಏನಾಯಿತು?

360
00:33:32,344 --> 00:33:33,971
ನನ್ನನ್ನು ಯಾರೋ ಹಿಂಬಾಲಿಸುತ್ತಿರಬಹುದು.

361
00:33:34,638 --> 00:33:35,514
ಏನು?

362
00:33:37,850 --> 00:33:39,977
ನಾನು ಸುಮ್ಮನೆ
ಗಾಬರಿಯಾಗುತ್ತಿದ್ದೇನೆ ಅಂದುಕೊಂಡೆ,

363
00:33:40,394 --> 00:33:42,813
ಆದರೆ ರೇಡಿಯೋಗಳಿದ್ದ
ಇಬ್ಬರು ವ್ಯಕ್ತಿಗಳಿದ್ದರು...

364
00:33:42,896 --> 00:33:44,648
ಆವರು ಕ್ಯಾಡಿಸ್ ಆಗಿರಬಹುದು ಅನಿಸುತ್ತೆ.

365
00:33:46,775 --> 00:33:47,985
ನೀನು ಎಲ್ಲಿದ್ದೀಯಾ?

366
00:33:48,068 --> 00:33:49,319
ಡಾನ್ಗಡೆಗು ಸ್ಟೇಷನ್.

367
00:33:51,321 --> 00:33:52,823
ಅಲ್ಲಿಂದ ಹೊರಗೆ ಹೋಗಬಲ್ಲೆಯಾ?

368
00:33:56,910 --> 00:34:00,122
ನಾನು... ಇಲ್ಲ.
ಇಲ್ಲ, ಅವರಿಗೆ ಸಿಕ್ಕಿಬಿಡುತ್ತೇನೆ.

369
00:34:01,123 --> 00:34:03,500
ಸರಿ, ನನ್ನ ಮಾತು ಕೇಳು.

370
00:34:04,126 --> 00:34:08,172
ನೀನೊಂದು ಸುರಕ್ಷಿತ ಜಾಗಕ್ಕೆ ಹೋಗು.
ಅಲ್ಲಿ ನೀನು ಹೋಗಿ ಬೀಗ ಹಾಕಿಕೊಳ್ಳುವಂತೆ.

371
00:34:08,922 --> 00:34:11,800
ನಾನು ದೂರದಲ್ಲಿಲ್ಲ.
ಅಲ್ಲಿಗೆ 15 ನಿಮಿಷಗಳಲ್ಲಿ ಬರುತ್ತೇನೆ, ಸರಿನಾ?

372
00:34:12,509 --> 00:34:14,344
ಸರಿ. ಬೇಗ ಬಾ.

373
00:34:18,515 --> 00:34:20,309
ಅದು ಮಹಿಳೆ, ಅಲ್ಲವೇ?

374
00:34:22,644 --> 00:34:23,771
ಅದು ನನ್ನ ಹೆಂಡತಿ.

375
00:34:29,067 --> 00:34:30,110
ಕ್ಯಾಡಿಸ್‌ಗೆ ಸಿಕ್ಕಿದಳಾ?

376
00:34:31,653 --> 00:34:32,488
ಹಾಂ.

377
00:34:33,822 --> 00:34:35,824
ನಿನಗೆ ನನ್ನ ಸಹಾಯ ಬೇಕಾಗಬಹುದೇನೋ.

378
00:34:37,409 --> 00:34:39,203
-ನಾನೇನೂ ಮಾಡುತ್ತಿಲ್ಲ.
-ಬೇಡ.

379
00:34:40,370 --> 00:34:43,582
ನಿನ್ನನ್ನು ಮತ್ತೆ ಅಪಾಯಕ್ಕೆ ದೂಡಲು
ನಿನ್ನನ್ನಿಲ್ಲಿಗೆ ಕರೆತರಲಿಲ್ಲ.

380
00:34:43,665 --> 00:34:46,835
ನೀನು ಆಕೆಗಾಗಿ ಹೊರಹೋಗುವಾಗ
ನಾನಿಲ್ಲಿ ಸುಮ್ಮನೆ ಕೂರಬೇಕಾ?

381
00:34:46,919 --> 00:34:49,421
ನಿನ್ನನ್ನು ನನಗಾಗಿ ಕಾಯಿಸಲಾರೆ, ನನಗದು ಗೊತ್ತು.

382
00:34:50,964 --> 00:34:52,591
ಆದರೆ ನಾನು ವಿದಾಯ ಹೇಳುತ್ತಿಲ್ಲ.

383
00:34:57,554 --> 00:34:58,555
ದಯವಿಟ್ಟು...

384
00:34:59,973 --> 00:35:01,016
ಇಲ್ಲೇ ಇರು.

385
00:35:03,060 --> 00:35:04,603
ನೀನು ಮತ್ತೆ ಸತ್ತರೆ?

386
00:35:04,978 --> 00:35:06,605
ನನ್ನನ್ನು ಕೊಲ್ಲುವುದು ಅಷ್ಟು ಸುಲಭವಲ್ಲ.

387
00:35:21,161 --> 00:35:22,579
ಮೂರ್ಖ.

388
00:35:46,144 --> 00:35:47,104
ಹಾಂ.

389
00:35:47,187 --> 00:35:49,189
ನಾನೇ. ಏನೋ ಸಿಕ್ಕಿದೆ.

390
00:36:08,625 --> 00:36:11,545
ಅವಳಿಗೆ ನಾವಿಲ್ಲಿ ಇರುವುದು ಗೊತ್ತು.
ಸುಮ್ಮನೆ ಮುನ್ನುಗ್ಗಬಾರದೇ?

391
00:36:11,628 --> 00:36:13,589
ಡೇವಿಡ್ ನಮ್ಮ ಗುರಿ, ಅವನ ಹೆಂಡತಿ ಅಲ್ಲ.

392
00:36:14,047 --> 00:36:16,216
-ಅವನು ಬರುತ್ತಾನೆ ಅನಿಸುತ್ತಾ?
-ಹೌದು.

393
00:36:17,050 --> 00:36:18,802
ಡೇವಿಡ್ಗೆ ಯಾವಾಗಲೂ ಹೀರೋ ಆಗಬೇಕು.

394
00:36:20,429 --> 00:36:23,515
ನೋಡು, ಅವನಿಗೆ ಕಾರ್ಪೋವ್ ಬಗ್ಗೆ ಗೊತ್ತು
ಅಂತ ಬಲ್ಲೆ, ಆದರೆ...

395
00:36:25,309 --> 00:36:27,102
ಅವನು ಈಗಲೂ ಅಪಾಯಕಾರಿಯಾ?

396
00:36:28,270 --> 00:36:32,566
ಅಂದರೆ, ಅವನು ಕ್ಯಾಡಿಸ್‌ನಿಂದ ದೂರ ಹೋಗಲು
ಪ್ರಯತ್ನಿಸುತ್ತಿರುವಂತೆ ಕಾಣುತ್ತಿದೆ.

397
00:36:32,649 --> 00:36:34,318
ಅವನಿಗೆ ಹೋಗಲು ಬಿಡಬೇಕಾ?

398
00:36:35,569 --> 00:36:37,487
ನಾನು ಕೇಳುತ್ತಿದ್ದೇನೆ ಅಷ್ಟೇ.

399
00:36:39,698 --> 00:36:42,117
ನೀನು ಹಾಗಂದುಕೊಳ್ಳುವ ನಿನ್ನ ಸ್ವಭಾವ,

400
00:36:42,743 --> 00:36:46,413
ಅವನನ್ನು ಗುರಿಯ ಬದಲಾಗಿ ಒಬ್ಬ ಮನುಷ್ಯನನ್ನಾಗಿ
ನೋಡುವ ನಿನ್ನ ಸ್ವಭಾವ ಇದೆಯಲ್ಲ...

401
00:36:47,581 --> 00:36:51,335
ಅದರ ಕತ್ತಿನ ಸುತ್ತ
ನಿನ್ನ ಕೈಗಳನ್ನು ಒತ್ತಿ ಹಿಡಿದು,

402
00:36:51,418 --> 00:36:54,046
ಅದು ಸಾಯುವವರೆಗೂ ಕೈಗಳನ್ನು ಬಿಡಬೇಡ.

403
00:36:56,298 --> 00:36:57,382
ಅರ್ಥ ಆಯ್ತಾ?

404
00:38:27,305 --> 00:38:29,057
ಪೂರ್ವ ಪ್ರವೇಶದ್ವಾರದಲ್ಲಿ. ಇಲ್ಲಿ ಏನೂ ಇಲ್ಲ.

405
00:38:39,943 --> 00:38:41,486
ನಾನು ಲಿಮ್, ಪರೀಕ್ಷಿಸುತ್ತಿದ್ದೇನೆ.

406
00:38:50,954 --> 00:38:52,831
ಹೇ, ಈ ಪ್ರದೇಶದ ಮೇಲೆ ಗಮನವಿಡು.

407
00:39:00,672 --> 00:39:03,050
ರ್ಯೂ, ಕೇಳಿಸುತ್ತಿದೆಯಾ? ರ್ಯೂ?

408
00:39:03,717 --> 00:39:05,052
ಏನು ನಡೆಯುತ್ತಿದೆ?

409
00:39:06,386 --> 00:39:08,388
ಅದು ಡೇವಿಡ್. ಅವನು ಬಂದಿದ್ದಾನೆ.

410
00:39:19,566 --> 00:39:20,901
ಇಲ್ಲೊಂದು ಸಮಸ್ಯೆ ಇದೆಯಾ?

411
00:39:21,401 --> 00:39:22,778
ಲಿಮ್, ಉತ್ತರಿಸು!

412
00:39:26,615 --> 00:39:28,492
ಜೂನೋ, ನೀನು ಕೇಳುತ್ತಿರುವೆ ಅಂತ ಗೊತ್ತು.

413
00:39:30,869 --> 00:39:32,287
ಬಹಳ ದಿನಗಳಾಗಿತ್ತು.

414
00:39:33,955 --> 00:39:34,831
ಏನಾದರೂ ಮಾಡು.

415
00:39:36,625 --> 00:39:39,169
ಒಂದು ಕಾಲದಲ್ಲಿ ಒಂದು ಕೋಣೆಯಲ್ಲಿದ್ದ
ನಾವಷ್ಟೇ ಕ್ಯಾಡಿಸ್ ಆಗಿದ್ದದ್ದು ನೆನಪಿದೆಯಾ?

416
00:39:39,252 --> 00:39:40,629
ಏನು ಸಿಕ್ಕಿದೆಯೋ ತೋರಿಸು.

417
00:39:40,712 --> 00:39:43,799
ಇದು ಕೇವಲ ಗಗನಕುಸುಮವಲ್ಲ ಅಂತ
ನಿನಗೆ ನಾನು ಭರವಸೆ ಕೊಟ್ಟಿದ್ದೆನಲ್ವಾ?

418
00:39:44,633 --> 00:39:48,261
ಜಗತ್ತಿನೆಲ್ಲೆಡೆ ಜನರೊಂದಿಗೆ ನಾವು ಒಂದು
ಪ್ರಮುಖ ಸಂಸ್ಥೆಯಾಗುತ್ತೇವೆ ಅಂತ ಹೇಳಿದ್ದೆ.

419
00:39:48,970 --> 00:39:51,181
ಇದೇ ನಮ್ಮ ಪರಂಪರೆಯಾಗುತ್ತೆ ಅಂದಿದ್ದೆ.

420
00:39:51,264 --> 00:39:53,683
ನಾವು ವೀಕ್ಷಿಸಬಹುದಾದ ಕ್ಯಾಮೆರಾಗಳು ಇಷ್ಟೇನಾ?

421
00:39:53,767 --> 00:39:55,477
ಅವನು ಇನ್ನೂ ಯಾಕೆ ನಮಗೆ ಸಿಕ್ಕಿಲ್ಲ?

422
00:39:57,020 --> 00:39:58,355
ನಾನು ಸರಿಯಾಗಿ ಹೇಳಿದ್ದೆ, ಅಲ್ವಾ?

423
00:40:02,984 --> 00:40:04,402
ಸಾಯವೊಂಗ್ ಕಣ್ಣಿಟ್ಟಿದ್ದಾನೆ.

424
00:40:04,486 --> 00:40:05,987
ಅವನನ್ನು ಮುಗಿಸಿಹಾಕಿ.

425
00:40:06,947 --> 00:40:09,324
ಈಗ, ನನ್ನನ್ನು ನೀನು
ಇಲ್ಲಿ ಕೊರಿಯಾದಲ್ಲಿ ಬೇಟೆಯಾಡುತ್ತಿರುವೆ.

426
00:40:09,407 --> 00:40:10,283
ಅದನ್ನು ಕೊಡು.

427
00:40:13,954 --> 00:40:16,123
ನಾನು ನಿನಗೆ ಇನ್ನೊಂದು ಭರವಸೆ ಕೊಡುತ್ತೇನೆ.

428
00:40:17,290 --> 00:40:21,837
ನೀನು ನನ್ನ ಕುಟುಂಬಕ್ಕೆ ತೊಂದರೆ ಕೊಟ್ಟರೆ,
ನಿನಗೆ ಆಪ್ತವಾದ ಎಲ್ಲವನ್ನೂ ನಾಶಪಡಿಸುತ್ತೇನೆ.

429
00:40:23,004 --> 00:40:24,506
ನಿನಗೆ ಏನೂ ಉಳಿದಿರುವುದಿಲ್ಲ.

430
00:40:25,757 --> 00:40:26,758
ಹಾಯ್, ಡೇವಿಡ್.

431
00:40:27,926 --> 00:40:29,469
ನಿನ್ನ ಧ್ವನಿ ಕೇಳಿ ಸಂತೋಷವಾಯಿತು.

432
00:40:30,846 --> 00:40:34,182
ನೀನು ಸತ್ತಂತೆ ನಾಟಕವಾಡುವಾಗ,
ನಾನೊಂದು ಸಾಮ್ರಾಜ್ಯವನ್ನೇ ಕಟ್ಟಿದೆ.

433
00:40:34,975 --> 00:40:36,393
ನೀನು ನನ್ನನ್ನು ಮುಟ್ಟಲಾರೆ.

434
00:40:36,476 --> 00:40:37,394
ನೋಡೋಣ.

435
00:41:21,855 --> 00:41:22,772
ನಡೆಯುತ್ತಲೇ ಇರು.

436
00:41:22,856 --> 00:41:25,817
-ನಿನಗೆ ಬಾರಿನಲ್ಲೇ ಇರಲು ಹೇಳಿದೆ.
-ನಿನ್ನ ಹೆಂಡತಿಯನ್ನು ಭೇಟಿಯಾಗಬೇಕೆನಿಸಿತು.

437
00:41:26,818 --> 00:41:27,861
ಅಲ್ಲಿದ್ದಾನೆ!

438
00:41:30,697 --> 00:41:32,032
ಅದು ರೆಬೆಕ್ಕಾ.

439
00:41:33,575 --> 00:41:34,743
ಅವನಿಗೆ ಸಹಾಯ ಮಾಡುತ್ತಿದ್ದಾಳೆ.

440
00:41:44,294 --> 00:41:45,795
ಅವಳು ಅಲ್ಲಿರಬಹುದಾ?

441
00:41:45,879 --> 00:41:48,465
ಹಾಂ. ರೈಲು ನಾಲ್ಕು ನಿಮಿಷದಲ್ಲಿ ಹೊರಡುತ್ತದೆ.

442
00:41:48,548 --> 00:41:51,343
ನೀನು ಅವರಿಬ್ಬರನ್ನು ನೋಡಿಕೋ,
ನಾನು ಆಕೆಯನ್ನು ಭೇಟಿಯಾಗುತ್ತೇನೆ.

443
00:41:51,426 --> 00:41:54,971
ಇಲ್ಲ. ನೀನಿಲ್ಲಿಗೆ ಬಂದಿರುವುದರಿಂದ,
ನನ್ನ ಜೊತೆಯೇ ಇರು. ಅವರ ದಾರಿ ತಪ್ಪಿಸೋಣ.

444
00:42:03,438 --> 00:42:06,024
ಆದಷ್ಟು ಬೇಗ ರೈಲಿಗೆ ಹೋಗು.
ನಿನ್ನನ್ನು ಅಲ್ಲಿ ಭೇಟಿಯಾಗುತ್ತೇನೆ.

445
00:42:06,107 --> 00:42:07,025
ಹೋಗು! ಈಗಲೇ!

446
00:44:46,017 --> 00:44:48,978
ಅಯ್ಯೋ! ಬಾ.

447
00:44:49,062 --> 00:44:50,563
ಸರಿ, ಸರಿ, ಸರಿ.

448
00:44:52,649 --> 00:44:53,942
ಸರಿ.

449
00:44:54,025 --> 00:44:56,152
ಸರಿ, ಸುಮ್ಮನೆ ಕುಳಿತುಕೋ.

450
00:44:57,946 --> 00:44:59,614
-ಸರಿ.
-ಹೇ.

451
00:45:00,490 --> 00:45:01,324
ಓ, ದೇವರೇ.

452
00:45:01,408 --> 00:45:03,576
-ನಾನು ನಿನಗೆ ಒಂದು ವಿಷಯ ಹೇಳಬೇಕು.
-ಆಮೇಲೆ ಹೇಳಬಹುದು.

453
00:45:03,660 --> 00:45:06,413
-ಇಲ್ಲ, ಆಗಲ್ಲ.
-ಸುಮ್ಮನೆ ಬಾಯಿ ಮುಚ್ಚುತ್ತೀಯಾ?

454
00:45:06,496 --> 00:45:07,455
ಪರವಾಗಿಲ್ಲ.

455
00:45:15,505 --> 00:45:16,840
ಏನಾಯಿತು?

456
00:45:16,923 --> 00:45:17,966
ಅಪ್ಪ.

457
00:45:18,633 --> 00:45:20,176
ಅಪ್ಪ, ನಿನಗೆ ಗಾಯವಾಗಿದೆ.

458
00:45:30,937 --> 00:45:32,188
ನಿನಗೆ ಮಗಳಿದ್ದಾಳಾ?

459
00:46:32,582 --> 00:46:34,584
ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ

