1
00:00:08,259 --> 00:00:10,886
ಬಟರ್ಫ್ಲೈ ಹಿಂದಿನ ಸಂಚಿಕೆಯಲ್ಲಿ...

2
00:00:10,970 --> 00:00:14,765
ಏನೋ ಸರಿಯಿಲ್ಲ, ಜೂನೋ.
ಇದರ ಬಗ್ಗೆ ಏನೋ ಸರಿ ಅನಿಸು--

3
00:00:14,849 --> 00:00:16,642
ಡೇವಿಡ್, ಇದ್ದೀಯಾ? ಉತ್ತರಿಸು.

4
00:00:16,726 --> 00:00:18,561
ನಾನು ನಿನ್ನನ್ನು ನಂಬಿದರೆ,
ನೀನು ನನಗೆ ಮೋಸ ಬಗೆದೆ.

5
00:00:18,644 --> 00:00:20,479
ನಿನಗೆ ನಾನು ಜೂನೋನ ನಾಶಮಾಡಬೇಕಾ? ಸರಿ.

6
00:00:20,563 --> 00:00:22,732
ಆ ಸೂಳೆ ಮೊದಲು ನನ್ನ ಜೀವನವನ್ನು ಹಾಳುಮಾಡಿದಳು.

7
00:00:22,815 --> 00:00:25,192
ಕಾರ್ಪೋವ್ ಮತ್ತು ಜೆ ಹುನ್
ಒಂದೇ ವಾರದ ಒಳಗೆ ಕೊಲೆಯಾದರು.

8
00:00:25,276 --> 00:00:26,944
ಎಲ್ಲದರಲ್ಲೂ ಜೂನೋಳ ಕೈವಾಡವಿದೆ ಅನಿಸುತ್ತೆ.

9
00:00:27,027 --> 00:00:28,195
ನಿನಗೊಂದು ವಿನಿಮಯ ಕೊಡುವೆ.

10
00:00:28,279 --> 00:00:31,574
ನೀನು ನನಗೆ ಒಲಿವರ್ ಕೊಡು,
ನಾನು ನಿನ್ನನ್ನು, ನಿನ್ನ ಕುಟುಂಬವನ್ನು ಬಿಡುವೆ.

11
00:00:31,657 --> 00:00:33,159
ಅವಳು ನಮ್ಮ ಹಿಂದೆ ಬರುತ್ತಾಳೆ.

12
00:00:33,242 --> 00:00:34,952
ಜೂನೋ ಅಂದರೆ, ಸಾಯಿಸಬೇಕು ಇಲ್ಲಾ ಸಾಯಬೇಕು.

13
00:00:35,035 --> 00:00:38,748
ನಾನು ಒಪ್ಪಂದ ಮಾಡಲು ಪ್ರಯತ್ನಿಸಿದೆ,
ಆದರೆ ಜೂನೋ ಇಲ್ಲ ಅಂದಳು.

14
00:00:38,831 --> 00:00:41,709
ಇಲ್ಲ, ನಾನು ಅದರ ಬಗ್ಗೆ ಯೋಚಿಸಲ್ಲ. ವಿನಿಮಯ ಬೇಡ.

15
00:00:41,792 --> 00:00:44,628
ಜೆ ಹುನ್ ಲೀ ಸಾವಿಗೆ ಕಾರಣ ಜೂನೋ ಲಂಡ್.

16
00:00:44,712 --> 00:00:46,964
ನನಗೆ ಗಟ್ಟಿ ಸಾಕ್ಷಿ ಬೇಕು.

17
00:00:47,047 --> 00:00:49,633
ಕಡಿಮೆಯಾದರೆ, ಜೂನೋ
ನಮ್ಮಿಬ್ಬರನ್ನೂ ನಾಶಮಾಡುತ್ತಾಳೆ.

18
00:00:49,717 --> 00:00:51,010
ನನ್ನನ್ನು ಬಿಟ್ಟು ಕಳಿಸುತ್ತಿದ್ದೀಯಾ?

19
00:00:51,093 --> 00:00:52,428
ಒಲಿವರ್‌ನ ಫೋನನ್ನೂ ಪತ್ತೆಹಚ್ಚಿದೆವು.

20
00:00:52,511 --> 00:00:54,805
-ಡಾಸನ್ ಸುತ್ತ ಮೂರಡಿ ದೂರದಲ್ಲಿತ್ತು.
-ಹಾಯ್, ಅಮ್ಮ.

21
00:00:54,889 --> 00:00:56,432
ಈಗ ಜೂನೋಳ ಸರದಿ.

22
00:01:08,027 --> 00:01:09,236
ನನಗೆ ಗೊತ್ತಿಲ್ಲ, ಅಪ್ಪ.

23
00:01:09,862 --> 00:01:11,781
ಅವನಿಗೆ ತಿಂಡಿ ಮಾಡಿಕೊಡುತ್ತಿದ್ದಾಳೆ.

24
00:01:12,448 --> 00:01:14,909
ಎಷ್ಟು ಹೃದಯಸ್ಪರ್ಶಿಯಾಗಿದೆಯೋ.

25
00:01:14,992 --> 00:01:16,827
ಅವನನ್ನು ಕಳೆದುಕೊಂಡೆ ಅಂದುಕೊಂಡಿದ್ದಳು.

26
00:01:18,370 --> 00:01:22,249
ಈಗಲಾದರೂ ತನ್ನ ಕುಟುಂಬದ ಮೇಲೆ ಗಮನಹರಿಸಿ
ನಮ್ಮೆಲ್ಲರಿಗೂ ಒಳ್ಳೆಯದನ್ನೇ ಮಾಡಲಿ.

27
00:01:22,625 --> 00:01:24,001
ಜೂನೋ ಲಂಡ್,

28
00:01:24,752 --> 00:01:26,337
ವರ್ಷದ ತಾಯಿ.

29
00:01:39,475 --> 00:01:41,852
ನೀನು ಕಳೆದ ಬಾರಿ ಅಡುಗೆ ಮಾಡಿದ್ದೇ ನೆನಪಿಲ್ಲ.

30
00:01:41,936 --> 00:01:43,395
ನಾನು ಸ್ವಲ್ಪ ನಿರತಳಾಗಿದ್ದೆ.

31
00:01:44,271 --> 00:01:46,607
ಇಲ್ಲ, ಅಂದರೆ ಚೆನ್ನಾಗಿದೆ. ಧನ್ಯವಾದ.

32
00:01:52,696 --> 00:01:54,532
ನೀನು ಮನೆಗೆ ಬಂದೆ ಎಂದು ನನಗೆ ಸಮಾಧಾನವಾಯಿತು.

33
00:01:57,284 --> 00:02:00,371
ನಿನ್ನನ್ನು ಅಪಹರಿಸಿದ್ದಾರೆ ಅಂತ ನನಗೆ ಹೇಳಿದಾಗ,
ಆಕಾಶವೇ ತಲೆಯ ಮೇಲೆ ಬಿದ್ದಂತಾಯಿತು.

34
00:02:04,124 --> 00:02:05,793
ಅವನು ನಿನ್ನನ್ನು ಹಿಂಸಿಸಲಿಲ್ಲ ಎಂದೆ.

35
00:02:06,961 --> 00:02:07,920
ಇಲ್ಲ.

36
00:02:08,003 --> 00:02:10,756
ಆದರೆ ಅವನು ನಿನ್ನನ್ನು ವಿಚಾರಿಸಿರಬೇಕು.
ಏನು ಮಾತನಾಡಿದಿರಿ?

37
00:02:13,300 --> 00:02:15,511
ಅವನು ತುಂಬಾ ಪ್ರಶ್ನೆಗಳನ್ನೇನೂ ಕೇಳಲಿಲ್ಲ.

38
00:02:15,594 --> 00:02:19,014
ಅವನ ಜೊತೆ ನೀನು 48 ಗಂಟೆಗಳಿದ್ದೆ,
ಆದರೂ ಏನು ಮಾತನಾಡಿದಿರಿ ಎಂಬುದು ನೆನಪಿಲ್ವಾ?

39
00:02:19,098 --> 00:02:20,432
ಇಲ್ಲ, ಅದು ಕೇವಲ...

40
00:02:22,810 --> 00:02:24,019
ಅದು ಸ್ವಲ್ಪ ಅಸ್ಪಷ್ಟವಾಗಿದೆ.

41
00:02:28,190 --> 00:02:30,776
ನೀನು ಬಿಎಂಡಬ್ಲ್ಯೂ ಗುದ್ದಿದಾಗ ನೆನಪಿದೆಯಾ?

42
00:02:32,611 --> 00:02:35,906
ನೀನು ನಶೆಯಲ್ಲಿಲ್ಲ ಎಂದು ಪ್ರಮಾಣ ಮಾಡಿದೆ,
ನಿನ್ನ ತಂದೆ ನಂಬಿದರು.

43
00:02:36,532 --> 00:02:38,450
ಆದರೆ ನೀನು ಸುಳ್ಳು ಹೇಳಿದೆಯೆಂದು
ನನಗೆ ತಿಳಿದಿತ್ತು.

44
00:02:38,868 --> 00:02:40,286
ನನಗೆ ಹೇಗೆ ಗೊತ್ತಾಯಿತು ಗೊತ್ತಾ?

45
00:02:40,369 --> 00:02:42,079
ನೀನು ಸಿಐಎಗಾಗಿ ಕೆಲಸ ಮಾಡುತ್ತಿದ್ದಕ್ಕಾ?

46
00:02:42,162 --> 00:02:43,664
ಏಕೆಂದರೆ ನಾನು ನಿನ್ನ ತಾಯಿ.

47
00:02:45,791 --> 00:02:46,959
ನನಗೆ ಯಾವಾಗಲೂ ಗೊತ್ತು.

48
00:02:48,669 --> 00:02:51,213
ಕಳೆದ ಕೆಲವು ವಾರಗಳು ಸುಲಭವಾಗಿರಲಿಲ್ಲ
ಎಂದು ನನಗೆ ತಿಳಿದಿದೆ,

49
00:02:51,297 --> 00:02:53,841
ಆದರೆ ನೀನು ಜೆ ಹುನ್ ಬಗ್ಗೆ ನನಗೆ
ಕರೆ ಮಾಡಿದಾಗ...

50
00:02:56,969 --> 00:02:59,889
ನನ್ನ ಮಗನಿಗಾಗಿ ಒಬ್ಬನ ಸಮಾಧಿ ಮಾಡಿದೆ,
ಎಷ್ಟು ತಾಯಂದಿರು ಹೀಗೆ ಹೇಳುತ್ತಾರೆ?

51
00:03:04,268 --> 00:03:06,395
ನೀನು ನನಗೆ ಏನು ಬೇಕಾದರೂ ಹೇಳಬಹುದು.

52
00:03:09,315 --> 00:03:11,567
ನೀನು ಅವನಿಗೆ ಕಾರ್ಪೋವ್ ಬಗ್ಗೆ ಹೇಳಿದೆ, ಅಲ್ಲವೇ?

53
00:03:15,654 --> 00:03:17,031
ನಾನು ಒಬ್ಬನೇ ಇದ್ದೆ.

54
00:03:17,740 --> 00:03:18,741
ಪರವಾಗಿಲ್ಲ.

55
00:03:20,117 --> 00:03:22,119
ನೀನು ನನಗಾಗಿ ಬರುವುದಿಲ್ಲ ಅಂದುಕೊಂಡೆ.

56
00:03:25,289 --> 00:03:26,916
ಅವನಿಗೆ ಇನ್ನೇನು ಹೇಳಿದೆ?

57
00:03:37,843 --> 00:03:39,261
ನೀನೇ ಮಾಡಿದ್ದು ಅಂತ ಹೇಳಿದೆ.

58
00:03:41,430 --> 00:03:44,141
ಒಂಬತ್ತು ವರ್ಷಗಳ ಹಿಂದೆ ಅವನಿಗೆ
ದ್ರೋಹ ಮಾಡಿದ್ದು ನೀನೇ ಅಂತ ಹೇಳಿದೆ.

59
00:03:49,355 --> 00:03:50,564
ಕ್ಷಮಿಸು.

60
00:03:54,485 --> 00:03:56,528
ನಾನು ಸಾಯಬಹುದು ಅಂದುಕೊಂಡೆ.

61
00:04:00,324 --> 00:04:02,034
ನನ್ನನ್ನು ಕ್ಷಮಿಸಮ್ಮ.

62
00:04:05,913 --> 00:04:07,122
ಪರವಾಗಿಲ್ಲ.

63
00:04:13,462 --> 00:04:14,964
ನನಗೆ ಹೇಳಿದ್ದಕ್ಕಾಗಿ ಧನ್ಯವಾದ.

64
00:04:17,758 --> 00:04:19,134
ಫ್ರೆಂಚ್ ಟೋಸ್ಟ್ ತಿನ್ನು.

65
00:04:29,812 --> 00:04:32,064
ಯಾರನ್ನಾದರೂ ಛಾವಣಿಯಿಂದ ಎಸೆದಿದ್ದೀಯಾ?

66
00:04:32,773 --> 00:04:33,816
ಏನು?

67
00:04:35,109 --> 00:04:36,402
ಅಂದರೆ, ಕ್ಯಾಡಿಸ್‌ಗಾಗಿ?

68
00:04:37,403 --> 00:04:38,320
ಇಲ್ಲ.

69
00:04:41,532 --> 00:04:43,534
ಅದು ಹೇಗಿರುತ್ತೋ ಏನೋ.

70
00:04:44,743 --> 00:04:46,787
ಅದರ ಬಗ್ಗೆ ಯಾಕೆ ಯೋಚಿಸುವೆ?

71
00:04:47,371 --> 00:04:48,831
ನಾನು ಮಾಡುತ್ತೇನೆ ಅನ್ನಲಿಲ್ಲ.

72
00:04:59,049 --> 00:05:00,050
ಅವರು ಹೊರಡುತ್ತಿದ್ದಾರೆ.

73
00:05:00,759 --> 00:05:01,885
ಕೊನೆಗೂ.

74
00:05:09,309 --> 00:05:11,061
ದೇವರೇ, ನೋಡು ಅವಳನ್ನು.

75
00:05:12,479 --> 00:05:14,273
ಆಗಲೇ ಅವಳನ್ನು ಗಾಬರಿಗೊಳಿಸಿದೆವು.

76
00:05:16,483 --> 00:05:19,403
ಈಗ ಒಲಿವರ್‌ಗೆ ಅವಳ ಮೇಲೆ
ಅನುಮಾನ ಮೂಡಿಸಬೇಕು ಅಷ್ಟೇ.

77
00:05:36,003 --> 00:05:37,254
ಇದೇ ಸಮಯ.

78
00:05:43,093 --> 00:05:44,511
ಕೆಳಗೇ ಇರು.

79
00:06:24,384 --> 00:06:25,219
ಸಿಕ್ಕಿತು.

80
00:06:30,516 --> 00:06:31,517
ಯಾರೋ ಬರುತ್ತಿದ್ದಾರೆ.

81
00:06:43,237 --> 00:06:46,615
ನಾವು ಕಟ್ಟಡ ಪ್ರವೇಶಿಸಿದ
ದೃಶ್ಯಾವಳಿಯನ್ನು ಅಳಿಸಿಹಾಕಬೇಕು.

82
00:06:46,698 --> 00:06:48,992
ಆರು ನಿಮಿಷದಷ್ಟು ಸಾಕು.

83
00:06:49,576 --> 00:06:50,786
ಟ್ರಾನ್ಸ್‌ಮಿಟರ್ ಇದೆಯಾ?

84
00:06:51,411 --> 00:06:53,664
-ನಮ್ಮನ್ನು ಒಳಸೇರಿಸುತ್ತಿದ್ದೇನೆ.
-ಸರಿ.

85
00:06:58,627 --> 00:07:00,838
ಹಾಯ್, ಒಲಿವರ್. ಸ್ವಲ್ಪ ವಿಶ್ರಾಂತಿ ಪಡೆದೆಯಾ?

86
00:07:01,421 --> 00:07:04,591
-ವಾಪಸ್ ಹೋಗಿ ಪಡೆಯುವೆ.
-ಕುಳಿತುಕೋ.

87
00:07:05,759 --> 00:07:07,136
ಏನು ನಡೆಯುತ್ತಿದೆ?

88
00:07:07,219 --> 00:07:09,346
ಹಾಲಿಸ್ ನಿನ್ನ
ಕ್ರಮನಂತರದ ವರದಿಯನ್ನು ಮಾಡಲಿದ್ದಾರೆ.

89
00:07:09,429 --> 00:07:11,348
-ಏನು?
-ನೀನು ಪೂರ್ತಿ ಎರಡು ದಿನಗಳನ್ನು ಡೇವಿಡ್

90
00:07:11,431 --> 00:07:13,684
ಮತ್ತು ರೆಬೆಕ್ಕಾ ಜೊತೆ ಕಳೆದೆ.
ನಿನ್ನ ವರದಿಯನ್ನು ನಾವು ಪಡೆಯಬೇಕು.

91
00:07:14,518 --> 00:07:15,352
ಸರಿ.

92
00:07:16,895 --> 00:07:21,066
-ಆದರೆ ನನಗೆ ಗೊತ್ತಿರುವುದೆಲ್ಲಾ ನಿನಗೆ ಹೇಳಿದೆ.
-ನಾನು ಮಾಡಲಾಗದು, ಅದು ವೈಯಕ್ತಿಕ.

93
00:07:21,150 --> 00:07:23,402
ಅವನು ಹೆಚ್ಚಿನ ಹಾನಿ ಮಾಡುವುದರೊಳಗೆ
ನಾವು ಡೇವಿಡ್‌ನ ಹುಡುಕಬೇಕು

94
00:07:23,485 --> 00:07:24,987
ಮತ್ತು ನಮಗೆ ಒಳನೋಟ ಬೇಕು.

95
00:07:25,070 --> 00:07:28,031
ಅವನು ಬಳಸುತ್ತಿದ್ದ ಆಯುಧಗಳು,
ಅವನಿಗಿದ್ದ ಅನುಕೂಲಗಳು,

96
00:07:28,115 --> 00:07:31,034
ಅವನು ಮುಂದೆ ಎಲ್ಲಿಗೆ ಹೋಗಬಹುದು, ಅಂಥ ವಿಚಾರಗಳು.

97
00:07:31,118 --> 00:07:32,786
-ನೀನು ನಿಭಾಯಿಸು.
-ಸರಿ.

98
00:07:42,087 --> 00:07:43,046
ಏನಾಗುತ್ತಿದೆ?

99
00:07:43,797 --> 00:07:44,798
ದೃಶ್ಯಾವಳಿ ಸಿಕ್ಕಿತು.

100
00:07:45,299 --> 00:07:46,300
ಕೆಲಸ ಶುರು ಮಾಡೋಣ.

101
00:07:56,059 --> 00:07:56,894
ಹಾಂ.

102
00:07:58,228 --> 00:07:59,605
ಏಳನೇ ಮಹಡಿ ಖಾಲಿ ಇದೆ.

103
00:08:03,066 --> 00:08:04,526
-ಸಿದ್ಧವೇ?
-ಹೌದು.

104
00:08:38,685 --> 00:08:41,563
ಭದ್ರತೆಯವರ ಮೇಲೆ ಕಣ್ಣಿಡು.
ನಾನು ಪತ್ತೆದಾರಿ ಸಾಧನವನ್ನು ಇರಿಸುತ್ತೇನೆ.

105
00:09:20,310 --> 00:09:21,853
ನಾನು ಈಗಾಗಲೇ ನಿಮಗೆ ಹೇಳಿದೆ.

106
00:09:21,937 --> 00:09:24,439
ಡೇವಿಡ್ ಮತ್ತು ರೆಬೆಕ್ಕಾ ಎಲ್ಲಿಗೆ
ಹೋಗುತ್ತಿದ್ದಾರೆಂದು ಹೇಳಲಿಲ್ಲ.

107
00:09:24,523 --> 00:09:26,024
ಅವರು ಎಂದಿಗೂ ಹಾಗೆ ಮಾಡುವುದಿಲ್ಲ.

108
00:09:26,775 --> 00:09:30,320
ನನಗೆ ಅದೇ ಪ್ರಶ್ನೆಗಳನ್ನು ಕೇಳುತ್ತಿದ್ದೀರಿ.
ನಾನು ಸುಳ್ಳು ಹೇಳುತ್ತಿಲ್ಲ, ಹಾಲಿಸ್.

109
00:09:33,365 --> 00:09:34,283
ಸರಿ.

110
00:09:35,117 --> 00:09:36,159
ನಾವು ಮುಂದುವರಿಯಬಹುದು.

111
00:09:37,953 --> 00:09:39,830
ಸೆನೆಟರ್ ಡಾಸನ್ ಅವರನ್ನು ಯಾವಾಗ ಭೇಟಿ ಮಾಡಿದೆ?

112
00:09:40,914 --> 00:09:42,958
ಏನು? ನಾನು ಅವರನ್ನು ಏಕೆ ಭೇಟಿಯಾಗಲಿ?

113
00:09:44,793 --> 00:09:47,170
ಇದನ್ನು ಯಾರು ಹೇಳಿದ್ದು? ನನ್ನ ತಾಯಿ ಹೇಳಿದ್ದಾ?

114
00:09:47,796 --> 00:09:50,632
-ಅವರನ್ನು ಭೇಟಿಯಾದೆಯಾ ಇಲ್ವಾ?
-ಖಂಡಿತ ಇಲ್ಲ.

115
00:09:50,716 --> 00:09:52,467
ಇದು ಏನು ದರಿದ್ರ?

116
00:09:52,926 --> 00:09:55,554
-ಇನ್ನು ಸಾಕು. ಇದು ಹಾಸ್ಯಾಸ್ಪದವಾಗಿದೆ.
-ನಿಜ.

117
00:09:56,179 --> 00:09:57,889
ನೀನು ತುಂಬಾ ಅನುಭವಿಸಿರುವೆ.

118
00:09:57,973 --> 00:09:59,308
ನೀನು ಮನೆಗೆ ಹೋಗು.

119
00:10:00,058 --> 00:10:01,268
ಆದರೆ ನಾನು ಇಲ್ಲಿಗೆ ಈಗಷ್ಟೇ ಬಂದೆ.

120
00:10:01,351 --> 00:10:04,187
ನಿನಗೆ ಉಳಿದ ದಿನ ರಜೆ ತಗೊಳ್ಳೋಕೆ ಜೂನೋ ಹೇಳಿದರು.

121
00:10:27,252 --> 00:10:28,837
ಅಲ್ಲಿ ಹೇಗೆ ನಡೆಯುತ್ತಿದೆ?

122
00:10:28,920 --> 00:10:30,172
ಬಹುತೇಕ ಮುಗಿದಿದೆ.

123
00:10:31,548 --> 00:10:33,175
ತುಂಬಾ ಚೆನ್ನಾಗಿ ಮರೆಮಾಡಬೇಡ.

124
00:10:33,258 --> 00:10:34,843
ಒಲಿವರ್‌ಗೆ ಅದು ಸಿಗುವಂತಿರಬೇಕು.

125
00:10:39,222 --> 00:10:41,266
ಒಲಿವರ್‌

126
00:11:17,427 --> 00:11:19,513
-ಒಲಿವರ್ ಮುಂದೆ ಇದ್ದಾನೆ.
-ನನಗೆ ಎಷ್ಟು ಸಮಯ ಇದೆ?

127
00:11:19,596 --> 00:11:21,973
ನಲವತ್ತು ಕ್ಷಣಗಳು. ಬಹುಶಃ ಕಡಿಮೆ.

128
00:11:37,322 --> 00:11:38,448
ಅವನು ಲಿಫ್ಟ್ ಇಳಿದಿದ್ದಾನೆ.

129
00:11:43,537 --> 00:11:45,997
ಅವನು ಹಜಾರದಲ್ಲಿದ್ದಾನೆ. ಅಪ್ಪ, ನಾವು ಹೋಗಬೇಕು.

130
00:13:09,206 --> 00:13:10,123
ಹಲೋ?

131
00:13:11,166 --> 00:13:13,502
ಸುರಕ್ಷಿತವಾಗಿ ಮನೆ ತಲುಪಿದೆಯಾ
ಅಂತ ಕೇಳಲು ಕರೆ ಮಾಡಿದೆ.

132
00:13:16,755 --> 00:13:17,589
ತಲುಪಿದೆ.

133
00:13:18,381 --> 00:13:19,466
ಧನ್ಯವಾದ.

134
00:13:22,093 --> 00:13:23,929
ಹಾಲಿಸ್ ಜೊತೆ ಕುಳಿತಿದ್ದಕ್ಕಾಗಿ ಧನ್ಯವಾದ.

135
00:13:24,012 --> 00:13:25,430
ಅದು ಸುಲಭವಾಗಿರಲಿಲ್ಲ ಎಂದು ಗೊತ್ತು.

136
00:13:26,431 --> 00:13:27,766
ಖಂಡಿತ.

137
00:13:28,391 --> 00:13:30,101
ಯಾವ ಸಹಾಯ ಬೇಕೆಂದರೂ ಸರಿ.

138
00:13:33,438 --> 00:13:36,066
ಸೆನೆಟರ್ ಡಾಸನ್ ಅವರನ್ನು ಭೇಟಿಯಾದೆನಾ
ಅಂತ ಕೇಳಿದರು.

139
00:13:37,484 --> 00:13:38,818
ಕೇಳಿದ, ಅಲ್ವಾ?

140
00:13:42,822 --> 00:13:46,618
ಡಾಸನ್ ನಮ್ಮ ಕಚೇರಿಯ ಸುತ್ತ ಮೂಸು ನೋಡುತ್ತಿರುವಾಗ
ನಾವು ಯಾವುದರಲ್ಲೂ ಯಾಮಾರಬಾರದು.

141
00:13:49,412 --> 00:13:52,040
ಒಲಿವರ್, ನಾನು ಇದನ್ನು ಮೊದಲೇ ಹೇಳಲಿಲ್ಲ,
ಆದರೆ ಹೇಳಬೇಕಿತ್ತು.

142
00:13:53,792 --> 00:13:54,751
ನಿನ್ನನ್ನು ಪ್ರೀತಿಸುವೆ.

143
00:13:55,210 --> 00:13:56,044
ಹಾಂ.

144
00:13:57,420 --> 00:13:58,338
ನಾನು ಕೂಡ.

145
00:15:03,570 --> 00:15:05,530
ಬಟರ್ಫ್ಲೈ

146
00:15:49,574 --> 00:15:51,034
ನೀನಿಲ್ಲೇನು ಮಾಡುತ್ತಿರುವೆ?

147
00:15:51,117 --> 00:15:53,536
-ನಿಮ್ಮ ಜೊತೆ ಸಿಕ್ಕಿ ಮಾತಾಡಬೇಕಿತ್ತು.
-ಯಾಕೆ?

148
00:15:54,287 --> 00:15:56,998
ನೀವೊಂದು ಆಂತರಿಕ ರಹಸ್ಯ ಪತ್ರ ಬರೆಯಬೇಕು,

149
00:15:57,082 --> 00:15:59,626
ಅದರಲ್ಲಿ ಜೂನೋ ಲಂಡ್ ವಿರುದ್ಧ
ಕಾರ್ಪೋವ್ ತನಿಖೆಯ ಬಗ್ಗೆ

150
00:15:59,709 --> 00:16:02,003
ಉನ್ನತ ಮಟ್ಟದ ವಿಶೇಷ ಸಾಕ್ಷಿ ಇದೆ
ಎಂದು ತಿಳಿಸಬೇಕು.

151
00:16:02,629 --> 00:16:05,423
ಆಮೇಲೆ ಆ ಪತ್ರವನ್ನು
ನಿಮ್ಮ ಆಂತರಿಕ ವಲಯದವರಿಗೆ ವಿತರಿಸಿ.

152
00:16:05,507 --> 00:16:07,300
ನಮ್ಮಲ್ಲೊಬ್ಬ ಒಳಬೇಹುಗಾರರಿದ್ದಾರಾ?

153
00:16:07,384 --> 00:16:08,426
ಹಾಂ.

154
00:16:10,053 --> 00:16:11,262
ಕ್ಯಾಡಿಸ್‌ಗಾಗಿ ಕೆಲಸ ಮಾಡುವವರಾ?

155
00:16:12,847 --> 00:16:14,057
ಜೂನೋ ಅಷ್ಟು ಧೈರ್ಯ ಮಾಡಲ್ಲ.

156
00:16:14,140 --> 00:16:16,601
ಜೂನೋ ಬಗ್ಗೆ ನೀವು ಅಷ್ಟೆಲ್ಲಾ ತಿಳಿದುಕೊಂಡಿಲ್ಲ.

157
00:16:16,685 --> 00:16:17,727
ನೀನು ತಿಳಿದುಕೊಂಡಿದ್ದೀಯಾ?

158
00:16:17,811 --> 00:16:21,523
ನನ್ನ ಮಗಳು ತಿಳಿದಿದ್ದಾಳೆ. ಆಕೆಯೊಂದಿಗೆ
ಕಳೆದ ನಾಲ್ಕು ವರ್ಷಗಳು ಕೆಲಸ ಮಾಡಿದ್ದಾಳೆ.

159
00:16:21,606 --> 00:16:24,609
ಜೂನೋ ಯಾವಾಗಲೂ ಯಾರನ್ನಾದರೂ
ಒಳಗೆ ಇರಿಸಿರುತ್ತಾಳೆ ಅಂದಳು.

160
00:16:25,110 --> 00:16:27,195
ನಿನ್ನ ಮಗಳು, ಜೂನೋಳ ಹಂತಕಿ.

161
00:16:28,822 --> 00:16:30,824
ನನ್ನ ತಂಡ ಅವಳ ಬಗ್ಗೆ ನೋಡಿದೆ.

162
00:16:30,907 --> 00:16:34,911
ಕ್ಯಾಡಿಸ್‌ಗಾಗಿ ನಡೆದ ಒಂದು ಡಜನ್‌ಗೂ ಹೆಚ್ಚು
ಕೊಲೆಗಳಿಗೆ ಮತ್ತು ಅವಳಿಗೆ ಸಂಬಂಧ ಕಲ್ಪಿಸಬಹುದು.

163
00:16:35,829 --> 00:16:37,747
ರೆಬೆಕ್ಕಾ ವಿಷಯಕ್ಕೆ ಹೋಗಬಾರದು
ಅಂತ ನಿಮಗೆ ಹೇಳಿದೆ.

164
00:16:57,058 --> 00:16:58,768
ಆಂತರಿಕ ವರ್ಗೀಕರಿಸಲಾದ
ಪತ್ರ

165
00:16:59,894 --> 00:17:01,563
ವರ್ಗೀಕರಿಸಲಾಗಿದೆ

166
00:17:46,983 --> 00:17:48,818
-ಏನಾಯಿತು?
-ಒಂದು ಸಮಸ್ಯೆ ಇದೆ.

167
00:17:49,569 --> 00:17:51,488
ಅದರಲ್ಲೇನಿತ್ತು ಅಂತ ನಿಖರವಾಗಿ ಹೇಳು.

168
00:17:51,571 --> 00:17:54,324
ಡಾಸನ್ ಒಂದು ಉಲ್ಲೇಖ ಮಾಡಿದ್ದಾರೆ,
"ಉನ್ನತ ಮಟ್ಟದ, ವಿಶೇಷ ಸಾಕ್ಷಿ,

169
00:17:54,407 --> 00:17:56,659
ಜೂನೋ ಲಂಡ್ ಮತ್ತು ಕ್ಯಾಡಿಸ್ ವಿರುದ್ಧ."

170
00:17:58,828 --> 00:18:00,079
ಛೆ.

171
00:18:20,892 --> 00:18:22,268
ಅದು ಯಾರಿರಬಹುದು?

172
00:18:22,352 --> 00:18:24,979
ಅಮಾಯಕನಂತೆ ನಟಿಸಬೇಡ,
ಯಾರಂತ ನಿನಗೆ ಚೆನ್ನಾಗಿ ಗೊತ್ತಿದೆ.

173
00:18:25,063 --> 00:18:27,649
ಡೇವಿಡ್ ಅವನನ್ನು ಸುಮ್ಮನೆ ಯಾಕೆ ಬಿಟ್ಟ
ಅಂತ ನನಗೆ ಅರ್ಥವಾಗಿರಲಿಲ್ಲ.

174
00:18:28,525 --> 00:18:30,026
ನಾವೇನು ಮಾಡೋಣ?

175
00:18:30,777 --> 00:18:33,279
ನನಗೆ ಗೊತ್ತಿಲ್ಲ, ಹಾಲಿಸ್. ನನಗೆ ಗೊತ್ತಿಲ್ಲ.

176
00:18:33,363 --> 00:18:36,741
ಅವನನ್ನು ಈಗಲೇ ಕರೆಸೋಣ.
ಅವನು ಹೆಚ್ಚಿನ ಹಾನಿಯನ್ನು ಮಾಡುವ ಮುನ್ನ.

177
00:18:36,825 --> 00:18:38,576
ಹೇಳುವುದು ನಿನಗೆ ಸುಲಭ, ಅವನು ನಿನ್ನ ಮಗನಲ್ಲ.

178
00:18:38,660 --> 00:18:39,994
ಇದು ಕಷ್ಟ ಎಂದು ನನಗೆ ತಿಳಿದಿದೆ.

179
00:18:40,078 --> 00:18:42,914
-ಬೇಡ.
-ನೀವು ಹೇಳಿದ್ದು ಸರಿ. ಇದು ನಿಮ್ಮ ನಿರ್ಧಾರ.

180
00:18:45,041 --> 00:18:46,751
ಒಲಿವರ್‌ನ ಭದ್ರತಾ ತಂಡದಲ್ಲಿ ಯಾರಿದ್ದಾರೆ?

181
00:18:46,835 --> 00:18:48,878
ಈಗ, ಹೋರಿ ಮತ್ತು ಸೊಂಗ್.

182
00:18:48,962 --> 00:18:52,382
ಅವರನ್ನು ಅಲ್ಲೇ ಇರಿಸು.
ಒಲಿವರ್ ಮೇಲೆ ಅವರು ಕಣ್ಣಿಟ್ಟಿರಲಿ.

183
00:18:52,465 --> 00:18:56,010
ಅವನು ಯಾರ್ಯಾರ ಜೊತೆ ಮಾತಾಡ್ತಾನೆ, ಎಲ್ಲಿಗೆ
ಹೋಗ್ತಾನೆ ಎಂಬುದೆಲ್ಲವೂ ನನಗೆ ತಿಳಿಯಬೇಕು.

184
00:18:56,094 --> 00:18:57,804
ನಾನು ಈ ಬಗ್ಗೆ ತಪ್ಪು ಮಾಡಲ್ಲ.

185
00:18:59,556 --> 00:19:00,598
ಅರ್ಥವಾಯಿತು.

186
00:19:09,649 --> 00:19:10,859
ಸೆನೆಟರ್.

187
00:19:10,942 --> 00:19:12,819
ನೀನು ಹೇಳಿದ್ದು ಸರಿ. ಒಳಬೇಹುಗಾರರಿದ್ದಾರೆ.

188
00:19:13,319 --> 00:19:16,614
ವಿಕ್ಕಿ ಲಿನ್ವುಡ್,
ನನ್ನ ಭದ್ರತಾ ತಂಡದ ಮುಖ್ಯಸ್ಥೆ.

189
00:19:17,490 --> 00:19:20,118
ಈ ಕ್ಷಣ, ಆಗಿರುವ ಹಾನಿಯ
ಲೆಕ್ಕಾಚಾರ ಮಾಡುತ್ತಿದ್ದೇವೆ.

190
00:19:20,201 --> 00:19:22,745
ಜೂನೋ ವಿರುದ್ಧ ನನಗೆ ಸಾಕ್ಷಿ ಕೊಡುವುದು
ಎಲ್ಲಿಯವರೆಗೂ ಬಂತು?

191
00:19:23,663 --> 00:19:25,665
ಇದು ಸಾಕ್ಷಿ ಅಲ್ಲ, ಸಾಕ್ಷಿದಾರರು.

192
00:19:26,374 --> 00:19:28,293
ಆತನನ್ನು ನಿಮ್ಮ ಬಳಿ ಬೇಗ ಕಳಿಸುವೆ.

193
00:19:30,795 --> 00:19:32,005
ಇದು ಸಾಕಾಗುವುದಿಲ್ಲ.

194
00:19:32,547 --> 00:19:33,673
ಏನು ಸಾಕಾಗುವುದಿಲ್ಲ?

195
00:19:33,756 --> 00:19:36,926
ಜೂನೋ ಅವನ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದಾಳೆ
ಅಂತ ಒಲಿವರ್‌ಗೆ ಒಪ್ಪಿಸುವುದು.

196
00:19:37,010 --> 00:19:38,970
ಅವನು ತಿರುಗಿಬೀಳಲು ಇಷ್ಟು ಸಾಕಾಗಲ್ಲ.

197
00:19:39,596 --> 00:19:41,264
ಏನು ಸಲಹೆ ನೀಡುತ್ತೀಯ?

198
00:19:42,557 --> 00:19:44,058
ಒಲಿವರ್ ಒಬ್ಬ ಹೇಡಿ.

199
00:19:44,517 --> 00:19:46,477
ಅದಕ್ಕಾಗಿಯೇ ಅವನು ನನ್ನಂತೆ ಕ್ಷೇತ್ರದಲ್ಲಿ ಇಲ್ಲ.

200
00:19:46,561 --> 00:19:47,687
ಅವನಿಗೆ ಸಾವಿನ ಭಯ.

201
00:19:48,646 --> 00:19:52,567
ಜೂನೋ ಅವನನ್ನು ಕೊಲ್ಲಲು ನೋಡುತ್ತಿದ್ದಾಳೆಂದು
ಬಿಂಬಿಸಿದರೆ, ಸಹಾಯಕ್ಕೆಂದು ಡಾಸನ್ ಬಳಿ ಓಡುವನು.

202
00:19:52,650 --> 00:19:55,570
ಅವನ ತಾಯಿಯೇ ಅವನನ್ನು ಕೊಲ್ಲಲು
ನೋಡಿದಳೆಂಬಂತೆ ಅವನನ್ನು ನಂಬಿಸಬೇಕಾ?

203
00:19:56,613 --> 00:19:58,990
ಅವನು ತಿರುಗಿಬೀಳಬೇಕೆಂದರೆ ಹೀಗೇ ಮಾಡಬೇಕು.

204
00:20:43,451 --> 00:20:44,702
ಒಲಿವರ್ ಬಗ್ಗೆ ಏನಾದರೂ?

205
00:20:44,786 --> 00:20:48,164
ಇನ್ನೂ ಇಲ್ಲ. ಆದರೂ ಅವನ ಭದ್ರತಾ
ತಂಡದವರು ಕಾರ್ಯದಲ್ಲಿ ತೊಡಗಿದ್ದಾರೆ,

206
00:20:48,247 --> 00:20:50,375
ಏನಾದರೂ ತಿಳಿದು ಬಂದರೆ ನಮಗೆ ವರದಿ ಮಾಡುತ್ತಾರೆ.

207
00:20:50,458 --> 00:20:52,627
-ಮತ್ತು ಡೇವಿಡ್?
-ಇದು ಈಗಷ್ಟೇ ಬಂದಿತು.

208
00:20:58,883 --> 00:21:02,261
ಸೊಂಗ್ಸುನ ಒಂದು ನಿರ್ಮಾಣ ವಸ್ತುಗಳ ಅಂಗಡಿಯ
ಹೊರಗಿರುವ ಕ್ಯಾಮೆರಾದಲ್ಲಿ ಸಿಕ್ಕಿದ್ದು.

209
00:21:05,098 --> 00:21:06,391
ಅವನು ಸೋಲ್‌ನಲ್ಲಿದ್ದಾನೆಯೇ?

210
00:21:08,017 --> 00:21:09,519
ಅವನ ಹಿಂದೆ ಗನ್‌ನ ಕಳುಹಿಸಿ.

211
00:21:11,729 --> 00:21:14,065
ನನ್ನ ಮಗನಿಗೆ ಏನು ಮಾಡಿದ
ಅನ್ನೋದು ನನಗೆ ಗೊತ್ತಾಗಬೇಕು.

212
00:21:38,631 --> 00:21:41,342
ವಿನಾಶಕಿ ಜೂನೋ

213
00:21:41,426 --> 00:21:42,760
ಏನು?

214
00:21:42,844 --> 00:21:43,761
ನಿನ್ನನ್ನು ಎಬ್ಬಿಸಿದೆನಾ?

215
00:21:43,845 --> 00:21:45,930
ಬೆಳಿಗ್ಗೆ 6:00 ಗಂಟೆ, ಜೂನೋ, ಏನು ಬೇಕು ನಿನಗೆ?

216
00:21:46,014 --> 00:21:48,099
ಒಲಿವರ್ ಬಗ್ಗೆ. ಅವನ ಜೊತೆ ಮಾತನಾಡಿದ್ದೆಯಾ?

217
00:21:51,728 --> 00:21:53,062
ಎರಡು ವಾರಗಳ ಹಿಂದೆ.

218
00:21:53,146 --> 00:21:55,106
ಏಕೆ? ಅವನು ಏನಾದರೂ ತೊಂದರೆಯಲ್ಲಿದ್ದಾನೆಯೇ?

219
00:21:55,189 --> 00:21:56,524
ಯಾಕೆ ಹಾಗೆ ಕೇಳ್ತೀಯಾ?

220
00:21:56,607 --> 00:21:58,067
ನೀನೇನು ಮಾಡ್ತೀಯೋ ನನಗೆ ಗೊತ್ತು, ಜೂನೋ.

221
00:21:58,151 --> 00:22:01,154
ನೀನು ಕೆಲಸ ಮಾಡುವುದು ಹೂಡಿಕೆಯ ಬ್ಯಾಂಕಿನಲ್ಲಿ.
ಕಿರೀಟ ತೊಟ್ಟ ಹಾಗಾಡಬೇಡ.

222
00:22:01,237 --> 00:22:03,573
ಸದ್ಯ, ನನ್ನ ಕೆಲಸದಲ್ಲಿ ಯಾರೂ ಸಾಯೋದಂತೂ ಇಲ್ಲ.

223
00:22:04,282 --> 00:22:05,992
ಒಲಿಗೆ ಏನೂ ಆಗಿಲ್ಲ ಅನ್ನೋದು ನಮ್ಮ ಪುಣ್ಯ.

224
00:22:07,410 --> 00:22:09,162
-ಏನಾದ್ರೂ ಆಯ್ತಾ?
-ಇಲ್ಲ.

225
00:22:11,622 --> 00:22:13,583
ಅವನು ತುಂಬಾ ಒತ್ತಡದಲ್ಲಿದ್ದಾನಷ್ಟೇ.

226
00:22:13,666 --> 00:22:17,336
ಅವನ ತಲೆಯೊಳಗೆ ಏನು ನಡೆಯುತ್ತಿದೆಯೋ ಗೊತ್ತಿಲ್ಲ.
ಮಂಕಾಗಿದ್ದು ಅನಿರೀಕ್ಷಿತವಾಗಿ ವರ್ತಿಸುತ್ತಾನೆ.

227
00:22:19,380 --> 00:22:21,382
ಅವನು ಹಾಗಿದ್ದಾಗ ನೀನೇನು ಮಾಡುವೆ?

228
00:22:21,466 --> 00:22:22,925
ಅಂದ್ರೆ, ನಮ್ಮ ಸಂಬಂಧ...

229
00:22:24,385 --> 00:22:25,595
ಭಿನ್ನ.

230
00:22:25,678 --> 00:22:28,890
ನಿಮ್ಮ ನಡುವೆಯೇ ಅದು ಸ್ವಲ್ಪ ಕ್ಲಿಷ್ಟಕರ.

231
00:22:28,973 --> 00:22:30,475
ಹೇಗೆ?

232
00:22:30,558 --> 00:22:32,185
ನೋಡಿದರೆ ಗೊತ್ತಾಗಲ್ವಾ?

233
00:22:32,268 --> 00:22:33,728
ಅವನಿಗೆ ನಿನ್ನ ಮನ್ನಣೆ ಬೇಕು.

234
00:22:34,312 --> 00:22:35,855
ಅದಕ್ಕಾಗಿ ಹಂಬಲಿಸುತ್ತಾನೆ.

235
00:22:35,938 --> 00:22:38,066
ಅವನ ಮನಸ್ಸಿನಲ್ಲಿ, ನೀನು ಅವನನ್ನು

236
00:22:38,149 --> 00:22:39,817
ಪ್ರೀತಿಸಲ್ವೇನೋ ಎಂಬ ಭಯ...

237
00:22:41,027 --> 00:22:42,487
ಅವನಿಗೆ ಸಾಮರ್ಥ್ಯವಿಲ್ಲದಿದ್ದರೆ...

238
00:22:42,570 --> 00:22:45,823
ಅಥವಾ ಆತ ಸಾಕಷ್ಟು ಬಲಶಾಲಿ,
ನಿರ್ದಯಿ ಅಲ್ಲದಿದ್ದರೆ ಅಂತ.

239
00:22:47,158 --> 00:22:49,535
ನನ್ನಿಂದ ಅವನಿಗೆ ಹಾಗನಿಸುತ್ತಾ?

240
00:22:49,619 --> 00:22:53,081
ಅವನ ಇಡೀ ಜೀವನ ಹಾಗೆನಿಸುವ ಹಾಗೆಯೇ
ನೀನು ಮಾಡಿದ್ದೀಯ.

241
00:23:02,757 --> 00:23:05,384
ಏನಿದು? ಸ್ನೇಹಿತರ ಅಪಾರ್ಟ್ಮೆಂಟಾ?

242
00:23:06,052 --> 00:23:07,887
ನನ್ನ ಹಳೆಯ ಸೋಜು ಕ್ಲೈಂಟ್.

243
00:23:07,970 --> 00:23:11,057
ಅವನು ದೇಶದಲ್ಲಿಲ್ಲ,
ಹಾಗಾಗಿ ನಾವಿಲ್ಲಿದ್ದರೆ ಅವನಿಗೆ ತೊಂದರೆ ಇಲ್ಲ.

244
00:23:11,140 --> 00:23:13,226
ಹಾಗಂತ ನಿನಗೆ ಅದರ ಕೋಡ್ ತಿಳಿಸಿದನಾ?

245
00:23:14,435 --> 00:23:15,645
ಹಾಗೇ ಒಂಥರಾ.

246
00:23:35,164 --> 00:23:36,749
ಒಳಗೆ ಬಾ. ಬಾಗಿಲು ಮುಚ್ಚು.

247
00:23:57,854 --> 00:23:58,938
ಮತ್ತೆ...

248
00:23:59,939 --> 00:24:01,440
ಈಗೇನು ಮಾಡುವೆ?

249
00:24:03,568 --> 00:24:04,527
ಅಡುಗೆಯ ಪಾಠ.

250
00:24:16,914 --> 00:24:19,876
ನೀನು ತಪ್ಪಿಸಿಕೊಂಡ ಶಾಲೆಯ ಯೋಜನೆಯ
ಕೆಲಸಗಳ ಬದಲು ಇದನ್ನು ಮಾಡುತ್ತಿದ್ದೀಯಾ?

251
00:24:19,959 --> 00:24:22,295
ಖಂಡಿತ. ಆಮೇಲೆ
ರಸಪ್ರಶ್ನೆಯ ಕಾರ್ಯಕ್ರಮವೂ ಇರುತ್ತೆ.

252
00:24:31,679 --> 00:24:32,680
ಹೇ.

253
00:24:34,473 --> 00:24:36,434
ಜೂನೋ ಒಲಿವರ್‌ಗೆ ತೊಂದರೆ ಮಾಡಬಹುದು ಅನಿಸುತ್ತಾ?

254
00:24:36,517 --> 00:24:37,602
ಗೊತ್ತಿಲ್ಲ.

255
00:24:40,730 --> 00:24:43,649
ಅವಳು ಯಾವುದೇ ಮಿತಿಗಳನ್ನು ಹೇರಲ್ಲ,
ಏನು ಮಾಡಲೂ ಹೇಸಲ್ಲ.

256
00:24:43,733 --> 00:24:45,985
ನಿಜ ಹೇಳಬೇಕೆಂದರೆ, ಅವಳ ಬಗ್ಗೆ ನನಗೆ ಅದೇ ಇಷ್ಟ.

257
00:24:47,028 --> 00:24:48,905
ಅವಳು ಇಷ್ಟು ಮುಂದೆ ಬಂದದ್ದು ಅದರಿಂದಲೇ.

258
00:24:52,200 --> 00:24:54,452
ಅವಳು ಮೊದಲು ಹಾಗಿರಲಿಲ್ಲ ಗೊತ್ತಾ?

259
00:24:56,120 --> 00:24:58,873
ಎಲ್ಲೋ ಒಂದು ಕಡೆ, ತನ್ನ ಮಾನವತ್ವವನ್ನೇ
ಮರೆಯುತ್ತಾ ಬಂದಳು.

260
00:24:58,956 --> 00:25:00,875
ಆ ದಾರಿಯಲ್ಲೇನಾದರೂ ನಡೆಯಲಾರಂಭಿಸಿದರೆ...

261
00:25:01,459 --> 00:25:02,835
ಹಿಂತಿರುಗುವುದು ಕಷ್ಟ.

262
00:25:02,919 --> 00:25:04,754
ಅದಕ್ಕೇ ನಾನು ನಿನಗಾಗಿ ವಾಪಸು ಬಂದೆ.

263
00:25:07,798 --> 00:25:10,218
ನೀನು ಈ ಜೀವನವನ್ನು ಮುಂದುವರಿಸಲಾಗದು, ರೆಬೆಕ್ಕಾ.

264
00:25:10,301 --> 00:25:13,804
ಅದು ನಿನ್ನನ್ನು ಹೈರಾಣಾಗಿಸುತ್ತದೆ,
ಮುಂದೊಂದು ದಿನ ನಿನ್ನನ್ನು ನೀನೇ ಕಳೆದುಕೊಳ್ಳುವೆ.

265
00:25:17,308 --> 00:25:18,309
ಜೂನೋ ಥರ.

266
00:25:21,270 --> 00:25:22,188
ನಿನ್ನ ಥರ?

267
00:25:24,273 --> 00:25:25,399
ಹಾಂ.

268
00:25:26,609 --> 00:25:27,735
ಸ್ವಲ್ಪ ಸಮಯದವರೆಗೂ.

269
00:25:30,947 --> 00:25:32,448
ನೀನು ಹೇಗೆ ಸರಿಪಡಿಸಿಕೊಂಡೆ?

270
00:25:34,116 --> 00:25:35,785
ಅಂಥ ಜೀವನ ಬದುಕುವುದನ್ನು ನಿಲ್ಲಿಸಿದೆ.

271
00:25:36,953 --> 00:25:39,997
ಭಾವನಾರಹಿತ ವಿಚಾರಗಳನ್ನು
ದೂರ ತಳ್ಳಲು ಶುರುಮಾಡಿದೆ,

272
00:25:40,081 --> 00:25:42,959
ನನ್ನ ಕುಟುಂಬವನ್ನು ನನ್ನ ಬಲಹೀನತೆಯಂತೆ
ನೋಡುವುದನ್ನು ನಿಲ್ಲಿಸಿದೆ.

273
00:25:44,293 --> 00:25:45,211
ನೋಡು,

274
00:25:45,878 --> 00:25:47,755
ನಮಗೇನಾಗುತ್ತೆ ಅಂತ ನನಗೆ ಗೊತ್ತಿಲ್ಲ.

275
00:25:48,089 --> 00:25:49,840
ಇದು ಫಲಿಸುತ್ತಾ ಇಲ್ವಾ ಅಂತಲೂ ಗೊತ್ತಿಲ್ಲ.

276
00:25:50,424 --> 00:25:51,509
ಆದರೆ ನನಗೆ ಗೊತ್ತಿರುವುದು...

277
00:25:54,387 --> 00:25:55,596
ನಾವು ಪ್ರಯತ್ನಿಸಬೇಕು ಅನ್ನೋದು.

278
00:26:07,566 --> 00:26:09,694
ಹೇ. ಎಲ್ಲವೂ ಆರಾಮಾ?

279
00:26:09,777 --> 00:26:12,905
ಹೌದು. ನಾವೆಲ್ಲರೂ ಇಲ್ಲಿ ಸುರಕ್ಷಿತವಾಗಿದ್ದೇವೆ.

280
00:26:12,989 --> 00:26:14,740
ಒಳ್ಳೆಯದು.

281
00:26:15,366 --> 00:26:17,243
ಈಗ ಏನೋ ಮಾಡುತ್ತಿದ್ದೇನೆ.

282
00:26:17,326 --> 00:26:19,036
ಆಮೇಲೆ ಕರೆ ಮಾಡಲಾ?

283
00:26:19,120 --> 00:26:21,372
ಮಿನ್ಹೀ ಮಲಗಲು ಹೋಗುತ್ತಿದ್ದಾಳೆ.
ಅವಳಿಗೆ ಶುಭ ರಾತ್ರಿ ಹೇಳಿ.

284
00:26:21,455 --> 00:26:22,456
ಓಹ್, ಸರಿ.

285
00:26:23,249 --> 00:26:25,751
-ಮಿನ್ಹೀ, ನಾನು ಅಪ್ಪ.
-ಅಪ್ಪ!

286
00:26:25,835 --> 00:26:27,420
ನಮ್ಮ ಮುದ್ದು ರಾಜಕುಮಾರಿ!

287
00:26:28,546 --> 00:26:30,881
ಅಜ್ಜಿ-ತಾತನ ಜೊತೆ ಮಜಾ ಮಾಡ್ತಾ ಇದ್ದೀಯಾ?

288
00:26:30,965 --> 00:26:32,508
ಪರವಾಗಿಲ್ಲ.

289
00:26:33,092 --> 00:26:35,594
ನಾನು ತುಂಬಾ ಟಿವಿ ನೋಡುತ್ತಿದ್ದೇನೆ.

290
00:26:37,513 --> 00:26:40,391
ಆದರೆ ನಾನು ನನ್ನ ಮನೆಗೆ ಹಿಂತಿರುಗಬೇಕು.

291
00:26:41,267 --> 00:26:43,352
ನನಗೆ ಗೊತ್ತು. ನನಗೂ ಕೂಡ.

292
00:26:43,436 --> 00:26:46,939
ಎಲ್ಲಿದ್ದೀಯ, ಅಪ್ಪ? ಯಾವಾಗ ಹಿಂತಿರುಗುತ್ತೀಯ?

293
00:26:47,023 --> 00:26:49,191
ಬೇಗನೇ. ಆದರೆ ನನಗೆ ನಿನ್ನ ನೆನಪಾಗುತ್ತಿರುತ್ತೆ.

294
00:26:49,275 --> 00:26:50,985
ನನಗೂ ಅಷ್ಟೇ.

295
00:26:52,862 --> 00:26:56,699
ಹೇ, ಆದರೆ ತಡವಾಗಿದೆ. ಇದು ಮಲಗುವ ಸಮಯ.
ಅಮ್ಮನಿಗೆ ಫೋನ್ ಕೊಡ್ತೀಯಾ?

296
00:26:56,782 --> 00:26:59,118
ಹೇ, ಹೇ, ಹೇ. ನಾನು ನಿನ್ನನ್ನು ಪ್ರೀತಿಸುತ್ತೇನೆ.

297
00:27:14,050 --> 00:27:15,718
ನಿನ್ನೆ ರಾತ್ರಿ ಅವಳು ನಿದ್ದೆ ಮಾಡಲಿಲ್ಲ.

298
00:27:16,385 --> 00:27:18,137
ನನ್ನ ಕೋಣೆಗೆ ಬರುತ್ತಲೇ ಇದ್ದಳು.

299
00:27:18,721 --> 00:27:20,931
ಆಮೇಲೆ ಐದಾರು ಬಾರಿಯ ನಂತರ,

300
00:27:21,015 --> 00:27:22,850
ಅವಳನ್ನು ನನ್ನೊಂದಿಗೇ ಇರಲು ಬಿಟ್ಟೆ.

301
00:27:24,310 --> 00:27:25,770
ನೀವು ಮತ್ತು ರೆಬೆಕ್ಕಾ ಹೇಗಿದ್ದೀರಿ?

302
00:27:25,853 --> 00:27:27,730
ಅವಳು ರಾತ್ರಿಯಿಡೀ ನಿದ್ದೆ ಮಾಡುತ್ತಾಳಾ?

303
00:27:29,899 --> 00:27:30,900
ನಾವು ಪರವಾಗಿಲ್ಲ.

304
00:27:31,776 --> 00:27:34,528
ಕೆಲಸಗಳು ನಡೆಯುತ್ತಿವೆ.
ಎಲ್ಲವೂ ಅಂದುಕೊಂಡಂತೆ ನಡೆದರೆ,

305
00:27:34,612 --> 00:27:37,490
ಇನ್ನೆರಡು ದಿನಗಳಲ್ಲಿ
ನಾವು ನಿಮ್ಮೊಂದಿಗೆ ಬಂದು ಸೇರುತ್ತೇವೆ.

306
00:27:37,573 --> 00:27:40,743
ಜೀವನ ಅಂದುಕೊಂಡಂತೆ ಯಾವಾಗ ನಡೆಯುತ್ತೆ ಹೇಳಿ?

307
00:27:42,995 --> 00:27:44,663
ಅರ್ಥಮಾಡಿಕೊಂಡಿದ್ದಕ್ಕಾಗಿ ಧನ್ಯವಾದ.

308
00:27:54,590 --> 00:27:56,008
ನಿನ್ನ ನಿಜವಾದ ಕುಟುಂಬ ಹೇಗಿದೆ?

309
00:27:56,801 --> 00:27:58,552
ನೀನೂ ನನ್ನ ನಿಜವಾದ ಕುಟುಂಬವೇ.

310
00:28:01,680 --> 00:28:04,308
ಹೇ. ಮಜವಾದ ಕೆಲಸ ಮುಗಿಸಿದಂತಿದ್ದೀಯ...

311
00:28:06,936 --> 00:28:07,978
ನಾನಿಲ್ಲದೆ.

312
00:29:03,200 --> 00:29:04,660
ನಿಮ್ಮ ಸ್ಥಳ ಎಲ್ಲಿ?

313
00:29:04,743 --> 00:29:06,203
ಟಾರ್ಗೆಟ್ ರೆಸ್ಟೋರೆಂಟ್‌ ಬಳಿ ನಿಲ್ಲಿಸಿದ.

314
00:29:06,287 --> 00:29:08,038
ಈಗ ವಾಹನದಲ್ಲಿದ್ದೇವೆ. ಮರಳಿ ಮನೆಗೆ ಹೊರಟೆವು.

315
00:29:08,122 --> 00:29:10,249
ದಾರಿಯಲ್ಲಿದ್ದೇವೆ.
ಟಾರ್ಗೆಟ್ ನಿಮ್ಮ ಕಡೆಗೇ ಬರುತ್ತಿದ್ದಾನೆ

316
00:30:02,009 --> 00:30:02,843
ಅಮ್ಮ.

317
00:30:04,470 --> 00:30:05,554
ನೀನು ನನ್ನನ್ನು ಹೆದರಿಸಿದೆ.

318
00:30:08,474 --> 00:30:10,351
ಇಲ್ಲೇನು ಮಾಡುತ್ತಿದ್ದೀಯಾ?

319
00:30:11,519 --> 00:30:13,812
ನಾನು ನನ್ನ ಮಗನನ್ನು ಬಂದು ನೋಡಬಾರದಾ?

320
00:30:16,440 --> 00:30:17,566
ನೀನು ಒಳಗೆ ಹೇಗೆ ಬಂದೆ?

321
00:30:19,193 --> 00:30:20,903
ಇದು ಕಂಪನಿಯ ಅಪಾರ್ಟ್ಮೆಂಟ್.

322
00:30:25,032 --> 00:30:28,452
ಏನಾದರೂ ಬೇಕಾ? ಚಹಾ ಅಥವಾ ಕಾಫಿ ಇದೆ.

323
00:30:28,994 --> 00:30:30,371
ಪರವಾಗಿಲ್ಲ. ಧನ್ಯವಾದ.

324
00:30:35,292 --> 00:30:36,377
ಅದು ಏನು?

325
00:30:36,919 --> 00:30:39,755
ಅದೊಂದು ಉಡುಗೊರೆ. ತೆರೆದು ನೋಡಲ್ವಾ?

326
00:30:55,813 --> 00:30:57,147
ಎಷ್ಟು ಹಗುರವಾಗಿದೆ ನೋಡು.

327
00:30:59,775 --> 00:31:02,611
ಇದು ಸುಂದರವಾಗಿದೆ. ಧನ್ಯವಾದ.

328
00:31:04,655 --> 00:31:07,783
ಕೊರಿಯಾದಲ್ಲಿ ಸಮಯ ಕಳೆದಿದ್ದಕ್ಕೆ
ಇದನ್ನು ಒಂದು ಸ್ಮರಣಿಕೆ ಅಂದುಕೋ.

329
00:31:08,450 --> 00:31:10,286
ನಾನು ಹೋಗುತ್ತಿರುವಂತೆ ಹೇಳುತ್ತಿದ್ದೀಯಾ.

330
00:31:11,662 --> 00:31:14,081
ಹೌದು. ಇಂದು ರಾತ್ರಿ ನೀನು ಮನೆಗೆ ಹೋಗುವೆ.

331
00:31:14,164 --> 00:31:14,999
ಏನು?

332
00:31:15,082 --> 00:31:17,585
ಕ್ಯಾಡಿಸ್ ಮತ್ತು ಇದೆಲ್ಲಾ
ನಿನಗೆ ಸೂಕ್ತವಾದ ಜಾಗವಲ್ಲ.

333
00:31:17,668 --> 00:31:20,546
ಯಾಕೆ? ಒಂದು ವಾರದ ಹಿಂದಿನವರೆಗೂ
ನನಗೆ ಕ್ಯಾಡಿಸ್‌ನಲ್ಲಿ ಎಲ್ಲವೂ ಚೆನ್ನಾಗಿತ್ತು.

334
00:31:20,629 --> 00:31:21,630
ಒಲಿವರ್.

335
00:31:21,714 --> 00:31:24,633
ನಿನಗಾಗಿ ನಾನು ನರಕ ನೋಡಿ ಬಂದೆ.
ನನಗೆ ಯಾಕೆ ಹೀಗೆ ಮಾಡುತ್ತಿದ್ದೀಯಾ?

336
00:31:24,717 --> 00:31:28,095
ಇದನ್ನು ನಿನಗಾಗಿ ಮಾಡುತ್ತಿದ್ದೇನೆ.
ಸುಲಭವಾಗಲಿ ಅಂತ.

337
00:31:29,263 --> 00:31:30,806
ನಿನ್ನ ತಂದೆಯ ಜೊತೆ ಮಾತಾಡಿದೆ.

338
00:31:32,224 --> 00:31:34,852
ನೀನು ಅವರ ಜೊತೆ ಹೋಗಿ ಕೆಲಸ ಮಾಡಿದರೆ
ಒಳ್ಳೆಯದು ಅಂತ ನಮ್ಮಿಬ್ಬರ ಅಭಿಪ್ರಾಯ.

339
00:31:34,935 --> 00:31:36,854
ಏನು, ಯಾವುದೋ ಬ್ಯಾಂಕಲ್ಲಿ ಕೆಲಸ ಮಾಡೋದಾ?

340
00:31:38,147 --> 00:31:40,149
ಅವರಿಗೆ ಯಾವಾಗಲೂ
ನಿನ್ನನ್ನು ಜೊತೆ ಸೇರಿಸಿಕೊಳ್ಳಲು ಇಷ್ಟ.

341
00:31:40,232 --> 00:31:42,109
ಅದು ಒಳ್ಳೆಯ ಆಲೋಚನೆ ಅಂತ ನನಗೂ ಗೊತ್ತಿರಲಿಲ್ಲ.

342
00:31:42,192 --> 00:31:43,902
ನಾನು ಹೋಗಿ ಅಪ್ಪನ ಜೊತೆ ಕೆಲಸ ಮಾಡಲ್ಲ.

343
00:31:43,986 --> 00:31:45,904
ಇದು ಶಾಶ್ವತವಾಗಿರಬೇಕಾಗಿಲ್ಲ.

344
00:31:46,947 --> 00:31:48,824
ಸದ್ಯಕ್ಕೆ ನಿನಗೆ ಇದೊಂದೇ ಒಳ್ಳೆಯ ದಾರಿ.

345
00:31:49,408 --> 00:31:50,492
ಹೌದು.

346
00:31:51,118 --> 00:31:53,495
ಖಂಡಿತ, ಇದೆಲ್ಲವೂ ನನಗೇನೇ.

347
00:31:53,579 --> 00:31:56,206
ನಿನ್ನ ಹಾಳಾದ ಮಗನನ್ನು ನೀನು
ದೂರ ಮಾಡುವುದಷ್ಟೇ ಅಲ್ಲ.

348
00:31:59,960 --> 00:32:01,795
ನಾನು ಲಂಡನ್‌ಗೆ ಹೋಗಲ್ಲ.

349
00:32:04,506 --> 00:32:05,633
ಹೌದು, ಹೋಗುವೆ.

350
00:32:06,425 --> 00:32:07,843
ಜೂನೋ, ದಯವಿಟ್ಟು.

351
00:32:07,926 --> 00:32:09,637
ನಾನು ಹೇಳುತ್ತಿರುವುದು ನಿನಗೆ ಅರ್ಥವಾಗುತ್ತಿಲ್ಲ.

352
00:32:10,721 --> 00:32:12,014
ನೀನು ಇಲ್ಲೇ ಇದ್ದರೆ,

353
00:32:13,098 --> 00:32:15,142
ನಾನು ನಿನ್ನ ಸುರಕ್ಷತೆಯ ಭರವಸೆ ಕೊಡಲಾರೆ.

354
00:32:19,647 --> 00:32:21,023
ಹಾಗಾಗಿ, ನಿನ್ನ ಕೈಲಾದದ್ದು ಎತ್ತಿಕೋ,

355
00:32:22,024 --> 00:32:24,777
ನಿನ್ನ ಮಿಕ್ಕ ವಸ್ತುಗಳನ್ನು ನಾಳೆ ಕಳಿಸುತ್ತೇನೆ.

356
00:32:25,736 --> 00:32:27,404
ನಿನ್ನ ವಿಮಾನವು 10:00ಕ್ಕೆ ಹೊರಡುತ್ತದೆ.

357
00:32:40,292 --> 00:32:41,835
ಹಾಳಾಗಿಹೋಗಲಿ.

358
00:32:50,052 --> 00:32:51,804
ಅವನು ತಪ್ಪಿಸಿಕೊಳ್ಳಲು ಬಿಡಬೇಡ.

359
00:33:02,648 --> 00:33:04,983
ಒಲಿವರ್ ಈಗಷ್ಟೇ ಜೂನೋಳಿಂದ ದೂರ ಬಂದ.
ಭಯಗೊಂಡಂತೆ ಕಾಣುತ್ತಿದ್ದಾನೆ.

360
00:33:05,067 --> 00:33:06,527
ನಮಗೆ ಬೇಕಾದ ಕಡೆಯೇ ಇದ್ದಾನೆ.

361
00:33:06,610 --> 00:33:08,487
ಭದ್ರತೆಯವರು ಅವನ ಹಿಂದೆಯೇ ಇದ್ದಾರೆ.

362
00:33:09,029 --> 00:33:09,988
ನನ್ನ ಕೆಲಸವಾಯಿತು.

363
00:33:46,316 --> 00:33:47,609
ದಕ್ಷಿಣಕ್ಕೆ ಹೊರಟಿದ್ದಾನೆ.

364
00:33:48,318 --> 00:33:49,737
ನಾನು ಅವನ ಹಿಂದೆಯೇ ಇದ್ದೇನೆ.

365
00:34:28,400 --> 00:34:29,526
ಸ್ಥಾನಕ್ಕೆ ಹೊರಡು.

366
00:34:29,610 --> 00:34:30,861
ಅವನನ್ನು ಸುತ್ತುವರಿ.

367
00:34:30,944 --> 00:34:31,987
ತಿಳಿಯಿತು.

368
00:34:45,959 --> 00:34:47,252
ಸ್ಥಾನದಲ್ಲಿದ್ದೇನೆ.

369
00:34:47,336 --> 00:34:49,046
ಸರಿ, ಈಗ ಮಾಡೋಣ.

370
00:34:49,505 --> 00:34:51,340
ಅವನು ಈ ಕಾರನ್ನು ನೋಡಿದ ತಕ್ಷಣ ಓಡುತ್ತಾನೆ.

371
00:35:12,110 --> 00:35:12,945
ಬಾ.

372
00:35:34,424 --> 00:35:35,634
ಬಲಗಡೆಗೆ ಅವನನ್ನು ತಳ್ಳು.

373
00:35:35,717 --> 00:35:38,804
ಮೂರು, ಎರಡು, ಒಂದು, ಈಗ!

374
00:36:39,698 --> 00:36:42,618
ಹಾಂ. ಸಾಯಿ ಅಲ್ಲೇ.

375
00:37:01,595 --> 00:37:03,013
ಸರಿ. ಇಲ್ಲಿ ನಿಲ್ಲಿಸು.

376
00:37:06,350 --> 00:37:07,976
ವಿದ್ಯುತ್ ಉಪಕರಣಗಳನ್ನು ನಿಷ್ಕ್ರಿಯಗೊಳಿಸುವೆ.

377
00:37:22,532 --> 00:37:24,159
ಏನಿದು?

378
00:37:29,748 --> 00:37:32,084
ದರಿದ್ರದ್ದು! ನಡಿ!

379
00:37:35,587 --> 00:37:36,672
ಈಗ ನನ್ನ ಸರದಿ.

380
00:37:52,938 --> 00:37:53,897
ಥೂ.

381
00:38:44,531 --> 00:38:45,574
ಒಲಿವರ್...

382
00:38:46,033 --> 00:38:46,992
ನೋಡಿ ಆನಂದವಾಯಿತು.

383
00:38:47,701 --> 00:38:48,618
ಹಾಂ.

384
00:38:50,537 --> 00:38:52,581
ನೀನು ನನಗೆ ಕರೆ ಮಾಡಿ
ಒಳ್ಳೆ ಕೆಲಸ ಮಾಡಿದೆ, ಕಣಪ್ಪ.

385
00:38:54,249 --> 00:38:55,083
ನಾನೇನು...

386
00:38:55,834 --> 00:38:58,795
-ನಾನು ಏನು ಮಾಡಬೇಕು?
-ನನ್ನ ತನಿಖೆಗೆ ಸಹಕರಿಸು.

387
00:38:59,379 --> 00:39:01,757
ಪ್ರತಿಯಾಗಿ, ನಾನು ನಿನಗೆ
24 ಗಂಟೆಗಳೂ ರಕ್ಷಣೆ ನೀಡುತ್ತೇನೆ.

388
00:39:02,507 --> 00:39:03,675
"ಸಹಕಾರ"?

389
00:39:06,094 --> 00:39:08,597
ಅಂದರೆ ನಾನು ನನ್ನ ತಾಯಿಯ ಬೆನ್ನಿಗೆ
ಚೂರಿ ಹಾಕಬೇಕಾ?

390
00:39:08,680 --> 00:39:10,807
ನಿನಗೆ ಗೊತ್ತಿರುವುದೆಲ್ಲವನ್ನೂ ನನಗೆ ಹೇಳು.

391
00:39:11,349 --> 00:39:12,726
ಕಾರ್ಪೋವ್ ಬಗ್ಗೆ,

392
00:39:13,226 --> 00:39:14,478
ಜೆ ಹುನ್ ಲೀ,

393
00:39:14,561 --> 00:39:17,314
ಮತ್ತು ರಷ್ಯಾದ ಗುಪ್ತಚರದೊಂದಿಗೆ
ಕ್ಯಾಡಿಸ್‌ನ ವ್ಯವಹಾರಗಳು.

394
00:39:23,153 --> 00:39:25,030
ನನಗೆ ಸಂಪೂರ್ಣ ರಕ್ಷಣೆ ಬೇಕು.

395
00:39:25,113 --> 00:39:28,116
ಖಂಡಿತ. ರಸ್ತೆ ಬಿಟ್ಟು ಹೋಗೋಣ.

396
00:39:53,558 --> 00:39:55,519
ಒಲಿವರ್ ಶರಣಾದ.

397
00:39:55,894 --> 00:39:57,604
ಅವನು ಹೇಳಿದ್ದು ನಿಜವಾದರೆ,

398
00:39:57,687 --> 00:40:00,774
ಜೂನೋ ಮತ್ತು ಕ್ಯಾಡಿಸ್ ವಿರುದ್ಧ
ನಮಗೆ ಬಲವಾದ ಪ್ರಕರಣ ಸಿಗುತ್ತೆ.

399
00:40:02,943 --> 00:40:04,194
ಕೇಳಲು ಚೆನ್ನಾಗಿದೆ.

400
00:40:05,403 --> 00:40:08,782
ಕ್ಯಾಡಿಸ್ ಜೊತೆಗಿನ ರೆಬೆಕ್ಕಾಳ

401
00:40:08,865 --> 00:40:10,826
ಚಟುವಟಿಕೆಗಳ ಬಗ್ಗೆ ಒಲಿವರ್ ತುಂಬಾ ಹೇಳಿದ.

402
00:40:16,081 --> 00:40:17,582
ನಮ್ಮ ಒಪ್ಪಂದ ನೆನಪಿದೆ, ಅಲ್ವಾ?

403
00:40:19,084 --> 00:40:20,877
ಹೌದು, ನನಗೆ ನೆನಪಿದೆ.

404
00:40:20,961 --> 00:40:21,962
ಒಳ್ಳೆಯದು.

405
00:40:28,635 --> 00:40:29,928
ಏನು ನಡೆಯುತ್ತಿದೆ?

406
00:40:32,013 --> 00:40:33,890
ಒಲಿವರ್ ಶರಣಾದ.

407
00:40:35,475 --> 00:40:36,476
ಠಕ್ಕ ನರಿ.

408
00:40:36,935 --> 00:40:38,478
ಜೂನೋ ಕತೆ ಮುಗಿಯಿತು.

409
00:40:39,104 --> 00:40:40,480
ಅವಳು ಜೈಲಿಗೆ ಹೋಗುತ್ತಾಳಾ?

410
00:40:40,564 --> 00:40:42,232
ನನಗೆ ಗೊತ್ತಿಲ್ಲ.

411
00:40:42,315 --> 00:40:44,901
ಆದರೆ ಅವಳ ಎಲ್ಲಾ ಅಧಿಕಾರ,
ಪ್ರಭಾವ, ಎಲ್ಲವೂ ಹೋಯಿತು.

412
00:40:45,861 --> 00:40:50,115
ಬೇಗನೇ, ನಾವು ಓಡುವುದನ್ನು ನಿಲ್ಲಿಸಿ,
ಕೊನೆಗೂ, ಒಟ್ಟಾಗಿ ಬದುಕಬಹುದು--

413
00:40:50,198 --> 00:40:51,533
ಒಂದು ಕುಟುಂಬವಾಗಿ.

414
00:40:53,660 --> 00:40:54,703
ಆಚರಿಸೋಣ.

415
00:40:58,331 --> 00:40:59,875
ನಾನು ಈ ಬ್ಯಾಚನ್ನು ಕೈಯಿಂದ ಮಾಡಿದೆ.

416
00:41:01,459 --> 00:41:03,753
ಮತ್ತೆ ನೀನು ನನಗೆ ಮಂಪರು ಮದ್ದು ಕೊಡಲ್ಲ ತಾನೇ?

417
00:41:05,589 --> 00:41:06,590
ನೀನೇ ಸುರಿ.

418
00:41:08,800 --> 00:41:10,302
-ಅದು ಸಂಪ್ರದಾಯ.
-ಏನು?

419
00:41:10,802 --> 00:41:13,471
ದೊಡ್ಡವರಿಗಾಗಿ ಸುರಿಯುವುದು.
ಅದು ಮರ್ಯಾದೆಯ ಸೂಚಕ.

420
00:41:28,236 --> 00:41:31,114
ಮತ್ತೆ, ಈಗ ನಾವು
ಡಾಸನ್ ಜೊತೆ ಚೆನ್ನಾಗಿರುವುದರಿಂದ,

421
00:41:33,575 --> 00:41:36,161
ವಾಪಸ್ ಸ್ಟೇಟ್ಸ್‌ಗೆ
ಹೋಗಬೇಕು ಅಂದುಕೊಳ್ಳುತ್ತಿದ್ದೀಯಾ?

422
00:41:38,163 --> 00:41:39,497
ನಿನಗೆ ಅದೇ ಬೇಕಾ?

423
00:41:40,165 --> 00:41:41,249
ನನಗೆ ಗೊತ್ತಿಲ್ಲ.

424
00:41:41,333 --> 00:41:42,626
ಹೌದು, ಚೆನ್ನಾಗಿರಬಹುದು.

425
00:41:43,919 --> 00:41:45,545
ಅಂಜು ಅದಕ್ಕೆ ಒಪ್ಪುತ್ತಾರಾ?

426
00:41:48,089 --> 00:41:49,883
ಅದನ್ನು ಒಟ್ಟಿಗೆ ತಿಳಿದುಕೊಳ್ಳೋಣ.

427
00:41:49,966 --> 00:41:51,760
ಸರಿ, ನಾವೆಲ್ಲರೂ ಒಟ್ಟಿಗೆ ಇರುತ್ತೇವೆ ಅನ್ನು.

428
00:41:53,887 --> 00:41:55,138
ನಾನು ಏನು ಮಾಡಬೇಕು?

429
00:41:55,222 --> 00:41:56,765
ನೀನು ಏನು ಬೇಕಾದರೂ ಮಾಡಬಹುದು.

430
00:41:57,515 --> 00:41:59,142
ನೀನು ಕಾಲೇಜಿಗೆ ಹೋಗಬಹುದು.

431
00:41:59,226 --> 00:42:00,435
ನಿನಗೆ ಕೆಲಸ ಸಿಗಬಹುದು.

432
00:42:00,518 --> 00:42:02,145
ಅಪ್ಪ, ನನಗೆ ಈಗಾಗಲೇ ಕೆಲಸವಿದೆ.

433
00:42:03,271 --> 00:42:04,356
ರೆಬೆಕ್ಕಾ.

434
00:42:05,357 --> 00:42:07,317
ನನಗೆ ಮಾಡಲು ಬರುವುದು ಇದೊಂದೇ.

435
00:42:07,943 --> 00:42:09,402
ಇದನ್ನು ಚೆನ್ನಾಗಿ ಮಾಡುತ್ತೇನೆ.

436
00:42:10,445 --> 00:42:11,404
ನನಗಿದು ಇಷ್ಟ.

437
00:42:11,488 --> 00:42:13,865
ಇಲ್ಲ. ನಿನ್ನನ್ನು ತಯಾರಿ ಮಾಡಿದ್ದು ಜೂನೋ.

438
00:42:13,949 --> 00:42:16,743
-ನಿನ್ನನ್ನು ತನ್ನ ವೈಯಕ್ತಿಕ ಆಯುಧದಂತೆ ಮಾಡಿದಳು.
-ಅಪ್ಪ.

439
00:42:16,826 --> 00:42:20,497
-ಆದರೆ ನೀನು ಅದಕ್ಕಿಂತಲೂ ಹೆಚ್ಚು--
-ಅಪ್ಪ, ಜೂನೋ ಹತ್ತಿರ ಹೋಗಿದ್ದು ನಾನೇ.

440
00:42:20,580 --> 00:42:21,414
ಇಲ್ಲ.

441
00:42:22,082 --> 00:42:23,291
ಅವಳು ನಿನ್ನ ತಲೆಕೆಡಿಸಿದಳು.

442
00:42:23,375 --> 00:42:25,585
ಅವಳು ಇದ್ಯಾವುದಕ್ಕೂ ನನ್ನನ್ನು ಬಲವಂತ ಮಾಡಲಿಲ್ಲ.

443
00:42:27,212 --> 00:42:28,880
ಆದರೆ ನೀನು ಕೊಂದ ಜನರು...

444
00:42:28,964 --> 00:42:30,215
ಜನರು ಸಾಯುತ್ತಾರೆ.

445
00:42:31,967 --> 00:42:33,093
ಅಮ್ಮ ಸತ್ತರು.

446
00:42:34,761 --> 00:42:35,804
ನೀನು ಸತ್ತೆ.

447
00:42:47,190 --> 00:42:49,109
ಅಪ್ಪ, ಏನು ಮಾಡಬೇಕೆಂದು ನನಗೆ ತಿಳಿದಿಲ್ಲ.

448
00:42:51,444 --> 00:42:52,696
ನಾನು ಕಳೆದುಹೋಗಿದ್ದೇನೆ. ನಾನು--

449
00:42:52,779 --> 00:42:53,697
ಹೇ...

450
00:43:00,537 --> 00:43:01,871
ಅವರನ್ನು ಎದುರಿಸಬಲ್ಲೆವಾ?

451
00:43:01,955 --> 00:43:04,082
ಇಲ್ಲ. ತುಂಬಾ ಜನ ಇದ್ದಾರೆ. ನಾವು ಹೋಗಬೇಕು.

452
00:43:05,792 --> 00:43:08,545
ನೀನು ಮೊದಲು ಹೋಗು.
ನದಿಯ ಬಳಿ ನಿನಗೆ ಸಿಗುತ್ತೇನೆ.

453
00:43:09,254 --> 00:43:10,380
ಹೋಗು! ಈಗಲೇ!

454
00:45:06,413 --> 00:45:07,247
ಅಪ್ಪ!

455
00:46:32,832 --> 00:46:34,834
ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ

