1
00:00:08,217 --> 00:00:10,928
ಬಟರ್ಫ್ಲೈ ಹಿಂದಿನ ಸಂಚಿಕೆಯಲ್ಲಿ...

2
00:00:11,011 --> 00:00:12,722
ನೀನೇ ಮಾಡಿದ್ದು ಅಂತ ಹೇಳಿದೆ.

3
00:00:12,805 --> 00:00:15,224
ಒಂಬತ್ತು ವರ್ಷಗಳ ಹಿಂದೆ ಅವನಿಗೆ
ದ್ರೋಹ ಮಾಡಿದ್ದು ನೀನೇ ಅಂತ ಹೇಳಿದೆ.

4
00:00:15,307 --> 00:00:16,308
ಇಲ್ಲಿ ಒಳಬೇಹುಗಾರರಿದ್ದಾರೆ.

5
00:00:16,392 --> 00:00:18,894
ವಿಕ್ಕಿ ಲಿನ್ವುಡ್,
ನನ್ನ ಭದ್ರತಾ ತಂಡದ ಮುಖ್ಯಸ್ಥೆ.

6
00:00:20,938 --> 00:00:22,106
ಅಪ್ಪ, ನಾವು ಹೋಗಬೇಕು.

7
00:00:23,399 --> 00:00:26,026
ಡಾಸನ್ ಒಂದು ಉಲ್ಲೇಖ ಮಾಡಿದ್ದಾರೆ,
"ಉನ್ನತ ಮಟ್ಟದ, ವಿಶೇಷ ಸಾಕ್ಷಿ

8
00:00:26,110 --> 00:00:27,903
ಜೂನೋ ಲಂಡ್ ಮತ್ತು ಕ್ಯಾಡಿಸ್ ವಿರುದ್ಧ."

9
00:00:27,987 --> 00:00:29,530
ಒಲಿವರ್ ಒಬ್ಬ ಹೇಡಿ.

10
00:00:29,613 --> 00:00:32,783
ಜೂನೋ ಅವನನ್ನು ಕೊಲ್ಲಲು ನೋಡುತ್ತಿದ್ದಾಳೆಂದು
ಬಿಂಬಿಸಿದರೆ, ಸಹಾಯಕ್ಕೆಂದು ಡಾಸನ್ ಬಳಿ ಓಡುವನು.

11
00:00:32,867 --> 00:00:35,161
ಅವನ ತಾಯಿಯೇ ಅವನನ್ನು ಕೊಲ್ಲಲು
ನೋಡಿದಳೆಂಬಂತೆ ಅವನನ್ನು ನಂಬಿಸಬೇಕಾ?

12
00:00:35,244 --> 00:00:37,872
ಅವನು ತಿರುಗಿಬೀಳಬೇಕೆಂದರೆ ಹೀಗೇ ಮಾಡಬೇಕು.

13
00:00:37,955 --> 00:00:40,124
ನನ್ನ ಮಗನಿಗೆ ಏನು ಮಾಡಿದ
ಅನ್ನೋದು ನನಗೆ ಗೊತ್ತಾಗಬೇಕು.

14
00:00:40,916 --> 00:00:42,126
ಅಪ್ಪ!

15
00:00:59,143 --> 00:01:00,311
ಇಳಿ, ಈಗಲೇ!

16
00:01:02,313 --> 00:01:03,147
ಹೆಲ್ಮೆಟ್ ಕೂಡ.

17
00:03:29,793 --> 00:03:31,670
ಜೂನೋ ಮಾತಾಡಬೇಕಂತೆ.

18
00:04:34,191 --> 00:04:36,151
ಬಟರ್ಫ್ಲೈ

19
00:04:58,465 --> 00:04:59,967
ನಾನೆಂದರೆ ನಿನಗೆ ಭಯನಾ?

20
00:05:00,050 --> 00:05:01,635
ಅಪಾಯವನ್ನು ತಗ್ಗಿಸುವುದು ನನಗೆ ಗೊತ್ತು.

21
00:05:04,096 --> 00:05:05,723
ಬ್ಯಾರನ್ ಬಗ್ಗೆ ನಿನಗೆ ಎಂದಾದರೂ ಹೇಳಿದ್ದೇನೆಯೇ?

22
00:05:07,307 --> 00:05:08,225
ಯಾರು?

23
00:05:08,308 --> 00:05:10,978
ಒಲಿವರ್‌ಗೆ ತನ್ನ ಹತ್ತನೇ ಹುಟ್ಟುಹಬ್ಬಕ್ಕೆ
ನಾಯಿ ಬೇಕಿತ್ತು.

24
00:05:11,562 --> 00:05:14,189
ಟಿಬೆಟನ್ ಮಾಸ್ಟಿಫ್.
ಅದನ್ನು ಎಂದಾದರೂ ನೋಡಿದ್ದೀಯಾ?

25
00:05:15,190 --> 00:05:17,151
ಅದು ಮುದ್ದು ನಾಯಿಮರಿಯಂತೂ ಅಲ್ಲ.

26
00:05:17,693 --> 00:05:20,404
ಕೆಲವು ವಾರಗಳು ಹಾಗೆಯೇ ಇತ್ತು.
ಆಮೇಲೆ 180 ಪೌಂಡ್ ತೂಕ ಗಳಿಸಿತು.

27
00:05:20,487 --> 00:05:22,656
ದೊಡ್ಡ ಸಿಂಹದಂತೆ ಕಾಣುತ್ತಿತ್ತು.

28
00:05:22,740 --> 00:05:24,867
ನಾನು ಊಹಿಸುವೆ. ನಿನ್ನ ಮಾಜಿ ಪತಿಯ ಜೊತೆ ಇತ್ತಾ?

29
00:05:25,659 --> 00:05:26,827
ತುಂಬಾ ಗಟ್ಟಿಯಾದ ನಾಯಿಯಾಗಿತ್ತು.

30
00:05:26,910 --> 00:05:30,080
ಯಾವಾಗಲೂ ಬೊಗಳುತ್ತಲೇ ಇತ್ತು, ನಿಕ್‌ನ
ಹಿತ್ತಲಿನಲ್ಲಿ ಮೊಲಗಳನ್ನು ಕೊಲ್ಲುತ್ತಿತ್ತು.

31
00:05:30,164 --> 00:05:31,832
ಅದೇನೂ ನನಗೆ ತೊಂದರೆಯಾಗಿರಲಿಲ್ಲ...

32
00:05:31,915 --> 00:05:34,543
ಒಲಿವರ್ ಮೇಲೆ ದಾಳಿ ಮಾಡಿ
ಅವನ ಐಸ್ ಕ್ರೀಮ್ ಕಿತ್ತುಕೊಳ್ಳುವವರೆಗೂ.

33
00:05:34,626 --> 00:05:36,462
ಐಸ್ ಕ್ರೀಮ್ ಯಾವ ರುಚಿಯದ್ದಾಗಿತ್ತು?

34
00:05:39,840 --> 00:05:41,175
ಅದರ ತಳಿಯೇ ಸಮಸ್ಯೆಯಾಗಿತ್ತು.

35
00:05:42,009 --> 00:05:45,512
ಟಿಬೆಟನ್ ಮ್ಯಾಸ್ಟಿಫ್‌ಗಳು ಸಾವಿರಾರು ವರ್ಷಗಳಿಂದ
ಇದ್ದವು, ಆದರೆ ಸಾಕುಪ್ರಾಣಿಗಳಾಗಿ,

36
00:05:45,596 --> 00:05:46,972
ಅವು ಇನ್ನೂ ಹೊಸತು.

37
00:05:47,806 --> 00:05:49,933
ಅದನ್ನು ಕೊಲ್ಲಿಸಬೇಕಾಯಿತು.

38
00:05:50,017 --> 00:05:52,853
ಆ ನಾಯಿಯಿಂದ ತೋಳದ ಸ್ವಭಾವ
ಇನ್ನೂ ಬಿಟ್ಟುಹೋಗಿರಲಿಲ್ಲ.

39
00:05:53,937 --> 00:05:57,024
ನಿನ್ನಿಂದಲೂ ತೋಳದ ಸ್ವಭಾವ
ಬಿಟ್ಟುಹೋಗಿಲ್ಲ, ರೆಬೆಕ್ಕಾ.

40
00:05:59,777 --> 00:06:01,111
ನನ್ನನ್ನು ಕೊಲ್ಲುತ್ತೀಯಾ?

41
00:06:02,071 --> 00:06:03,280
ಕೊಲ್ಲಬೇಕು.

42
00:06:03,363 --> 00:06:04,490
ನೀನು ನನಗೆ ದ್ರೋಹ ಮಾಡಿದೆ.

43
00:06:04,573 --> 00:06:06,366
ನೀನು ನನ್ನ ಜೀವನವನ್ನು ಹಾಳುಮಾಡಿದೆ.

44
00:06:07,451 --> 00:06:09,286
ನಾನು ತಾಯಿ ಇಲ್ಲದ ಮಗುವಾಗಿದ್ದೆ,

45
00:06:09,369 --> 00:06:10,913
ನೀನು ನನ್ನ ತಂದೆಯನ್ನು ನನ್ನಿಂದ ಕಸಿದುಕೊಂಡೆ.

46
00:06:10,996 --> 00:06:12,831
ನಾನು ನಿಮ್ಮಿಬ್ಬರಿಗೂ ನೋಯಿಸಲು ಬಯಸಲಿಲ್ಲ.

47
00:06:12,915 --> 00:06:15,084
ಇಲ್ಲ, ನಮಗೆ ನೋವಾದರೂ
ನೀನು ತಲೆಕೆಡಿಸಿಕೊಳ್ಳಲಿಲ್ಲ.

48
00:06:15,501 --> 00:06:19,171
ಅಲ್ಲದೆ, ಆತ ಬದುಕಿದ್ದಾರೆ ಅಂತ ತಿಳಿದ ಕೂಡಲೇ
ನಮ್ಮಿಬ್ಬರನ್ನೂ ಕೊಲ್ಲಲು ನೋಡುತ್ತಿದ್ದೀಯ.

49
00:06:19,254 --> 00:06:20,255
ಡೇವಿಡ್ ನನ್ನ ಹಿಂದೆ ಬಂದ.

50
00:06:20,339 --> 00:06:22,925
ಕ್ಯಾಡಿಸ್ ವಿರುದ್ಧ ಯುದ್ಧ ಘೋಷಿಸಿದ.
ನಾನು ಏನು ಮಾಡಬೇಕಿತ್ತು?

51
00:06:23,008 --> 00:06:24,718
ಅದು ಕೇವಲ ವ್ಯವಹಾರವಷ್ಟೇ ಎಂದು ಬಲ್ಲೆ.

52
00:06:24,802 --> 00:06:28,639
ನನ್ನ ಸ್ಥಾನದಲ್ಲಿ ನೀನಿದ್ದಿದ್ದರೆ ಏನು
ಮಾಡುತ್ತಿದ್ದೆ, ಎಷ್ಟು ಬೇಗ ಮಾಡುತ್ತಿದ್ದೆ?

53
00:06:34,853 --> 00:06:36,814
-ಒಲಿವರ್ ಅದನ್ನು ಹೇಗೆ ಸಹಿಸಿಕೊಂಡ?
-ಏನನ್ನು?

54
00:06:37,981 --> 00:06:39,733
ಅವನ ನಾಯಿಗೆ ವಿಷದ ಚುಚ್ಚುಮದ್ದು ಕೊಟ್ಟಿದ್ದು.

55
00:06:39,817 --> 00:06:42,653
ಬ್ಯಾರನ್‌ನನ್ನು ಆಶ್ರಮದಲ್ಲಿರಲು ಕಳಿಸಿದೆವು
ಅಂತ ಹೇಳಿದೆವು.

56
00:06:47,699 --> 00:06:49,368
ಅಲ್ಲೇ ಮುಚ್ಚಿಹಾಕಿದೆ ನೀನು.

57
00:06:51,203 --> 00:06:52,830
ಅವನಿಗೆ ನಿಜ ಯಾವಾಗ ಹೇಳಿದೆ?

58
00:06:53,539 --> 00:06:55,374
ಕೆಲವು ರಹಸ್ಯಗಳನ್ನು ನಾನು ಹೇಳುವುದೇ ಇಲ್ಲ.

59
00:07:00,003 --> 00:07:01,213
ಅದನ್ನು ಉತ್ತರಿಸು.

60
00:07:01,296 --> 00:07:02,673
ಇದು ಅದಕ್ಕಿಂತ ಮುಖ್ಯ.

61
00:07:03,507 --> 00:07:05,008
ನನಗೇನೋ ಅನುಮಾನವೇ.

62
00:07:07,469 --> 00:07:08,929
ಒಲಿವರ್ ತಿರುಗಿಬಿದ್ದ.

63
00:07:10,305 --> 00:07:13,308
ಡಾಸನ್ ಹತ್ತಿರ ಸಾಕ್ಷಿಯಾಗಿ ಒಪ್ಪಂದ ಮಾಡಿಕೊಂಡ.

64
00:07:13,725 --> 00:07:15,811
ನಿನ್ನ ವಿರುದ್ಧ ಸಾಕ್ಷಿ ಹೇಳಲಿದ್ದಾನೆ,

65
00:07:15,894 --> 00:07:17,688
ನೀನು ಜೈಲಿಗೆ ಹೋಗುತ್ತೀಯ,

66
00:07:17,771 --> 00:07:21,441
ಮತ್ತು ಕ್ಯಾಡಿಸ್ ಶಾಶ್ವತವಾಗಿ ಒಡೆದುಹೋಗುತ್ತದೆ.

67
00:07:47,634 --> 00:07:48,760
ಅಪ್ಪ!

68
00:07:51,930 --> 00:07:53,265
ನಮ್ಮ ರಾಜಕುಮಾರಿ.

69
00:07:54,266 --> 00:07:55,767
ನಿಮಗೆ ಪೆಟ್ಟಾಯಿತಾ?

70
00:07:56,518 --> 00:07:57,644
ನನಗೇನಾಗಲ್ಲ.

71
00:07:58,770 --> 00:08:01,356
ರೆಬೆಕ್ಕಾ ಎಲ್ಲಿದ್ದಾಳೆ? ಅವಳು ಚೆನ್ನಾಗಿದ್ದಾಳಾ?

72
00:08:04,776 --> 00:08:06,195
ನಂತರ ಮಾತನಾಡೋಣ.

73
00:08:11,450 --> 00:08:13,911
ಮತ್ತೆ ನಿಮ್ಮನ್ನು ನೋಡ್ತೀನಾ ಇಲ್ವಾ
ಅಂತ ಗೊತ್ತಿರಲಿಲ್ಲ.

74
00:08:19,416 --> 00:08:22,169
ನಿನ್ನ ತಂದೆಯ ಜೊತೆ ನಾನು ಸ್ವಲ್ಪ ಮಾತನಾಡಬೇಕು.

75
00:08:22,961 --> 00:08:23,962
ಅಪ್ಪ,

76
00:08:24,296 --> 00:08:25,589
ನನಗೆ ನಿಮ್ಮ ಸಹಾಯ ಬೇಕು.

77
00:08:26,715 --> 00:08:28,050
ನನಗೆ ಜನ ಬೇಕು,

78
00:08:28,258 --> 00:08:29,593
ಉಪಕರಣ,

79
00:08:30,093 --> 00:08:31,178
ಗಾಡಿಗಳು,

80
00:08:31,762 --> 00:08:33,931
ನೀವು ಏನೇ ಕೊಡಲಾದರೂ ಸರಿ.

81
00:08:34,681 --> 00:08:36,725
ನೀವು ನನಗೆ ಸಹಾಯ ಮಾಡಲು
ಬಯಸುವುದಿಲ್ಲವೆಂದು ಬಲ್ಲೆ.

82
00:08:36,808 --> 00:08:40,437
ನಾನು ನಿಮ್ಮ ಜೀವನದಿಂದ ಶಾಶ್ವತವಾಗಿ
ಹೊರಟುಹೋದರೂ ನಿಮಗೆ ಚಿಂತೆಯಿಲ್ಲ.

83
00:08:42,606 --> 00:08:44,358
ಆದರೆ ರೆಬೆಕ್ಕಾಳನ್ನು ಅಪಹರಿಸಿದರು.

84
00:08:45,984 --> 00:08:47,694
ಅವಳು ನನ್ನ ಮಗಳು.

85
00:08:52,449 --> 00:08:53,450
ಏನೂಂದ್ರೆ.

86
00:08:57,913 --> 00:09:01,875
ರೆಬೆಕ್ಕಾಳನ್ನು ಕಾಪಾಡಲು ನನಗೆ ಬೇಕಾದದ್ದು
ಸಿಗುವವರೆಗೂ ನಾನು ಇಲ್ಲಿಂದ ಹೊರಡಲ್ಲ.

87
00:09:14,096 --> 00:09:15,097
ನಿನಗೆ ಸಹಾಯ ಮಾಡುತ್ತೇನೆ.

88
00:09:17,140 --> 00:09:18,475
ಆದರೆ ಈ ಬಾರಿ,

89
00:09:18,558 --> 00:09:21,353
ನೀನು ನನಗಾಗಿ ಏನಾದರೂ ಮಾಡಬೇಕು.

90
00:09:21,436 --> 00:09:22,354
ಅಪ್ಪ.

91
00:09:22,437 --> 00:09:24,982
ಡೇವಿಡ್ ನಿಮಗಾಗಿ ಕೆಲಸ ಮಾಡಲ್ಲ
ಅಂತ ನಿಮಗೆ ಗೊತ್ತಲ್ವಾ?

92
00:09:25,065 --> 00:09:28,735
ಡೇವಿಡ್ ಈಗ ನನ್ನನ್ನು
ನಿರಾಕರಿಸುವ ಸ್ಥಿತಿಯಲ್ಲಿಲ್ಲ, ಅಲ್ವಾ?

93
00:09:29,695 --> 00:09:32,739
ನಾನು ಮಾಡುವ ಕೆಲಸದಲ್ಲಿ
ನೀನೆಂದೂ ಆಸಕ್ತಿ ತೋರಿಲ್ಲ.

94
00:09:32,823 --> 00:09:34,825
ಆದರೆ ಅದು ಸುಲಭವಲ್ಲ.

95
00:09:34,908 --> 00:09:38,328
ಎಷ್ಟೊಂದು ಜವಾಬ್ದಾರಿಗಳು, ತುಂಬಾ ತಲೆನೋವು.

96
00:09:40,205 --> 00:09:41,081
ಹೌದು.

97
00:09:42,791 --> 00:09:46,962
ನೀನು ನನಗೊಂದು ಸಹಾಯ ಮಾಡುವ ಭರವಸೆ ಕೊಟ್ಟರೆ,

98
00:09:48,046 --> 00:09:49,548
ನಾನೂ ನಿನಗೆ ಸಹಾಯ ಮಾಡುತ್ತೇನೆ.

99
00:09:50,841 --> 00:09:52,467
ಏನ್ರೀ ಇದು, ನಿಜವಾಗಲೂ...

100
00:09:56,430 --> 00:09:57,681
ಏನು ಸಹಾಯ?

101
00:09:58,307 --> 00:10:00,642
ನೀವು ಸಹಾಯ ಮಾಡಬೇಕಾದಂಥ ವ್ಯಕ್ತಿಯಲ್ಲ
ನನ್ನ ಅಪ್ಪ.

102
00:10:02,936 --> 00:10:04,354
ಅದು ಮುಖ್ಯವೇ?

103
00:10:06,690 --> 00:10:07,858
ನಾನು ಮಾಡುತ್ತೇನೆ.

104
00:10:08,775 --> 00:10:09,776
ಒಳ್ಳೆಯದು.

105
00:10:11,695 --> 00:10:13,363
ಮತ್ತೇನು ಬೇಕು ನಿನಗೆ?

106
00:10:25,792 --> 00:10:27,919
ಡೇವಿಡ್ ಒಲಿವರ್‌ನನ್ನು
ನನ್ನ ವಿರುದ್ಧ ಎತ್ತಿಕಟ್ಟಿದನಾ?

107
00:10:29,463 --> 00:10:31,673
ಅಂದರೆ ಅದಕ್ಕಾಗಿ ನಮ್ಮ ಕುಟುಂಬ ಶ್ರಮಿಸಿದೆವು.

108
00:10:32,466 --> 00:10:34,009
ಅಂದರೆ, ಕಲ್ಪನೆ ಅವರದ್ದೇ,

109
00:10:34,092 --> 00:10:36,970
ಆದರೆ ಅದನ್ನು ಹೇಗೆ ಕೆಲಸ ಮಾಡಿಸಬೇಕಂತ
ನನಗೆ ಗೊತ್ತಿತ್ತು.

110
00:10:37,679 --> 00:10:39,264
ಹಾಗಂತ ನನ್ನ ಕುಟುಂಬವನ್ನು ಒಡೆದುಹಾಕಿದೆಯಾ?

111
00:10:39,890 --> 00:10:41,767
ಬೇಜಾರಾಗುತ್ತೆ, ಅಲ್ವಾ?

112
00:10:42,851 --> 00:10:46,605
ಡಾಸನ್ ಹತ್ತಿರ ಅವನು ದೀರ್ಘಕಾಲದ ಆಟ
ಆಡುತ್ತಿರಬಹುದು, ಅವನಿಗೆ ತರಬೇತಿ ಕೊಟ್ಟಂತೆ.

113
00:10:46,688 --> 00:10:47,522
ನೀನು...

114
00:10:48,357 --> 00:10:49,608
ನೀನು ಅವನಿಗೆ ತರಬೇತಿ ಕೊಡಲಿಲ್ಲ.

115
00:10:49,691 --> 00:10:51,234
ನೀನು ಅವನನ್ನು ಹಾಳುಮಾಡಿದೆ.

116
00:10:51,318 --> 00:10:53,737
ನನ್ನನ್ನು ಕಾಪಾಡಲು
ಒಲಿವರ್ ಏನು ಬೇಕಾದರೂ ಮಾಡುತ್ತಾನೆ.

117
00:10:53,820 --> 00:10:54,905
ಕ್ಯಾಡಿಸ್‌ನ ರಕ್ಷಿಸಲು.

118
00:10:54,988 --> 00:10:57,074
ಒಲಿವರ್‌ಗೆ ಕ್ಯಾಡಿಸ್ ಬಗ್ಗೆ ಕಾಳಜಿ ಇಲ್ಲ.

119
00:10:57,949 --> 00:11:00,285
ನಿನಗೆ ಹತ್ತಿರವಾಗಿರಬಹುದು
ಎಂದು ಸೇರಿಕೊಂಡ ಅಷ್ಟೇ.

120
00:11:01,161 --> 00:11:02,662
ಅವನಿಗೆ ಕ್ಯಾಡಿಸ್ ಕಂಡರೆ ಆಗಲ್ಲ.

121
00:11:02,746 --> 00:11:04,873
ನಿನಗೆ ಅದರ ಮೇಲೆ ಅವನಿಗಿಂತ ಹೆಚ್ಚು ಪ್ರೀತಿ ಇದೆ.

122
00:11:05,582 --> 00:11:08,502
ರೆಬೆಕ್ಕಾ, ನೀನೇನು ಹೇಳುತ್ತಿರುವೆ
ಅಂತ ನಿನಗೆ ಗೊತ್ತಿಲ್ಲ.

123
00:11:10,045 --> 00:11:11,463
ಕ್ಯಾಡಿಸ್ ಒಂದು ವಿಷಯ.

124
00:11:12,130 --> 00:11:13,465
ನಾನು ಒಲಿವರ್‌ನ ಪ್ರೀತಿಸುತ್ತೇನೆ.

125
00:11:14,257 --> 00:11:16,426
ನಾನು ಇದುವರೆಗೆ ಮಾಡಿರುವುದೆಲ್ಲವೂ ಅವನಿಗಾಗಿಯೇ.

126
00:11:16,510 --> 00:11:17,844
ಕ್ಯಾಡಿಸ್ ಅವನಿಗಾಗಿಯೇ.

127
00:11:19,096 --> 00:11:20,514
ಅವನು ಮೃದು, ಅದು ನನಗೆ ತಿಳಿದಿದೆ.

128
00:11:20,597 --> 00:11:22,974
ಈ ಜಗತ್ತು ಅವನಂತಹ ಜನರಿಗೆ ನಿರ್ಮಾಣವಾಗಿಲ್ಲ.

129
00:11:23,058 --> 00:11:25,143
ಆದರೆ ನಾನು ಯೋಚಿಸಿದೆ, "ಪರವಾಗಿಲ್ಲ,

130
00:11:25,227 --> 00:11:26,728
ನಾನು ಅವನಿಗೆ ಜಗತ್ತನ್ನು ನೀಡಬಲ್ಲೆ."

131
00:11:28,188 --> 00:11:30,857
ಅವನ ಪೋರ್ಷೆಯನ್ನು ಸ್ಫೋಟಿಸಿದೆವು,
ಅದು ನೀನೇ ಮಾಡಿಸಿದ್ದು ಅಂದುಕೊಂಡಿದ್ದಾನೆ.

132
00:11:30,941 --> 00:11:33,318
ಅದಕ್ಕಾಗಿಯೇ ಅವನು ಡಾಸನ್ ಬಳಿ ಹೋದ.

133
00:11:33,402 --> 00:11:35,695
ತನ್ನ ತಾಯಿಯೇ ತನ್ನನ್ನು ಕೊಲ್ಲಲು
ಯತ್ನಿಸಿದಳು ಅಂದುಕೊಂಡಿದ್ದಾನೆ.

134
00:11:42,452 --> 00:11:43,453
ಎದ್ದೇಳು.

135
00:11:59,553 --> 00:12:01,054
ನೀನು ಅವನನ್ನು ಕಳೆದುಕೊಂಡೆ, ಜೂನೋ.

136
00:12:11,982 --> 00:12:14,526
ಈಗಲಾದರೂ ನಿನ್ನ ಉರಿಯುತ್ತಿರುವ
ಸಾಮ್ರಾಜ್ಯವನ್ನು ನೋಡಿಕೋ.

137
00:12:15,318 --> 00:12:16,736
ಈಗ ಅದು ಬೇಕಾಗಿಲ್ಲ.

138
00:12:18,738 --> 00:12:20,115
ನನಗೆ ಬೇಕಿರುವುದು ನೀನಷ್ಟೇ.

139
00:12:26,496 --> 00:12:28,165
ನನಗೆ ಒಂದು ವಿಷಯ ತಿಳಿಯಬೇಕು, ಡೇವಿಡ್.

140
00:12:28,832 --> 00:12:32,002
ರೆಬೆಕ್ಕಾ, ಅವಳನ್ನು ಅಪಹರಿಸಿದರಾ, ಅಥವಾ--

141
00:12:32,085 --> 00:12:33,628
ಅಥವಾ ಅವಳೇ ಅವರೊಂದಿಗೆ ಹೋದಳೇ?

142
00:12:36,131 --> 00:12:38,425
ಅವಳನ್ನು ಕಾಪಾಡಲು
ನಿಮ್ಮ ಜೀವವನ್ನು ಪಣಕ್ಕಿಡುವ ಮೊದಲು,

143
00:12:39,092 --> 00:12:41,219
ಅವಳು ನಿಮ್ಮೊಂದಿಗೆ
ಬರುತ್ತಾಳೆಂದು ಖಚಿತಪಡಿಸಿಕೊಳ್ಳಿ.

144
00:12:45,765 --> 00:12:47,184
ಅವಳನ್ನು ಅಪಹರಿಸಿದರು.

145
00:12:48,018 --> 00:12:50,520
ನಾನು ಅವಳನ್ನು ಕಾಪಾಡಲಿಲ್ಲವಾದ್ದರಿಂದ
ಅವಳನ್ನು ಅಪಹರಿಸಿದರು.

146
00:12:52,606 --> 00:12:54,483
ನಾನು ಅವಳನ್ನು ಮತ್ತೆ ಪತ್ತೆಹಚ್ಚಬೇಕು.

147
00:13:49,829 --> 00:13:51,581
ವಾಹ್. ಎಂತಹ ಆತಿಥ್ಯ.

148
00:13:54,918 --> 00:13:57,045
ನಮ್ಮಪ್ಪ ನನಗಾಗಿ ಬರುತ್ತಾರೆ ಅಂತ ಗೊತ್ತಲ್ವಾ?

149
00:13:58,046 --> 00:13:59,756
ನಿನಗೆ ಅದೇ ಬೇಕಾ?

150
00:13:59,839 --> 00:14:01,800
ನಿಮ್ಮಪ್ಪ ನಿನ್ನನ್ನು ಕಾಪಾಡಬೇಕಾ?

151
00:14:03,009 --> 00:14:04,302
ನಾನು ಮನೆಗೆ ಹೋಗಬೇಕಷ್ಟೆ.

152
00:14:04,844 --> 00:14:05,929
ಅದು ಎಲ್ಲಿದೆ?

153
00:14:06,429 --> 00:14:09,391
ಡೇವಿಡ್ ಮತ್ತು ಅವನ ಹೊಸ ಹೆಂಡತಿ
ಮತ್ತು ಅವನ ಹೊಸ ಮಗಳೊಂದಿಗೆ?

154
00:14:10,559 --> 00:14:12,686
ಡೇವಿಡ್ ನಿನ್ನ ತಂದೆಯಾಗಿರಬಹುದು,

155
00:14:12,769 --> 00:14:14,020
ಆದರೆ ನಾನು ಕುಟುಂಬ.

156
00:14:15,355 --> 00:14:17,774
ನೀನು ಯಾವಾಗಲೂ ನನಗೆ ಮಗಳಂತೆ ಇದ್ದೆ.

157
00:14:21,194 --> 00:14:23,321
ಅದಕ್ಕಾಗಿ ನಾನು ನಿನಗೆ ಧನ್ಯವಾದ ಹೇಳಬೇಕೇ?

158
00:14:24,406 --> 00:14:26,658
ನನಗೆ ಅಪ್ಪ ಇಲ್ಲದಿರಲು ನೀನೇ ಕಾರಣ.

159
00:14:26,741 --> 00:14:30,036
ನಾನಾ? ನಾನು ಅವನಿಗೆ ಮೋಸ ಬಗೆದೆ,
ಸರಿ, ನಾನು ಅದನ್ನು ಒಪ್ಪುತ್ತೇನೆ.

160
00:14:30,120 --> 00:14:31,997
ಆದರೆ ತನ್ನ ಸಾವಿನ ನಾಟಕವಾಡಿ

161
00:14:32,080 --> 00:14:35,250
ಒಂಬತ್ತು ವರ್ಷಗಳ ಕಾಲ ತಪ್ಪಿಸಿಕೊಂಡಿದ್ದು ಅವನೇ.

162
00:14:35,333 --> 00:14:38,044
ಅವನಷ್ಟು ಸಾಮರ್ಥ್ಯ ಇರುವವನು,
ನಿನಗಾಗಿ ಯಾರನ್ನಾದರೂ ಕಳಿಸಬಹುದಿತ್ತು.

163
00:14:38,128 --> 00:14:39,296
ನನ್ನನ್ನು ರಕ್ಷಿಸುತ್ತಿದ್ದರು.

164
00:14:39,379 --> 00:14:42,757
ಹೌದಾ, ಅಥವಾ ಅವನು ರಕ್ಷಿಸುತ್ತಿದ್ದದ್ದು
ಅವನ ಹೊಸ ಮಗಳನ್ನಾ?

165
00:14:48,054 --> 00:14:49,681
ಅವರು ನನಗಾಗಿ ಹಿಂತಿರುಗಿದರು.

166
00:14:50,348 --> 00:14:53,184
ನನ್ನನ್ನು ನಿಮ್ಮಿಂದ ದೂರ ತಪ್ಪಿಸಲು
ಎಲ್ಲವನ್ನೂ ಪಣಕ್ಕಿಟ್ಟರು.

167
00:14:53,268 --> 00:14:55,312
ಯಾಕೆಂದರೆ ನಿನ್ನನ್ನು ಸರಿಮಾಡಲೆತ್ನಿಸಿದ.

168
00:14:58,690 --> 00:15:02,235
ನನ್ನ ಮಾತು ಕೇಳು, ರೆಬೆಕ್ಕಾ.
ನಿನ್ನದೇನೂ ತಪ್ಪಿಲ್ಲ.

169
00:15:06,698 --> 00:15:07,907
ಖಂಡಿತ ಇದೆ.

170
00:15:09,993 --> 00:15:12,287
ನಿನಗೆ ಅನುಕೂಲವಾಗುವ ರೀತಿಯಲ್ಲಿ
ನಾನು ನೊಂದಿದ್ದೇನೆ ಅಷ್ಟೇ.

171
00:15:12,370 --> 00:15:15,248
ನೀನು ನೊಂದಿಲ್ಲ. ನೀನು ಅಸಾಧಾರಣಳು.

172
00:15:16,374 --> 00:15:19,294
ಅದು ಅವನಿಗೆ ಕಾಣದಿದ್ದರೆ,
ಅವನಿಗೆ ನಿಜವಾಗಿ ನಿನ್ನ ಮೇಲೆ ಪ್ರೀತಿ ಇಲ್ಲ.

173
00:15:19,377 --> 00:15:23,006
ನೀನು ಯಾವುದೋ ಪೆದ್ದ ಹುಡುಗಿಯಂತಿದ್ದರೇನೇ
ಅವನಿಗೆ ಇಷ್ಟ.

174
00:15:29,638 --> 00:15:30,722
ನನ್ನನ್ನು ಪ್ರೀತಿಸುತ್ತೀಯಾ?

175
00:15:34,142 --> 00:15:35,226
ಹೌದು.

176
00:15:39,230 --> 00:15:42,484
ನಾನೇನಂದುಕೊಂಡಿದ್ದೆನೋ ನೀನು ಹಾಗೆಯೇ ಆಗಿರುವೆ.

177
00:15:51,576 --> 00:15:53,995
ನಾನು ಮಾಡುವುದು ನನ್ನಿಂದ ಆಗದೇ ಇದ್ದಿದ್ದರೆ?

178
00:15:54,579 --> 00:15:56,456
ನೀನು ಮಾಡುವ ಕೆಲಸ ನಿನ್ನಿಂದ ಆಗದೇ ಇದ್ದಿದ್ದರೆ,

179
00:15:56,539 --> 00:15:59,125
ಕನ್ನಡಿಯಲ್ಲಿ ನಿನ್ನನ್ನು ನೀನೇ
ಗುರುತು ಹಿಡಿಯುತ್ತಿರಲಿಲ್ಲ.

180
00:16:01,670 --> 00:16:03,922
ಜಂಗ್ ಕುಟುಂಬದ ಕಳಂಕ ನೀನಾಗಬಹುದು,

181
00:16:04,005 --> 00:16:06,758
ಅಥವಾ ನೀನು ನನ್ನೊಂದಿಗೆ ಬರಬಹುದು.

182
00:16:10,011 --> 00:16:11,346
ಅಲ್ಲಿ ಒಂದು ಜೆಟ್ ಕಾಯುತ್ತಿದೆ.

183
00:16:11,930 --> 00:16:14,516
ಅದನ್ನು ಹತ್ತೋಣ. ಡಾಸನ್ ನಮ್ಮನ್ನು
ಮುಟ್ಟಲು ಸಾಧ್ಯವಿಲ್ಲದೆಡೆ ಹೋಗೋಣ.

184
00:16:14,599 --> 00:16:16,434
ಮರುಗುಂಪು ಮಾಡೋಣ. ಹೊಸದಾಗಿ ಪ್ರಾರಂಭಿಸೋಣ.

185
00:16:17,602 --> 00:16:18,436
ಒಟ್ಟಿಗೆ.

186
00:16:27,237 --> 00:16:28,863
ನಾನು ಒಪ್ಪದಿದ್ದರೆ?

187
00:16:29,614 --> 00:16:31,241
ನೀನು ಹಾಗೆ ಮಾಡಲ್ಲ ಅಂದುಕೊಳ್ಳುವೆ.

188
00:16:54,973 --> 00:16:56,349
ನನಗೂ ನಿನ್ನ ನೆನಪಾಗುತ್ತಿತ್ತು.

189
00:16:58,309 --> 00:16:59,519
ಜೂನೋ.

190
00:17:00,103 --> 00:17:01,104
ಹಾಂ.

191
00:17:02,105 --> 00:17:03,648
ಕ್ಯಾಡಿಸ್‌ಗೆ ಎಫ್‌ಬಿಐ ಬರುತ್ತಿದ್ದಾರೆ.

192
00:17:04,190 --> 00:17:05,942
ನಾವೀಗಲೇ ಹೋಗಬೇಕು.

193
00:17:28,173 --> 00:17:29,591
ನೀನಿನ್ನೂ ಇಲ್ಲೇ ಇದ್ದೀಯ.

194
00:17:31,384 --> 00:17:32,927
ನನ್ನ ಕೆಲಸ ಇನ್ನೂ ಮುಗಿದಿಲ್ಲ.

195
00:18:23,895 --> 00:18:26,314
ನಿನ್ನ ಮಗಳನ್ನು ಅಪಹರಿಸಿದವರು...

196
00:18:26,397 --> 00:18:27,607
ಅವರು ಯಾರಂತ ಗೊತ್ತಾ?

197
00:18:27,690 --> 00:18:28,525
ಹೌದು.

198
00:18:28,608 --> 00:18:33,613
ಅದಕ್ಕಿಂತ ಮುಖ್ಯವಾಗಿ,
ಅವರು ಎಲ್ಲಿಗೆ ಹೋಗುತ್ತಿದ್ದಾರೆ ಅಂತ ಗೊತ್ತಿದೆ.

199
00:18:34,864 --> 00:18:37,951
ಅವಳು ಇಂಚಿಯಾನ್‌ನಲ್ಲಿ
ತನ್ನ ಖಾಸಗಿ ಜೆಟ್‌ಗೆ ಹೋಗುತ್ತಿದ್ದಾಳೆ.

200
00:18:41,287 --> 00:18:43,039
ಹಾಗಾದರೆ ಅವರನ್ನೆಲ್ಲ ಕೊಲ್ಲು,

201
00:18:43,122 --> 00:18:46,960
ಮತ್ತು ನನ್ನ ಮಗಳನ್ನು ತುಂಬಾ ಕಾಯುವಂತೆ ಮಾಡಬೇಡ.

202
00:18:47,502 --> 00:18:49,546
ಅದನ್ನೇ ಯೋಚಿಸುತ್ತಿದ್ದೇನೆ.

203
00:19:01,015 --> 00:19:02,767
ನನ್ನ ಹೆಸರು ಡೇವಿಡ್ ಜಂಗ್.

204
00:19:03,893 --> 00:19:06,229
ಕೆಲವು ದುಷ್ಟರು ನನ್ನ ಮಗಳನ್ನು ಅಪಹರಿಸಿದರು,

205
00:19:06,312 --> 00:19:07,856
ನಾನು ಅವಳನ್ನು ವಾಪಸ್ ಕರೆತರಬೇಕು.

206
00:19:09,148 --> 00:19:10,483
ನನಗೆ ನಿಮ್ಮ ಸಹಾಯ ಬೇಕು.

207
00:19:23,329 --> 00:19:24,831
ಚಾಕು ಚೆನ್ನಾಗಿದೆ.

208
00:19:26,875 --> 00:19:28,793
ನನಗಾಗಿ ಚೂಪು ಮಾಡಲು ಹೇಳಿದಳಾ?

209
00:19:40,388 --> 00:19:41,973
ಅವರ ಬಗ್ಗೆ ನಿನಗೆ ಕನಸು ಬೀಳುತ್ತಾ?

210
00:19:43,308 --> 00:19:44,225
ಯಾರು?

211
00:19:51,149 --> 00:19:52,066
ಇಲ್ಲ.

212
00:19:54,319 --> 00:19:55,486
ನಾನು ಕನಸು ಕಾಣುವುದಿಲ್ಲ.

213
00:20:27,352 --> 00:20:28,770
ಎಫ್‌ಬಿಐ ಬಂದಿದ್ದಾರೆ.

214
00:20:34,734 --> 00:20:36,819
ಸೆನೆಟರ್ ಡಾಸನ್
ನಮ್ಮ ಕಛೇರಿಯ ಮೇಲೆ ದಾಳಿ ಮಾಡಿದರು.

215
00:20:47,372 --> 00:20:49,332
ಪ್ರತಿಯೊಂದು ಫೈಲ್, ಜನರೇ.

216
00:20:49,707 --> 00:20:51,793
ಪ್ರತಿ ಹಾರ್ಡ್ ಡ್ರೈವ್ ಮತ್ತು ಸೆಲ್ ಫೋನ್.

217
00:21:01,344 --> 00:21:04,305
ಕಾಗದದ ಚೂರುಗಳ ಮೇಲೆ ಬರೆದ ಪ್ರತಿ ಟಿಪ್ಪಣಿ.

218
00:21:05,348 --> 00:21:06,599
ಎಲ್ಲವನ್ನೂ ತೆಗೆದುಕೊಳ್ಳುತ್ತೇವೆ.

219
00:21:14,941 --> 00:21:15,775
ಹಾಂ.

220
00:21:19,362 --> 00:21:20,530
ಆಕೆಗೆ ತಿಳಿಸುತ್ತೇನೆ.

221
00:21:22,699 --> 00:21:25,201
ಒಲಿವರ್‌ನ ನ್ಯಾಯಾಂಗ ಬಂಧನಕ್ಕೆ
ಇಂದು ಸ್ಥಳಾಂತರಿಸಲಾಗುತ್ತಿದೆ.

222
00:21:51,477 --> 00:21:52,687
ಬೆಂಗಾವಲು ಪಡೆ ಒಳಬರುತ್ತಿದೆ.

223
00:21:52,770 --> 00:21:55,314
-ನಿಮ್ಮ ಸ್ಥಳಕ್ಕೆ ಮೂರು ನಿಮಿಷಗಳು.
-ತಿಳಿಯಿತು.

224
00:22:14,250 --> 00:22:16,169
ಒಲಿವರ್ ಬಗ್ಗೆ ನನಗೆ ವಿಷಾದವಿದೆ.

225
00:22:17,670 --> 00:22:19,213
ಇಲ್ಲ, ನಿನಗಿಲ್ಲ.

226
00:22:22,467 --> 00:22:25,803
ನಿನ್ನನ್ನು ಒಂದು ಕೇಳಿದರೆ,
ನನಗೆ ಸತ್ಯವನ್ನು ಹೇಳುವೆಯಾ?

227
00:22:30,099 --> 00:22:32,769
ನನ್ನ ತಂದೆಯ ಮೇಲೆ ಸೇಡು ತೀರಿಸಿಕೊಳ್ಳಲು
ನನ್ನನ್ನು ಕರೆದೊಯ್ಯುತ್ತಿರುವೆಯಾ?

228
00:22:35,730 --> 00:22:37,190
ನಾನು ಈಗಾಗಲೇ ಒಲಿವರ್‌ನ ಕಳೆದುಕೊಂಡೆ.

229
00:22:38,024 --> 00:22:39,734
ನಾನು ನಿನ್ನನ್ನೂ ಕಳೆದುಕೊಳ್ಳುವುದಿಲ್ಲ.

230
00:23:10,348 --> 00:23:11,766
ಅಲ್ಲಿ ಸಮಸ್ಯೆ ಏನು?

231
00:23:11,849 --> 00:23:15,061
ಸಂಚಾರ ದೀಪಗಳು ಕೆಲಸ ಮಾಡುತ್ತಿಲ್ಲ ಅನಿಸುತ್ತೆ.
ಏನು ಮಾಡೋಣ?

232
00:23:18,773 --> 00:23:20,024
ಏನು ಮಾಡೋಣ ಅನ್ನುವೆ?

233
00:23:20,108 --> 00:23:22,193
ನಿಲ್ಲಿಸುವುದು ಬೇಡ. ಅರ್ಥ ಆಯ್ತಾ?

234
00:23:22,276 --> 00:23:23,694
ನಾವು ಬೇರೆ ದಾರಿಯಲ್ಲಿ ಹೋಗಬೇಕು.

235
00:23:23,778 --> 00:23:27,657
ನಮ್ಮ ಬಲಕ್ಕೆ ಇದಕ್ಕೆ ಸಮಾನಾಂತರವಾದ
ಒಂದು ರಸ್ತೆ ಇದೆ. ನನ್ನನ್ನು ಅನುಸರಿಸಿ.

236
00:23:56,102 --> 00:23:58,563
ಅವರು ಈಗ ಎರಡನೆಯ ರಸ್ತೆಯತ್ತ ಹೋಗುತ್ತಿದ್ದಾರೆ.

237
00:23:58,646 --> 00:23:59,689
ತಂಡ ಒಂದು, ಹೋಗಿ.

238
00:23:59,772 --> 00:24:01,190
ರಸ್ತೆಯನ್ನು ತಡೆಯಿರಿ.

239
00:24:50,281 --> 00:24:52,116
ನೀನು ನನ್ನ ತಂದೆಯನ್ನು
ಪ್ರೀತಿಸುತ್ತಿದ್ದೆ, ಅಲ್ಲವೇ?

240
00:24:55,328 --> 00:24:56,662
ಏನಾಯಿತು?

241
00:24:58,414 --> 00:25:02,168
ಡೇವಿಡ್ ಪ್ರಪಂಚದ ಬಗ್ಗೆ...
ನಿಷ್ಕಪಟ ದೃಷ್ಟಿಕೋನವನ್ನು ಹೊಂದಿದ್ದಾನೆ.

242
00:25:02,877 --> 00:25:07,089
ಎಲ್ಲವೂ ಇರುವುದಕ್ಕಿಂತ ಉತ್ತಮವಾಗಿದೆ
ಅಂದುಕೊಂಡಿದ್ದಾನೆ, ನಾವು ಉತ್ತಮವಾಗಿದ್ದೇವಂತ.

243
00:25:10,301 --> 00:25:12,428
ಕೆಲವರು ವಾಸ್ತವದಲ್ಲಿ ಬದುಕಬೇಕು.

244
00:25:20,561 --> 00:25:21,562
ಸಿದ್ಧರಾಗಿರಿ.

245
00:25:21,646 --> 00:25:22,772
ತಿಳಿಯಿತು.

246
00:25:27,777 --> 00:25:28,736
ಮಾತನಾಡು, ಶಿನ್.

247
00:25:28,819 --> 00:25:31,239
ಅವರು ಬಂದಿದ್ದಾರೆ. ನಾವು ಸಿದ್ಧರಿದ್ದೇವೆ.

248
00:25:31,781 --> 00:25:33,074
ಕಳುಹಿಸು.

249
00:25:41,499 --> 00:25:42,541
ನಮ್ಮನ್ನು ಸುತ್ತುವರೆದಿದ್ದಾರೆ.

250
00:25:42,625 --> 00:25:43,501
ಅದು ಡೇವಿಡ್.

251
00:25:45,628 --> 00:25:47,463
ಹಿಂದಕ್ಕೆ! ಹಿಂದಕ್ಕೆ! ಹಿಂದಕ್ಕೆ!

252
00:25:48,464 --> 00:25:49,715
ಹೋಗು! ಹೋಗು!

253
00:26:02,603 --> 00:26:04,063
ಇಲ್ಲಿಂದ ನಮ್ಮನ್ನು ತಪ್ಪಿಸು.

254
00:26:21,372 --> 00:26:24,542
ಅವರು ನುಗ್ಗಿದರು, ಅವರು ನುಗ್ಗಿದರು!
ಅವರನ್ನು ತಡೆಯಲು ಪ್ರಯತ್ನಿಸುವೆ.

255
00:26:58,868 --> 00:26:59,994
ಹಿಂದೆ, ಹಿಂದೆ, ಹಿಂದಕ್ಕೆ!

256
00:27:53,881 --> 00:27:55,341
ಏನಾದರೂ ಸೂಚನೆ?

257
00:27:55,841 --> 00:27:57,385
ಕೆಟ್ಟದಾಗಿ ಸಾಯಬೇಡ.

258
00:28:26,205 --> 00:28:27,039
ದೇವರೇ.

259
00:28:59,321 --> 00:29:00,823
ಕದಲಬೇಡ!

260
00:29:53,542 --> 00:29:56,921
ಇದೇ ಕಣೋ ನಿನ್ನ ಅಂತ್ಯ, ಬೋಳಿಮಗನೇ.

261
00:32:04,965 --> 00:32:06,508
ಬಿಡು!

262
00:33:19,331 --> 00:33:20,374
ನಿನಗೇನಾಗಿಲ್ಲ ತಾನೆ?

263
00:33:22,042 --> 00:33:22,918
ಹಾಂ.

264
00:33:25,254 --> 00:33:26,255
ಗನ್ ಎಲ್ಲಿದ್ದಾನೆ?

265
00:33:27,172 --> 00:33:28,173
ಅವನು ಸತ್ತ.

266
00:33:33,095 --> 00:33:34,388
ನಿನ್ನ ಕಥೆ ಮುಗಿಯಿತು, ಜೂನೋ.

267
00:33:35,013 --> 00:33:36,432
ಕ್ಯಾಡಿಸ್ ಮುಗಿಯಿತು.

268
00:33:39,143 --> 00:33:40,686
ಕ್ಯಾಡಿಸ್ ಮುಗಿದಿರಬಹುದು.

269
00:33:41,520 --> 00:33:42,479
ಹೆಸರಿಗೆ.

270
00:33:43,230 --> 00:33:44,732
ಆದರೆ ಅದು ಕೇವಲ ಹೆಸರಷ್ಟೇ.

271
00:33:45,357 --> 00:33:46,567
ನನ್ನ ಬಳಿ ಹೆಚ್ಚು ಇವೆ.

272
00:33:46,650 --> 00:33:48,110
ನೀನು ನನ್ನ ಕುಟುಂಬದ ಹಿಂದೆ ಬಿದ್ದೆ.

273
00:33:48,193 --> 00:33:49,737
ನೀನೂ ನನ್ನ ಕುಟುಂಬದ ಹಿಂದೆ ಬಿದ್ದೆ.

274
00:33:51,572 --> 00:33:53,532
ಈಗಲೂ ನಾವು ರಾಜಿ ಮಾಡಿಕೊಳ್ಳಬಹುದು.

275
00:33:54,366 --> 00:33:57,161
ನಾವು ಒಟ್ಟಿಗೆ ಮಾಡಬಹುದಾದ
ಅದ್ಭುತಗಳ ಬಗ್ಗೆ ಯೋಚಿಸು.

276
00:33:57,244 --> 00:33:59,955
ನೀನು, ನಾನು, ರೆಬೆಕ್ಕಾ,

277
00:34:00,038 --> 00:34:01,248
ನಮ್ಮನ್ನು ಯಾರೂ ತಡೆಯಲಾರರು.

278
00:34:01,331 --> 00:34:02,708
ನನ್ನ ಕುಟುಂಬ!

279
00:34:06,795 --> 00:34:08,756
ನೀನು ನನ್ನನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲಲ್ಲ.

280
00:34:09,298 --> 00:34:11,467
ನಂತರ ನೀನು ಪೊಲೀಸರನ್ನೂ ಎದುರಿಸಬೇಕಾಗುತ್ತದೆ.

281
00:34:11,550 --> 00:34:13,177
-ರೆಬೆಕ್ಕಾ, ನನ್ನ ಹಿಂದೆ ಬಾ.
-ಇಲ್ಲ.

282
00:34:13,260 --> 00:34:14,219
ಬಾ.

283
00:34:15,137 --> 00:34:16,472
ಅವಳು ಸಾಯುವುದು ಬೇಡ.

284
00:34:17,848 --> 00:34:20,601
ಅವಳನ್ನು ಬಿಟ್ಟರೆ, ಮತ್ತೆ ಗುಂಪು ಕಟ್ಟಿಕೊಂಡು
ನಮ್ಮ ಹಿಂದೆ ಬರುತ್ತಾಳೆ.

285
00:34:20,726 --> 00:34:22,478
ನಾವು ಎಂದಿಗೂ ಸುರಕ್ಷಿತವಾಗಿರುವುದಿಲ್ಲ.
ನಿಂಗೊತ್ತು.

286
00:34:22,561 --> 00:34:23,979
ಅವಳು ನನ್ನ ಒಂದು ಭಾಗ, ಅಪ್ಪ.

287
00:34:25,397 --> 00:34:27,566
ಇದಕ್ಕೆ ಅರ್ಥವಿಲ್ಲ ಅಂತ ನನಗೆ ಗೊತ್ತು...

288
00:34:29,067 --> 00:34:30,569
ಆದರೆ ಅವಳು ನನ್ನ ಒಂದು ಭಾಗ.

289
00:34:32,196 --> 00:34:33,405
ಅವಳು ಬದುಕಬೇಕು.

290
00:34:35,908 --> 00:34:38,660
-ದಯವಿಟ್ಟು.
-ಅವಳು ನಿನ್ನನ್ನು ಹೋಗಲು ಬಿಡಲ್ಲ.

291
00:34:39,661 --> 00:34:40,788
ಇರಬಹುದು.

292
00:34:42,956 --> 00:34:44,333
ಆದರೆ ನಾನು ಅವಳಲ್ಲ.

293
00:34:47,544 --> 00:34:48,754
ನೀನೂ ಅಲ್ಲ.

294
00:34:51,799 --> 00:34:53,383
ಅಪ್ಪ, ದಯವಿಟ್ಟು.

295
00:34:53,467 --> 00:34:54,843
ದಯವಿಟ್ಟು ಬೇಡ.

296
00:35:06,688 --> 00:35:08,398
ಈಗಲೂ ಅವಕಾಶ ಇದೆ.

297
00:35:12,236 --> 00:35:13,987
ನನ್ನ ಉತ್ತರ ಈಗಲೂ ಅದೇ.

298
00:35:16,156 --> 00:35:17,574
ಸಿಗುತ್ತಾ ಇರುತ್ತೇನೆ, ಡೇವಿಡ್.

299
00:35:22,496 --> 00:35:24,623
ಅವರು ಮತ್ತೆ ನಿನ್ನ ಹಿಂದೆ
ಬೀಳುವಂತೆ ಮಾಡಿಕೊಳ್ಳಬೇಡ, ಜೂನೋ.

300
00:36:11,587 --> 00:36:12,421
ಹೇ...

301
00:36:17,426 --> 00:36:18,594
ಇದು ಚೆನ್ನಾಗಿದೆ.

302
00:36:25,642 --> 00:36:27,144
ಅವಳು ನಿನಗೆ ಏನು ಹೇಳಿದಳು?

303
00:36:28,061 --> 00:36:29,062
ಜೂನೋ.

304
00:36:29,813 --> 00:36:31,607
ಅವಳು ನಿನ್ನನ್ನು ಸೆರೆಹಿಡಿದಿದ್ದಾಗ.

305
00:36:31,815 --> 00:36:34,943
"ಅಪ್ಪ ಪ್ರಪಂಚವನ್ನು ಕಾಪಾಡಿದ" ಎಂಬ
ನಿನ್ನ ಭ್ರಮೆಯನ್ನು ನಾನು ಹಾಳುಮಾಡಲ್ಲ,

306
00:36:35,027 --> 00:36:36,403
ಆದರೆ ನಾನು ಯಾರ ಸೆರೆಯಾಗಿರಲಿಲ್ಲ.

307
00:36:37,070 --> 00:36:40,115
ನಾವು ಈ ಘಟನೆಯ ಬಗ್ಗೆ
ವೃತ್ತಿಪರರಂತೆ ಚರ್ಚಿಸಬೇಕು.

308
00:36:40,198 --> 00:36:41,366
ನಾನು ನಿನ್ನ ಸ್ವತ್ತಲ್ಲ.

309
00:36:42,075 --> 00:36:43,368
ನೀನು ಅವಳ ಸ್ವತ್ತಾ?

310
00:36:49,708 --> 00:36:51,043
ನೀನು ನನಗೆ ಹೇಳಬೇಕಾಗಿಲ್ಲ.

311
00:36:51,835 --> 00:36:52,878
ನಿಜವಾಗಿ ಹೇಳಿದೆ.

312
00:36:57,215 --> 00:36:59,134
ಜೂನೋ ನನಗೆ ಏನನ್ನೂ ಹೇಳಲಿಲ್ಲ.

313
00:36:59,843 --> 00:37:01,845
ಕೆಲವು ಗಂಟೆಗಳು
ನನ್ನನ್ನು ಒಂದು ಕೋಣೆಯಲ್ಲಿ ಇರಿಸಿದ್ದರು.

314
00:37:01,929 --> 00:37:03,847
ನನ್ನನ್ನು ಮೇಜಿಗೆ ಕೈಕೋಳ ಹಾಕಿ ಕಟ್ಟಿಹಾಕಿದ್ದಳು.

315
00:37:03,931 --> 00:37:06,183
ನಂತರ ಅವರು ನನ್ನನ್ನು
ಮೋಟರ್‌ಕೇಡ್‌ಗೆ ಕರೆದೊಯ್ದರು.

316
00:37:07,893 --> 00:37:09,519
ಕೈಕೋಳವಿಲ್ಲದೆ.

317
00:37:15,025 --> 00:37:16,276
ರಕ್ಷಿಸಿದ್ದಕ್ಕೆ ಧನ್ಯವಾದ.

318
00:37:18,320 --> 00:37:19,780
ತಡವಾದರೂ ಮುಗಿಯಿತಲ್ಲ.

319
00:37:54,147 --> 00:37:56,066
ಸೆನೆಟರ್ ಡಾಸನ್ ಗೆಲುವನ್ನು ಆಚರಿಸುತ್ತಿದ್ದಾರೆ.

320
00:37:56,149 --> 00:37:58,193
ಸಿಎನ್ಎನ್ ಆಗಲೇ
ಮುಖ್ಯಾಂಶಗಳನ್ನು ಬಿತ್ತರಿಸುತ್ತಿದೆ.

321
00:37:58,777 --> 00:38:02,155
"ಖಾಸಗಿ ಪತ್ತೇದಾರಿ ಸಂಸ್ಥೆ ಕ್ಯಾಡಿಸ್ ಮೇಲೆ
ಹತ್ಯೆಗಳ ತನಿಖೆ."

322
00:38:04,199 --> 00:38:07,703
ಇದನ್ನು ವೈಟ್ ಹೌಸ್‌ವರೆಗೂ
ಕೊಚ್ಚಿಕೊಂಡು ಹೋಗುತ್ತಾನೆ.

323
00:38:07,786 --> 00:38:10,998
ನಾವು ಟ್ಯಾಂಜಿಯರ್ಸ್‌ನಲ್ಲಿ ಇಳಿಯುವ ಹೊತ್ತಿಗೆ
ಒಂದು ತಂತ್ರವನ್ನು ಹೊಂದಿರಬೇಕು.

324
00:38:11,081 --> 00:38:12,791
ಕ್ಯಾಡಿಸ್ ನಾಶವಾಗಲಿ.

325
00:38:14,167 --> 00:38:15,669
ನಾನು ಹೊಸದನ್ನು ನಿರ್ಮಿಸುತ್ತೇನೆ,

326
00:38:16,753 --> 00:38:20,716
ಎಲ್ಲೋ ಉತ್ತಮವಾದ ಕಡೆ, ಅಲ್ಲಿ ನಾನು
ಅಮೆರಿಕನ್ ಕಾನೂನಿಗೆ ಬದ್ಧಳಾಗಿ ನಟಿಸಬೇಕಿರಲ್ಲ.

327
00:38:26,596 --> 00:38:27,681
ಒಲಿವರ್

328
00:38:28,682 --> 00:38:29,808
ಒಲಿವರ್?

329
00:38:29,891 --> 00:38:30,976
ಅಮ್ಮ?

330
00:38:33,478 --> 00:38:34,896
ಈ ಕರೆಯನ್ನು ರೆಕಾರ್ಡ್ ಮಾಡಲಾಗುತ್ತಿದೆ.

331
00:38:35,355 --> 00:38:36,356
ನನಗೆ ಗೊತ್ತು.

332
00:38:37,649 --> 00:38:39,818
-ನಾನು ನಿನ್ನನ್ನು ಕೇಳಬೇಕು--
-ಅದು ನಾನಲ್ಲ.

333
00:38:41,319 --> 00:38:42,571
ಡೇವಿಡ್ ನಮ್ಮನ್ನು ಮೋಡಿ ಮಾಡಿದ.

334
00:38:45,240 --> 00:38:47,242
ನಾನು ನಿನ್ನನ್ನು ಎಂದಿಗೂ ಹಿಂಸಿಸುವುದಿಲ್ಲ.

335
00:38:50,078 --> 00:38:51,705
ಅಮ್ಮ, ನನ್ನನ್ನು ಕ್ಷಮಿಸು.

336
00:38:54,207 --> 00:38:57,169
ದೇವರೇ, ನನ್ನನ್ನು ಕ್ಷಮಿಸು.
ನಾನು ಏನು ಮಾಡುತ್ತಿದ್ದೇನೆ ಎಂದು ಗೊತ್ತಿಲ್ಲ.

337
00:38:58,253 --> 00:38:59,796
ಏನು ಹೇಳಬೇಕೆಂದು ನನಗೆ ಗೊತ್ತಿಲ್ಲ. ನಾನು--

338
00:38:59,880 --> 00:39:01,339
ಬ್ಯಾರನ್ ಬಗ್ಗೆ ಕ್ಷಮಿಸು.

339
00:39:02,215 --> 00:39:03,050
ಏನು?

340
00:39:03,133 --> 00:39:05,302
ತಪ್ಪು ರೀತಿಯ ತಾಯಿಯಾಗಿದ್ದಕ್ಕಾಗಿ ಕ್ಷಮಿಸು,

341
00:39:05,385 --> 00:39:07,512
ನಿನಗೆ ಬೇಕಾದುದೆಲ್ಲವೂ ಆಗಿಲ್ಲದ್ದಕ್ಕೆ.

342
00:39:09,097 --> 00:39:10,682
ಅದರ ಹತ್ತಿರಕ್ಕೂ ನಾನು ಬರಲಿಲ್ಲ.

343
00:39:13,226 --> 00:39:14,811
ಆದರೆ ನೀನು ಇನ್ನೂ ನನ್ನ ಮಗನೇ.

344
00:39:16,271 --> 00:39:17,481
"ಬ್ಯಾರನ್" ಎಂದು ಹೇಳಿದೆಯಾ?

345
00:39:19,066 --> 00:39:21,693
ನಿನ್ನ ಮೇಲೆ ಕಠೋರವಾಗಿದ್ದೆ ಅಂತ ಗೊತ್ತು,
ಆದರೆ ಅದು...

346
00:39:21,777 --> 00:39:23,153
ಏಕೆಂದರೆ ನೀನು ನನ್ನವನು.

347
00:39:23,236 --> 00:39:24,863
ಏಕೆಂದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ.

348
00:39:24,946 --> 00:39:26,448
ನೀನು ಬಹುಶಃ ನನ್ನನ್ನು ನಂಬುವುದಿಲ್ಲ,

349
00:39:26,531 --> 00:39:29,743
ಮತ್ತು ಅದಕ್ಕೆ ನನಗೆ ಅರ್ಹಳು.
ನೀನು ನನ್ನನ್ನು ದ್ವೇಷಿಸಲು ನಾನು ಅರ್ಹಳು.

350
00:39:29,826 --> 00:39:31,411
ಆದರೆ ನೀನು ಒಂದು ವಿಷಯ ತಿಳಿದುಕೊಳ್ಳಬೇಕು.

351
00:39:31,495 --> 00:39:32,996
ಅಮ್ಮ, ನಿನ್ನ ಮಾತು ನನಗೆ ಕೇಳಿಸುತ್ತಿಲ್ಲ.

352
00:39:33,955 --> 00:39:37,167
ನೀವು ನನಗೆ ಸಾವಿರ ಬಾರಿ ದ್ರೋಹ ಮಾಡಬಹುದು...

353
00:39:37,250 --> 00:39:39,002
ಹಲೋ? ಅಮ್ಮ, ನಾನು ಇಲ್ಲಿದ್ದೇನೆ.

354
00:39:39,086 --> 00:39:41,630
ನಾನು ಎಂದಿಗೂ ನಿನ್ನ ತಾಯಿಯಾಗಿರುತ್ತೇನೆ.

355
00:39:45,258 --> 00:39:46,259
ಹಲೋ?

356
00:39:49,971 --> 00:39:51,306
ಒಲಿವರ್.

357
00:40:32,848 --> 00:40:34,683
ನಾನು ಕಾಲೇಜಿನ ಬಗ್ಗೆ ಯೋಚಿಸಿದೆ, ಗೊತ್ತಾ?

358
00:40:37,644 --> 00:40:41,815
ಕ್ಯಾಡಿಸ್‌ನಲ್ಲಿ ತರಬೇತಿ ಪಡೆಯುತ್ತಿದ್ದಾಗ,
ಊರ ಸುತ್ತಲೂ ವಿದ್ಯಾರ್ಥಿಗಳನ್ನು ನೋಡುತ್ತಿದ್ದೆ,

359
00:40:41,898 --> 00:40:45,235
ಆಗ, "ದೇವರೇ, ಈ ಹೆಡ್ಡರನ್ನು ನೋಡು"
ಅಂತ ಅಂದುಕೊಳ್ಳುತ್ತಿದ್ದೆ.

360
00:40:45,318 --> 00:40:48,780
"ಮನೆಗೆಲಸದ ನಂತರ ಈ ದಡ್ಡ ಮಕ್ಕಳು
ತಮ್ಮ ಹೆತ್ತವರಿಗೆ ಕರೆ ಮಾಡುತ್ತಿದ್ದಾರೆ."

361
00:40:49,990 --> 00:40:51,366
ಅವರ ಮೇಲೆ ನನಗೆ ಹೊಟ್ಟೆಯುರಿಯಾಗಿರಬಹುದು.

362
00:40:52,200 --> 00:40:53,451
ಈಗಲೂ ಕಾಲ ಮಿಂಚಿಲ್ಲ.

363
00:40:53,535 --> 00:40:55,829
-ಅದು ನನಗೆ ಅಲ್ಲ.
-ಹೇ.

364
00:40:55,912 --> 00:40:59,332
ನೀನು ಬುದ್ಧಿವಂತೆ. ನೀನು ಸಮರ್ಥಳು.
ನಿನಗೆ 23 ವರ್ಷ.

365
00:40:59,916 --> 00:41:01,751
ನೀನು ಮಾಡಲಾಗದ್ದು ಹೆಚ್ಚೇನಿಲ್ಲ.

366
00:41:03,837 --> 00:41:05,839
ಅಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಲೇ?

367
00:41:06,339 --> 00:41:07,632
ನಾನು ನಿನಗೆ ಮತ ಹಾಕುತ್ತೇನೆ.

368
00:41:30,947 --> 00:41:32,949
ನಾನು ಅಮೆರಿಕಾಗೆ ಹಿಂದಿರುಗಬಯಸುತ್ತೇನೆ.

369
00:41:33,033 --> 00:41:34,743
ನಾವು ಎಲ್ಎಗೆ ಹೋಗಬಹುದು.

370
00:41:37,037 --> 00:41:39,497
ನಿನಗೆ ಯಾರಾದರೂ ಸೆಲೆಬ್ರಿಟಿಗಳು ಗೊತ್ತಾ?

371
00:41:40,373 --> 00:41:41,416
ಇಲ್ಲ.

372
00:41:41,917 --> 00:41:43,668
ನಿನಗೆ ಯಾರಾದರೂ ವೀಗನ್ ಗೊತ್ತಾ?

373
00:41:43,752 --> 00:41:46,379
ಗೊತ್ತು. ನಾನು ಇರುವ ಕಡೆ ತುಂಬಾ ಜನ ಇದ್ದಾರೆ.

374
00:41:46,463 --> 00:41:49,299
ವೀಗನರು ದುರ್ಬಲ
ಮತ್ತು ತೆಳ್ಳಗೆ ಇದ್ದಾರೆಯೇ?

375
00:41:49,382 --> 00:41:50,383
ಏನು?

376
00:41:50,467 --> 00:41:52,636
-ಹಾಗೇನಿಲ್ಲ.
-ನಿನಗೆ ಹಾಗೆ ಯಾರು ಹೇಳಿದರು?

377
00:41:52,719 --> 00:41:53,845
-ಇಲ್ಲಿ ಬಾ ನೀನು.
-ಹೌದು.

378
00:41:53,929 --> 00:41:55,931
ಎಷ್ಟೊಂದು ಪ್ರಶ್ನೆಗಳನ್ನು ಕೇಳುತ್ತೀಯ.

379
00:41:56,473 --> 00:41:57,974
ಹೌದು, ಅವಳಿಗೆ ಕುತೂಹಲ.

380
00:41:58,808 --> 00:41:59,893
ನನಗೂ ಇರುತ್ತಿತ್ತು.

381
00:42:00,894 --> 00:42:02,187
ನಿನಗೆ ಟಾಕೋಸ್ ಇಷ್ಟನಾ?

382
00:42:02,270 --> 00:42:04,022
ನನಗೆ ಟಾಕೋಸ್ ಇಷ್ಟ, ಹಾಂ.

383
00:42:04,105 --> 00:42:05,774
ಟಾಕೋಸ್ ಬಗ್ಗೆ ತುಂಬಾ ಕೇಳಿದ್ದಾಳೆ.

384
00:42:06,441 --> 00:42:09,653
ಕೊರಿಯಾದಲ್ಲಿ ಎಲ್ಲವೂ ಇದೆ,
ಆದರೆ ಒಳ್ಳೆಯ ಮೆಕ್ಸಿಕನ್ ಆಹಾರ ಸಿಗುವುದು ಕಷ್ಟ.

385
00:42:10,779 --> 00:42:13,365
ಅದು ಯಾವಾಗಲೂ ಸಿಹಿಯಾಗಿರುತ್ತದೆ
ಅಂತ ಅಪ್ಪ ಹೇಳುತ್ತಾರೆ.

386
00:42:14,324 --> 00:42:16,618
ನಾನು ಅದನ್ನೇ ಹೇಳೋದು. ನಿನಗೆ ಹೇಗೆ ಗೊತ್ತಾಯಿತು?

387
00:42:20,872 --> 00:42:22,666
ನನಗೆ ನಿದ್ದೆ ಬರುತ್ತಿದೆ.

388
00:42:31,633 --> 00:42:33,260
ನೀವು ಸಂತೋಷವಾಗಿರುವಿರಿ.

389
00:42:36,054 --> 00:42:38,014
ಇದಕ್ಕಾಗಿ ನಾನು ಬಹಳ ಸಮಯದಿಂದ ಕಾಯುತ್ತಿದ್ದೆ.

390
00:42:45,897 --> 00:42:47,065
ನಾನು ನಿನ್ನನ್ನು ಪ್ರೀತಿಸುತ್ತೇನೆ.

391
00:42:52,988 --> 00:42:54,447
ಸರಿ, ಕಣ್ರೀ.

392
00:43:02,539 --> 00:43:03,498
ಹೊರಡೋಣವಾ?

393
00:43:05,083 --> 00:43:07,627
ನಾವು ಹೊರಡುವ ಮುಂಚೆ ಶೌಚಾಲಯ ಬಳಸಿ ಬರುತ್ತೇನೆ.

394
00:43:11,006 --> 00:43:12,048
ನಾನೂ ಬರುವೆ.

395
00:43:15,010 --> 00:43:16,428
ಜಾಸ್ತಿ ಹೊತ್ತು ಇರಬೇಡಿ.

396
00:43:31,943 --> 00:43:32,777
ಮಿನ್ಹೀ-ಯಾ.

397
00:43:33,403 --> 00:43:34,571
ಮಿನ್ಹೀ-ಯಾ.

398
00:43:36,156 --> 00:43:37,991
ನೀನು ಅಮೆರಿಕಾಗೆ ಹೋಗಬೇಕಾ?

399
00:43:38,074 --> 00:43:39,576
ಹವಾಯಿ.

400
00:43:39,659 --> 00:43:41,077
ಹವಾಯಿ.

401
00:43:43,621 --> 00:43:45,123
ಅದು ಒಳ್ಳೆಯ ಉಪಾಯ.

402
00:44:03,016 --> 00:44:04,642
ಈಗಲೇ ಬರುತ್ತೇನೆ, ಆಯ್ತಾ?

403
00:44:05,185 --> 00:44:08,897
ಬಾ. ಇಲ್ಲೇ ಮಲಗು. ಇಲ್ಲಿ ಮಲಗಿರು.

404
00:44:20,867 --> 00:44:21,868
ಅಂಜು?

405
00:44:25,080 --> 00:44:26,498
ಚಿನ್ನ, ಆರಾಮಾಗಿದ್ದೀಯಾ?

406
00:44:30,794 --> 00:44:31,795
ರೆಬೆಕ್ಕಾ?

407
00:44:47,310 --> 00:44:49,062
ದೇವರೇ!

408
00:44:49,896 --> 00:44:51,898
ಅಂಜು. ಅಂಜು.

409
00:44:51,981 --> 00:44:54,526
ನನ್ನ ಮಾತು ಕೇಳುತ್ತಿದೆಯಾ?
ನನ್ನ ಮಾತು ಕೇಳುತ್ತಿದೆಯಾ?

410
00:44:55,276 --> 00:44:57,737
ತೋರಿಸು. ತೋರಿಸು. ತೋರಿಸು.

411
00:44:57,821 --> 00:44:59,948
ಅಯ್ಯೋ. ಅಯ್ಯೋ!

412
00:45:08,832 --> 00:45:09,749
ನಾನಿದ್ದೇನೆ.

413
00:45:09,833 --> 00:45:13,878
ನಾನಿದ್ದೇನೆ. ಉಸಿರಾಡು, ಆಯ್ತಾ?
ಸುಮ್ಮನೆ ಉಸಿರಾಡು.

414
00:45:15,380 --> 00:45:16,589
ಉಸಿರಾಡು.

415
00:45:20,343 --> 00:45:21,928
ನನ್ನ ಜೊತೆ ಇರು.

416
00:45:23,304 --> 00:45:24,514
ಇದನ್ನು ಮಾಡಿದ್ದು ಯಾರು?

417
00:45:25,807 --> 00:45:27,308
ಇದನ್ನು ಮಾಡಿದ್ದು ಯಾರು?

418
00:45:32,897 --> 00:45:34,190
ರೆಬೆಕ್ಕಾ ಮಾಡಿದಳಾ?

419
00:45:36,151 --> 00:45:37,652
ರೆಬೆಕ್ಕಾ ಮಾಡಿದಳಾ?

420
00:45:41,489 --> 00:45:43,074
ರೆಬೆಕ್ಕಾ!

421
00:45:46,536 --> 00:45:48,204
ರೆಬೆಕ್ಕಾ!

422
00:46:38,379 --> 00:46:40,381
ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ

