1
00:00:43,291 --> 00:00:47,041
ಪ್ಯಾಟಿಗಳು ತಯಾರಿದೆ. ಬಾ. ಬಾ.
ಅವು ಚೆನ್ನಾಗಿ ಬಿಸಿ ಬಿಸಿಯಾಗಿವೆ. ಬಾ, ಬೇಗ!

2
00:01:26,750 --> 00:01:29,166
ಸೂರ್ಯಾಸ್ತಕ್ಕೆ ಸಮಯ
00:50:25

3
00:01:57,416 --> 00:01:59,958
-ಅದು ಇಲ್ಲೇ ಇರಬೇಕು.
-ನನಗೆ ತೊಂದರೆ ಕೊಡಲು ಯಾಕೆ ಬರುವೆ?

4
00:02:01,833 --> 00:02:04,000
-ಹೇ!
-ಛೇ!

5
00:02:16,083 --> 00:02:17,541
-ಮತ್ತು ಕೇಳಿಸಿಕೋ. ಇಲ್ಲಿ.
-ಹೇ...

6
00:02:17,625 --> 00:02:18,916
ಇಲ್ಲ, ನೀನು ಕೇಳಿಸಿಕೋ.

7
00:02:25,500 --> 00:02:27,083
ಒಟ್ಟು 20,000. ಸರಿನಾ?

8
00:02:31,791 --> 00:02:33,041
ಸೂರ್ಯಾಸ್ತಕ್ಕೆ ಸಮಯ
00:38:54

9
00:02:33,333 --> 00:02:34,250
ಅಯ್ಯೋ!

10
00:02:47,166 --> 00:02:48,083
ಛೇ!

11
00:03:04,625 --> 00:03:05,875
ನಿಲ್ಲಿಸು. ಕಾರ್ ನಿಲ್ಲಿಸು!

12
00:03:27,833 --> 00:03:29,125
ಸದ್ಯ, ದೇವರೇ.

13
00:04:52,875 --> 00:04:55,833
ಜೆ

14
00:05:48,916 --> 00:05:51,625
ಅಂಧೆರಾ

15
00:06:18,125 --> 00:06:19,333
ಎದ್ದೇಳು, ಜಯ್!

16
00:06:33,750 --> 00:06:36,916
ಜನ್ಮದಿನದ ಸಂದರ್ಭಗಳು
ಇದು ಪೃಥ್ವಿಯ ಜನ್ಮದಿನ. ಅವನಿಗೆ ಶುಭ ಹಾರೈಸಿ!

17
00:09:19,958 --> 00:09:21,000
ಏನಾದರೂ ತೊಂದರೆನಾ?

18
00:12:37,208 --> 00:12:39,125
ಮೆದುಳಿನ ಮೇಲೆ ಪ್ರತಿಕ್ರಿಯೆ ಬೀರುತ್ತದೆ,

19
00:12:40,041 --> 00:12:42,916
ವಿದ್ಯುತ್ ಮೆದುಳಿನ ಅಲೆಗಳ ಮೂಲಕ.

20
00:12:43,333 --> 00:12:47,958
ಇದನ್ನು ಈಆರ್‌ಪಿ ಎಂದು ಕರೆಯುತ್ತೇವೆ.
ಘಟನಾ ಸಂಬಂಧಿತ ಸಾಮರ್ಥ್ಯಗಳು.

21
00:12:48,958 --> 00:12:52,625
ಈ ಮೆದುಳಿನ ಅಲೆಗಳ ಕಾರ್ಯಕ್ರಿಯೆಯನ್ನು ಯಾರು
ನೋಡಬಯಸುವಿರಿ? ಯಾರಾದರೂ ಮುಂದೆ ಬರುವಿರಾ?

22
00:12:56,875 --> 00:12:58,791
ನೋಡಿ, ಇದು ಥೀಟಾ ಅಲೆ.

23
00:12:59,666 --> 00:13:02,375
ಅಂಕಿತ್‌ಗೆ ತೂಕಡಿಕೆ ಇದೆ ಎಂದು ಅದು ಹೇಳುತ್ತದೆ.

24
00:13:05,583 --> 00:13:08,541
ಅಥವಾ ನಿನ್ನೆ ರಾತ್ರಿ
ತಡರಾತ್ರಿಯ ಪಾರ್ಟಿ ನಡೆದಿತ್ತು.

25
00:13:11,000 --> 00:13:14,625
ಈ ಮೆದುಳಿನ ಅಲೆಗಳು
ನರಸಂಕೇತಗಳನ್ನು ಒಳಗೊಂಡಿರುತ್ತವೆ,

26
00:13:24,875 --> 00:13:26,041
ಜನ್ಮದಿನದ ಶುಭಾಶಯ ಪೃಥ್ವಿ.

27
00:13:40,208 --> 00:13:42,541
ಸರ್, ಮೆದುಳಿನಲ್ಲಿನ
ಈ ಎಲ್ಲಾ ವಿದ್ಯುತ್ ಚಟುವಟಿಕೆಗಳ

28
00:13:42,625 --> 00:13:44,041
ಸಮಗ್ರವೇ ನಮ್ಮ ಪ್ರಜ್ಞೆನಾ?

29
00:13:44,125 --> 00:13:46,583
ಸರಳವಾಗಿ ಹೇಳುವುದಾದರೆ, ಉತ್ತರವು ಹೌದು.

30
00:13:47,250 --> 00:13:51,333
ಸರಿ, ಯಾರು ಹೇಳಬಲ್ಲಿರಿ, ಆಲ್ಫಾ ಮತ್ತು ಬೀಟಾ
ತರಂಗಗಳು ಏನನ್ನು ಪ್ರತಿನಿಧಿಸುತ್ತವೆ?

31
00:13:56,041 --> 00:13:58,666
-ಸರ್.
-ಮರಳಿ ಸ್ವಾಗತ, ಜಯ್.

32
00:14:02,250 --> 00:14:03,958
ಈಗ ನೀನು ಮರಳಿರುವುದರಿಂದ,

33
00:14:04,041 --> 00:14:06,625
ನಿನ್ನ ಪ್ರಶ್ನೆಗಳೂ ಸಹ
ಬೇಗ ಮರಳಲಿ ಎಂದು ಭಾವಿಸುವೆ.

34
00:14:10,125 --> 00:14:12,791
ನಡೆಯುತ್ತಾ ಮಾತಾಡೋಣವೇ?
ನಾನು ಕೆಲ ರೋಗಿಗಳನ್ನು ನೋಡಬೇಕಿದೆ.

35
00:14:14,000 --> 00:14:16,958
ಮೆದುಳಿನ ಅಲೆಗಳಲ್ಲಿನ ಅಸಮತೋಲನವು
ಖಿನ್ನತೆಗೆ ಕಾರಣವಾಗಿದ್ದರೆ,

36
00:14:17,041 --> 00:14:19,750
ಈ ಅಸಮತೋಲನಗಳನ್ನು ಸರಿಪಡಿಸುವುದರಿಂದ
ಖಿನ್ನತೆ ಗುಣವಾಗಬಲ್ಲದೇ?

37
00:14:19,833 --> 00:14:20,750
ಸೈದ್ಧಾಂತಿಕವಾಗಿ, ಹೌದು

38
00:14:20,833 --> 00:14:23,291
ಈ ಸಿದ್ಧಾಂತವನ್ನು ಯಾರಾದರೂ
ಕಾರ್ಯರೂಪಕ್ಕೆ ತಂದಿದ್ದಾರಾ?

39
00:14:25,208 --> 00:14:26,541
ಅಪರಿಚಿತ ಸಂಖ್ಯೆ

40
00:14:26,875 --> 00:14:29,125
ಮತ್ತು ಟಿಎಂಎಸ್ ಚಿಕಿತ್ಸೆ ಬಗ್ಗೆ, ಸರ್?

41
00:14:29,208 --> 00:14:33,791
ಟ್ರಾನ್ಸ್‌ಕ್ರೇನಿಯಲ್ ಮ್ಯಾಗ್ನೆಟಿಕ್ ಸ್ಟಿಮುಲೇಶನ್
ಇದೆ. ಆದರೆ ಇದರ ಯಶಸ್ಸಿನ ಪ್ರಮಾಣ 100% ಇಲ್ಲ.

42
00:14:37,166 --> 00:14:39,666
-ನಿಮಗೇನಾದರೂ ಹೇಳಿದ್ದನಾ?
-ನನಗೆ ತಿಳಿದಿರುವಂತೆ ಇಲ್ಲ.

43
00:14:55,708 --> 00:14:57,750
ಎಲ್ಲರಿಗೂ ಗೊತ್ತು, ನಿರ್ಲಿಪ್ತ ಖಿನ್ನತೆಯು

44
00:14:57,833 --> 00:15:00,416
ಅವನಿಗೆ ಬಹಳ ಇಷ್ಟವಾದ ವಿಷಯ ಎಂದು.

45
00:15:02,833 --> 00:15:04,041
ಅಪರಿಚಿತ ಸಂಖ್ಯೆ

46
00:15:04,833 --> 00:15:09,541
ಜಯ್, ನೀನು ಮತ್ತು ನಿನ್ನ ಕುಟುಂಬ
ಕಷ್ಟಕರ ಸಮಯ ಎದುರಿಸುತ್ತಿದ್ದೀರೆಂದು ಗೊತ್ತು.

47
00:15:12,375 --> 00:15:13,458
ಓದುವ ವಿಷಯ, ಏನೇ ಇರಲಿ.

48
00:15:16,333 --> 00:15:18,041
ಹಾಂ, ಹಾಂ, ಬರುತ್ತಿದ್ದೇನೆ.

49
00:16:35,208 --> 00:16:37,458
ಇಲ್ಲ. ಮತ್ತು ಏನು ಗೊತ್ತಾ?

50
00:16:42,916 --> 00:16:44,208
ಬಹುಮಾನ?

51
00:16:46,833 --> 00:16:48,791
ಕ್ಸೆಲೋಸ್ ಪುಸ್ತಕದಂಗಡಿ

52
00:16:48,875 --> 00:16:53,625
ಮತ್ತು ಈಗ, ದಯವಿಟ್ಟು ಪ್ರಸಿದ್ಧ ಕಾಮಿಕ್ ಪುಸ್ತಕ
ಬರಹಗಾರರನ್ನು ವೇದಿಕೆಗೆ ಸ್ವಾಗತಿಸಿ,

53
00:16:53,708 --> 00:16:56,666
ಕನಿಶ್ಕ್ ಗುಪ್ತಾಗೆ ಜೋರಾದ ಚಪ್ಪಾಳೆ ಬರಲಿ.

54
00:16:58,083 --> 00:16:59,958
ಇಂದು ನೀವು ಇಲ್ಲಿರುವುದು ನಮಗೆ ತುಂಬಾ ಸಂತೋಷ.

55
00:17:03,000 --> 00:17:05,750
'ಕಾಲಿಯಾ ಪಿಶಾಚಿಗಳ ಅಧಿಪತಿ'ಗಾಗಿ.
ಅಲ್ವಾ, ಗೆಳೆಯರೇ?

56
00:17:08,625 --> 00:17:10,750
ಅಂದರೆ, ಉತ್ಸುಕನಾಗಿದ್ದೇನೆ. ಆದರೆ,

57
00:17:12,708 --> 00:17:15,500
-ಸತ್ಯ, ವೀರ ಸನ್ಯಾಸಿ.
-ಸತ್ಯ ಮುದ್ರಣದಲ್ಲಿಲ್ಲ.

58
00:17:15,625 --> 00:17:17,333
ಆದರೆ ನಿಮ್ಮ ಖಾಸಗಿ ಪ್ರತಿ ಇರಲೇಬೇಕು.

59
00:17:17,375 --> 00:17:19,458
ದಯವಿಟ್ಟು, ಇದು ಸಾವು-ಬದುಕಿನ ವಿಷಯ.

60
00:17:32,500 --> 00:17:33,416
ಒಂದು ನಿಮಿಷ ಇರು.

61
00:18:15,833 --> 00:18:18,666
ಒಂದೋ ನೀವು ಅಣ್ಣ-ತಮ್ಮ ಇಬ್ಬರೂ ಕೆಟ್ಟ ಶಕುನ,

62
00:18:37,125 --> 00:18:41,333
ಕಾನಿಟ್ಕರ್, ಅವರ ಮೇಲೆ ಮಾಟಮಂತ್ರ ಹಾಗೂ
ಮೂಢನಂಬಿಕೆ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಿಸಿ.

63
00:18:47,708 --> 00:18:50,583
-ಅಲೌಕಿಕವಾದದ್ದು ಏನೋ ನಡೆಯುತ್ತಿದೆ.
-ಏನು?

64
00:19:59,750 --> 00:20:01,708
ಪ್ರಯೋಗದವರ ವರದಿ
ಹೆಸರು : ಬಾನಿ ಬರೂವಾ

65
00:20:17,958 --> 00:20:18,958
ಪ್ರಯೋಗ-ಸೂಕ್ತರ ಹೆಸರು: ರೋಗಿ ಎಕ್ಸ್

66
00:20:28,833 --> 00:20:33,083
ಕೆಟಾ ಸಿ 13 ಜೆಡ್‌. ಇದು ಕೆಟಮೈನ್ ಆಧಾರಿತ
ನಿಷೇಧಿತ ಸೈಕೋಟ್ರೋಪಿಕ್ ಔಷಧ.

67
00:20:39,083 --> 00:20:41,416
ಅಥವಾ ಅವರ ಮೇಲೆ
ಅಕ್ರಮ ಪ್ರಯೋಗ ನಡೆಸುತ್ತಿದ್ದನೇ?

68
00:20:56,750 --> 00:20:57,833
ನಿನಗೆ ಹೇಗೆ ಗೊತ್ತು?

69
00:21:14,208 --> 00:21:17,208
ಒಂದು ಅತ್ಯಾಧುನಿಕ ಪ್ರಯೋಗಾಲಯವಿದೆ.
ಅಲ್ಲೊಂದು ಯಂತ್ರವಿದೆ.

70
00:21:58,500 --> 00:21:59,333
ವಿವರಿಸಲು ಆಗದು.

71
00:22:09,916 --> 00:22:12,416
ಆದರೆ, ಬಾನಿ ಅವರಲ್ಲೊಬ್ಬಳು ಎಂದು ಗೊತ್ತಿರಲಿಲ್ಲ.

72
00:22:20,333 --> 00:22:22,166
ಈ ಚಿಕಿತ್ಸೆಯ ಸ್ಥಳ ಎಲ್ಲಿದೆ?

73
00:23:26,541 --> 00:23:28,833
ಆ ಕಾರಣಕ್ಕೇ ನಾನು ಅವಳನ್ನು
ಕನಸಿನಲ್ಲಿ ನೋಡಿರಬಹುದು.

74
00:23:30,000 --> 00:23:31,500
ಆದರೆ ಅದು ಹೇಗೆ ಸಾಧ್ಯ?

75
00:24:52,333 --> 00:24:55,958
ರೂಮಿ, ಕೇಳು. ನನ್ನ ಮಾತು ಕೇಳು, ರೂಮಿ.

76
00:24:56,375 --> 00:24:57,708
ರೂಮಿ, ನಿಲ್ಲು.

77
00:24:58,166 --> 00:24:59,875
ಒಮ್ಮೆಯಾದರೂ ನನ್ನ ಮಾತು ಕೇಳು.

78
00:25:14,125 --> 00:25:16,416
ನೀನು ಇನ್ನೂ
ನನ್ನನ್ನು ನಂಬದಿರುವುದು ನಿರಾಶೆಯಾಗಿದೆ.

79
00:25:27,458 --> 00:25:29,291
ಹಾಗೆ ಮಾಡಿದ್ದರೂ, ನಿನ್ನನ್ನೇಕೆ ಕಾಡುವಳು?

80
00:25:36,125 --> 00:25:38,291
ಆ ತರ್ಕದ ಪ್ರಕಾರ, ಆಕೆ ನಿಮ್ಮಮ್ಮನನ್ನೂ ಕಾಡಬೇಕು.

81
00:25:56,208 --> 00:25:58,416
-ಖಚಿತವಾಗಲೂ?
-ಹೌದು.

82
00:26:04,666 --> 00:26:06,583
ನನ್ನ ಬಳಿ ಅವನ ವಿಳಾಸವಿಲ್ಲ.

83
00:26:33,041 --> 00:26:37,000
ನೋಡಿ, ನನಗೆ ಮತ್ತು ನನ್ನ ಮಗಳಿಗೆ
ಜೂಡ್ ಜೊತೆ ಈಗ ಯಾವುದೇ ಸಂಬಂಧವಿಲ್ಲ.

84
00:26:37,250 --> 00:26:39,708
ಬಿಡುಗಡೆಯಾದ ನಂತರ,
ನಮ್ಮನ್ನು ಸಂಪರ್ಕಿಸಲು ನೋಡಿದ.

85
00:26:39,958 --> 00:26:44,250
ಅವನಿಗೆ ದೂರವಿರಲು ಹೇಳಿದೆ. ಆತ ಕೇಳಲಿಲ್ಲ,
ಹಾಗಾಗಿ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದೆ.

86
00:26:49,666 --> 00:26:53,166
ನಾನು ಪ್ರತಿ ಸಲವೂ ಪ್ರತಿಯೊಬ್ಬ ಅಧಿಕಾರಿಗೂ
ನನ್ನ ಜೀವನ ಕಥೆ ಹೇಳಬೇಕಾ?

87
00:26:53,333 --> 00:26:54,250
ನಿಮ್ಮೆಲ್ಲರಿಗೂ?

88
00:26:55,916 --> 00:26:58,333
ನಿಮ್ಮೆಲ್ಲರಿಗೂ ಅಂದರೆ?
ಇಲ್ಲಿಗೆ ಬೇರಾರು ಬಂದಿದ್ದರು?

89
00:28:45,500 --> 00:28:47,083
ಹೋಟೆಲ್ ಬಾಂಬೆ ಮೂನ್

90
00:29:01,375 --> 00:29:04,000
ಕೇಳು, ನಾವಿಲ್ಲಿ ನಿಖರವಾಗಿ
ಏನು ಮಾಡುತ್ತಿದ್ದೇವೆ?

91
00:29:11,583 --> 00:29:14,041
-ಆತ್ಮನಾ?
-ಆತ್ಮ.

92
00:29:15,041 --> 00:29:16,500
ಅದೊಂದು ಶಕ್ತಿಯ ರೂಪ.

93
00:29:19,875 --> 00:29:22,916
ನಾವು ಯಶಸ್ವಿಯಾದರೆ, ಈ ರಾತ್ರಿ
ಬಾನಿಯೊಂದಿಗೆ ಭೇಟಿಯಾಗುವ ಅವಕಾಶವಿದೆ.

94
00:29:26,833 --> 00:29:31,125
ಇವು ಇಎಮ್ಎಫ್ ಮೀಟರ್‌ಗಳು.
ಇದು ಗೈಗರ್ ಕೌಂಟರ್.

95
00:29:33,875 --> 00:29:35,666
ಇದು ಆತ್ಮಗಳ ಧ್ವನಿ ಕೇಳುವ ಸಾಧನ.

96
00:29:57,125 --> 00:30:02,250
ಬಾನಿ, ನಿನ್ನ ಆತ್ಮ ಇಲ್ಲಿ ಇದ್ದರೆ,
ದಯವಿಟ್ಟು ನಮಗೆ ಒಂದು ಸಂಜ್ಞೆ ನೀಡು.

97
00:30:32,333 --> 00:30:35,458
ಕ್ಷಮಿಸು. ಇದು ನಮ್ಮಮ್ಮ.
ಇತ್ತೀಚೆಗೆ ನನ್ನ ತಲೆ ತಿನ್ನುತ್ತಿದ್ದಾರೆ.

98
00:30:38,083 --> 00:30:40,625
ನೀನು ಅದೃಷ್ಟವಂತ. ನಿನಗೆ ತಾಯಿಯಾದರೂ ಇದ್ದಾರೆ.

99
00:30:48,083 --> 00:30:49,333
ಬೆಂಕಿ ದುರಂತದಲ್ಲಿ.

100
00:30:51,500 --> 00:30:52,666
ಕೇಳಿ ಬೇಜಾರಾಯಿತು.

101
00:30:54,166 --> 00:30:56,041
ಆಕೆ ಸಂಶೋಧನಾ ವಿಜ್ಞಾನಿ, ಗೊತ್ತಾ?

102
00:30:56,583 --> 00:30:58,041
ಅದರಲ್ಲಿ ಬಹಳ ಪ್ರತಿಭಾವಂತೆ.

103
00:31:02,833 --> 00:31:05,833
ನನ್ನ ಮೊದಲ ಅಧಿಸಾಮಾನ್ಯ ಅನುಭವವೂ
ನನ್ನ ತಾಯಿಗೆ ಸಂಬಂಧಿಸಿದೆ.

104
00:31:06,458 --> 00:31:07,458
ನನಗೆ ಒಂಬತ್ತು ವರ್ಷ.

105
00:31:09,166 --> 00:31:12,625
ಅಮ್ಮ ಹೇಳುತ್ತಲೇ ಇದ್ದಳು,
ಆಕೆಗೆ ದೆವ್ವ ಕಾಡುತ್ತಿದೆ ಎಂದು.

106
00:31:13,000 --> 00:31:17,416
-ಏನು?
-ಖಂಡಿತ, ಯಾರೂ ಅವಳನ್ನು ನಂಬಲಿಲ್ಲ.

107
00:31:18,208 --> 00:31:19,208
ನನ್ನನ್ನು ಬಿಟ್ಟು.

108
00:31:24,791 --> 00:31:29,166
ಆದರೆ ನನ್ನ ಸಹೋದರನ ಮರಣದ ನಂತರ,
ಏನೋ ಬದಲಾಯಿತು.

109
00:31:30,916 --> 00:31:32,333
ನಿಖರವಾಗಿ ಏನಾಯಿತು?

110
00:31:52,000 --> 00:31:54,375
ಅಮ್ಮ ಅದಾಗಲೇ ಡಿಸ್ಟೈಮಿಯಾದಿಂದ ಬಳಲುತ್ತಿದ್ದರು.

111
00:31:57,000 --> 00:31:58,708
ಆಕೆಗೆ ಮಗನ ಸಾವನ್ನು ಸಹಿಸಲಾಗಲಿಲ್ಲ.

112
00:32:01,333 --> 00:32:04,750
ಮಾಮನಿಗೆ ಅನಿಸಿತು,
ಆಕೆಗೆ ಹುಚ್ಚು ಹಿಡಿದಿದೆ ಎಂದು.

113
00:32:10,750 --> 00:32:11,708
ಕೇಳು, ನಾನು...

114
00:32:12,458 --> 00:32:16,083
ಕ್ಷಮಿಸು, ನಾನು ಈಗ...
ನಾನು ಈಗಲೇ ಬಂದೆ. ಈ ನನ್ನ ಸೈನಸ್ ಸಮಸ್ಯೆ.

115
00:32:30,125 --> 00:32:32,125
ಅಮ್ಮ ನಿನ್ನನ್ನು ಪ್ರೀತಿಸುತ್ತಾಳೆ, ರೂಮಿ.

116
00:32:36,750 --> 00:32:40,208
ರೂಮಿ! ನೆನಪಿಡು, ಅಮ್ಮ ನಿನ್ನನ್ನು
ಪ್ರೀತಿಸುವಳು, ಸರಿನಾ? ಹಿಂತಿರುಗುವೆ.

117
00:32:46,666 --> 00:32:49,500
ರೂಮಿ! ನೆನಪಿಡು,
ಅಮ್ಮ ನಿನ್ನನ್ನು ಪ್ರೀತಿಸುತ್ತಾಳೆ, ಸರಿನಾ?

118
00:36:52,125 --> 00:36:53,125
ಅಯ್ಯೋ.

119
00:37:19,625 --> 00:37:20,458
ಅಯ್ಯೋ.

120
00:39:33,208 --> 00:39:34,208
ಕ್ಷಮಿಸು, ಪೃಥ್ವಿ.

121
00:40:44,333 --> 00:40:45,541
ಕ್ಷಮಿಸು, ಪೃಥ್ವಿ.

122
00:40:46,375 --> 00:40:47,375
ನನ್ನನ್ನು ಕ್ಷಮಿಸು.

123
00:40:48,708 --> 00:40:50,125
ಏನಿದು!

124
00:41:21,500 --> 00:41:23,708
ಆರಾಮವಾಗಿದ್ದೀಯ? ಜಯ್?

125
00:41:31,166 --> 00:41:33,583
ಆಂಟಿ, ಜಯ್ ವಿಷಯದಲ್ಲಿ
ನಾನು ನಿಮಗೆ ಸಹಾಯ ಮಾಡಲಾ?

126
00:41:34,333 --> 00:41:35,541
ನಾನು ನಿಭಾಯಿಸುವೆ.

127
00:41:56,291 --> 00:41:58,833
-ಮುಂದಿನ ಸಲ ಎಚ್ಚರಿಕೆ ಕೊಡಲ್ಲ.
-ಅರ್ಥವಾಗುತ್ತಿಲ್ವಾ?

128
00:42:13,375 --> 00:42:15,333
ನೀನು ಯಾವುದರ ಬೆನ್ನತ್ತಿದ್ದೀಯ ಈಗ?

129
00:42:22,750 --> 00:42:23,875
ಅಣ್ಣ-ತಮ್ಮಂದಿರೇ?

130
00:42:48,500 --> 00:42:52,791
ಪೃಥ್ವಿ ಕೋಮಾದಲ್ಲಿರುವವರೆಗೂ,
ಜಯ್‌ನ ಮಾನಸಿಕ ಒತ್ತಡ ಹೆಚ್ಚುತ್ತಲೇ ಇರುತ್ತದೆ.

131
00:42:52,875 --> 00:42:53,875
ಗ್ಲಾಸ್ಗೋ ಮಾಪಕ

132
00:42:57,500 --> 00:43:01,291
ಜೀವ ಬೆಂಬಲವನ್ನು ಹಿಂತೆಗೆದುಕೊಳ್ಳುವ ಬಗ್ಗೆ
ತಿಳುವಳಿಕೆಯುಳ್ಳ ನಿರಾಕರಣಾ ನಮೂನೆ

133
00:43:38,958 --> 00:43:40,250
10:35
ಬುಧವಾರ

134
00:43:44,708 --> 00:43:45,666
ನಿದ್ದೆ ಬರುತ್ತಿಲ್ಲವೇ?

