1
00:00:39,041 --> 00:00:39,875
ಜೂಲಿಯಾ.

2
00:00:41,166 --> 00:00:43,000
ಜೂಲ್ಸ್! ಬಾ, ಚಿನ್ನ!

3
00:00:43,291 --> 00:00:47,041
ಪ್ಯಾಟಿಗಳು ತಯಾರಿದೆ. ಬಾ. ಬಾ.
ಅವು ಚೆನ್ನಾಗಿ ಬಿಸಿ ಬಿಸಿಯಾಗಿವೆ. ಬಾ, ಬೇಗ!

4
00:01:26,750 --> 00:01:29,166
ಸೂರ್ಯಾಸ್ತಕ್ಕೆ ಸಮಯ
00:50:25

5
00:01:38,791 --> 00:01:42,333
ಹಂಸಲ್ ಪುಸ್ತಕದ ಅಂಗಡಿ

6
00:01:45,875 --> 00:01:49,833
ಮತ್ತೆ ಬಂದೆಯಾ?
ಇಲ್ಲಿಗೆ ಬರಬೇಡವೆಂದು ನಿನಗೆ ಹೇಳಿಲ್ಲವೇ?

7
00:01:50,000 --> 00:01:51,333
ಹೊಸ ಸರಕು ಬಂದಿದೆ ತಾನೆ?

8
00:01:51,416 --> 00:01:54,166
ಹೌದು, ಬಂದಿದೆ. ಆದರೆ ಅದರಲ್ಲಿ
ನಿನ್ನ ಕಾಮಿಕ್ ಬಂದಿಲ್ಲ.

9
00:01:54,250 --> 00:01:55,416
ಅದನ್ನೇ ನೋಡುತ್ತಿದ್ದೇನೆ.

10
00:01:55,500 --> 00:01:57,250
ಯಾಕೆ? ಅಲ್ಲಿಲ್ಲ ಅಂತ ಹೇಳುತ್ತಿದ್ದೇನೆ.

11
00:01:57,416 --> 00:01:59,958
-ಅದು ಇಲ್ಲೇ ಇರಬೇಕು.
-ನನಗೆ ತೊಂದರೆ ಕೊಡಲು ಯಾಕೆ ಬರುವೆ?

12
00:02:00,083 --> 00:02:01,333
-ಇಲ್ಲಿದೆ.
-ಏನು ಮಾಡಲಿ...

13
00:02:01,833 --> 00:02:04,000
-ಹೇ!
-ಛೇ!

14
00:02:09,041 --> 00:02:10,750
ಗಾಂಡು, ನಡಿ ಆಚೆ!

15
00:02:11,458 --> 00:02:12,625
-ನನ್ನ ಮಾತು ಕೇಳಿ...
-ಹೇ!

16
00:02:12,708 --> 00:02:15,958
ತೊಲಗು! ನೀನು ಇಲ್ಲಿ ಒಳಗೆ ಬಂದು
ನನ್ನನ್ನು ಹಿಂಸಿಸುವಂತಿಲ್ಲ.

17
00:02:16,083 --> 00:02:17,541
-ಮತ್ತು ಕೇಳಿಸಿಕೋ. ಇಲ್ಲಿ.
-ಹೇ...

18
00:02:17,625 --> 00:02:18,916
ಇಲ್ಲ, ನೀನು ಕೇಳಿಸಿಕೋ.

19
00:02:19,083 --> 00:02:21,958
ತಗೋ ನಿನ್ನ 10,000 ಮುಂಗಡ ಹಣ. ನನಗೆ ಬೇಡ.

20
00:02:22,083 --> 00:02:25,208
ದಯವಿಟ್ಟು ಇಟ್ಟುಕೊಳ್ಳಿ.
ಇನ್ನೂ ಹತ್ತು ಸಾವಿರ ತೆಗೆದುಕೊಳ್ಳಿ.

21
00:02:25,500 --> 00:02:27,083
ಒಟ್ಟು 20,000. ಸರಿನಾ?

22
00:02:27,250 --> 00:02:31,375
ನಿಮಗೆ ಆ ಕಾಮಿಕ್ ಸಿಕ್ಕ ತಕ್ಷಣ,
ನನಗೆ ಕರೆ ಮಾಡಿ. ಅರ್ಥವಾಯಿತಾ?

23
00:02:31,791 --> 00:02:33,041
ಸೂರ್ಯಾಸ್ತಕ್ಕೆ ಸಮಯ
00:38:54

24
00:02:33,333 --> 00:02:34,250
ಅಯ್ಯೋ!

25
00:02:42,000 --> 00:02:44,208
-ಕ್ಯಾಬ್‌ನಲ್ಲಿ ಒಳಗೆ ಲೈಟ್ಸ್ ಇವೆಯಾ?
-ಇಲ್ಲ.

26
00:02:44,750 --> 00:02:47,083
-ಕ್ಯಾಬ್‌ನಲ್ಲಿ ಲೈಟ್ಸ್ ಇವೆಯಾ?
-ಇಲ್ಲ ಅಂದೆ.

27
00:02:47,166 --> 00:02:48,083
ಛೇ!

28
00:03:04,625 --> 00:03:05,875
ನಿಲ್ಲಿಸು. ಕಾರ್ ನಿಲ್ಲಿಸು!

29
00:03:05,958 --> 00:03:06,958
ನಿಲ್ಲಿಸು, ಮಾರಾಯ.

30
00:03:27,833 --> 00:03:29,125
ಸದ್ಯ, ದೇವರೇ.

31
00:03:31,375 --> 00:03:32,875
ಇಲ್ಲ, ಇಲ್ಲ, ಇಲ್ಲ. ಇಲ್ಲ.

32
00:03:58,166 --> 00:04:00,500
ತೆರೆ. ತೆರೆ!

33
00:04:05,416 --> 00:04:06,541
ತೆರೆ!

34
00:04:52,875 --> 00:04:55,833
ಜೆ

35
00:05:48,916 --> 00:05:51,625
ಅಂಧೆರಾ

36
00:05:58,375 --> 00:06:00,333
ಲ್ಯೂಮ್‌ ಸಿ.ಎಚ್‌. ಎಸ್‌

37
00:06:05,375 --> 00:06:07,000
ಜಯ್, ಎದ್ದೇಳು.

38
00:06:09,458 --> 00:06:12,125
ಕೇಕ್ ಕತ್ತರಿಸಲಿದ್ದೇನೆ. ಶುಭಾಶಯ ಕೋರಲ್ವಾ?

39
00:06:12,291 --> 00:06:15,208
-ನನಗೆ ನಿದ್ದೆ ಮಾಡಲು ಬಿಡು...
-ಎದ್ದೇಳು, ಜಯ್.

40
00:06:18,125 --> 00:06:19,333
ಎದ್ದೇಳು, ಜಯ್!

41
00:06:33,750 --> 00:06:36,916
ಜನ್ಮದಿನದ ಸಂದರ್ಭಗಳು
ಇದು ಪೃಥ್ವಿಯ ಜನ್ಮದಿನ. ಅವನಿಗೆ ಶುಭ ಹಾರೈಸಿ!

42
00:06:48,541 --> 00:06:50,333
ನಿನಗೆ ಜನ್ಮದಿನದ ಶುಭಾಶಯಗಳು

43
00:06:50,458 --> 00:06:52,666
ಜನ್ಮದಿನದ ಶುಭಾಶಯಗಳು ಪೃಥ್ವಿ.

44
00:06:52,958 --> 00:06:55,333
ನಿನಗೆ ಜನ್ಮದಿನದ ಶುಭಾಶಯಗಳು

45
00:06:55,916 --> 00:06:59,291
ಜನ್ಮದಿನದ ಶುಭಾಶಯಗಳು, ಪ್ರೀತಿಯ ಪೃಥ್ವಿ!

46
00:07:00,458 --> 00:07:03,375
ನಿನಗೆ ಜನ್ಮದಿನದ ಶುಭಾಶಯಗಳು

47
00:07:16,166 --> 00:07:17,458
ತಗೋ, ನಿನ್ನ ಸರದಿ.

48
00:07:17,541 --> 00:07:19,083
ಬರೀ ಅವನ ತುಟಿಗಳಿಗೆ ಮುಟ್ಟಿಸು.

49
00:08:05,416 --> 00:08:07,208
ಆಯೆಷಾ! ಬೇಡ.

50
00:08:07,625 --> 00:08:08,833
ಬೇಡವಾ?

51
00:08:14,250 --> 00:08:15,375
9:00 ಆಗಿದೆ.

52
00:08:18,625 --> 00:08:19,458
ವಾಹ್.

53
00:08:20,583 --> 00:08:23,541
ನೀನು ಒಂದು ರಾತ್ರಿಯ ಸಂಬಂಧದ ವ್ಯಕ್ತಿ
ಅಂತ ನನಗೆ ಗೊತ್ತಿರಲಿಲ್ಲ.

54
00:08:23,750 --> 00:08:25,083
ನನಗೆ ತುಂಬಾ ಕೆಲಸ ಇದೆ.

55
00:08:25,166 --> 00:08:29,125
ಇದ್ದರೇನು? ಹೊರಡುವ ಮೊದಲು
ನನ್ನ ಜೊತೆ ನಾಷ್ಟ ತಿನ್ನು.

56
00:08:30,125 --> 00:08:31,458
ಇಲ್ಲ ಉಪಯೋಗಿಸಿದೆ ಅನಿಸುತ್ತೆ.

57
00:08:31,666 --> 00:08:34,541
ನಾಷ್ಟನಾ? ಆದರೆ ನನಗೆ ತಡವಾಗಿಬಿಡುತ್ತೆ.

58
00:08:35,916 --> 00:08:38,416
ಹೌದು. ಆದರೆ ಸ್ವಲ್ಪ ಅಷ್ಟೇ.

59
00:08:40,375 --> 00:08:41,375
ಅಷ್ಟೂ ಕೇಳಬಾರದಾ?

60
00:09:04,708 --> 00:09:05,541
ಕ್ಷಮಿಸು.

61
00:09:10,875 --> 00:09:11,875
ಹೇಳು, ತಾವಡೆ?

62
00:09:16,750 --> 00:09:17,750
ನಾನು ಬರುತ್ತೇನೆ.

63
00:09:19,958 --> 00:09:21,000
ಏನಾದರೂ ತೊಂದರೆನಾ?

64
00:09:23,166 --> 00:09:25,500
ಯಾರನ್ನೂ ಬರಲು ಬಿಡಬೇಡಿ.
ನಿಮಗೆ ಅರ್ಥವಾಗಲ್ವಾ?

65
00:09:26,541 --> 00:09:28,166
ವಾಹನ ಸರಿಸಿ. ಮೇಡಂ ಬಂದರು.

66
00:09:29,000 --> 00:09:30,000
ಜೈ ಹಿಂದ್, ಮೇಡಂ.

67
00:09:32,500 --> 00:09:34,041
ದಯವಿಟ್ಟು ಬನ್ನಿ. ಸರಿಯಿರಿ.

68
00:09:37,083 --> 00:09:39,125
-ಈ ಕಡೆಗೆ, ಮೇಡಂ.
-ಜೈ ಹಿಂದ್, ಮೇಡಂ.

69
00:09:39,208 --> 00:09:40,625
ಅಪರಾಧ ಘಟಿಸಿದ ಸ್ಥಳ ದಾಟಬೇಡಿ

70
00:10:04,916 --> 00:10:06,750
ಅವರ ಮಣಿಕಟ್ಟುಗಳನ್ನು ಸೀಳಲಾಗಿವೆ, ಮೇಡಂ.

71
00:10:13,083 --> 00:10:14,500
ದಯವಿಟ್ಟು ಹಿಂದೆ ಸರಿಯಿರಿ.

72
00:10:21,625 --> 00:10:23,333
ಒದ್ದಾಡಿರುವ ಕುರುಹುಗಳು ಕಾಣಿಸುತ್ತಿವೆ.

73
00:10:44,166 --> 00:10:45,000
ಉಶ್ಮಿ!

74
00:10:46,916 --> 00:10:47,958
ಉಶ್ಮಿ.

75
00:10:51,125 --> 00:10:52,000
ಉಶ್ಮಿ?

76
00:10:56,541 --> 00:10:57,708
ಏನು... ಇದು?

77
00:11:00,000 --> 00:11:00,916
ಬೇಡ, ಉಶ್ಮಿ.

78
00:11:01,125 --> 00:11:03,708
ಉಶ್ಮಿ, ಏನು ಮಾಡುತ್ತಿದ್ದೀಯ? ಬೇಡ.

79
00:11:16,833 --> 00:11:20,583
ಯಾರೂ ಉಳಿಯುವುದಿಲ್ಲ.
ಆ ಅಂಧಕಾರ ಎಲ್ಲರನ್ನೂ ನುಂಗಿಬಿಡುತ್ತದೆ.

80
00:11:21,458 --> 00:11:22,958
ಎಲ್ಲವೂ ಮುಗಿದುಹೋಯಿತು!

81
00:11:25,875 --> 00:11:27,791
ತಂದೆ ಅವಳನ್ನು ತಡೆಯಲು ನೋಡಿರಬಹುದು.

82
00:11:29,375 --> 00:11:32,375
ತಾಯಿ ಏಕೆ ಹೀಗೆ ಮಾಡಿದರೆಂದು ಅರ್ಥವಾಗುತ್ತೆ.
ಆಕೆ ದೀರ್ಘಕಾಲದ ರೋಗಿ.

83
00:11:33,458 --> 00:11:34,625
ಆದರೆ ತಂದೆ?

84
00:11:37,916 --> 00:11:39,541
ಅವರು ಆರೋಗ್ಯವಾಗಿದ್ದರು.

85
00:11:39,625 --> 00:11:40,458
ಉಶ್ಮಿ!

86
00:11:57,416 --> 00:12:01,416
ಆತ ಏಕೆ ಆತ್ಮಹತ್ಯೆ ಮಾಡಿಕೊಂಡರು?
ನಾವು ಈಗಾಗಲೇ ತನಿಖೆ ಆರಂಭಿಸಿದ್ದೇವೆ.

87
00:12:01,916 --> 00:12:03,375
ಅದರಿಂದ ಏನು ವ್ಯತ್ಯಾಸ, ಮೇಡಂ?

88
00:12:04,000 --> 00:12:06,416
ತಮ್ಮ ಮಗಳು ಸಿಗುವ
ಭರವಸೆಯನ್ನು ಕೈಬಿಟ್ಟಿರಲೇಬೇಕು.

89
00:12:22,666 --> 00:12:25,541
ಇದು ನಡೆಯೋ ಕೆಲ ಗಂಟೆಗಳ ಹಿಂದೆ
ಜಯ್ ಶೇಠ್ ಇವರನ್ನ ಭೇಟಿಯಾಗಿದ್ದನೇ?

90
00:12:25,625 --> 00:12:26,500
ಹೌದು.

91
00:12:27,625 --> 00:12:29,916
-ಅವನನ್ನು ಠಾಣೆಗೆ ಕರೆತನ್ನಿ.
-ಸರಿ.

92
00:12:31,583 --> 00:12:32,625
ನಾನು ಹೋಗುತ್ತಿದ್ದೇನೆ.

93
00:12:33,791 --> 00:12:36,375
ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಯು

94
00:12:37,208 --> 00:12:39,125
ಮೆದುಳಿನ ಮೇಲೆ ಪ್ರತಿಕ್ರಿಯೆ ಬೀರುತ್ತದೆ,

95
00:12:40,041 --> 00:12:42,916
ವಿದ್ಯುತ್ ಮೆದುಳಿನ ಅಲೆಗಳ ಮೂಲಕ.

96
00:12:43,333 --> 00:12:47,958
ಇದನ್ನು ಈಆರ್‌ಪಿ ಎಂದು ಕರೆಯುತ್ತೇವೆ.
ಘಟನಾ ಸಂಬಂಧಿತ ಸಾಮರ್ಥ್ಯಗಳು.

97
00:12:48,958 --> 00:12:52,625
ಈ ಮೆದುಳಿನ ಅಲೆಗಳ ಕಾರ್ಯಕ್ರಿಯೆಯನ್ನು ಯಾರು
ನೋಡಬಯಸುವಿರಿ? ಯಾರಾದರೂ ಮುಂದೆ ಬರುವಿರಾ?

98
00:12:56,875 --> 00:12:58,791
ನೋಡಿ, ಇದು ಥೀಟಾ ಅಲೆ.

99
00:12:59,666 --> 00:13:02,375
ಅಂಕಿತ್‌ಗೆ ತೂಕಡಿಕೆ ಇದೆ ಎಂದು ಅದು ಹೇಳುತ್ತದೆ.

100
00:13:02,458 --> 00:13:05,375
ಇದರ ಅರ್ಥ ಒಂದೋ ನನ್ನ ಉಪನ್ಯಾಸ ನೀರಸವಾಗಿದೆ

101
00:13:05,583 --> 00:13:08,541
ಅಥವಾ ನಿನ್ನೆ ರಾತ್ರಿ
ತಡರಾತ್ರಿಯ ಪಾರ್ಟಿ ನಡೆದಿತ್ತು.

102
00:13:11,000 --> 00:13:14,625
ಈ ಮೆದುಳಿನ ಅಲೆಗಳು
ನರಸಂಕೇತಗಳನ್ನು ಒಳಗೊಂಡಿರುತ್ತವೆ,

103
00:13:14,708 --> 00:13:20,666
ಇವುಗಳ ಮೂಲಕ ನಮ್ಮೆಲ್ಲಾ ಭಾವನೆಗಳು, ಪ್ರೀತಿ,
ಭಯ, ದುಃಖ ಅಥವಾ ಸಂತೋಷದಂತಹವು ವ್ಯಕ್ತವಾಗುತ್ತವೆ.

104
00:13:21,833 --> 00:13:24,791
ನಮ್ಮೆಲ್ಲಾ ಆಲೋಚನೆಗಳು, ಕಾರ್ಯಗಳು...

105
00:13:24,875 --> 00:13:26,041
ಜನ್ಮದಿನದ ಶುಭಾಶಯ ಪೃಥ್ವಿ.

106
00:13:26,125 --> 00:13:27,625
ಯಾಕೆ ಹೀಗೆ ಮಾಡಿದೆ, ಜಯ್?

107
00:13:28,666 --> 00:13:29,625
ಜಯ್.

108
00:13:40,208 --> 00:13:42,541
ಸರ್, ಮೆದುಳಿನಲ್ಲಿನ
ಈ ಎಲ್ಲಾ ವಿದ್ಯುತ್ ಚಟುವಟಿಕೆಗಳ

109
00:13:42,625 --> 00:13:44,041
ಸಮಗ್ರವೇ ನಮ್ಮ ಪ್ರಜ್ಞೆನಾ?

110
00:13:44,125 --> 00:13:46,583
ಸರಳವಾಗಿ ಹೇಳುವುದಾದರೆ, ಉತ್ತರವು ಹೌದು.

111
00:13:47,250 --> 00:13:51,333
ಸರಿ, ಯಾರು ಹೇಳಬಲ್ಲಿರಿ, ಆಲ್ಫಾ ಮತ್ತು ಬೀಟಾ
ತರಂಗಗಳು ಏನನ್ನು ಪ್ರತಿನಿಧಿಸುತ್ತವೆ?

112
00:13:56,041 --> 00:13:58,666
-ಸರ್.
-ಮರಳಿ ಸ್ವಾಗತ, ಜಯ್.

113
00:13:59,500 --> 00:14:01,875
-ಹೇಗಿದ್ದೀಯ?
-ಚೆನ್ನಾಗಿದ್ದೇನೆ, ಸರ್. ಧನ್ಯವಾದಗಳು.

114
00:14:02,250 --> 00:14:03,958
ಈಗ ನೀನು ಮರಳಿರುವುದರಿಂದ,

115
00:14:04,041 --> 00:14:06,625
ನಿನ್ನ ಪ್ರಶ್ನೆಗಳೂ ಸಹ
ಬೇಗ ಮರಳಲಿ ಎಂದು ಭಾವಿಸುವೆ.

116
00:14:06,791 --> 00:14:09,541
-ಅದು, ಈಗಲೇ ಒಂದು ಪ್ರಶ್ನೆ ಕೇಳಬೇಕಿತ್ತು.
-ಒಳ್ಳೆಯದು.

117
00:14:10,125 --> 00:14:12,791
ನಡೆಯುತ್ತಾ ಮಾತಾಡೋಣವೇ?
ನಾನು ಕೆಲ ರೋಗಿಗಳನ್ನು ನೋಡಬೇಕಿದೆ.

118
00:14:14,000 --> 00:14:16,958
ಮೆದುಳಿನ ಅಲೆಗಳಲ್ಲಿನ ಅಸಮತೋಲನವು
ಖಿನ್ನತೆಗೆ ಕಾರಣವಾಗಿದ್ದರೆ,

119
00:14:17,041 --> 00:14:19,750
ಈ ಅಸಮತೋಲನಗಳನ್ನು ಸರಿಪಡಿಸುವುದರಿಂದ
ಖಿನ್ನತೆ ಗುಣವಾಗಬಲ್ಲದೇ?

120
00:14:19,833 --> 00:14:20,750
ಸೈದ್ಧಾಂತಿಕವಾಗಿ, ಹೌದು

121
00:14:20,833 --> 00:14:23,291
ಈ ಸಿದ್ಧಾಂತವನ್ನು ಯಾರಾದರೂ
ಕಾರ್ಯರೂಪಕ್ಕೆ ತಂದಿದ್ದಾರಾ?

122
00:14:23,375 --> 00:14:24,750
ನನಗೆ ತಿಳಿದಿರುವಂತೆ ಇಲ್ಲ.

123
00:14:25,208 --> 00:14:26,541
ಅಪರಿಚಿತ ಸಂಖ್ಯೆ

124
00:14:26,875 --> 00:14:29,125
ಮತ್ತು ಟಿಎಂಎಸ್ ಚಿಕಿತ್ಸೆ ಬಗ್ಗೆ, ಸರ್?

125
00:14:29,208 --> 00:14:33,791
ಟ್ರಾನ್ಸ್‌ಕ್ರೇನಿಯಲ್ ಮ್ಯಾಗ್ನೆಟಿಕ್ ಸ್ಟಿಮುಲೇಶನ್
ಇದೆ. ಆದರೆ ಇದರ ಯಶಸ್ಸಿನ ಪ್ರಮಾಣ 100% ಇಲ್ಲ.

126
00:14:34,625 --> 00:14:37,083
ಪೃಥ್ವಿ ಈ ವಿಷಯದಲ್ಲಿ
ಕೆಲಸ ಮಾಡುತ್ತಿದ್ದನೇ ಅಂತ ಗೊತ್ತಾ?

127
00:14:37,166 --> 00:14:39,666
-ನಿಮಗೇನಾದರೂ ಹೇಳಿದ್ದನಾ?
-ನನಗೆ ತಿಳಿದಿರುವಂತೆ ಇಲ್ಲ.

128
00:14:40,875 --> 00:14:43,041
-ನಿನಗೇನಾದರೂ ಹೇಳಿದನೇ?
-ಇಲ್ಲ.

129
00:14:43,416 --> 00:14:48,083
ಅಪಘಾತಕ್ಕೂ ಮುನ್ನ ಈ ವಿಷಯದ ಮೇಲೆ ಏನೋ ಸಂಶೋಧನೆ
ಮಾಡುತ್ತಿರುವುದಾಗಿ ಅಸ್ಪಷ್ಟವಾಗಿ ಹೇಳಿದ್ದ.

130
00:14:48,500 --> 00:14:50,416
ನಿನಗಿಂತ ಚೆನ್ನಾಗಿ ಪೃಥ್ವಿ ಯಾರಿಗೆ ಗೊತ್ತು?

131
00:14:50,958 --> 00:14:54,291
ಅವನು 100% ಖಚಿತವಾಗುವವರೆಗೆ ಏನನ್ನೂ ಹೇಳಲ್ಲ.

132
00:14:55,708 --> 00:14:57,750
ಎಲ್ಲರಿಗೂ ಗೊತ್ತು, ನಿರ್ಲಿಪ್ತ ಖಿನ್ನತೆಯು

133
00:14:57,833 --> 00:15:00,416
ಅವನಿಗೆ ಬಹಳ ಇಷ್ಟವಾದ ವಿಷಯ ಎಂದು.

134
00:15:01,916 --> 00:15:02,750
ಕ್ಷಮಿಸಿ, ಸರ್.

135
00:15:02,833 --> 00:15:04,041
ಅಪರಿಚಿತ ಸಂಖ್ಯೆ

136
00:15:04,833 --> 00:15:09,541
ಜಯ್, ನೀನು ಮತ್ತು ನಿನ್ನ ಕುಟುಂಬ
ಕಷ್ಟಕರ ಸಮಯ ಎದುರಿಸುತ್ತಿದ್ದೀರೆಂದು ಗೊತ್ತು.

137
00:15:09,708 --> 00:15:12,166
ನಾನು ಮಾಡಬಹುದಾದ
ಸಹಾಯವೇನಾದರೂ ಇದ್ದರೆ, ತಿಳಿಸು.

138
00:15:12,375 --> 00:15:13,458
ಓದುವ ವಿಷಯ, ಏನೇ ಇರಲಿ.

139
00:15:13,666 --> 00:15:14,916
-ಹಾಂ?
-ಧನ್ಯವಾದಗಳು.

140
00:15:16,333 --> 00:15:18,041
ಹಾಂ, ಹಾಂ, ಬರುತ್ತಿದ್ದೇನೆ.

141
00:15:18,208 --> 00:15:20,333
ಉಬೆರೈ ಆಸ್ಪತ್ರೆ
ಹಾಗೂ ವೈದ್ಯಕೀಯ ಕಾಲೇಜು

142
00:15:21,500 --> 00:15:24,333
ಹೇ! ಏನು ಸಮಾಚಾರ?

143
00:15:25,333 --> 00:15:26,875
-ಏಕೆ ಫೋನ್ ಎತ್ತುತ್ತಿಲ್ಲ?
-ನೀವಾ?

144
00:15:27,000 --> 00:15:29,708
ಎಷ್ಟು ಸಲ ನಿನಗೆ ಕರೆ ಮಾಡಬೇಕು? ಬಾ.

145
00:15:29,833 --> 00:15:31,291
-ಎಲ್ಲಿಗೆ? ಹೇ...
-ಬಾರೋ.

146
00:15:31,458 --> 00:15:32,666
ಬಾ!

147
00:15:37,500 --> 00:15:38,833
ನನ್ನನ್ನು ಬಿಡು. ಬಿಡು.

148
00:15:39,458 --> 00:15:40,875
-ಬಾ.
-ನನಗೆ ಹೋಗಲು ಇಷ್ಟವಿಲ್ಲ.

149
00:15:40,958 --> 00:15:42,791
-ನನ್ನನ್ನು ಬಿಡು.
-ನಡಿ ಅಂದೆ.

150
00:15:42,875 --> 00:15:43,875
ಏನು ನಡೆಯುತ್ತಿದೆ?

151
00:15:43,958 --> 00:15:45,250
-ನಾನು ಹೋಗಲ್ಲ.
-ಏಳು.

152
00:15:45,333 --> 00:15:47,750
-ನನ್ನನ್ನು ಬಿಡು.
-ಮಕ್ಕಳ ಜೊತೆ ಹೀಗೆ ವರ್ತಿಸುವರೇ?

153
00:15:47,916 --> 00:15:49,875
ಅವನನ್ನು ಬಿಡು. ಬಿಡು.

154
00:15:51,250 --> 00:15:54,666
ಆಯೆಷಾ, ಆತ ವೈದ್ಯರನ್ನು ಕಾಣಬೇಕಿದೆ.
ಆತ ಒಪ್ಪುತ್ತಿಲ್ಲ.

155
00:15:55,083 --> 00:15:57,166
ಸರಿ. ಆದರೆ ಅದನ್ನು ಮಾಡುವುದು ಹೀಗಲ್ಲ.

156
00:15:58,791 --> 00:16:01,166
ನಾನು ಮಾತಾಡುತ್ತೇನೆ. ದಯವಿಟ್ಟು ಹೊರಗೆ ಕಾಯಿರಿ.

157
00:16:09,875 --> 00:16:11,041
ಏನಾಯಿತು, ಒಮಾರ್?

158
00:16:11,291 --> 00:16:13,875
ಎಲ್ಲಿಯೂ ಹೋಗಲು ಇಷ್ಟವಿಲ್ಲ.
ನನಗೆ ಇಲ್ಲಿಯೇ ಇರಬೇಕು.

159
00:16:14,583 --> 00:16:15,708
ಹೆದರಿದ್ದಿಯಾ?

160
00:16:20,125 --> 00:16:21,416
ಹೆದರಬೇಡ.

161
00:16:22,000 --> 00:16:23,166
ನೀನು ಇಲ್ಲೇ ಇರುತ್ತೀಯ.

162
00:16:24,208 --> 00:16:27,750
ಅವರು ಆರೋಗ್ಯ ತಪಾಸಣೆಗಾಗಿ
ನಿನ್ನನ್ನು ಕರೆದೊಯ್ಯುತ್ತಿದ್ದಾರೆ.

163
00:16:27,916 --> 00:16:31,291
ಮುಗಿದ ತಕ್ಷಣ, ಇಲ್ಲಿಗೆ ವಾಪಸ್ ಕರೆತರುತ್ತಾರೆ.
ಮಾತು ಕೊಡುವೆ.

164
00:16:32,083 --> 00:16:33,708
ಸೂಜಿ ಹಾಕಲ್ಲ, ಅಲ್ವಾ?

165
00:16:35,208 --> 00:16:37,458
ಇಲ್ಲ. ಮತ್ತು ಏನು ಗೊತ್ತಾ?

166
00:16:38,166 --> 00:16:42,291
ನೀನು ವಾಪಸ್ ಬಂದಾಗ,
ನಿನಗಾಗಿ ಒಂದು ಉಡುಗೊರೆ ಕಾಯುತ್ತಿರುತ್ತದೆ.

167
00:16:42,916 --> 00:16:44,208
ಉಡುಗೊರೆನಾ?

168
00:16:45,875 --> 00:16:46,791
ಸರಿನಾ?

169
00:16:46,875 --> 00:16:48,791
ಕ್ಸೆಲೋಸ್ ಪುಸ್ತಕದಂಗಡಿ

170
00:16:48,875 --> 00:16:53,625
ಮತ್ತು ಈಗ, ದಯವಿಟ್ಟು ಪ್ರಸಿದ್ಧ ಕಾಮಿಕ್ ಪುಸ್ತಕ
ಬರಹಗಾರರನ್ನು ವೇದಿಕೆಗೆ ಸ್ವಾಗತಿಸಿ,

171
00:16:53,708 --> 00:16:56,666
ಕನಿಶ್ಕ್ ಗುಪ್ತಾಗೆ ಜೋರಾದ ಚಪ್ಪಾಳೆ ಬರಲಿ.

172
00:16:58,083 --> 00:16:59,958
ಇಂದು ನೀವು ಇಲ್ಲಿರುವುದು ನಮಗೆ ತುಂಬಾ ಸಂತೋಷ.

173
00:17:00,083 --> 00:17:02,916
ಅದಕ್ಕಿಂತ ಹೆಚ್ಚು ಉತ್ಸುಕರಾಗಿದ್ದೇವೆ,
ನಿಮ್ಮ ಹೊಸ ಗ್ರಾಫಿಕ್ ಕಾದಂಬರಿ

174
00:17:03,000 --> 00:17:05,750
'ಕಾಲಿಯಾ ಪಿಶಾಚಿಗಳ ಅಧಿಪತಿ'ಗಾಗಿ.
ಅಲ್ವಾ, ಗೆಳೆಯರೇ?

175
00:17:05,875 --> 00:17:07,750
-ಹೌದು!
-ಇಲ್ಲ! ಇಲ್ಲ.

176
00:17:08,625 --> 00:17:10,750
ಅಂದರೆ, ಉತ್ಸುಕನಾಗಿದ್ದೇನೆ. ಆದರೆ,

177
00:17:10,875 --> 00:17:12,625
ನಾನು ಇಲ್ಲಿಗೆ ಸತ್ಯಗಾಗಿ ಬಂದಿದ್ದೇನೆ.

178
00:17:12,708 --> 00:17:15,500
-ಸತ್ಯ, ವೀರ ಸನ್ಯಾಸಿ.
-ಸತ್ಯ ಮುದ್ರಣದಲ್ಲಿಲ್ಲ.

179
00:17:15,625 --> 00:17:17,333
ಆದರೆ ನಿಮ್ಮ ಖಾಸಗಿ ಪ್ರತಿ ಇರಲೇಬೇಕು.

180
00:17:17,375 --> 00:17:19,458
ದಯವಿಟ್ಟು, ಇದು ಸಾವು-ಬದುಕಿನ ವಿಷಯ.

181
00:17:19,583 --> 00:17:21,791
ನೀನು ನನಗೆ ತಿಂಗಳಾನುಗಟ್ಟಲೆ ಇಮೇಲ್ ಮತ್ತು

182
00:17:21,875 --> 00:17:23,916
ಸಂದೇಶ ಕಳಿಸುತ್ತಿದ್ದ ಹುಚ್ಚ, ಅಲ್ವಾ?

183
00:17:25,416 --> 00:17:26,708
ನಾನೇ?

184
00:17:27,833 --> 00:17:31,250
ಹೌದು, ಅದು ನಾನೇ. ರೊಜಾರಿಯೋ. ಜೂಡ್‌ ರೊಜಾರಿಯೋ.

185
00:17:32,500 --> 00:17:33,416
ಒಂದು ನಿಮಿಷ ಇರು.

186
00:17:34,000 --> 00:17:36,083
ನೀನು ನನ್ನನ್ನು ಹುಚ್ಚ ಅಂದೆಯಾ? ಹೌದಾ?

187
00:17:36,416 --> 00:17:38,541
-ಹಾಗೆ ಅನ್ನಲು ನಾನೇನು ಮಾಡಿದೆ?
-ಹೇ...

188
00:17:38,625 --> 00:17:40,708
-ಪುಕ್ಸಟ್ಟೆ ಕೇಳಿದೆನಾ?
-ದಯವಿಟ್ಟು ಹೊರಡಿ.

189
00:17:40,791 --> 00:17:44,583
ನಾನು ಅದಕ್ಕೆ ಪಾವತಿಸುವೆ.
ಆದರೆ ನನಗೆ ಇಂದು ಒಂದು ಪ್ರತಿ ಬೇಕು.

190
00:17:44,750 --> 00:17:48,125
ಮತ್ತು ನಾನು ಅದಿಲ್ಲದೆ ಹೋಗುವುದಿಲ್ಲ.

191
00:17:48,208 --> 00:17:50,708
-ಸರಿ ಇಲ್ಲ, ಮಾರಾಯ.
-ಯಾರ ಬಳಿಯಾದರೂ ಒಂದು ಪ್ರತಿ ಇದೆಯಾ?

192
00:17:50,791 --> 00:17:51,750
ತೊಲಗು.

193
00:18:05,166 --> 00:18:09,166
ಮೊದಲಿಗೆ, ಬಾನಿಳ ಕರೆ ದಾಖಲೆಗಳಲ್ಲಿ
ಪೃಥ್ವಿಯ ಸಂಖ್ಯೆ ಪದೇ ಪದೇ ಕಾಣುತ್ತಿದೆ.

194
00:18:09,750 --> 00:18:14,125
ಆಮೇಲೆ, ನೀನು ಅವಳ ಹೆತ್ತವರನ್ನು ಭೇಟಿಯಾದೆ.
ಕೆಲ ಗಂಟೆಗಳ ನಂತರ, ಇಬ್ಬರೂ ಸತ್ತರು.

195
00:18:15,833 --> 00:18:18,666
ಒಂದೋ ನೀವು ಅಣ್ಣ-ತಮ್ಮ ಇಬ್ಬರೂ ಕೆಟ್ಟ ಶಕುನ,

196
00:18:19,000 --> 00:18:22,041
ಅಥವಾ ನನಗೆ ಕಾಣದಿರುವಂಥದ್ದು ಏನೋ ನಡೆಯುತ್ತಿದೆ.

197
00:18:24,375 --> 00:18:28,041
ಆ ಅಂಧಕಾರ... ನನ್ನ ಬಾನಿಳ ಬೆನ್ನತ್ತಿತ್ತು.

198
00:18:29,083 --> 00:18:33,083
ಅದೇ ಅವಳನ್ನು ನುಂಗಿಬಿಟ್ಟಿತು.
ಆ ಅಂಧಕಾರ ನನ್ನ ಮಗಳನ್ನು ನುಂಗಿಬಿಟ್ಟಿತು.

199
00:18:37,125 --> 00:18:41,333
ಕಾನಿಟ್ಕರ್, ಅವರ ಮೇಲೆ ಮಾಟಮಂತ್ರ ಹಾಗೂ
ಮೂಢನಂಬಿಕೆ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಿಸಿ.

200
00:18:41,541 --> 00:18:44,875
-ಎದ್ದೇಳು. ನಡಿ.
-ಇಲ್ಲ, ಸರ್. ಕನಿಷ್ಠ ನನ್ನ ಮಾತನ್ನಾದರೂ ಕೇಳಿ.

201
00:18:45,083 --> 00:18:47,625
ಇದು ಯಾವುದೋ ಮೂಢನಂಬಿಕೆ ಅಥವಾ ಮಾಟಮಂತ್ರವಲ್ಲ.

202
00:18:47,708 --> 00:18:50,583
-ಅಲೌಕಿಕವಾದದ್ದು ಏನೋ ನಡೆಯುತ್ತಿದೆ.
-ಏನು?

203
00:18:50,750 --> 00:18:52,458
ನಾನು ಇದನ್ನು ಹೇಗೆ ವಿವರಿಸಲಿ?

204
00:18:53,583 --> 00:18:55,916
ಆ ಅಂಧಕಾರ... ಜೀವ ತಾಳಿದೆ.

205
00:18:57,208 --> 00:19:00,833
ಮೊದಲು ಅದು ಜನರನ್ನು ಹೆದರಿಸುತ್ತದೆ.
ನಂತರ, ಆತ್ಮಹತ್ಯೆಗೆ ಒತ್ತಾಯಿಸುತ್ತದೆ.

206
00:19:01,833 --> 00:19:04,750
ಈ ಅಂಧಕಾರ ಪೃಥ್ವಿಯನ್ನೂ ಬೆನ್ನತ್ತಿ ಬಂತು.
ಆದರೆ ನಾನು ಅವನನ್ನು ಉಳಿಸಿದೆ.

207
00:19:09,208 --> 00:19:11,666
ಈಗ, ಈ ಅಂಧಕಾರ ನನ್ನ ಬೆನ್ನತ್ತಿದೆ.

208
00:19:19,958 --> 00:19:23,500
ಇಗೋ ಅಂಧಕಾರ ಕವಿಯಿತು.
ನಿನ್ನನ್ನು ಹಿಂಬಾಲಿಸುತ್ತಾ ಬಂದಿತು.

209
00:19:25,250 --> 00:19:26,458
-ಬಾಯಿ ತೆಗೆ.
-ಮೇಡಂ.

210
00:19:26,541 --> 00:19:27,791
-ಆಗಲ್ಲ.
-ಬಾಯಿ ತೆಗೆ.

211
00:19:27,875 --> 00:19:29,750
-ನಾನು ಸುಳ್ಳು ಹೇಳುತ್ತಿಲ್ಲ.
-ಕಾನಿಟ್ಕರ್.

212
00:19:29,875 --> 00:19:33,333
ನಾನು ನೋಡಬೇಕು, ಮೇಡಂ,
ನಶೆಗೆ ಏನನ್ನು ತೆಗೆದುಕೊಳ್ಳುವನೆಂದು. ಹೇಳು...

213
00:19:33,416 --> 00:19:36,291
-ಅವನು ಸುಳ್ಳು ಹೇಳುತ್ತಿಲ್ಲ, ಇದು ಸತ್ಯ! ಹೌದು.
-ಹೌದಾ?

214
00:19:36,458 --> 00:19:40,500
ಹಾಗಾದರೆ, ಬಾನಿಳ ತಾಯಿ ನಿಮ್ಮಿಬ್ಬರಿಗೂ ಹೇಳಿ,
ಅದನ್ನು ತನ್ನ ಗಂಡನಿಂದ ರಹಸ್ಯವಾಗಿಟ್ಟರು.

215
00:19:41,791 --> 00:19:43,875
ನಮ್ಮನ್ನು ಮಂಗ ಮಾಡಲು ನೋಡುತ್ತಿದ್ದೀಯಾ?

216
00:19:44,000 --> 00:19:47,625
ನೀವು ಗೇಲಿ ಮಾಡುವಿರಿ, ಹುಚ್ಚಿ ಎನ್ನುವಿರೆಂಬ ಭಯ
ಆಕೆಗಿತ್ತು. ಈಗ ನಮಗೆ ಹೇಳುತ್ತಿರುವಂತೆ.

217
00:19:47,708 --> 00:19:50,708
ಹಾಗಾದರೆ ನಾವು ಹುಚ್ಚರೇ?
ನಿಮ್ಮ ಅವಿವೇಕವನ್ನು ಕೇಳಿ ಸಾಕಾಯಿತು.

218
00:19:50,791 --> 00:19:52,083
ಕಾನಿಟ್ಕರ್, ಲ್ಯಾಪ್ಟಾಪ್ ಕೊಡು.

219
00:19:59,750 --> 00:20:01,708
ಪ್ರಯೋಗದವರ ವರದಿ
ಹೆಸರು : ಬಾನಿ ಬರೂವಾ

220
00:20:04,416 --> 00:20:05,458
ಏನಾಯಿತು?

221
00:20:05,541 --> 00:20:08,916
ಈ ವೈದ್ಯಕೀಯ ವರದಿಗಳನ್ನು ನೋಡಿ
ನಿಮ್ಮ ಮಾಯಾ-ಮಂತ್ರದ ಕಥೆಗಳು ಖಾಲಿ ಆದವೇ?

222
00:20:09,541 --> 00:20:12,125
-ಏನಪ್ಪಾ?
-ನಮಗೆ ಇವು ಪೃಥ್ವಿಯ ಟ್ಯಾಬ್‌ನಲ್ಲಿ ಸಿಕ್ಕಿದವು.

223
00:20:12,875 --> 00:20:16,875
ಇವು ಬಾನಿ, ಜೂಡ್ ಎಂಬ ಹೆಸರಿನ ವ್ಯಕ್ತಿ ಹಾಗೂ
ರೋಗಿ ಎಕ್ಸ್‌ನ ವಿವರವಾದ ವರದಿಗಳು.

224
00:20:17,958 --> 00:20:18,958
ಪ್ರಯೋಗ-ಸೂಕ್ತರ ಹೆಸರು: ರೋಗಿ ಎಕ್ಸ್

225
00:20:24,458 --> 00:20:25,916
ನೀನು ಉದಯೋನ್ಮುಖ ವೈದ್ಯ, ಅಲ್ವಾ?

226
00:20:26,833 --> 00:20:28,041
ಕೆಟಮೈನ್ ಬಗ್ಗೆ ಕೇಳಿರಬೇಕು.

227
00:20:28,833 --> 00:20:33,083
ಕೆಟಾ ಸಿ 13 ಜೆಡ್‌. ಇದು ಕೆಟಮೈನ್ ಆಧಾರಿತ
ನಿಷೇಧಿತ ಸೈಕೋಟ್ರೋಪಿಕ್ ಔಷಧ.

228
00:20:34,708 --> 00:20:38,125
ನಿಮ್ಮಣ್ಣ ಈ ನಿಷೇಧಿತ ಔಷಧದಿಂದ
ಜನರಿಗೆ ಸಹಾಯ ಮಾಡುತ್ತಿದ್ದನಾ?

229
00:20:39,083 --> 00:20:41,416
ಅಥವಾ ಅವರ ಮೇಲೆ
ಅಕ್ರಮ ಪ್ರಯೋಗ ನಡೆಸುತ್ತಿದ್ದನೇ?

230
00:20:45,000 --> 00:20:46,208
ಪ್ರಶ್ನೆಗೆ ಉತ್ತರಿಸು.

231
00:20:50,125 --> 00:20:52,458
-ಮಾತಾಡು.
-ಇದು ಖಿನ್ನತೆಗೆ ಒಂದು ಚಿಕಿತ್ಸೆ.

232
00:20:52,625 --> 00:20:54,791
ಇದರಲ್ಲಿ ಯಾರಿಗೂ ಹಾನಿಮಾಡುವ ಉದ್ದೇಶವಿಲ್ಲ.

233
00:20:56,750 --> 00:20:57,833
ನಿನಗೆ ಹೇಗೆ ಗೊತ್ತು?

234
00:21:01,666 --> 00:21:04,791
ಏಕೆಂದರೆ... ಆ ರೋಗಿ ಎಕ್ಸ್ ನಾನೇ.

235
00:21:14,208 --> 00:21:17,208
ಒಂದು ಅತ್ಯಾಧುನಿಕ ಪ್ರಯೋಗಾಲಯವಿದೆ.
ಅಲ್ಲೊಂದು ಯಂತ್ರವಿದೆ.

236
00:21:17,625 --> 00:21:19,958
ಅದು ಖಿನ್ನತೆಯನ್ನು ಗುಣಪಡಿಸಬಲ್ಲದೆಂದು
ಪೃಥ್ವಿ ಹೇಳಿದ್ದ.

237
00:21:20,041 --> 00:21:22,375
ಅದು ನನ್ನನ್ನೂ ಗುಣಪಡಿಸಬಹುದೆಂದು ಭಾವಿಸಿದ್ದ.

238
00:21:23,833 --> 00:21:24,791
ಸಿದ್ಧನಾ?

239
00:21:29,333 --> 00:21:32,250
ನನ್ನ ವರದಿಗಳನ್ನು 'ರೋಗಿ ಎಕ್ಸ್'
ಹೆಸರಿನಲ್ಲಿ ದಾಖಲಿಸುತ್ತಿದ್ದ.

240
00:21:33,208 --> 00:21:37,458
ಅವನಿಗೆ ನನ್ನ ಚಿಕಿತ್ಸೆಗೆ ಅನುಮತಿ ಇರಲಿಲ್ಲ.
ಹಾಗಾಗಿ ಕದ್ದು ಮುಚ್ಚಿ ಕರೆದೊಯ್ಯುತ್ತಿದ್ದ.

241
00:21:56,083 --> 00:21:57,083
ಹೇಗನಿಸುತ್ತಿದೆ?

242
00:21:58,500 --> 00:21:59,333
ವಿವರಿಸಲು ಆಗದು.

243
00:22:01,791 --> 00:22:03,333
ಹಿಂದೆಂದೂ ಈ ರೀತಿ ಅನಿಸಿರಲಿಲ್ಲ.

244
00:22:03,916 --> 00:22:04,750
ಜಯ್.

245
00:22:06,458 --> 00:22:09,833
ನನ್ನ ಹೊರತಾಗಿ ಬೇರೆ ರೋಗಿಗಳು
ಇರಬೇಕೆಂದು ನನಗೆ ಅನಿಸಿತ್ತು.

246
00:22:09,916 --> 00:22:12,416
ಆದರೆ, ಬಾನಿ ಅವರಲ್ಲೊಬ್ಬಳು ಎಂದು ಗೊತ್ತಿರಲಿಲ್ಲ.

247
00:22:20,333 --> 00:22:22,166
ಈ ಚಿಕಿತ್ಸೆಯ ಸ್ಥಳ ಎಲ್ಲಿದೆ?

248
00:22:23,666 --> 00:22:25,333
-ನನಗೆ ಗೊತ್ತಿಲ್ಲ.
-ಏನು?

249
00:22:25,875 --> 00:22:29,208
ಗೊತ್ತಿಲ್ಲ. ಈಗಷ್ಟೇ ಹೇಳಿದೆ,
ಕದ್ದು ಮುಚ್ಚಿ ಕರೆದೊಯ್ಯುತ್ತಿದ್ದ ಅಂತ.

250
00:22:44,083 --> 00:22:47,375
ಕಟ್ಟಡ ಹೇಗಿದೆ ಎಂದು ಗೊತ್ತಿಲ್ಲ,
ಆದರೆ ಒಳಗೆ ಏನಿದೆ ಎಂದು ಗೊತ್ತು.

251
00:22:47,500 --> 00:22:50,416
ಆ ಕಟ್ಟಡದ ಬಗ್ಗೆ
ನಾನು ಪೃಥ್ವಿಯನ್ನೂ ಕೇಳಿದೆ, ಆದರೆ...

252
00:22:50,791 --> 00:22:52,791
-ಆತ ಹೇಳಲಿಲ್ಲ.
-ಮಸ್ತಾಗಿದೆ!

253
00:22:54,875 --> 00:22:58,000
ನೀವಿಬ್ಬರದು ಭಲೇ ಜೋಡಿ.

254
00:22:58,416 --> 00:23:02,916
ಅವಳು ಭಯಾನಕದ ಕಥೆ ಹೇಳುತ್ತಾಳೆ.
ನೀನು ಹಾಲಿವುಡ್ ಕಥೆ ಹೇಳುತ್ತೀಯ.

255
00:23:03,625 --> 00:23:05,250
ಅಲ್ವಾ? ಏನು?

256
00:23:05,333 --> 00:23:07,958
ಆ ಯಂತ್ರ ಹೇಗೆ...

257
00:23:10,625 --> 00:23:13,333
ಆ ಯಂತ್ರ ಹೇಗೆ ಕೆಲಸ...

258
00:23:15,750 --> 00:23:18,041
-ಏನಿದು ಅಲ್ಲಿ...
-ಮೇಡಂ! ನೋಡುತ್ತೇನೆ, ಮೇಡಂ!

259
00:23:18,125 --> 00:23:21,625
ಮೇಡಂ, ಇರಿ. ನಾನು ನೋಡುತ್ತೇನೆ. ಮೇಡಂ.

260
00:23:22,041 --> 00:23:23,583
ಮೇಡಂ. ನೀವು...

261
00:23:23,708 --> 00:23:26,333
ಹಾಗಾದರೆ, ಬಾನಿ ಸಹ ಆ ಚಿಕಿತ್ಸೆಯ ಭಾಗವಾಗಿದ್ದಳು.

262
00:23:26,541 --> 00:23:28,833
ಆ ಕಾರಣಕ್ಕೇ ನಾನು ಅವಳನ್ನು
ಕನಸಿನಲ್ಲಿ ನೋಡಿರಬಹುದು.

263
00:23:30,000 --> 00:23:31,500
ಆದರೆ ಅದು ಹೇಗೆ ಸಾಧ್ಯ?

264
00:23:33,541 --> 00:23:35,791
-ರೂಮಿ, ನಾವು ಸಿಕ್ಕಿಬಿದ್ದರೆ...
-ಒಂದು ಕಣ್ಣಿಡು.

265
00:23:37,208 --> 00:23:40,000
ಈ ನೀಚನಿಗೆ ತನ್ನ ಹೆಂಡತಿ ಜೊತೆ ಮಾತಾಡಲು ಆಗಲ್ಲ,

266
00:23:40,083 --> 00:23:42,875
-ಆದರೆ ಪಕ್ಕದ ಮನೆಯವಳಿಗೆ ಹಾಡುತ್ತಾನೆ.
-ಏನಿದು ಗದ್ದಲ?

267
00:23:43,125 --> 00:23:43,958
ಬಾಯಿ ಮುಚ್ಚು!

268
00:23:44,541 --> 00:23:47,291
ಇವನು ಸ್ವಂತ ಮಕ್ಕಳ ಬಗ್ಗೆ ಗಮನ ಹರಿಸಲ್ಲ.

269
00:23:47,416 --> 00:23:49,583
-ಆದರೆ ಬಾಲ ಅಲ್ಲಾಡಿಸುತ್ತಾ...
-ಹಿಂದೆ ಹೋಗು.

270
00:23:49,833 --> 00:23:51,291
-ನನಗೆ ಹೊಡೆದಳು.
-ಫೈಲ್ ಸಿದ್ಧ.

271
00:23:51,458 --> 00:23:54,041
ಹೆಂಗಸಾಗಿದ್ದರೂ ಬಹಳ ಜೋರಾಗಿ ಹೊಡೆಯುತ್ತಾಳೆ.

272
00:23:54,291 --> 00:23:56,750
-ನಮ್ಮ ತಾಯಾಣೆಗೂ...
-ಮುಗಿಯಿತಾ?

273
00:23:57,958 --> 00:23:59,833
ಆದರೆ, ಸರ್, ನೋಡಿ...

274
00:23:59,916 --> 00:24:01,625
-ಆದರೆ, ಸರ್...
-ಸದ್ದು. ಬಾಯಿ ಬಿಡಬೇಡ.

275
00:24:05,833 --> 00:24:08,375
ಮೇಡಂ. ಮೇಡಂ.

276
00:24:09,541 --> 00:24:11,500
ನೀವಿಬ್ಬರೂ ಈಗ ಹೋಗಬಹುದು.

277
00:24:11,833 --> 00:24:13,750
ಆದರೆ ನಗರವನ್ನು ಬಿಟ್ಟು ಹೋಗುವಂತಿಲ್ಲ.

278
00:24:13,833 --> 00:24:15,833
-ಅದು ಹೇಗೆ, ಮೇಡಂ? ಹೇ!
-ಕೇಳಿಸಿಕೊಳ್ಳಿ.

279
00:24:19,125 --> 00:24:20,041
ಯೋಚಿಸಿ.

280
00:24:21,000 --> 00:24:25,333
ಪೃಥ್ವಿ ಬೇರೆಯವರ ಜೊತೆಗೆ ತನ್ನ ಸ್ವಂತ
ತಮ್ಮನ ಮೇಲೂ ಅಕ್ರಮ ಪ್ರಯೋಗ ನಡೆಸುತ್ತಿದ್ದ.

281
00:24:26,166 --> 00:24:28,291
ಮತ್ತು ನೀನು ಅವನನ್ನೇ ಉಳಿಸುತ್ತಿದ್ದೀಯ.

282
00:24:30,416 --> 00:24:31,291
ಹೋಗು.

283
00:24:34,333 --> 00:24:35,291
ಏನು, ಮೇಡಂ?

284
00:24:36,666 --> 00:24:39,041
-ಜೂಡ್‌ ರೊಜಾರಿಯೋ ಸಿಕ್ಕಿದ, ಕಾನಿಟ್ಕರ್.
-ಏನು?

285
00:24:40,833 --> 00:24:43,666
ಅವನ ಒಂದು ಅಪರಾಧ ದಾಖಲೆ ಇದೆ.
2017ರಲ್ಲಿ ಸೈಬರ್ ವಂಚನೆ ಮಾಡಿದ್ದ.

286
00:24:43,833 --> 00:24:44,666
ಹುಂ.

287
00:24:45,000 --> 00:24:47,166
ಇವರಿಬ್ಬರ ಮೇಲೆ ನಿಗಾ ಇಡಲು ತಾವಡೆಗೆ ಹೇಳಿ.

288
00:24:47,375 --> 00:24:48,291
ಸರಿ.

289
00:24:52,333 --> 00:24:55,958
ರೂಮಿ, ಕೇಳು. ನನ್ನ ಮಾತು ಕೇಳು, ರೂಮಿ.

290
00:24:56,375 --> 00:24:57,708
ರೂಮಿ, ನಿಲ್ಲು.

291
00:24:58,166 --> 00:24:59,875
ಒಮ್ಮೆಯಾದರೂ ನನ್ನ ಮಾತು ಕೇಳು.

292
00:25:04,083 --> 00:25:09,041
ರೂಮಿ, ಕ್ಷಮಿಸು, ನಿನಗೆ ಪೃಥ್ವಿ ಹಾಗೂ
ಚಿಕಿತ್ಸೆಯ ಬಗ್ಗೆ ನಾನು ಮೊದಲೇ ಹೇಳಲಿಲ್ಲ.

293
00:25:09,625 --> 00:25:12,875
ಪರವಾಗಿಲ್ಲ. ನೀನು ನಿಮ್ಮಣ್ಣನನ್ನು
ಉಳಿಸಲು ನೋಡುತ್ತಿದ್ದೆ.

294
00:25:14,125 --> 00:25:16,416
ನೀನು ಇನ್ನೂ
ನನ್ನನ್ನು ನಂಬದಿರುವುದು ನಿರಾಶೆಯಾಗಿದೆ.

295
00:25:16,541 --> 00:25:18,041
ಇಲ್ಲ, ಅದು ಹಾಗಲ್ಲ.

296
00:25:19,083 --> 00:25:21,791
ಬಾನಿ ನನ್ನನ್ನೇಕೆ ಕಾಡುತ್ತಿದ್ದಾಳೆಂದು
ನನಗೆ ಅರ್ಥವಾಗುತ್ತಿಲ್ಲ.

297
00:25:22,833 --> 00:25:26,250
ಪೃಥ್ವಿ ನಿಜವಾಗಲೂ ಅವಳಿಗೆ ಏನಾದರೂ
ತೊಂದರೆ ಕೊಟ್ಟಿದ್ದ ಅನಿಸುತ್ತಾ?

298
00:25:27,458 --> 00:25:29,291
ಹಾಗೆ ಮಾಡಿದ್ದರೂ, ನಿನ್ನನ್ನೇಕೆ ಕಾಡುವಳು?

299
00:25:30,500 --> 00:25:31,958
ನಿನಗೆ ಅವಳ ಪರಿಚಯವೂ ಇರಲಿಲ್ಲ.

300
00:25:32,541 --> 00:25:36,000
ಪೃಥ್ವಿ ಕೋಮಾದಲ್ಲಿದ್ದಾನೆ ಅಂತ
ನೀನೇ ಮುಂದಿನ ಅತ್ಯುತ್ತಮ ಆಯ್ಕೆ ಅಂತ ಅರ್ಥವಲ್ಲ.

301
00:25:36,125 --> 00:25:38,291
ಆ ತರ್ಕದ ಪ್ರಕಾರ, ಆಕೆ ನಿಮ್ಮಮ್ಮನನ್ನೂ ಕಾಡಬೇಕು.

302
00:25:39,000 --> 00:25:39,875
ಅದನ್ನು ಬಿಡು.

303
00:25:40,916 --> 00:25:44,833
ಈ ಹೊಸ ಮಾಹಿತಿಯು
ಆ ಅಂಧಕಾರದ ಬಗ್ಗೆ ಇನ್ನಷ್ಟು ತಿಳಿಸಬಹುದು.

304
00:25:50,750 --> 00:25:52,666
ರೂಮಿ, ಇದು ಇದೇ ಕಿಟಕಿ,

305
00:25:53,083 --> 00:25:54,708
ಅಲ್ಲಿಂದಲೇ ಬಾನಿ ಹೊರಗೆ ಎಗರಿದ್ದು.

306
00:25:56,208 --> 00:25:58,416
-ಖಚಿತವಾಗಲೂ?
-ಹೌದು.

307
00:26:01,583 --> 00:26:03,791
ಹೋಟೆಲ್ ಬಾಂಬೆ ಮೂನ್.

308
00:26:04,666 --> 00:26:06,583
ನನ್ನ ಬಳಿ ಅವನ ವಿಳಾಸವಿಲ್ಲ.

309
00:26:08,416 --> 00:26:12,750
ಫೋನ್ ಸಂಖ್ಯೆ? ಅವನನ್ನು ಪತ್ತೆಹಚ್ಚಲು
ನಾವು ಬಳಸಬಹುದಾದ ಯಾವುದೇ ಮಾಹಿತಿ.

310
00:26:14,208 --> 00:26:16,958
ಒಂದು ಹಳೆಯ ಸಂಖ್ಯೆ ಇದೆ,
ಅದು ಈಗ ಕಾರ್ಯನಿರ್ವಹಿಸುತ್ತಿಲ್ಲ.

311
00:26:19,791 --> 00:26:21,916
ನೀವು ಹಾಗೂ ಜೂಡ್ ಯಾವಾಗ ವಿಚ್ಛೇದನ ಪಡೆದಿರಿ?

312
00:26:22,458 --> 00:26:26,000
-ಆತ ಜೈಲಿಗೆ ಹೋದಮೇಲೆ.
-ಆತ ಜೈಲಿಗೆ ಹೋದಮೇಲೆನಾ?

313
00:26:27,250 --> 00:26:30,375
ಇತ್ತೀಚಿನ ದಿನಗಳಲ್ಲಿ ಜೈಲಿನಲ್ಲಿರುವಾಗಲೂ
ವಿಚ್ಛೇದನ ಪಡೆಯಬಹುದಾ?

314
00:26:30,458 --> 00:26:32,791
ಆನ್‌ಲೈನ್. ಡಿಜಿಟಲ್ ಭಾರತ.

315
00:26:33,041 --> 00:26:37,000
ನೋಡಿ, ನನಗೆ ಮತ್ತು ನನ್ನ ಮಗಳಿಗೆ
ಜೂಡ್ ಜೊತೆ ಈಗ ಯಾವುದೇ ಸಂಬಂಧವಿಲ್ಲ.

316
00:26:37,250 --> 00:26:39,708
ಬಿಡುಗಡೆಯಾದ ನಂತರ,
ನಮ್ಮನ್ನು ಸಂಪರ್ಕಿಸಲು ನೋಡಿದ.

317
00:26:39,958 --> 00:26:44,250
ಅವನಿಗೆ ದೂರವಿರಲು ಹೇಳಿದೆ. ಆತ ಕೇಳಲಿಲ್ಲ,
ಹಾಗಾಗಿ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದೆ.

318
00:26:44,416 --> 00:26:45,625
ಆತ ಏನು ಮಾಡಿದ?

319
00:26:45,958 --> 00:26:49,500
-ಬೆದರಿಕೆ ಹಾಕಿದನೇ? ತೊಂದರೆ ಕೊಟ್ಟನೇ?
-ಸದ್ಯಕ್ಕೆ ನೀವು ತೊಂದರೆ ಕೊಡುತ್ತಿದ್ದೀರಿ.

320
00:26:49,666 --> 00:26:53,166
ನಾನು ಪ್ರತಿ ಸಲವೂ ಪ್ರತಿಯೊಬ್ಬ ಅಧಿಕಾರಿಗೂ
ನನ್ನ ಜೀವನ ಕಥೆ ಹೇಳಬೇಕಾ?

321
00:26:53,333 --> 00:26:54,250
ನಿಮ್ಮೆಲ್ಲರಿಗೂ?

322
00:26:55,916 --> 00:26:58,333
ನಿಮ್ಮೆಲ್ಲರಿಗೂ ಅಂದರೆ?
ಇಲ್ಲಿಗೆ ಬೇರಾರು ಬಂದಿದ್ದರು?

323
00:27:07,000 --> 00:27:07,833
ಜೂಲಿಯಾ.

324
00:27:07,916 --> 00:27:09,541
ಜೂಡ್‌ನನ್ನೇಕೆ ನಾಯಕ್ ಹುಡುಕ್ತಿದ್ದಾನೆ?

325
00:27:10,958 --> 00:27:14,708
ಅಂದರೆ ಅವನಿಗೆ ಬಾನಿ ಮತ್ತು ಜೂಡ್‌ಗೆ
ಸಂಬಂಧಿಸಿದಂತೆ ಈಗಾಗಲೇ ತಿಳಿದಿತ್ತು.

326
00:27:18,625 --> 00:27:20,125
ಆತ್ಮಾ
ಹೀಲಿಂಗ್

327
00:27:20,208 --> 00:27:21,791
ಇಷ್ಟು ಬೇಗ ವಾಪಸ್ ಬಂದೆಯಾ?

328
00:27:21,958 --> 00:27:23,291
ಹೇಗಿತ್ತು? ಮಜಾ ಬಂತಾ?

329
00:27:24,208 --> 00:27:25,291
ಸುಳ್ಳು ಹೇಳಿದಿರಿ.

330
00:27:25,916 --> 00:27:28,458
ನನಗೆ ಸೂಜಿ ಹಾಕಲ್ಲ ಅಂತ ನೀವು ಹೇಳಿದ್ದಿರಿ.

331
00:27:38,250 --> 00:27:39,083
ಕ್ಷಮಿಸು.

332
00:27:42,708 --> 00:27:43,750
ತುಂಬಾ ನೋವಾಯಿತಾ?

333
00:27:45,750 --> 00:27:47,416
ಆದರೆ ತುಂಬಾ ಮಜವೂ ಬಂತು.

334
00:27:48,416 --> 00:27:50,916
ವೈದ್ಯರು ನನ್ನನ್ನು
ದೊಡ್ಡ ಕುರ್ಚಿಯಲ್ಲಿ ಕೂರಿಸಿದರು.

335
00:27:51,833 --> 00:27:54,916
-ಅಲ್ಲಿ ಹಲವಾರು ಲೈಟ್ಸ್ ಮತ್ತು ಗುಂಡಿಗಳಿದ್ದವು.
-ಹೌದಾ?

336
00:27:55,291 --> 00:27:57,375
-ಅದಾದಮೇಲೆ, ನಾನು ತೋಟಕ್ಕೆ ಹೋದೆ.
-ಸರಿ.

337
00:27:57,541 --> 00:28:01,041
ಅಲ್ಲಿ ನನಗೊಬ್ಬ ಹೊಸ ಸ್ನೇಹಿತ ಸಿಕ್ಕಿದ.
ನಾವು ತುಂಬಾ ಆಟವಾಡಿದೆವು.

338
00:28:01,208 --> 00:28:04,000
ಅದ್ಭುತ. ಅಂದರೆ ನೀನು ಬಹಳ ಮೋಜು ಮಾಡಿದೆ, ಅಲ್ವಾ?

339
00:28:04,166 --> 00:28:06,958
ನನಗೊಂದು ಉಡುಗೊರೆ ಸಿಗುತ್ತದೆಂದು ಹೇಳಿದಿರಿ.

340
00:28:11,625 --> 00:28:14,750
-ನಾನು ಹಾಗೆ ಹೇಳಿದೆನಾ?
-ಹೌದು. ಮರೆತುಹೋದಿರಾ?

341
00:28:15,375 --> 00:28:16,583
ಉಡುಗೊರೆನಾ?

342
00:28:20,875 --> 00:28:23,916
-ಹೌದು.
-ಧನ್ಯವಾದ!

343
00:28:28,000 --> 00:28:30,291
ಹಾಂ, ತಾವಡೆ. ಹೇಳು.

344
00:28:31,083 --> 00:28:33,000
ಏನು? ನಿಜವಾಗಲೂ?

345
00:28:33,750 --> 00:28:37,458
ಮೇಡಂ, ಜಯ್ ಮತ್ತು ರೂಮಿ
ಒಂದು ಹೋಟೆಲ್ ಕೋಣೆಯಲ್ಲಿ ತಂಗಿದ್ದಾರೆ.

346
00:28:38,500 --> 00:28:42,208
ನಾನು ಆ ಅರ್ಥದಲ್ಲಿ ಹೇಳಲಿಲ್ಲ, ಮೇಡಂ.
ಬಾನಿ ತಂಗಿದ್ದ ಅದೇ ಕೋಣೆ.

347
00:28:45,500 --> 00:28:47,083
ಹೋಟೆಲ್ ಬಾಂಬೆ ಮೂನ್

348
00:29:01,375 --> 00:29:04,000
ಕೇಳು, ನಾವಿಲ್ಲಿ ನಿಖರವಾಗಿ
ಏನು ಮಾಡುತ್ತಿದ್ದೇವೆ?

349
00:29:04,375 --> 00:29:08,958
ಯಾರಾದರೂ ಸತ್ತ ಜಾಗದಲ್ಲಿ ಆತ್ಮಗಳು
ಸ್ವಲ್ಪ ಸಮಯದವರೆಗೆ ಸುತ್ತಾಡುತ್ತಾ ಇರುತ್ತವೆ.

350
00:29:11,583 --> 00:29:14,041
-ಆತ್ಮನಾ?
-ಆತ್ಮ.

351
00:29:15,041 --> 00:29:16,500
ಅದೊಂದು ಶಕ್ತಿಯ ರೂಪ.

352
00:29:16,833 --> 00:29:19,333
ನಾವು ಆ ಶಕ್ತಿಯನ್ನು
ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ.

353
00:29:19,875 --> 00:29:22,916
ನಾವು ಯಶಸ್ವಿಯಾದರೆ, ಈ ರಾತ್ರಿ
ಬಾನಿಯೊಂದಿಗೆ ಭೇಟಿಯಾಗುವ ಅವಕಾಶವಿದೆ.

354
00:29:25,125 --> 00:29:26,291
ಮತ್ತು ಇದೆಲ್ಲ ಏನು?

355
00:29:26,833 --> 00:29:31,125
ಇವು ಇಎಮ್ಎಫ್ ಮೀಟರ್‌ಗಳು.
ಇದು ಗೈಗರ್ ಕೌಂಟರ್.

356
00:29:31,208 --> 00:29:32,666
ಇದು ಇವಿಪಿ ರೆಕಾರ್ಡರ್.

357
00:29:33,875 --> 00:29:35,666
ಇದು ಆತ್ಮಗಳ ಧ್ವನಿ ಕೇಳುವ ಸಾಧನ.

358
00:29:43,416 --> 00:29:44,375
ತಯಾರಾ?

359
00:29:51,375 --> 00:29:52,458
ಸರಿ.

360
00:29:57,125 --> 00:30:02,250
ಬಾನಿ, ನಿನ್ನ ಆತ್ಮ ಇಲ್ಲಿ ಇದ್ದರೆ,
ದಯವಿಟ್ಟು ನಮಗೆ ಒಂದು ಸಂಜ್ಞೆ ನೀಡು.

361
00:30:02,500 --> 00:30:05,041
ನಮ್ಮೊಂದಿಗೆ ಮಾತಾಡಲು ಆಸಕ್ತಿ ಇದ್ದರೆ,

362
00:30:05,416 --> 00:30:07,666
ಬಲಭಾಗದ ಇಎಮ್ಎಫ್ ಮೀಟರ್ ಕಡೆಗೆ ಚಲಿಸು.

363
00:30:08,416 --> 00:30:10,958
ಮತ್ತು ಮಾತಾಡಲು ಇಷ್ಟವಿಲ್ಲದಿದ್ದರೆ,

364
00:30:11,250 --> 00:30:13,625
ಎಡಭಾಗದ ಇಎಮ್ಎಫ್ ಮೀಟರ್ ಕಡೆಗೆ ಚಲಿಸು.

365
00:30:32,333 --> 00:30:35,458
ಕ್ಷಮಿಸು. ಇದು ನಮ್ಮಮ್ಮ.
ಇತ್ತೀಚೆಗೆ ನನ್ನ ತಲೆ ತಿನ್ನುತ್ತಿದ್ದಾರೆ.

366
00:30:38,083 --> 00:30:40,625
ನೀನು ಅದೃಷ್ಟವಂತ. ನಿನಗೆ ತಾಯಿಯಾದರೂ ಇದ್ದಾರೆ.

367
00:30:44,625 --> 00:30:46,500
ನನ್ನ ತಾಯಿ ಬಹಳ ಹಿಂದೆಯೇ ತೀರಿಕೊಂಡರು.

368
00:30:48,083 --> 00:30:49,333
ಬೆಂಕಿ ದುರಂತದಲ್ಲಿ.

369
00:30:51,500 --> 00:30:52,666
ಕೇಳಿ ಬೇಜಾರಾಯಿತು.

370
00:30:54,166 --> 00:30:56,041
ಆಕೆ ಸಂಶೋಧನಾ ವಿಜ್ಞಾನಿ, ಗೊತ್ತಾ?

371
00:30:56,583 --> 00:30:58,041
ಅದರಲ್ಲಿ ಬಹಳ ಪ್ರತಿಭಾವಂತೆ.

372
00:31:02,833 --> 00:31:05,833
ನನ್ನ ಮೊದಲ ಅಧಿಸಾಮಾನ್ಯ ಅನುಭವವೂ
ನನ್ನ ತಾಯಿಗೆ ಸಂಬಂಧಿಸಿದೆ.

373
00:31:06,458 --> 00:31:07,458
ನನಗೆ ಒಂಬತ್ತು ವರ್ಷ.

374
00:31:09,166 --> 00:31:12,625
ಅಮ್ಮ ಹೇಳುತ್ತಲೇ ಇದ್ದಳು,
ಆಕೆಗೆ ದೆವ್ವ ಕಾಡುತ್ತಿದೆ ಎಂದು.

375
00:31:13,000 --> 00:31:17,416
-ಏನು?
-ಖಂಡಿತ, ಯಾರೂ ಅವಳನ್ನು ನಂಬಲಿಲ್ಲ.

376
00:31:18,208 --> 00:31:19,208
ನನ್ನನ್ನು ಬಿಟ್ಟು.

377
00:31:21,291 --> 00:31:23,333
ಆಕೆಗೆ ಹುಚ್ಚು ಹಿಡಿದಿದೆ ಎಂದು ಭಾವಿಸಿದರು.

378
00:31:24,791 --> 00:31:29,166
ಆದರೆ ನನ್ನ ಸಹೋದರನ ಮರಣದ ನಂತರ,
ಏನೋ ಬದಲಾಯಿತು.

379
00:31:30,916 --> 00:31:32,333
ನಿಖರವಾಗಿ ಏನಾಯಿತು?

380
00:31:37,416 --> 00:31:38,791
ಹೇಳಿಕೊಳ್ಳಲು ಮನಸ್ಸಿದ್ದರೆ.

381
00:31:43,291 --> 00:31:45,041
ಶಾದಾಬ್‌ಗೆ ಪ್ರೊಜೆರಿಯಾ ಇತ್ತು.

382
00:31:46,625 --> 00:31:48,291
ಸಾಯುವಾಗ ಅವನಿಗೆ ಬರೀ ಎರಡು ವರ್ಷ.

383
00:31:52,000 --> 00:31:54,375
ಅಮ್ಮ ಅದಾಗಲೇ ಡಿಸ್ಟೈಮಿಯಾದಿಂದ ಬಳಲುತ್ತಿದ್ದರು.

384
00:31:57,000 --> 00:31:58,708
ಆಕೆಗೆ ಮಗನ ಸಾವನ್ನು ಸಹಿಸಲಾಗಲಿಲ್ಲ.

385
00:32:01,333 --> 00:32:04,750
ಮಾಮನಿಗೆ ಅನಿಸಿತು,
ಆಕೆಗೆ ಹುಚ್ಚು ಹಿಡಿದಿದೆ ಎಂದು.

386
00:32:10,750 --> 00:32:11,708
ಕೇಳು, ನಾನು...

387
00:32:12,458 --> 00:32:16,083
ಕ್ಷಮಿಸು, ನಾನು ಈಗ...
ನಾನು ಈಗಲೇ ಬಂದೆ. ಈ ನನ್ನ ಸೈನಸ್ ಸಮಸ್ಯೆ.

388
00:32:24,916 --> 00:32:30,000
ಅಮ್ಮ ಹುಚ್ಚಿಯಲ್ಲ, ಸರಿನಾ? ಅಮ್ಮ ನಿನ್ನನ್ನು
ಪ್ರೀತಿಸುತ್ತಾಳೆ. ಅಮ್ಮ ಹುಚ್ಚಿಯಲ್ಲ, ಸರಿನಾ?

389
00:32:30,125 --> 00:32:32,125
ಅಮ್ಮ ನಿನ್ನನ್ನು ಪ್ರೀತಿಸುತ್ತಾಳೆ, ರೂಮಿ.

390
00:32:33,750 --> 00:32:36,666
ರೂಮಿ, ನೆನಪಿಡು, ಅಮ್ಮ ಹುಚ್ಚಿಯಲ್ಲ.
ರೂಮಿ, ದಯವಿಟ್ಟು.

391
00:32:36,750 --> 00:32:40,208
ರೂಮಿ! ನೆನಪಿಡು, ಅಮ್ಮ ನಿನ್ನನ್ನು
ಪ್ರೀತಿಸುವಳು, ಸರಿನಾ? ಹಿಂತಿರುಗುವೆ.

392
00:32:40,291 --> 00:32:42,333
ಅಣ್ಣ, ದಯವಿಟ್ಟು.

393
00:32:42,791 --> 00:32:46,375
ಅಣ್ಣ, ದಯವಿಟ್ಟು.

394
00:32:46,666 --> 00:32:49,500
ರೂಮಿ! ನೆನಪಿಡು,
ಅಮ್ಮ ನಿನ್ನನ್ನು ಪ್ರೀತಿಸುತ್ತಾಳೆ, ಸರಿನಾ?

395
00:33:41,541 --> 00:33:42,458
ರೂಮಿ?

396
00:34:03,250 --> 00:34:04,166
ರೂಮಿ?

397
00:36:30,541 --> 00:36:32,291
-ಅವರು ಎಲ್ಲಿ?
-408ರಲ್ಲಿ, ಮೇಡಂ.

398
00:36:32,541 --> 00:36:33,916
-ಬನ್ನಿ, ಕಾನಿಟ್ಕರ್.
-ಜಾಗ್ರತೆ.

399
00:36:48,083 --> 00:36:48,916
ಜಯ್?

400
00:36:52,125 --> 00:36:53,125
ಅಯ್ಯೋ.

401
00:36:58,833 --> 00:37:00,250
-ಏನು ನಡೆಯುತ್ತಿದೆ?
-ಮೇಡಂ...

402
00:37:00,333 --> 00:37:02,250
ಇದರಿಂದ ದೂರವಿರುವಂತೆ ನಿಮಗೆ ಹೇಳಿದೆ.

403
00:37:02,333 --> 00:37:05,125
ತನಿಖೆ ನಡೆಯುತ್ತಿದೆ.
ನೀವಿಬ್ಬರೂ ಜೈಲಿಗೆ ಹೋಗಬಯಸುವಿರಾ?

404
00:37:05,208 --> 00:37:06,583
ಒಳಗೆ ಯಾರೂ ಇಲ್ಲ.

405
00:37:06,666 --> 00:37:07,791
ಜಯ್ ಎಲ್ಲಿ?

406
00:37:08,916 --> 00:37:10,041
ಜಯ್ ಎಲ್ಲಿ?

407
00:37:10,708 --> 00:37:12,583
ಅವನನ್ನೇ ಹುಡುಕುತ್ತಿದ್ದೇನೆ.

408
00:37:19,625 --> 00:37:20,458
ಅಯ್ಯೋ.

409
00:37:21,083 --> 00:37:23,333
ಇಲ್ಲ, ಇಲ್ಲ, ಇಲ್ಲ... ಜಯ್!

410
00:37:29,750 --> 00:37:30,583
ಜಯ್!

411
00:37:32,291 --> 00:37:33,125
ಜಯ್!

412
00:37:36,041 --> 00:37:37,208
ಪೃಥ್ವಿ!

413
00:37:50,125 --> 00:37:51,208
ಜಯ್.

414
00:38:02,625 --> 00:38:03,875
ಜಯ್!

415
00:39:33,208 --> 00:39:34,208
ಕ್ಷಮಿಸು, ಪೃಥ್ವಿ.

416
00:40:10,291 --> 00:40:11,208
ಜಯ್?

417
00:40:13,125 --> 00:40:14,083
ಜಯ್!

418
00:40:40,583 --> 00:40:42,291
-ಮೇಡಂ! ಮೇಡಂ!
-ಜಯ್! ಜಯ್!

419
00:40:42,541 --> 00:40:44,000
ಮೇಡಂ, ಏನಾಯಿತು?

420
00:40:44,333 --> 00:40:45,541
ಕ್ಷಮಿಸು, ಪೃಥ್ವಿ.

421
00:40:46,375 --> 00:40:47,375
ನನ್ನನ್ನು ಕ್ಷಮಿಸು.

422
00:40:48,708 --> 00:40:50,125
ಏನಿದು!

423
00:41:04,125 --> 00:41:05,458
ಕ್ಷಮಿಸು.

424
00:41:06,583 --> 00:41:08,750
ನಿನ್ನನ್ನು ಹೋಟೆಲ್‌ಗೆ ಕರೆದೊಯ್ಯಬಾರದಿತ್ತು.

425
00:41:21,500 --> 00:41:23,708
ಆರಾಮವಾಗಿದ್ದೀಯ? ಜಯ್?

426
00:41:25,291 --> 00:41:27,166
ಇಂದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

427
00:41:27,541 --> 00:41:30,750
-ಅವನ ಮೇಲೆ ನಿಗಾ ಇರಿಸಿ.
-ತುಂಬಾ ಧನ್ಯವಾದ, ಅಧಿಕಾರಿಗಳೇ.

428
00:41:31,166 --> 00:41:33,583
ಆಂಟಿ, ಜಯ್ ವಿಷಯದಲ್ಲಿ
ನಾನು ನಿಮಗೆ ಸಹಾಯ ಮಾಡಲಾ?

429
00:41:34,333 --> 00:41:35,541
ನಾನು ನಿಭಾಯಿಸುವೆ.

430
00:41:35,875 --> 00:41:37,000
-ರೂಮಿ?
-ಹೌದು.

431
00:41:37,083 --> 00:41:38,458
ಕರೆ ಮಾಡಿದವಳು ನೀನೇನಾ?

432
00:41:38,541 --> 00:41:40,125
-ಧನ್ಯವಾದ, ಕಂದ.
-ಪರವಾಗಿಲ್ಲ, ಆಂಟಿ.

433
00:41:40,208 --> 00:41:41,041
ಜಯ್!

434
00:41:42,708 --> 00:41:43,750
ಜಯ್!

435
00:41:44,250 --> 00:41:47,375
ನೀವು ಜಯ್‌ನನ್ನು ಕಾಪಾಡಿದಾಗ,
ನಿಮಗೇನೋ ಆಗಿತ್ತು.

436
00:41:48,708 --> 00:41:49,708
ಏನಾಗಿತ್ತು?

437
00:41:53,625 --> 00:41:55,208
ಬಾನಿಳ ಪ್ರಕರಣದಿಂದ ದೂರವಿರು.

438
00:41:56,291 --> 00:41:58,833
-ಮುಂದಿನ ಸಲ ಎಚ್ಚರಿಕೆ ಕೊಡಲ್ಲ.
-ಅರ್ಥವಾಗುತ್ತಿಲ್ವಾ?

439
00:41:59,291 --> 00:42:00,916
ಮುಂದಿನ ಸಲ ಇದು ನಡೆಯುತ್ತೆ.

440
00:42:01,291 --> 00:42:02,875
ಬಾನಿಳನ್ನು ಜಯ್ ಹುಡುಕುತ್ತಿಲ್ಲ.

441
00:42:03,375 --> 00:42:05,500
ಬಾನಿ ಹಾಗೂ ಅಂಧಕಾರ
ಜಯ್‌ನನ್ನು ಹುಡುಕುತ್ತಿರುವುದು.

442
00:42:13,375 --> 00:42:15,333
ನೀನು ಯಾವುದರ ಬೆನ್ನತ್ತಿದ್ದೀಯ ಈಗ?

443
00:42:20,208 --> 00:42:21,083
ಜಯ್‌ ಶೇಠ್.

444
00:42:22,750 --> 00:42:23,875
ಅಣ್ಣ-ತಮ್ಮಂದಿರೇ?

445
00:42:26,833 --> 00:42:28,208
ನೀನು ಸಿಕ್ಕಾಕೊಂಡೆ, ಮಗಾ.

446
00:42:48,500 --> 00:42:52,791
ಪೃಥ್ವಿ ಕೋಮಾದಲ್ಲಿರುವವರೆಗೂ,
ಜಯ್‌ನ ಮಾನಸಿಕ ಒತ್ತಡ ಹೆಚ್ಚುತ್ತಲೇ ಇರುತ್ತದೆ.

447
00:42:52,875 --> 00:42:53,875
ಗ್ಲಾಸ್ಗೋ ಮಾಪಕ

448
00:42:57,500 --> 00:43:01,291
ಜೀವ ಬೆಂಬಲವನ್ನು ಹಿಂತೆಗೆದುಕೊಳ್ಳುವ ಬಗ್ಗೆ
ತಿಳುವಳಿಕೆಯುಳ್ಳ ನಿರಾಕರಣಾ ನಮೂನೆ

449
00:43:38,958 --> 00:43:40,250
10:35
ಬುಧವಾರ

450
00:43:42,291 --> 00:43:43,458
ಏನಾಯಿತು, ಜಯ್?

451
00:43:44,708 --> 00:43:45,666
ನಿದ್ದೆ ಬರುತ್ತಿಲ್ಲವೇ?

452
00:43:51,250 --> 00:43:53,625
ಅಂಧಕಾರ ನಿನ್ನನ್ನು ಮಲಗಲು ಬಿಡಲ್ಲ.

453
00:43:54,583 --> 00:43:57,625
ಅದು ನಿನ್ನನ್ನು ಗಮನಿಸುತ್ತಿದೆ. ಈಗಲೂ ಕೂಡ.

454
00:44:06,666 --> 00:44:12,666
ಅಂಧಕಾರ, ಪೃಥ್ವಿ, ಬಾನಿ, ಯಂತ್ರ...
ನನಗೆ ಎಲ್ಲವೂ ಗೊತ್ತು.

455
00:44:13,708 --> 00:44:15,041
ಯಾರು ನೀನು?

456
00:44:15,125 --> 00:44:19,625
ಇನ್ನಷ್ಟು ತಿಳಿಯಬೇಕಾ, ಜಯ್?
ನಾಳೆ ಬೆಳಗ್ಗೆ 10:00ಕ್ಕೆ ಸಿದ್ಧನಾಗಿರು.

457
00:44:28,375 --> 00:44:29,750
-ಇಲ್ಲೇನು ನಡೀತಿದೆ?
-ಮೇಡಂ...

458
00:44:29,916 --> 00:44:31,708
-ನೀವು ಜೈಲಿಗೆ ಹೋಗಬೇಕಾ?
-ಜಯ್ ಎಲ್ಲಿ?

459
00:44:48,916 --> 00:44:52,583
ಆತ್ಮಾ, ಆತ್ಮಾ, ಆತ್ಮಾ...

460
00:47:05,083 --> 00:47:07,083
ಉಪ ಶೀರ್ಷಿಕೆ ಅನುವಾದ:
ಹೇಮಂತ್ ಕುಮಾರ್

