1
00:00:23,166 --> 00:00:28,666
ಆತ್ಮಾ ಹೀಲಿಂಗ್

2
00:01:00,208 --> 00:01:01,041
ಆಯೆಷಾ

3
00:01:02,416 --> 00:01:03,250
ಆಯೆಷಾ?

4
00:01:06,125 --> 00:01:09,125
ಬಾನಿಳನ್ನು ಹುಡುಕುವುದನ್ನು ನಿಲ್ಲಿಸು,
ಇಲ್ಲವೇ ಈಕೆ ಕಾಣೆಯಾಗುವಳು.

5
00:01:10,083 --> 00:01:12,083
ತನಿಖೆ ನಿಲ್ಲಿಸು. ಇಲ್ಲದಿದ್ದರೆ...

6
00:01:12,958 --> 00:01:15,458
ನಿಮ್ಮ ಪ್ರೇಮಕಥೆ
ಶುರುವಾಗುವ ಮೊದಲೇ ಮುಗಿಸಿಬಿಡುವೆ.

7
00:01:16,375 --> 00:01:20,333
ಇದು ನಿನಗೆ ಕೊನೆಯ ಎಚ್ಚರಿಕೆ. ಅರ್ಥವಾಯಿತಾ?

8
00:01:24,833 --> 00:01:28,750
ಆಯೆಷಾ? ಆಯೆಷಾ, ನಿನಗೇನೂ ಆಗಿಲ್ಲ ತಾನೆ?

9
00:01:30,041 --> 00:01:32,375
ಅವನು ನಿನಗೇನು ಮಾಡಿದ? ಆಯೆಷಾ?

10
00:01:34,375 --> 00:01:37,291
ಕಾನಿಟ್ಕರ್, ತಾವಡೆ ಮತ್ತು ಜಾಧವ್‌ರನ್ನು
ಮೇಡಮ್‌ನ ಭದ್ರತೆಗೆ ಇರಿಸಿ.

11
00:01:37,375 --> 00:01:39,500
-ಆಯುಕ್ತರ ಜತೆ ಮಾತಾಡುತ್ತೇನೆ.
-ಖಂಡಿತ.

12
00:01:40,000 --> 00:01:40,958
ಬಾ, ಹೋಗೋಣ.

13
00:01:41,083 --> 00:01:43,208
ಕ್ಷಮಿಸು. ಇದೆಲ್ಲಾ ನನ್ನದೇ ತಪ್ಪು.

14
00:01:45,666 --> 00:01:47,416
ಹೀಗೆ ಮತ್ತೆ ಆಗಲ್ಲ, ಮಾತು ಕೊಡುತ್ತೇನೆ.

15
00:02:14,416 --> 00:02:15,291
ಛೇ!

16
00:02:16,875 --> 00:02:19,625
ಮಹೇಶ್ ನಾಯಕ್‌
ಪೊಲೀಸ್ ಇನ್ಸ್‌ಪೆಕ್ಟರ್

17
00:02:22,166 --> 00:02:25,000
ಕದಮ್? ಉತ್ಸಾಹ ಕಳೆದುಕೊಂಡೆಯಾ?

18
00:02:26,625 --> 00:02:28,958
ಜೀವನ ಒಂದು ಸಿನಿಮಾ ಅಂದುಕೊಂಡೆಯಾ?

19
00:02:29,583 --> 00:02:30,666
ನೀನು ನಾಯಕಿನಾ?

20
00:02:31,208 --> 00:02:32,541
ಇದು ಮುಂಬೈ, ಅರ್ಥವಾಯಿತಾ?

21
00:02:32,958 --> 00:02:34,833
ಇಲ್ಲಿ ತಮ್ಮ ಮಿತಿಯಲ್ಲಿರಬೇಕು.

22
00:02:35,625 --> 00:02:38,916
ಜೂಡ್‌ನನ್ನು ಆಮಿಷವಾಗಿ ಬಳಸಿ,
ಈ ಪ್ರಕರಣ ಬಗೆಹರಿಸಬಹುದು ಅಂದುಕೊಂಡೆಯಾ?

23
00:02:40,458 --> 00:02:42,041
ತುಂಬಾ ಜಾಣೆ ಅಂದುಕೊಂಡೆಯಾ?

24
00:02:42,666 --> 00:02:44,041
ನಿನಗೆ ಕಲ್ಪನೆಯೇ ಇಲ್ಲ,

25
00:02:44,958 --> 00:02:48,250
ನಿನ್ನ ವೃತ್ತಿ ಮತ್ತು ಜೀವನ
ಹೇಗೆ ಅಸ್ತವ್ಯಸ್ತವಾಗುತ್ತೆಂದು.

26
00:02:49,666 --> 00:02:52,416
ಏನು ಮಾಡಲಿದ್ದೀಯಾ? ಏನು ಮಾಡಲಿದ್ದೀಯಾ?

27
00:02:52,666 --> 00:02:55,750
-ಹೇ, ಕದಮ್, ತಲೆಕೆಟ್ಟಿದೆಯಾ?
-ಹೆದರಿಬಿಟ್ಟೆಯಾ?

28
00:02:58,541 --> 00:03:01,958
ನೀನು ನೀಡುತ್ತಿದ್ದ
ಆ ಉಪದೇಶಗಳೆಲ್ಲಾ ಎಲ್ಲಿ ಹೋದವು?

29
00:03:02,333 --> 00:03:05,458
-ಏನು ಮಾಡುತ್ತಿದ್ದೀಯಾ? ಗನ್ ಇಳಿಸು.
-ಯಾರದು?

30
00:03:07,708 --> 00:03:11,083
-ಯಾರನ್ನು ರಕ್ಷಿಸಲು ನೋಡುತ್ತಿದ್ದೀಯಾ? ಯಾರದು?
-ಗನ್ ಇಳಿಸು.

31
00:03:11,541 --> 00:03:14,958
ಗೋಖಲೆ ಸರ್! ಗೋಖಲೆ ಸರ್!
ಈಕೆ ಏನು ಮಾಡುತ್ತಿದ್ದಾಳೆ?

32
00:03:15,333 --> 00:03:17,708
ಕದಮ್! ಕದಮ್, ಏನಿದು ಬುದ್ಧಿಗೇಡಿತನ?

33
00:03:18,458 --> 00:03:19,916
ಕದಮ್, ಗನ್ ಕೆಳಗಿಳಿಸು.

34
00:03:20,291 --> 00:03:21,541
ಗನ್ ಕೆಳಗಿಳಿಸು!

35
00:03:21,708 --> 00:03:23,916
ಕದಮ್, ಗನ್ ಕೆಳಗಿಳಿಸು. ಅದೊಂದು ಆದೇಶ!

36
00:03:24,791 --> 00:03:25,791
ಕದಮ್!

37
00:04:19,083 --> 00:04:21,708
ಅಂಧೆರಾ

38
00:04:41,458 --> 00:04:45,083
ಅಮ್ಮ, ಏನು ಹುಡುಕುತ್ತಿದ್ದೀರಿ?

39
00:04:46,375 --> 00:04:47,208
ಇದನ್ನಾ?

40
00:04:47,291 --> 00:04:49,083
ಜೀವ ಬೆಂಬಲವನ್ನು ಹಿಂತೆಗೆದುಕೊಳ್ಳುವುದು

41
00:04:49,833 --> 00:04:51,041
ಹೀಗೆ ಹೇಗೆ ಮಾಡಬಲ್ಲಿರಿ?

42
00:04:51,958 --> 00:04:52,791
ಜಯ್, ನಾನು...

43
00:04:52,875 --> 00:04:55,333
ನಿಜವಾಗಲೂ ಪೃಥ್ವಿಗೆ
ಜೀವ ಬೆಂಬಲ ತೆಗೆಸುತ್ತಿದ್ದೀರಾ?

44
00:04:55,500 --> 00:04:58,208
-ನೀನು ಅಂದುಕೊಳ್ಳುತ್ತಿರುವಂತೆ ಅಲ್ಲ.
-ಮತ್ತೇನದು, ಅಮ್ಮ?

45
00:04:58,291 --> 00:05:01,208
ಹಣದ ಕೊರತೆನಾ? ನಾನು ಕೆಲಸಕ್ಕೆ ಹೋಗುವೆ, ಬಿಡಿ.

46
00:05:04,291 --> 00:05:05,958
ಎಂದಾದರೂ ಹಣದ ಕೊರತೆ ಅನಿಸಿದೆಯಾ?

47
00:05:06,041 --> 00:05:09,166
ನನಗಷ್ಟೇ ಗೊತ್ತು, ಹಗಲು-ರಾತ್ರಿ ದುಡಿದು
ಹೇಗೆ ನಿಮ್ಮನ್ನು ಬೆಳೆಸಿದೆ ಅಂತ.

48
00:05:09,250 --> 00:05:12,166
ಹಾಗಾದರೆ ಏಕೆ?
ತಾಯಿಯಾಗಿ ಹೀಗೆ ಯೋಚಿಸಲು ಹೇಗೆ ಸಾಧ್ಯ?

49
00:05:12,708 --> 00:05:14,166
ಏಕೆಂದರೆ ನಾನು ಅವನ ತಾಯಿ.

50
00:05:14,541 --> 00:05:17,708
ಒಬ್ಬ ಮಗನನ್ನು ಉಳಿಸಲು ಹೋಗಿ,
ಇನ್ನೊಬ್ಬನನ್ನು ಕಳೆದುಕೊಳ್ಳಲಾರೆ.

51
00:05:17,791 --> 00:05:19,000
ಇಲ್ಲ, ಹಾಗೆ ಮಾಡಬೇಡಿ.

52
00:05:19,083 --> 00:05:21,750
ನಿಮ್ಮ ನಿರ್ಧಾರಕ್ಕಾಗಿ ನನ್ನನ್ನ ದೂಷಿಸಬೇಡಿ.

53
00:05:22,166 --> 00:05:23,625
ದೂಷಿಸುತ್ತಿಲ್ಲ, ಮಗನೇ.

54
00:05:28,000 --> 00:05:31,291
ನನಗೆ ಅದು ಕಾಣಿಸಲ್ಲ ಅನಿಸುತ್ತಾ,

55
00:05:33,250 --> 00:05:35,625
ನೀನು ಪೃಥ್ವಿಯನ್ನು ಬರೀ ನೋಡಿದರೆ ಸಾಕು

56
00:05:35,916 --> 00:05:38,166
ಎಷ್ಟು ಹಿಂಸೆ ಅನುಭವಿಸುತ್ತೀಯ ಎಂದು?

57
00:05:40,875 --> 00:05:42,916
ಪೃಥ್ವಿಯ ಗ್ಲಾಸ್ಗೋ ಮಾಪನ ನಿನಗೆ ಗೊತ್ತು.

58
00:05:43,583 --> 00:05:46,666
ಅಕಸ್ಮಾತ್ ನಿನಗೇನಾದರೂ ಆದರೆ ನಾನೇನು ಮಾಡುವುದು?

59
00:05:46,750 --> 00:05:50,208
ಇದನ್ನೆಲ್ಲಾ ನಿಮಗೆ ಯಾರು
ತಲೆಗೆ ತುಂಬುತ್ತಿದ್ದಾರೆ? ಅಜೀಜ್? ಆ ಅಯೋಗ್ಯನಾ?

60
00:05:50,291 --> 00:05:52,375
ನಿಮಗೆ ಏನನ್ನೂ ಹೇಳದಿರಲೂ ಸಹ ಹೇಳಿದ್ದೆ.

61
00:05:52,458 --> 00:05:53,416
ಸರಿಯಾಗಿ ವರ್ತಿಸು.

62
00:05:53,500 --> 00:05:57,375
ಪೃಥ್ವಿ ಕೋಮಾದಲ್ಲಿರೋದು ಅಪಘಾತದಿಂದಾಗಿ ಅಲ್ಲ.
ನಾನು ಅವನ ಜೊತೆ ಇದ್ದುದರಿಂದ ಗೊತ್ತು.

63
00:05:57,500 --> 00:06:00,750
ಅವನ ಮೇಲೆ ಆ ಅಂಧಕಾರ ದಾಳಿಮಾಡಿತು, ಅಮ್ಮ.
ನನ್ನ ಕಣ್ಣಾರೆ ನೋಡಿದೆ.

64
00:06:14,166 --> 00:06:15,166
ಅಮ್ಮ.

65
00:06:17,666 --> 00:06:20,125
ಅಮ್ಮ. ಕ್ಷಮಿಸಿ, ಅಮ್ಮ.

66
00:06:22,083 --> 00:06:23,833
ನಿನ್ನ ಮಾತಲ್ಲಿ ಅರ್ಥವಿದೆಯಾ ನೋಡು, ಜಯ್.

67
00:06:23,958 --> 00:06:26,125
ದಯವಿಟ್ಟು. ದಯವಿಟ್ಟು ನನ್ನನ್ನು ನಂಬಿ, ಅಮ್ಮ.

68
00:06:26,250 --> 00:06:27,625
ನನ್ನನ್ನು ನಂಬಿ.

69
00:06:27,833 --> 00:06:29,041
ಸತ್ಯ ಹೇಳುತ್ತಿದ್ದೇನೆ.

70
00:06:29,125 --> 00:06:33,333
-ನಿನ್ನ ಮನಸ್ಥಿತಿ ಕೆಟ್ಟಿದೆ, ಜಯ್. ಅರ್ಥಮಾಡಿಕೋ.
-ಇಲ್ಲ.

71
00:06:33,416 --> 00:06:35,208
-ನಿನಗೆ ಚಿಕಿತ್ಸೆ ಬೇಕು.
-ಇಲ್ಲ.

72
00:06:35,500 --> 00:06:37,000
ಪೃಥ್ವಿಯನ್ನು ಹೋಗಲು ಬಿಡಬೇಕು.

73
00:06:37,083 --> 00:06:38,875
ನೀವು ಇದನ್ನು ಮಾಡಲು ಸಾಧ್ಯವಿಲ್ಲ.

74
00:06:39,583 --> 00:06:41,375
ನೀವಿದನ್ನು ಮಾಡಲು ನಾನು ಬಿಡಲ್ಲ, ಅಮ್ಮ.

75
00:06:41,833 --> 00:06:43,333
ನೀವಿದನ್ನು ಮಾಡಲು ನಾನು ಬಿಡಲ್ಲ.

76
00:06:44,750 --> 00:06:46,708
ನನ್ನ ಮನಸ್ಸು ಬದಲಾಯಿಸುತ್ತೇನೆ ಅನಿಸುತ್ತಾ?

77
00:06:48,750 --> 00:06:50,208
ನಿರ್ಧಾರ ಮಾಡಿದ್ದೇನೆ.

78
00:06:52,083 --> 00:06:53,916
ದೊಡ್ಡ ತಪ್ಪು ಮಾಡುತ್ತಿದ್ದೀರಿ, ಅಮ್ಮ.

79
00:06:54,500 --> 00:06:55,500
ನಿಮ್ಮನ್ನ ಬಿಡಲ್ಲ.

80
00:07:10,125 --> 00:07:11,125
ಹೌದು, ಸರ್.

81
00:07:14,833 --> 00:07:17,291
ಸರಿ, ಸರ್. ನಾನು ತಲುಪುತ್ತೇನೆ.

82
00:07:18,583 --> 00:07:19,625
ಜೈ ಹಿಂದ್.

83
00:07:57,625 --> 00:07:58,708
ಆರಾಮವಾಗಿದ್ದೀಯಾ?

84
00:08:04,041 --> 00:08:05,083
ಏನಾಯಿತು?

85
00:08:06,500 --> 00:08:07,541
ಯಾರದು?

86
00:08:11,125 --> 00:08:12,833
ಆಯುಕ್ತರು ಕರೆ ಮಾಡಿದ್ದರು.

87
00:08:14,041 --> 00:08:15,458
ಭೇಟಿಯಾಗಲು ಬರಹೇಳಿದ್ದಾರೆ.

88
00:08:17,958 --> 00:08:21,291
ಅಮಾನತು ಖಚಿತ. ನನ್ನ ಕೆಲಸವೂ ಹೋಗಬಹುದು.

89
00:08:23,666 --> 00:08:25,416
ಆ ನಾಯಕ್ ಮತ್ತು ಗೋಖಲೆ...

90
00:08:27,750 --> 00:08:31,208
ಬಾನಿ ಕೇಸಲ್ಲಿ ಏನಾದರೂ ಪುರಾವೆ ಸಿಕ್ಕಿದ್ದರೆ,
ಅವರ ಮುಖಕ್ಕೆ ಎಸೆಯುತ್ತಿದ್ದೆ.

91
00:08:33,041 --> 00:08:35,541
-ಕ್ಷಮಿಸು.
-ಸಮಾಧಾನ.

92
00:08:36,916 --> 00:08:37,916
ಸಮಾಧಾನ.

93
00:08:38,416 --> 00:08:39,875
ಏನೂ ಆಗಲ್ಲ.

94
00:08:40,750 --> 00:08:42,291
ಒಂದು ವೇಳೆ ಆದರೂ ಸಹ,

95
00:08:42,875 --> 00:08:44,291
ನಾವದನ್ನು ನಿಭಾಯಿಸಲು ಸಿದ್ಧ.

96
00:08:45,541 --> 00:08:46,541
ಒಟ್ಟಿಗೆ.

97
00:08:53,166 --> 00:08:54,166
ಕ್ಷಮಿಸು.

98
00:08:57,875 --> 00:08:58,791
ಹಲೋ.

99
00:09:02,583 --> 00:09:03,625
ಈಗಲೇ?

100
00:09:05,375 --> 00:09:06,875
ಸರಿ, ಬರುತ್ತೇನೆ.

101
00:09:24,500 --> 00:09:26,458
-ಜೈ ಹಿಂದ್, ಸರ್.
-ಒಳಗೆ ಬಾ, ಕೆಕೆ.

102
00:09:27,416 --> 00:09:31,291
ಸಹ ಅಧಿಕಾರಿಗೇ ಗನ್ ತೋರಿಸಿದೆಯಾ?
ಅದು ಸ್ವಲ್ಪ ಜಾಸ್ತಿ ಆಯಿತು ಅನಿಸಲ್ವಾ?

103
00:09:32,958 --> 00:09:37,041
ಸರ್, ನಿನ್ನೆ ರಾತ್ರಿ ಠಾಣೆಯಲ್ಲಿ
ನಾಯಕ್‌ಗೆ ಹಾಗೆ ಮಾಡಿದ್ದಕ್ಕೆ...

104
00:09:38,000 --> 00:09:39,625
-ಕ್ಷಮಿಸಿ.
-ಚಿಂತಿಸಬೇಡ.

105
00:09:40,958 --> 00:09:42,416
ವಿವರಿಸುವ ಅಗತ್ಯವಿಲ್ಲ.

106
00:09:43,791 --> 00:09:45,541
ಕೆಕೆ. ಬರೋಟ್.

107
00:09:46,333 --> 00:09:47,416
ವಿಶೇಷ ದಳ.

108
00:09:48,833 --> 00:09:50,291
ಜೈ ಹಿಂದ್, ಸರ್.

109
00:09:50,833 --> 00:09:54,375
ಈ ಬಾರಿ ಅಮಾನತು ಅಲ್ಲ,
ನಿನ್ನ ಸೇವೆಯ ಮುಕ್ತಾಯ ಪತ್ರ ಸಿದ್ಧವಿತ್ತು.

110
00:09:54,625 --> 00:09:57,083
ಆದರೆ, ನಿನ್ನ ಅದೃಷ್ಟ ಚೆನ್ನಾಗಿದೆ. ಕುಳಿತುಕೋ.

111
00:10:01,041 --> 00:10:02,708
ಬರೋಟ್‌ಗೆ ನಿನ್ನ ಕೇಸ್‌ನಲ್ಲಿ ಆಸಕ್ತಿ.

112
00:10:04,750 --> 00:10:05,958
ಬಾನಿ ಬರೂವಾ ಕೇಸ್?

113
00:10:07,083 --> 00:10:10,500
ನೀನು ಹುಡುಕುತ್ತಿರುವ ವ್ಯಕ್ತಿ ಹೆಸರು ಡ್ಯಾರಿಯಸ್
ಡ್ಯಾರಿಯಸ್ ಕೂಪರ್.

114
00:10:11,583 --> 00:10:13,416
ಬಹಳ ಸಮಯದಿಂದ ಅವನ ಬೆನ್ನತ್ತಿದ್ದೇವೆ.

115
00:10:14,333 --> 00:10:15,166
ಏಕೆ?

116
00:10:15,250 --> 00:10:18,166
ಅವನೊಬ್ಬ ಅಪಾಯಕಾರಿ ಮನುಷ್ಯ. ಮಾಜಿ ಗುಪ್ತಚರ.

117
00:10:19,458 --> 00:10:22,583
ಇತ್ತೀಚಿನ ದಿನಗಳಲ್ಲಿ, ಅತಿ ಹೆಚ್ಚು
ಹಣ ಕೊಡುವವರಿಗೆ ಕೆಲಸ ಮಾಡುತ್ತಾನೆ.

118
00:10:24,750 --> 00:10:28,250
ನಿಮಗೆ ಅವನ ಬಗ್ಗೆ ಇಷ್ಟು ಗೊತ್ತಿದ್ದಮೇಲೆ,
ಇನ್ನೂ ಏಕೆ ಹಿಡಿದಿಲ್ಲ?

119
00:10:29,500 --> 00:10:33,916
ಏಕೆಂದರೆ... ಆತ ಕೆಲಸ ಮಾಡುತ್ತಿರುವುದು
ಯಾರಿಗಾಗಿ ಎಂದು ತಿಳಿದುಕೊಳ್ಳಲು ಬಯಸಿದ್ದೆವು.

120
00:10:34,166 --> 00:10:35,416
ಮತ್ತು ಏಕೆ ಎಂದು.

121
00:10:36,125 --> 00:10:38,833
ಏನಾದರೂ ಸ್ವಲ್ಪ ಗೊತ್ತಾಗುತ್ತಿದೆ
ಎನ್ನುವ ಮೊದಲೇ, ಭೂಗತನಾದ.

122
00:10:39,750 --> 00:10:43,125
ನಿನ್ನ ತನಿಖೆಯು ಅವನನ್ನು ಹೊರಗೆ ಎಳೆದುತಂದಿದೆ.

123
00:10:43,541 --> 00:10:46,333
ಅಂದರೆ, ನಿನ್ನ ತನಿಖೆ
ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ.

124
00:10:47,000 --> 00:10:51,166
ಈಗ, ನಿಖರವಾಗಿ ಏನು ನಡೆಯುತ್ತಿದೆ ಎಂದು
ನೀನು ಕಂಡುಹಿಡಿಯಬೇಕು.

125
00:11:02,375 --> 00:11:03,958
ಕಣ್ಣು ತೆರೆ, ಒಮಾರ್.

126
00:11:08,875 --> 00:11:12,791
-ಡೌನ್‌ಲೋಡ್ ಪೂರ್ಣಗೊಂಡಿದೆ.
-ಮರಳಿ ಸ್ವಾಗತ, ಒಮಾರ್. ಎಲ್ಲವೂ ಸರಿಯಿದೆಯಾ?

127
00:11:14,833 --> 00:11:17,750
ಓಲ್ಗ, ಪ್ರಕ್ರಿಯೆಯ ಅನಂತರದ
ಕೊಠಡಿಯನ್ನು ಸಿದ್ಧಗೊಳಿಸು.

128
00:11:18,833 --> 00:11:19,833
ಮತ್ತೆ...

129
00:11:20,333 --> 00:11:22,500
ಇಂದು ತೋಟದಲ್ಲಿ ಹೇಗಿತ್ತು? ಮಜಾ ಬಂತಾ?

130
00:11:22,791 --> 00:11:24,208
ಸಖತ್ತಾಗಿ ಮಜಾ ಮಾಡಿದೆ.

131
00:11:24,583 --> 00:11:27,125
-ಅಲ್ಲೊಬ್ಬ ಸ್ನೇಹಿತನನ್ನೂ ಮಾಡಿಕೊಂಡೆ.
-ಸ್ನೇಹಿತನಾ?

132
00:11:27,666 --> 00:11:29,333
ನಾವಿಬ್ಬರೂ ಕಣ್ಣಾಮುಚ್ಚಾಲೆ ಆಡಿದೆವು.

133
00:11:29,583 --> 00:11:30,750
ಬಹಳ ಮೋಜು ಮಾಡಿದೆವು.

134
00:11:31,041 --> 00:11:33,416
ನೀವು ಅವನನ್ನು ಇಲ್ಲಿಗೆ ಕರೆತರಬಹುದಾ, ಡಾಕ್ಟರ್?

135
00:11:40,250 --> 00:11:42,208
ಮತ್ತೆ, ಆತ ಹೇಗೆ ಕಾಣುತ್ತಾನೆ?

136
00:11:42,416 --> 00:11:43,875
ಥೇಟ್ ನನ್ನಂತೆಯೇ.

137
00:11:44,250 --> 00:11:47,333
ಒಂದೇ ಥರ.
ಆದರೆ ಅವನು ಅಂಧಕಾರದಲ್ಲಿಯೇ ಇರುತ್ತಾನೆ.

138
00:11:48,083 --> 00:11:51,333
-ಅಂಧಕಾರನಾ?
-ಹೌದು, ಏಕೆಂದರೆ ಅವನಿಗೆ ಕಣ್ಣುಗಳಿಲ್ಲ.

139
00:11:52,000 --> 00:11:55,500
ತೋಟದಲ್ಲಿ ಒಂಟಿ ಇರುತ್ತಾನೆ.
ದಯವಿಟ್ಟು ಅವನನ್ನು ಇಲ್ಲಿಗೆ ಕರೆತನ್ನಿ.

140
00:11:58,958 --> 00:11:59,958
ಓಲ್ಗ.

141
00:12:00,708 --> 00:12:01,583
ಬಾ.

142
00:12:06,958 --> 00:12:11,083
ಬಾನಿ. ನೆನಪಿಡು,
ನಿನಗೆ ನನ್ನನ್ನು ನೋಡಲೂ ಕೇಳಲೂ ಆಗದು.

143
00:12:11,250 --> 00:12:13,000
ಕ್ಲಿಕ್ಕರ್ ಮೂಲಕ ಸಂವಹನ ನಡೆಸುವೆವು.

144
00:12:13,083 --> 00:12:15,666
ಹೌದು ಎನ್ನಲು ಒಂದು ಕ್ಲಿಕ್. ಇಲ್ಲ ಎನ್ನಲು ಎರಡು.

145
00:12:15,916 --> 00:12:17,125
ಸರಿನಾ?

146
00:12:18,750 --> 00:12:19,833
ಸರಿ, ಒಳ್ಳೆಯದು.

147
00:12:21,000 --> 00:12:22,333
ಮುಂದುವರಿಸುತ್ತಿರು, ಬಾನಿ.

148
00:12:22,708 --> 00:12:23,708
ಚೆನ್ನಾಗಿ ಮಾಡುತ್ತಿರುವೆ.

149
00:12:27,166 --> 00:12:28,541
ಸರೋವರ ಕಾಣುತ್ತಿದೆಯಾ, ಬಾನಿ?

150
00:12:37,166 --> 00:12:39,875
ಬಾನಿ, ನನ್ನ ಮಾತು ಕೇಳಿಸುತ್ತಿದ್ದರೆ,
ಒಮ್ಮೆ ಕ್ಲಿಕ್ ಮಾಡು.

151
00:12:44,583 --> 00:12:45,708
ಬಾನಿ?

152
00:12:47,875 --> 00:12:48,958
ಬಾನಿ?

153
00:12:51,916 --> 00:12:53,333
ಬಾನಿ, ನಿನಗೇನೂ ಆಗಿಲ್ಲ ತಾನೆ?

154
00:12:54,416 --> 00:12:57,708
ಸರ್, ಇಲ್ಲಿ ಏನೋ ದೋಷವಿದೆ.
ಅವಳ ಅಮಿಗ್ಡಾಲಾ ಸಕ್ರಿಯಗೊಂಡಿದೆ.

155
00:12:57,875 --> 00:12:59,416
ಅವಳ ಅಡ್ರಿನಾಲಿನ್ ಮಟ್ಟ ಹೆಚ್ಚಾಗಿದೆ.

156
00:12:59,500 --> 00:13:02,208
ಎದುರಿಸು ಅಥವಾ
ಪಾರಾಗು ಸ್ಥಿತಿಯಲ್ಲಿದ್ದಾಳೆ. ನಿಲ್ಲಿಸಬೇಕು.

157
00:13:02,291 --> 00:13:03,375
ಈಗಲೇ ನಿಲ್ಲಿಸಿ!

158
00:13:10,458 --> 00:13:11,375
ಬಾನಿ!

159
00:13:13,333 --> 00:13:14,750
ಬಾನಿ, ಆರಾಮವಾಗಿದ್ದೀಯಾ?

160
00:13:16,458 --> 00:13:18,125
ಬಾನಿ! ಬಾನಿ!

161
00:13:21,708 --> 00:13:22,541
ಹೇ.

162
00:13:25,625 --> 00:13:27,208
-ಏನಾಯಿತು?
-ಅಂಧಕಾರ.

163
00:13:28,583 --> 00:13:29,583
ಅಂಧಕಾರ.

164
00:13:30,000 --> 00:13:33,125
-ನಾನು ನೋಡಿದೆ. ಅದನ್ನು ನೋಡಿದೆ. ಅದು...
-ಸಮಾಧಾನ.

165
00:13:34,375 --> 00:13:37,083
ಅದು ನನ್ನ ಹಿಂದೆ ಬರುತ್ತಿತ್ತು.
ದಯವಿಟ್ಟು ಸಹಾಯ ಮಾಡು.

166
00:13:37,166 --> 00:13:38,333
ಸರಿಹೋಗುತ್ತಾಳೆ, ಪೃಥ್ವಿ.

167
00:13:38,416 --> 00:13:41,250
ಪ್ರತಿಯೊಂದು ಪ್ರಯೋಗದಲ್ಲೂ
ಇಂತಹ ಸಣ್ಣಪುಟ್ಟ ಘಟನೆಗಳು ಸಾಮಾನ್ಯ.

168
00:13:41,666 --> 00:13:45,875
ಒಂದು ವೇಳೆ ಪ್ರಕ್ರಿಯೆಯಲ್ಲೇ ಸಮಸ್ಯೆ ಇದ್ದರೆ?
ಅಂದರೆ, ಗಾಬರಿಯಾದಳು. ಹುಚ್ಚುಚ್ಚಾಗಿ ಆಡಿದಳು.

169
00:13:46,041 --> 00:13:48,791
-ಮೈಂಡ್‌ಸ್ಪೇಸ್‌ನಲ್ಲಿ ಖಚಿತವಾಗಿ ಏನೋ ಆಗಿದೆ.
-ಓಹ್, ಬಿಡು.

170
00:13:48,958 --> 00:13:50,083
ಅದೊಂದು ವಿಚಿತ್ರ ಘಟನೆ.

171
00:13:50,250 --> 00:13:54,791
ನೋಡು, ಕೆಟಾ ಸಿ 13 ಜೆಡ್‌
ಭ್ರಮೆಗಳನ್ನು ಉಂಟುಮಾಡುತ್ತದೆ. ಸರಿನಾ?

172
00:13:54,875 --> 00:13:56,833
ಮೈಂಡ್‌ಸ್ಪೇಸ್ ಒಂದು ಗ್ರಹಿಕೆಗಳ ಸ್ವರೂಪ.

173
00:13:57,000 --> 00:13:59,375
ವ್ಯಕ್ತಿಯು ನಾವು ತೋರಿಸುವುದನ್ನಷ್ಟೇ ನೋಡುವರು.

174
00:13:59,541 --> 00:14:00,375
ಅದೇ, ಸರ್.

175
00:14:00,500 --> 00:14:02,625
ನಾವು ಅಂಧಕಾರದ ಬಗ್ಗೆ ಸೂಚಿಸದೇ ಇರುವಾಗ,

176
00:14:02,708 --> 00:14:04,458
ಆಕೆ ಆ ಬಗ್ಗೆ ಏಕೆ ಕಿರುಚುತ್ತಾಳೆ?

177
00:14:04,541 --> 00:14:05,541
ಏನು ವ್ಯತ್ಯಾಸವಾಗುತ್ತೆ?

178
00:14:05,625 --> 00:14:09,208
ಲೈಂಗಿಕ ಸೇವೆಯವರಿಗೆ ಅಥವಾ ಅಪರಾಧಿಗೆ
ಏನಾದರೂ ಆದರೆ ಯಾರು ತಲೆಕೆಡಿಸಿಕೊಳ್ಳುವರು?

179
00:14:09,291 --> 00:14:10,125
ಸರ್?

180
00:14:11,416 --> 00:14:12,583
ಅವರು ಮನುಷ್ಯರು.

181
00:14:12,666 --> 00:14:15,291
ನಮ್ಮ ಪ್ರಯೋಗಗಳಿಗೆ
ಅವರು ಗಿನಿಯಿಲಿಗಳು, ಹ್ಯಾಮ್ಸ್ಟರ್‌ಗಳಲ್ಲ.

182
00:14:15,375 --> 00:14:16,583
ಹಾಗಾದರೆ ಏನು ಮಾಡೋಣ?

183
00:14:17,500 --> 00:14:18,666
ಪ್ರಯೋಗ ನಿಲ್ಲಿಸೋಣ್ವಾ?

184
00:14:18,833 --> 00:14:20,166
ಪ್ರಾಣಿ ಪ್ರಯೋಗ ಮತ್ತೆ ಮಾಡೋಣ್ವಾ?

185
00:14:27,291 --> 00:14:29,458
ಬಹುಶಃ ನೀನು ಈ ಪ್ರಯೋಗಕ್ಕೆ ತಪ್ಪು ಆಯ್ಕೆ.

186
00:14:29,666 --> 00:14:32,291
ಇಂದು ನಿನ್ನ ಕೊನೆಯ ದಿನ. ನೀನು ಹೊರಡಬಹುದು.

187
00:14:38,708 --> 00:14:40,708
ಸರ್, ನಾನು ಮಾಡುತ್ತೇನೆ.

188
00:14:44,125 --> 00:14:46,375
-ಏನು?
-ನಾನು ಮೈಂಡ್‌ಸ್ಪೇಸ್‌ಗೆ ಹೋಗುತ್ತೇನೆ, ಸರ್.

189
00:14:47,291 --> 00:14:49,875
ಈ ಅಂಧಕಾರ ನಿಖರವಾಗಿ ಏನೆಂದು ಕಂಡುಹಿಡಿಯಲು.

190
00:15:24,833 --> 00:15:26,333
ಪೃಥ್ವಿ.

191
00:15:30,375 --> 00:15:31,416
ಪೃಥ್ವಿ.

192
00:15:33,833 --> 00:15:34,833
ಪೃಥ್ವಿ.

193
00:15:35,250 --> 00:15:36,250
ಅಣ್ಣಾ?

194
00:15:38,166 --> 00:15:39,000
ಡಾಕ್ಟರ್!

195
00:15:41,416 --> 00:15:42,458
ಯಾರಾದರೂ ಇದ್ದೀರಾ?

196
00:15:42,541 --> 00:15:43,458
ಪೃಥ್ವಿ?

197
00:16:02,458 --> 00:16:03,333
ಜಯ್.

198
00:16:03,958 --> 00:16:04,833
ಜಯ್.

199
00:16:06,333 --> 00:16:07,500
ಹೇ.

200
00:16:08,875 --> 00:16:10,083
ಏನಾಯಿತು?

201
00:16:10,958 --> 00:16:11,833
ಆರಾಮವಾಗಿದ್ದೀಯಾ?

202
00:16:27,708 --> 00:16:29,083
ಹೇ, ಏನಾಯಿತು?

203
00:16:30,666 --> 00:16:32,208
ಒಂದು ಕೆಟ್ಟ ಕನಸಷ್ಟೇ.

204
00:16:34,500 --> 00:16:35,916
ಆಕೆಯೊಂದಿಗೆ ಮಾತಾಡಿದೆಯಾ?

205
00:16:37,166 --> 00:16:39,125
ಇದನ್ನು ಮಾಡಲು ಖಚಿತವಾಗಿ ಬಯಸುವೆಯಾ?

206
00:16:40,000 --> 00:16:41,458
ಇಲ್ಲ, ಆದರೆ...

207
00:16:43,166 --> 00:16:44,583
ಜಯ್. ರೂಮಿ.

208
00:16:46,333 --> 00:16:48,250
ಏನಾಯಿತು? ತುರ್ತು ಎಂದು ಹೇಳಿದೆ.

209
00:16:53,791 --> 00:16:54,708
ಸರಿ.

210
00:17:00,291 --> 00:17:02,125
ಸರಿ, ಒಳ್ಳೆಯದು. ಧನ್ಯವಾದ.

211
00:17:07,375 --> 00:17:10,375
ನಾನು ಪರಿಶೀಲಿಸಿದೆ.
ಆಕೆಯ ಬಳಿ ಕಾನೂನು ಹಕ್ಕುಗಳಿವೆ.

212
00:17:11,125 --> 00:17:15,958
ನಿಮ್ಮಮ್ಮ ಪೃಥ್ವಿಗೆ ವೆಂಟಿಲೇಟರ್ ತೆಗೆದುಬಿಡಲು
ನಿರ್ಧರಿಸಿದ್ದರೆ, ನೀನು ಏನೂ ಮಾಡಲು ಆಗಲ್ಲ.

213
00:17:16,083 --> 00:17:17,500
ಅಮ್ಮನಿಗೆ ಏನೂ ಗೊತ್ತಿಲ್ಲ.

214
00:17:17,625 --> 00:17:20,791
ಆಕೆಗೆ ವಿವರಿಸಲು ನೋಡಿದೆ,
ಆದರೆ ಆಕೆ ಕೇಳಲು ಬಯಸಲ್ಲ.

215
00:17:20,958 --> 00:17:22,041
ಯಾವುದಾದರೂ ದಾರಿ ಇರಲೇಬೇಕು

216
00:17:23,000 --> 00:17:26,583
-ಕೋರ್ಟ್ ತಡೆಯಾಜ್ಞೆ. ಅದೊಂದೇ ದಾರಿ.
-ಹಾಗಾದರೆ, ಅದನ್ನೇ ಮಾಡೋಣ.

217
00:17:26,708 --> 00:17:28,583
ಕೋರ್ಟ್ ತಡೆಯಾಜ್ಞೆ ಸಿಗುವುದು ಸುಲಭವಲ್ಲ.

218
00:17:28,666 --> 00:17:31,208
ಇದು ಕೌಟುಂಬಿಕ ವಿಚಾರ.
ಪೊಲೀಸರು ಏನು ಮಾಡಲು ಸಾಧ್ಯ?

219
00:17:31,375 --> 00:17:34,458
ಮೇಡಂ, ಬಾನಿ ಬರೂವಾ ಪ್ರಕರಣದಲ್ಲಿ
ಪೃಥ್ವಿನೇ ನಿಮ್ಮ ಕೊನೆಯ ಭರವಸೆ.

220
00:17:34,541 --> 00:17:37,375
ಅವನು ಸತ್ತರೆ,
ಎಲ್ಲಾ ಉತ್ತರಗಳು ಅವನೊಂದಿಗೆ ಸಾಯುತ್ತವೆ.

221
00:17:37,541 --> 00:17:38,625
ಹೇಳಲು ಬೇಜಾರಾಗುತ್ತೆ,

222
00:17:39,083 --> 00:17:41,541
ಆದರೆ ಪೃಥ್ವಿ ಈಗ ಯಾವುದೇ ಉತ್ತರಗಳನ್ನು ನೀಡಲಾರ.

223
00:17:41,875 --> 00:17:42,791
ಕ್ಷಮಿಸು, ಜಯ್.

224
00:17:43,458 --> 00:17:44,291
ಒಂದು ನಿಮಿಷ.

225
00:17:44,916 --> 00:17:48,625
ಆ ತಡೆಯಾಜ್ಞೆಗೆ ಬದಲಾಗಿ,
ನೀವು ಹುಡುಕುತ್ತಿರೋದನ್ನು ನಾನು ನಿಮಗೆ ಕೊಟ್ಟರೆ?

226
00:17:55,791 --> 00:17:57,000
ಏನು ನಡೆಯುತ್ತಿದೆ?

227
00:18:05,666 --> 00:18:06,833
ಏನು ನಡೆಯುತ್ತಿದೆ?

228
00:18:07,625 --> 00:18:09,708
ಇಷ್ಟು ತುರ್ತಾಗಿ ನನ್ನನ್ನೇಕೆ ಕರೆದಿರಿ?

229
00:18:12,000 --> 00:18:14,000
-ಜೂಡ್. ಜೂಡ್...
-ಆಕೆ ಇಲ್ಲೇಕೆ ಬಂದರು?

230
00:18:14,125 --> 00:18:15,458
ನನ್ನನ್ನು ಸಿಕ್ಕಿಸುತ್ತಿದ್ದೀರಾ?

231
00:18:15,541 --> 00:18:18,250
ಇಲ್ಲ. ಕ್ಷಮಿಸು, ಜೂಡ್.
ಪೃಥ್ವಿಯನ್ನು ಉಳಿಸಲು ಇದೊಂದೇ ದಾರಿ.

232
00:18:18,333 --> 00:18:21,791
ಇಲ್ಲ, ಇಲ್ಲ. ನಾನು ನಿಮ್ಮಿಬ್ಬರನ್ನೂ ನಂಬಿದ್ದೆ.
ನಾನು ಹೊರಡುವೆ.

233
00:18:21,875 --> 00:18:23,166
ಜೂಡ್. ಜೂಡ್. ಜೂಡ್.

234
00:18:23,250 --> 00:18:26,041
ಕೇಳು. ಇನ್ಸ್‌ಪೆಕ್ಟರ್ ಕದಮ್ ಇತರರಂತೆ ಅಲ್ಲ.

235
00:18:26,375 --> 00:18:29,166
ಆಕೆ ಜಯ್‌ನ ಪ್ರಾಣ ಉಳಿಸಿದರು.
ಬಾನಿಳ ಕೇಸ್ ಬಗೆಹರಿಸುತ್ತಿದ್ದಾರೆ.

236
00:18:29,250 --> 00:18:31,458
ನೆರವಾಗುತ್ತಿದ್ದಾರೆ. ತೊಂದರೆಯಿಲ್ಲ.
ಮಾತು ನೀಡುವೆ.

237
00:18:31,541 --> 00:18:32,791
-ರೂಮಿ...
-ಜೂಡ್.

238
00:18:33,583 --> 00:18:37,208
ನನ್ನನ್ನು ನಂಬು. ನೀನು ನಮಗೆ ನೆರವಾದರೆ,
ನಿನಗೇನೂ ಆಗಲ್ಲ.

239
00:18:37,500 --> 00:18:39,791
-ನಿನಗೆ ಪೊಲೀಸ್ ರಕ್ಷಣೆ ಸಿಗುತ್ತೆ.
-ರಕ್ಷಣೆನಾ?

240
00:18:41,708 --> 00:18:43,750
ಈ ಅಂಧಕಾರ ಏನೆಂದು ನಿಮಗೆ ಗೊತ್ತಾ?

241
00:18:46,791 --> 00:18:48,833
ಅಂಧಕಾರದ ಒಳಗೆ ಏನೂ ಕಾಣಿಸುವುದಿಲ್ಲ.

242
00:18:49,833 --> 00:18:52,625
ಆದರೆ, ಆ ಅಂಧಕಾರ
ನಮ್ಮೊಳಗೆ ಎಲ್ಲವನ್ನೂ ನೋಡಬಲ್ಲದು.

243
00:18:53,208 --> 00:18:55,666
ನಮ್ಮ ಆಳವಾದ, ಕರಾಳ ರಹಸ್ಯಗಳನ್ನು.

244
00:18:56,750 --> 00:19:00,833
ತದನಂತರ, ಅದು ಆತ್ಮಹತ್ಯೆ ಗುಂಡಿಯನ್ನು ಒತ್ತಲು
ನಮ್ಮನ್ನು ಒತ್ತಾಯಿಸುತ್ತದೆ.

245
00:19:03,625 --> 00:19:05,916
ಈಕೆ ನಮ್ಮನ್ನು ರಕ್ಷಿಸಬಲ್ಲಳಾ?

246
00:19:06,583 --> 00:19:09,208
ಇವನನ್ನ ಕೋರ್ಟಿಗೆ ಒಯ್ಯೋದಾ?
ಯಾವ ಜಡ್ಜ್ ಗಂಭೀರವಾಗಿ ಪರಿಗಣಿಸುವರು?

247
00:19:09,458 --> 00:19:12,458
ತಡೆಯಾಜ್ಞೆಗಾಗಿ ದೃಢ ಪುರಾವೆ,
ವಿಶ್ವಾಸಾರ್ಹ ಸಾಕ್ಷಿಗಳು ಬೇಕು.

248
00:19:12,916 --> 00:19:14,166
ಭೂತದ ಕಥೆಗಳಲ್ಲ.

249
00:19:14,250 --> 00:19:16,375
ಇಲ್ಲ. ದಯವಿಟ್ಟು,
ಪೃಥ್ವಿಯನ್ನು ಉಳಿಸಲು ನೆರವಾಗಿ.

250
00:19:16,458 --> 00:19:18,583
ಮಗ, ಪೊಲೀಸರಿಗೆ ಕೈಮುಗಿಯಬೇಡ.

251
00:19:18,666 --> 00:19:20,375
-ಆಕೆ ನಮ್ಮನ್ನು ನಂಬಲ್ಲ.
-ಮೇಡಂ...

252
00:19:20,458 --> 00:19:24,666
ನಾನು ಹೇಳುತ್ತಿದ್ದೇನೆ, ಆ ಬೆಕ್ಕಿನ ಕಣ್ಣಿನವನು
ಇಡೀ ಇಲಾಖೆಯನ್ನು ಖರೀದಿಸಿದ್ದಾನೆ.

253
00:19:25,291 --> 00:19:28,041
-ಏನಂದೆ ನೀನು?
-ನಾನಂದೆ, ಪೋಲೀಸರೆಲ್ಲರೂ ಕಳ್ಳರೇ.

254
00:19:28,125 --> 00:19:30,000
ಏನು ಮಾಡುವಿರಿ? ಗಲ್ಲಿಗೇರಿಸುವಿರಾ?

255
00:19:30,083 --> 00:19:32,500
ಅಲ್ಲ, ಅಲ್ಲ. ಆ ಬೆಕ್ಕಿನ ಕಣ್ಣಿನವನು ಏನು?

256
00:19:32,750 --> 00:19:35,625
ಆ ಬೆಕ್ಕಿನ ಕಣ್ಣಿನವನು
ಇಡೀ ಇಲಾಖೆಯನ್ನು ಖರೀದಿಸಿದ್ದಾನೆ.

257
00:19:37,291 --> 00:19:38,208
ಹೀಗೆ ಕಾಣುತ್ತಾನಾ?

258
00:19:38,875 --> 00:19:40,583
ಇವನೇ!

259
00:19:40,833 --> 00:19:43,500
ಇವನೇ ನನ್ನನ್ನು ಪ್ರಯೋಗಕ್ಕಾಗಿ ನೇಮಿಸಿಕೊಂಡದ್ದು.

260
00:19:43,708 --> 00:19:45,000
ಇವನದೇ ಪೂರಾ ಕಾರ್ಯನಿರ್ವಹಣೆ.

261
00:19:45,083 --> 00:19:46,750
-ಪಕ್ಕಾ ಇವನೇನಾ?
-ಹೌದು. ಪಕ್ಕಾ.

262
00:19:46,875 --> 00:19:48,416
ಶಪಥ ಪತ್ರವನ್ನೂ ಕೊಡಬಲ್ಲೆ.

263
00:19:49,125 --> 00:19:52,250
ನನಗೆ ಖಚಿತವಿದೆ,
ಬಾನಿಳ ಸಾವಿನಲ್ಲೂ ಇವನದೇ ಕೈವಾಡವಿದೆ.

264
00:19:53,958 --> 00:19:55,166
ಅಂದರೆ ನಾಪತ್ತೆಯಲ್ಲಿ.

265
00:19:55,250 --> 00:19:58,125
ಅಷ್ಟು ಎತ್ತರದಿಂದ ಯಾರಾದರೂ ಜಿಗಿದರೆ,
ಬದುಕಲು ಹೇಗೆ ಸಾಧ್ಯ?

266
00:19:58,291 --> 00:20:00,083
ನಾನದನ್ನು ನನ್ನ ಕಣ್ಣಾರೆ ನೋಡಿದೆ.

267
00:20:01,541 --> 00:20:03,208
-ನೀನು ನೋಡಿದೆಯಾ?
-ಹೌದು.

268
00:20:03,750 --> 00:20:05,958
ಹೌದು, ಇವನೂ ಸಹ ಪ್ರೇಕ್ಷಕನಾಗಿದ್ದ. ಹೇಳು.

269
00:20:08,583 --> 00:20:09,625
ಹೇಳು.

270
00:20:10,625 --> 00:20:13,208
ಮೇಡಂ. ಮೇಡಂ. ಮೇಡಂ, ನಾನು ವಿವರಿಸುವೆ.

271
00:20:16,208 --> 00:20:17,750
ಭೇಟಿಯಾಗಿದ್ದಕ್ಕೆ ಧನ್ಯವಾದ, ಸರ್.

272
00:20:18,000 --> 00:20:22,416
ಕೆಕೆ, ಈ ಕೋಣೆಯ ಹೊರಗಿನ ಯಾರಿಗೂ
ನಮ್ಮ ಚರ್ಚೆಯ ಬಗ್ಗೆ ತಿಳಿಯಬಾರದು.

273
00:20:23,416 --> 00:20:26,458
ಅಕಸ್ಮಾತ್ ಈ ತನಿಖೆಯಲ್ಲಿ
ಏನಾದರೂ ಹೆಚ್ಚು-ಕಮ್ಮಿ ಆದರೆ, ಆಗ,

274
00:20:27,166 --> 00:20:29,791
ಈ ಭೇಟಿ ನಡೆದೇ ಇಲ್ಲ ಎಂದರ್ಥ. ಸ್ಪಷ್ಟವಾಯಿತಾ?

275
00:20:30,833 --> 00:20:32,708
ಹಾಗಾದರೆ, ಹೇಳು, ಸದ್ಯದ ವರದಿ ಏನು?

276
00:20:33,708 --> 00:20:37,166
ಸರ್, ಡ್ಯಾರಿಯಸ್ ಯಾವುದೋ ಅಕ್ರಮ ಪ್ರಯೋಗದಲ್ಲಿ
ತೊಡಗಿರುವುದು ನನಗೆ ಖಚಿತವಿದೆ.

277
00:20:37,291 --> 00:20:39,625
ಅದರಿಂದಾಗಿ ಜನರ ಪ್ರಾಣ ಕಳೆದುಕೊಂಡಿದ್ದಾರೆ.

278
00:20:40,000 --> 00:20:42,375
ಏನಾದರೂ ದೃಢ ಸಾಕ್ಷ್ಯವಿದೆಯಾ ಅಥವಾ ವಾಸ್ತವಾಂಶನಾ?

279
00:20:42,916 --> 00:20:46,750
ಪ್ರತ್ಯಕ್ಷ ಸಾಕ್ಷಿ ಇದ್ದಾನೆ, ಸರ್.
ಈ ಪ್ರಯೋಗಕ್ಕೆ ಒಳಗಾಗಿದ್ದವನು.

280
00:20:48,291 --> 00:20:51,333
ಪ್ರಬಲ್ ನಿನ್ನ ಬಗ್ಗೆ ಸರಿಯಾಗಿಯೇ ಹೇಳುತ್ತಿದ್ದ.
ಒಳ್ಳೆಯ ಕೆಲಸ, ಕೆಕೆ.

281
00:20:52,208 --> 00:20:54,500
ಧನ್ಯವಾದ, ಸರ್. ಆದರೆ...

282
00:20:55,416 --> 00:20:57,541
ಈ ಆಟ ನಮ್ಮ ವಿರುದ್ಧವೂ ತಿರುಗಬಹುದು, ಸರ್.

283
00:21:00,416 --> 00:21:04,083
ಒಬ್ಬ ಪ್ರಧಾನ ಸಾಕ್ಷಿಯ ತಾಯಿಯು
ಅವನಿಗೆ ಜೀವ ಬೆಂಬಲ ತೆಗೆಸಿಬಿಡಲು ಬಯಸುತ್ತಾಳೆ.

284
00:21:04,833 --> 00:21:07,291
ಆಕೆಯ ವಿರುದ್ಧ ನ್ಯಾಯಾಲಯ ತಡೆಯಾಜ್ಞೆ ಬೇಕು.

285
00:21:12,291 --> 00:21:13,583
ಹೊಸ ಸಂಪರ್ಕ
ಹೆಸರು: ಬರ್

286
00:21:14,083 --> 00:21:16,666
ಹೇಳಬಾರದು ಅಂದಿದ್ದರೆ,
ನನಗೇಕೆ ಹೇಳುತ್ತಿದ್ದೀರಿ, ಮೇಡಂ?

287
00:21:16,875 --> 00:21:20,916
"ಯಾರಿಗೂ ಹೇಳಬೇಡ" ಎಂದು ಯಾರಾದರೂ ಅಂದಾಗ,
ಯಾವಾಗಲೂ ಒಬ್ಬರಿಗೆ ಹೇಳಿಡಬೇಕು.

288
00:21:22,291 --> 00:21:23,541
ನಾವು ನಂಬುವವರಿಗೆ.

289
00:21:25,416 --> 00:21:27,375
ಈಗ ನೀನು ಹೋಗಿ ಇದನ್ನು ಡಾಲಿಗೆ ಹೇಳಬೇಡ.

290
00:21:28,208 --> 00:21:29,625
ಏನು, ಮೇಡಂ.

291
00:21:30,750 --> 00:21:33,541
ಬರೋಟ್. ವಿಶೇಷ ದಳ.

292
00:21:36,500 --> 00:21:38,500
ಕೋರ್ಟಿನ ಆದೇಶದ ಬಗ್ಗೆ ಏನಾಯಿತು, ಮೇಡಂ?

293
00:21:42,583 --> 00:21:44,416
ಗೂಢಲಿಪಿಗ್ರಹಣ

294
00:21:58,208 --> 00:22:00,541
ನಿಲ್ಸೋ. ನಿನಗೆ ಕೆಳಗೆ
ಸ್ಪ್ರಿಂಗ್ಸ್ ಹಾಕಲಾಗಿದೆಯಾ?

295
00:22:00,625 --> 00:22:02,208
-ಆರಾಮವಾಗಿ ಕೂರಲು ಆಗಲ್ವಾ?
-ಜಯ್.

296
00:22:02,291 --> 00:22:05,666
ಏನಿದು, ಮಗಾ?
ನನ್ನ ಮನೆಯಲ್ಲಿ ನನ್ನ ಮೇಲೇ ಎಗರಾಡುತ್ತಿದ್ದೀಯಾ.

297
00:22:05,750 --> 00:22:07,916
ನಿನಗೆ ಸಮಸ್ಯೆ ಇದ್ದರೆ, ಎದ್ದು ಹೋಗು.

298
00:22:08,000 --> 00:22:11,291
-ಸಮಾಧಾನ ಆಗಿರಿ. ಆತ ಒತ್ತಡದಲ್ಲಿದ್ದಾನೆ.
-ಕಿರಿಕಿರಿ ಮಾಡಿದ.

299
00:22:11,375 --> 00:22:12,458
ಹೇಳಿ, ಇನ್ಸ್‌ಪೆಕ್ಟರ್.

300
00:22:14,500 --> 00:22:15,583
ಪಕ್ಕಾನಾ?

301
00:22:16,958 --> 00:22:18,916
ಇಲ್ಲ, ನನಗೆ ಅರ್ಥವಾಗುತ್ತೆ.

302
00:22:22,583 --> 00:22:23,875
ಏನು?

303
00:22:27,041 --> 00:22:28,250
ತಡೆಯಾಜ್ಞೆ ಸಿಕ್ಕಿತು.

304
00:22:29,375 --> 00:22:31,125
ಒಳ್ಳೇ ಸುದ್ದಿ, ಮಗಾ.

305
00:22:52,208 --> 00:22:54,750
ಕೇಳು, ಜೂಡ್. ನನ್ನಿಂದ ನಿಜವಾಗಲೂ ತಪ್ಪಾಯಿತು.

306
00:22:55,541 --> 00:22:57,916
ನಿನಗೆ ಹೇಳದೆಯೇ
ಇನ್ಸ್‌ಪೆಕ್ಟರ್ ಕದಮ್‌ರನ್ನು ಬರಹೇಳಿದೆ.

307
00:22:58,500 --> 00:23:00,250
ನಾನು ಹತಾಶನಾಗಿದ್ದೆ ಕಣೋ.

308
00:23:00,958 --> 00:23:02,791
ಇರಲಿ ಬಿಡು, ಮಗಾ. ಪರವಾಗಿಲ್ಲ.

309
00:23:03,291 --> 00:23:05,333
ಇದು ಕುತಂತ್ರ ಅಲ್ಲ ಅಂತ ಅರ್ಥವಾಯಿತು.

310
00:23:05,708 --> 00:23:07,541
ನೀನು ನಿಮ್ಮಣ್ಣನನ್ನು ಕಾಪಾಡಲು ಮಾಡಿದೆ.

311
00:23:07,875 --> 00:23:10,833
ನನ್ನ ಕುಟುಂಬ ಆಗಿದ್ದಿದ್ದರೆ,
ನಾನೂ ಅದೇ ಮಾಡಿರುತ್ತಿದ್ದೆ.

312
00:23:14,875 --> 00:23:17,041
-ಅದು ನಿನ್ನ ಮಗಳಾ?
-ಜೂಲಿಯಾ.

313
00:23:17,666 --> 00:23:19,833
-ಮುದ್ದಾಗಿದ್ದಾಳೆ.
-ಧನ್ಯವಾದ.

314
00:23:23,041 --> 00:23:25,750
ಜೈಲು ನನಗೆ ಎಲ್ಲವನ್ನೂ
ಕಳೆದುಕೊಳ್ಳುವಂತೆ ಮಾಡಿತು.

315
00:23:26,416 --> 00:23:28,708
ಅವಳ ಅಮೂಲ್ಯವಾದ ಬಾಲ್ಯದ ವರ್ಷಗಳನ್ನು.

316
00:23:32,416 --> 00:23:35,250
ನನ್ನ ಮಗಳ ಜೊತೆ
ಒಂದು ಸಾಮಾನ್ಯ ಜೀವನ ನಡೆಸಲು ಬಯಸಿದ್ದೆ.

317
00:23:36,208 --> 00:23:37,291
ಬದಲಾಗಿ...

318
00:23:38,416 --> 00:23:39,958
ನಾನು ಸದಾ ಓಡುತ್ತಲೇ ಇದ್ದೇನೆ.

319
00:23:41,666 --> 00:23:43,791
ಕೆಲವೊಮ್ಮೆ ಆ ಅಂಧಕಾರದಿಂದ.

320
00:23:45,291 --> 00:23:46,333
ಕೆಲವೊಮ್ಮೆ...

321
00:23:47,791 --> 00:23:49,416
ಆ ದುಷ್ಟ ಅವಳಿಯಿಂದ.

322
00:23:50,291 --> 00:23:53,250
-ದುಷ್ಟ ಅವಳಿನಾ?
-ಹೌದು, ದುಷ್ಟ ಅವಳಿ.

323
00:23:54,541 --> 00:23:56,083
ಅವನು ನನ್ನ ತದ್ರೂಪಿ.

324
00:23:56,916 --> 00:23:58,166
ಆದರೆ ತುಂಬಾ ಭಯಾನಕ.

325
00:23:58,916 --> 00:24:01,375
ಅವನಿಗೆ ಕಣ್ಣುಗಳಿಲ್ಲ, ಬಾಯಿಯಿಲ್ಲ.

326
00:24:03,875 --> 00:24:08,416
ಮತ್ತು ಖಿನ್ನತೆಯಲ್ಲಿದ್ದಾಗಲೇ ಅವನು ಕಾಣುವುದು.

327
00:24:12,166 --> 00:24:13,166
ಅವನು ಹೇಗೆಂದರೆ...

328
00:24:13,250 --> 00:24:17,958
ಅವನು ನಿಮ್ಮೆಲ್ಲಾ ಭಯಗಳು ಮತ್ತು ನಕಾರಾತ್ಮಕ
ಆಲೋಚನೆಗಳು ನಿಮ್ಮದೇ ರೂಪತಾಳಿ ನಿಂತಂತೆ.

329
00:24:19,125 --> 00:24:20,291
ಅದೇ.

330
00:24:20,750 --> 00:24:23,583
ಆ ದಿನ ನೀನು ನನಗೆ ಹೇಳುತ್ತಿದ್ದದ್ದು ಅದನ್ನೇನಾ?

331
00:24:28,625 --> 00:24:29,833
ಗೂಢಲಿಪಿಗ್ರಹಣ ಮುಗಿಯಿತು

332
00:24:30,666 --> 00:24:31,833
ಹೇ, ಪ್ರವೇಶಿಸಿದೆವು.

333
00:24:35,875 --> 00:24:37,083
ಪ್ರವೇಶ ನೀಡಲಾಗಿದೆ

334
00:24:40,000 --> 00:24:41,250
ಇದು ಕ್ಲೌಡ್‌ನಲ್ಲಿ ಇದೆಯಾ?

335
00:24:42,708 --> 00:24:47,583
ಹೌದು, ಆದರೆ ಎಲ್ಲಾದರೂ
ಒಂದು ಭೌತಿಕ ಸರ್ವರ್ ಇರಲೇಬೇಕು.

336
00:24:48,333 --> 00:24:49,500
ನೋಡು, ನೋಡು, ನೋಡು.

337
00:24:50,375 --> 00:24:51,875
ಉಬರ್‌ಲೈಫ್‌ ಫಾರ್ಮಾದ ಸರ್ವರ್.

338
00:24:52,625 --> 00:24:55,000
ಆಲ್ಫಾ - ಬೀಟಾ - ಥೀಟಾ - ಡೆಲ್ಟಾ - ಗಾಮಾ

339
00:24:55,083 --> 00:24:58,166
ಆಲ್ಫಾ... ಬೀಟಾ... ಏನಿದು ಹಾಳಾದ್ದು?

340
00:25:00,333 --> 00:25:02,291
ಆಲ್ಫಾ, ಬೀಟಾ, ಡೆಲ್ಟಾ, ಥೀಟಾ, ಗಾಮಾ.

341
00:25:03,250 --> 00:25:06,458
ಇವು ಮಾನವನ ಮೆದುಳಿನಲ್ಲಿ
ಉತ್ಪತ್ತಿಯಾಗುವ ವಿದ್ಯುತ್ ಅಲೆಗಳು.

342
00:25:07,875 --> 00:25:09,875
ಜೂಡ್, ಒಂದು ಫೈಲ್ ತೆರೆ.

343
00:25:10,541 --> 00:25:12,666
ವಿವಿಧ ಹೆಸರುಗಳಿರುವ ಸಾವಿರಾರು ಫೋಲ್ಡರ್‌ಗಳು.

344
00:25:12,750 --> 00:25:14,083
ಈ ಜನರು ಯಾರು?

345
00:25:22,041 --> 00:25:26,208
ಇದು ಈ ಹೆಡ್‌ಸೆಟ್ ಹಾಕಿಕೊಂಡ ಎಲ್ಲಾ ಜನರ
ಮೆದುಳಿನ ತರಂಗಗಳ ಡೇಟಾ ಅಂತ ಅನಿಸುತ್ತೆ.

346
00:25:28,958 --> 00:25:31,458
ಅಷ್ಟು ದೊಡ್ಡ ದತ್ತಾಂಶವನ್ನು ಏನು ಮಾಡುತ್ತಾರೆ?

347
00:25:31,958 --> 00:25:33,666
ಮಾರ್ಕೆಟಿಂಗ್ ಜನರಿಗೆ ರವಾನಿಸುವರೇ?

348
00:25:34,416 --> 00:25:37,500
ಈ ಜೀನ್ಸ್ ಖರೀದಿಸಿ, ಈ ಕೋಲಾ ಕುಡಿಯಿರಿ.
ಇದಕ್ಕಾಗಿ ಇಷ್ಟೆಲ್ಲಾನಾ?

349
00:25:37,750 --> 00:25:40,875
ಇದು ದತ್ತಾಂಶ ಗಣಿಗಾರಿಕೆ ಅಲ್ಲ.
ಜನರನ್ನು ಶೋಧಿಸುತ್ತಿದ್ದಾರೆ.

350
00:25:41,541 --> 00:25:44,000
ನೋಡು, ಅಧಿಕ ಗಾಮಾ-ಕಿರಣ
ಸಮನ್ವಯತೆ ಇರುವವರನ್ನಷ್ಟೇ

351
00:25:44,083 --> 00:25:45,875
ಪ್ರಯೋಗಕ್ಕೆ ಆಯ್ಕೆ ಮಾಡಲಾಗಿದೆ.

352
00:25:46,083 --> 00:25:46,958
ಹಾಂ?

353
00:25:47,458 --> 00:25:49,333
-ಅರ್ಥ ಆಗೊಹಾಗೇಳು.
-ಹೌದು.

354
00:25:49,625 --> 00:25:51,166
ಜೂಡ್, ನಿನ್ನ ಹೆಸರನ್ನು ಟೈಪ್ ಮಾಡು.

355
00:25:58,708 --> 00:25:59,541
ಅಯ್ಯೋ.

356
00:25:59,666 --> 00:26:01,041
ಉಬರ್‌ಲೈಫ್‌ \ಗಾಮಾ
ಜೂಡ್‌ ರೊಜಾರಿಯೋ

357
00:26:01,666 --> 00:26:03,166
ನನ್ನ ಹೆಸರು ಗಾಮಾ ಕಡತದಲ್ಲಿದೆ.

358
00:26:04,375 --> 00:26:06,541
ಬಾನಿ, ರೋಗಿ ಎಕ್ಸ್...

359
00:26:07,083 --> 00:26:08,125
ದೇವರೇ.

360
00:26:08,791 --> 00:26:10,458
ಪೃಥ್ವಿಯೂ ಯಂತ್ರದೊಳಗೆ ಹೋಗಿದ್ದನೇ?

361
00:26:10,791 --> 00:26:13,750
ಆದರೆ ಪೃಥ್ವಿಗೆ ಯಂತ್ರದಲ್ಲಿ
ಸಮಸ್ಯೆ ಇರುವುದು ಗೊತ್ತಿತ್ತು.

362
00:26:14,125 --> 00:26:15,083
-ಹೌದು.
-ಮತ್ತೆ, ಯಾಕೆ?

363
00:26:17,875 --> 00:26:21,583
ಬಹುಶಃ ದೋಷನಿವಾರಣೆಗಾಗಿ?
ಮೆಕ್ಯಾನಿಕ್‌ಗಳು ಕಾರ್ ಕೆಳಗೆ ಹೋಗುವಂತೆ,

364
00:26:21,958 --> 00:26:23,458
ಅದನ್ನು ಸರಿಪಡಿಸಲು.

365
00:26:25,583 --> 00:26:27,750
ಪ್ರಕ್ರಿಯೆಯನ್ನು ನಿಲ್ಲಿಸಿ. ಈಗಲೇ!

366
00:26:33,125 --> 00:26:35,000
ನನ್ನ ಮಾತು ಕೇಳಿಸುತ್ತಿದೆಯಾ? ಪೃಥ್ವಿ?

367
00:26:38,750 --> 00:26:39,750
ಅದು ನಿಜ.

368
00:26:40,416 --> 00:26:41,333
ಬಾನಿ ಹೇಳಿದ್ದು ಸರಿ.

369
00:26:41,416 --> 00:26:42,791
ಆರಂಭದಲ್ಲಿ ಎಲ್ಲವೂ ಸರಿಯಿತ್ತು.

370
00:26:43,458 --> 00:26:45,000
ನಂತರ ಇದ್ದಕ್ಕಿದ್ದಂತೆ, ಅದನ್ನು ಕಂಡೆ.

371
00:26:47,916 --> 00:26:49,041
ಆ ಅಂಧಕಾರ...

372
00:26:50,791 --> 00:26:53,250
ಬಾನಿ ಹೇಳುತ್ತಿದ್ದ ಅದೇ ಅಂಧಕಾರ.

373
00:26:54,208 --> 00:26:57,791
ಅದು ನನ್ನನ್ನು
ನುಂಗಲು ಪ್ರಯತ್ನಿಸುತ್ತಿರುವಂತೆ ಅನಿಸಿತು.

374
00:26:59,333 --> 00:27:02,500
ನೀವು ಸಮಯಕ್ಕೆ ಸರಿಯಾಗಿ
ನನ್ನನ್ನು ಹೊರಗೆಳೆದೇ ಇದ್ದಿದ್ದರೆ,

375
00:27:04,791 --> 00:27:06,625
ನಾನು ಬಹುಶಃ ವಾಪಸ್ ಬರುತ್ತಿರಲಿಲ್ಲ.

376
00:27:15,416 --> 00:27:18,041
ಈ ಪ್ರಕ್ರಿಯೆ ಖಿನ್ನತೆಗೆ ಚಿಕಿತ್ಸೆ ಅಲ್ಲ.

377
00:27:20,416 --> 00:27:23,333
ಇದು ಬೇರೇನೋ. ಅಲ್ವಾ, ಸರ್?

378
00:27:24,958 --> 00:27:27,166
ನಾವು ಇಲ್ಲೇನು ಮಾಡುತ್ತಿದ್ದೇವೆ, ಸರ್?

379
00:27:27,458 --> 00:27:29,875
ಅವರು ನಮಗೇನು ಮಾಡುತ್ತಿದ್ದರು, ಮತ್ತೆ?

380
00:27:31,791 --> 00:27:34,416
ಗೊತ್ತಿಲ್ಲ. ಆದರೆ, ಪೃಥ್ವಿ ಅದನ್ನು
ಖಂಡಿತಾ ಕಂಡುಹಿಡಿದಿದ್ದ.

381
00:27:34,500 --> 00:27:37,291
ಹಾಗಾಗಿಯೇ ಅವನು ನನ್ನನ್ನು ಯಂತ್ರ ಬಳಸದಂತೆ ತಡೆದ.

382
00:27:39,833 --> 00:27:40,875
ನನಗೆ ಅರ್ಥವಾಗುತ್ತದೆ.

383
00:27:41,250 --> 00:27:45,291
ನಾವು ಪ್ರಯೋಗಕ್ಕೊಳಗಾದವರ ಸಂಪೂರ್ಣ
ಪ್ರಜ್ಞೆಯನ್ನು ಪ್ರವೇಶಿಸಲು ನೋಡುತ್ತಿದ್ದೇವೆ.

384
00:27:45,416 --> 00:27:49,083
ಈ ದತ್ತಾಂಶ... ನಮ್ಮ ಪ್ರಜ್ಞೆ.

385
00:27:49,458 --> 00:27:53,166
ನಮ್ಮ ನೆನಪುಗಳು, ನಮ್ಮ ಅನುಭವಗಳು.
ಸಂಕ್ಷಿಪ್ತವಾಗಿ, ನಮ್ಮ ಇಡೀ ಜೀವನ.

386
00:27:53,291 --> 00:27:55,833
ಈ ಪ್ರಯೋಗ ಖಿನ್ನತೆಯನ್ನು ಗುಣಪಡಿಸಲು ಅಲ್ಲ.

387
00:27:57,791 --> 00:28:00,041
ಜನರ ಪ್ರಜ್ಞೆಯನ್ನು ನಕಲು ಮಾಡಲು.

388
00:28:00,750 --> 00:28:03,166
ಪ್ರಜ್ಞೆಯನ್ನು ನಕಲು ಮಾಡಿಕೊಂಡು
ಏನು ಮಾಡುತ್ತಾರೆ?

389
00:28:05,083 --> 00:28:10,125
ಒಂದು ಶತಮಾನದ ಹಿಂದೆ, ಭಾರತೀಯರ
ಸರಾಸರಿ ಜೀವಿತಾವಧಿ ಸುಮಾರು 21-22 ವರ್ಷಗಳು.

390
00:28:10,375 --> 00:28:14,041
ನಂತರ ಪ್ರತಿಜೀವಕಗಳು, ಲಸಿಕೆಗಳು ಮತ್ತು
ವೈದ್ಯಕೀಯ ಪ್ರಗತಿಗಳೊಂದಿಗೆ,

391
00:28:14,208 --> 00:28:17,250
ಕೇವಲ ನೂರು ವರ್ಷಗಳಲ್ಲಿ
ಅದು 70 ವರ್ಷಗಳಿಗೆ ಏರಿತು.

392
00:28:18,125 --> 00:28:21,791
ಮತ್ತು ಈಗ, ಈ ಪ್ರಯೋಗದಿಂದ
ಸಾಧ್ಯತೆಗಳು ಅನಂತವಾಗುತ್ತವೆ.

393
00:28:22,083 --> 00:28:22,958
ಕಲ್ಪಿಸಿಕೋ.

394
00:28:23,416 --> 00:28:26,375
ಮೆದುಳನ್ನು ಯಶಸ್ವಿಯಾಗಿ ಜಾಲಕ್ಕೆ ರವಾನಿಸುವುದು.

395
00:28:27,083 --> 00:28:31,000
ನಾವು ಮನುಷ್ಯನ ಪ್ರಜ್ಞೆಯನ್ನು
ನಕಲು ಮಾಡಿ ಅದನ್ನು ಸಂಗ್ರಹಿಸಲು ಸಾಧ್ಯವಾದರೆ,

396
00:28:31,083 --> 00:28:32,916
ಆ ವ್ಯಕ್ತಿ ಎಂದಿಗೂ ಸಾಯಲು ಸಾಧ್ಯವಿಲ್ಲ.

397
00:28:33,458 --> 00:28:35,166
ಅಜರ. ಅಮರ.

398
00:28:36,458 --> 00:28:38,083
ಹಾಗೆಯೇ ಕರೆಯೋದು ಅಲ್ವಾ?

399
00:28:39,583 --> 00:28:44,750
ಈ ಪ್ರಯೋಗದ ಗುರಿಯು ಅಮರತ್ವ.

400
00:28:50,791 --> 00:28:53,125
ನಾವು ಸಾವನ್ನು ಗೆಲ್ಲುವ
ಅಂಚಿನಲ್ಲಿದ್ದೇವೆ, ಪೃಥ್ವಿ.

401
00:29:00,375 --> 00:29:01,541
ಆದರೆ ನಾವೇ ಯಾಕೆ?

402
00:29:01,625 --> 00:29:03,583
ಏಕೆಂದರೆ ಈ ವಿಧಾನವು ಖಿನ್ನತೆಗೆ ಒಳಗಾದ ಜನರ

403
00:29:03,666 --> 00:29:06,250
ಉಪಪ್ರಜ್ಞೆ ಮನಸ್ಸನ್ನು
ಸುಲಭವಾಗಿ ಪ್ರವೇಶಿಸಬಹುದು.

404
00:29:06,875 --> 00:29:09,125
ನಮ್ಮ ಮೆದುಳಿನ ಅಲೆಗಳನ್ನು ನಿಯಂತ್ರಿಸಬಲ್ಲದು.

405
00:29:09,250 --> 00:29:10,375
ಆದರೆ ಎಡವಟ್ಟು ಮಾಡಿದರು.

406
00:29:10,583 --> 00:29:14,291
ಅವರು ಪ್ರಜ್ಞೆಯನ್ನು ವರ್ಗಾಯಿಸುವಾಗ
ಈ ಅಂಧಕಾರವನ್ನು ಎಬ್ಬಿಸಿದರು.

407
00:29:16,000 --> 00:29:18,916
ಈ ಅಂಧಕಾರವು ಈ ಪ್ರಯೋಗದ ಉಪ ಉತ್ಪನ್ನ.

408
00:29:19,000 --> 00:29:20,708
ಅದು ನಮ್ಮ ಮೆದುಳಿಗೆ ನುಗ್ಗಿತು.

409
00:29:21,625 --> 00:29:24,083
ಹಾಗಾಗಿಯೇ ಅದು ನಮ್ಮ ಬಗ್ಗೆ
ಎಲ್ಲವೂ ತಿಳಿದಿರುವುದು.

410
00:29:25,708 --> 00:29:28,625
ಅದು ನಮ್ಮ ಮನಸ್ಸಿನಲ್ಲಿ
ವೈರಸ್‌ನಂತೆ ಅಳವಡಿಕೆಯಾಗಿದೆ.

411
00:29:36,500 --> 00:29:38,958
ಹುಡುಗನ ಪ್ರಕ್ರಿಯೆ
ಇನ್ನು ಎಷ್ಟು ಹೊತ್ತು ಹಿಡಿಯುತ್ತೆ?

412
00:29:39,958 --> 00:29:41,208
ಆರ್‌ಪಿ 46 ಬಂದಿದೆಯೇ?

413
00:29:41,541 --> 00:29:44,250
ಆರ್‌ಪಿ 46 ಅನ್ನು ಕಳ್ಳಸಾಗಣೆ ಮಾಡೋದು ಸುಲಭವಲ್ಲ.

414
00:29:44,583 --> 00:29:45,916
ಸ್ವಲ್ಪ ಸಮಯ ಹಿಡಿಯುತ್ತೆ.

415
00:29:46,000 --> 00:29:50,208
ಹಾಗಾದರೆ, ಪ್ರಕ್ರಿಯೆ ಕೂಡ
ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.

416
00:29:50,750 --> 00:29:54,708
ಡಾಕ್ಟರ್, ನಿಮ್ಮ ಪ್ರಯೋಗಕ್ಕೆ
ಪ್ರಯೋಗ-ಸೂಕ್ತನೊಬ್ಬ ಬೇಕಿತ್ತು, ಅದು ಸಿಕ್ಕಿದೆ.

417
00:29:54,791 --> 00:29:57,166
ಈಗ, ಪ್ರಕ್ರಿಯೆ ಮುಗಿಸಿ.
ನಾವು ಗಡುವನ್ನು ಮೀರಲಾಗದು.

418
00:29:57,250 --> 00:30:00,958
ಟೆಸ್ಲಾ ಅಥವಾ ಐನ್‌ಸ್ಟೈನ್ ಗಡುವಿನ ಬಗ್ಗೆ
ತಲೆ ಕೆಡಿಸಿಕೊಂಡರು ಅನಿಸುತ್ತಾ? ಹಾಂ?

419
00:30:04,125 --> 00:30:06,791
ನೀನೂ ಐನ್‌ಸ್ಟೈನೂ ಅಲ್ಲ, ಟೆಸ್ಲಾನೂ ಅಲ್ಲ.

420
00:30:07,291 --> 00:30:10,208
ಆರ್‌ಪಿ 46ಗೆ ಸಂಬಂಧಿಸಿದಂತೆ,

421
00:30:10,583 --> 00:30:13,875
ಅದು ನಿನಗೆ ಈಗಲೇ ಬೇಕಾಗಿರುವುದು
ಯಾಕೆ ಅಷ್ಟು ಮುಖ್ಯವಾಗಿದೆ?

422
00:30:15,250 --> 00:30:17,500
ತಾರ್ಕಿಕ-ಸೃಜನಶೀಲ ಪ್ರಶ್ನಿಸುವ ಆಟ ಆಡಬೇಕೆಂದರೆ,

423
00:30:19,791 --> 00:30:21,708
ಮೊದಲು ನನ್ನ ಪ್ರಶ್ನೆಗೆ ಉತ್ತರಿಸು.

424
00:30:26,125 --> 00:30:27,291
ಈ ಕೋಣೆ ಎಲ್ಲಿದೆ?

425
00:30:33,666 --> 00:30:36,958
ಅದು ನಿನಗೆ ತಿಳಿಯಲು ಅನುಮತಿಯಿಲ್ಲ.
ನಿನಗೆ ಭದ್ರತಾ ಅನುಮೋದನೆ ಇಲ್ಲ.

426
00:30:37,250 --> 00:30:40,333
ಸತ್ತಿದ್ದರೂ ಬದುಕಿದ್ದರೂ,
ಬಾನಿ ಈ ಪ್ರಯೋಗದ ಒಂದು ಭಾಗ.

427
00:30:40,791 --> 00:30:43,791
ಅವಳ ದೇಹವನ್ನು ಇಲ್ಲಿಗೆ ತರುವ ಮೊದಲು
ನನಗೆ ತಿಳಿಸಬೇಕಿತ್ತು.

428
00:30:43,875 --> 00:30:46,541
ಶ್ರೀ. ಒಬೆರಾಯ್ ಹೇಳಿದಂತೆಯೇ ನಾನು ಮಾಡಿದೆ.

429
00:30:46,750 --> 00:30:48,875
ಈಗ, ನೀನೂ ಹಾಗೆಯೇ ಮಾಡುವಂತೆ ಸಲಹೆ ನೀಡುತ್ತೇನೆ.

430
00:30:49,083 --> 00:30:52,750
ನಿನ್ನ ಗಮನಕ್ಕೆ ಬಂದಿಲ್ಲದಿದ್ದರೆ ಕೇಳು,
ನಾನು ನಿನ್ನಂತೆ ಹಗ್ಗದ ನಾಯಿಯಲ್ಲ.

431
00:30:53,000 --> 00:30:55,458
ಶ್ರೀ. ಒಬೆರಾಯ್ ಪ್ರಕ್ರಿಯೆ ಎಲ್ಲಿ
ತಪ್ಪಾಗುತ್ತಿದೆ ಎಂದು

432
00:30:55,541 --> 00:30:57,708
ವಿಶ್ಲೇಷಿಸಲು ಸಮಯ ನೀಡದೆ ಒಂದಾದ ಮೇಲೊಂದರಂತೆ

433
00:30:57,791 --> 00:30:59,541
ಪ್ರಯೋಗ-ಸೂಕ್ತರನ್ನು ಕಳಿಸುತ್ತಿದ್ದಾರೆ.

434
00:31:02,208 --> 00:31:03,041
ಈಗ ಅರ್ಥವಾಯಿತು.

435
00:31:04,375 --> 00:31:06,625
ಆರ್‌ಪಿ 46 ಕೇವಲ ಒಂದು ಕುಂಟುನೆಪ.

436
00:31:06,833 --> 00:31:09,958
ಮೂಲಭೂತವಾಗಿ, ನಿನ್ನ ಪ್ರಕ್ರಿಯೆ
ಕೆಲಸ ಮಾಡುತ್ತಿಲ್ಲ.

437
00:31:10,125 --> 00:31:12,041
ಈ ಪ್ರಕ್ರಿಯೆಯನ್ನು ಕಂಡುಹಿಡಿದವನು ನಾನು!

438
00:31:12,250 --> 00:31:15,375
ಕೆಲಸ ಮಾಡುತ್ತೋ ಇಲ್ಲವೋ ಎಂಬುದನ್ನು
ನಾನು ನಿರ್ಧರಿಸುತ್ತೇನೆ. ಸರಿನಾ?

439
00:31:15,750 --> 00:31:18,333
ಈಗ, ಒಂದೋ ನಾನು ಶ್ರೀ. ಒಬೆರಾಯ್ಗೆ ಕರೆ ಮಾಡಿ

440
00:31:18,583 --> 00:31:22,375
ಈ ಪ್ರಯೋಗ ನಿನ್ನಿಂದಾಗಿ
ಸ್ಥಗಿತಗೊಂಡಿದೆ ಎನ್ನುತ್ತೇನೆ, ಅಥವಾ...

441
00:31:22,583 --> 00:31:26,750
ನೀನು ಹೋಗಿ ನನಗೆ ಈಗಲೇ ಸ್ವಲ್ಪ
ಆರ್‌ಪಿ 46 ತಂದುಕೊಡು.

442
00:31:41,750 --> 00:31:44,333
ವಿಮಾನಯಾನ ಸಂಸ್ಥೆಯ ಸಿಬ್ಬಂದಿ

443
00:31:44,500 --> 00:31:46,750
ಆಂಬ್ಯುಲೆನ್ಸ್

444
00:32:06,166 --> 00:32:07,625
ಪೃಥ್ವಿ ಶೇಠ್ - ಒಮಾರ್

445
00:32:07,833 --> 00:32:10,875
ಒಮಾರ್ ಯಾರು? ನೀವು ಅವನ ಬಗ್ಗೆ
ಎಂದಿಗೂ ಹೇಳಲಿಲ್ಲ.

446
00:32:13,833 --> 00:32:15,166
ಇದೊಂದು ಹೊಸ ಕಡತ.

447
00:32:16,041 --> 00:32:19,583
-ಇಂದು ಬೆಳಿಗ್ಗೆ ನಮೂದು ಆಗಿದೆ.
-ಅಂದರೆ, ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದೆ.

448
00:32:19,708 --> 00:32:22,333
ವಯಸ್ಸು 10? ಒಮಾರ್ ಇನ್ನೂ ಚಿಕ್ಕ ಹುಡುಗ.

449
00:32:22,750 --> 00:32:24,333
ಈತ ಹೊಸ ಪ್ರಯೋಗ-ಸೂಕ್ತನಾಗಿರಬಹುದು.

450
00:32:24,791 --> 00:32:26,541
ನಾವು ಅವರನ್ನು ತಡೆಯಬೇಕು.

451
00:32:46,541 --> 00:32:47,708
ಇದರ ಪ್ರಕಾರ,

452
00:32:47,916 --> 00:32:50,041
ಈ ಅಂಧಕಾರದ ಪಿಶಾಚಿಯು

453
00:32:50,333 --> 00:32:52,666
ತನ್ನ ಬಲಿಪಶುಗಳ ಮನಸ್ಸಿನ ಒಳಗೆ ನುಗ್ಗಿ,

454
00:32:52,750 --> 00:32:56,708
ಅವರ ಎಲ್ಲಾ ಸಮಸ್ಯೆಗಳು, ಅವರ ಅಪರಾಧ
ಮತ್ತು ಭಯಗಳನ್ನು ತಿಳಿದುಕೊಂಡು

455
00:32:56,916 --> 00:32:58,416
ಅವರ ಜೀವನವನ್ನು ನಾಶಪಡಿಸುತ್ತದೆ.

456
00:32:59,041 --> 00:33:00,375
ಅದೇ ತರಹ.

457
00:33:09,791 --> 00:33:11,583
ಬೇಜಾರು ಮಾಡಿಕೊಳ್ಳಬೇಡ, ಪುಟ್ಟ.

458
00:33:18,416 --> 00:33:21,666
ನಾವು ಈ ಜನರನ್ನು ತಡೆಯದಿದ್ದರೆ,
ಅವರು ಇನ್ನಷ್ಟು ಪ್ರಬಲರಾಗುತ್ತಾರೆ.

459
00:33:21,750 --> 00:33:22,791
ಜೂಡ್, ನೀನು...

460
00:33:26,958 --> 00:33:28,875
-ಈ ದೈತ್ಯನ ಹೆಸರು ತಮಾ.
-ಹಲೋ.

461
00:33:50,250 --> 00:33:53,458
ಕ್ಷಮಿಸು, ಜಯ್.
ಅವನಿಗೆ ಮಾರಣಾಂತಿಕ ಲಕ್ವ ಹೊಡೆಯಿತು.

462
00:34:09,958 --> 00:34:14,041
2022ರ ಮಧ್ಯಂತರ ಅರ್ಜಿ ದಾಖಲಾತಿ ಸಂಖ್ಯೆ. 33
2022ರ ಪ್ರಕರಣ ಸಂಖ್ಯೆ. 96ರಲ್ಲಿ

463
00:34:32,166 --> 00:34:34,666
ನಾವು ದೇಹವನ್ನು ಒಯ್ಯಬೇಕಿದೆ. ನಿಮ್ಮ ಸಹಿ ಬೇಕು.

464
00:34:36,291 --> 00:34:39,875
-ದೇಹವನ್ನು ಎಲ್ಲಿಗೆ ಒಯ್ಯುತ್ತಿದ್ದೀರಿ?
-ರೋಗಿಯು ಅಂಗಗಳನ್ನು ದಾನ ಮಾಡಿದ್ದಾರೆ.

465
00:34:40,125 --> 00:34:43,625
-ಹಾಗಾಗಿ ಅವರನ್ನು ಓಟಿಗೆ ಕರೆದೊಯ್ಯಬೇಕು.
-ನಾನು ಅದನ್ನು ನೋಡುತ್ತೇನೆ.

466
00:34:46,083 --> 00:34:48,083
ನಮೂನೆ ಕ್ರಮಬದ್ಧವಾಗಿದೆ, ಶ್ರೀಮತಿ. ಶೇಠ್.

467
00:34:48,791 --> 00:34:49,916
ಡಿಸಿಡಿ.

468
00:34:50,416 --> 00:34:53,041
ರಕ್ತಪರಿಚಲನೆ ನಿಂತ ನಂತರದ
ಅಂಗಾಂಗ ದಾನಕ್ಕಾಗಿ ದೇಹವನ್ನು...

469
00:34:54,333 --> 00:34:56,541
ಪೃಥ್ವಿಯನ್ನು ಓಟಿಗೆ ಕರೆದೊಯ್ಯಬೇಕು.

470
00:35:00,250 --> 00:35:01,458
ಈ ಬಗ್ಗೆ ಗೊತ್ತಿತ್ತಾ?

471
00:35:03,375 --> 00:35:05,125
ಈ ಬಗ್ಗೆ ನಿನಗೆ ಗೊತ್ತಿತ್ತಾ, ಜಯ್?

472
00:35:05,208 --> 00:35:07,458
ಬನ್ನಿ, ನಾನು ವಿವರಿಸುವೆ. ದಯವಿಟ್ಟು ಬನ್ನಿ.

473
00:35:15,333 --> 00:35:17,125
ಡಿಸಿಡಿಗಾಗಿ ಸಮಯವು ಅತ್ಯಗತ್ಯ.

474
00:35:18,041 --> 00:35:22,500
ಸಕಾಲದಲ್ಲಿ ಅಂಗಾಂಗಗಳನ್ನು ತೆಗೆಯದಿದ್ದರೆ,
ಅವು ಮುಂದೆ ಕಾರ್ಯನಿರ್ವಹಿಸುವುದಿಲ್ಲ.

475
00:35:24,458 --> 00:35:28,375
ಬಹುಶಃ ಪೃಥ್ವಿ ನಿಮ್ಮೊಂದಿಗೆ
ಅಂಗಾಂಗ ದಾನದ ಬಗ್ಗೆ ಎಂದಿಗೂ ಹೇಳಿಲ್ಲ,

476
00:35:29,500 --> 00:35:31,916
ಆದರೆ ಇದು ವೈದ್ಯರಲ್ಲಿ ಒಂದು ಸಾಮಾನ್ಯ ರೂಢಿ.

477
00:35:33,791 --> 00:35:34,916
ಅಭಿನಂದನೆಗಳು!

478
00:35:38,083 --> 00:35:39,333
ನೀನು ಹೆಮ್ಮೆ ಪಡಬೇಕು.

479
00:35:40,166 --> 00:35:43,000
ಅವನ ಸಾವಿನಲ್ಲೂ ಜನರಿಗೆ ಸಹಾಯ ಮಾಡುತ್ತಿದ್ದಾನೆ.

480
00:35:44,125 --> 00:35:46,958
ಇದು ಅವನ ಕೊನೆಯ ಆಸೆ ಅಂದುಕೊಳ್ಳಿರಿ.

481
00:36:09,000 --> 00:36:11,250
ಮೇಡಂ, ಸ್ವಲ್ಪ ತಿನ್ನಿ.

482
00:36:13,875 --> 00:36:16,916
ಖಾಲಿ ಹೊಟ್ಟೆಯು ಆಮ್ಲೀಯತೆಗೆ ಕಾರಣವಾಗುತ್ತದೆ.
ದಯವಿಟ್ಟು ತಿನ್ನಿ.

483
00:36:17,333 --> 00:36:19,791
ಮಸಾಲಾ ಸ್ಯಾಂಡ್‌ವಿಚ್. ತೆಗೆದುಕೊಳ್ಳಿ.

484
00:36:21,041 --> 00:36:22,541
ಮೇಡಂ.

485
00:36:22,625 --> 00:36:24,375
ಮತ್ತೊಮ್ಮೆ, ನಾನು ವಿಫಲಳಾದೆ,

486
00:36:25,833 --> 00:36:27,791
ಬಾನಿಗೆ ನ್ಯಾಯ ಕೊಡಿಸುವಲ್ಲಿ.

487
00:36:28,750 --> 00:36:29,833
ಹಾಗೆ ಹೇಳಬೇಡಿ.

488
00:36:30,666 --> 00:36:33,791
ಈ ನಕಾರಾತ್ಮಕ ಆಲೋಚನೆಗಳು ತಳವಿಲ್ಲದ ಬಾವಿಗಳಂತೆ.

489
00:36:34,541 --> 00:36:39,000
ನೀವು ಹೆಚ್ಚು ಯೋಚಿಸಿದಷ್ಟೂ
ಅದು ಆಳ ಮತ್ತು ಗಾಢವಾಗುತ್ತದೆ.

490
00:37:40,625 --> 00:37:42,958
ಇಲ್ಲ, ಇಲ್ಲ, ನಾನೇನೂ ಮಾಡಲಿಲ್ಲ.

491
00:37:43,333 --> 00:37:47,000
ಇಲ್ಲ, ನಾನೇನೂ ಮಾಡಲಿಲ್ಲ.
ಪೃಥ್ವಿಯನ್ನು ಉಳಿಸಲು ನೋಡುತ್ತಿದ್ದೆ ಅಷ್ಟೇ.

492
00:37:47,541 --> 00:37:48,791
ನಾನೇನೂ ಮಾಡಲಿಲ್ಲ.

493
00:37:48,875 --> 00:37:49,833
ಪ್ರಮಾಣ ಮಾಡುತ್ತೇನೆ.

494
00:37:49,916 --> 00:37:51,041
ನಾನೇನೂ ಮಾಡಲಿಲ್ಲ.

495
00:37:52,875 --> 00:37:54,791
ಅವನು ಅಳಲಿ ಬಿಡಿ.

496
00:37:54,875 --> 00:37:56,041
ಭಾವನಾತ್ಮಕ ಪ್ರಕೋಪವು

497
00:37:56,125 --> 00:37:57,666
ಈ ಹಂತದಲ್ಲಿ ಅವನಿಗೆ ಒಳ್ಳೆಯದು.

498
00:38:01,333 --> 00:38:03,208
ನಾನು ಸತ್ಯ ಹೇಳುತ್ತಿದ್ದೇನೆ.

499
00:38:03,291 --> 00:38:05,416
ನಿಲ್ಲಿಸಿ, ನಿಲ್ಲಿಸಿ.

500
00:38:16,041 --> 00:38:20,833
ನೀವು ಅದನ್ನು ನೋಡಿದಿರಾ?
ಪೃಥ್ವಿಯ ಕೈ ಅಲುಗಾಡಿತು.

501
00:38:21,541 --> 00:38:22,708
ಅವನು ಜೀವಂತವಾಗಿದ್ದಾನೆ.

502
00:38:24,333 --> 00:38:25,875
ಪೃಥ್ವಿ ಬದುಕಿದ್ದಾನೆ.

503
00:38:26,500 --> 00:38:29,083
ರೂಮಿ. ರೂಮಿ, ಅವನು ಬದುಕಿರಬೇಕು, ಅಲ್ವಾ?

504
00:38:29,541 --> 00:38:32,875
ಅವನಿಗಾಗಿ ಅಂಧಕಾರ ಹುಡುಕಿ ಬಂದಿದ್ದರೆ,
ನನಗೆ ತಿಳಿಯುತ್ತಿತ್ತು.

505
00:38:34,416 --> 00:38:36,083
ಆದರೆ ಹಾಗೇನೂ ನಡೆದೇ ಇಲ್ಲ.

506
00:38:36,500 --> 00:38:39,291
ರೂಮಿ, ಅವರಿಗೆ ಹೇಳು.
ಅಂಧಕಾರದ ಬಗ್ಗೆ ಅವರಿಗೆ ಹೇಳು.

507
00:38:39,708 --> 00:38:42,625
-ರೂಮಿ...
-ಜಯ್, ಅವನಿಗೆ ಲಕ್ವ ಹೊಡೆಯಿತು.

508
00:38:42,750 --> 00:38:44,125
ಅದೊಂದು ಸಹಜ ಸಾವು.

509
00:38:45,583 --> 00:38:48,791
ಇಲ್ಲ. ಇಲ್ಲ, ಅಂಧಕಾರ ಕರೆಯುವವರೆಗೆ
ಆತ ಸಾಯಲು ಸಾಧ್ಯವಿಲ್ಲ.

510
00:38:49,791 --> 00:38:50,625
ಜಯ್.

511
00:38:51,250 --> 00:38:53,750
ಪೃಥ್ವಿ ಇನ್ನಿಲ್ಲ. ನೀವದನ್ನು ಒಪ್ಪಿಕೊಳ್ಳಬೇಕು.

512
00:38:54,708 --> 00:38:56,875
-ಸುಳ್ಳು ಹೇಳುತ್ತಿದ್ದೀರಿ. ಸುಳ್ಳು.
-ಜಯ್.

513
00:38:57,083 --> 00:38:58,333
-ಸುಳ್ಳು ಹೇಳ್ತಿದ್ದೀರಿ.
-ಜಯ್!

514
00:38:58,416 --> 00:39:01,833
ಪರಿಚಾರಕರೇ! ಇವನಿಗೆ ಮನೋರೋಗ
ಉಂಟಾಗುತ್ತಿದೆ. ಇವನನ್ನು ನಿಗ್ರಹಿಸಬೇಕಾಗಿದೆ.

515
00:39:01,916 --> 00:39:03,250
-ಆತ ಸಾಯುವಂತಿಲ್ಲ.
-ಹಿಡ್ಕೊಳ್ಳಿ.

516
00:39:03,333 --> 00:39:04,916
-ಸುಳ್ಳು ಹೇಳುವಿರಿ.
-ಹಿಡ್ಕೊಳ್ಳಿ.

517
00:39:05,000 --> 00:39:06,041
ರೂಮಿ, ಸಹಾಯ ಮಾಡು.

518
00:39:06,125 --> 00:39:08,458
-ನಾನು ನೋಡಿಕೊಳ್ಳುವೆ.
-ಅಂಧಕಾರದ ಬಗ್ಗೆ ಅವರಿಗೆ ಹೇಳು.

519
00:39:08,625 --> 00:39:09,833
ದಯವಿಟ್ಟು ಹೊರಗೆ ಕಾಯಿರಿ.

520
00:39:09,958 --> 00:39:11,875
-ಹೊರಗೆ ಕಾಯಿರಿ.
-ಅಂಧಕಾರದ ಬಗ್ಗೆ ಹೇಳು.

521
00:39:12,041 --> 00:39:15,041
ಅವರಿಗೆ ನಿಜ ಹೇಳು.
ನಿಜ ಹೇಳುತ್ತಿದ್ದೇನೆಂದು ಅವರಿಗೆ ಹೇಳು.

522
00:39:15,208 --> 00:39:16,541
ಇವನನ್ನ ಈಗಲೇ ಮಂಪರುಗೊಳಿಸಬೇಕು.

523
00:39:16,666 --> 00:39:17,750
ನನ್ನನ್ನು ಬಿಡಿ. ಬಿಡಿ.

524
00:39:17,833 --> 00:39:19,666
ನಿಲ್ಲಿಸಿ. ಬಿಡಿ. ನಾನು ಹುಚ್ಚನಲ್ಲ!

525
00:39:19,791 --> 00:39:22,041
ನಾನು ಹುಚ್ಚನಲ್ಲ.
ಡಾ. ಸಹಾಯ್, ನಿಮಗೆ ನಾನು ಗೊತ್ತು.

526
00:39:22,333 --> 00:39:24,916
ಹೀಗೆ ಮಾಡಬೇಡಿ! ಮಾಡಬೇಡಿ.

527
00:39:25,000 --> 00:39:28,125
ರೂಮಿ, ಅಮ್ಮ, ತಡೆಯಿರಿ! ದಯವಿಟ್ಟು!

528
00:39:28,208 --> 00:39:31,083
ಬೇಡ, ಬೇಡ, ಇದನ್ನು ನಿಲ್ಲಿಸಿ.
ದಯವಿಟ್ಟು, ನಿಲ್ಲಿಸಿ.

529
00:39:31,166 --> 00:39:33,875
ಅಮ್ಮಾ. ಬೇಡ.

530
00:39:33,958 --> 00:39:36,416
ರೂಮಿ. ಬೇಡ.

531
00:39:47,083 --> 00:39:51,083
ಒಬ್ಬ ವ್ಯಕ್ತಿಯನ್ನು ಅಂಧಕಾರ ಆವರಿಸಿದಾಗ
ಏನಾಗುತ್ತದೆ ಎಂದು ನನಗೆ ತಿಳಿದಿದೆ.

532
00:39:52,625 --> 00:39:55,291
ಮತ್ತು ನಾವು ಬಯಸಿಯೂ,
ಅವರಿಗಾಗಿ ಏನೂ ಮಾಡಲು ಆಗದಿದ್ದಾಗ.

533
00:39:57,000 --> 00:40:02,708
ನನ್ನ ಒಬ್ಬ ಸ್ನೇಹಿತ, ಬಹಳ ಆತ್ಮೀಯನೊಬ್ಬ
ಈ ಅಂಧಕಾರದಿಂದಾಗಿ ಬಳಲುತ್ತಿದ್ದಾನೆ.

534
00:40:03,708 --> 00:40:05,541
ಕೆಲ ದಿನಗಳ ಹಿಂದೆ ನಾನು ನೇರ ಸಂವಾದದಲ್ಲಿ

535
00:40:05,625 --> 00:40:06,958
ಕಗ್ಗತ್ತಲೆಯ ಕಡೆಗೆ
ಸಂಚಿಕೆ 4

536
00:40:07,291 --> 00:40:10,541
ಮುಂಬೈನಲ್ಲಿ ಒಂದು ಅಲೌಕಿಕ ಶಕ್ತಿ
ಇರಬಹುದು ಎಂದು ಹೇಳಿದೆ.

537
00:40:11,083 --> 00:40:14,416
ದುರದೃಷ್ಟವಶಾತ್, ನನ್ನ ಮನಸ್ಸಿನ
ಭಾವನೆ ನಿಜವಾಯಿತು.

538
00:40:15,000 --> 00:40:19,083
ಇಂಥ ಅನುಭವವಾಗುತ್ತಿರುವ ಯಾರಾದರೂ ಗೊತ್ತಿದ್ದರೆ,

539
00:40:19,166 --> 00:40:20,958
ದಯವಿಟ್ಟು ನನ್ನನ್ನು ಸಂಪರ್ಕಿಸಿ.

540
00:40:21,041 --> 00:40:24,541
ಆದರೆ ಮೊದಲು, ಆ ಸ್ನೇಹಿತ ಅಥವಾ
ಸಂಬಂಧಿಕರಿಗೆ ತಿಳಿಸಿ,

541
00:40:24,750 --> 00:40:27,958
ಅವನು ಅಥವಾ ಅವಳು ಒಂಟಿಯಲ್ಲ ಎಂದು.
ಮತ್ತು ನಿಮಗೆ ಕಾಳಜಿ ಇದೆ ಎಂದು.

542
00:40:59,708 --> 00:41:00,583
ಹಾಯ್.

543
00:41:13,291 --> 00:41:14,625
ದಿನ ಚೆನ್ನಾಗಿರಲಿಲ್ವಾ?

544
00:44:22,833 --> 00:44:24,250
ಕಲ್... ಕಲ್ಪನಾ?

545
00:44:47,666 --> 00:44:49,416
ಕಲ್ಪನಾ, ಏನಾಯಿತು?

546
00:44:55,666 --> 00:44:56,708
ಬಾನಿ.

547
00:44:58,708 --> 00:44:59,625
ಬಾನಿ.

548
00:45:00,666 --> 00:45:02,041
ಬಾನಿಗೆ ನನ್ನ ಮೇಲೆ ಕೋಪವಿದೆ.

549
00:45:04,250 --> 00:45:05,375
ಅವಳಿಗೆ ಹೋಗಲು ಹೇಳು.

550
00:45:08,083 --> 00:45:12,250
-ಅವಳಿಗೆ ಹೋಗಲು ಹೇಳು.
-ಪರವಾಗಿಲ್ಲ. ಪರವಾಗಿಲ್ಲ.

551
00:45:12,708 --> 00:45:14,666
-ಯಾರೂ ಇಲ್ಲ.
-ನಾನು ಯತ್ನಿಸುತ್ತಿದ್ದೇನೆ.

552
00:45:14,875 --> 00:45:16,833
-ಯಾರೂ ಇಲ್ಲ.
-ನಾನು ಯತ್ನಿಸುತ್ತಿದ್ದೇನೆ.

553
00:45:16,916 --> 00:45:18,166
ಅದು ಏನೂ ಅಲ್ಲ.

554
00:45:30,541 --> 00:45:32,375
ಆಂಬ್ಯುಲೆನ್ಸ್

555
00:45:50,375 --> 00:45:54,375
ಬಾ. ಬೇಗ ಬಾ. ಅವನನ್ನು ಅಲ್ಲಿ ಇರಿಸಿ.
ಹಾಂ. ಜಾಗ್ರತೆ.

556
00:45:54,458 --> 00:45:56,041
ತೆರೆಯಿರಿ. ಅದನ್ನು ತೆರೆಯಿರಿ.

557
00:48:28,000 --> 00:48:30,000
ಉಪ ಶೀರ್ಷಿಕೆ ಅನುವಾದ: ಹೇಮಂತ್ ಕುಮಾರ್

