1
00:00:21,666 --> 00:00:23,625
ಚೆನ್ನಾಗಿ ಕಾಣ್ತಿದ್ದೀರ, ಸರ್. ಹೋಗೋಣ.

2
00:00:30,583 --> 00:00:31,416
ಹೇ, ಫಿಯೋನಾ.

3
00:00:32,166 --> 00:00:34,750
-ಜೂಡ್?
-ಪೊಲೀಸ್ ಠಾಣೆಯವರು ನಿನಗೆ ತಿಳಿಸಿರಬೇಕು.

4
00:00:34,791 --> 00:00:38,166
ಜೂಡ್‌ ರೊಜಾರಿಯೋ ತನ್ನ ಮಗಳಿಗೆ
ಹುಟ್ಟುಹಬ್ಬದ ಶುಭಾಶಯ ಕೋರಬೇಕಂತೆ.

5
00:00:40,500 --> 00:00:43,708
ಆದರೆ ಸಮಯ ನಿರ್ಧರಿಸಿರಲಿಲ್ಲ.
ನನಗೂ ಅನುಕೂಲವಾಗುವಂತೆ ಯೋಚಿಸಿದಿರಾ?

6
00:00:43,916 --> 00:00:46,625
ನಾವೇನು ಮಾಡಬಹುದು, ಮೇಡಂ?
ಜೂಡ್ ಸರ್ ಪೊಲೀಸರಿಗೆ ಅಷ್ಟು ಸಹಾಯ

7
00:00:46,708 --> 00:00:49,875
ಮಾಡುತ್ತಿರುವಾಗ, ಅವರಿಗೆ ಸಹಾಯ
ಮಾಡಲು ನಾವು ಬದ್ಧರಿರಬೇಕು.

8
00:00:50,500 --> 00:00:52,125
ಇಲ್ಲ, ಕರೆ ಮಾಡಿಕೊಂಡು ಬನ್ನಿ.

9
00:00:52,541 --> 00:00:53,666
-ಜೂಲಿಯಾ!
-ಕ್ಷಮಿಸಿ.

10
00:00:53,875 --> 00:00:55,958
-ಮೇಡಂ?
-ಜೂಲಿಯಾ! ಜೂಲಿಯಾ!

11
00:00:56,750 --> 00:00:57,583
ಜೂಲ್...

12
00:00:57,916 --> 00:00:59,000
-ಫಿಯೋನಾ!
-ಪ್ಲೇ ಮಾಡಿ, ಅಪ್ಪ...

13
00:01:00,166 --> 00:01:01,833
-ದಯವಿಟ್ಟು. ಪ್ಲೇ ಮಾಡಿ.
-ಅದು ಯಾರು?

14
00:01:03,375 --> 00:01:05,750
-ದಯವಿಟ್ಟು.
-ಮೇಡಂ, ಒಮ್ಮೆಯಾದರೂ ನನ್ನ ಮಾತು ಕೇಳಿ.

15
00:01:05,833 --> 00:01:09,125
ಐದು ನಿಮಿಷ ನೋಡಲು ಬಿಡಿ, ಮೇಡಂ.
ಅವಳಿಗೆ ಜನ್ಮದಿನದ ಶುಭಾಶಯ ಕೋರಲು.

16
00:01:09,375 --> 00:01:11,750
ಇಲ್ಲ. ಈಗ ಆಗಲ್ಲ.
ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.

17
00:01:12,250 --> 00:01:13,833
ಮುಂದಿನ ಸಲ, ಬರೋ ಮುಂಚೆ ಕರೆ ಮಾಡಿ.

18
00:01:13,875 --> 00:01:15,083
ಈಗ ಸುಮ್ಮನೆ ಹೊರಡಿ.

19
00:01:15,125 --> 00:01:16,250
ಬನ್ನಿ, ಹಾಡೋಣ.

20
00:01:16,333 --> 00:01:19,958
ನಿನಗೆ ಜನ್ಮದಿನದ ಶುಭಾಶಯಗಳು

21
00:01:20,291 --> 00:01:24,625
ನಿನಗೆ ಜನ್ಮದಿನದ ಶುಭಾಶಯಗಳು

22
00:01:24,916 --> 00:01:29,791
ಜನ್ಮದಿನದ ಶುಭಾಶಯಗಳು, ಪ್ರೀತಿಯ ಜೂಲಿಯಾ

23
00:01:29,875 --> 00:01:33,166
ನಿನಗೆ ಜನ್ಮದಿನದ ಶುಭಾಶಯಗಳು

24
00:01:37,750 --> 00:01:40,416
ಜೂಡ್. ಜೂಡ್.

25
00:01:41,541 --> 00:01:42,666
ಜೂಡ್!

26
00:01:42,875 --> 00:01:44,625
ದಯವಿಟ್ಟು ಅನಗತ್ಯ ನಾಟಕ ಸೃಷ್ಠಿಸಬೇಡ.

27
00:01:44,708 --> 00:01:48,000
ಜೂಲಿಯಾ ಕೊನೆಗೂ ತನ್ನ ಜೀವನದಲ್ಲಿ
ಚೂರು ಸಂತೋಷ ಕಂಡುಕೊಂಡಿದ್ದಾಳೆ.

28
00:01:48,708 --> 00:01:50,750
ನೀನು ನಮ್ಮ ಬಗ್ಗೆ ಮರೆತುಬಿಡಬೇಕು.

29
00:01:53,916 --> 00:01:56,666
ನಿನ್ನನ್ನು ಬೇಡಿಕೊಳ್ಳುತ್ತಿರುವೆ, ಜೂಡ್.
ನಮ್ಮಿಂದ ದೂರ ಇರು.

30
00:01:58,083 --> 00:01:58,958
ದಯವಿಟ್ಟು.

31
00:01:59,541 --> 00:02:00,875
-ಫಿಯೋನಾ?
-ಹಾಂ?

32
00:02:00,958 --> 00:02:02,750
-ಯಾರದು?
-ಯಾರೂ ಇಲ್ಲ.

33
00:03:24,708 --> 00:03:27,541
ಅಂಧೆರಾ

34
00:03:44,083 --> 00:03:45,958
ಅವನ ಬಗ್ಗೆ ಏನು ಗೊತ್ತು? ಹೇಳು.

35
00:03:49,416 --> 00:03:52,500
ಈಗಾಗಲೇ ಹೇಳಿದ್ದೇನೆ,
ಡ್ಯಾರಿಯಸ್ ಕೂಪರ್ ಯಾರೆಂದು ಗೊತ್ತಿಲ್ಲ.

36
00:03:53,541 --> 00:03:57,583
ಮತ್ತು ಉಬರ್‌ಲೈಫ್ ಫಾರ್ಮಾದ ನಿರ್ದೇಶಕರ
ಮಂಡಳಿಯಲ್ಲಿರುವುದಕ್ಕೆ ಸಂಬಂಧಿಸಿದಂತೆ,

37
00:03:58,041 --> 00:04:00,500
ಆರು ವಿವಿಧ ಕಂಪನಿಗಳ ಮಂಡಳಿಗಳಲ್ಲಿ
ನಾನು ನಿರ್ದೇಶಕ.

38
00:04:00,583 --> 00:04:02,125
ಹಾಗಾಗಿ ನಾನೇನು ಹೇಳಲಿ.

39
00:04:03,708 --> 00:04:04,833
ಸುಳ್ಳು ಹೇಳೋದು ನಿಲ್ಸು.

40
00:04:06,333 --> 00:04:07,791
ನಾನು ಹೇಳಲು ಏನೂ ಇಲ್ಲ.

41
00:04:08,541 --> 00:04:10,208
ನನಗೆ ನನ್ನ ವಕೀಲರೊಂದಿಗೆ ಮಾತಾಡಬೇಕು.

42
00:04:10,791 --> 00:04:12,708
ಇದು ಹಾಲಿವುಡ್ ಸಿನಿಮಾ ಅಂದುಕೊಂಡೆಯಾ?

43
00:04:23,791 --> 00:04:26,250
ಇವರ ಬಗ್ಗೆ ಹೇಳು. ಇವರು ನಿನಗೆ ಗೊತ್ತಾ?

44
00:04:28,500 --> 00:04:30,125
ನನಗೆ ಇವರಿಬ್ಬರು ಗೊತ್ತಿಲ್ಲ.

45
00:04:31,833 --> 00:04:32,708
ಇದು...

46
00:04:34,166 --> 00:04:35,541
ಪೃಥ್ವಿ, ನನ್ನ ವಿದ್ಯಾರ್ಥಿ.

47
00:04:36,041 --> 00:04:37,250
ಅಂದರೆ, ಆಗಿದ್ದ.

48
00:04:40,583 --> 00:04:43,208
ಸರಿ. ಪೃಥ್ವಿ ಬಗ್ಗೆ ಹೇಳು.

49
00:04:44,125 --> 00:04:47,625
ಅವನು ಸತ್ತನೆಂದು ಘೋಷಿಸಿದ ನಂತರ,
ಅವನ ದೇಹವನ್ನು ಏನು ಮಾಡಿದೆ?

50
00:04:54,208 --> 00:04:55,625
ಮಾತಾಡು!

51
00:04:57,750 --> 00:05:00,000
ಆತ ತನ್ನ ಅಂಗಾಂಗಗಳನ್ನು ದಾನ ಮಾಡಲು ಬಯಸಿದ್ದ.

52
00:05:01,416 --> 00:05:03,833
ಅವನ್ನು ಪಡೆಯಲು
ದೇಹವನ್ನು ಓಟಿಗೆ ಕೊಂಡೊಯ್ದೆವು...

53
00:05:03,916 --> 00:05:06,500
ಹೇ... ನಾನು ಮೂರ್ಖಳು ಅಂದುಕೊಂಡೆಯಾ?

54
00:05:08,125 --> 00:05:11,166
ಅವನ ದೇಹ ಓಟಿಗೆ ಅಲ್ಲ,
ನಿನ್ನ ಲ್ಯಾಬ್‌ಗೆ ಒಯ್ಯಲಾಯಿತೆಂದು ಗೊತ್ತು.

55
00:05:12,708 --> 00:05:17,375
ಪೃಥ್ವಿ ಆಸ್ಪತ್ರೆಯಲ್ಲಿ ಜೀವಂತವಾಗಿದ್ದ.
ಅವನು ನಿನ್ನ ಲ್ಯಾಬ್‌ನಲ್ಲಿ ಸಾವನ್ನಪ್ಪಿದ.

56
00:05:18,416 --> 00:05:19,333
ಅಲ್ಲವೇ?

57
00:05:19,958 --> 00:05:20,916
ವಕೀಲರು.

58
00:06:00,708 --> 00:06:01,958
ಏನಾಯಿತು, ಇನ್ಸ್ಪೆಕ್ಟರ್?

59
00:06:02,041 --> 00:06:04,333
-ಏನು, ಆಯೆಷಾ?
-ಕಲ್ಪನಾ, ನಾನು ಅವನನ್ನು ನೋಡಿದೆ.

60
00:06:04,916 --> 00:06:07,000
-ಅವನು ಆತ್ಮಾ ಬಳಿ ಬಂದಿದ್ದ.
-ಯಾರು?

61
00:06:07,250 --> 00:06:08,125
ಡ್ಯಾರಿಯಸ್.

62
00:06:09,458 --> 00:06:11,041
ನನ್ನ ಮೇಲೆ ಹಲ್ಲೆ ಮಾಡಿದ್ದವನು.

63
00:06:11,416 --> 00:06:13,125
ನೀನು ಹುಡುಕುತ್ತಿರುವವನು, ಕಲ್ಪನಾ.

64
00:06:14,416 --> 00:06:17,083
-ಈಗ ಎಲ್ಲಿದ್ದೀಯ?
-ಅವನ ಹಿಂದೆ. ಹಿಂಬಾಲಿಸುತ್ತಿದ್ದೇನೆ.

65
00:06:19,625 --> 00:06:20,833
ಛೇ, ಏನಪ್ಪಾ ಇದು!

66
00:06:21,458 --> 00:06:25,083
ನೇರ ಸ್ಥಳಮಾಹಿತಿ ಕಳಿಸು,
ಈಗಲೇ ಅಲ್ಲಿಗೆ ಬರುತ್ತೇನೆ. ಮತ್ತು ಕೇಳಿಸಿಕೋ,

67
00:06:25,291 --> 00:06:29,625
ಆತ ಬಹಳ ಅಪಾಯಕಾರಿ. ನೀನು ಹಿಂಬಾಲಿಸುತ್ತಿರುವುದು
ಅವನಿಗೆ ತಿಳಿಯಬಾರದು.

68
00:06:29,833 --> 00:06:33,000
-ಹಾಂ.
-ಯಾವುದೇ ಕಾರಣಕ್ಕೂ ಕಾರಿನಿಂದ ಹೊರಬರಬೇಡ.

69
00:06:33,458 --> 00:06:34,958
ಸರಿ.

70
00:06:39,250 --> 00:06:40,166
ಏನಾಯಿತು?

71
00:06:40,250 --> 00:06:42,916
ಪ್ರಶ್ನಿಸುತ್ತಲೇ ಇರು.
ಚೂರು ಹೆಚ್ಚು ಒತ್ತಡ ಹಾಕಿದರೆ ಹೇಳುವನು.

72
00:06:43,916 --> 00:06:46,041
ವಿಚಾರಣೆ ಮಧ್ಯದಲ್ಲೇ ಹೊರಡುತ್ತಿದ್ದೀರಾ?

73
00:06:46,541 --> 00:06:47,583
ಡ್ಯಾರಿಯಸ್ ಸಿಕ್ಕಿದ.

74
00:07:02,625 --> 00:07:04,625
ನೀನು ಅದೃಷ್ಟವಂತ, ಮೇಡಂ ಹೋಗಿಬಿಟ್ಟರು.

75
00:07:06,250 --> 00:07:08,125
ಆಕೆಗೆ ಗಂಡಸರೆಂದರೆ ಸಮಸ್ಯೆ ಇದೆ.

76
00:07:08,708 --> 00:07:10,583
ಹಾಗಾಗಿಯೇ ಆಕೆ ಇನ್ನೂ ಅವಿವಾಹಿತೆ.

77
00:07:12,125 --> 00:07:13,333
ನಿನ್ನದು ಆಗಿದೆಯಾ?

78
00:07:15,416 --> 00:07:17,375
ಇಲ್ವಾ? ಒಳ್ಳೆಯದು.

79
00:07:20,291 --> 00:07:21,333
ಇದು ಡಾಲಿ.

80
00:07:21,875 --> 00:07:23,041
ಡಾಲಿ ನನ್ನ ಹೆಂಡತಿ.

81
00:07:23,833 --> 00:07:25,541
ಆಗಾಗ ಕರೆ ಮಾಡುತ್ತಲೇ ಇರುತ್ತಾಳೆ.

82
00:07:26,000 --> 00:07:29,750
ಇಂದು ನಮ್ಮ ವಿವಾಹ ವಾರ್ಷಿಕೋತ್ಸವ.
ಮತ್ತು ನಾನು ಇಲ್ಲಿದ್ದೇನೆ.

83
00:07:30,291 --> 00:07:32,791
ಎಂಥಾ ಕೆಟ್ಟ ಜೀವನ ನನ್ನದು, ಅಲ್ವಾ?

84
00:07:36,125 --> 00:07:38,583
ಹೇಳು. ಆ ಜಾಗ ಎಲ್ಲಿದೆ?

85
00:07:40,666 --> 00:07:42,875
ಮಾತಾಡು. ಪ್ರಯೋಗಾಲಯ ಎಲ್ಲಿದೆ?

86
00:07:46,833 --> 00:07:49,333
15 ನಿಮಿಷ (2.5 ಕಿ.ಮೀ)
90 ಅಡಿ ರಸ್ತೆಯ ಮೂಲಕ

87
00:07:56,416 --> 00:08:00,833
ನೋಡಿದೆಯಾ? ಮತ್ತೆ ನನ್ನ ಹೆಂಡತಿ.
ನಾನು ನಿಜವಾಗಲೂ ಮನೆಗೆ ಹೋಗಬೇಕಾಗಿದೆ.

88
00:08:00,916 --> 00:08:02,708
ಮಾತಾಡು. ಪ್ರಯೋಗಾಲಯ ಎಲ್ಲಿದೆ?

89
00:08:03,750 --> 00:08:05,750
ನನಗೆ ನನ್ನ ವಕೀಲರೊಂದಿಗೆ ಮಾತಾಡಬೇಕು.

90
00:08:06,333 --> 00:08:07,333
ಹಾಗಾದರೆ, ಹೇಳಲ್ವಾ?

91
00:08:09,083 --> 00:08:11,791
ತಿಕ ಹೊಡೆಸಿಕೋ. ಹೇ, ತಾವಡೆ!
ಸೂಜಿಮದ್ದು ಸಿದ್ಧ ಮಾಡು. ಬಾ.

92
00:08:12,041 --> 00:08:13,916
-ಎಲ್ಲಿ ಚುಚ್ಚಲಿ, ಸರ್?
-ಈತ ಹೇಳುತ್ತಾನೆ.

93
00:08:14,000 --> 00:08:15,041
ಅಷ್ಟಕ್ಕೂ ಈತ ವೈದ್ಯ.

94
00:08:15,291 --> 00:08:16,291
ಎಂತಹ ಚುಚ್ಚುಮದ್ದು?

95
00:08:16,958 --> 00:08:18,875
ಸತ್ಯ ಬಾಯಿ ಬಿಡಿಸುವ ಚುಚ್ಚುಮದ್ದು.

96
00:08:19,375 --> 00:08:20,875
ನಾರ್ಕೋ-ವಿಶ್ಲೇಷಣೆ.

97
00:08:25,166 --> 00:08:28,291
ಸರ್, ಸೂಜಿ ಇಲ್ಲ.
ಮಾರುಕಟ್ಟೆಯಿಂದ ಒಂದು ತರಬೇಕು.

98
00:08:28,541 --> 00:08:30,083
-ಹೇ, ಒಂದು ಕೆಲಸ ಮಾಡು.
-ಏನು?

99
00:08:30,291 --> 00:08:32,916
ನಿನ್ನೆ ಡ್ರಗ್ ದಾಳಿಯಲ್ಲಿ ಸಿಕ್ಕ
ಬಳಸಿದ ಸೂಜಿಗಳು ಇರಬೇಕು.

100
00:08:33,625 --> 00:08:35,666
-ಅಲ್ಲಿಂದ ಸ್ವಲ್ಪ ತಾ.
-ಸರಿ.

101
00:08:35,750 --> 00:08:37,291
ನೀನು ಹಾಗೆ ಮಾಡುವಂತಿಲ್ಲ.

102
00:08:37,541 --> 00:08:40,250
-ಇದು ಕಾನೂನುಬಾಹಿರ.
-ಕಾನೂನಿನ ಬಗ್ಗೆ ನನಗೆ ಹೇಳಿಕೊಡಬೇಡ.

103
00:08:40,416 --> 00:08:41,500
ಈ ಸಮವಸ್ತ್ರ ನೋಡು.

104
00:08:41,916 --> 00:08:43,250
ನನ್ನ ವೃತ್ತಿ ಏನು ಹೇಳು?

105
00:08:44,791 --> 00:08:47,791
ನೀನು ನನಗೆ ಸೋಂಕಿತ ಸೂಜಿಯಿಂದ
ಚುಚ್ಚುಮದ್ದು ನೀಡುವಂತಿಲ್ಲ.

106
00:08:48,583 --> 00:08:50,625
ಹೇಳುತ್ತಿದ್ದೇನೆ, ಹೀಗೆ ಮಾಡುವಂತಿಲ್ಲ, ಸರಿನಾ?

107
00:08:50,708 --> 00:08:51,875
ಸುಮ್ಮನಿರು. ಸುಮ್ಮನಿರು.

108
00:08:51,958 --> 00:08:54,458
-ಆತ ತೊಳೆದಿರಬೇಕು. ತೊಳೆದೆಯಾ?
-ಸಾಬೂನಿನಿಂದ ತೊಳೆದೆ, ಸರ್.

109
00:08:54,541 --> 00:08:55,916
ಕೇಳಿ, ಹೀಗೆ ಮಾಡುವಂತಿಲ್ಲ.

110
00:08:56,000 --> 00:08:57,833
-ಬಿಡಬೇಡ.
-ನೀವು ಹೀಗೆ ಮಾಡುವಂತಿಲ್ಲ.

111
00:08:58,000 --> 00:08:59,416
ಸರಿ, ಹೇಳುತ್ತೇನೆ.

112
00:09:02,333 --> 00:09:05,333
ಹೋಗೋಣ ಡಾ. ಸಹಾಯ್.
ನೀವು ಯಾವುದಕ್ಕೂ ಉತ್ತರಿಸಬೇಕಾಗಿಲ್ಲ.

113
00:09:06,000 --> 00:09:07,916
ನೀವು ತಮಾಷೆ ಮಾಡುತ್ತಿದ್ದೀರಾ?

114
00:09:08,583 --> 00:09:11,125
ಇದು ಬರೀ ನೀರು. ಮತ್ತು ಇದು ಪಿಚಕಾರಿ.

115
00:09:12,166 --> 00:09:14,875
ಕಾನೂನುಬಾಹಿರ ಬಂಧನ, ಬೆದರಿಕೆ,

116
00:09:15,125 --> 00:09:18,125
ನಿಯಂತ್ರಣದ ಬಲ ಮತ್ತು ಬಲವಂತದ ಬಳಕೆ.

117
00:09:18,958 --> 00:09:21,500
ನಿಮ್ಮ ಹಿರಿಯ ಅಧಿಕಾರಿಗಳಿಗೆ
ದೊಡ್ಡ ವರದಿ ಹೋಗಲಿದೆ.

118
00:09:22,583 --> 00:09:23,583
ಹೋಗೋಣ.

119
00:09:46,375 --> 00:09:48,750
ಈಗ, ಎಚ್ಚರಿಕೆಯಿಂದ ಕೇಳಿಸಿಕೊಳ್ಳಿ, ಸಹಾಯ್.

120
00:09:51,125 --> 00:09:54,791
ಉನ್ನತ ಅಧಿಕಾರಿಗಳ ಆದೇಶಗಳಿವೆ. ಮನೆಯಲ್ಲೇ ಇರಿ.

121
00:09:55,333 --> 00:09:57,416
ಉಬರ್‌ಲೈಫ್‌ನ ಸುತ್ತಮುತ್ತ ಕಾಣಿಸಿಕೊಳ್ಳಬಾರದು.

122
00:09:58,208 --> 00:10:01,833
ಅಂತಿಮ ಪ್ರಕ್ರಿಯೆಯ ಸಮಯ ಬಂದಾಗ
ನಿಮ್ಮನ್ನು ಮತ್ತೆ ಸಂಪರ್ಕಿಸಲಾಗುವುದು.

123
00:10:51,500 --> 00:10:53,458
ಆಯೆಷಾ
ಕರೆ ಮಾಡಲಾಗುತ್ತಿದೆ...

124
00:10:58,791 --> 00:11:02,541
ನೀವು ಡಯಲ್ ಮಾಡಿದ ಸಂಖ್ಯೆ
ತಲುಪಲು ಸಾಧ್ಯವಾಗುತ್ತಿಲ್ಲ.

125
00:12:11,333 --> 00:12:12,250
ಆಯೆಷಾ.

126
00:12:15,625 --> 00:12:16,916
-ನೀನು ಆರಾಮಾ?
-ಚೆನ್ನಾಗಿದ್ದೇನೆ.

127
00:12:17,125 --> 00:12:19,291
-ನಾನು ಕೆಳಗೆ ಬಿದ್ದೆ.
-ನಿನ್ನ ಫೋನ್ ಎಲ್ಲಿ?

128
00:12:19,958 --> 00:12:21,458
ಫೋನ್ ಅನ್ನು ಕೆಳಗೆ ಬೀಳಿಸಿದೆ.

129
00:12:23,541 --> 00:12:26,291
ಕೇಳು. ಪ್ರಯೋಗಾಲಯ ಒಳಗೆ ಇದೆ.

130
00:12:26,375 --> 00:12:28,833
-ಏನು?
-ಪ್ರಯೋಗಾಲಯ.

131
00:12:32,416 --> 00:12:34,750
ಪ್ರಯೋಗಾಲಯ

132
00:12:35,791 --> 00:12:36,750
ಒಳಗೆ.

133
00:12:38,250 --> 00:12:40,958
-ನೀನು ಹೊರಗಿರು.
-ಇಲ್ಲ, ನಿನ್ನ ಜೊತೆ ಬರುತ್ತೇನೆ.

134
00:12:41,166 --> 00:12:42,791
-ಇಲ್ಲ.
-ಹೌದು, ಬರುತ್ತೇನೆ.

135
00:12:43,000 --> 00:12:44,833
-ಬೇಡ.
-ಇಲ್ಲ.

136
00:12:45,791 --> 00:12:47,000
ಇಲ್ಲ

137
00:12:58,833 --> 00:13:00,291
-ಸರಿ, ಮೌನವಾಗಿರು.
-ಸರಿ.

138
00:13:49,333 --> 00:13:52,500
ಓಹ್! ಹಾಗಾದರೆ, ಎಲ್ಲವೂ
ನಡೆಯುತ್ತಿದ್ದದ್ದು ಇಲ್ಲಿಯೇ?

139
00:13:56,833 --> 00:13:57,750
ಆಯೆಷಾ?

140
00:15:22,458 --> 00:15:23,541
ಆಯೆಷಾ.

141
00:15:46,750 --> 00:15:48,958
ಇಡೀ ಪ್ರಕರಣ ಹಾಳಾಗಿದೆ.

142
00:15:51,083 --> 00:15:53,208
ಇಂಥಹ ದೊಡ್ಡ ತಪ್ಪು ಹೇಗೆ ಮಾಡಿದೆ, ಕೆಕೆ?

143
00:15:55,083 --> 00:15:56,916
ನಾಗರಿಕರನ್ನು ಏಕೆ ತೊಡಗಿಸಿಕೊಂಡೆ?

144
00:16:00,333 --> 00:16:02,208
ಡ್ಯಾರಿಯಸ್ ಇಲ್ಲದೆ,

145
00:16:02,625 --> 00:16:06,500
ಈ ಪ್ರಯೋಗಾಲಯ ಹಾಗೂ ಉಬರ್‌ಲೈಫ್‌ ನಡುವೆ
ಸಂಪರ್ಕ ಸಾಧಿಸಲು ಸಾಧ್ಯವಿಲ್ಲ.

146
00:16:06,583 --> 00:16:09,625
ಅವನನ್ನ ಜೀವಂತವಾಗಿ ಹಿಡಿದಿದ್ದರೆ,
ಪರಿಸ್ಥಿತಿ ಬೇರೆಯೇ ಇರುತ್ತಿತ್ತು.

147
00:16:12,958 --> 00:16:15,333
ಈ ಪ್ರಕರಣ ಮುಕ್ತಾಯಗೊಂಡಿದೆ, ಕೆಕೆ.

148
00:16:30,208 --> 00:16:33,958
ಇಲ್ಲ
ಪ್ರಯೋಗಾಲಯ

149
00:16:53,875 --> 00:16:58,416
ಮೂಲಗಳ ಪ್ರಕಾರ, ಈ ಪ್ರಕರಣಕ್ಕೂ
ಉಬರ್‌ಲೈಫ್‌ ಫಾರ್ಮಾಗೂ ಸಂಬಂಧವಿದೆ.

150
00:16:58,500 --> 00:17:02,125
ಪೊಲೀಸರ ಪ್ರಕಾರ, ಈ ಪ್ರಯೋಗಾಲಯ
ಅಕ್ರಮ ಔಷಧ ಪ್ರಯೋಗಗಳನ್ನು ನಡೆಸುತ್ತಿತ್ತು.

151
00:17:02,291 --> 00:17:05,500
ಪ್ರಯೋಗಾಲಯವು ಶಿಥಿಲಾವಸ್ಥೆಯಲ್ಲಿ ಕಂಡುಬಂದಿದೆ.

152
00:17:05,625 --> 00:17:09,833
ಅನಾಮಧೇಯ ಮೂಲಗಳ ಪ್ರಕಾರ, ಉಬರ್‌ಲೈಫ್‌ ಫಾರ್ಮಾ
ಈ ಪ್ರಯೋಗಾಲಯಕ್ಕೆ ಹಣ ನೀಡುತ್ತಿತ್ತು.

153
00:17:09,875 --> 00:17:12,708
ಉಬರ್‌ಲೈಫ್‌ ಫಾರ್ಮಾದ ಸ್ಥಾಪಕರು ಹಾಗೂ ಸಿಇಒ ಆದ

154
00:17:12,750 --> 00:17:15,125
ಶ್ರೀ. ಮಧು ಒಬೆರಾಯ್‌,
ಈ ವಿಷಯದಲ್ಲಿ ತಮ್ಮ ನಿಲುವನ್ನು

155
00:17:15,208 --> 00:17:17,875
ವಿವರಿಸುವ ಹೇಳಿಕೆ ನೀಡಬೇಕೆಂದು
ಇಂದು ನಿರೀಕ್ಷಿಸುವೆವು.

156
00:17:18,000 --> 00:17:19,125
ಮರಳಿ ಸ್ಟುಡಿಯೋಗೆ.

157
00:17:21,666 --> 00:17:24,500
ನಂಬಲಸಾಧ್ಯ. ಅದು ಹೇಗೆ ಅವರು ಸಹಾಯ್‌ರನ್ನು
ಹೋಗಲು ಬಿಟ್ಟರು?

158
00:17:24,583 --> 00:17:26,208
ಅವರಿಗೆ ಬೇರೆ ದಾರಿ ಇರಲಿಲ್ಲ.

159
00:17:26,291 --> 00:17:29,125
ಕೋರ್ಟಿನಲ್ಲಿ ಏನು ಹೇಳುವಳು?
ಜಯ್ ದಿವ್ಯದೃಷ್ಟಿಯಲ್ಲಿ ನೋಡಿದ ಅಂತನಾ?

160
00:17:29,208 --> 00:17:32,333
ಕಲ್ಪನಾ ಹೇಳಿದರು,
ಕೋರ್ಟಿನಲ್ಲಿ ನಮಗೆ ಸರಿಯಾದ ಸಾಕ್ಷ್ಯ ಬೇಕೆಂದು.

161
00:17:32,708 --> 00:17:35,625
-ಆದರೆ ಆತ ಹೆಚ್ಚಿನ ಒತ್ತಡದ ಅಂಚಿನಲ್ಲಿದ್ದ.
-ಹೌದು, ಆದರೆ...

162
00:17:37,750 --> 00:17:38,583
ಮಾಮ.

163
00:17:42,958 --> 00:17:44,166
-ಮಾಮ.
-ಹಾಂ?

164
00:17:44,250 --> 00:17:45,291
ಆರಾಮವಾಗಿದ್ದೀರಾ?

165
00:17:50,875 --> 00:17:52,916
ಏನನ್ನು ಹುಡುಕುತ್ತಿದ್ದೀರಿ?

166
00:17:58,125 --> 00:18:01,791
ನಿನ್ನೆ ಜಯ್‌ನನ್ನು ಉಳಿಸುವಾಗ ನಾನು ನೋಡಿದ್ದು
ನಿಮ್ಮಮ್ಮನ ಮಾತು ನಂಬುವಂತೆ ಮಾಡಿದೆ.

167
00:18:03,708 --> 00:18:05,208
ಆಕೆ ಹೇಳಿದ್ದೆಲ್ಲವೂ ಸರಿಯೇ ಇತ್ತು.

168
00:18:09,875 --> 00:18:11,500
ನಾನು ಅವಳನ್ನು ನಂಬಿರಬೇಕಾಗಿತ್ತು.

169
00:18:14,208 --> 00:18:15,875
ಇವು ನಿಮ್ಮಮ್ಮನದ್ದು.

170
00:18:17,083 --> 00:18:18,916
ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ.

171
00:18:33,750 --> 00:18:34,791
ಸಬಾಳ ದಿನಚರಿ.

172
00:18:35,125 --> 00:18:39,250
ಬಹುಶಃ ನೀನು ಹುಡುಕುತ್ತಿರುವ
ಉತ್ತರಗಳು ಇದರಲ್ಲಿರಬಹುದು.

173
00:18:44,791 --> 00:18:46,125
ಇದೇನು?

174
00:18:49,333 --> 00:18:51,666
ಯಾವುದೋ ಔಷಧದ ಸೂತ್ರದಂತೆ ತೋರುತ್ತದೆ.

175
00:18:52,416 --> 00:18:56,583
ನಿಮ್ಮಣ್ಣ ಅಸ್ವಸ್ಥನಾಗಿದ್ದಾಗ
ಸಬಾ ಔಷಧದ ಸೂತ್ರದ ಮೇಲೆ ಕೆಲಸ ಮಾಡುತ್ತಿದ್ದಳು.

176
00:18:56,791 --> 00:18:59,375
-ಅವನ ಮರಣದ ನಂತರ, ಅವಳು...
-ಪೀಡಿತಳಾದಳು.

177
00:19:06,333 --> 00:19:07,625
ಪ್ರಕಾಶಗಡ್‌
ಹೆದ್ದಾರಿ ಸಂ. 40

178
00:19:07,708 --> 00:19:08,750
ಪ್ರಕಾಶಗಡ್‌?

179
00:19:09,750 --> 00:19:11,125
ಆ ಹೆಸರನ್ನು ಎಲ್ಲೋ ಕೇಳಿರುವೆ.

180
00:19:15,750 --> 00:19:18,416
ನಾಮದೇವ್ ಕಾಂಬ್ಳೆ, ಪ್ರಕಾಶಗಡ್‌.
ವಿಳಾಸದಂತೆ ಕಾಣುತ್ತಿದೆ.

181
00:19:23,333 --> 00:19:24,250
ರೂಮಿ?

182
00:19:31,625 --> 00:19:33,833
ಮೊದಲು, ತಮಾ. ಈಗ, ಪ್ರಕಾಶಗಡ್‌.

183
00:19:35,375 --> 00:19:36,916
ಇದು ಕಾಕತಾಳೀಯವಾಗಿರಲು ಸಾಧ್ಯವಿಲ್ಲ.

184
00:19:47,375 --> 00:19:48,250
ಹಾಂ.

185
00:19:53,208 --> 00:19:54,166
ಸದ್ಯ, ದೇವರೇ.

186
00:19:59,375 --> 00:20:00,208
ಥತ್.

187
00:20:02,416 --> 00:20:03,625
ಡಾ. ಸಹಾಯ್?

188
00:20:05,583 --> 00:20:06,916
ಹಲೋ, ಓಲ್ಗ.

189
00:20:07,000 --> 00:20:10,500
ನಿಮಗೆ ಹುಷಾರಿಲ್ಲ,
ಒಂದು ವಾರ ಬರುವುದಿಲ್ಲ ಅಂತ ಕೇಳ್ಪಟ್ಟೆ.

190
00:20:11,750 --> 00:20:15,166
ಇಲ್ಲ, ನಾನು ಚೆನ್ನಾಗಿದ್ದೇನೆ.
ಪ್ರಯೋಗಾಲಯದಲ್ಲಿ ಏನೋ ಮರೆತಿದ್ದೆ,

191
00:20:15,250 --> 00:20:17,500
ಅದನ್ನು ತೆಗೆದುಕೊಳ್ಳಲು ಬಂದೆ. ಹುಷಾರಾಗಿದ್ದೇನೆ.

192
00:20:17,583 --> 00:20:18,875
ಆದರೆ ನೀವು ಹಾಗೆ ಕಾಣ್ತಿಲ್ಲ.

193
00:20:21,458 --> 00:20:22,708
ನಾನು ಚೆನ್ನಾಗಿದ್ದೇನೆ.

194
00:20:24,708 --> 00:20:27,041
ನಾನು... ನಿಜವಾಗಲೂ ಚೆನ್ನಾಗಿದ್ದೇನೆ.

195
00:20:29,208 --> 00:20:31,083
ಪೃಥ್ವಿ ಮೃತದೇಹ ಎಲ್ಲಿದೆ ಗೊತ್ತಾ?

196
00:20:31,375 --> 00:20:34,375
ಎಲ್ಲಿದೆ ಅಂತ ಗೊತ್ತಿಲ್ಲ.
ಶ್ರೀ. ಒಬೆರಾಯ್‌ರ ವ್ಯಕ್ತಿ ಅದನ್ನು ಒಯ್ದ.

197
00:20:37,166 --> 00:20:38,041
ಒಳಗೆ ಬನ್ನಿ.

198
00:20:46,875 --> 00:20:49,125
ಈ ಕೋಣೆ. ಇದು ಎಲ್ಲಿದೆ ಗೊತ್ತಾ?

199
00:21:03,125 --> 00:21:04,250
ದತ್ತಾಂಶ ಅನುಸರಿಸಿ, ಸರ್.

200
00:21:04,833 --> 00:21:05,958
ದತ್ತಾಂಶವನ್ನು ಅನುಸರಿಸಿ!

201
00:21:20,750 --> 00:21:22,250
ದತ್ತಾಂಶ ಅನುಸರಿಸಿ, ಸರ್.

202
00:21:22,333 --> 00:21:23,541
ದತ್ತಾಂಶವನ್ನು ಅನುಸರಿಸಿ!

203
00:21:49,333 --> 00:21:52,250
ತಮಾ ಅಂಧಕಾರದಿಂದ ಹುಟ್ಟಿದ.
ಮತ್ತು ಅಂಧಕಾರ ತಮಾನಿಂದ ಹುಟ್ಟಿತು.

204
00:21:52,625 --> 00:21:54,708
"ನಿಶಾಘರ್ ಪರ್ವತದ ತಪ್ಪಲಿನಲ್ಲಿ

205
00:21:55,583 --> 00:21:57,583
"ನಾನೊಬ್ಬ ಬೇಡ, ಬೇಡನನ್ನು ಹುಡುಕುತ್ತಿದ್ದೆ."

206
00:21:58,333 --> 00:22:00,958
"ನಿಶಾಘರ್ ಎಂಬ ಬೃಹತ್ ಪರ್ವತ
ನನ್ನ ಮುಂದೆ ನಿಂತಿತ್ತು.

207
00:22:01,250 --> 00:22:03,833
"ಕೊನೆಗೂ ತಮಾನನ್ನು ಎದುರಿಸುವ ಸಮಯ ಬಂದಿತು.

208
00:22:05,958 --> 00:22:07,333
"ತಮಾ ಅಂಧಕಾರದಿಂದ ಹುಟ್ಟಿದ,

209
00:22:07,958 --> 00:22:09,875
"ಮತ್ತು ಅಂಧಕಾರ ತಮಾನಿಂದ ಹುಟ್ಟಿತು.

210
00:22:09,958 --> 00:22:13,000
"ತಮಾನನ್ನು ಹುಡುಕಲು,
ಅವನ ಬಾಯಾರಿಕೆಯನ್ನು ಅರ್ಥಮಾಡಿಕೊಳ್ಳಬೇಕು.

211
00:22:15,375 --> 00:22:18,666
"ಗ್ರಾಮಸ್ಥರ ಕಣ್ಣೀರಿನಿಂದ ಕಪ್ಪಾಗಿರುವ,
ಹಿಂದಕ್ಕೆ ಹರಿಯುವ ನದಿಯು

212
00:22:19,458 --> 00:22:22,625
"ಪರ್ವತದ ತುದಿಯಲ್ಲಿರುವ
ತಮಾನ ಗುಹೆಯವರೆಗೂ ತಲುಪುತ್ತದೆ.

213
00:22:32,166 --> 00:22:34,500
"ತಮಾನ ಬಾಯಾರಿಕೆ ಈ ಕಣ್ಣೀರಿನಿಂದಲೇ ತಣಿಯುತ್ತದೆ.

214
00:22:35,958 --> 00:22:38,291
"ಅದನ್ನು ಕುಡಿದು ಇನ್ನೂ ಶಕ್ತಿಶಾಲಿಯಾಗುತ್ತಾನೆ.

215
00:22:39,125 --> 00:22:41,625
"ಆ ಕಪ್ಪು ನದಿಯು
ನನ್ನನ್ನು ತಮಾ ಬಳಿ ಕರೆದೊಯ್ಯಿತು.

216
00:22:45,250 --> 00:22:48,416
ಕಣ್ಣೀರಿನಿಂದ ತುಂಬಿದ ಒಂದು ನದಿ,
ಇದು ಖಂಡಿತವಾಗಲೂ ಒಂದು ರೂಪಕ.

217
00:22:49,666 --> 00:22:50,958
ಆದರೆ ಯಾತಕ್ಕಾಗಿ?

218
00:23:10,875 --> 00:23:16,291
ಎಚ್ಚರಿಕೆ - ಅಪಾಯಕಾರಿ/ವಿಷಕಾರಿ ರಾಸಾಯನಿಕಗಳು
ಈ ಕೆಲಸದ ಸ್ಥಳದಲ್ಲಿ ಬಳಸಲ್ಪಡುತ್ತವೆ.

219
00:23:17,291 --> 00:23:18,625
ದತ್ತಾಂಶ ಅನುಸರಿಸಿ, ಸರ್.

220
00:23:18,708 --> 00:23:20,166
ದತ್ತಾಂಶವನ್ನು ಅನುಸರಿಸಿ!

221
00:23:23,041 --> 00:23:26,416
ಅವರು ಜನರ ಪ್ರಜ್ಞೆಯನ್ನು
ಏಕೆ ನಕಲಿಸುತ್ತಿದ್ದಾರೆಂದು ಈಗ ಅರ್ಥವಾಯಿತು.

222
00:23:26,500 --> 00:23:28,791
-ಏಕೆ?
-ದತ್ತಾಂಶವನ್ನು ಅನುಸರಿಸಿ.

223
00:23:28,875 --> 00:23:32,000
ಈ ದತ್ತಾಂಶವೇ ನಮ್ಮ ಪ್ರಜ್ಞೆ,
ಅದನ್ನು ಯಂತ್ರವು ನಕಲಿಸಿದೆ.

224
00:23:37,916 --> 00:23:40,208
ಗ್ರಾಮಸ್ಥರ ಕಣ್ಣೀರಿನಿಂದ ನದಿ ಕಪ್ಪಾಯಿತು.

225
00:23:40,958 --> 00:23:43,500
ಬಾನಿ, ಜೂಡ್, ಪೃಥ್ವಿ ಮತ್ತು ನಾನು.

226
00:23:43,583 --> 00:23:48,000
ನಮ್ಮ ಖಿನ್ನತೆ, ದುಃಖ ಮತ್ತು ಶೋಕವನ್ನು
ನಮ್ಮ ಮನಸ್ಸಿನಿಂದ ಹೊರತೆಗೆಯಲಾಯಿತು.

227
00:23:48,083 --> 00:23:51,750
ಮತ್ತು ತಮಾ ಶಕ್ತಿಶಾಲಿಯಾಗಲು
ಅದನ್ನು ಅವನಿಗೆ ನೀಡಲಾಗುತ್ತಿದೆಯೇ?

228
00:23:51,833 --> 00:23:52,958
ಅದೇ.

229
00:24:02,416 --> 00:24:05,625
ತಮಾ ಅಂಧಕಾರದಿಂದ ಹುಟ್ಟಿದ.
ಮತ್ತು ಅಂಧಕಾರ ತಮಾನಿಂದ ಹುಟ್ಟಿತು.

230
00:24:06,791 --> 00:24:08,083
ನಾವು ತಪ್ಪಾಗಿ ತಿಳಿದಿದ್ದೆವು.

231
00:24:09,000 --> 00:24:12,166
ತಮಾ ಈ ಪ್ರಯೋಗದ ಉಪಉತ್ಪನ್ನವಲ್ಲ.
ಅದು ಅಂತಿಮ ಗುರಿ.

232
00:24:14,916 --> 00:24:15,750
ಅಯ್ಯೋ!

233
00:24:27,625 --> 00:24:29,708
ಆದರೆ, ಸಹಾಯ್ ಒಬ್ಬ ವಿಜ್ಞಾನಿ, ಅಲ್ವಾ?

234
00:24:29,791 --> 00:24:31,208
ಇದನ್ನೆಲ್ಲಾ ಏಕೆ ಮಾಡ್ತಿದ್ದಾನೆ?

235
00:24:33,416 --> 00:24:36,083
ಸಹಾಯ್‌ಗೆ ತಮಾ ಬಗ್ಗೆ
ಏನೂ ತಿಳಿದಿಲ್ಲ ಅಂತ ಅನಿಸುತ್ತೆ.

236
00:25:31,666 --> 00:25:33,583
ಮಧು ಒಬೆರಾಯ್‌
ಒಳಬರುವ ಕರೆ

237
00:25:37,750 --> 00:25:41,000
ಸಹಾಯ್, ನೀವು ಪ್ರಯೋಗಾಲಯದಿಂದ ದೂರವಿರಬೇಕಿತ್ತು.

238
00:25:41,541 --> 00:25:42,541
ಮನೆಯಲ್ಲೇ ಇರಿ.

239
00:25:42,708 --> 00:25:46,750
ನಿಮ್ಮನ್ನು ಜೈಲಿನಿಂದ ಕಾಪಾಡಲು ಏನೆಲ್ಲಾ
ಮಾಡಬೇಕಾಯಿತೆಂದು ಸ್ವಲ್ಪವಾದರೂ ಗೊತ್ತಾ?

240
00:25:46,833 --> 00:25:49,791
ನಕಲಿ ಪ್ರಯೋಗಾಲಯ ಸೃಷ್ಟಿಸಿ,
ಅದನ್ನು ನಾಶಪಡಿಸಬೇಕಾಯಿತು.

241
00:25:50,375 --> 00:25:52,583
ನಾವು ಈ ಪ್ರಯೋಗವನ್ನು ನಿಲ್ಲಿಸಬೇಕಾಗುತ್ತದೆ.

242
00:25:53,458 --> 00:25:55,291
ಏನೋ ತಪ್ಪಾಗಿದೆ, ಶ್ರೀ. ಒಬೆರಾಯ್.

243
00:25:55,958 --> 00:25:58,250
ಸರ್ವರ್ ಕೋಣೆಯ ಕೆಳಗೆ,

244
00:25:58,333 --> 00:26:01,375
ನಾನು... ನಾನು ನೋಡಿದೆ...

245
00:26:01,458 --> 00:26:04,625
ನೀವು ಏನು ನೋಡಿದಿರಿ, ಏನು ಯೋಚಿಸುವಿರಿ,

246
00:26:05,291 --> 00:26:06,791
ಅದ್ಯಾವುದೂ ಮುಖ್ಯವಲ್ಲ.

247
00:26:07,291 --> 00:26:10,958
-ಸರ್, ನನಗೆ ಒಳ್ಳೆಯ ಮನಸ್ಸಾಕ್ಷಿಯಿಂದ ಆಗಲ್ಲ...
-ಸಹಾಯ್,

248
00:26:12,125 --> 00:26:13,541
ನನಗೆ ನೀನು ನಿಜಕ್ಕೂ ಇಷ್ಟ.

249
00:26:14,583 --> 00:26:15,791
ಸದಾ ಇಷ್ಟಪಟ್ಟಿರುವೆ.

250
00:26:17,333 --> 00:26:18,791
ಆದರೆ ನೀವು ಅನಿವಾರ್ಯರಲ್ಲ.

251
00:26:20,500 --> 00:26:22,250
ವೈದ್ಯಕೀಯ ಪರಿಭಾಷೆಯಲ್ಲಿ,

252
00:26:22,958 --> 00:26:24,333
ಬಳಸಿ ಬಿಸಾಡಬಹುದಾದವರು.

253
00:26:25,791 --> 00:26:29,458
ಸ್ವಇಚ್ಛೆಯಿಂದ ಪ್ರಕ್ರಿಯೆ ಪೂರ್ಣಗೊಳಿಸಿದರೆ,

254
00:26:31,500 --> 00:26:33,250
ಜೀವಂತವಾಗಿರುತ್ತೀರಿ,

255
00:26:34,541 --> 00:26:36,666
ಮತ್ತು ಹೆಚ್ಚು ನೋವು ಸಹ ಇರಲ್ಲ.

256
00:26:37,875 --> 00:26:39,666
ಗುಪ್ತವಾಗಿರಿ.

257
00:26:44,916 --> 00:26:49,250
ಮುಖ್ಯವಾದ ಏಕೈಕ ವಿಷಯವೆಂದರೆ ಆ ಹುಡುಗ...

258
00:26:52,083 --> 00:26:53,208
ಒಮಾರ್.

259
00:26:55,541 --> 00:26:58,166
ಅವನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು

260
00:26:58,791 --> 00:27:01,791
ನಮ್ಮ ಮೊದಲ ಆದ್ಯತೆಯಾಗಿರಬೇಕು.

261
00:28:01,416 --> 00:28:05,291
ಇದರರ್ಥ ಜೂಡ್‌ನ ಕಾಮಿಕ್ ಪುಸ್ತಕದ
ಸಿದ್ಧಾಂತ ಸರಿಯಾಗಿತ್ತು.

262
00:28:06,541 --> 00:28:07,708
ಮೊದಲಿನಿಂದಲೂ.

263
00:28:08,125 --> 00:28:12,250
ಅಮ್ಮನನ್ನು ಕಾಡುತ್ತಿದ್ದ ಆ ಅಂಧಕಾರ
ಬೇರೆ ಯಾರೂ ಅಲ್ಲ, ತಮಾ ಎಂದು ನಂಬಲಾಗುತ್ತಿಲ್ಲ.

264
00:28:13,416 --> 00:28:14,625
ಆದರೆ ನನಗೆ ಅರ್ಥವಾಗುತ್ತಿಲ್ಲ,

265
00:28:15,083 --> 00:28:17,583
ಅಮ್ಮನಿಗೆ 15 ವರ್ಷಗಳ ಹಿಂದೆಯೇ
ಹೀಗಾಗಲು ಹೇಗೆ ಸಾಧ್ಯ?

266
00:28:19,375 --> 00:28:23,583
ಯಾವುದೇ ಚಿಕಿತ್ಸೆಯು ನಿನ್ನ ಸಹೋದರನನ್ನು ಉಳಿಸಲು
ಆಗದಿದ್ದಾಗ, ಸಬಾ ಬೇರೆ ದಾರಿ ಹುಡುಕಲಾರಂಭಿಸಿದಳು.

267
00:28:24,875 --> 00:28:26,708
ವಿಜ್ಞಾನವನ್ನು ಮೀರಿದ ದಾರಿಗಳು.

268
00:28:30,625 --> 00:28:31,750
ಅವಳು ಖಿನ್ನಳಾಗಿದ್ದಳು,

269
00:28:32,541 --> 00:28:33,416
ಹತಾಶಳಾಗಿದ್ದಳು.

270
00:28:35,458 --> 00:28:39,208
ಬಹುಶಃ ಸಬಾಳ ಹತಾಶೆಯೇ
ತಮಾ ಸಬಾಳನ್ನು ಸೋಲಿಸಲು ನೆರವಾಗಿರಬಹುದು.

271
00:28:40,041 --> 00:28:41,750
ಹೌದು, ಆದರೆ ಆಕೆ ಹೀಗೇಕೆ ಮಾಡುವಳು?

272
00:28:42,625 --> 00:28:43,833
ಆಕೆ ಒಬ್ಬಳು ವಿಜ್ಞಾನಿ.

273
00:28:44,125 --> 00:28:45,750
ಅದು ಮುಖ್ಯವಾಗಲ್ಲ, ರೂಮಿ.

274
00:28:45,833 --> 00:28:49,250
ಖಿನ್ನತೆ ಮತ್ತು ಅಸಹಾಯಕತೆಯು
ಮನುಷ್ಯನನ್ನು ಏನು ಬೇಕಾದರೂ ಮಾಡಿಸಬಲ್ಲದು.

275
00:29:19,208 --> 00:29:20,458
ಉಪಾಹಾರ ಸಿದ್ಧವಾಗಿದೆ.

276
00:32:14,250 --> 00:32:15,125
ಅಪ್ಪ!

277
00:32:15,208 --> 00:32:16,041
ಜೂಲ್ಸ್?

278
00:32:16,875 --> 00:32:17,916
ಜೂಲಿಯಾ!

279
00:32:18,208 --> 00:32:19,083
ಕಂದ.

280
00:32:20,250 --> 00:32:21,750
ಜೂಲಿಯಾ, ಎಲ್ಲಿದ್ದೀಯ, ಕಂದ?

281
00:32:29,833 --> 00:32:32,416
ಇದು... ಇದು ಅಸಾಧ್ಯ.

282
00:32:35,041 --> 00:32:38,125
ಇದು ಜೂಲಿಯಾ ಅಲ್ಲ, ಮೂರ್ಖ. ಇದು ನಾನು.

283
00:32:38,333 --> 00:32:39,166
ಹೇ!

284
00:32:40,916 --> 00:32:43,583
ಇದರಿಂದ ನೀನು ಏನು ಮಾಡಲಿದ್ದೀಯ
ಎಂದು ನನಗೆ ಗೊತ್ತು.

285
00:32:50,250 --> 00:32:52,083
ಆದರೆ ನೀನು ನನಗೆ ಹಾನಿ ಮಾಡಲಾಗದು.

286
00:32:53,250 --> 00:32:54,541
ಎಲ್ಲಾ ಯುವಿ ದೀಪಗಳು ಬೆಳಗಲಿ!

287
00:33:07,125 --> 00:33:11,500
ನನ್ನನ್ನು ರಕ್ಷಿಸಲು ನನ್ನ ಬಳಿ
ಈ ಬೆಳಕು ಇದೆ. ತೊಲಗಿಹೋಗು!

288
00:33:12,416 --> 00:33:15,125
ಇದರಲ್ಲಿ ಬರೆದಿದೆ,
ಸತ್ಯ ತಮಾನಿಂದ ಸೋಲುವ ಅಂಚಿನಲ್ಲಿದ್ದ,

289
00:33:15,208 --> 00:33:18,041
ಆಗ ಅವನಿಗೆ ತನ್ನ ಗುರುಗಳು
ಕಲಿಸಿದ್ದು ನೆನಪಾಯಿತು.

290
00:33:18,375 --> 00:33:19,208
ಏನು?

291
00:33:19,708 --> 00:33:22,666
"ಒಳಗಿನ ಅಂಧಕಾರ ಎಷ್ಟೇ ದಟ್ಟವಾಗಿದ್ದರೂ,

292
00:33:22,750 --> 00:33:25,666
"ಅದರೊಳಗೆ ಯಾವಾಗಲೂ ಬೆಳಕಿನ ಕಿರಣವಿರುತ್ತದೆ.

293
00:33:25,750 --> 00:33:28,750
"ಸಾವಿರ ಸೂರ್ಯರಿಗಿಂತ ಪ್ರಕಾಶಮಾನವಾದ ಬೆಳಕು."

294
00:33:33,541 --> 00:33:36,708
ನಿನ್ನೆ ರಾತ್ರಿ ಆಸ್ಪತ್ರೆಯಲ್ಲಿ
ತಮಾ ನನ್ನ ಮೇಲೆ ದಾಳಿ ಮಾಡಿದಾಗ,

295
00:33:37,000 --> 00:33:39,583
ಪೃಥ್ವಿ ನನ್ನನ್ನು ಕೊನೆಯ ಕ್ಷಣದಲ್ಲಿ ಕಾಪಾಡಿದ.

296
00:33:39,666 --> 00:33:42,291
-ಪೃಥ್ವಿ?
-ಆತ ನಮ್ಮ ಬಾಲ್ಯದ ಒಂದು ಘಟನೆಯನ್ನು ನೆನಪಿಸಿದ.

297
00:33:43,458 --> 00:33:46,250
ಒಂದು ಸಂತೋಷದ ನೆನಪು. ಒಂದು ಭರವಸೆಯ ನೆನಪು.

298
00:33:46,666 --> 00:33:48,791
ನಮ್ಮ ಪದಕವನ್ನು ನೆನಪಿಸಿಕೋ.

299
00:33:49,375 --> 00:33:51,291
ನಮ್ಮ ಪದಕ, ಜಯ್.

300
00:33:56,125 --> 00:33:59,625
ಮತ್ತು ಇದ್ದಕ್ಕಿದ್ದಂತೆ, ತಮಾ ಇನ್ನು
ಅಷ್ಟು ಬಲಶಾಲಿ ಇಲ್ಲವೆಂದು ಭಾಸವಾಯಿತು.

301
00:34:01,291 --> 00:34:02,958
ಅದರ ಅರ್ಥವಾದರೂ ಏನು?

302
00:34:08,416 --> 00:34:12,458
"ಈ ಅತ್ಯಂತ ಪ್ರಕಾಶಮಾನವಾದ ಬೆಳಕು
ನಿನ್ನೊಳಗೆ ನೆಲೆಸಿದೆ. ಅದನ್ನು ಹುಡುಕು, ಸತ್ಯ!

303
00:34:12,541 --> 00:34:15,666
"ಮತ್ತೆ ಯಾವ ಅಂಧಕಾರವೂ ನಿನ್ನನ್ನು ಮುಟ್ಟಲಾಗದು."

304
00:34:18,000 --> 00:34:19,000
ರೂಮಿ.

305
00:34:19,583 --> 00:34:24,500
ಈ ಅತ್ಯಂತ ಪ್ರಕಾಶಮಾನವಾದ ಬೆಳಕು
ಸೂರ್ಯನ ಕಿರಣಗಳು ಅಥವಾ ಯುವಿ ಬೆಳಕು ಅಲ್ಲ.

306
00:34:24,791 --> 00:34:26,791
ಅದು ನಮ್ಮೊಳಗಿರುವ ಬೆಳಕು.

307
00:34:26,958 --> 00:34:28,666
ಭರವಸೆ.

308
00:34:32,625 --> 00:34:33,791
ಜೂಡ್
ವೀಡಿಯೊ ಕರೆ

309
00:34:33,875 --> 00:34:34,833
ಜೂಡ್.

310
00:34:35,833 --> 00:34:37,708
ಗೆಳೆಯರೇ, ತಮಾ ನನ್ನ ಬೆನ್ನತ್ತಿ ಬಂದಿದ್ದ.

311
00:34:37,791 --> 00:34:39,291
-ಏನು?
-ನಿನಗೇನೂ ಆಗಿಲ್ಲ ತಾನೆ?

312
00:34:39,375 --> 00:34:40,500
ನಾನು ಬದುಕುಳಿದೆ, ಮಾರಾಯ.

313
00:34:40,875 --> 00:34:42,750
ಈ ದೀಪಗಳು ಕೆಲಸ ಮಾಡುತ್ತವೆಂದು ನಾನು ಹೇಳಿದೆ.

314
00:34:42,875 --> 00:34:46,041
ತಮಾ ವಿರುದ್ಧ ಹೋರಾಡಲು
ಕೆಲವು ಯುವಿ ಸ್ಟಿಕ್‌ಗಳನ್ನು ಇಟ್ಟುಕೊಳ್ಳಿ.

315
00:34:46,208 --> 00:34:48,958
ಜೂಡ್, ಅಂಧಕಾರವನ್ನು ಎದುರಿಸುವ ಬೆಳಕು
ಯುವಿ ಬೆಳಕಲ್ಲ.

316
00:34:49,166 --> 00:34:51,416
-ಅದು ಭರವಸೆ.
-ಆದರೆ ಆ ಕಾಮಿಕ್‌ನಲ್ಲಿ...

317
00:34:53,416 --> 00:34:55,541
ಜೂಡ್? ಜೂಡ್, ಏನಾಗುತ್ತಿದೆ?

318
00:34:55,625 --> 00:34:57,958
-ಜೂಡ್, ಏನಾಯಿತು?
-ಈ ದೀಪಗಳು.

319
00:34:59,583 --> 00:35:01,458
ಈ ದೀಪಗಳು ಏಕೆ ಕೆಲಸ ಮಾಡುತ್ತಿಲ್ಲ?

320
00:35:01,750 --> 00:35:03,583
ರೂಮಿ! ಜಯ್!

321
00:35:04,166 --> 00:35:05,166
ಅಪ್ಪ!

322
00:35:05,458 --> 00:35:06,750
ಅಲ್ಲಿ ಯಾರಿದ್ದಾರೆ, ಜೂಡ್?

323
00:35:07,583 --> 00:35:09,625
ಜೂಡ್? ಜಯ್, ನಾವೀಗ ಅವನ ಬಳಿಗೆ ಹೋಗಬೇಕು.

324
00:35:11,083 --> 00:35:12,208
ರೂಮಿ?

325
00:35:25,666 --> 00:35:27,583
ಜೂಲಿಯಾಗೆ ನಿಮ್ಮ ಅಗತ್ಯವಿಲ್ಲ.

326
00:35:29,916 --> 00:35:31,625
ನೀನೊಬ್ಬ ಕೆಟ್ಟ ವ್ಯಕ್ತಿ.

327
00:35:33,208 --> 00:35:34,458
ಜೂಡ್, ನೀನು ಅಲ್ಲಿದ್ದೀಯಾ?

328
00:35:37,666 --> 00:35:40,375
ಜೂಡ್, ಏನು ನಡೆಯುತ್ತಿದೆ? ಏನಾದರೂ ಹೇಳು.

329
00:35:40,458 --> 00:35:43,875
ಜೂಡ್, ನಾವು ದಾರಿಯಲ್ಲಿದ್ದೇವೆ.
ಯಾವುದೇ ನಿಮಿಷದಲ್ಲಿ ಅಲ್ಲಿರುತ್ತೇವೆ.

330
00:35:53,458 --> 00:35:55,000
ಎಲ್ಲಾ ಮುಗಿಯಿತು.

331
00:35:56,375 --> 00:35:57,791
ಯಾವುದೇ ಪ್ರಯೋಜನವಿಲ್ಲ.

332
00:35:58,541 --> 00:36:00,458
ಜೂಡ್, ನನ್ನ ಮಾತು ಕೇಳು.

333
00:36:00,541 --> 00:36:02,625
ಭರವಸೆ ಕಳೆದುಕೊಳ್ಳಬೇಡ, ಜೂಡ್. ಗಮನ ಹರಿಸಿ.

334
00:36:02,708 --> 00:36:05,083
ನಿನ್ನೆಲ್ಲಾ ಸಂತಸದ ನೆನಪುಗಳು,
ಜೂಲಿಯಾ ಬಗ್ಗೆ ಯೋಚಿಸು.

335
00:36:05,166 --> 00:36:08,125
ಎಂದಿಗೂ ಅವಳ ತಂದೆಯಾಗಿರುತ್ತೀಯ.
ಶೀಘ್ರದಲ್ಲೇ ಅವಳನ್ನು ಭೇಟಿಯಾಗುವೆ.

336
00:36:08,333 --> 00:36:10,416
-ಭರವಸೆ ಕಳೆದುಕೊಳ್ಳಬೇಡ, ಜೂಡ್.
-ಅಪ್ಪಾ?

337
00:36:12,625 --> 00:36:13,541
ಅಪ್ಪಾ?

338
00:36:17,375 --> 00:36:18,208
ಕಂದ.

339
00:36:20,333 --> 00:36:21,916
ಇಲ್ಲಿಗೆ ಹೇಗೆ ಬಂದೆ, ಕಂದ?

340
00:36:23,750 --> 00:36:26,125
ಇಲ್ಲ, ಇಲ್ಲ, ಇಲ್ಲ, ಇಲ್ಲ.
ಜೂಡ್, ಅದಕ್ಕೆ ಬಲಿಯಾಗಬೇಡ.

341
00:36:26,208 --> 00:36:28,583
ಅವಳು ನಿಜವಲ್ಲ. ಅದನ್ನು ತಮಾ ಮಾಡುತ್ತಿದೆ.

342
00:36:28,666 --> 00:36:31,208
ಯಾಕೆ, ಅಪ್ಪಾ? ಯಾಕೆ ಕಳ್ಳತನ ಮಾಡಿದೆ?

343
00:36:31,666 --> 00:36:32,750
ನೀನೊಬ್ಬ ಕಳ್ಳ.

344
00:36:32,833 --> 00:36:36,416
ಇಲ್ಲ, ಇಲ್ಲ, ಇಲ್ಲ, ಇಲ್ಲ.
ಇಲ್ಲ, ಕಂದ. ದಯವಿಟ್ಟು ಹಾಗೆ ಹೇಳಬೇಡ.

345
00:36:36,791 --> 00:36:38,416
ನಿಮ್ಮಪ್ಪ ಕೆಟ್ಟವನಲ್ಲ.

346
00:36:39,208 --> 00:36:41,166
ಕಂದ, ನನ್ನಿಂದ ನಿಜವಾಗಲೂ ತಪ್ಪಾಯಿತು.

347
00:36:42,458 --> 00:36:43,708
ನಾನು ಅದನ್ನು ಮತ್ತೆ ಮಾಡಲ್ಲ.

348
00:36:44,666 --> 00:36:46,291
ದಯವಿಟ್ಟು ನನ್ನನ್ನು ಕ್ಷಮಿಸು.

349
00:36:47,041 --> 00:36:50,125
ಮಾತು ನೀಡುತ್ತೇನೆ. ಇದನ್ನು ಸರಿಮಾಡಲು
ಏನು ಬೇಕಾದರೂ ಮಾಡುತ್ತೇನೆ.

350
00:36:50,375 --> 00:36:51,791
ನಿನಗಾಗಿ ಏನು ಬೇಕಾದರೂ ಮಾಡುವೆ.

351
00:36:52,208 --> 00:36:55,375
ಸರಿ, ಅಪ್ಪಾ. ಬನ್ನಿ. ನನಗೆ ಅಪ್ಪುಗೆ ನೀಡಿ.

352
00:37:04,750 --> 00:37:06,750
ಜೂಡ್, ಅದು ತಮಾ. ಜೂಲಿಯಾ ಅಲ್ಲ.

353
00:37:06,833 --> 00:37:09,250
ಅವಳು ಏನೇ ಹೇಳಿದರೂ ನಂಬಬೇಡ. ಅದು ನಿಜವಲ್ಲ.

354
00:37:12,000 --> 00:37:13,000
ಛೇ!

355
00:37:13,083 --> 00:37:16,041
ಏನು ಮಾಡಬೇಕೆಂದು ನಿಮಗೆ ಗೊತ್ತು, ಅಪ್ಪ. ಅಲ್ವಾ?

356
00:37:19,208 --> 00:37:20,083
ಹೌದು, ಕಂದ.

357
00:37:20,791 --> 00:37:22,166
ಈಗ ಅಪ್ಪನಿಗೆ ಗೊತ್ತಾಯಿತು.

358
00:37:24,333 --> 00:37:26,916
ಜೂಡ್, ಅದಕ್ಕೆ ಬಲಿಯಾಗಬೇಡ.
ಬಹುತೇಕ ಬಂದುಬಿಟ್ಟೆವು, ಜೂಡ್.

359
00:37:34,750 --> 00:37:35,666
ಜಯ್?

360
00:37:37,625 --> 00:37:38,458
ಜಯ್?

361
00:37:39,291 --> 00:37:40,791
ಜಯ್?

362
00:37:42,083 --> 00:37:43,083
ಜಯ್?

363
00:37:48,541 --> 00:37:50,875
ಜೂಲಿಯಾ

364
00:39:11,958 --> 00:39:13,083
ಆಯೆಷಾ?

365
00:40:07,583 --> 00:40:08,458
ಸುಳ್ಳಿ.

366
00:40:11,916 --> 00:40:14,916
ಇವಳಿಗೆ ಹೊಡೆಯಿರಿ. ಅವಳು ಮಾಟಮಂತ್ರ ಮಾಡುತ್ತಾಳೆ.

367
00:40:15,000 --> 00:40:18,875
ಇವಳು ಮಾಟಗಾತಿ.
ಇವಳಿಗೆ ಚೆನ್ನಾಗಿ ಬಾರಿಸಿಯೇ ದೆವ್ವ ಬಿಡಿಸಬೇಕು.

368
00:40:19,375 --> 00:40:21,666
ಏನಂತೀರಾ, ಮುಖ್ಯಸ್ಥರೇ? ಏನಂತೀರಾ, ಜನರೇ?

369
00:40:21,875 --> 00:40:23,208
ಹೌದು.

370
00:40:23,375 --> 00:40:24,666
ಸಾಕು.

371
00:40:25,250 --> 00:40:26,666
ಶಾಂತರಾಗಿರಿ, ಎಲ್ಲರೂ.

372
00:40:27,166 --> 00:40:28,625
ನೀತು ಏನು ಹೇಳುತ್ತಿದ್ದಾಳೆ?

373
00:40:28,708 --> 00:40:32,875
ನಿಮ್ಮಿಬ್ಬರ ನಡುವೆ ನಡೆದ ವಿಷಯ
ನಿಮ್ಮ ಒಪ್ಪಿಗೆಯಿಂದಲೇ ನಡೆಯಿತೇ?

374
00:40:33,250 --> 00:40:34,625
ಆಕೆ ಸತ್ಯ ಹೇಳುತ್ತಿದ್ದಾಳಾ?

375
00:40:36,833 --> 00:40:39,333
ಮಾತಾಡು, ಕಲ್ಪನಾ.
ಅವರು ನಿನ್ನನ್ನೇ ಕೇಳುತ್ತಿರುವುದು.

376
00:40:40,583 --> 00:40:43,291
ಮಾತಾಡು ಕಲ್ಪನಾ. ಯಾಕೆ ಸುಮ್ಮನಿದ್ದೀಯ? ಮಾತಾಡು!

377
00:40:44,208 --> 00:40:45,041
ಇಲ್ಲ.

378
00:40:46,541 --> 00:40:47,875
ನೀತು ಸುಳ್ಳು ಹೇಳ್ತಿದ್ದಾಳೆ.

379
00:40:49,041 --> 00:40:53,250
-ಅವಳಿಗೆ ಹೊಡೆಯಿರಿ!
-ಅವಳ ಮುಖಕ್ಕೆ ಮಸಿ ಬಣ್ಣ ಬಳಿಯಿರಿ!

380
00:41:05,500 --> 00:41:06,333
ಸುಳ್ಳಿ!

381
00:41:08,083 --> 00:41:08,916
ಸುಳ್ಳಿ!

382
00:41:09,791 --> 00:41:11,250
-ಸುಳ್ಳಿ!
-ಇಲ್ಲ, ನೀತು.

383
00:41:12,708 --> 00:41:13,541
ಸುಳ್ಳಿ!

384
00:41:13,625 --> 00:41:15,875
ಅವರು ನಿನ್ನನ್ನು ಕೊಲ್ಲುವರೆಂದು ತಿಳಿದಿರಲಿಲ್ಲ.

385
00:41:16,500 --> 00:41:17,708
ಸುಳ್ಳಿ.

386
00:41:18,375 --> 00:41:19,958
ದಯವಿಟ್ಟು ಹೋಗಿಬಿಡು.

387
00:41:20,708 --> 00:41:23,166
ಸುಳ್ಳಿ!

388
00:41:23,958 --> 00:41:25,791
ಸುಳ್ಳಿ!

389
00:41:26,625 --> 00:41:28,375
ಸುಳ್ಳಿ!

390
00:41:29,041 --> 00:41:32,125
ಸುಳ್ಳಿ!
ಸುಳ್ಳಿ!

391
00:41:32,208 --> 00:41:34,833
ಸುಳ್ಳಿ!
ಸುಳ್ಳಿ!

392
00:41:34,916 --> 00:41:35,875
ನಿಲ್ಲಿಸು!

393
00:41:59,500 --> 00:42:02,083
ದಯವಿಟ್ಟು ಹಿಂದೆ ಇರಿ.
ಹಿಂದಕ್ಕೆ ಸರಿಯಿರಿ, ದಯವಿಟ್ಟು.

394
00:42:02,166 --> 00:42:04,041
ಇಲ್ಲಿ ಗುಂಪುಗೂಡುವ ಅಗತ್ಯವಿಲ್ಲ.

395
00:42:04,708 --> 00:42:06,708
-ಒಂದು ನಿಮಿಷ.
-ಮೇಡಂ. ಕ್ಷಮಿಸಿ.

396
00:42:06,791 --> 00:42:08,541
ಮೇಡಂ, ದಯವಿಟ್ಟು. ದಾರಿ ಬಿಡಿ.

397
00:42:08,625 --> 00:42:09,708
-ನಮಸ್ಕಾರ, ಸರ್.
-ಏನು?

398
00:42:09,916 --> 00:42:15,083
ಹಲೋ, ಸರ್. ಜೂಡ್‌ ರೊಜಾರಿಯೋ ಇಲ್ಲೇ ವಾಸಿಸುವುದು.
ಅವನಿಗೆ ಈ ಕಾಮಿಕ್ ಪುಸ್ತಕ ತಲುಪಿಸಬೇಕು.

399
00:42:15,166 --> 00:42:17,708
ನೀವು ವಿತರಣೆಯ ಬಗ್ಗೆ ಚಿಂತೆ ಮಾಡುತ್ತಿದ್ದೀರಾ?

400
00:42:17,791 --> 00:42:21,250
ದುರದೃಷ್ಟವಶಾತ್, ಇದರ ಕೊನೆಯ ಪುಟ ಕಾಣೆಯಾಗಿದೆ.

401
00:42:21,333 --> 00:42:24,375
ಸತ್ತವರ ಬಗ್ಗೆ ಸ್ವಲ್ಪ ಗೌರವವಿರಲಿ.
ಹಿಂದೆ ಸರಿಯಿರಿ.

402
00:42:24,583 --> 00:42:27,791
ನನಗೆ ಈ ಕಾಮಿಕ್ ಪುಸ್ತಕವು
ಬಹಳ ಕಷ್ಟದಿಂದ ಸಿಕ್ಕಿತು.

403
00:42:27,875 --> 00:42:29,791
ನಾನು ನಾಳೆ ಮತ್ತೆ ಬರಬೇಕೇನೋ.

404
00:42:29,875 --> 00:42:33,541
ಕಟ್ಟಡವನ್ನು ಅಪರಾಧ ಸ್ಥಳವಾಗಿಸಿದ್ದಾರೆ.
ನನ್ನ ಮನೆ ಅಲ್ಲೇ. ಆದರೂ ಹೋಗಲು ಬಿಡುತ್ತಿಲ್ಲ.

405
00:42:33,625 --> 00:42:36,041
ನಾನು ಬರೀ ಈ ಕಾಮಿಕ್
ಪುಸ್ತಕವನ್ನು ತಲುಪಿಸಬೇಕಿತ್ತು.

406
00:42:36,125 --> 00:42:38,750
ಆ ಹುಚ್ಚ ಜೂಡ್‌ ರೊಜಾರಿಯೋ ಗೊತ್ತಾ? ಅವನೇ.

407
00:42:38,833 --> 00:42:41,375
ಅವನಿಗೆ ಈ ಕಾಮಿಕ್ ಪುಸ್ತಕವನ್ನು ತಲುಪಿಸದಿದ್ದರೆ,

408
00:42:41,458 --> 00:42:43,458
ನನ್ನ ಅಂಗಡಿಗೆ ಬಂದು ಗದ್ದಲ ಸೃಷ್ಟಿಸುತ್ತಾನೆ.

409
00:42:43,541 --> 00:42:45,708
ಆತ ನನ್ನ ನೆರೆಯವನು. ಕೊಡಿ, ನಾನು ತಲುಪಿಸುವೆ.

410
00:42:45,791 --> 00:42:46,750
-ಕೊಡುವೆಯಾ?
-ಹೌದು.

411
00:42:46,833 --> 00:42:48,750
-ಖಂಡಿತಾ? ಧನ್ಯವಾದ.
-ನೂರಕ್ಕೆ ನೂರು.

412
00:42:48,916 --> 00:42:52,833
ಹಾಂ, ಇದನ್ನು ನಾನೇ ಬಂದು ತಲುಪಿಸಿದ್ದೇನೆ
ಎಂದು ಅವನಿಗೆ ತಿಳಿಸಿ.

413
00:42:52,916 --> 00:42:54,833
ಇಲ್ಲವೇ, ಅಂಗಡಿಗೆ ಬಂದು ಗದ್ದಲ ಎಬ್ಬಿಸುವನು.

414
00:42:55,541 --> 00:42:58,500
ಚಿಂತಿಸಬೇಡಿ, ಸರ್.
ಅವನು ಇನ್ಮುಂದೆ ನಿಮಗೆ ತೊಂದರೆ ಕೊಡಲ್ಲ.

415
00:42:59,208 --> 00:43:01,000
ಧನ್ಯವಾದ. ತುಂಬಾ ಧನ್ಯವಾದಗಳು.

416
00:43:15,000 --> 00:43:19,208
ನಮಸ್ಕಾರ! ನಾನು ವೃತಾಂಬರ
ಮತ್ತು ನೀವು ನೋಡುತ್ತಿದ್ದೀರಿ 24/7 ವಿಶೇಷ.

417
00:43:19,291 --> 00:43:22,166
ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ
ಧನ್ಯವಾದ, ಶ್ರೀ. ಒಬೆರಾಯ್.

418
00:43:22,250 --> 00:43:25,208
ನೀವು ಸ್ವಲ್ಪ ದೀರ್ಘಕಾಲದಿಂದ
ಸಾರ್ವಜನಿಕರ ಗಮನದಿಂದ ದೂರವಿದ್ದೀರ.

419
00:43:25,375 --> 00:43:27,958
ಇಂದು ಈ ಪರಿಸ್ಥಿತಿಯಿಂದಾಗಿ
ನೀವು ಕಾಣಿಸಿಕೊಳ್ಳುವಂತಾಗಿದೆ.

420
00:43:28,125 --> 00:43:29,375
ನಿಮಗೆ ಹೇಗನಿಸುತ್ತಿದೆ?

421
00:43:29,583 --> 00:43:33,958
ನಾನು ಪ್ರಚಾರ ಇಷ್ಟಪಡುವ ನಟ
ಅಥವಾ ರಾಜಕಾರಣಿ ಅಲ್ಲ.

422
00:43:34,541 --> 00:43:36,916
ಆದರೆ ಈ ಪರಿಸ್ಥಿತಿ ಅದನ್ನು ಒತ್ತಾಯಿಸಿತು.

423
00:43:37,291 --> 00:43:39,333
ನನ್ನ ಮತ್ತು ನನ್ನ...

424
00:43:39,416 --> 00:43:41,666
ಮಧು ಒಬೆರಾಯ್‌
ಉಬರ್‌ಲೈಫ್‌ ಫಾರ್ಮಾ ಸ್ಥಾಪಕರು - ಸಿಇಒ

425
00:43:41,916 --> 00:43:43,958
ನನ್ನ ಕಂಪನಿಯ ಖ್ಯಾತಿಯು ಅಪಾಯದಲ್ಲಿತ್ತು.

426
00:43:45,333 --> 00:43:49,416
ನನ್ನ ಭಾಗದ ಕಥೆಯನ್ನು ಜನರಿಗೆ
ಪ್ರಸ್ತುತಪಡಿಸುವುದು ನನ್ನ ಹೊಣೆಯಾಗಿತ್ತು.

427
00:43:49,625 --> 00:43:53,375
ಖಂಡಿತ. ಹೀಗೆ ಆರೋಪಿಸಲಾಗಿದೆ,
ನಿಮ್ಮ ಕಂಪನಿಯ ಜೈವಿಕ ತಂತ್ರಜ್ಞಾನ ವಿಭಾಗವಾದ

428
00:43:53,458 --> 00:43:56,208
ಉಬರ್‌ಲೈಫ್‌ ಫಾರ್ಮಾ,
ಕೆಲವು ಅಕ್ರಮ ಪ್ರಯೋಗಗಳನ್ನು ನಡೆಸುತ್ತಿದೆ,

429
00:43:56,666 --> 00:43:58,583
ಅದರ ಜನರ ಒಪ್ಪಿಗೆಯಿಲ್ಲದೆ ಎಂದು.

430
00:43:59,708 --> 00:44:01,416
ಹೀಗೂ ವದಂತಿಯಾಗಿದೆ,

431
00:44:01,500 --> 00:44:04,041
ಈ ಪ್ರಯೋಗಗಳಿಂದಾಗಿ
ಮೂರು ಜೀವಗಳು ಬಲಿಯಾಗಿವೆ ಎಂದು.

432
00:44:05,291 --> 00:44:06,750
ಈ ಊಹಾಪೋಹಗಳಲ್ಲಿ

433
00:44:08,458 --> 00:44:09,750
ಸ್ವಲ್ಪ ಸತ್ಯವಿದೆ.

434
00:44:10,000 --> 00:44:13,708
ನಿಮ್ಮ ಕಂಪನಿ ಇದೆಲ್ಲದರಲ್ಲೂ ಭಾಗಿಯಾಗಿದೆ
ಎಂದು ನೀವು ಒಪ್ಪಿಕೊಳ್ಳುವಿರಾ?

435
00:44:14,208 --> 00:44:15,875
ಅವಸರದಲ್ಲಿ ತೀರ್ಮಾನಕ್ಕೆ ಬರಬೇಡಿ.

436
00:44:16,291 --> 00:44:19,333
ನಮ್ಮ ಆಂತರಿಕ ತನಿಖೆಯಿಂದ ತಿಳಿದುಬಂದಿದೆ,

437
00:44:19,416 --> 00:44:23,541
ಈ ಪ್ರಯೋಗಗಳ ಹಿಂದೆ
ಡ್ಯಾರಿಯಸ್ ಕೂಪರ್ ಎಂಬ ಒಬ್ಬ ವ್ಯಕ್ತಿ ಇದ್ದನೆಂದು

438
00:44:24,166 --> 00:44:26,916
ಪ್ರಯೋಗಕ್ಕೆ ಬಳಸಲಾದ ಉಪಕರಣಗಳು

439
00:44:27,000 --> 00:44:30,041
ಉಬರ್‌ಲೈಫ್‌ ಫಾರ್ಮಾದಿಂದ ಕಳವಾದದ್ದು ಆಗಿದ್ದವು.

440
00:44:30,291 --> 00:44:32,541
ನಿಜವೇನೆಂದರೆ, ಅದನ್ನ ಡ್ಯಾರಿಯಸ್
ಒಂಟಿಯಾಗಿ ಮಾಡಲಿಲ್ಲ.

441
00:44:32,958 --> 00:44:35,541
ನಮ್ಮ ಕೆಲವು ಹೂಡಿಕೆದಾರರೂ ಭಾಗಿಯಾಗಿದ್ದಾರೆ.

442
00:44:35,958 --> 00:44:40,208
ನಮ್ಮ ಕಂಪನಿಯ ದಾಖಲೆಗಳನ್ನು ಪರಿಶೀಲಿಸಲು
ನಾನು ಮಾಧ್ಯಮವನ್ನು ಆಹ್ವಾನಿಸುತ್ತೇನೆ.

443
00:44:41,958 --> 00:44:45,791
ನಾವು ಈ ವ್ಯಕ್ತಿಯೊಂದಿಗೆ
ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ.

444
00:44:49,208 --> 00:44:51,041
ಈ ಪ್ರಯೋಗದಿಂದಾಗಿ

445
00:44:52,458 --> 00:44:57,583
ಪ್ರಾಣ ಕಳೆದುಕೊಂಡ ಎಲ್ಲರ ಸಂಬಂಧಿಕರಿಗೆ

446
00:44:58,958 --> 00:45:02,000
ನನ್ನ ಪ್ರಾರ್ಥನೆ ಮತ್ತು
ಸಂತಾಪ ವ್ಯಕ್ತಪಡಿಸುತ್ತೇನೆ.

447
00:45:05,458 --> 00:45:07,416
ನನಗೆ ಹೆಚ್ಚು ನೋವುಂಟುಮಾಡುವುದು

448
00:45:09,791 --> 00:45:12,875
ಏನೆಂದರೆ ಅವರ ಮೃತ ದೇಹಗಳ
ಯಾವುದೇ ಕುರುಹು ಇಲ್ಲ ಎಂಬುದು.

449
00:45:16,041 --> 00:45:17,958
ಅದೇ ನಿಜವಾದ ದುರಂತ.

450
00:45:18,750 --> 00:45:21,125
ಉಬರ್‌ಲೈಫ್‌ ಫಾರ್ಮಾ ಇದನ್ನು ಖಂಡಿಸುತ್ತದೆ.

451
00:45:23,375 --> 00:45:25,166
ನಾನು ಇದನ್ನು ಖಂಡಿಸುತ್ತೇನೆ.

452
00:45:28,708 --> 00:45:30,333
ಈ ಮಾಧ್ಯಮದ ಮೂಲಕ,

453
00:45:30,416 --> 00:45:34,000
ಪೊಲೀಸ್ ಪಡೆಗೆ ಧನ್ಯವಾದ ಹೇಳಲು
ಈ ಅವಕಾಶವನ್ನು ಬಳಸಿಕೊಳ್ಳಲು ಬಯಸುತ್ತೇನೆ,

454
00:45:34,083 --> 00:45:36,916
ವಿಶೇಷವಾಗಿ ಅಧಿಕಾರಿ ಕಲ್ಪನಾ ಕದಮ್‌ಗೆ.

455
00:45:37,000 --> 00:45:40,958
ಆಕೆಗೆ ಧನ್ಯವಾದಗಳು, ಈಗ ಯಾವುದೇ
ಅಮಾಯಕರ ಜೀವಕ್ಕೆ ಯಾವುದೇ ಅಪಾಯವಿಲ್ಲ.

456
00:46:27,000 --> 00:46:28,833
ಹಾಗಾದರೆ, ಪೊಲೀಸರಿಗೆ ಹೇಗೆ ನೆರವಾಗುವಿರಿ?

457
00:46:29,208 --> 00:46:33,291
ನಾನು ಈಗಷ್ಟೇ ಹೇಳಿದಂತೆ,
ನಮ್ಮ ಆಂತರಿಕ ತನಿಖೆ ಈಗಾಗಲೇ ನಡೆಯುತ್ತಿದೆ.

458
00:46:34,291 --> 00:46:38,166
ಡ್ಯಾರಿಯಸ್ ಕೂಪರ್ ನಮ್ಮ ಉಬರ್‌ಲೈಫ್ ಫಾರ್ಮಾದಿಂದ

459
00:46:38,750 --> 00:46:42,708
ಉಪಕರಣಗಳನ್ನು ಹೇಗೆ ಹೊರಗೆ ಕಳ್ಳಸಾಗಣೆ
ಮಾಡಿದನೆಂದು ಕಂಡುಹಿಡಿಯುವುದು ಅತ್ಯಗತ್ಯ.

460
00:46:44,916 --> 00:46:48,500
ಈ ವಿಷಯದಲ್ಲಿ, ನಾವು ಪೊಲೀಸರೊಂದಿಗೆ

461
00:46:50,125 --> 00:46:52,500
ಸಂಪೂರ್ಣವಾಗಿ ಸಹಕರಿಸಲು ಸಿದ್ಧರಿದ್ದೇವೆ.

462
00:47:39,083 --> 00:47:40,875
ಅವನು ಪರಿಪೂರ್ಣವಾಗಿದ್ದಾನೆ. ಅಲ್ವಾ?

463
00:47:41,833 --> 00:47:44,125
ನೀವು ಈಗ ಸಂತೋಷವಾಗಿದ್ದೀರೆಂದು ಭಾವಿಸುತ್ತೇನೆ.

464
00:47:47,250 --> 00:47:48,166
ಈಗ ಬೇಗ ಮಾಡು.

465
00:47:49,666 --> 00:47:51,208
ನಾವು ಬಹುತೇಕ ತಲುಪಿದ್ದೇವೆ, ಅಪ್ಪ.

466
00:47:52,000 --> 00:47:53,208
ಇನ್ನು ಸ್ವಲ್ಪ ಸಮಯ.

467
00:47:58,166 --> 00:48:00,208
ನನಗಾಗಿ ನೀವು ಇಷ್ಟಾದರೂ ಮಾಡಬಹುದು ತಾನೆ?

468
00:48:07,708 --> 00:48:09,541
ತಮಾ ತಮಾತ ಸುಪಹಿತ.

469
00:48:22,958 --> 00:48:25,875
ತಮಾ ತಮಾತ ಸುಪಹಿತ.

470
00:48:26,375 --> 00:48:28,583
ತಮಾ ಬರುತ್ತಿದ್ದಾನೆ

471
00:50:27,250 --> 00:50:29,250
ಉಪ ಶೀರ್ಷಿಕೆ ಅನುವಾದ: ಹೇಮಂತ್ ಕುಮಾರ್

